ಹುಬ್ಬಳ್ಳಿ: ಮತ್ತೊಂದು ವಿಮಾನ ತಡವಾಗಿ ಭೂ ಸ್ಪರ್ಶ; ಆಂತಕಕ್ಕೀಡಾದ ಪ್ರಯಾಣಿಕರು - Vistara News

Latest

ಹುಬ್ಬಳ್ಳಿ: ಮತ್ತೊಂದು ವಿಮಾನ ತಡವಾಗಿ ಭೂ ಸ್ಪರ್ಶ; ಆಂತಕಕ್ಕೀಡಾದ ಪ್ರಯಾಣಿಕರು

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದ ಹುಬ್ಬಳ್ಳಿಯಲ್ಲಿ ಮತ್ತೊಂದು ವಿಮಾನ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಂಗಳವಾರ ಸಂಜೆ ರಾತ್ರಿ ಹೊರಟಿದ್ದ ಫ್ಲೈ–91 ಸಂಸ್ಥೆ ವಿಮಾನವು ಹವಾಮಾನ ವೈಪರೀತ್ಯದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಒಂದೂವರೆ ಗಂಟೆ ತಡವಾಗಿ ಭೂಸ್ಪರ್ಶ ಮಾಡಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ 8.15ಕ್ಕೆ ಲ್ಯಾಂಡ್‌ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ರಾತ್ರಿ 9.40ಕ್ಕೆ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ 21 ಮಂದಿ ಪ್ರಯಾಣಿಕರು ಇದ್ದರು ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಪೈಲಟ್‌ ವಿಮಾನವನ್ನು ಹುಬ್ಬಳ್ಳಿ ಮತ್ತು ದಾಂಡೇಲಿ ಸುತ್ತಮುತ್ತಲಿನ ಪ್ರದೇಶಗಳ ಆಗಸದಲ್ಲಿ ಒಂದು ಗಂಟೆ ಕಾಲ ಹಾರಾಟ ನಡೆಸಿದ್ದಾರೆ. ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಬಳಿಕ ರಾತ್ರಿ 9.40ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಲ್ಲಿ ಒಂದೂವರೆ ಗಂಟೆ ಕಾಲ ಚಡಪಡಿಕೆಗೆ ಒಳಗಾಗುವಂತಾಯಿತು.
ಏಪ್ರಿಲ್ 19ರಂದು ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ91 ವಿಮಾನವು ಸಹ, ಹವಾಮಾನ ವೈಪರೀತ್ಯದಿಂದ ಮೂರು ಗಂಟೆಗೂ ಹೆಚ್ಚು ಸಮಯ ಆಕಾಶದಲ್ಲೇ ಹಾರಾಡಿ, ನಂತರ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

Latest

ಟೀಮ್‌ ಇಂಡಿಯಾಗೆ ವೈಭವ್‌ ಸೂರ್ಯವಂಶಿ ಎಂಟ್ರಿ

VISTARANEWS.COM


on

ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ಟಿ-20 ಕ್ರಿಕೆಟ್‌ ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಟಿ-20 ವಿಶ್ವಕಪ್‌ ಗೆದ್ದುಕೊಟ್ಟಿದ್ದ ಸೂರ್ಯ ಕುಮಾರ್‌ ಯಾದವ್‌ ಬದಲಿಗೆ ಭಾರತ ತಂಡ ನಾಯಕನ ಸ್ಥಾನವನ್ನು ಶ್ರೇಯಸ್‌ ಅಯ್ಯರ್‌ಗೆ ನೀಡಲಾಗಿದೆ. ತಿಲಕ್‌ ವರ್ಮಾ ಉಪಸನಾಯಕರಾಗಿ ಆಯ್ಕೆಯಾಗಿದ್ದಾರೆ.

ಭಾರತ ತಂಡಕ್ಕೆ 15 ರ ಹರೆಯದ ವೈಭವ್‌ ಸೂರ್ಯವಂಶಿ ಆಯ್ಕೆಯಾಗಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟವಾಗಿದೆ. ಟಿಸಲಾಗಿದೆ. ತಂಡದ ನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್‌ ಅಯ್ಯರ್‌ ಅವರಿಗೆ ನೀಡಲಾಗಿದ್ದು, ಉಪನಾಯಕರಾಗಿ ತಿಲಕ್‌ ವರ್ಮಾ ಆಯ್ಕೆಯಾಗಿದ್ದಾರೆ.

ವಿಕೆಟ್ ಕೀಪರ್ ವಿಭಾಗದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ ಸ್ಥಾನ ಪಡೆದಿದ್ದಾರೆ. ವೇಗದ ಬೌಲಿಂಗ್ ದಾಳಿಯನ್ನು ಜಸ್‌ಪ್ರೀತ್‌ ಬುರ್ಮಾ, ಅರ್ಷದೀಪ್‌ ಸಿಂಗ್‌ ಹಾಗೂ ಹರ್ಷಿತ್‌ ರಾಣಾ ಮುನ್ನಡೆಸಲಿದ್ದಾರೆ.

ಸ್ಪಿನ್ ವಿಭಾಗದಲ್ಲಿ ರವಿ ಬಿಷ್ಣೋಯ್‌, ಅಕ್ಷರ್‌ ಪಟೇಲ್‌, ವಾಷಿಂಗ್‌ಟನ್‌ ಸುಂದರ್‌ ಹಾಗೂ ವರುಣ್‌ ಚಕ್ರವರ್ತಿ ಅವರಿಗೆ ಅವಕಾಶ ದೊರೆತಿದೆ.

ಇನ್ನೂ ಬ್ಯಾಟಿಂಗ್ ಮತ್ತು ಆಲ್‌ರೌಂಡರ್ ವಿಭಾಗದಲ್ಲಿ ಅಭಿಷೇಕ್‌ ಶರ್ಮಾ, ನಿತೀಶ್‌ ಕುಮಾರ್‌ ರೆಡ್ಡಿ ಹಾಗೂ ಶಿವಂ ದುಬೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್‌ ಟಿ-20 ಸರಣಿ, ಏಷ್ಯನ್‌ ಗೇಮ್ಸ್‌ -2026 ರ ಭಾರತ ತಂಡದಲ್ಲಿ ಐಪಿಎಲ್‌ ಹೀರೋ ವೈಭವ್‌ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.

Continue Reading

Latest

ಸಿಇಟಿ ಫಲಿತಾಂಶ ಪ್ರಕಟ

VISTARANEWS.COM


on

2026ನೇ ಸಾಲಿನ ಯುಜಿಸಿಇಟಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದೆ. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರಗಳನ್ನು ನೀಡಿದರು. ಈ ಬಾರಿಯೂ ಸಹ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಸಿಇಟಿ 2026ರ ಪ್ರಮುಖ ಅಂಕಿ-ಅಂಶಗಳು
ಒಟ್ಟು ನೋಂದಾಯಿತರು : 3,30,646 ಅಭ್ಯರ್ಥಿಗಳು
ಪರೀಕ್ಷೆಗೆ ಹಾಜರಾದವರು : 3,09,014 ಅಭ್ಯರ್ಥಿಗಳು
ಅರ್ಹತೆ ಪಡೆದವರು : 2,92,782 ಅಭ್ಯರ್ಥಿಗಳು ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ.

ಟಾಪರ್‌ಗಳ ಪಟ್ಟಿ:
ಇಂಜಿನಿಯರಿಂಗ್‌ ವಿಭಾಗ

  1. ತನಿಷಾ ಕಾರ್ತಿಕ್‌
  2. ಸೃಜನ್‌
  3. ನಿನಾದ್‌ ವಸಿಷ್ಠ

ಬಿಎಸ್‌ಸಿ ನರ್ಸಂಗ್‌

  1. ನಯನ ಗೋಪಿ
  2. ಅಮೂಲ್ಯ
  3. ರಿತಿಕ್‌ ಕುಮಾರ್‌

ಕೃಷಿ ವಿಜ್ಞಾನ

  1. ನಿನಾದ್‌
  2. ಅನ್ಮೋಲ್‌
  3. ಸಮಯ್‌ ಎ.ಎಸ್‌

ಯೋಗ ಮತ್ತು ನ್ಯಾಚುರೋಪತಿ

  1. ನಯನ ಗೋಪಿ
  2. ಅಮೂಲ್ಯ
  3. ಸುಚಿತಾ

ಬಿ.ಫಾರ್ಮಾ ಮತ್ತು ಡಿ.ಫಾರ್ಮಾ

  1. ನಯನ ಗೋಪಿ
  2. ಅಮೂಲ್ಯ
  3. ಸುಚಿತ್ರಾ
    ಮಧ್ಯಾಹ್ನ 2 ಗಂಟೆಯ ನಂತರ ಫಲಿತಾಂಶ ಪ್ರಾಧಿಕಾರ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ
    ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

http://kea.kar.nic.in

http://karresults.nic.in

http://cetonline.karnataka.gov.in/kea

Continue Reading

Latest

ರಾಮಲಿಂಗಾರೆಡ್ಡಿ ಜೊತೆ ಮಾತನಾಡುತ್ತೇನೆ – ಡಿಕೆಶಿ

VISTARANEWS.COM


on

ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಚಿವ ಖಾತೆ ಹಂಚಿಕೆಯ ನಂತರ ರಾಮಲಿಂಗಾರೆಡ್ಡಿ ರಾಜೀನಾಮೆ, ಮುನಿಯಪ್ಪ ಅಸಮಾಧಾನ ಬಹಿರಂಗಗೊಂಡಿದ್ದು, ಈ ಕುರಿತು ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಮಲಿಂಗಾ ರೆಡ್ಡಿ ಅವರಿಗೆ ನಾವು ಮಾತು ಕೊಟ್ಟಿದ್ದು ನಿಜ. ಅವರು ಹಿರಿಯ ನಾಯಕರು. ಬೆಂಗಳೂರಿನ ಅಭಿವೃದ್ಧಿ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆದಿತ್ತು. ಆದರೆ ಹೈಕಮಾಂಡ್ ತೀರ್ಮಾನ ಮಾಡಿದೆ. ಅದನ್ನು ಮೀರಿ ನಾವು ಏನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.

“ರಾಮಲಿಂಗಾ ರೆಡ್ಡಿ ಅವರು ಸದ್ಯ ಹೊರಗಡೆ ಇದ್ದಾರೆ. ಅವರು ಬಂದ ಬಳಿಕ ಖುದ್ದಾಗಿ ನಾನೇ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಈ ವಿಚಾರವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ” ಎಂದರು.

ಇನ್ನು ಕೆ.ಹೆಚ್‌. ಮುನಿಯಪ್ಪ ಅವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿ, ಅವರ ಜೊತೆಯೂ ಮಾತಾಡಿದ್ದೇನೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ನಿರ್ವಹಿಸುತ್ತೇನೆಂದು ಅವರು ಹೇಳಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Continue Reading

Latest

ಬಿಜೆಪಿಗೆ ರಾಜೀನಾಮೆ ಬಳಿಕ ಹೊಸ ರಾಜಕೀಯ ಚಳವಳಿ ಘೋಷಿಸಿದ ಅಣ್ಣಾಮಲೈ; ತಮಿಳುನಾಡಿನಲ್ಲಿ ಏಕಾಂಗಿ ಹೋರಾಟದ ನಿರ್ಧಾರ

VISTARANEWS.COM


on

ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ತಮ್ಮ ಮುಂದಿನ ರಾಜಕೀಯ ಹೆಜ್ಜೆ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಹೊಸ ರಾಜಕೀಯ ಚಳವಳಿಯನ್ನು ಆರಂಭಿಸುವುದಾಗಿ ಘೋಷಿಸಿರುವ ಅವರು, ಮುಂದಿನ ದಿನಗಳಲ್ಲಿ ಜನರೊಂದಿಗೆ ನೇರವಾಗಿ ಹೆಜ್ಜೆ ಹಾಕಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಣ್ಣಾಮಲೈ, “ಬಿಜೆಪಿಗೆ ನಾನು ಯಾವುದೇ ಸಮಸ್ಯೆಯಾಗಲು ಬಯಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರ ಬಗ್ಗೆ ನನಗೆ ಅಪಾರ ಗೌರವವಿದೆ” ಎಂದು ಹೇಳಿದರು.

“ನನ್ನ ರಾಜೀನಾಮೆ ನಿರ್ಧಾರವನ್ನು 2025ರ ಡಿಸೆಂಬರ್‌ನಲ್ಲಿಯೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಕಳೆದ 18 ತಿಂಗಳಿಂದ ಪಕ್ಷದೊಳಗೆ ಕೆಲವು ಭಿನ್ನಾಭಿಪ್ರಾಯಗಳು ಇದ್ದವು. ಆದರೆ ಯಾವುದೇ ಗದ್ದಲವಿಲ್ಲದೆ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಅವರು ಸ್ಪಷ್ಟಪಡಿಸಿದರು.

ತಮಿಳುನಾಡಿನ ಹಿತಾಸಕ್ತಿಗಳ ಬಗ್ಗೆ ಮಾತನಾಡಿದ ಅಣ್ಣಾಮಲೈ, “ತಮಿಳುನಾಡಿನ ಅಸ್ಮಿತೆಯನ್ನು ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ. ಈ ಮಣ್ಣು, ನೀರು ಮತ್ತು ರಾಜ್ಯದ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಿದ್ದೇನೆ. ನಾನು ಹೆಮ್ಮೆಯ ಭಾರತೀಯ ಹಾಗೂ ಸಾಂಪ್ರದಾಯಿಕ ತಮಿಳಿಗ” ಎಂದರು.

“ತಮಿಳುನಾಡಿನ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಮೇಕೆದಾಟು ಅಣೆಕಟ್ಟು ಯೋಜನೆ ಸೇರಿದಂತೆ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ತಮಿಳುನಾಡಿನ ಪರವಾಗಿ ನಿಲುವು ತಾಳಿದ್ದೇನೆ. ಟಂಗ್‌ಸ್ಟನ್, ಮೀಥೇನ್ ಹಾಗೂ ಹೈಡ್ರೋಕಾರ್ಬನ್ ಯೋಜನೆಗಳ ವಿರುದ್ಧವೂ ಹೋರಾಟ ನಡೆಸಿದ್ದೇನೆ” ಎಂದು ಹೇಳಿದರು.

ಮುಂದಿನ ರಾಜಕೀಯ ಯೋಜನೆ ಕುರಿತು ಮಾತನಾಡಿದ ಅವರು, “ತಮಿಳುನಾಡಿನಲ್ಲಿ ಹೊಸ ರಾಜಕೀಯ ಚಳವಳಿಗೆ ಅಧಿಕೃತ ಚಾಲನೆ ನೀಡುತ್ತಿದ್ದೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. ಜನರ ಆಶಯಗಳನ್ನು ಪ್ರತಿಬಿಂಬಿಸುವ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವ ಗುರಿ ಹೊಂದಿದ್ದೇವೆ” ಎಂದು ಘೋಷಿಸಿದರು.

Continue Reading
Advertisement
Latest20 hours ago

ಟೀಮ್‌ ಇಂಡಿಯಾಗೆ ವೈಭವ್‌ ಸೂರ್ಯವಂಶಿ ಎಂಟ್ರಿ

Latest22 hours ago

ಸಿಇಟಿ ಫಲಿತಾಂಶ ಪ್ರಕಟ

ಅವಿಭಾಗೀಕೃತ23 hours ago

ರಾಮಲಿಂಗಾರೆಡ್ಡಿ ರಾಜೀನಾಮೆ ಕಗ್ಗಂಟಿಗೆ ತೆರೆ? ಸುರ್ಜೇವಾಲಾ ಮಾತುಕತೆ ಯಶಸ್ವಿ?

Latest2 days ago

ರಾಮಲಿಂಗಾರೆಡ್ಡಿ ಜೊತೆ ಮಾತನಾಡುತ್ತೇನೆ – ಡಿಕೆಶಿ

Latest2 days ago

ಬಿಜೆಪಿಗೆ ರಾಜೀನಾಮೆ ಬಳಿಕ ಹೊಸ ರಾಜಕೀಯ ಚಳವಳಿ ಘೋಷಿಸಿದ ಅಣ್ಣಾಮಲೈ; ತಮಿಳುನಾಡಿನಲ್ಲಿ ಏಕಾಂಗಿ ಹೋರಾಟದ ನಿರ್ಧಾರ

Latest2 days ago

ರಾಹುಲ್ ಗಾಂಧಿ ಸಮ್ಮುಖದಲ್ಲಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ

Latest2 days ago

ಖಾತೆ ಹಂಚಿಕೆ ಬಗ್ಗೆ ಮುನಿಯಪ್ಪ ಅಸಮಾಧಾನ: ಸಚಿವ ಸ್ಥಾನಕ್ಕೆ ರಾಜೀನಾಮೆ ಚಿಂತನೆ?

Latest2 days ago

ರಾಮಲಿಂಗಾ ರೆಡ್ಡಿ ರಾಜೀನಾಮೆ ಕಾಂಗ್ರೆಸ್ ಒಳಜಗಳದ ಪರಿಣಾಮ: ವಿಜಯೇಂದ್ರ ವಾಗ್ದಾಳಿ

Latest2 days ago

ಅಣ್ಣಾಮಲೈ ರಾಜೀನಾಮೆ ಸ್ವೀಕಾರ : ಹೊಸ ಪಕ್ಷ ಘೋಷಣೆ ಕುರಿತು ಇಂದು ಮಹತ್ವದ ಸುದ್ದಿಗೋಷ್ಠಿ

Latest2 days ago

ರಾಜ್ಯಸಭಾ ಚುನಾವಣೆಗೆ ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಲಿರುವ ಮಲ್ಲಿಕಾರ್ಜುನ ಖರ್ಗೆ

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌