Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

Lakshmi Hegde

ಬಿಜೆಪಿ ದುರಹಂಕಾರಕ್ಕೆ ತಕ್ಕ ಶಾಸ್ತಿ ಎಂದ ಜನಾರ್ದನ ರೆಡ್ಡಿ

ಕೊಪ್ಪಳ: ಗಂಗಾವತಿಯಲ್ಲಿ ಗೆದ್ದ ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಅವರು ಖುಷಿ ವ್ಯಕ್ತಪಡಿಸಿದರು. ‘ಬಳ್ಳಾರಿಯಿಂದ ಬಂದ ನನ್ನನ್ನು ಗಂಗಾವತಿಯ ಜನರು ಕೈ ಹಿಡಿದಿದ್ದಾರೆ. ಬಿಜೆಪಿ ದುರಹಂಕಾರ, ದುರಾಡಳಿತದಿಂದ ಸೋಲು ಕಂಡಿದೆ. ಯಡಿಯೂರಪ್ಪನವರನ್ನು ಕಣ್ಣೀರು ಹಾಕಿ ಕೆಳಗೆ ಇಳಿಸಿದರು. ಸಜ್ಜನ ಶೆಟ್ಟರ್​ ಅವರನ್ನು ದೂರವಿಟ್ಟರು. ನನ್ನಂಥವರನ್ನು ಪಕ್ಷದಿಂದ ದೂರವಿಟ್ಟರು.ಬಿಜೆಪಿ ದುರಹಂಕಾರ, ದುರಾಡಳಿತದಿಂದ ಸೋಲು ಅನುಭವಿಸಿದೆ. ಬಿ.ಎಲ್​ ಸಂತೋಷ್ ಅವರನ್ನು ಮಾತ್ರ ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಹಾಗೇ, ಬಳ್ಳಾರಿಯಲ್ಲಿ ಪತ್ನಿ ಅರುಣಾಲಕ್ಷ್ಮೀ ಸೋಲು ಬೇಸರ ತಂದಿದೆ. ಕೆಆರ್​ಪಿಪಿ ಪಕ್ಷದಿಂದ ಒಬ್ಬಂಟಿಯಾಗಿ ವಿಧಾನಸಭೆಗೆ ಕಾಲಿಡುತ್ತಿದ್ದೇನೆ. ಕೊನೆ ಉಸಿರು ಇರುವವರೆಗೂ ಕೆಆರ್​ಪಿಪಿ ಪಕ್ಷ ಕಟ್ಟುತ್ತೇನೆ. ಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ. ಕಾಂಗ್ರೆಸ್ ಆಡಳಿತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಗಂಗಾವತಿ ಅಭಿವೃದ್ಧಿಗೆ ಕಾಂಗ್ರೆಸ್ ಆಡಳಿತ ಸಂಪೂರ್ಣ ಸಹಕಾರ ನೀಡುತ್ತದೆ ಎಂಬ ನಂಬಿಕೆ ನನಗೆ ಇದೆ ಎಂದು ಹೇಳಿದರು.

Lakshmi Hegde

ಕಾರವಾರ ಕ್ಷೇತ್ರ- ಕಾಂಗ್ರೆಸ್ ಗೆಲುವು

ಕಾಂಗ್ರೆಸ್- ಸತೀಶ್ ಸೈಲ್- 77,445

ಬಿಜೆಪಿ- ರೂಪಾಲಿ ನಾಯ್ಕ- 75307

ಗೆಲುವಿನ‌ ಅಂತರ- 2,138 ಮತಗಳು

——–

ಭಟ್ಕಳ ಕ್ಷೇತ್ರ- ಕಾಂಗ್ರೆಸ್ ಗೆಲುವು

ಕಾಂಗ್ರೆಸ್- ಮಂಕಾಳು ವೈದ್ಯ- 1,00442

ಬಿಜೆಪಿ- ಸುನೀಲ್ ನಾಯ್ಕ- 67,771

ಗೆಲುವಿನ ಅಂತರ- 32,671

————-

ಶಿರಸಿ ಕ್ಷೇತ್ರ- ಕಾಂಗ್ರೆಸ್ ಗೆಲುವು

ಕಾಂಗ್ರೆಸ್- ಭೀಮಣ್ಣ ನಾಯ್ಕ- 76,887

ಬಿಜೆಪಿ- ವಿಶ್ವೇಶ್ವರ ಹೆಗಡೆ ಕಾಗೇರಿ- 68,175

ಗೆಲುವಿನ ಅಂತರ- 8,712

————-

ಯಲ್ಲಾಪುರ ಕ್ಷೇತ್ರ- ಬಿಜೆಪಿ ಗೆಲುವು

ಬಿಜೆಪಿ- ಶಿವರಾಮ ಹೆಬ್ಬಾರ್- 74,699

ಕಾಂಗ್ರೆಸ್- ವಿ.ಎಸ್.ಪಾಟೀಲ್- 70,695

ಗೆಲುವಿನ ಅಂತರ- 4,004

————–

ಹಳಿಯಾಳ ಕ್ಷೇತ್ರ- ಕಾಂಗ್ರೆಸ್ ಗೆಲುವು

ಕಾಂಗ್ರೆಸ್- ಆರ್.ವಿ.ದೇಶಪಾಂಡೆ- 57,240

ಬಿಜೆಪಿ- ಸುನೀಲ್ ಹೆಗಡೆ- 53,617

ಗೆಲುವಿನ ಅಂತರ- 3,623

Lakshmi Hegde

ಅಭಿವೃದ್ಧಿಗಾಗಿ ಸಚಿವ ಸ್ಥಾನ ಬೇಕು, ಆಸೆಗಾಗಿ ಅಲ್ಲ

ಕಲಬುರಗಿ: ಕಾಂಗ್ರೆಸ್​ ಬಹುಮತದೊಂದಿಗೆ ಗೆದ್ದ ಬೆನ್ನಲ್ಲೇ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿಸ್ತಾರ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಅಮಿತ್ ಶಾ ಬಂದು ಏನು ಮಾಡಿದಂತಾಯಿತು? ಏನೇ ತಿಪ್ಪರಲಾಗ ಹಾಕಿದರೂ ಗೆಲ್ಲಲು ಸಾಧ್ಯವಿಲ್ಲ ಎಂದು ಈಗಲಾದರೂ ಗೊತ್ತಾಯಿತಲ್ಲ ಎಂದು ಹೇಳಿದರು. ಕಳೆದ ಬಾರಿ ಸಚಿವನಾಗಿದ್ದೆ, ಈ ಬಾರಿಯೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆನೆ. ಆಸೆಗಾಗಿ ಅಲ್ಲ, ಅಭಿವೃದ್ಧಿಗಾಗಿ ಸಚಿವ ಸ್ಥಾನ ಕೇಳುತ್ತಿದ್ದೇನೆ. ಹೈಕಮಾಂಡ್​ ಯಾವ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದಾರೆ.

Lakshmi Hegde

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಪ್ರಿಯ ಕೃಷ್ಣ ಗೆದ್ದಿದ್ದಾರೆ. ಇವರಿಗೆ ಬಿದ್ದ ಮತ 82,134. ಬಿಜೆಪಿಯ ಉಮೇಶ್ ಶೆಟ್ಟಿಯವರಿಗೆ 69618 ಮತಗಳು ಬಿದ್ದಿವೆ.

Lakshmi Hegde

ಬೈಂದೂರಲ್ಲಿ ಬಿಜೆಪಿಯ ಅಭ್ಯರ್ಥಿ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಗೆ ಭರ್ಜರಿ ಜಯ ಸಿಕ್ಕಿದೆ

Exit mobile version