Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

Lakshmi Hegde

ನಿಪ್ಪಾಣಿಯಲ್ಲಿ ಶಶಿಕಲಾ ಜೊಲ್ಲೆ ಗೆಲುವು

ಕಾಗವಾಡ‌ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ, ಕುಡಚಿ ಕಾಂಗ್ರೆಸ್​​ನ ಮಹೇಂದ್ರ ತಮ್ಮಣ್ಣನವರ್​, ಚಿಕ್ಕೋಡಿ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗಣೇಶ ಹುಕ್ಕೇರಿ, ನಿಪ್ಪಾಣಿ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ, ಯಮಕನಮರಡಿ ಕಾಂಗ್ರೆಸ್ ಸತೀಶ್ ಜಾರಕಿಹೊಳಿ‌, ಹುಕ್ಕೇರಿ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಮತ್ತು ರಾಯಭಾಗ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಮಧ್ಯೆ ಇನ್ನೂ ಫೈಟ್ ನಡೆಯುತ್ತಿದೆ.

Lakshmi Hegde

ವಿಜಯಪುರದ ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಅಶೋಕ್ ಮನಗೂಳಿಗೆ 86,771 ಮತಗಳು ಬೀಳುವ ಮೂಲಕ ಅವರು ಗೆದ್ದಿದ್ದಾರೆ. ಬಿಜೆಪಿಯ ರಮೇಶ್ ಭೂಸನೂರಿಗೆ 78,691 ಮತಗಳು ಬಿದ್ದಿವೆ. ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ್ ಸೋಮಜಾಳ ಮೂರನೇ ಸ್ಥಾನದಲ್ಲಿದೆ.

Lakshmi Hegde

ಬೆಳಗಾವಿಯಲ್ಲಿ ಗೆದ್ದವರ ಪಟ್ಟಿ ಹೀಗಿದೆ

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ್​, ಬೆಳಗಾವಿ ದಕ್ಷಿಣ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ್, ಖಾನಾಪುರ ಬಿಜೆಪಿ ಅಭ್ಯರ್ಥಿ ವಿಠ್ಠಲ ಹಲಗೇಕರ, ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ‌, ಬೈಲಹೊಂಗಲ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ ಕೌಜಲಗಿ, ಕಿತ್ತೂರು ಕಾಂಗ್ರೆಸ್ ಅಭ್ಯರ್ಥಿ ಬಾಬಾಸಾಹೇಬ್ ಪಾಟೀಲ್, ಸವದತ್ತಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ, ರಾಮದುರ್ಗ ಕಾಂಗ್ರೆಸ ಅಭ್ಯರ್ಥಿ ಅಶೋಕ್ ಪಟ್ಟಣ ಮತ್ತು ಅರಬಾವಿ ಮತಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ‌ ಗೆದ್ದಿದ್ದಾರೆ.

B Somashekhar

ರಾಜ್ಯದ ಅಭಿವೃದ್ಧಿಗೆ ನಾವು ಸಹಕರಿಸುತ್ತೇವೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ನಾವು ರಾಜ್ಯದ ಜನರ ತೀರ್ಪನ್ನು ಸ್ವಾಗತಿಸುತ್ತೇವೆ

ಸೋಲು-ಗೆಲುವು ರಾಜಕೀಯದಲ್ಲಿ ಇದ್ದಿದ್ದೆ

ರಾಜ್ಯದ ಏಳಿಗೆಗೆ ನಾವು ಸಹಕಾರ ನೀಡುತ್ತೇವೆ ಎಂದ ಬಿಎಸ್‌ವೈ

B Somashekhar

ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದ ಬಸವರಾಜ ಬೊಮ್ಮಾಯಿ

ರಾಜ್ಯದ ಜನರು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ

ಮುಂದಿನ ದಿನಗಳಲ್ಲಿ ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ

ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದ ಬೊಮ್ಮಾಯಿ

Exit mobile version