ಮತದಾನ ಕೇಂದ್ರದಲ್ಲಿ ಹೃದಯಾಘಾತ
ಮತಗಟ್ಟೆಯಲ್ಲಿಯೇ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚಿಕ್ಕೋಲೆ ಗ್ರಾಮದಲ್ಲಿ
ನಡೆದಿದೆ.
ಮತದಾನ ಮಾಡಿ ಹೊರ ಬಂದ ಬಳಿಕ ಜಯಣ್ಣ (49) ಎಂಬುವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಕೈಕೊಟ್ಟ ಮತಯಂತ್ರ
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಮುಂಡ್ರೆ ಗ್ರಾಮದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
161 ಮತಚಲಾವಣೆ ಯಾಗುತ್ತಿದ್ದಂತೆ ಇವಿಎಂ ಯಂತ್ರ ಸ್ಥಗಿತವಾಗಿದೆ.
ಇವಿಎಂ ಬಟನ್ ವರ್ಕ್ ಆಗದೇ ಸಿಬ್ಬಂದಿ ಪರದಾಡುತ್ತಿದ್ದು,ಮತದಾನಕ್ಕಾಗಿ ಬಂದವರು ಕಾದು ಕಾದು ಹಿಂದಿರುಗುತ್ತಿದ್ದಾರೆ.
ಮತಗಟ್ಟೆಯಲ್ಲಿ ಮಹಿಳೆ ಸಾವು
ಮತಚಲಾಯಿಸಲು ಬಂದಿದ್ದ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಸವದತ್ತಿ ತಾಲೂಕಿನ ಯರಝರ್ವಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ. ಯರಝರ್ವಿ ಗ್ರಾಮದ ಪಾರವ್ವ ಈಶ್ವರ್ ಸಿದ್ನಾಳ (68) ಮೃತ ಮಹಿಳೆ
ಮತಚಲಾಯಿಸಲೆಂದು ಮತಗಟ್ಟೆಗೆ ಬಂದಿದ್ದ ಮಹಿಳೆ ಮತದಾನಕ್ಕೂ ಮುನ್ನವೇ ಮತಗಟ್ಟೆ ಆವರಣದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಮತಗಟ್ಟೆಯಲ್ಲಿ ಆಟಕ್ಕೆ ಅವಕಾಶ
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ಸೃಷ್ಟಿಸಲಾಗಿದೆ.
ಮತದಾರರು ತಮ್ಮ ಮಕ್ಕಳೊಂದಿಗೆ ಬಂದು ಮಕ್ಕಳನ್ನು ಆಟ ಆಡಲು ಬಿಟ್ಟು ಮತದಾನ ಮಾಡುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ನಿಯೋಜಿಸಿ ಮತದಾರರಿಗೆ ಸಹಕಾರ ನೀಡಲಾಯಿತು.@ECISVEEP @SpokespersonECI @DEOBallari #KarnatakaAssemblyElection2023 pic.twitter.com/Yxm3qGAAHW
— Chief Electoral Officer, Karnataka (@ceo_karnataka) May 10, 2023
ಶತಾಯುಷಿ ಮತದಾನ
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಮ್ಮರಚೇಡು ಗ್ರಾಮದಲ್ಲಿ 108 ವರ್ಷದ ವೃದ್ಧೆಯೊಬ್ಬರು ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ್ದಾರೆ.
ಸಂಜಮ್ಮ ಎನ್ನುವ ವೃದ್ಧೆ ಮತದಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.