ಕರ್ನಾಟಕದ ಭವಿಷ್ಯ ಬರೆಯಲು ಇನ್ನು ಕೇವಲ ಎರಡು ಗಂಟೆಗಳು ಮಾತ್ರ ಬಾಕಿ ; ಎಚ್ಚರಿಸಿದ ಚುನಾವಣಾ ಆಯೋಗ
ಕರ್ನಾಟಕದ ಭವಿಷ್ಯ ಬರೆಯಲು ಇನ್ನು ಕೇವಲ ಎರಡು ಗಂಟೆಗಳು ಮಾತ್ರ ಬಾಕಿ ಇವೆ. ಇನ್ನೂ ಮತ ಚಲಾಯಿಸದೇ ಇರುವವರೆಲ್ಲ ಬೇಗ ಮತಗಟ್ಟೆಗೆ ಧಾವಿಸಿ.@ECISVEEP @SpokespersonECI #KarnatakaAssemblyElection2023 pic.twitter.com/lsl7k976P8
— Chief Electoral Officer, Karnataka (@ceo_karnataka) May 10, 2023
ಬೆಂಗಳೂರಿನಲ್ಲಿ ಶೇ. 41.43 ರಷ್ಟು ಮತದಾನ
ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಶೇ. 41.43 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರು ಸಿಟಿಯ ಯಶವಂತಪುರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ. 47.75 ರಷ್ಟು ಮತದಾನವಾಗಿದ್ದರೆ, ಪದ್ಮನಾಭನಗರ ಕ್ಷೇತ್ರದಲ್ಲಿ ಶೇ. 47.57 ರಷ್ಟು ಮತದಾನವಾಗಿದೆ.
ಸಿವಿ ರಾಮನ್ ನಗರದಲ್ಲಿ ಅತಿ ಕಡಿಮೆ ಅಂದರೆ ಶೇ. 34.87 ರಷ್ಟು ಮತದಾನವಾಗಿದೆ.
ಬೆಳಗಾವಿಯಲ್ಲಿ ಒಂಬತ್ತು ಕಡೆ ಮತದಾನ ಸ್ಥಗಿತ
ಬೆಳಗಾವಿ ಜಿಲ್ಲೆಯಲ್ಲಿ ಬರೋಬ್ಬರಿ ಒಂಬತ್ತು ಕಡೆ ಮತದಾನ ಸ್ಥಗಿತಗೊಂಡಿದೆ. ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ.
ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೋಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮದಲ್ಲಿ ಮತದಾನ ಸ್ಥಗಿತವಾಗಿದೆ.
ಕಿತ್ತೂರು ಪಟ್ಟಣದಲ್ಲಿ ಎರಡೂವರೆ ಗಂಟೆಯಿಂದ ಮತದಾನ ಸ್ಥಗಿತವಾಗಿದ್ದರೆ, ಇನ್ನುಳಿದ ಮತಗಟ್ಟೆಗಳಲ್ಲಿ ಒಂದು ಗಂಟೆ, ಅರ್ಧ ಗಂಟೆಯಿಂದ ಮತದಾನ ಸ್ಥಗಿತವಾಗಿದೆ.
ಮತದಾನಕ್ಕೆ ಬಂದ ಮಹಿಳೆಗೆ ಲಾಠಿ ಏಟು
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಮತಗಟ್ಟೆ ಯಲ್ಲಿ ಮತದಾನಕ್ಕೆ ಬಂದ ಮಹಿಳೆಗೆ ಪೊಲೀಸರು ಲಾಠಿಯಿಂದ ಹೊಡೆದ ಘಟನೆ ನಡೆದಿದೆ.
ಇದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು ಮತದಾನ ಸ್ಥಗಿತಗೊಳಿಸಲಾಗಿದೆ.
ಚುನಾವಣಾ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತಗಟ್ಟೆಯಲ್ಲೇ ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ.
ಹುಲಗೇಮ್ಮ ಎನ್ನುವ ಮಹಿಳೆಯ ಕೈಗೆ ಲಾಠಿಯಿಂದ ಹೊಡೆದಿದ್ದೇ ಈ ಘಟನೆಗೆ ಕಾರಣ. ಸ್ಥಳಕ್ಕೆ ತಾಲೂಕು ಚುನಾವಣಾಧಿಕಾರಿಗಳು ಭೇಟಿ ನೀಡಿದ್ದಾರೆ.
ಬಿಟಿಎಂ ಲೇಔಟ್ ನಲ್ಲಿ ಗಲಾಟೆ
ಬಿಟಿಎಂ ಲೇಔಟ್ ವಿಧಾನಸಭೆಯ ಲಕ್ಕಸಂದ್ರ ವಾರ್ಡ್ ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.
ಮತದಾನದ ಚೀಟಿ ಬರೆದುಕೊಡುವ ವಿಚಾರವಾಗಿ ಗಲಾಟೆ ನಡೆದಿದ್ದು, ಬಿಜೆಪಿ ಕಾರ್ಯಕರ್ತ ರಾಜಾ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂದ ಅಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.