ರಾಜ್ಯದಲ್ಲಿ ಶೇ. 52 ರಷ್ಟು ಮತದಾನ
ಮಧ್ಯಾಹ್ನ ಮೂರು ಗಂಟೆ ವೇಳೆಗೆ ರಾಜ್ಯದಲ್ಲಿ ಶೇ.52 ಕಿಂತಲೂ ಹೆಚ್ಚಿನ ಮತದಾನವಾಗಿದೆ.
2.5 ಕೋಟಿಗೂ ಅಧಿಕ ಮತದಾರರು ಮತದಾನದಲ್ಲಿ ಭಾಗಿಯಾಗಿದ್ದಾರೆ.
ಮಂಡ್ಯದಲ್ಲಿ ಕೈಕೊಟ್ಟ ಮತ ಯಂತ್ರ
ಮಂಡ್ಯದ ಮೈಷುಗರ್ ಸ್ಕೂಲ್ ನ ಮತಗಟ್ಟೆಯಲ್ಲಿ ಇವಿಎಂ ಮೆಷಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಸ್ಥಗಿತಗೊಂಡಿದೆ.
ಸುಮಾರು ಮುಕ್ಕಾಲು ಗಂಟೆ ಮತದಾನ ಸ್ಥಗಿತಗೊಂಡಿದ್ದು, ಮತಗಟ್ಟೆಯಲ್ಲಿ ಸಾಲುಗಟ್ಟಿ ಮತದಾರರು ನಿಂತಿದ್ದಾರೆ.
ಮತಗಟ್ಟೆ ಕೇಂದ್ರಕ್ಕೆ ಆಗಮಿಸಿದ ಚುನಾವಣೆಯ ತಾಂತ್ರಿಕ ತಂಡ ಸ್ಥಗಿತಗೊಂಡ ಮತಯಂತ್ರ ಪರಿಶೀಲಿಸಿ ಪರ್ಯಾಯ ಮತಯಂತ್ರ ಅಳವಡಿಸಿದೆ.
ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದ ಯುವತಿ ಹೇಳಿದ್ದೇನು?
ರಾಮನಗರದ ಮತಗಟ್ಟೆ ನಂಬರ್ 154 ರ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿ ಹರುಷ ವ್ಯಕ್ತಿ ಪಡಿಸಿದ ಯುವತಿ.@SpokespersonECI @ECISVEEP @DEORamanagara #KarnatakaAssemblyElection2023 pic.twitter.com/rUMCPBhjX2
— Chief Electoral Officer, Karnataka (@ceo_karnataka) May 10, 2023
ಮತದಾನಕ್ಕೆ ತೊಂದರೆಯಿಲ್ಲ
ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಒಡೆದುಹಾಕಿರಿವುದರಿಂದ ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಡಿಸಿ ವಿಜಯಮಹಾಂತೇಶ ದಾನಮ್ಮನವರ್ ಹೇಳಿದ್ದಾರೆ.
ಹೆಚ್ಚುವರಿ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾಗ ತಪ್ಪು ತಿಳಿದ ಗ್ರಾಮಸ್ಥರು ಈ ಕೃತ್ಯ ನಡೆಸಿದ್ದರು.
ಹಾನಿಯಾದ ಮತಯಂತ್ರಗಳು ಕಾಯ್ದಿರಿಸಿದ ಮತಯಂತ್ರಗಳಾಗಿವೆ. ಸೆಕ್ಟರ್ ಅಧಿಕಾರಿಗಳು ವಾಹನದಲ್ಲಿ ಕೊಂಡೊಯ್ಯುವಾಗ ಜನರು ತಪ್ಪು ಭಾವಿಸಿ ಒಡೆದು ಹಾಕಿದ್ದಾರೆ. ಘಟನೆಯಿಂದ ಮತದಾನಕ್ಕೆ ಯಾವುದೆ ಅಡ್ಡಿಯಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕನಸಿನಕಟ್ಟೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಈ ಗ್ರಾಮದಲ್ಲಿ ಸ್ಮಶಾನ, ರಸ್ತೆ, ಬಸ್ ಸೌಕರ್ಯ ಇಲ್ಲ, ನೆಟವರ್ಕ್ ಸಮಸ್ಯೆ ಇದೆ.
ಈ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.
ಬೆಳಗ್ಗೆಯಿಂದ ಇಲ್ಲಿಯವರೆಗೆ ಕೇವಲ ಮೂವರು ಮಾತ್ರ ಮತದಾನ ಮಾಡಿದ್ದಾರೆ. ಒಟ್ಟು 1081 ಮತಗಳು ಈ ಗ್ರಾಮದಲ್ಲಿವೆ.