ಕುಂದಾಪುರದಲ್ಲಿ ಅತಿಹೆಚ್ಚಿನ ಮತದಾನ
ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಕುಂದಾಪುರದಲ್ಲಿ ಶೇ. 49.5 ಮತದಾನವಾಗಿದೆ ಇದು ರಾಜ್ಯದಲ್ಲಿಯೇ ಅತಿ ಹೆಚ್ಚು.
ಕಾರ್ಕಳದಲ್ಲಿ ಶೇ. 49.13, ಶೃಂಗೇರಿಯಲ್ಲಿ ಶೇ. 49.04, ಕಾಪುವಿನಲ್ಲಿ ಶೇ. 49 ರಷ್ಟು ಮತದಾನವಾಗಿದೆ.
ರಾಜ್ಯದಲ್ಲಿ ಶೇ. 37.25. ರಷ್ಟು ಮತದಾನ
ರಾಜ್ಯದಲ್ಲಿ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಶೇ. 37.25 ರಷ್ಟು ಮತದಾನವಾಗಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ. 47.08 ರಷ್ಟು ಮತದಾನವಾಗಿದೆ. ಪುತ್ತೂರಿನಲ್ಲಿ ಶೇ.47.47 ಮತ್ತು ಬಂಟ್ವಾಳದಲ್ಲಿ ಶೇ.47.03 ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ.
ಸೋಮಣ್ಣ ಭೇಟಿ ವೇಳೆ ಗದ್ದಲ
ಮೈಸೂರಿನ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಬೂತ್‌ಗೆ ಭೇಟಿ ನೀಡುವ ವೇಳೆ ಗದ್ದಲ ನಡೆದಿದೆ.
ಸೋಮಣ್ಣ ಬೂತ್ ಭೇಟಿ ನೀಡಬಾರದು, ಇದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಗದ್ದಲವೆಬ್ಬಿಸಿದ್ದಾರೆ.
ಮತ ಚಲಾಯಿಸಲು ಬಂದ ದೇವೇಗೌಡರು
ಮಾಜಿ ಪ್ರಧಾನಿ ದೇವೇಗೌಡರು ಮತ ಚಲಾಯಿಸಲು ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದಾರೆ.
ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಮಾಡಲಾಗಿದೆ.
ಹೊಳೆನರಸೀಪುರದಿಂದ ಪಡುವಲಹಿಪ್ಪೆ ಗ್ರಾಮಕ್ಕೆ ತೆರಳಿ ಅವರು ಮತ ಚಲಾಯಿಸಲಿದ್ದಾರೆ.
ಸಂಸದೆ ಸುಮಲತಾ ಮತದಾನ
ಮಂಡ್ಯ ಜಿಲ್ಲೆ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತದಾನ ಮಾಡಿದ್ದಾರೆ.
ಸರತಿ ಸಾಲಿನಲ್ಲಿ ನಿಂತು ಅವರು ಮತ ಚಲಾಯಿಸಿದರು.