ಅಭಿಷೇಕ್‌ -ಅವಿವ ಮದುವೆಯ ಸಂಭ್ರಮ

ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವ ಬಿಡಪ  ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುಮಗಳಾಗಿ  ಅವಿವ

ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಬಿಡಪ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

ಗಣ್ಯರಿಂದ ಆಶೀರ್ವಾದ

ಅಭಿಷೇಕ್‌ ಅಂಬರೀಶ್‌ ಅವರು ಮದುವೆ ಮಂಟಪಕ್ಕೆ ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಮದುವೆಗೆ ಸೆಲೆಬ್ರಿಟಿಗಳ ದಂಡು ನೆರೆದಿತ್ತು.

ಜೋಡಿ ಕಂಡು ಫ್ಯಾನ್ಸ್‌ ಫುಲ್‌ ಖುಷ್‌

ಈಗಾಗಲೇ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಹೊಸ ಜೋಡಿ ಮಿಂಚಿರುವ ಫೋಟೊ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ರಾಕಿಂಗ್ ಸ್ಟಾರ್ ದಂಪತಿ ಶುಭ ಹಾರೈಕೆ

ಯಶ್ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ‘ಕೆಜಿಎಫ್ 2’ ಲುಕ್ ಹಾಗೆಯೇ ಉಳಿಸಿಕೊಂಡಿದ್ದಾರೆ.

ಕಾಲಿವುಡ್ ನಟ ರಜನಿಕಾಂತ್, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ ಈ ಮದುವೆಗೆ ಆಗಮಿಸಿ ಹಾರೈಸಿದ್ದಾರೆ.

ರಜನಿಕಾಂತ್ ಭಾಗಿ

ಅಭಿಷೇಕ್‌-ಅವಿವ ವಿವಾಹ

ಬೆಳಗ್ಗೆ 9.30 ಸುಮಾರಿಗೆ ಅಭಿಷೇಕ್ -ಅವಿವ ವಿವಾಹ ನಡೆದಿದೆ. ಸುಮಲತಾ ಅವರು ಮಗನ ಮದುವೆ ಕಣ್ತುಂಬಿಕೊಂಡಿದ್ದಾರೆ.

ಆರತಕ್ಷತೆ ಎಲ್ಲಿ?

ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ಇದೆ.