Edited By: Pragati Bhandari

ಇದರಲ್ಲಿ ನಾರು ವಿಫುಲವಾಗಿ ಇರುವುದರಿಂದ ಮಧುಮೇಹಿಗಳಿಗೆ ಸೂಕ್ತವಾದ ಹಣ್ಣು

ಪಪ್ಪಾಯದಲ್ಲಿರುವ ಲೈಕೋಪೇನ್‌ ಅಂಶವು ಕ್ಯಾನ್ಸರ್‌ ಭೀತಿಯನ್ನು ದೂರ ಮಾಡಲು ನೆರವಾಗುತ್ತದೆ

ಕ್ಯಾಲ್ಶಿಯಂ ಹೀರಿಕೊಳ್ಳಲು ಅಗತ್ಯವಾಗಿ ಬೇಕಾದ ವಿಟಮಿನ್‌ ಸಿ ಧಾರಾಳವಾಗಿರುವ ಪಪ್ಪಾಯ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ

ನಾರುಭರಿತ ಹಣ್ಣಾದ್ದರಿಂದ ಜೀರ್ಣಾಂಗಗಳನ್ನು ಶುಚಿ ಮಾಡಿ, ಮಲಬದ್ಧತೆ ನಿವಾರಿಸುತ್ತದೆ

 ಇದರಲ್ಲಿರುವ ಪಪೈನ್‌ ಎಂಬ ಕಿಣ್ವಗಳು ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ

ವಿಟಮಿನ್‌ ಸಿ ಭರಪೂರ ಇರುವುದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ

ಇದರ ವಿಟಮಿನ್‌ ಎ ಸತ್ವಗಳು ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತವೆ

ಚರ್ಮದ ಮೇಲಿನ ಸುಕ್ಕುಗಳನ್ನು ತಡೆದು, ತ್ವಚೆಗೆ ಹೊಳಪು ನೀಡುತ್ತದೆ