JEE Advanced Result | ಜೆಇಇ ಅಡ್ವಾನ್ಸ್ಡ್​​​ನಲ್ಲಿ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿಯಲ್ಲಿದೆ ವಿಶೇಷತೆ - Vistara News

ಶಿಕ್ಷಣ

JEE Advanced Result | ಜೆಇಇ ಅಡ್ವಾನ್ಸ್ಡ್​​​ನಲ್ಲಿ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿಯಲ್ಲಿದೆ ವಿಶೇಷತೆ

ಮುಂಬೈನ ಅಂಧೇರಿಯವನಾದ ಓಜಸ್ ಮಹೇಶ್ವರಿ ಕೋಚಿಂಗ್​ ಪಡೆದಿದ್ದು ಹೈದರಾಬಾದ್​ನಲ್ಲಿ. ತಮ್ಮ ಪುತ್ರ ಟಾಪರ್ ಆಗುತ್ತಾನೆ ಎಂದು ಆತನ ಪಾಲಕರಿಗೂ ಸಂಪೂರ್ಣ ನಂಬಿಕೆಯಿತ್ತು.

VISTARANEWS.COM


on

becomes first amongst PwD candidates to rank 26 in general category
ಓಜಸ್​ ಮಹೇಶ್ವರಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೆಇಇ ಅಡ್ವಾನ್ಸ್ಡ್​ 2022 ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಅದರಲ್ಲೀಗ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿ ಓಜಸ್​​ ಮಹೇಶ್ವರಿ ಒಂದು ವಿಶೇಷ ಕಾರಣಕ್ಕೆ ಗಮನಸೆಳೆದಿದ್ದಾರೆ. ಓಜಸ್​ ಮಹೇಶ್ವರಿ ಜೆಇಇ ಅಡ್ವಾನ್ಸ್​ ಪರೀಕ್ಷೆಯನ್ನು PDW (Persons with Disabilities) ಅಂದರೆ ಅಂಗವೈಕಲ್ಯತೆ ಮೀಸಲಾತಿ ವಿಭಾಗದಲ್ಲಿ ಬರೆದಿದ್ದರು. ಅವರೀಗ ಆ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ ಮತ್ತು ಅಖಿಲ ಭಾರತ ಶ್ರೇಣಿಯಲ್ಲಿ 26ನೇ ಶ್ರೇಯಾಂಕ ಪಡೆದು ಸಾಧನೆ ಮಾಡಿದ್ದಾರೆ.

ಮುಂಬೈನ ಅಂಧೇರಿ ನಿವಾಸಿಯಾದ ಓಜಸ್​ ಮಹೇಶ್ವರಿ ಹೈದರಾಬಾದ್​ನ ಕೋಚಿಂಗ್​ ಸೆಂಟರ್​​ನಲ್ಲಿ ತರಬೇತಿ ಪಡೆದಿದ್ದರು. ತಮ್ಮ ಪುತ್ರ ಕೇವಲ PwD ವಿಭಾಗದಲ್ಲಿ ಮಾತ್ರವಲ್ಲ, ಆಲ್​ ಇಂಡಿಯಾ ಅಖಿಲ ಭಾರತ ಶ್ರೇಣಿಯಲ್ಲೇ ಟಾಪರ್​ ಆಗುತ್ತಾನೆ ಎಂಬ ನಂಬಿಕೆ ಆತನ ಪಾಲಕರಿಗೆ ಇತ್ತು. ಅಂದಹಾಗೇ, ಹೀಗೆ ವಿಕಲಾಂಗ ವಿಭಾಗದಲ್ಲಿ ಪರೀಕ್ಷೆ ಬರೆದು ಜನರಲ್​ ಕೆಟಗರಿಯಲ್ಲಿ 26ನೇ ಶ್ರೇಯಾಂಕ ಪಡೆದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಓಜಸ್​ ಮಹೇಶ್ವರಿ, ಇತಿಹಾಸ ಸೃಷ್ಟಿಸಿದ್ದಾರೆ.

ಪುತ್ರ ಓಜಸ್​ ಸಾಧನೆ ಬಗ್ಗೆ ಅವನ ತಾಯಿ ಪೂಜಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ‘ಓಜಸ್​ ವಿಕಲಾಂಗ ಆಗಿದ್ದರೂ, ಆ ವರ್ಗಕ್ಕೆ ಇರುವ ಯಾವುದೇ ವ್ಯವಸ್ಥೆ, ಸೌಕರ್ಯವನ್ನೂ ಬಯಸಲಿಲ್ಲ. ಆತ ವಿಕಲಾಂಗರ ವಿಭಾಗದಲ್ಲಿ ಖಂಡಿತವಾಗಿಯೂ ಶ್ರೇಯಾಂಕ ಪಡೆಯುತ್ತಾನೆ ಎಂಬ ನಂಬಿಕೆ ನಮಗೆ ಇತ್ತು. ಆದರೆ ಆತನ ಜನರಲ್​ ಱಂಕ್​ ಬಗ್ಗೆ ತುಂಬ ಕುತೂಹಲ ಇತ್ತು. ಅದರಲ್ಲೀಗ 26ನೇ ಶ್ರೇಯಾಂಕ ಪಡೆದಿದ್ದು ಖುಷಿ ತಂದಿದೆ ಎಂದು ಹೇಳಿದ್ದಾರೆ.

ಓಜಸ್​ ಮಹೇಶ್ವರ್​ ಹುಟ್ಟುವಾಗ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಆತನಿಗೆ 6 ವರ್ಷ ಇದ್ದಾಗ ಮೊದಲಿಗೆ ಕಿವಿ ಕೇಳುವುದು ನಿಂತು ಹೋಯಿತು. ಹಾಗಂತ ಆತನ ಓದಬೇಕು ಎಂಬ ಆಸೆಗೆ ಅದೇನೂ ಸಮಸ್ಯೆ ಕೊಡಲಿಲ್ಲ. ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದ. 8ನೇ ವರ್ಷದಿಂದ ಓಜಸ್​ ಈ ಎರಡೂ ವಿಷಯಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನ, ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದ. ಜೆಇಇ ಮೇನ್​ ಪರೀಕ್ಷೆಯಲ್ಲೂ ಟಾಪರ್​ ಎನ್ನಿಸಿಕೊಂಡಿದ್ದ.

ಇದನ್ನೂ ಓದಿ: JEE Advanced Result | ಜೆಇಇ​​ನಲ್ಲಿ 9ನೇ ಶ್ರೇಯಾಂಕ ಪಡೆದ ಮಹಿತ್​​​​ಗೆ ಪುಷ್ಪಾ ಸಿನಿಮಾದ ಡೈಲಾಗ್​ ಸ್ಫೂರ್ತಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CET 2024: ಸಿಇಟಿ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ; ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿದ ಸರ್ಕಾರ

CET 2024: ಈ ಬಾರಿಯ ಸಿಇಟಿಯ 4 ವಿಷಯಗಳಿಂದ ಸುಮಾರು 40ಕ್ಕೂ ಹೆಚ್ಚು ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳು ಕೇಳಿರುವುದಕ್ಕೆ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಪ್ರಶ್ನೆ ಪತ್ರಿಕೆಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ತಜ್ಞರ ಸಮಿತಿ ರಚಿಸಲಾಗಿದೆ.

VISTARANEWS.COM


on

CET 2024
Koo

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ (CET 2024) ಪಠ್ಯಕ್ರಮದ ಹೊರತಾದ ಪ್ರಶ್ನೆಗಳಿಂದ (Out of syllabus questions) ವಿದ್ಯಾರ್ಥಿಗಳಲ್ಲಿ ಆತಂಕ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರದಿಂದ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿ ರಚಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ತಜ್ಞರ ಸಮಿತಿಯು ವರದಿಯನ್ನು ತಕ್ಷಣವೇ ನೀಡುವಂತೆ ಇಲಾಖೆ ಸೂಚನೆ ನೀಡಿದೆ.

ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಎಂ.ಎಸ್‌ ತಿಳಿಸಿದ್ದಾರೆ.

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏ.18 ಮತ್ತು 19ರಂದು ನಡೆಸಲಾಗಿತ್ತು. 4 ವಿಷಯಗಳಿಗೆ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ) ನಡೆದಿದ್ದ ಸಿಇಟಿ ಪರೀಕ್ಷೆಗೆ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ನಡೆದ ನಂತರ, ಪತ್ರಿಕೆಗಳಲ್ಲಿ ಹಲವು ಪ್ರಶ್ನೆಗಳು ಸಿಇಟಿಯ ಪಠ್ಯಕ್ರಮದ ಹೊರತಾಗಿವೆ ಎಂದು ವಿದ್ಯಾರ್ತಿಗಳು ಆರೋಪಿಸಿದ್ದರು. ಆದ್ದರಿಂದ, ಗ್ರೇಸ್ ಅಂಕಗಳನ್ನು ಒದಗಿಸುವಂತೆ ಅಥವಾ ಪರೀಕ್ಷೆಯನ್ನು ಮರು ನಡೆಸುವಂತೆ ಒತ್ತಾಯ ಕೇಳಿಬಂದಿದೆ.

ಇದನ್ನೂ ಓದಿ | CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಪ್ರಶ್ನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಇಎಯು ವಿದ್ಯಾರ್ಥಿಗಳಿಗೆ ಏ.27ರವರೆಗೆ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸುವಂತೆ ‘ಕೆಇಎ’ ಗೆ ಸೂಚಿಸಲಾಗಿದೆ. ಏತನ್ಮಧ್ಯೆ, ಈ ಪ್ರಕರಣದ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಿದೆ ಮತ್ತು ಸಿಇಟಿಯ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ತಕ್ಷಣವೇ ನೀಡುವಂತೆ ಆದೇಶಿಸಲಾಗಿದೆ. ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್‌ ಎಂ.ಎಸ್‌ ತಿಳಿಸಿದ್ದಾರೆ.

Continue Reading

ಬೆಂಗಳೂರು

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

CET 2024 Exam : ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗಳನ್ನು ಕೇಳಲಾಗಿದೆ. ಇದು ವಿದ್ಯಾರ್ಥಿಗಳ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗೊಂದಲ ನಿವಾರಿಸಿ ಎಂದು ಎವಿಬಿಪಿ ಸಂಘಟನೆ ಕೆಇಎ ಎದುರು ಪ್ರತಿಭಟನೆಗೆ ಮುಂದಾಯಿತು. ಈ ವೇಳೆ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ರಸ್ತೆಯಲ್ಲಿ ಕೈ ಕೈ ಮಿಲಾಯಿಸಿದ್ದಾರೆ.

VISTARANEWS.COM


on

By

CET Exam 2024
Koo

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಿಇಟಿ-2024 ಪರೀಕ್ಷೆಯಲ್ಲಿ (CET 2024 exam) ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಹೀಗಾಗಿ ಇದನ್ನೂ ಖಂಡಿಸಿ ಎವಿಬಿಪಿ ಸಂಘಟನೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಎವಿಬಿಪಿ ಕಾರ್ಯಕರ್ತರು ಕೆಇಎ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಗಲಾಟೆ ವಿಕೋಪಕ್ಕೆ ತಿರುಗಿದ ಕಾರಣಕ್ಕೆ ಎವಿಬಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ರಸ್ತೆ ತಡೆಯಲು ಹೋದ ಕಾರ್ಯಕರ್ತರನ್ನು ಪೊಲೀಸರು ಬಸ್‌ನಲ್ಲಿ ಕಂಡೊಯ್ಯುವಾಗ ಒಬ್ಬರನ್ನೊಬ್ಬರು ಕುತ್ತಿಗೆ ಹಿಡಿದು ನೂಕಾಡಿ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿ: Murder Case : ಟೈಂ ಆಯ್ತು ಬಾರ್‌ ಕ್ಲೋಸ್‌ ಎಂದಿದ್ದಕ್ಕೆ ಕ್ಯಾಶಿಯರ್‌ನ ಕೊಲೆ ಮಾಡಿದ ಕುಡುಕ

ಏನಿದು ಔಟ್‌ ಆಫ್‌ ಸಿಲಬಸ್‌ ಗೊಂದಲ?

ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ವೃತ್ತಿಪರ ಕೋಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಬಾರಿಯ ಪರೀಕ್ಷೆಯಲ್ಲಿ 4 ವಿಷಯಗಳಿಂದ ಸುಮಾರು 40ಕ್ಕೂ ಹೆಚ್ಚು ಔಟ್‌ ಆಫ್‌ ಸಿಲಬಸ್‌ (Out of Syllabus) ಪ್ರಶ್ನೆಗಳು ಕೇಳಲಾಗಿದೆ. Out of Syllabus ಪ್ರಶ್ನೆಗಳಿಂದ ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳಿಗೆ ಭಾರೀ ಮೋಸವಾಗುತ್ತದೆ. ರಾಜ್ಯದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಎಬಿವಿಪಿ ಪ್ರತಿಭಟಿಸಿತು. ಈ ಗೊಂದಲದಿಂದ ಶಿಕ್ಷಣ ಇಲಾಖೆಗೂ ಮತ್ತು ಪ್ರಾಧಿಕಾರಕ್ಕೂ ಯಾವುದೇ ತಾಳ-ಮೇಳ ಇಲ್ಲ ಎನ್ನವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಿಡಿಕಾರಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ನಾಭಿ ಮತ್ತು ಹಸ್ತಕ್ಷೇಪ ಶಿಕ್ಷಣ ಇಲಾಖೆ ಮತ್ತು ಪ್ರಾಧಿಕಾರಗಳಲ್ಲಿ ಇರುವುದರಿಂದ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಎವಿಬಿಪಿ ಕಿಡಿಕಾರಿದೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಇಲಾಖೆ ರಾಜ್ಯದ ವಿದ್ಯಾರ್ಥಿಗಳಿಗೆ ಕ್ಷಮೆಯನ್ನು ಯಾಚಿಸಬೇಕು. ಅಲ್ಲದೇ ಸಮಸ್ಯೆಗೆ ಕಾರಣವಾಗಿರುವವರನ್ನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಿ.ಇ.ಟಿ – 2024 ಪರೀಕ್ಷೆಗಳನ್ನು ನಡೆಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.

ಕೆಇಎ ಹೇಳೋದೇನು?

ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ಸಂಬಂಧ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ದೂರು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಇಎ, ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ (ಏಪ್ರಿಲ್‌ 24) ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡುವುದಾಗಿ ಹೇಳಿದೆ. ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಕೆಇಎ ಈವರೆಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಗ್ರೇಸ್ ಮಾರ್ಕ್ಸ್ ಬಗ್ಗೆ ಬುಧವಾರ ಚರ್ಚಿಸಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ನಂತರ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ವಿಸ್ತಾರ ನ್ಯೂಸ್‌ಗೆ ಕೆಇಎ ಮಂಡಳಿ ಮಾಹಿತಿ ನೀಡಿದೆ. ಈ ಸಮಿತಿ ರಚನೆಯಾದ ಬಳಿಕ ಅಧ್ಯಯನ ಮಾಡಿ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು.

ಏಪ್ರಿಲ್‌ 27ರವರೆಗೆ ಆಕ್ಷೇಪಣೆ ಸಲ್ಲಿಕೆಗೆ KEA ಅವಕಾಶ

ಈ ಬಾರಿ ಸಿಇಟಿಯಲ್ಲಿ ನೋಂದಣಿ ಮಾಡಿಕೊಂಡಿದ್ದ 3,49,637 ವಿದ್ಯಾರ್ಥಿಗಳ ಪೈಕಿ ಶೇ.92ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಅಲ್ಲದೆ, ಈಗ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳ ಬಗ್ಗೆ‌ ಆಕ್ಷೇಪಣೆಗಳು ಇದ್ದರೆ, ಇದೇ ಏಪ್ರಿಲ್ 27ರೊಳಗೆ ‌ದೂರು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆಯಲ್ಲಿನ ಯಾವುದೇ ಪ್ರಶ್ನೆಗಳ ಬಗ್ಗೆ ಆಕ್ಷೇಪಣೆಗಳು ಇದ್ದರೆ, ವಿಷಯ, ವರ್ಷನ್‌ ಕೋಡ್, ಪ್ರಶ್ನೆ ಸಂಖ್ಯೆಗಳನ್ನು ನಮೂದಿಸಿ keaugcet24@gmail.com ಗೆ ಇ – ಮೇಲ್‌ ಮೂಲಕ ಸಂಜೆ 5.30ರ ಒಳಗೆ ದೂರು ಸಲ್ಲಿಸಲು ಕೆಇಎ ಸೂಚಿಸಿದೆ. ಇದಕ್ಕೆ ತಜ್ಞರ ಸಮಿತಿಯು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಲಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಶಿಕ್ಷಣ

SSLC Topper: ದೇಹರೂಪದ ಕಾರಣ ಟ್ರೋಲ್ ಗೆ ಗುರಿಯಾದ ಎಸ್ ಎಸ್ ಎಲ್ ಸಿ ಟಾಪರ್ ಬೆಂಬಲಕ್ಕೆ ನಿಂತ ನೆಟ್ಟಿಗರು

SSLC Topper: ರಾಜ್ಯದಲ್ಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರಾಚಿ ನಿಗಮ್ ರೂಪದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಗುರಿಯಾಗಿದ್ದರೂ ಅವರು ಮಾಡಿರುವ ಸಾಧನೆಯಿಂದಾಗಿ ಸಾಕಷ್ಟು ಮಂದಿಯಿಂದ ಬೆಂಬಲ ಗಳಿಸಿದ್ದಾರೆ.

VISTARANEWS.COM


on

By

SSLC Topper
Koo

ಲಖನೌ: ಎಸ್ ಎಸ್ ಎಲ್ ಸಿಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲೇ ಟಾಪರ್ (SSLC Topper) ಆಗಿರುವ ಬಾಲಕಿಯೊಬ್ಬಳು ತನ್ನ ದೇಹರೂಪದ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ (social media) ಟ್ರೋಲ್ ಗೆ (troll) ಗುರಿಯಾದರೂ ಸಾಕಷ್ಟು ಮಂದಿಯಿಂದ ಅವಳಿಗೆ ಬೆಂಬಲ ಸಿಕ್ಕಿದೆ.

ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಾ ಪರಿಷತ್ ಇತ್ತೀಚೆಗೆ 10 ಮತ್ತು 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ಸೀತಾಪುರದ (sitapur) ನಿವಾಸಿ ಪ್ರಾಚಿ ನಿಗಮ್ (prachi nigam) 10ನೇ ತರಗತಿಯಲ್ಲಿ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದ್ದಾಳೆ. ಅವಳ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಕೆಲವರು ಅವಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಿಗಮ್ ತನ್ನ ಸಾಧನೆಯಿಂದ ಕುಟುಂಬಕ್ಕೆ ಹೆಮ್ಮೆ ತಂದಿದ್ದರೆ ಆಕೆಯ ಮುಖದ ವೈಶಿಷ್ಟ್ಯಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಗೆ ಗುರಿಯಾದರು.

ಸಾಕಷ್ಟು ಮಂದಿ ಆಕೆಯನ್ನು ಟ್ರೋಲ್ ಮಾಡಿದರೂ ಈ ಟ್ರೋಲಿಂಗ್ ಅನ್ನು ಗಮನಿಸಿದ ಕೆಲವು ನೆಟ್ಟಿಗರು ಪ್ರಾಚಿ ನಿಗಮ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಲ್ಲದೇ ಆಕೆಯನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Which is best after SSLC: ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಇಲ್ಲಿದೆ ಉಪಯುಕ್ತ ಮಾಹಿತಿ

ಇನ್ನು ಕೆಲವರು ಆನ್‌ಲೈನ್ ಟ್ರೋಲ್‌ಗಳು ನಿಗಮ್ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂದು ಗಮನ ಸೆಳೆದಿದ್ದಾರೆ. ಇನ್ನು ಕೆಲವರು ಹುಡುಗಿಯನ್ನು ಅಭಿನಂದಿಸುತ್ತಾ ಅವಳನ್ನು ತಮಾಷೆ ಮಾಡುತ್ತಿದ್ದವರಿಗೆ ತಿರುಗೇಟು ನೀಡಿದರು.


ಯುಪಿ 10ನೇ ತರಗತಿಯ ಫಲಿತಾಂಶ

ಪ್ರಾಚಿ ನಿಗಮ್ 10ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 600ರಲ್ಲಿ 591 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ಅದ್ಭುತ ಸಾಧನೆಯಿಂದ ಅವರ ಕುಟುಂಬ, ಬಂಧುಗಳು, ಶಾಲೆ, ಶಿಕ್ಷಕರು, ಸ್ನೇಹಿತರಿಗೆ ಗೌರವ ತಂದಿದ್ದಾರೆ. ಐಐಟಿ-ಜೆಇಇ ತೇರ್ಗಡೆಯಾಗಿ ಎಂಜಿನಿಯರ್ ಆಗಬೇಕೆಂಬ ಕನಸು ಅವರದ್ದಾಗಿದೆ.

ಯುಪಿ ಬೋರ್ಡ್ ನ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.89.55ರಷ್ಟು ಉತ್ತೀರ್ಣರಾಗಿದ್ದು, ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಶೇ. 93.40ರಷ್ಟು ಬಾಲಕಿಯರು ಮತ್ತು ಶೇ.86.05ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಅಂತಿಮ ಪರೀಕ್ಷೆಗಳನ್ನು ಫೆಬ್ರವರಿ 22 ರಿಂದ ಮಾರ್ಚ್ 9 ರವರೆಗೆ UPMSP ನಿರ್ವಹಿಸಿತು. ಒಟ್ಟು 55,25,308 ಅಭ್ಯರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. 12 ನೇ ತರಗತಿ ವಿದ್ಯಾರ್ಥಿಗಳು 25,77,997 ಮತ್ತು 10 ನೇ ತರಗತಿ ವಿದ್ಯಾರ್ಥಿಗಳು 29,47,311 ರಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ.


ಪ್ರಾಚಿ ನಿಗಮ್ ಬಳಿಕ ದೀಪಿಕಾ ಸೋಂಕರ್ 600ರಲ್ಲಿ 590 ಅಂಕಗಳೊಂದಿಗೆ ರಾಜ್ಯದಲ್ಲೇ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎಎನ್ ಐಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತನ್ನ ಯಶಸ್ಸಿಗೆ ತಂದೆಯೇ ಕಾರಣ ಎಂದು ಹೇಳಿದ್ದಾಳೆ. ಮುಂದೆ ಆಕೆ ಐಐಟಿಯಲ್ಲಿ ಪ್ರವೇಶ ಪಡೆಯಲು ಬಯಸಿದ್ದು, ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ ನಲ್ಲಿ ಅಧ್ಯಯನ ಮುಂದುವರಿಸವ ಆಸೆ ವ್ಯಕ್ತಪಡಿಸಿದ್ದಾರೆ.

Continue Reading

ಶಿಕ್ಷಣ

Which is best after SSLC: ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಇಲ್ಲಿದೆ ಉಪಯುಕ್ತ ಮಾಹಿತಿ

Which is best after SSLC: ಅವಕಾಶಗಳು ಕೆಲವೊಮ್ಮೆ ನಮ್ಮ ಮನೆ ಬಾಗಿಲು ಬಡಿಯುತ್ತದೆ. ಆಗ ಅದನ್ನು ತೆರೆದು ಮುಕ್ತವಾಗಿ ಸ್ವಾಗತಿಸಬೇಕಾದರೆ ನಾವು ಚೆನ್ನಾಗಿ ಸಿದ್ಧರಾಗಿರುವುದು ಬಹು ಮುಖ್ಯ. ಇದಕ್ಕಾಗಿ ಸರಿಯಾದ ಯೋಜನೆ ಹಾಕಿಕೊಳ್ಳಲು ಮತ್ತು ನಮ್ಮ ಸುಂದರ ಭವಿಷ್ಯವನ್ನು ರೂಪಿಸಲು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಈಗ ಸರಿಯಾದ ಸಮಯ. ಎಸ್ ಎಸ್ ಎಲ್ ಸಿ ಬಳಿಕ ಮುಂದೇನು ಮತ್ತೆ ಯಾಕೆ, ಹೇಗೆ ಎಂಬುದನ್ನು ಮೊದಲು ನಿಮ್ಮನ್ನು ನೀವು ಕೇಳಿಕೊಳ್ಳಿ. ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

After SSLC
Koo

ಎಸ್ ಎಸ್ ಎಲ್ ಸಿ ಫಲಿತಾಂಶದ (sslc result) ನಿರೀಕ್ಷೆಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ (students) ಮನದಲ್ಲಿ ಈಗ ಮುಂದೇನು (Which is best After SSLC) ಎನ್ನುವ ಚಿಂತೆಯಂತೂ (tension) ಕಾಡುತ್ತಿದೆ. ಕೆಲವರು ಈಗಾಗಲೇ ತಮ್ಮ ಗುರಿಯನ್ನು (life goal) ನಿರ್ಧರಿಸಿದ್ದರೆ, ಇನ್ನು ಕೆಲವರು ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮನೆ ಮಂದಿಯೂ ಚಿಂತಾಕ್ರಾಂತರಾಗಿರುತ್ತಾರೆ. ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಅವರು ತಮ್ಮ ಅನುಭವದ ಆಧಾರದಲ್ಲಿ ಹಲವು ಸಲಹೆಗಳನ್ನು ನೀಡುತ್ತಾರೆ.

ಎಸ್ ಎಸ್ ಎಲ್ ಸಿ ಅನಂತರ ಮುಂದೇನು? ವಿಜ್ಞಾನ, ವಾಣಿಜ್ಯ ಅಥವಾ ಕಲೆ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ? ಎನ್ನುವ ಪ್ರಶ್ನೆಗಳು ಮನದಲ್ಲಿ ಉದ್ಭವಿಸುವುದು ಸಹಜ. ಯಾವುದೇ ವಿಷಯವನ್ನು ಬೇಕಾದರೂ ಆಯ್ದುಕೊಳ್ಳಿ. ಆದರೆ ಅದಕ್ಕೂ ಮೊದಲು ವೃತ್ತಿ ಜೀವನದ ಗುರಿ ಏನು ಎಂಬುದನ್ನು ನಿರ್ಧರಿಸಿ ಮತ್ತು ಅದಕ್ಕೆ ಸೂಕ್ತವಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ.

ಎಸ್ ಎಸ್ ಎಲ್ ಸಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಮುಂದೇನಾಗಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಲು ಸೂಕ್ತ ಸಮಯ. ವೃತ್ತಿಜೀವನಕ್ಕೆ ಸುಲಭವಾಗಿ ಪ್ರವೇಶಿಸಲು ನೂರಾರು ಅವಕಾಶಗಳು ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ಗೊಂದಲಗಳಾಗುವುದು ಸಹಜ. ಇದನ್ನು ನಿವಾರಿಸಲು ಇಲ್ಲಿರುವ ಪ್ರಮುಖ ಅಂಶಗಳು ನಿಮಗೆ ಸಹಾಯ ಮಾಡಬಹುದು ಮತ್ತು ಉತ್ತಮ ವೃತ್ತಿ ಮಾರ್ಗಕ್ಕೆ ಮಾರ್ಗದರ್ಶನ ನೀಡಬಹುದು.

ಇದನ್ನೂ ಓದಿ: JEE Main 2024: ವಿದ್ಯಾರ್ಥಿಗಳೇ ಗಮನಿಸಿ; ಏಪ್ರಿಲ್‌ 25ರಂದು ಜೆಇಇ ರಿಸಲ್ಟ್‌, ಹೀಗೆ ಚೆಕ್‌ ಮಾಡಿ

ಪ್ರತಿಯೊಂದು ಕ್ಷೇತ್ರದಲ್ಲೂ ಈಗ ಹೆಚ್ಚಿನ ಅವಕಾಶಗಳಿದೆ. ಆಸಕ್ತಿ, ಯೋಗ್ಯತೆ ಮತ್ತು ಎಸ್ ಎಸ್ ಎಲ್ ಸಿಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಸೂಕ್ತ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಕೋರ್ಸ್ ಗಳನ್ನು ಆಯ್ದುಕೊಳ್ಳುವ ಮೊದಲು ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಮೌಲ್ಯಮಾಪನ ಮಾಡಿಕೊಂಡು ವಿಶ್ಲೇಷಣೆ ನಡೆಸಿ. ಜೊತೆಗೆ ವೃತ್ತಿಜೀವನದ ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳಿ.

ಆಸಕ್ತಿಗಳ ಆಧಾರದಲ್ಲಿ ಕೋರ್ಸ್ ಆಯ್ಕೆ ಮಾಡಿದ ಬಳಿಕ ಸರಿಯಾದ ಕೌಶಲ್ಯ ಮತ್ತು ಸಾಮರ್ಥ್ಯ ಇಲ್ಲದೇ ಇದ್ದರೆ ಭವಿಷ್ಯದಲ್ಲಿ ಅದು ಸಮಸ್ಯೆಯನ್ನು ಉಂಟುಮಾಡಬಹುದು. ಹೀಗಾಗಿ ಯಾವುದೇ ಕೋರ್ಸ್ ಆಯ್ಕೆ ಮಾಡುವ ಮೊದಲು ನಿಮ್ಮ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿರುತ್ತದೆ. ಯಶಸ್ವಿ ವೃತ್ತಿಜೀವನಕ್ಕಾಗಿ ಉತ್ತಮ ಮಾರ್ಗ ಮತ್ತು ಸರಿಯಾದ ಎಚ್ಚರಿಕೆಯ ಯೋಜನೆ ಅತ್ಯಗತ್ಯ. ಇದಕ್ಕಾಗಿ ವೃತ್ತಿ ಮೌಲ್ಯಮಾಪನಗಳು ಮತ್ತು ವೃತ್ತಿಪರ ವೃತ್ತಿ ಸಲಹೆಗಾರರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ.

ಆಯ್ಕೆಗಳು ಹಲವಾರು

ಎಸ್ ಎಸ್ ಎಲ್ ಸಿ ಬಳಿಕ ನೂರಾರು ಆಯ್ಕೆಗಳು ನಮ್ಮ ಮುಂದೆ ಇರುತ್ತದೆ. ಸರಿಯಾದ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ನಾವು ರೂಪಿಸಿಕೊಳ್ಳಬಹುದು.


ವಿಜ್ಞಾನ (PCM/PCB)

ಇತ್ತೀಚಿನ ದಿನಗಳಲ್ಲಿ ವಿಜ್ಞಾನವು ಹೆಚ್ಚಿನವರ ಆಯ್ಕೆ ವಿಷಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ದಾರಿಗಳನ್ನು ತೆರೆಯುತ್ತದೆ ಎನ್ನುವ ನಂಬಿಕೆ ಇದರ ಹಿಂದಿದೆ. ವಿಜ್ಞಾನವನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ 10ನೇ ತರಗತಿಯ ಬಳಿಕ ಇರುವ ದಾರಿಗಳು ಹಲವು.
ಪಿಸಿಎಂ ಅನ್ನು ಅಧ್ಯಯನ ಮಾಡಿದರೆ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸಸ್, ರಕ್ಷಣಾ ಸೇವೆಗಳು, ಮರ್ಚೆಂಟ್ ನೇವಿ ಇತ್ಯಾದಿಗಳಂತಹ ವೃತ್ತಿಗಳಿಗೆ ಹೋಗಬಹುದು.
ಪಿಸಿಬಿ ಅನ್ನು ಅಧ್ಯಯನ ಮಾಡಿದರೆ ಔಷಧ, ಫಿಸಿಯೋಥೆರಪಿ, ಕೃಷಿ, ಪೋಷಣೆ ಮತ್ತು ಆಹಾರ ಪದ್ಧತಿ, ದಂತವೈದ್ಯಶಾಸ್ತ್ರ ಮೊದಲಾದವುಗಳನ್ನು ಆಯ್ಕೆ ಮಾಡಬಹುದು. .
ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತದಂತಹ ಈ ಪ್ರಮುಖ ವಿಷಯಗಳ ಹೊರತಾಗಿ, ಇಂಗ್ಲಿಷ್‌ ಕಡ್ಡಾಯ ಭಾಷಾ ವಿಷಯವಿರುತ್ತದೆ. ಇಲ್ಲಿ ಐದು ಮುಖ್ಯ ವಿಷಯಗಳನ್ನು ಆಯ್ಕೆ ಮಾಡಬೇಕು. ಇವುಗಳ ಜೊತೆಗೆ ಪ್ರಯೋಗಾಲಯಗಳಲ್ಲಿ ಪ್ರಾಯೋಗಿಕ ತರಬೇತಿಯನ್ನೂ ಪಡೆಯಬೇಕಾಗುತ್ತದೆ.


ವಾಣಿಜ್ಯ

ಸ್ವಂತ ವ್ಯವಹಾರ ನಡೆಸಲು ಆಸಕ್ತಿ ಇರುವವರಿಗೆ, ಹಣಕಾಸು ವೃತ್ತಿಯಲ್ಲಿ ತೊಡಗಬೇಕು ಎನ್ನುವವರಿಗೆ ಅರ್ಥಶಾಸ್ತ್ರ ಮತ್ತು ಗಣಿತ ಉತ್ತಮ ಆಯ್ಕೆ. ವಾಣಿಜ್ಯ ಶಾಸ್ತ್ರದ ಪ್ರಮುಖ ವಿಷಯಗಳೆಂದರೆ ಅಕೌಂಟೆನ್ಸಿ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನಗಳು. ಕಡ್ಡಾಯ ಭಾಷಾ ವಿಷಯವನ್ನು ಇದರೊಂದಿಗೆ ಅಧ್ಯಯನ ಮಾಡಬೇಕು. ವಾಣಿಜ್ಯ ವಿದ್ಯಾರ್ಥಿಗಳಿಗೆ 10ನೇ ತರಗತಿ ಅನಂತರ ಚಾರ್ಟರ್ಡ್ ಅಕೌಂಟೆನ್ಸಿ, ಬ್ಯಾಂಕಿಂಗ್, ವಿಮೆ, ಹಣಕಾಸು, ಸ್ಟಾಕ್ ಬ್ರೋಕಿಂಗ್, ಹಣಕಾಸು ಮೊದಲಾದ ವೃತ್ತಿ ಆಯ್ಕೆಗೆ ಅವಕಾಶಗಳಿರುತ್ತವೆ.


ಕಲೆ, ಮಾನವಶಾಸ್ತ್ರ

ಸೃಜನಶೀಲರಾಗಿದ್ದರೆ, ಬಲವಾದ ಸಂವಹನ ಕೌಶಲಗಳನ್ನು ಹೊಂದಿದ್ದರೆ ಮತ್ತು ಶೈಕ್ಷಣಿಕ ಸಂಶೋಧನೆಯನ್ನು ಮುಂದುವರಿಸಲು ಬಯಸಿದರೆ ಇದು ಸರಿಯಾದ ಆಯ್ಕೆಯಾಗಿದೆ.
ಕಲೆಯಲ್ಲಿ ನೀಡಲಾಗುವ ಪ್ರಮುಖ ವಿಷಯಗಳೆಂದರೆ ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಲಲಿತಕಲೆ, ಇತ್ಯಾದಿ ಜೊತೆಗೆ ಒಂದು ಕಡ್ಡಾಯ ಭಾಷಾ ವಿಷಯ. ಹ್ಯುಮಾನಿಟೀಸ್ ವಿದ್ಯಾರ್ಥಿಗಳಿಗೆ 10 ನೇ ತರಗತಿಯ ಅನಂತರ ಮುಂದಿನದು ಮಾಧ್ಯಮ, ಪತ್ರಿಕೋದ್ಯಮ, ಸಾಹಿತ್ಯ, ಸಮಾಜಕಾರ್ಯ, ಉತ್ಪನ್ನ ವಿನ್ಯಾಸ, ಬರವಣಿಗೆ, ಬೋಧನೆ ಮತ್ತು ಇತರ ಹಲವು ವೃತ್ತಿ ಆಯ್ಕೆಗಳಿವೆ.


ವೃತ್ತಿಪರ ಕೋರ್ಸ್‌ಗಳು

ಎಸ್‌ಎಸ್‌ಎಲ್‌ಸಿ ಬಳಿಕ ವೃತ್ತಿಪರ ಕೋರ್ಸ್‌ಗಳನ್ನೂ ಸೇರಿಕೊಳ್ಳಬಹುದು. ಇದು 12ನೇ ತರಗತಿ ಪೂರ್ಣಗೊಳಿಸಿದ ತಕ್ಷಣ ನಿಮ್ಮನ್ನು ಕೆಲಸಕ್ಕೆ ಸಿದ್ಧಪಡಿಸುತ್ತವೆ. ಶಾಲೆಯು ನೀಡುವ ವಿಷಯಗಳ ಆಧಾರದ ಮೇಲೆ ವೃತ್ತಿಪರ ವಿಷಯದ ಆಯ್ಕೆಗಳಿರುತ್ತವೆ. ಇದರಲ್ಲಿ ಲೆಕ್ಕಪತ್ರ ನಿರ್ವಹಣೆ, ತೆರಿಗೆ, ಆಟೋ ಶಾಪ್, ದುರಸ್ತಿ, ವ್ಯಾಪಾರ ಕಾರ್ಯಾಚರಣೆಗಳು, ಆಡಳಿತ, ಬಂಡವಾಳ, ಮಾರುಕಟ್ಟೆ ಕಾರ್ಯಾಚರಣೆಗಳು, ನಾಗರಿಕ, ಎಂಜಿನಿಯರಿಂಗ್, ತಂತ್ರಜ್ಞ, ಆಹಾರ ಪೋಷಣೆ, ಆಹಾರ ಪದ್ಧತಿ, ಆಹಾರ ಉತ್ಪಾದನೆ, ಆತಿಥ್ಯ ನಿರ್ವಹಣೆ, ಸಂಗೀತ ಉತ್ಪಾದನೆ, ಜವಳಿ ವಿನ್ಯಾಸ, ವೆಬ್ ಅಪ್ಲಿಕೇಶನ್‌ಗಳು ಇತ್ಯಾದಿ ಹಲವಾರು ವಿಷಯಗಳಿದ್ದು, ಮುಂದೆ ಸಾಕಷ್ಟು ಅವಕಾಶಗಳನ್ನು ನಿಮ್ಮ ಮುಂದೆ ತೆರೆದಿಡುತ್ತದೆ.

ಕುಟುಂಬದ ಹಣಕಾಸಿನ ಜವಾಬ್ದಾರಿಯೊಂದಿಗೆ ತಮ್ಮ ಕಲಿಕೆಯನ್ನು ಮುಂದುವರಿಸಬೇಕು ಎಂದು ಬಯಸುವವರಿಗೂ ಎಸ್ ಎಸ್ ಎಲ್ ಸಿ ಮುಗಿದ ತಕ್ಷಣ ಹಲವು ಆಯ್ಕೆಗಳನ್ನು ನೀಡುತ್ತದೆ.
ಐಟಿಐ ಗಳು, ಪಾಲಿಟೆಕ್ನಿಕ್ ಡಿಪ್ಲೋಮಾಗಳು, ಪ್ಯಾರಾಮೆಡಿಕಲ್ ಮತ್ತು ವೃತ್ತಿಪರ ಕೋರ್ಸ್‌ಗಳು ಶೀಘ್ರದಲ್ಲೇ ನಿಮ್ಮನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿ ಮಾಡುತ್ತದೆ. ಇದು 10 ನೇ ತರಗತಿಯನ್ನು ಪೂರ್ಣಗೊಳಿಸಿದ ತಕ್ಷಣ ಉದ್ಯೋಗವನ್ನು ಹುಡುಕಲು ಸಹಾಯ ಮಾಡುತ್ತದೆ.

ಐಟಿಐ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್)

ಐಟಿಐ ಪ್ರಮಾಣಪತ್ರಗಳನ್ನು ತಾಂತ್ರಿಕ ಮತ್ತು ಕೆಲವು ತಾಂತ್ರಿಕೇತರ ಕೋರ್ಸ್‌ಗಳಲ್ಲಿ 100ಕ್ಕೂ ಹೆಚ್ಚು ವಿಶೇಷತೆಗಳಲ್ಲಿ ನೀಡಲಾಗುತ್ತದೆ. ಇದು ಸರ್ಕಾರಿ ತರಬೇತಿ ಸಂಸ್ಥೆಯಾಗಿದ್ದು ಅದು ನಿಮಗೆ ತರಬೇತಿ ನೀಡುತ್ತದೆ ಮತ್ತು ವಿವಿಧ ಕೈಗಾರಿಕೆಗಳಿಗೆ ನಿಮ್ಮನ್ನು ನುರಿತರನ್ನಾಗಿ ಮಾಡುತ್ತದೆ. ಐಟಿಐ ಕೋರ್ಸ್‌ಗಳ ಅವಧಿಯು ಆರು ತಿಂಗಳಿಂದ ಎರಡು ವರ್ಷಗಳವರೆಗೆ ಇರುತ್ತದೆ.

ಉನ್ನತ ಐಟಿಐ ಕೋರ್ಸ್‌ಗಳು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್ ನಿರ್ವಹಣೆ, ಡ್ರಾಫ್ಟ್‌ಮನ್ (ಸಿವಿಲ್), ಮೆಕ್ಯಾನಿಕ್ (ಆಟೋ ಎಲೆಕ್ಟ್ರಿಕಲ್ಸ್ & ಎಲೆಕ್ಟ್ರಾನಿಕ್ಸ್), ಇಂಟೀರಿಯರ್ ಡೆಕೋರೇಶನ್ ಮತ್ತು ಡಿಸೈನಿಂಗ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಬೇಕರ್ ಮತ್ತು ಮಿಠಾಯಿಗಾರ, ಶೀಟ್ ಮೆಟಲ್, ಪ್ಲಂಬಿಂಗ್ ಇತ್ಯಾದಿ.

ಇನ್ನು ಪಿಡಬ್ಲ್ಯೂ ಡಿಗಳಂತಹ ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಪಾಲಿಟೆಕ್ನಿಕ್ ಕೋರ್ಸ್‌ಗಳು ಸಹಾಯ ಮಾಡುತ್ತದೆ.

ಕಡಿಮೆ ವೆಚ್ಚದ ಡಿಪ್ಲೊಮಾ ಕೋರ್ಸ್‌ಗಳಿದ್ದು, ಇದನ್ನು 10 ಅಥವಾ 12 ನೇ ತರಗತಿಯ ಬಳಿಕವೂ ಮಾಡಬಹುದು. ಇದರಲ್ಲಿ ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಮೆರೈನ್ ಟೆಕ್ನಾಲಜಿ, ಟೆಕ್ಸ್‌ಟೈಲ್ ಟೆಕ್ನಾಲಜಿ, ಆಟೋಮೊಬೈಲ್, ಇತ್ಯಾದಿ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.


ಪ್ಯಾರಾ ಮೆಡಿಕಲ್ ಕೋರ್ಸ್‌ಗಳು

ಪ್ಯಾರಾ ಮೆಡಿಕಲ್ ಶಾಖೆಯು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಉತ್ತಮ ಅವಕಾಶಗಳನ್ನು ನೀಡುತ್ತದೆ. ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ 10ನೇ ತರಗತಿ ಅನಂತರ ಎಕ್ಸ್-ರೇ ತಂತ್ರಜ್ಞ, ಡಯಾಲಿಸಿಸ್ ತಂತ್ರಜ್ಞ, ನರ್ಸಿಂಗ್ ಅಸಿಸ್ಟೆನ್ಸ್, ನೇತ್ರ ತಂತ್ರಜ್ಞನಾಗಿ ವೃತ್ತಿ ಜೀವನ ಪ್ರಾರಂಭಿಸಬಹುದು.

ವೃತ್ತಿಪರ ಕೋರ್ಸ್‌ಗಳು

ವೃತ್ತಿಪರ ತರಬೇತಿ ಕೋರ್ಸ್‌ಗಳಲ್ಲಿ 1 ರಿಂದ 2 ವರ್ಷಗಳವರೆಗಿನ ಅಲ್ಪಾವಧಿಯ ಕೋರ್ಸ್‌ಗಳಿರುತ್ತವೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಮತ್ತು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (NSFQ) ಅಡಿಯಲ್ಲಿ ಸರ್ಕಾರವು ನೀಡುವ ಉದ್ಯೋಗ ಕೇಂದ್ರಿತ ಕೋರ್ಸ್‌ಗಳಾಗಿವೆ. ಇದರಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳೆಂದರೆ ಸಾಫ್ಟ್‌ವೇರ್ ಡೆವಲಪ್‌ಮೆಂಟ್, ಫ್ಯಾಶನ್ ಡಿಸೈನಿಂಗ್, ಡೆಸ್ಕ್‌ಟಾಪ್ ಪಬ್ಲಿಷಿಂಗ್ (ಡಿಟಿಪಿ), ಆಭರಣ ವಿನ್ಯಾಸ, ಪ್ರಯಾಣ ಮತ್ತು ಪ್ರವಾಸೋದ್ಯಮ, ವೈದ್ಯಕೀಯ ಚಿತ್ರಣ ಇತ್ಯಾದಿ.

ನೆನಪಿರಲಿ

ಸರಿಯಾದ ಕೋರ್ಸ್ ಮತ್ತು ವಿಷಯಗಳ ಆಯ್ಕೆಯ ಮೇಲೆ ಗಮನ ಕೇಂದ್ರೀಕರಿಸಿ. ಇದರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಅಪಾರ ಸ್ಪರ್ಧೆಗೆ ನಿಮ್ಮನ್ನು ಸಿದ್ಧಪಡಿಸುವ ಕೌಶಲ್ಯಗಳನ್ನು ಬೆಳೆಸುವುದು ಕೂಡಾ ಅತ್ಯಗತ್ಯ. ಪ್ರಪಂಚದಾದ್ಯಂತ ಏನು ನಡೆಯುತ್ತಿದೆ ಎಂಬುದರ ಮಾಹಿತಿಯೂ ಇರಲಿ. ಇದರಿಂದ ಉದ್ಯೋಗ ಕ್ಷೇತ್ರ ಪ್ರವೇಶಿಸುವುದು ಸುಲಭವಾಗುತ್ತದೆ.
ಇತರ ವಿಶಯಗಳನ್ನೂ ಕಲಿಯಿರಿ

ಉದ್ಯೋಗ ಕ್ಷೇತ್ರದಲ್ಲಿ ಈಗ ಸಾಕಷ್ಟು ಪೈಪೋಟಿ ಇದೆ. ಹೀಗಾಗಿ ನಿರಂತರ ಒಂದಲ್ಲ ಒಂದು ವಿಷಯಗಳನ್ನು ಕಲಿಯುವುದು ಒಳ್ಳೆಯದು. ಸಂವಹನ ಕೌಶಲ್ಯ ಬೆಳೆಸಿಕೊಳ್ಳುವುದು, ಹೊಸ ಭಾಷೆ ಕಲಿಕೆ ನಿಮ್ಮ ಭವಿಷ್ಯಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಡುತ್ತದೆ. ಅಲ್ಲದೇ ಓದುವ ಅಭ್ಯಾಸ ನಿರಂತರವಾಗಿರಲಿ.

Continue Reading
Advertisement
Mahesh Babu
ಕ್ರಿಕೆಟ್5 mins ago

IPL 2024: ಸನ್​ರೈಸರ್ಸ್​ ತಂಡದ ಆಟಗಾರರನ್ನು ಭೇಟಿ ಮಾಡಿದ ನಟ ಮಹೇಶ್‌ ಬಾಬು

arvind kejriwal in tihar jail
ದೇಶ18 mins ago

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

jaishankar
Lok Sabha Election 202419 mins ago

S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

Road Accident
ಉಡುಪಿ52 mins ago

Road Accident : ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

supreme court baba ramdev IMA
ಪ್ರಮುಖ ಸುದ್ದಿ53 mins ago

Patanjali Case: ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ: ಪತಂಜಲಿ ಪ್ರಕರಣದಲ್ಲಿ ವೈದ್ಯಕೀಯ ಸಂಘಕ್ಕೂ ಸುಪ್ರೀಂ ಚಾಟಿ

Lok Sabha Election 2024 Are you planning to visit Mysore Palace on April 26 No entry if no vote
Lok Sabha Election 202458 mins ago

Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

Murder case in hublli
ಹುಬ್ಬಳ್ಳಿ1 hour ago

Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

Rafael Nadal
ಕ್ರೀಡೆ1 hour ago

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Modi in Karnataka PM Narendra Modi to visit from April 28 and 29
Lok Sabha Election 20242 hours ago

Modi in Karnataka: ಏಪ್ರಿಲ್‌ 28 – 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ; ಯಾವ ಯಾವ ಕ್ಷೇತ್ರದಲ್ಲಿ ಮತ ಬೇಟೆ?

Murder Case In Bengaluru
ಬೆಂಗಳೂರು2 hours ago

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಅತಿಯಾದ ಸೆಕ್ಸ್‌ಗೆ ಒತ್ತಾಯಿಸಿದವಳನ್ನು ಬೆಡ್‌ ರೂಂನಲ್ಲೇ ಕೊಂದ ಯುವಕ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು22 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ23 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌