ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ! - Vistara News

ವೈರಲ್ ನ್ಯೂಸ್

ಸೆಕ್ಸ್​ಗೆ ಒಪ್ಪದ ಪತಿಯ ನಿಜ ಸ್ವರೂಪ ತಿಳಿದು ದಂಗಾದ ಮಹಿಳೆ; 8 ವರ್ಷದ ನಂತರ ತಿಳಿಯಿತು ಸತ್ಯ!

2020ರಲ್ಲಿ ಪತಿ ವಿರಾಜ್​ ಕೋಲ್ಕತ್ತಕ್ಕೆ ಹೋಗಿದ್ದ. ಅಲ್ಲಿಂದ ಬಂದ ಮೇಲೆ ಪತ್ನಿ ಶೀತಲ್​​ಗೆ ಸತ್ಯ ಹೇಳಿದ್ದ. ಅಷ್ಟಲ್ಲದೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಈ ಬಗ್ಗೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

VISTARANEWS.COM


on

wife finds out that husband
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: 40 ವರ್ಷದ ಮಹಿಳೆಯೊಬ್ಬರು ಮದುವೆಯಾಗಿ ಎಂಟು ವರ್ಷದ ಬಳಿಕ ತನ್ನ ಪತಿಯ ನಿಜ ಸ್ವರೂಪ ತಿಳಿದು ದಂಗಾಗಿಹೋಗಿದ್ದಾರೆ. ಗುಜರಾತ್​​ನ ವಡೋದರಾದ ಮಹಿಳೆಯೊಬ್ಬರು ಅಲ್ಲಿನ ಗೋತ್ರಿ ಪೊಲೀಸ್​ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ನೀಡಿದ್ದು, ಎಫ್​ಐಆರ್​ ಕೂಡ ದಾಖಲಾಗಿದೆ. ತಾನು ಪಕ್ಕಾ ಮೋಸ ಹೋದೆ ಎಂಬುದು ಆ ಮಹಿಳೆಯ ದೊಡ್ಡ ಅಳಲು ಮತ್ತು ನಿರಾಸೆ.

ಅಂದಹಾಗೇ, ಈ ಮಹಿಳೆ ಹೆಸರು ಶೀತಲ್​. ಈಕೆಯ ಪತಿ 2011ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ 14 ವರ್ಷದ ಪುತ್ರಿಯೂ ಇದ್ದಳು. ಬದುಕು ಮುನ್ನಡೆಯಬೇಕಲ್ಲ..ಶೀತಲ್​ ಇನ್ನೊಂದು ಮದುವೆಯಾಗಲು ನಿರ್ಧಾರ ಮಾಡಿದರು. ಹಾಗಾಗಿ ಮ್ಯಾಟ್ರಿಮೊನಿಯಲ್​ ವೆಬ್​ಸೈಟ್​ ಮೂಲಕ ಸಂಗಾತಿ ಹುಡುಕಾಟ ಶುರು ಮಾಡಿದ್ದರು. ಆಗ ಅದರಲ್ಲಿ ಪರಿಚಯ ಆದವರು ವಿರಾಜ್​ ವರ್ಧನ್​. ಇವರಿಬ್ಬರೂ 2014ರಲ್ಲಿ ಮದುವೆ ಮಾಡಿಕೊಂಡರು. ಇಬ್ಬರ ಕುಟುಂಬದವರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರನ್ನು ಹಾರೈಸಿದರು.

ವಿವಾಹದ ಬಳಿಕ ದಂಪತಿ ಹನಿಮೂನ್​​ಗೆಂದು ಕಾಶ್ಮೀರಕ್ಕೆ ಕೂಡ ಹೋಗಿದ್ದರು. ಆದರೆ ವಿರಾಜ್​ ಲೈಂಗಿಕ ಸಂಪರ್ಕಕ್ಕೆ ಒಪ್ಪುತ್ತಿರಲಿಲ್ಲ. ಶೀತಲ್​​ ಒತ್ತಾಯ ಮಾಡಿದರೂ ಆಗೋದಿಲ್ಲ ಎಂದೇ ಹೇಳುತ್ತಿದ್ದ. ಅದಕ್ಕೆ ಕಾರಣ ಕೇಳಿದಾಗ ‘ನನಗೆ ಕೆಲ ವರ್ಷಗಳ ಹಿಂದೆ ರಷ್ಯಾದಲ್ಲಿ ಒಂದು ಅಪಘಾತವಾಯಿತು. ಆಗ ಆಗಿದ್ದ ಏಟಿನಿಂದಾಗಿ ಲೈಂಗಿಕ ಕ್ರಿಯೆ ನಡೆಸಲು ಸಾಧ್ಯವಾಗುವುದಿಲ್ಲ. ಚೇತರಿಸಿಕೊಳ್ಳಲು ಐದಾರು ವರ್ಷಗಳೇ ಬೇಕು ಎಂದು ವೈದ್ಯರು ಹೇಳಿದ್ದರು. ನಾನು ಸಂಪೂರ್ಣ ಗುಣಮುಖ ಆಗುವವರೆಗೂ ನೀನು ಸಹಕರಿಸು’ ಎಂದು ವಿರಾಜ್​ ಹೇಳಿಕೊಂಡಿದ್ದ. ಹೀಗೆ ಮುಂದುವರಿದುಕೊಂಡೇ ಬಂದಿತ್ತು.

ಆದರೆ 2020ರಲ್ಲಿ ತಾನು ತೂಕ ಕಡಿಮೆ ಮಾಡಿಕೊಳ್ಳುವ ಸರ್ಜರಿಗೆ ಒಳಗಾಗುತ್ತೇನೆ ಎಂದು ಹೇಳಿ ವಿರಾಜ್​ ಕೋಲ್ಕತ್ತಕ್ಕೆ ಹೋಗಿದ್ದ. ಅಲ್ಲಿಂದ ಬಂದ ಬಳಿಕ, ‘ತಾನು ಎಂಟು ವರ್ಷದ ಹಿಂದೆ ನಿನ್ನನ್ನು ಮದುವೆಯಾಗುವುದಕ್ಕೂ ಮುನ್ನ ಒಬ್ಬ ಮಹಿಳೆಯೇ ಆಗಿದ್ದೆ. ನಂತರ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡೆ’ ಎಂಬ ಸತ್ಯವನ್ನು ನನಗೆ ಹೇಳಿದ. ಹಾಗೇ, ತನ್ನ ಹೆಸರು ವಿಜೇತಾ ಎಂದಾಗಿತ್ತು ಎಂಬುದನ್ನೂ ತಿಳಿಸಿದ. ಅಲ್ಲಿಂದ ಬಂದ ಬಳಿಕ ಅಸಹಜ ಲೈಂಗಿಕ ಕ್ರಿಯೆಗೆ ನನ್ನನ್ನು ಒತ್ತಾಯಿಸುತ್ತಿದ್ದ. ತೀರ ಅಸಹ್ಯವಾಗುತ್ತಿದೆ. ಆದರೆ 2020ರಲ್ಲಿ ಕೋಲ್ಕತ್ತದಲ್ಲಿ ಯಾವ ಸರ್ಜರಿ ನಡೆಯಿತು ಎಂಬುದು ನನಗೆ ಗೊತ್ತಾಗಲಿಲ್ಲ’ ಎಂದು ಶೀತಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ನಾನು ಅವನಲ್ಲ ಅವಳು ಎಂದ ಎಲಾನ್ ಮಸ್ಕ್‌ ಕುಡಿ! ಲಿಂಗ ಪರಿವರ್ತನೆಗೆ ಮುಂದಾಗಿರೋದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಹಾರ್ದಿಕ್​ ಪಾಂಡ್ಯ ಮೇಲೆ ಬೌಲಿಂಗ್​ ಕೋಚ್​ ಮುನಿಸು; ವಿಡಿಯೊ ವೈರಲ್​​

IPL 2024: ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಲಿಕರಾದ ನೀತಾ ಅಂಬಾನಿ ಕೂಡ ಪಂದ್ಯವನ್ನು ನೋಡುವ ಬದಲು ಸಿಟ್ಟಿನಲ್ಲಿ ಮೊಬೈಲ್​ ನೋಡುತ್ತಿರುವ ದೃಶ್ಯಗಳು ವೈರಲ್​ ಆಗಿತ್ತು. ಪಂದ್ಯದ ಬಳಿಕ ಫ್ರಾಂಚೈಸಿಯ ಅಧಿಕಾರಿಗಳು ರೋಹಿತ್​ ಜತೆ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂದಿತ್ತು. ಇದನ್ನೆಲ್ಲ ನೋಡುವಾಗ ಮುಂದಿನ ಪಂದ್ಯದಲ್ಲಿಯೂ ಮುಂಬೈ ಇದೇ ರೀತಿಯ ಕಳಪೆ ಪ್ರದರ್ಶನ ತೋರಿದರೆ ಪಾಂಡ್ಯ ತಲೆ ದಂಡ ಖಚಿತ ಎನ್ನಲಡ್ಡಿಯಿಲ್ಲ.

VISTARANEWS.COM


on

IPL 2024
Koo

ಮುಂಬಯಿ: 5 ಬಾರಿಯ ಐಪಿಎಲ್‌(IPL 2024) ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡದೊಳಗೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ಹಾರ್ದಿಕ್​ ಪಾಂಡ್ಯ(Hardik Pandya) ನಾಯಕನಾದ ಬಳಿಕ ಈ ತಂಡದಲ್ಲಿ ಸಮಸ್ಯೆಗಳ ಸಾಗರವೇ ತಾಂಡವವಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೋಚ್​ ಲಸಿತ್​ ಮಾಲಿಂಗ(Lasith Malinga) ಮುನಿಸಿಕೊಂಡಿರುವ ವಿಡಿಯೊವೊಂದು ವೈರಲ್​ ಆಗಿದೆ.

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೆ ಪಂದ್ಯದ ಮುಕ್ತಾಯದ ವೇಳೆಯೂ ಮಾಲಿಂಗ ಅವರು ಪಾಂಡ್ಯ ಜತೆ ಸರಿಯಾಗಿ ಮಾತನಾಡಲು ಕೂಡ ನಿರಾಕರಿಸಿದ್ದಾರೆ.

ತಂಡದೊಳಗೆ ಎರಡು ಬಣಗಳಾಗಿವೆ ಎಂದು ಕೂಡ ಹೇಳಲಾಗಿದೆ. ರೋಹಿತ್‌ ಶರ್ಮಾ ಬಣದಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಪಾಂಡ್ಯ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. ಪಾಂಡ್ಯ ಅವರ ಕೆಲ ವರ್ತನೆ ಬಗ್ಗೆ ಸ್ವತಃ ಫ್ರಾಂಚೈಸಿಗೂ ಅಸಮಾಧಾನ ಇದೆ ಎಂದು ವರದಿಯಾಗಿದ್ದು ಮತ್ತೆ ರೋಹಿತ್​ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಲಿಕರಾದ ನೀತಾ ಅಂಬಾನಿ ಕೂಡ ಪಂದ್ಯವನ್ನು ನೋಡುವ ಬದಲು ಸಿಟ್ಟಿನಲ್ಲಿ ಮೊಬೈಲ್​ ನೋಡುತ್ತಿರುವ ದೃಶ್ಯಗಳು ವೈರಲ್​ ಆಗಿತ್ತು. ಪಂದ್ಯದ ಬಳಿಕ ಫ್ರಾಂಚೈಸಿಯ ಅಧಿಕಾರಿಗಳು ರೋಹಿತ್​ ಜತೆ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂದಿತ್ತು. ಇದನ್ನೆಲ್ಲ ನೋಡುವಾಗ ಮುಂದಿನ ಪಂದ್ಯದಲ್ಲಿಯೂ ಮುಂಬೈ ಇದೇ ರೀತಿಯ ಕಳಪೆ ಪ್ರದರ್ಶನ ತೋರಿದರೆ ಪಾಂಡ್ಯ ತಲೆ ದಂಡ ಖಚಿತ ಎನ್ನಲಡ್ಡಿಯಿಲ್ಲ. ಮುಂಬೈ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ತವರಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯ ಎಪ್ರಿಲ್​ 1 ರಂದು ನಡೆಯಲಿದೆ.

Continue Reading

ಬೀದರ್‌

Dead Body Found : ವಾಟರ್‌ ಟ್ಯಾಂಕರ್‌ನಲ್ಲಿತ್ತು ಕೊಳೆತ ಶವ; ಅದೇ ನೀರು ಕುಡಿದವರು ಕಕ್ಕಾಬಿಕ್ಕಿ

Dead Body Found : ಗ್ರಾಮದಲ್ಲಿರುವ ನೀರಿನ ಟ್ಯಾಂಕರ್‌ನಲ್ಲಿ ವ್ಯಕ್ತಿ ಶವ ಪತ್ತೆಯಾಗಿದ್ದು, ದಿನಗಟ್ಟಲೆ ಅದೇ ನೀರನ್ನು ಕುಡಿದಿದ್ದ ಜನರು (Water Tank) ಬೆಚ್ಚಿಬಿದ್ದಿದ್ದಾರೆ.

VISTARANEWS.COM


on

By

Dead Body Found in water tank
ವಾಟರ್‌ ಟ್ಯಾಂಕರ್‌ನಲ್ಲಿ ಶವ ಪತ್ತೆಯಾಗುತ್ತಿದ್ದಂತೆ ಜಮಾಯಿಸಿದ ಗ್ರಾಮಸ್ಥರು
Koo

ಬೀದರ್ : ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ (Water Tank) ಶವವೊಂದು (Dead Body Found) ಪತ್ತೆಯಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೀದರ್‌ನ ಆಣದೂರ ಗ್ರಾಮದಲ್ಲಿ ಈ ಘಟನೆ (Bidar News) ನಡೆದಿದೆ. ಗ್ರಾಮದ ಮನೆ ಮನೆಗೆ ಸರಬರಾಜು ಮಾಡುತ್ತಿದ್ದ ನೀರು ಗಬ್ಬು ನಾರುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಮೊದಮೊದಲು ಕುಡಿಯುವ ನೀರಿಗೆ ಚರಂಡಿ ನೀರು ಏನಾದರೂ ಮಿಶ್ರಣ ಎಂದು ಶಂಕಿಸಲಾಗಿತ್ತು. ಮನೆಗೆ ಸರಬರಾಜು ಆಗುತ್ತಿದ್ದ ನೀರಲ್ಲಿ ಕೂದಲು ಬರುತ್ತಿದ್ದವು. ಇತ್ತ ದೂರು ಬಂದ ಕಾರಣಕ್ಕೆ ವಾಟರ್ ಟ್ಯಾಂಕ್ ಪರಿಶೀಲನೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿಯಿಯಲ್ಲಿ ವ್ಯಕ್ತಿಯೊಬ್ಬಮ ಶವ ಪತ್ತೆಯಾಗಿದೆ.

ನೀರಿನ ಟ್ಯಾಂಕರ್‌ನಲ್ಲಿ ಎಷ್ಟು ದಿವಸದಿಂದ ಶವವಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೇ ಎಂಬುದು ತಿಳಿದು ಬಂದಿಲ್ಲ. ಗ್ರಾಮಸ್ಥರು ಹಲವು ದಿನದಿಂದ ಶವ ಬಿದ್ದಿದ್ದ ಟ್ಯಾಂಕಿನ ನೀರನ್ನೇ ಕುಡಿದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಕುಡಿಯುವ ನೀರು ಗಬ್ಬು ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಿದಾಗ ಶವ ಪತ್ತೆಯಾಗಿದೆ ಎಂದು ಗ್ರಾಮ ಪಂಚಾಯತಿ ಪಿಡಿಓ ಮಾಹಿತಿ ನೀಡಿದ್ದಾರೆ. ಮೊದಮೊದಲು ನೀರಿನೊಟ್ಟಿಗೆ ಕೂದಲು ಬಂದಿದೆ. ಜತೆಗೆ ಕುಡಿಯಲು ಆಗದಷ್ಟು ನೀರು ಗಬ್ಬು ನಾರುತ್ತಿತ್ತು. ಇದೀಗ ಸತ್ಯ ವಿಷಯವನ್ನು ತಿಳಿದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

ಹೃದಯಾಘಾತ (Heart Attack) ವೃದ್ಧರೊಬ್ಬರ ಪ್ರಾಣವನ್ನು ಬಲಿ ಪಡೆದಿದೆ. ಈಗೀಗ ಹೃದಯಾಘಾತ (Heart attack) ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ.

ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧರೊಬ್ಬರು ಕುಳಿತಲ್ಲೇ ಕುಸಿದಿದ್ದು, ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಹಠಾತ್ ಹೃದಯಾಘಾತದಿಂದ ವೃದ್ಧ ಪ್ರಾಣ ಕಳೆದುಕೊಂಡಿದ್ದಾರೆ.

ಕೃಷ್ಣ (60) ಮೃತ ದುರ್ದೈವಿ. 11 ಗಂಟೆ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಿಂದ ಬಸ್ ಹತ್ತಿದ್ದ ಕೃಷ್ಣ ಅವರು ಟಿಕೆಟ್ ಪಡೆದು ಸೀಟ್‌ನಲ್ಲಿ ಕುಳಿತುಕೊಂಡಿದ್ದರು. ನವರಂಗ್ ಬಳಿ ಬರುತ್ತಿದ್ದಂತೆ ಹದಿನೈದು ನಿಮಿಷದಲ್ಲೇ ಹೃದಯಾಘಾತವಾಗಿದೆ. ನೋಡನೋಡುತ್ತಿದ್ದಂತೆ ಬಸ್ಸಿನಲ್ಲೇ ಉಸಿರು ಚೆಲ್ಲಿದ್ದಾರೆ.

ಏಕಾಏಕಿ ವ್ಯಕ್ತಿ ಮೃತಪಟ್ಟಿದ್ದು ಕಂಡ ಸಹಪ್ರಯಾಣಿಕರು ಆತಂಕಗೊಂಡು ಕಿರುಚಾಡಿದ್ದಾರೆ. ಕೂಡಲೇ ಚಾಲಕ ಹಾಗು ನಿರ್ವಾಹಕರು ಬಿಎಂಟಿಸಿ ಬಸ್‌ನಲ್ಲೇ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಬಳಿಕ ಮೃತ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Shani Louk Photo: ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ.

VISTARANEWS.COM


on

shani louk photo hamas terrorists
Koo

ನ್ಯೂಯಾರ್ಕ್‌: ಹಮಾಸ್‌ ಉಗ್ರರಿಂದ (Hamas Terrorists) ಹತ್ಯೆಗೀಡಾದ ಯಹೂದಿ ಮಹಿಳೆ ಶಾನಿ ಲೌಕ್‌ (Shani Louk) ಬೆತ್ತಲೆ ದೇಹವನ್ನು ಗಾಜಾದ (Gaza strip) ಬೀದಿಗಳಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡುತ್ತಿರುವ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ (Photo Award) ನೀಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.

ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದನ್ನು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗಾಗಿ ತೆಗೆಯಲಾಗಿತ್ತು. ಯುಎಸ್ ಮೂಲದ ಡೊನಾಲ್ಡ್ ಡಬ್ಲ್ಯೂ. ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಈ ಸ್ಪರ್ಧೆಯನ್ನು ನಡೆಸುತ್ತಿದ್ದು, ಪ್ರಶಸ್ತಿಯನ್ನು ನೀಡುತ್ತದೆ.

ʼಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್ʼ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರಶಸ್ತಿ ಘೋಷಣೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಜನ ಲೌಕ್ ಅವರ ಫೋಟೋವನ್ನು “ಯಹೂದಿ ಮಹಿಳೆಯ ಬದುಕಿನ ಘನತೆಗೆ ಮಾಡಿದ ಅವಮಾನ” ಎಂದು ದೂಷಿಸಿದ್ದಾರೆ.

ಶಾನಿ ಲೌಕ್‌ 22 ವರ್ಷ ವಯಸ್ಸಿನ ಜರ್ಮನ್-ಇಸ್ರೇಲಿ ಮಹಿಳೆಯಾಗಿದ್ದು, ಹಮಾಸ್‌ ನಡೆಸಿದ ಕಳೆದ ವರ್ಷದ ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪಹರಿಸಿ ಗಾಜಾ ಪಟ್ಟಿಗೆ ಕರೆದೊಯ್ಯಲಾಗಿತ್ತು. ಪ್ಯಾಲೇಸ್ಟಿನಿಯನ್ ಉಗ್ರರು ಈಕೆಯನ್ನು ಗಾಯಗೊಳಿಸಿ, ತೆರೆದ ಜೀಪಿನಲ್ಲಿ ಬೋರಲು ಮಲಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. ಈಕೆಯ ಮೈಯ ಮೇಲಿದ್ದ ಉಡುಪು ಬಹುತೇಕ ಹರಿದು ಆಕೆ ವಿವಸ್ತ್ರಳಾಗಿದ್ದು, ಆಕೆಯ ಮೇಲೆ ಹಮಾಸ್‌ ಉಗ್ರನೊಬ್ಬ ಕುಳಿತಿದ್ದುದು ಕಂಡುಬಂದಿತ್ತು. ಈ ಫೋಟೋಗೆ ಪ್ರಶಸ್ತಿ ದೊರೆತಿದೆ.

“ಈ ಫೋಟೋವನ್ನು ತೆಗೆದ ವ್ಯಕ್ತಿಯು ನಾಗರಿಕರನ್ನು ಹತ್ಯೆ ಮಾಡುವ, ಚಿತ್ರಹಿಂಸೆ ನೀಡುವ ಮತ್ತು ಅತ್ಯಾಚಾರ ಮಾಡುವ ಜಿಹಾದಿ ಗ್ಯಾಂಗ್‌ನ ಭಾಗವಾಗಿದ್ದಾನೆ. ಅವಳನ್ನು ಹೀಗೆ ನೆನಪಿಸಿಕೊಳ್ಳುವುದು ಆಕೆಯ ಮನೆಯವರಿಗೆ ಖಂಡಿತಕ್ಕೂ ಇಷ್ಟವಿಲ್ಲ. ಈ ಪ್ರಶಸ್ತಿಯು ಅವಳ ಘನತೆಗೆ ನಿರಂತರ ಅಪಚಾರ ಎಸಗುತ್ತದೆ” ಎಂದು ಒಬ್ಬರು ಆಕ್ರೋಶಿಸಿದ್ದಾರೆ.

“ಶಾನಿ ಲೌಕ್ ಅವರ ದೇಹವನ್ನು ಭಯೋತ್ಪಾದಕರು ಪರೇಡ್ ಮಾಡುತ್ತಿರುವ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಈ ಛಾಯಾಗ್ರಾಹಕರು ಹಮಾಸ್ ಭಯೋತ್ಪಾದಕರೊಂದಿಗೆ 10/7ರಂದು ಇಸ್ರೇಲ್‌ಗೆ ಬಂದರು ಮತ್ತು ದಾಳಿಯ ಬಗ್ಗೆ ತಿಳಿದಿದ್ದರು” ಎಂದು ಇನ್ನೊಬ್ಬ ಬಳಕೆದಾರರು ಎಕ್ಸ್‌ನಲ್ಲಿ ಸಿಟ್ಟಿನಿಂದ ಟ್ವೀಟ್‌ ಮಾಡಿದ್ದಾರೆ.

ಈ ಫೋಟೋವನ್ನು ಆಲಿ ಮಹಮದ್‌ ಎಂಬ ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಈತ ಎಪಿ ಸಂಸ್ಥೆಗೆ ಫೋಟೋ ಒದಗಿಸುವ ಏಜೆನ್ಸಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಾನೆ. “ಈ ಫೋಟೋಗ್ರಾಫರ್‌ ಹಮಾಸ್‌ ಉಗ್ರರ ಜೊತೆಗಿದ್ದ” ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಮಂದಿ ಆರೋಪಿಸಿದ್ದಾರೆ. ಆದರೆ ಈ ದಾಳಿಯ ಮಾಹಿತಿ ಮೊದಲೇ ಇತ್ತು ಎಂಬುದನ್ನು ಎಪಿ ಸಂಸ್ಥೆ ನಿರಾಕರಿಸಿದೆ.

ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

Continue Reading

ವೈರಲ್ ನ್ಯೂಸ್

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಹಲವು ಪ್ರತಿಭೆಗಳು ಲಿಪ್‌ ಸಿಂಕ್‌ ಮಾಡಿವೆ.  ಇದೀಗ ವಯೋಲಿನ್‌ ವಾದಕ ಹೇಗೆ ನುಡಿಸಿದ್ದಾರೆ ಎಂದು ನೀವೇ ನೋಡಿ!

VISTARANEWS.COM


on

Karimani Malika Ninalla play by violinist Aneesh Vidyashankar
Koo

ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್‌ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ ಶೇರ್‌ ಮಾಡಿದ ಬಳಿಕ ಇನ್ನಷ್ಟು ಪ್ರತಿಭೆಗಳು ಈ ರೀಲ್ಸ್‌ಗೆ ಲಿಪ್‌ ಸಿಂಕ್‌ ಮಾಡಿವೆ.  ಇದುವರೆಗೆ ಈ ರೀಲ್ಸ್‌ಗೆ ಕ್ರೇಜ್‌ ಕಡಿಮೆಯಾಗಿಲ್ಲ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದರು. ಇದೀಗ ನಡೆದಾಡುವ ವಯೋಲಿನ್‌ ವಾದಕ ಎಂದೇ ಖ್ಯಾತರಾಗಿರುವ ʻಅನೀಶ್‌ ವಿದ್ಯಾಶಂಕರ್‌ʼ (violinist Aneesh Vidyashankar) ಈ ಹಾಡನ್ನು ನುಡಿಸಿದ್ದಾರೆ. ವಿಕ್ಕಿಪೀಡಿಯಾ, ಚಂದ್ರು, ಹಾಗೂ ರಾವುಲ್ಲಾ ಶಾಸ್ತ್ರೀಯ ಸಂಗೀತ ತರಗತಿಗೆ ಹೋದರೆ ಎಷ್ಟು ಸೊಗಸಾಗಿರಬಹುದಲ್ಲವೇ ಎಂದು ವಿಡಿಯೊ ಹಂಚಿಕೊಂಡು ಕ್ಯಾಪ್ಷನ್‌ ಕೊಡಲಾಗಿದೆ.

ಅನೀಶ್‌ ವಿದ್ಯಾಶಂಕರ್‌ ಅವರಿಗೆ 33 ವರ್ಷ ಇರಬಹುದು. ಆದರೆ ಅವರು ಸುಮಾರು 25 ವರ್ಷಗಳಿಂದ ವೃತ್ತಿಪರ ಸಂಗೀತಗಾರರಾಗಿದ್ದಾರೆ. 2,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅವರು ವಯೋಲಿನ್‌ ನುಡಿಸಿದ್ದಾರೆ. ಇನ್ನು ಅನೀಶ್‌ ವಿದ್ಯಾಶಂಕರ್‌ ಈ ವಿಡಿಯೊ ಪೋಸ್ಟ್‌ ಮಾಡಿದ ಬಳಿಕ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಹಾರ್ಟ್‌ ಇಮೋಜಿ ಕಮೆಂಟ್‌ ಮಾಡಿದ್ದಾರೆ.

ಉಪೇಂದ್ರ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ. ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್‌ ಮಾಡಿದ್ದರು. ಇದು ಸಖತ್‌ ವೈರಲ್‌ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್‌ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ… ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. 1999ರ ಅಕ್ಟೋಬರ್ 22ರಂದು ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಈ ಚಿತ್ರಕ್ಕೆ ನಟಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರೀ ಸದ್ದು ಮಾಡಿದ್ದವು.

ಇದನ್ನೂ ಓದಿ: Karimani Malika Ninalla: ಗೋಕರ್ಣದ ವಿದೇಶಿಯರ ಬಾಯಲ್ಲೂ ʻಕರಿಮಣಿ ಮಾಲಿಕ ರಾವುಲ್ಲಾʼ ಸಾಂಗ್‌!

ಅನೀಶ್‌ ವಿದ್ಯಾಶಂಕರ್‌ ಶೇರ್‌ ಮಾಡಿರುವ ವಿಡಿಯೊ

ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?

ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿಯಾಗಿತ್ತು. ಮುಂದೆ ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.

Continue Reading
Advertisement
Mukthar Ansari
ಪ್ರಮುಖ ಸುದ್ದಿ8 mins ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ13 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ27 mins ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ40 mins ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ44 mins ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ45 mins ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು47 mins ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ50 mins ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ50 mins ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Lok Sabha Election 2024
ಕರ್ನಾಟಕ51 mins ago

Lok Sabha Election 2024: ಜೆಡಿಎಸ್ ಪಟ್ಟಿ ಬಿಡುಗಡೆ; ಮಂಡ್ಯದಿಂದ ಎಚ್‌ಡಿಕೆ, ಕೋಲಾರ, ಹಾಸನಕ್ಕೆ ಯಾರು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌