ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ | ಮದರಸಾ ಚಟುವಟಿಕೆಗಳ ಮೇಲೆ ನಿಗಾ ಅಗತ್ಯ

ಮದರಸಾದ ಮಕ್ಕಳಿಗೆ ಆಧುನಿಕ ಶಿಕ್ಷಣ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ, ಮುಸ್ಲಿಮೇತರ ಮಕ್ಕಳನ್ನೂ ಮದರಸಾಗೆ ಸೇರಿಸಿ ಅವರಿಗೆ ಇಸ್ಲಾಂ ಆಧರಿತ ಪಾಠ ನಡೆಸುತ್ತಿರುವ ಸಂಗತಿ ಆತಂಕಕಾರಿ. ಇದಕ್ಕೆ ಕಾರಣವೇನು? ಇವರು ಸ್ವಯಿಚ್ಛೆಯಿಂದ ಹೋದವರೋ, ಅಥವಾ ಆಮಿಷ ಒಡ್ಡಿ ಮದರಸಾಗೆ ಸೇರಿಸಲಾಗಿತ್ತೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಶಾದ್ಯಂತ ಸರ್ಕಾರಿ ಅನುದಾನಿತ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ನೀಡುತ್ತಿರುವ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್)‌ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾಗಳನ್ನು ಗುರುತಿಸಬೇಕು. ಹಾಗೆಯೇ, ಮುಸ್ಲಿಮೇತರ ಮಕ್ಕಳಿಗೂ ಮದರಸಾಗಳಿಗೆ ಪ್ರವೇಶ ನೀಡುತ್ತಿರುವುದರ ಕುರಿತು ವಿಸ್ತೃತವಾದ ತನಿಖೆ ನಡೆಸಬೇಕು. ಮುಸ್ಲಿಮೇತರ ಮಕ್ಕಳನ್ನು ಗುರುತಿಸಿ, ಅವರನ್ನು ಪುನಃ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಮದರಸಾಗಳಿಗೆ ಸಂಬಂಧಿಸಿ ಇದೊಂದೇ ಆಕ್ಷೇಪವಲ್ಲ, ಇತರ ಹಲವು ಆರೋಪಗಳೂ ಇವೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿ ಬರುವ ಅಲ್ಪಸಂಖ್ಯಾತ ಶಿಕ್ಷಣ ರಾಷ್ಟ್ರೀಯ ನಿಗಾ ಸಮಿತಿ (ಎನ್‌ಎಂಸಿಎಂಇ) 2018ರಲ್ಲಿ ಒಂದು ಸೂಚನೆ ಹೊರಡಿಸಿತ್ತು. ದೇಶದಲ್ಲಿರುವ ಮದರಸಾಗಳಲ್ಲಿ ಶೇ.80 ನೋಂದಣಿಯಲ್ಲದೆ ಕಾರ್ಯಾಚರಿಸುತ್ತಿದ್ದು, ಕೂಡಲೇ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿತ್ತು. ಮದರಸಾಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದರ ಬಗ್ಗೆ ಸಮಗ್ರ ಕಲ್ಪನೆ ಒದಗಿಸುವ, ಅದರ ಮೇಲೆ ಗಮನ ಇಡುವ ಉದ್ದೇಶದಿಂದ ಕೇಂದ್ರ ಮದರಸಾ ಮಂಡಳಿ 1932ರಲ್ಲಿಯೇ ರಚನೆಯಾಗಿದೆ. ಆದರೆ ಅದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದಕ್ಕೆ ದಾಖಲೆಯಿಲ್ಲ. ಎಲ್ಲ ಮದರಸಾಗಳೂ ಇದರಡಿ ನೋಂದಾಯಿಸಿಕೊಳ್ಳಬೇಕು. ಮಂಡಳಿಯ ಪರಿಷ್ಕೃತ ನಿಯಮಾವಳಿಯ ಪ್ರಕಾರ ನೂತನ ಶಿಕ್ಷಣ ನೀತಿಯನ್ನೂ ಇಲ್ಲಿ ಅಳವಡಿಸಿಕೊಳ್ಳುವ ಆಶಯವನ್ನು ಘೋಷಿಸಲಾಗಿದೆ. ಆದರೆ ನೋಂದಾಯಿತ ಮದರಸಾಗಳಲ್ಲಿ ಏನನ್ನು ಕಲಿಸಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದ ಮೇಲೆ, ನೋಂದಣಿಯಾಗದ ಮದರಸಾಗಳಲ್ಲಿ ಆಗುತ್ತಿರುವ ಕಲಿಕೆ ಆಧುನಿಕ ಕಲಿಕಾ ಪದ್ಧತಿಗೆ ಪೂರಕವಾಗಿದೆಯೇ ಎಂಬುದನ್ನು ಖಚತಪಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ?

ಮಕ್ಕಳು ಯಾವುದೇ ಭೇದ-ಭಾವ, ಪಕ್ಷಪಾತ ಅಥವಾ ಪೂರ್ವಗ್ರಹವಿಲ್ಲದ ಶಿಕ್ಷಣ ಪಡೆಯಬೇಕು ಎಂಬುದು ಸಂವಿಧಾನದ ಆಶಯ. ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬುದು ಶೈಕ್ಷಣಿಕ ಹಕ್ಕು ಕಾಯ್ದೆ (2009)ಯ ಉದ್ದೇಶ. ಕಡ್ಡಾಯ ಉಚಿತ ಶಿಕ್ಷಣ ಕಾಯಿದೆಯೂ ಇದೆ. ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿರುವುದು ಈ ಉದ್ದೇಶಗಳಿಗೆ ವಿರುದ್ಧ. ಮದರಸಾಗಳು ಧಾರ್ಮಿಕ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ. ಹಾಗಾಗಿ, ಮುಸ್ಲಿಮೇತರ ಮಕ್ಕಳನ್ನು ಮದರಸಾಗಳಿಗೆ ಸೇರಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್‌ಸಿಪಿಸಿಆರ್‌ ತಿಳಿಸಿದೆ. ಅನಧಿಕೃತ ಮದರಸಾಗಳನ್ನು ಗುರುತಿಸಿ 30 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಮುಸ್ಲಿಂ ಮಕ್ಕಳ ಶಿಕ್ಷಣದ ಬಗ್ಗೆ ಕಾನೂನು ನಿರೂಪಕರಿಗೂ ಸಮಾಧಾನವಿಲ್ಲ. ಯಾಕೆಂದರೆ ಅನೇಕ ಸಮೀಕ್ಷೆಗಳು ತಿಳಿಸುವ ಹಾಗೆ, ಎಸ್‌ಎಸ್‌ಎಲ್‌ಸಿ ನಂತರ ಹೆಚ್ಚಿನ ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣ ತೊರೆಯುತ್ತಿದ್ದಾರೆ. ಮೆಡಿಕಲ್‌, ಎಂಜಿನಿಯರಿಂಗ್‌ನಂಥ ಉನ್ನತ ಶಿಕ್ಷಣಕ್ಕೆ ಹೋಗುವ ಯುವಕ/ಯುವತಿಯರ ಪ್ರಮಾಣ ಅತ್ಯಲ್ಪ. ಪ್ರಾಥಮಿಕ ಶಾಲೆಯಲ್ಲಿರುವ ಮುಸ್ಲಿಂ ಮಕ್ಕಳು ಮದರಸಾಗಳಿಗೆ ಕಲಿಕೆಗೆ ಹೋಗುವುದು ಕಡ್ಡಾಯ ಎಂಬ ಸ್ಥಿತಿ ಇದೆ. ಮತೀಯ ಶಿಕ್ಷಣ ಹೆಚ್ಚಿನ ಬಾರಿ ಆಧುನಿಕ ಶಿಕ್ಷಣವನ್ನು ಮೂಲೆಗುಂಪು ಮಾಡಲು ಕಾರಣವಾಗುತ್ತದೆ.

ಹೀಗಾಗಿ ಮದರಸಾ ಶಿಕ್ಷಣ ಪರಿಕಲ್ಪನೆಯೇ ಒಂದು ರೀತಿಯಲ್ಲಿ ಪ್ರಶ್ನಾರ್ಹ. ಅಲ್ಲಿರುವ ಮಕ್ಕಳಿಗೆ ಆಧುನಿಕ ಶಿಕ್ಷಣ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ, ಮುಸ್ಲಿಮೇತರ ಮಕ್ಕಳನ್ನೂ ಮದರಸಾಗೆ ಸೇರಿಸಿ ಅವರಿಗೆ ಇಸ್ಲಾಂ ಆಧರಿತ ಪಾಠ ನಡೆಸುತ್ತಿರುವ ಸಂಗತಿ ಆತಂಕಕಾರಿ. ಇದಕ್ಕೆ ಕಾರಣವೇನು? ಇವರು ಸ್ವಯಿಚ್ಛೆಯಿಂದ ಹೋದವರೋ, ಅಥವಾ ಆಮಿಷ ಒಡ್ಡಿ ಮದರಸಾಗೆ ಸೇರಿಸಲಾಗಿತ್ತೆ ಎಂಬ ಬಗ್ಗೆಯೂ ತನಿಖೆ ನಡೆಸಬೇಕಿದೆ. ಮದರಸಾಗಳನ್ನು ಆಧುನಿಕರಣಗೊಳಿಸಬೇಕಿದೆ. ಮುಸ್ಲಿಂ ಮಕ್ಕಳೂ ಆಧುನಿಕ ಶಿಕ್ಷಣ ಪಡೆಯುವಂತಾಗಬೇಕು. ಮುಸ್ಲಿಂ ಮಕ್ಕಳು ಮುಖ್ಯ ವಾಹಿನಿಯಿಂದ ಬೇರ್ಪಡದಂತೆ ಎಚ್ಚರ ವಹಿಸಬೇಕು. ಆಧುನಿಕತೆ- ಕೌಶಲಗಳೇ ಶಿಕ್ಷಣದ ಮಾನದಂಡವಾಗಬೇಕು. ಅದು ಮದರಸ- ಮತೀಯ ಶಿಕ್ಷಣದಿಂದ ಸಾಧ್ಯವಾಗುವ ಮಾತಲ್ಲ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸೋಲು, ಗೆಲುವಿನಲ್ಲೂ ಬಿಜೆಪಿ, ಕಾಂಗ್ರೆಸ್‌ಗಿದೆ ಪಾಠ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bomb Threat: ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ!

ಡಿಸೆಂಬರ್‌ನಲ್ಲಿ​ಇದೇ ರೀತಿ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದರಿಂದಾಗಿ ಶಾಲೆ ಆಡಳಿತ ಮಂಡಳಿಗಳು ಬೆಚ್ಚಿ ಬಿದ್ದಿದ್ದವು. ಇದೀಗ ಮತ್ತೊಂದು ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್ ಬಂದಿದೆ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತೆರಳಿ ಪರಿಶೀಲಿಸಿದ್ದಾರೆ.

VISTARANEWS.COM


on

Bomb threat
Koo

ಆನೇಕಲ್: ಇತ್ತೀಚೆಗೆ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಿದ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹುಲಿಮಂಗಲದ ಟ್ರೀಮಿಸ್ ವರ್ಲ್ಡ್ ಸ್ಕೂಲ್‌ಗೆ ಶುಕ್ರವಾರ ಮಧ್ಯಾಹ್ನ ಬಾಂಬ್‌ ಬೆದರಿಕೆ ಇ-ಮೇಲ್ ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಶಾಲಾ ಕೊಠಡಿಯ ಡೆಸ್ಕ್ ಕೆಳಗಡೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ದೌಡಾಯಿಸಿ, ಇಡೀ ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಶಾಲೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದರಿಂದ ಬೆಚ್ಚಿ ಬಿದ್ದಿದ್ದ ಶಾಲೆ ಆಡಳಿತ ಮಂಡಳಿ ನಿಟ್ಟಿಸಿರು ಬಿಟ್ಟಿದೆ.

ಡಿಸೆಂಬರ್‌ನಲ್ಲಿ ಬೆಂಗಳೂರಿನ 48ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ನಂತರ ಮಾರ್ಚ್‌ 1ರಂದು ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಅದಾದ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಮಾರ್‌, ಗೃಹ ಸಚಿವ ಪರಮೇಶ್ವರ್‌ ಸೇರಿದಂತೆ ಹಲವು ನಾಯಕರಿಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿತ್ತು. 25 ಲಕ್ಷ ಡಾಲರ್‌ (20 ಕೋಟಿ ರೂ.) ನೀಡದೇ ಹೋದರೆ ಅನಾಹುತ ಖಚಿತ ಎಂದೂ ದುಷ್ಕರ್ಮಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಿದ್ದ. ಇದೀಗ ಮತ್ತೊಂದು ಶಾಲೆಗೆ ಬೆದರಿಕೆ ಸಂದೇಶ ಬಂದಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ | Blast in Bengaluru: ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌; ಭಟ್ಕಳದ ಶಂಕಿತ ಉಗ್ರನ ಪುತ್ರನಿಗೆ ಎನ್‌ಐಎ ನೋಟಿಸ್‌

ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Mussavir Hussain

ಬೆಂಗಳೂರು : ನಗರದ ರಾಮೇಶ್ವರಂ ಕೆಫೆ ಸ್ಫೋಟ (Blast in Bangalore) ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ ಬಳಿಕ, ತಲೆಮರೆಸಿಕೊಂಡಿರುವ ಇತರ ಇಬ್ಬರು ಆರೋಪಿಗಳ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡುವವರಿಗೆ 10 ಲಕ್ಷ ರೂ.ಗಳ ನಗದು ಬಹುಮಾನವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಘೋಷಿಸಿದೆ. ಪತ್ತೆ ಮಾಡುವ ಉದ್ದೇಶಕ್ಕಾಗಿ ಎನ್​ಐಎ ಇಬ್ಬರೂ ಶಂಕಿತರ ಮೂಲ ವಿವರಗಳನ್ನು ನೀಡಿದೆ ಮತ್ತು ಆರೋಪಿಗಳನ್ನು ಬಂಧಿಸಲು ಸಾರ್ವಜನಿಕರ ನೆರವು ಕೋರಿದೆ.

ಸ್ಫೋಟ ನಡೆಸಿದ ಪ್ರಮುಖ ಆರೋಪಿಯನ್ನು ಮುಸ್ಸಾವಿರ್ ಶಾಜಿಬ್ ಹುಸೇನ್ ಎಂದು ತನಿಖಾ ಸಂಸ್ಥೆ ಗುರುತಿಸಿದ್ದು, ಆತನ ಚಲನವಲನಗಳು ರಾಮೇಶ್ವರಂ ಕೆಫೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಎನ್ಐಎ ಪ್ರಕಾರ, ಆತ ಸುಮಾರು 6 ಅಡಿ 2 ಇಂಚು ಎತ್ತರವಿರುವ 30 ವರ್ಷದ ವ್ಯಕ್ತಿ. ಬಾಲಕರ ಹಾಸ್ಟೆಲ್, ಪಿಜಿ ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್​ಗಳಲ್ಲಿ ವಾಸಿಸುತ್ತಿದ್ದಾನೆ. ಮೊಹಮ್ಮದ್ ಜುನೇದ್ ಸಯೀದ್ ಹೆಸರಿನಲ್ಲಿ ನಕಲಿ ಚಾಲನಾ ಪರವಾನಗಿ ಬಳಸುತ್ತಿದ್ದಾನೆ ಎಂದೂ ತನಿಖಾಧಿಕಾರಿಗಳು ಹೇಳಿದ್ದಾರೆ. ಆರೋಪಿ ತನ್ನ ಮೂಲ ಗುರುತನ್ನು ಮರೆಮಾಚಲು ಮುಖಗವಸು, ನಕಲಿ ಗಡ್ಡ ಅಥವಾ ವಿಗ್ ಧರಿಸುತ್ತಾನೆ ಎಂದು ಹೇಳಿದೆ.

ಇದನ್ನೂ ಓದಿ: Juice Jacking: ಸಾರ್ವಜನಿಕ ಸ್ಥಳಗಳ ಮೊಬೈಲ್​ ಚಾರ್ಜರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

ಸ್ಫೋಟದ ಇನ್ನೋರ್ವ ಆರೋಪಿ ಅಬ್ದುಲ್ ಮತೀನ್ ಅಹ್ಮದ್ ತಾಹಾ, ಸ್ಫೋಟ ನಡೆಸಲು ಮುಸ್ಸಾವಿರ್​ಗೆ ಸಹಾಯ ಮಾಡಿದ್ದನೆಂದು ಹೇಳಲಾಗಿದ್ದು, ಆತನಿಗೂ ಹುಡುಕಾಟ ನಡೆಯುತ್ತಿದೆ. ಈತ ತನ್ನ ಮೂಲ ಗುರುತನ್ನು ಮರೆಮಾಚಲು ವಿಘ್ನೇಶ್ ಡಿ ಮತ್ತು ಸುಮಿತ್ ಎಂಬ ಹಿಂದೂ ಹೆಸರನ್ನೂ ಬಳಸುತ್ತಿದ್ದಾನೆ ಎಂದು ಎನ್​​ಐಎ ಹೇಳಿದೆ. ಆತ ಬಹುಶಃ ಹುಡುಗರ ಹಾಸ್ಟೆಲ್ ಗಳು, ಪಿಜಿಗಳು ಅಥವಾ ಯಾವುದೇ ಕಡಿಮೆ ಬಜೆಟ್ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಇಬ್ಬರೂ ಆರೋಪಿಗಳು ತೀರ್ಥಹಳ್ಳಿ ಮೂಲದವರು.

ಪ್ರಕರಣದ ಆರೋಪಿಗಳ ಬಗ್ಗೆ ವಿವರಗಳನ್ನು ನೀಡುವವರಿಗೆ ಎನ್ಐಎ ಈ ಹಿಂದೆಯೂ 10 ಲಕ್ಷ ರೂ.ಗಳ ಬಹುಮಾನ ಘೋಷಿಸಿತ್ತು. ಶಂಕಿತರ ರೇಖಾಚಿತ್ರಗಳನ್ನು ಈ ಹಿಂದೆ ಬಿಡುಗಡೆ ಮಾಡಿತ್ತು. ಮಾರ್ಚ್ 1 ರಂದು ರೆಸ್ಟೋರೆಂಟ್​ನಲ್ಲಿ ಸಂಭವಿಸಿದ ಐಇಡಿ ಸ್ಫೋಟದ ಸಹ ಸಂಚುಕೋರ ಮುಜಮ್ಮಿಲ್ ಶರೀಪ್​ನನ್ನು ಎನ್ಐಎ ಗುರುವಾರ ಬಂಧಿಸಿದೆ. ಸ್ಫೋಟ ಸಂಭವಿಸಿದ ನಂತರ ಕಳೆದ ತಿಂಗಳಲ್ಲಿ ಎನ್ಐಎ ನಡೆಸಿದ ಮೊದಲ ಬಂಧನ ಇದಾಗಿದೆ.

Continue Reading

ಪ್ರಮುಖ ಸುದ್ದಿ

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Mukhtar Ansari : ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿ ಬ್ಯಾರಕ್ ನಲ್ಲಿ ಬಿದ್ದಿದ್ದ. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾನೆ. ಸಾವಿನ ಹಿನ್ನೆಯಲ್ಲಿ ಲಖನೌ ಮತ್ತು ಮೌ ಸದರ್​ ಮತ್ತು ಗಾಜಿಪುರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

VISTARANEWS.COM


on

Mukthar Ansari
Koo

ನವ ದೆಹಲಿ : ಬಾಂಡಾ ಜೈಲಿನಲ್ಲಿ ಮೃತಪಟ್ಟ ಗ್ಯಾಂಗ್​ಸ್ಟರ್​ (Gangster) ಮತ್ತು ರಾಜಕಾರಣಿ (Politcian) ಮುಖ್ತಾರ್ ಅನ್ಸಾರಿ (Mukhtar Ansari) ಸಾವಿಗೆ ಹೃದಯಾಘಾತವೇ (Cardiac Arrest) ಕಾರಣ ಎಂಬುದಾಗಿ ಆರಂಭಿಕ ಮರಣೋತ್ತರ ಪರೀಕ್ಷೆಯು ಹೇಳಿದೆ. ಈ ಮೂಲಕ ಜೈಲಿನಲ್ಲಿ ಆತನಿಗೆ ನಿಧಾನ ವಿಷ ನೀಡಲಾಗಿದೆ ಎಂಬ ಆರೋಪವನ್ನು ವೈದ್ಯಕೀಯ ಪರಿಣತರ ಸಮಿತಿ ನಿರಾಕರಿಸಿದೆ. ಮುಖ್ತಾರ್ ಅನ್ಸಾರಿಯ ಕುಟುಬ ಸದಸ್ಯರು ನಿಧಾನವಾಗಿ ವಿಷ ನೀಡಿ ಕೊಲ್ಲಲಾಗಿದೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಮಿತಿಯ ತನಿಖೆಗೂ ಬಾಂಡಾದ ನ್ಯಾಯಾಲಯ ಆದೇಶ ನೀಡಿತ್ತು. ಇದೀಗ ಮರಣೋತ್ತರ ಪರೀಕ್ಷೆಯ ಮೊದಲ ಸುಳಿವು ಹೊರಗೆ ಬಂದಿದ್ದು ಸಾವಿಗೆ ಹೃದಯಾಘಾತವೇ ಕಾರಣ ಎಂದು ಹೇಳಲಾಗಿದೆ.

ಬಾಂಡಾ ಜೈಲಿನಲ್ಲಿದ್ದ ಅನ್ಸಾರಿಗೆ ಹೃದಯಾಘಾತವಾಗಿ ಬ್ಯಾರಕ್ ನಲ್ಲಿ ಬಿದ್ದಿದ್ದ. ಆತನನ್ನು ಅಲ್ಲಿಂದ ಬಾಂಡಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾನೆ. ಸಾವಿನ ಹಿನ್ನೆಯಲ್ಲಿ ಲಖನೌ ಮತ್ತು ಮೌ ಸದರ್​ ಮತ್ತು ಗಾಜಿಪುರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಎರಡು ದಿನಗಳಲ್ಲಿ ಎರಡನೇ ಬಾರಿಗೆ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅನ್ಸಾರಿಯನ್ನು ಮಂಗಳವಾರ ಬಾಂಡಾದಲ್ಲಿ ಸುಮಾರು 14 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು. ಏತನ್ಮಧ್ಯೆ. ತನ್ನ ಸಹೋದರನಿಗೆ ಜೈಲಿನಲ್ಲಿ ವಿಷಪ್ರಾಷನ ಮಾಡಲಾಗುತ್ತಿದೆ ಎಂದು ಮುಖ್ತಾರ್ ಸಹೋದರ ಅಫ್ಜಲ್ ಅನ್ಸಾರಿ ಅರೋಪಿಸಿದ್ದಾರೆ.

60 ಹೆಚ್ಚು ಪ್ರಕರಣಗಳ ಆರೋಪಿ, ಎಂಟರಲ್ಲಿ ಅಪರಾಧಿ

ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿದ್ದ ಮುಖ್ತಾರ್ ಅನ್ಸಾರಿ 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ನಲ್ಲಿ ಜೈಲಿನಲ್ಲಿದ್ದ. ಆತನ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಸೆಪ್ಟೆಂಬರ್ 2022 ರಿಂದ ಯುಪಿಯ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಿದ್ದು, ಅವರನ್ನು ಬಾಂಡಾ ಜೈಲಿನಲ್ಲಿರಿಸಲಾಗಿತ್ತು.

ಇದನ್ನೂ ಓದಿ: Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ 66 ದರೋಡೆಕೋರರ ಪಟ್ಟಿಯಲ್ಲಿ ಅನ್ಸಾರಿ ಹೆಸರು ಇತ್ತು. ಮುಖ್ತಾರ್ ಅನ್ಸಾರಿಯನ್ನು ನಕಲಿ ಎನ್​ಕೌಂಟರ್ ಮೂಲಕ ಕೊಲ್ಲಬಹುದು ಎಂದು ಅವರ ಕುಟುಂಬ ಸದಸ್ಯರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.

ಅನ್ಸಾರಿ ಅಜ್ಜ ಸ್ವಾತಂತ್ರ್ಯ ಹೋರಾಟಗಾರ

ಉತ್ತರ ಪ್ರದೇಶದ ಯೂಸುಫ್‌ಪುರದಲ್ಲಿ 1960ರಲ್ಲಿ ಜನಿಸಿದ ಮುಖ್ತಾರ್‌ ಅನ್ಸಾರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರ ಅಜ್ಜ ಮುಖ್ತಾರ್‌ ಅಹ್ಮದ್‌ ಅನ್ಸಾರಿ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ನಾಯಕರಾಗಿದ್ದ ಇವರು 1927ರವರೆಗೆ ಅದರ ಅಧ್ಯಕ್ಷರೂ ಆಗಿದ್ದರು. ಮುಸ್ಲಿಂ ಲೀಗ್‌ ಜತೆ ಗುರುತಿಸಿಕೊಂಡಿದ್ದ ಮುಖ್ತಾರ್‌ ಅಹ್ಮದ್‌ ಅನ್ಸಾರಿ ಅವರು ಪ್ರತ್ಯೇಕವಾದದ ಅಜೆಂಡಾ ಅರಿತು ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ, ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಚಾನ್ಸಲರ್‌ ಕೂಡ ಆಗಿದ್ದರು.

ಮುಖ್ತಾರ್‌ ಅನ್ಸಾರಿಯ ತಾಯಿಯ ತಂದೆ (ಅಜ್ಜ) ಮೊಹಮ್ಮದ್‌ ಉಸ್ಮಾನ್‌ ಅವರು ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್‌ ಆಗಿದ್ದರು. ಇವರು ಪಾಕಿಸ್ತಾನದ ಜತೆಗಿನ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಇವರಿಗೆ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ ಘೋಷಿಸಲಾಗಿದೆ.

ಇಂತಹ ಕುಟುಂಬದಲ್ಲಿ ಜನಿಸಿದ ಮುಖ್ತಾರ್‌ ಅನ್ಸಾರಿ, 1980ರ ದಶಕದಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಬದಲಾದ. ಈತ ಸರ್ಕಾರದ ಗುತ್ತಿಗೆ ಪಡೆಯುವ ಭರದಲ್ಲಿ ಗೂಂಡಾಗಿರಿ ಆರಂಭಿಸಿದ. ಕೊಲೆ, ದರೋಡೆ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದಿಂದ ಉತ್ತರ ಪ್ರದೇಶದಾದ್ಯಂತ ಸುದ್ದಿಯಾದ. ಹಣ, ದರ್ಪದ ಮದವೇರಿದ್ದ ಈತ ರಾಜಕೀಯವನ್ನೂ ಸೇರಿದ.

Continue Reading

ಕರ್ನಾಟಕ

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Parliament Flashback: ಕರ್ನಾಟಕದಲ್ಲೂ ಇಂದಿರಾ ವಿರೋಧಿ ಅಲೆ (Parliament Flashback) ಜೋರಾಗಿತ್ತು. ಆದರೆ ಒಟ್ಟು 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಭಾರತೀಯ ಲೋಕ ದಳದ ಹೆಸರಿನಲ್ಲಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ. ಕಾಂಗ್ರೆಸ್‌ 26 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು. ಜನತಾ ಪರಿವಾರದ ಅಭ್ಯರ್ಥಿಗಳಲ್ಲಿ ಗೆದ್ದವರೆಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾ. ಕೆ.ಎಸ್‌. ಹೆಗ್ಡೆ ಮತ್ತು ಹಾಸನದಿಂದ ಎಸ್‌. ನಂಜೇಗೌಡರು ಮಾತ್ರ.

VISTARANEWS.COM


on

Parliament Flashback
Koo

ಬೆಂಗಳೂರು: ತುರ್ತು ಪರಿಸ್ಥಿತಿ ಹೇರಿದ್ದ (Parliament Flashback) ಇಂದಿರಾ ಗಾಂಧಿ ವಿರುದ್ಧ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ ಕಾಂಗ್ರೆಸ್‌ಗೆ ಭಾರಿ ಸೋಲಾಯಿತು. ಆದರೆ ಕರ್ನಾಟಕದಲ್ಲಿ ಮಾತ್ರ ತದ್ವಿರುದ್ಧ ಫಲಿತಾಂಶ ಕಂಡು ಬಂತು. ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ 1977ರ ಮಾ.21ರಂದು ಅಂತ್ಯವಾಯಿತು. ತುರ್ತು ಪರಿಸ್ಥಿತಿಯ ಭಯದ ವಾತಾವರಣದ ನಡುವೆಯೇ ಮಾ.16ರಿಂದ 20ರವರೆಗೆ 6ನೇ ಲೋಕಸಭೆ ಚುನಾವಣೆ ನಡೆಯಿತು. ಇಡೀ ದೇಶ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಕೊತಕೊತನೆ ಕುದಿಯುತ್ತಿತ್ತು. ಜನರ ಆಕ್ರೋಶ ಭುಗಿಲೆದ್ದಿತ್ತು. ಎಲ್ಲ ಪ್ರತಿಪಕ್ಷಗಳು ಜನತಾ ಪರಿವಾರದ ಅಡಿಯಲ್ಲಿ ಒಂದಾಗಿ ಕಾಂಗ್ರೆಸ್‌ ವಿರುದ್ಧ ಸಮರ ಸಾರಿದ್ದರು.

ಜನತಾ ಪರಿವಾರ 295 ಸೀಟುಗಳೊಂದಿಗೆ ಬಹುಮತ ಪಡೆಯಿತು. ಇಂದಿರಾ ಗಾಂಧಿ ಅವರ ಕಾಂಗ್ರೆಸ್‌ ಪಕ್ಷ ಕೇವಲ 154 ಸ್ಥಾನಗಳನ್ನು ಗಳಿಸಿತು. ಜನತಾ ಪರಿವಾರ ಹಿಂದಿನ ಚುನಾವಣೆಗಿಂತ 260 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದರೆ, ಕಾಂಗ್ರೆಸ್‌‌ ತನ್ನ ಹಿಡಿತದಲ್ಲಿದ್ದ 198 ಕ್ಷೇತ್ರಗಳನ್ನು ಕಳೆದುಕೊಂಡಿತು.

ರಾಜ್ಯದಲ್ಲೂ ಇಂದಿರಾ ಅಲೆ ಇತ್ತು, ಆದರೆ…

ಕರ್ನಾಟಕದಲ್ಲೂ ಇಂದಿರಾ ವಿರೋಧಿ ಅಲೆ ಜೋರಾಗಿತ್ತು. ಆದರೆ ಒಟ್ಟು 28 ಕ್ಷೇತ್ರಗಳಲ್ಲಿ ಜನತಾ ಪಕ್ಷವು ಭಾರತೀಯ ಲೋಕ ದಳದ ಹೆಸರಿನಲ್ಲಿ ಗೆದ್ದಿದ್ದು ಕೇವಲ ಎರಡು ಕ್ಷೇತ್ರಗಳಲ್ಲಿ. ಕಾಂಗ್ರೆಸ್‌ 26 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು.

ಇದನ್ನೂ ಓದಿ | Parliament Flashback: ಬೆಂಗಳೂರು ದಕ್ಷಿಣ ಕ್ಷೇತ್ರ ಅಂದರೆ ಕಾಂಗ್ರೆಸ್‌ಗೆ ದುಃಸ್ವಪ್ನ! ಗೆದ್ದಿದ್ದು ಒಮ್ಮೆ ಮಾತ್ರ!

ಜನತಾ ಪರಿವಾರದ ಅಭ್ಯರ್ಥಿಗಳಲ್ಲಿ ಗೆದ್ದವರೆಂದರೆ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನ್ಯಾ. ಕೆ.ಎಸ್‌. ಹೆಗ್ಡೆ ಮತ್ತು ಹಾಸನದಿಂದ ಎಸ್‌ ನಂಜೇಗೌಡರು ಮಾತ್ರ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕೆ.ಎಸ್‌. ಹೆಗ್ಡೆ ಅವರು ಕಾಂಗ್ರೆಸ್‌ನ ಕೆ. ಹನುಮಂತಯ್ಯ ಅವರನ್ನು 41,165 ಮತಗಳ ಅಂತರದಿಂದ ಸೋಲಿಸಿದರು. ಹಾಸನದಲ್ಲಿ ಎಸ್‌ ನಂಜೇಗೌಡ ಅವರು ಕಾಂಗ್ರೆಸ್‌ನ ಜಿ.ಎಲ್‌. ನಲ್ಲೂರೆಗೌಡ ಅವರ ವಿರುದ್ಧ ಕೇವಲ 1081 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸೋತ ಘಟಾನುಘಟಿಗಳು ಯಾರು?

ರಾಜ್ಯದಲ್ಲಿ ಅಂದಿನ ಚುನಾವಣೆಯಲ್ಲಿ ಸೋತು ಹೋದ ಜನತಾ ಪರಿವಾರದ ಘಟಾನುಘಟಿ ರಾಜಕಾರಣಿಗಳು ಯಾರ್ಯಾರು ನೋಡಿ:

ಕೆನರಾ (ಈಗಿನ ಉತ್ತರ ಕನ್ನಡ ಕ್ಷೇತ್ರ) ಲೋಕಸಭೆ ಕ್ಷೇತ್ರದಿಂದ ರಾಮಕೃಷ್ಣ ಹೆಗಡೆ, ಧಾರವಾಡ ಉತ್ತರದಿಂದ ಜಗನ್ನಾಥ್‌ ರಾವ್‌ ಜೋಶಿ, ಮಂಗಳೂರಿನಿಂದ ಎ.ಕೆ. ಸುಬ್ಬಯ್ಯ, ಮೈಸೂರಿನಿಂದ ಎಂ.ಎಸ್‌. ಗುರುಪಾದಸ್ವಾಮಿ, ಶಿವಮೊಗ್ಗದಿಂದ ಜೆ.ಎಚ್‌. ಪಟೇಲ್‌, ಉಡುಪಿಯಿಂದ ವಿ.ಎಸ್‌. ಆಚಾರ್ಯ, ಧಾರವಾಡ ದಕ್ಷಿಣದಿಂದ ಸಿ.ಎಂ. ಇಬ್ರಾಹಿಂ, ತುಮಕೂರಿನಿಂದ ಎಸ್‌. ಮಲ್ಲಿಕಾರ್ಜುನಯ್ಯ.

1977ರ ಮಾ.25ರಂದು ಮಧ್ಯಾಹ್ನ 3.30ಕ್ಕೆ 81 ವರ್ಷದ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಇಂದಿರಾ ಆಳ್ವಿಕೆ ಅಂತ್ಯ ಆಯಿತು. ಆದರೆ ಕರ್ನಾಟಕ ಮಾತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿಯೇ ಉಳಿಯಿತು.

ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದ ಒಡೆಯರ್‌!

ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ (Parliament Flashback) ಗೆಲುವು ಸಾಧಿಸಿದ್ದರು. ಸೋಜಿಗವೆಂದರೆ ಒಡೆಯರ್‌ ನಿರಂತರ ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದು ಮೂರನೇ ಬಾರಿ ಬಿಜೆಪಿ ಟಿಕೆಟ್‌ನಿಂದ ಚುನಾವಣೆ ಕಣಕ್ಕಿಳಿದಾಗ ಸೋತು ಹೋದರು! ಮುಂದೆ ಮತ್ತೆರಡು ಬಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು!

1984ರಲ್ಲಿ ಮೊದಲ ಬಾರಿ ಸ್ಪರ್ಧೆ

1984ರಲ್ಲಿ ಒಡೆಯರ್‌ ಮೊದಲ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಲೋಕಸಭೆ ಪ್ರವೇಶಿಸಿದರು. 1989ರಲ್ಲಿ ಮತ್ತೊಮ್ಮೆ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. 1991ರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌, ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸ್‌ ಅವರ ಪುತ್ರಿ ಚಂದ್ರಪ್ರಭಾ ಅರಸ್‌ ಅವರಿಗೆ ಟಿಕೆಟ್‌ ನೀಡಿತು. ಸಿಟ್ಟಿಗೆದ್ದ ಒಡೆಯರ್‌ ಅವರು ಬಿಜೆಪಿಯಿಂದ ಕಣಕ್ಕಿಳಿದರು. ಆದರೆ ಚಂದ್ರಪ್ರಭಾ ಅರಸ್‌ ಎದುರು ಸೋತು ಹೋದರು.

ಇದನ್ನೂ ಓದಿ | Parliament Flashback: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೇ ಸೋಲಿಸಿದ್ದ ಬ್ಯಾರೇಜ್‌ ಸಿದ್ದು!

ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌

1996ರಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಒಡೆಯರ್‌ಗೆ ಟಿಕೆಟ್‌ ನೀಡಿತು. ಆ ಚುನಾವಣೆಯಲ್ಲಿ ಒಡೆಯರ್‌ ಜನತಾ ದಳದ ಅಭ್ಯರ್ಥಿ ಜಿ.ಟಿ. ದೇವೇಗೌಡರನ್ನು ಸೋಲಿಸಿದರು. ಆದರೆ 1998ರಲ್ಲಿ ಕಾಂಗ್ರೆಸ್‌ ಚಿಕ್ಕಮಾದು ಅವರಿಗೆ ಟಿಕೆಟ್‌ ನೀಡಿತು. ಬಿಜೆಪಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಅವರು ಚಿಕ್ಕಮಾದು ಅವರನ್ನು ಸೋಲಿಸುವ ಮೂಲಕ ಬಿಜೆಪಿ ಮೊದಲ ಬಾರಿ ಮೈಸೂರಿನಲ್ಲಿ ಖಾತೆ ತೆರೆಯಿತು. 2004ರಲ್ಲಿ ಕಾಂಗ್ರೆಸ್‌ ಮತ್ತೆ ಒಡೆಯರ್‌ ಅವರನ್ನು ಕಣಕ್ಕಿಳಿಸಿತು. ಆದರೆ ಬಿಜೆಪಿಯ ವಿಜಯಶಂಕರ್‌ ಅವರು 3,16,442 ಮತಗಳನ್ನು ಪಡೆದು ಎರಡನೇ ಬಾರಿ ಗೆಲುವು ಸಾಧಿಸಿದರು. ಜನತಾ ದಳದಿಂದ ಸ್ಪರ್ಧಿಸಿದ್ದ ಎ.ಎಸ್‌. ಗುರುಸ್ವಾಮಿ 3,06,292 ಮತ ಪಡೆದು ಎರಡನೇ ಸ್ಥಾನ ಪಡೆದರೆ, ಒಡೆಯರ್‌ ಅವರು 2,99,227 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಅಲ್ಲಿಗೆ ಅವರ ಚುನಾವಣಾ ರಾಜಕೀಯ ಅಂತ್ಯವಾಯಿತು.

Continue Reading

ಪ್ರಮುಖ ಸುದ್ದಿ

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Satyendar Jain: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸತ್ಯೇಂದರ್ ಜೈನ್ ಅವರನ್ನು 2022 ರ ಮೇ ತಿಂಗಳಲ್ಲಿ ಬಂಧಿಸಲಾಯಿತು. ಅವರ ಕೊನೆಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್​ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗುವಂತೆ ಉನ್ನತ ನ್ಯಾಯಾಲಯವು ಅವರಿಗೆ ಸೂಚಿಸಿತು.

VISTARANEWS.COM


on

Satyendar Jain
Koo

ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ನಿಂದ 10 ಕೋಟಿ ರೂ.ಗಳನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಜೈಲಿನಲ್ಲಿರುವ ಎಎಪಿ ನಾಯಕ ಸತ್ಯೇಂದರ್ ಜೈನ್ (Satyendar Jain) ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಜೈನ್ ಮತ್ತು ತಿಹಾರ್ ಜೈಲಿನ ಮಾಜಿ ಡಿಜಿ ಸಂದೀಪ್ ಗೋಯೆಲ್ ಅವರು ತಿಹಾರ್ ನಿಂದ ಸುಲಿಗೆ ದಂಧೆ ನಡೆಸುತ್ತಿದ್ದರು ಮತ್ತು ಉನ್ನತ ಮಟ್ಟದ ಕೈದಿಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಆಡಳಿತಾರೂಢ ಅಪ್​ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಈ ವರ್ಷದ ಆರಂಭದಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಸತ್ಯೇಂದರ್ ಜೈನ್ ವಿರುದ್ಧದ ಸುಲಿಗೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು. ಸುಲಿಗೆ ಆರೋಪಗಳ ಬಗ್ಗೆ ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಕೋರಿ ಬರೆದ ಪತ್ರದಲ್ಲಿ, ಜೈನ್ ಅವರು ತಿಹಾರ್ ಜೈಲಿನಿಂದ ಉನ್ನತ ಮಟ್ಟದ ಸುಲಿಗೆ ದಂಧೆಯನ್ನು ನಡೆಸುತ್ತಿದ್ದಾರೆ. ಜೈಲಿನಲ್ಲಿ ಐಷಾರಾಮಿಯಾಗಿ ಬದುಕು ನಡೆಸಲು ಸುಕೇಶ್​ ಚಂದ್ರಶೇಖರ್ ನಿಂದ 10 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ಕಳೆದ ವರ್ಷ ನವೆಂಬರ್​ನಲ್ಲಿ ಬರೆದಿತ್ತು.

ದೆಹಲಿಯ ವಿವಿಧ ಜೈಲುಗಳಾದ ತಿಹಾರ್, ರೋಹಿಣಿ ಮತ್ತು ಮಂಡೋಲಿಯಲ್ಲಿ ಆರಾಮವಾಗಿ ವಾಸಿಸಲು ಅನುಕೂಲವಾಗುವಂತೆ ಜೈನ್ ಗೆ ವೈಯಕ್ತಿಕವಾಗಿ ಅಥವಾ ತನ್ನ ಸಹಚರರ ಮೂಲಕ 2018-21ರ ಅವಧಿಯಲ್ಲಿ ವಿವಿಧ ಕಂತುಗಳಲ್ಲಿ ಹಣವನ್ನು ನೀಡಿದ್ದೇನೆ ಎಂದು ಸುಕೇಶ್ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸತ್ಯೇಂದರ್ ಜೈನ್ ಅವರನ್ನು 2022 ರ ಮೇ ತಿಂಗಳಲ್ಲಿ ಬಂಧಿಸಲಾಯಿತು. ಅವರ ಕೊನೆಯ ಜಾಮೀನು ಅರ್ಜಿಯನ್ನು ಈ ವರ್ಷದ ಮಾರ್ಚ್​ನಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗುವಂತೆ ಉನ್ನತ ನ್ಯಾಯಾಲಯವು ಅವರಿಗೆ ಸೂಚಿಸಿತು. ಜೈಲಿನ ಸ್ನಾನಗೃಹದಲ್ಲಿ ಬಿದ್ದ ನಂತರ ಅವರಿಗೆ ಮೇ 26, 2023 ರಂದು ಮಧ್ಯಂತರ ವೈದ್ಯಕೀಯ ಜಾಮೀನು ನೀಡಲಾಯಿತು. ಜಾಮೀನು ಅವಧಿಯಲ್ಲಿ, ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Continue Reading
Advertisement
Bomb threat
ಕರ್ನಾಟಕ10 mins ago

Bomb Threat: ಆನೇಕಲ್‌ನ ಪ್ರತಿಷ್ಠಿತ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ!

Mukthar Ansari
ಪ್ರಮುಖ ಸುದ್ದಿ44 mins ago

Mukhtar Ansari : ನಿಜಕ್ಕೂ ಗ್ಯಾಂಗ್ ಸ್ಟರ್ ಅನ್ಸಾರಿ ಸತ್ತಿದ್ದು ಹೇಗೆ? ಬಂತು ಪೋಸ್ಟ್ ಮಾರ್ಟಮ್ ರಿಪೋರ್ಟ್!

Parliament Flashback
ಕರ್ನಾಟಕ49 mins ago

Parliament Flashback: ದೇಶದಲ್ಲಿ ಇಂದಿರಾ ಗಾಂಧಿ ವಿರೋಧಿ ಅಲೆ ಇದ್ದಾಗಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

Satyendar Jain
ಪ್ರಮುಖ ಸುದ್ದಿ1 hour ago

Satyendar Jain : ಆಪ್​ಗೆ ಇನ್ನಷ್ಟು ಸಂಕಷ್ಟ; ಸತ್ಯೇಂದರ್​ ಜೈನ್ ವಿರುದ್ಧ ಸಿಬಿಐ ತನಿಖೆಗೆ ಆದೇಶ

Karnataka Weather
ಮಳೆ1 hour ago

Karnataka Weather : ಮುಂದಿನ 3 ದಿನ ಏರುತ್ತೆ ಟೆಂಪ್ರೇಚರು

Mussavir Hussain
ಪ್ರಮುಖ ಸುದ್ದಿ1 hour ago

Blast in Bangalore : ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತರ ಸುಳಿವು ಕೊಟ್ಟರೆ 10 ಲಕ್ಷ ರೂ. ಇನಾಮು; ಇಲ್ಲಿದೆ ಉಗ್ರರ ಪೋಟೊ ಸಮೇತ ವಿವರ

Provide infrastructure in polling booths says ZP Deputy Secretary Mallikarjuna thodalabagi
ಕೊಪ್ಪಳ1 hour ago

Koppala News: ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ; ಜಿ.ಪಂ‌ ಉಪಕಾರ್ಯದರ್ಶಿ

18th CII ITC Sustainable Award Ceremony
ಬೆಂಗಳೂರು1 hour ago

Bengaluru News: ಸಿಎಸ್‌ಆರ್‌ ಮಹತ್ವದ ಸಾಧನೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ಗೆ ಪ್ರಶಂಸೆ

Car collided with electric pole The photographer died on the spot
ಕ್ರೈಂ1 hour ago

Road Accident: ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ; ಫೋಟೋಗ್ರಾಫರ್‌ ಸ್ಥಳದಲ್ಲೇ ಸಾವು

Ash Gourd Juice Benefits
ಆರೋಗ್ಯ1 hour ago

Ash Gourd Juice Benefits: ಬೂದುಕುಂಬಳಕಾಯಿ ಜ್ಯೂಸ್‌ ಕುಡಿಯುವುದರಿಂದ ಆಗುವ 10 ಪ್ರಯೋಜನಗಳಿವು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ15 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌