IND VS BAN | ಮೊದಲ ಟೆಸ್ಟ್​: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್​ ಅಂತರದ ಗೆಲುವು - Vistara News

Latest

IND VS BAN | ಮೊದಲ ಟೆಸ್ಟ್​: ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್​ ಅಂತರದ ಗೆಲುವು

ಆತಿಥೇಯ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

VISTARANEWS.COM


on

ban vs ind
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿತ್ತಗಾಂಗ್​: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 188 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್​ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದಕೊಂಡಿದೆ.

ಗೆಲುವಿಗೆ 513 ರನ್ನುಗಳ ಕಠಿನ ಗುರಿ ಪಡೆದ ಬಾಂಗ್ಲಾದೇಶ ನಾಲ್ಕನೇ ದಿನದ ಅಂತ್ಯಕ್ಕೆ 102 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. ಅದರಂತೆ 5ನೇ ಹಾಗೂ ಅಂತಿಮ ದಿನದಲ್ಲಿ ಆಡಲಿಳಿದ ಬಾಂಗ್ಲಾ ಕೇವಲ 52 ರನ್​ ಒಟ್ಟುಗೂಡಿಸಿದ ವೇಳೆ ಉಳಿದ ನಾಲ್ಕು ವಿಕೆಟ್​ ಕೂಡ ಕೈಚೆಲ್ಲಿ ಅಂತಿಮವಾಗಿ 324 ರನ್​ಗೆ ಆಲೌಟ್​ ಆಗುವ ಮೂಲಕ ಸೋಲು ಕಂಡಿತು.

ನಾಲ್ಕನೇ ದಿನವಾದ ಕೊನೇ ಅವಧಿಯಲ್ಲಿ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್​ (40*) ಹಾಗೂ ಮೆಹೆದಿ ಹಸನ್​ ಮಿರಾಜ್​ (9) ತಂಡಕ್ಕೆ ಆಸರೆಯಾಗಿದ್ದರು. ಅದರಂತೆ ಭಾನುವಾರ 5ನೇ ದಿನದ ಆಟ ಮುಂದುವರಿಸಿದ ಈ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ ಆಕ್ರಮಿಸಲು ಸಾಧ್ಯವಾಗಲಿಲ್ಲ. ಶಕಿಬ್​ 88 ರನ್​ ಗಳಿಸಿ ಕುಲ್​ದೀಪ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರೆ, ಮೆಹೆದಿ ಹಸನ್ 13 ರನ್​ಗೆ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಅಕ್ಷರ್​ ಪಾಲಾಯಿತು. ಈ ವಿಕೆಟ್​ ಪತನದ ಬಳಿಕ ಉಳಿದ ಎರಡು ವಿಕೆಟ್​ ಕೂಡ ಬೇಗನೆ ಬಿದ್ದು ಬಾಂಗ್ಲಾ ಸೋಲಿಗೆ ತುತ್ತಾಯಿತು. ಅಂತಿಮ ದಿನದಲ್ಲಿ ಸರಿ ಸುಮಾರು ಅರ್ಧ ತಾಸು ಆಟವಷ್ಟೇ ನಡೆಯಿತು.

ಇದಕ್ಕೂ ಮುನ್ನ ನಾಲ್ಕನೇ ದಿನವಾದ ಶನಿವಾರ ಬಾಂಗ್ಲಾ ಪರ ಆರಂಭಿಕರಾದ ನಜ್ಮುಲ್​ ಹೊಸೈನ್​ (67) ಹಾಗೂ ಜಾಕಿರ್​ ಹಸನ್​ (100) ಭಾರತದ ಬೌಲರ್​ಗಳನ್ನು ಕಾಡಿದ್ದರು. ಭೋಜನ ವಿರಾಮದ ವೇಳೆಗೆ ಈ ಜೋಡಿ ವಿಕೆಟ್ ನಷ್ಟವಿಲ್ಲದೆ 119 ರನ್​ ಗಳಿಸಿ ಭಾರತದ ಪಾಳೆಯದಲ್ಲಿ ಆತಂಕ ಮೂಡಿಸಿತ್ತು. ಆದರೆ, 47ನೇ ಓವರ್​ನಲ್ಲಿ ಯಶಸ್ಸು ಸಾಧಿಸಿದ ಉಮೇಶ್ ಯಾದವ್​ ನಜ್ಮುಲ್​ ವಿಕೆಟ್​ ಕಬಳಿಸಿ ಬಾಂಗ್ಲಾಕ್ಕೆ ಬ್ರೇಕ್ ಹಾಕಿದ್ದರು. ಉಳಿದಂತೆ ಲಿಟನ್​ ದಾಸ್​ (19), ಮುಷ್ಪಿಕರ್ ರಹೀಮ್​ (23) ಗಳಿಸಿದರೆ, ನೂರುಲ್​ ಹಸನ್​ 3 ರನ್​ಗೆ ಸೀಮಿತಗೊಂಡಿದ್ದರು.

ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ಪರ ಅಕ್ಷರ್ ಪಟೇಲ್ 4 ಹಾಗೂ ಕುಲ್​ದೀಪ್​ ಯಾದವ್ 3 ವಿಕೆಟ್ ಕಿತ್ತು ಮಿಂಚಿದರು. ಕೊನೆಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 22 ರಿಂದ ಢಾಕಾದಲ್ಲಿ ಆಯೋಜಿಸಲಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿ ಸಾಧನೆ ಮೆರೆದಿದ್ದ ಕುಲ್​ದೀಪ್​ ಯಾದವ್​ ಈ ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು. ಜತೆಗೆ ಪ್ರಥಮ ಇನಿಂಗ್ಸ್‌ ಬ್ಯಾಟಿಂಗ್‌ ವೇಳೆ ಮಹತ್ವದ 40 ರನ್‌ ಬಾರಿಸಿದ ಕಾರಣಕ್ಕೆ ಪಂದ್ಯ ಶ್ರೇಷ್ಠ ಗೌರವವನ್ನೂ ತಮ್ಮದಾಗಿಸಿಕೊಂಡರು.

ಸ್ಕೋರ್​ ವಿವರ

ಭಾರತ : ಮೊದಲ ಇನಿಂಗ್ಸ್​ 404; ಎರಡನೇ ಇನಿಂಗ್ಸ್​ 258ಕ್ಕೆ2 ಡಿಕ್ಲೇರ್​​

ಬಾಂಗ್ಲಾದೇಶ : ಮೊದಲ ಇನಿಂಗ್ಸ್​ 150; ಎರಡನೇ ಇನಿಂಗ್ಸ್​ 324. (ಜಾಕಿರ್ ಹಸನ್​ 100, ಶಕಿಬ್​ ಅಲ್​ ಹಸನ್​ 84, ನಜ್ಮುಲ್​ ಹೊಸೈನ್​ 67, ಅಕ್ಷರ್​ ಪಟೇಲ್​ 77ಕ್ಕೆ 4, ಕುಲ್​​ದೀಪ್​ ಯಾದವ್​ 73ಕ್ಕೆ 3). ಪಂದ್ಯ ಶ್ರೇಷ್ಠ: ಕುಲ್​ದೀಪ್​ ಯಾದವ್​

ಇದನ್ನೂ ಓದಿ | INDvsAUS W | ಆಸ್ಟ್ರೇಲಿಯಾ ವನಿತೆಯರಿಗೆ ತಲೆಬಾಗಿದ ಭಾರತ ತಂಡ; ಸರಣಿಯಲ್ಲೂ ಸೋಲು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Money Guide: ತುರ್ತು ಚಿಕಿತ್ಸೆಗೆ ಪಿಎಫ್​ನಿಂದ 1 ಲಕ್ಷ ರೂ. ಪಡೆಯಬಹುದು; ಹೇಗೆ ಗೊತ್ತಾ?

EPF New rule: ಇಪಿಎಫ್ ಹೊಂದಿರುವವರು ತಮ್ಮ ಮತ್ತು ಅವಲಂಬಿತರ ವೈದ್ಯಕೀಯ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಭಾಗಶಃ ಹಿಂಪಡೆಯಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಅವಕಾಶ ಕಲ್ಪಿಸಿದೆ. ಇದಕ್ಕೆ ಸಂಬಂಧಿಸಿದ ಪೂರ್ಣ ವಿವರ ಇಲ್ಲಿದೆ.

VISTARANEWS.COM


on

By

EPF New rules
Koo

ಪಿಂಚಣಿ ಸೌಲಭ್ಯ (Pension facility) ಹೊಂದಿರುವ ಉದ್ಯೋಗಿಗಳಿಗೊಂದು ಗುಡ್ ನ್ಯೂಸ್. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಉದ್ಯೋಗಿಗಳ ಭವಿಷ್ಯ ನಿಧಿ ನಿಯಮಗಳಲ್ಲಿ (EPF New rule) ಬದಲಾವಣೆಯನ್ನು ಮಾಡಿದ್ದು, ಇನ್ನು ಮುಂದೆ ವೈದ್ಯಕೀಯ ಚಿಕಿತ್ಸೆಗಾಗಿ (Medical treatment) 1 ಲಕ್ಷ ರೂಪಾಯಿವರೆಗೆ ಭಾಗಶಃ ಹಿಂಪಡೆಯಬಹುದು ಎಂದು ತಿಳಿಸಿದೆ (Money Guide).

ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ (Auto claim settlements) ಅರ್ಹತೆಯ ಮಿತಿ ಈ ಮೊದಲು 50,000 ರೂಪಾಯಿಗಳಿದ್ದು, ಇದನ್ನು ಈಗ 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗೆ ಪ್ಯಾರಾಗ್ರಾಫ್ 68 ಜೆ ಅಡಿಯಲ್ಲಿ ತಿಳಿಸಿದೆ.

ಇಪಿಎಫ್ ಹೊಂದಿರುವವರಿಗೆ ಪ್ಯಾರಾಗ್ರಾಫ್ 68ಜೆ ಸ್ವಯಂ ಮತ್ತು ಅವಲಂಬಿತರ ವೈದ್ಯಕೀಯ ವೆಚ್ಚಗಳಿಗಾಗಿ ಮುಂಗಡವಾಗಿ ಹಣ ಪಡೆಯಲು ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ. ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮುಂಗಡವಾಗಿ ಹಣವನ್ನು ಪಡೆಯಲು ಇಪಿಎಫ್ ಒ ತನ್ನ ಸದಸ್ಯರಿಗೆ ಅನುಮತಿ ನೀಡಿದೆ.

ಇದನ್ನೂ ಓದಿ: Money Guide: ನಿಮ್ಮ ಷೇರಿನಿಂದಲೂ ಸಾಲ ಪಡೆದುಕೊಳ್ಳಬಹುದು; ಹೇಗೆ ಎನ್ನುವ ವಿವರ ಇಲ್ಲಿದೆ

ಸಕ್ಷಮ ಪ್ರಾಧಿಕಾರವು ಪ್ಯಾರಾ 68J ಅಡಿಯಲ್ಲಿ ಸ್ವಯಂ ಕ್ಲೈಮ್ ಸೆಟಲ್‌ಮೆಂಟ್‌ಗಳ ಮಿತಿಯನ್ನು 50,000 ರೂ. ನಿಂದ 1,00,000 ರೂ. ಗೆ ಹೆಚ್ಚಿಸಲಾಗಿದ್ದು ಇದನ್ನು ಅನುಮೋದಿಸಲಾಗಿದೆ. 2024ರ ಏಪ್ರಿಲ್ 10ರಂದು ಇದನ್ನು ಅಪ್ಲಿಕೇಶನ್ ಸಾಫ್ಟ್‌ವೇರ್‌ನಲ್ಲಿ ನಿಯೋಜಿಸಲಾಗಿದೆ ಎಂದು ಇಪಿಎಫ್ ಒ ತಿಳಿಸಿದೆ.


ಯಾವುದೆಲ್ಲ ವೈದ್ಯಕೀಯ ವೆಚ್ಚಗಳು ?

ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯ ಪ್ಯಾರಾಗ್ರಾಫ್ 68-ಜೆಯು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಸಂದರ್ಭಗಳಲ್ಲಿ ನಿಧಿಯಿಂದ ಮುಂಗಡವಾಗಿ ಹಣ ಪಡೆಯಲು ಸದಸ್ಯರಿಗೆ ಅವಕಾಶ ನೀಡುತ್ತದೆ. ಇದರಲ್ಲಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಆಸ್ಪತ್ರೆಗೆ ದಾಖಲಾಗುವುದು, ಪ್ರಮುಖ ಶಸ್ತ್ರಚಿಕಿತ್ಸೆ, ಕ್ಷಯರೋಗ, ಕುಷ್ಠರೋಗ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ವಿಕಲತೆ ಅಥವಾ ಹೃದಯ ಕಾಯಿಲೆಗಳಂತಹ ಕಾಯಿಲೆಗಳು ಸೇರಿವೆ.

ದೈಹಿಕವಾಗಿ ದುರ್ಬಲಗೊಂಡ ಸದಸ್ಯರಿಗೆ ಮುಂಗಡ ಪಾವತಿಗೆ ಅರ್ಜಿ ಸಲ್ಲಿಸುವ ಆಯ್ಕೆಯು ಪ್ಯಾರಾಗ್ರಾಫ್ 68-ಎನ್ ನಡಿಯಲ್ಲಿ ಬರುತ್ತದೆ. ಈ ವಿಭಾಗವು ಅಗತ್ಯ ಉಪಕರಣಗಳನ್ನು ಖರೀದಿಸಲು ನಿರ್ದಿಷ್ಟ ಹಣ ಹಿಂಪಡೆಯಲು ಅನುಮತಿ ನೀಡುತ್ತದೆ. ಆದರೂ ಇದಕ್ಕೆ ಪರವಾನಿಗೆ ಪಡೆದ ವೈದ್ಯರು ಅಥವಾ ಇಪಿಎಫ್‌ಒ ನೇಮಿಸಿದ ಅಧಿಕಾರಿಯಿಂದ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸುವುದು ಅಗತ್ಯ.


ಹೇಗೆ ?

ಇಪಿಎಫ್ ಒ ಯುನಿವರ್ಸಲ್ ಅಕೌಂಟ್ ನಂಬರ್ (UAN) ವ್ಯವಸ್ಥೆಯನ್ನು ಕ್ಲೈಮ್ ಸಲ್ಲಿಕೆಗಳನ್ನು ಸರಳೀಕರಿಸಲು ಪರಿಚಯಿಸಿದೆ. ಸದಸ್ಯರು ತಮ್ಮ ಯುಎಎನ್ ಅನ್ನು ತಮ್ಮ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದ್ದರೆ ಉದ್ಯೋಗದಾತರ ದೃಢೀಕರಣದ ಅಗತ್ಯವನ್ನು ತೆಗೆದುಹಾಕಿ ನೇರವಾಗಿ ಇಪಿಎಫ್ ಓ ಗೆ ಕ್ಲೈಮ್ ಫಾರ್ಮ್‌ಗಳನ್ನು ಸಲ್ಲಿಸಬಹುದು. ಇದು ಇಪಿಎಫ್ ಚಂದಾದಾರರಿಗೆ ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಫಾರ್ಮ್ 31 ವೈದ್ಯಕೀಯ ತುರ್ತುಸ್ಥಿತಿಗಳಿಂದ ಹಿಡಿದು ಮದುವೆ, ಮನೆ ಖರೀದಿ ಅಥವಾ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅಕಾಲಿಕ ನಿಧಿಯನ್ನು ಹಿಂದಕ್ಕೆ ಪಡೆಯಲು ವಿನಂತಿಗಳನ್ನು ಸಲ್ಲಿಸಲು ಬಳಸಲಾಗುವ ಒಂದು ವಿಧಾನವಾಗಿದೆ.

ಕ್ಲೈಮ್ ಮಾಡಲು ಏನು ಮಾಡಬೇಕು ?

ಇಪಿಎಫ್ ಹೊಂದಿರುವ ಸದಸ್ಯರು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ವಿವರಗಳನ್ನು ಬಳಸಿಕೊಂಡು ಇಪಿಎಫ್ ಒ ಪೋರ್ಟಲ್‌ ನಲ್ಲಿ ಲಾಗ್ ಇನ್ ಮಾಡಿ ಬಳಿಕ ಗ್ರಾಹಕರ KYC ವಿವರಗಳನ್ನು ಸಲ್ಲಿಸಬೇಕು. ಸೇವಾ ಅರ್ಹತೆಯ ಮಾಹಿತಿಯು ನವೀಕೃತವಾಗಿದೆ ಮತ್ತು ಸಂಪೂರ್ಣವಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಪಡೆಯಲು ಬಯಸುವ ಕ್ಲೈಮ್ ಪ್ರಕಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಮದುವೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆ ಖರೀದಿ ಅಥವಾ ಹೋಮ್ ಲೋನ್ ಮರುಪಾವತಿ ಮೊದಲಾದ ಆಯ್ಕೆಗಳಿರುತ್ತವೆ.

ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ ಒನ್- ಟೈಮ್ ಪಾಸ್‌ವರ್ಡ್ (OTP) ಅನ್ನು ನಮೂದಿಸಬೇಕು. ಅನಂತರ ನಿಮ್ಮ ಗುರುತನ್ನು ಪರಿಶೀಲಿಸಲು ಕೇಳಲಾಗುತ್ತದೆ. ಅದಕ್ಕೆ ಸೂಕ್ತವಾಗಿ ಪ್ರಾಂಪ್ಟ್‌ಗಳನ್ನು ಅನುಸರಿಸಿ ಮತ್ತು ಯಾವುದೇ ಅಗತ್ಯ ದಾಖಲೆ ಅಥವಾ ಮಾಹಿತಿಯನ್ನು ಒದಗಿಸಿದರೆ ಆನ್‌ಲೈನ್ ಕ್ಲೈಮ್ ಸಲ್ಲಿಕೆ ಪ್ರಕ್ರಿಯೆ ಪೂರ್ಣವಾಗುತ್ತದೆ.

Continue Reading

ವಿದೇಶ

Safest Countries : ವಿಶ್ವದ ಎಲ್ಲೆಡೆ ನೋಡಿದರೂ ಯುದ್ಧ ಭೀತಿ; ಈ ದೇಶಗಳಷ್ಟೇ ಸುರಕ್ಷಿತ!

Safest Countries: ವಿಶ್ವದೆಲ್ಲೆಡೆ ಈಗ ಯುದ್ಧದ ಭೀತಿ ಎದುರಾಗಿದೆ. ಈ ನಡುವೆ ನಾವು ಹೆಚ್ಚು ಸುರಕ್ಷಿತವಾಗಿರುವುದು ಎಲ್ಲಿ ಎನ್ನುವ ಚಿಂತೆಯೂ ಕಾಡುತ್ತಿದೆ. ಒಂದು ವೇಳೆ ಯುದ್ಧ ನಡೆದರೆ ನಾವು ಯಾವ ದೇಶಕ್ಕೆ ಹೋಗಿ ಸುರಕ್ಷಿತವಾಗಿರಬಹುದು ಗೊತ್ತೇ ?

VISTARANEWS.COM


on

By

Safest Countries
Koo

ಒಂದೆಡೆ ರಷ್ಯಾ- ಉಕ್ರೇನ್ (Russia-Ukraine), ಇನ್ನೊಂದೆಡೆ ಹಮಾಸ್- ಇಸ್ರೇಲ್ (Hamas- Israel), ಮತ್ತೊಂದೆಡೆ ಇರಾನ್- ಇಸ್ರೇಲ್ (Iran- Israel) ಯುದ್ಧದಲ್ಲಿ ತೊಡಗಿದೆ. ಇದರಿಂದಾಗಿ ಮುಂದೆ ಮೂರನೇ ಮಹಾಯುದ್ಧದ (world war) ಭೀತಿ ವಿಶ್ವಕ್ಕೆ ಕಾಡುತ್ತಿದೆ. ಜಗತ್ತಿನಾದ್ಯಂತ ಈಗ ಯುದ್ಧದ ವಾತಾವರಣವಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಯುದ್ಧದ ಪರಿಸ್ಥಿತಿ ತಲೆದೋರಿದರೆ ಸುರಕ್ಷಿತವಾಗಿ ಇರಬಹುದಾದ ದೇಶ ಯಾವುದು (Safest Countries) ಎನ್ನುವ ಹುಡುಕಾಟದಲ್ಲೂ ಕೆಲವರಿದ್ದಾರೆ.

ತನ್ನ ರಾಯಭಾರಿ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಏಪ್ರಿಲ್ 13 ರಂದು ಇರಾನ್ ದೇಶವು ಇಸ್ರೇಲ್ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತ್ತು. ಇದು ಮೂರನೇ ವಿಶ್ವ ಸಮರಕ್ಕೆ ಕಾರಣವಾಗಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಈ ಯುದ್ಧವನ್ನು ತಡೆಗಟ್ಟಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ. ಇರಾನ್‌ನ ದಾಳಿಯು ವಿಶ್ವದೆಲ್ಲೆಡೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೇ ಇರಾನ್ ಗೆ ಎಚ್ಚರಿಕೆಯನ್ನೂ ನೀಡುತ್ತಿದೆ. ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿರುವುದರಿಂದ ಮಧ್ಯಪ್ರಾಚ್ಯವು ಈಗಾಗಲೇ ಆಕ್ರೋಶದಲ್ಲಿದೆ.

ಇದನ್ನೂ ಓದಿ: Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

ಯುದ್ಧದ ಭೀತಿಗೆ ಕಾರಣ?

ಯುದ್ಧದ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಯುದ್ಧ ಸನ್ನದ್ಧವಾಗಿರುವ ರಾಷ್ಟ್ರಗಳಿಗೆ ಹಲವು ರಾಷ್ಟ್ರಗಳ ಬೆಂಬಲ, ಕೆಲವು ರಾಷ್ಟ್ರಗಳ ತಟಸ್ಥವಾಗಿರುವುದು ಕೂಡ ಕಾರಣವಾಗುತ್ತಿದೆ. ಇರಾನ್- ಇಸ್ರೇಲ್ ಯುದ್ಧದ ವೇಳೆ ಇರಾನ್, ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಮೊದಲಾದ ನೆರೆಯ ದೇಶಗಳಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ದಮ್ ಇಸ್ರೇಲ್ ನ ರಕ್ಷಣೆಗೆ ನಿಂತಿವೆ.

ಮೂರನೇ ವಿಶ್ವಯುದ್ಧದ ಆತಂಕ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಭದ್ರತಾ ಮಂಡಳಿಗೆ ನೀಡಿದ ಹೇಳಿಕೆಯಲ್ಲಿ ಮಧ್ಯಪ್ರಾಚ್ಯವು ಪ್ರಮುಖ ಸಂಘರ್ಷದ ಅಂಚಿನಲ್ಲಿದೆ ಎಂದು ಹೇಳಿದ್ದರು. ಈ ಪ್ರದೇಶದ ಜನರು ವಿನಾಶಕಾರಿ ಹಾಗೂ ಪೂರ್ಣ ಪ್ರಮಾಣದ ಸಂಘರ್ಷದ ಅಪಾಯವನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಈಗ ಸಂಯಮ ತೆಗೆದುಕೊಳ್ಳದೇ ಇದ್ದರೆ ಮೂರನೇ ವಿಶ್ವಯುದ್ಧ ಉಂಟಾಗುವ ಸಂಪೂರ್ಣ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಯುದ್ಧ ಭೀತಿಯಲ್ಲಿರುವ ಮಧ್ಯಪ್ರಾಚ್ಯದಲ್ಲಿ ದೊಡ್ಡ ಜಾಗತಿಕ ಸಂಘರ್ಷ ಉಲ್ಬಣವಾದರೆ ಸಾಮಾನ್ಯ ಜನರಿಗೆ ಸುರಕ್ಷಿತ ಎಂದೆನಿಸುವ ಹತ್ತು ಪ್ರಮುಖ ರಾಷ್ಟ್ರಗಳಿವೆ.


ಗ್ರೀನ್‌ಲ್ಯಾಂಡ್

ಡೆನ್ಮಾರ್ಕ್‌ನ ಸ್ವಾಯತ್ತ ರಾಷ್ಟ್ರವಾಗಿರುವ ಗ್ರೀನ್ ಲ್ಯಾಂಡ್ ಯುದ್ಧ ಭೀತಿಯಿಂದ ದೂರದಲ್ಲಿದೆ ಮತ್ತು ರಾಜಕೀಯವಾಗಿ ಅಲಿಪ್ತವಾಗಿದೆ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆಗಳು ಕಡಿಮೆ.


ದಕ್ಷಿಣ ಆಫ್ರಿಕಾ

ಸ್ಥಿರವಾದ ವಿದೇಶಾಂಗ ನೀತಿ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ಬದ್ಧತೆಯು ದಕ್ಷಿಣ ಆಫ್ರಿಕಾವನ್ನು ಯುದ್ಧದ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಲ್ಲಿ ಜನರು ಹೆಚ್ಚು ಸುರಕ್ಷಿತವಾಗಿರಬಹುದು.


ಐಸ್ ಲ್ಯಾಂಡ್

ಹೇರಳವಾದ ತಾಜಾ ನೀರಿನ ನಿಕ್ಷೇಪಗಳು, ಸಮುದ್ರ ಸಂಪನ್ಮೂಲಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಸರುವಾಸಿಯಾಗಿರುವ ಐಸ್ ಲ್ಯಾಂಡ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇಲ್ಲ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆ ಇಲ್ಲ. ಹೀಗಾಗಿ ಇದು ಸುರಕ್ಷಿತವೆಂದೇ ಹೇಳಬಹುದು.


ಅಂಟಾರ್ಕ್ಟಿಕಾ

ಅಂಟಾರ್ಕ್ಟಿಕಾ ಇರುವ ಸ್ಥಳವು ಅದನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಿದೆ. ಇದು ಯುದ್ಧ ವಲಯವಾಗಿ ಬದಲಾಗುವ ಸಾಧ್ಯತೆಯಿಲ್ಲ.


ಸ್ವಿಟ್ಜರ್ಲೆಂಡ್

ಮೊದಲ ಎರಡು ವಿಶ್ವ ಯುದ್ಧಗಳಲ್ಲಿಯೂ ಇದು ಕಠಿಣವಾದ ಪರ್ವತ ಭೂಪ್ರದೇಶದಿಂದಾಗಿ ದೂರದಲ್ಲಿ ಉಳಿದಿತ್ತು. ಇಲ್ಲಿ ದೃಢವಾದ ಸಾಂಪ್ರದಾಯಿಕ ತಟಸ್ಥತೆ ಯುದ್ಧದ ಸನ್ನಿವೇಶದಿಂದ ಎಲ್ಲರನ್ನೂ ದೂರವಿರಿಸುತ್ತದೆ.


ಇಂಡೋನೇಷ್ಯಾ

ಭೌಗೋಳಿಕ ಪ್ರತ್ಯೇಕತೆ ಮತ್ತು ಬಲವಾದ ಆರ್ಥಿಕತೆಗೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾ “ಮುಕ್ತ ಮತ್ತು ಸಕ್ರಿಯ” ವಿದೇಶಾಂಗ ನೀತಿಯನ್ನು ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಯುದ್ಧದ ಭೀತಿ ಇಲ್ಲ.


ಟುವಾಲು

ಪ್ರತ್ಯೇಕತೆ ಮತ್ತು ತಟಸ್ಥತೆಯಿಂದಾಗಿ ಟುವಾಲು ಅತ್ಯಂತ ಏಕಾಂತ ಮತ್ತು ರಾಜಕೀಯವಾಗಿ ಅಲಿಪ್ತವಾಗಿರುವ ರಾಷ್ಟ್ರವಾಗಿದೆ. ಹೀಗಾಗಿ ವಿಶ್ವ ಯುದ್ಧ ನಡೆದರೆ ಇದು ಅದರಿಂದ ದೂರವೇ ಉಳಿಯುತ್ತದೆ.


ನ್ಯೂಜಿಲೆಂಡ್

ಯುದ್ಧ ಸಂಘರ್ಷಗಳ ಇತಿಹಾಸವಿಲ್ಲದ ಸ್ಥಿರವಾದ ಪ್ರಜಾಪ್ರಭುತ್ವ, ತನ್ನದೇ ಆದ ಆಹಾರವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶ ನ್ಯೂಜಿಲ್ಯಾಂಡ್. ಇಲ್ಲಿ ಯುದ್ಧದ ಸಾಧ್ಯತೆ ಕಡಿಮೆ.


ಐರ್ಲೆಂಡ್

ತಟಸ್ಥತೆ ಮತ್ತು ಶಾಂತಿಯುತ ವಿದೇಶಾಂಗ ನೀತಿಗೆ ಹೆಸರುವಾಸಿಯಾಗಿರುವ ಐಲೆಂಡ್ ನಲ್ಲಿ ಯುದ್ಧ ಸಾಧ್ಯತೆಯೂ ಇಲ್ಲವೆನ್ನಬಹುದು.


ಭೂತಾನ್

ಹಿಮಾಲಯದಿಂದ ಸುತ್ತುವರೆದಿರುವ ಭೂತಾನ್‌ನ ವಿಶಿಷ್ಟ ಸ್ಥಳವು ಅಲ್ಲಿನ ಜನರಿಗೆ ಅತ್ಯುತ್ತಮವಾದ ಆಶ್ರಯವನ್ನು ಒದಗಿಸುತ್ತದೆ. ಇಲ್ಲಿ ಯುದ್ಧದ ಭೀತಿ ಇಲ್ಲವೆನ್ನಲು ಅಡ್ಡಿಯಿಲ್ಲ.

Continue Reading

ದೇಶ

Lok sabha election: 2019ರ ಅವಲೋಕನ; ಗರಿಷ್ಠ- ಕನಿಷ್ಠ ಮತಗಳ ಅಂತರದಿಂದ ಗೆದ್ದವರು

Lok Sabha Election: ದೇಶದಲ್ಲಿ 2024ರ ಲೋಕಸಭಾ ಚುನಾವಣೆ ನಾಳೆಯಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾರು ಅತಿ ಹೆಚ್ಚು ಹಾಗೂ ಯಾರು ಅತೀ ಕಡಿಮೆ ಅಂತರದಿಂದ ಚುನಾವಣೆ ಗೆದ್ದರು ಎನ್ನುವ ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

By

Lok sabha election 2024
Koo

ಬೆಂಗಳೂರು: ಲೋಕಸಭೆ ಚುನಾವಣೆ- 2024ರ (Lok sabha election-2024) ಹೊಸ್ತಿಲಲ್ಲಿ ಇರುವಾಗ ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ (election result) ಕುರಿತು ಕುತೂಹಲ ಹೆಚ್ಚಾಗಿದೆ. 2019ರ ಚುನಾವಣೆಯಲ್ಲಿ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಬಿಜೆಪಿ (BJP) 303 ಸ್ಥಾನಗಳನ್ನು ಗೆದ್ದಿತ್ತು. 2014ರ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ 2019ರಲ್ಲಿ 21 ಹೆಚ್ಚು ಸೀಟುಗಳು ಗೆದ್ದು ದಾಖಲೆ ಬರೆದಿತ್ತು.

ಕಳೆದ ಬಾರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ದೇಶದಲ್ಲೇ ಯಾರು ಅತೀ ಹೆಚ್ಚು ಹಾಗೂ ಯಾರು ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದರು ಎನ್ನುವ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹೆಚ್ಚು ಅಂತರದಿಂದ ಗೆದ್ದವರು


ಸಿ.ಆರ್. ಪಾಟೀಲ್

ಗುಜರಾತ್‌ನ ನವಸಾರಿ ಕ್ಷೇತ್ರದಿಂದ ಬಿಜೆಪಿ ನಾಯಕ ಸಿ.ಆರ್. ಪಾಟೀಲ್ 6.89 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು. ಪಾಟೀಲ್ ಅವರು 9,72,739 ಮತಗಳನ್ನು ಗಳಿಸಿ 6.89 ಲಕ್ಷ ಮತಗಳ ಅಂತರದಿಂದ ಪಟೇಲ್ ಧರ್ಮೇಶಭಾಯ್ ಭೀಮಭಾಯ್ ಅವರನ್ನು ಸೋಲಿಸಿದ್ದರು. ಧರ್ಮೇಶಭಾಯ್ ಅವರು 2,83,071 ಮತಗಳನ್ನು ಗಳಿಸಿದ್ದರು.

ಇದನ್ನೂ ಓದಿ: Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?


ಅಮಿತ್ ಶಾ

ಪ್ರಸ್ತುತ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಕಳೆದ ಬಾರಿ ಗಾಂಧಿನಗರದಲ್ಲಿ 5.55 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು.


ದರ್ಶನಾ ಜರ್ದೋಶ್

ಸೂರತ್ ಬಿಜೆಪಿ ಅಭ್ಯರ್ಥಿ ದರ್ಶನಾ ಜರ್ದೋಶ್ 5.47 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದು, ಅವರು ಒಟ್ಟು 7.95 ಲಕ್ಷ ಮತಗಳನ್ನು ಗಳಿಸಿದ್ದರು. ಇವರ ವಿರುದ್ಧ ಕಣಕ್ಕೆ ಇಳಿದಿದ್ದ ಕಾಂಗ್ರೆಸ್ ಪಕ್ಷದ ಅಶೋಕ್ ಪಟೇಲ್ ಅವರು ಕೇವಲ 2.47 ಲಕ್ಷ ಮತಗಳನ್ನು ಗಳಿಸಿದ್ದರು.


ರಂಜನ್ ಭಟ್

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಕ್ಷೇತ್ರವಾಗಿದ್ದ ವಡೋದರದಿಂದ ಬಿಜೆಪಿಯ ರಂಜನ್ ಭಟ್ 5.90 ಲಕ್ಷ ಮತಗಳಿಂದ ಗೆಲುವು ದಾಖಲಿಸಿದ್ದರು.


ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ 4.8 ಲಕ್ಷ ಮತಗಳ ಅಂತರದಿಂದ ಗೆದಿದ್ದರು. ಇವರ ವಿರುದ್ಧ ಕಣದಲ್ಲಿದ್ದ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 1.95 ಲಕ್ಷ ಮತಗಳನ್ನು ಗಳಿಸಿದ್ದರು.

ಕಡಿಮೆ ಅಂತರದಿಂದ ಗೆದ್ದವರು

ಭೋಲಾನಾಥ್

ಉತ್ತರ ಪ್ರದೇಶದ ಮಚ್ಲಿಶಹರ್ ಲೋಕಸಭಾ ಅಭ್ಯರ್ಥಿ ಭೋಲಾನಾಥ್ ಕೇವಲ 181 ಮತಗಳಿಂದ ಎದುರಾಳಿಯನ್ನು ಸೋಲಿಸಿದರು. ಭೋಲಾನಾಥ್ 4,88,397 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಬಹುಜನ ಸಮಾಜ ಪಕ್ಷದ ತ್ರಿಭುವನ್ ರಾಮ್ 4,88,216 ಮತಗಳನ್ನು ಗಳಿಸಿದ್ದರು.

ಪಿ.ಪಿ. ಮೊಹಮ್ಮದ್ ಫೈಜಲ್

ರಾಷ್ಟ್ರದ ಅತ್ಯಂತ ಚಿಕ್ಕ ಕ್ಷೇತ್ರ ಲಕ್ಷದ್ವೀಪದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಿ.ಪಿ. ಮೊಹಮ್ಮದ್ ಫೈಜಲ್ ಕೇವಲ 823 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ಕುಲದೀಪ್ ರಾಯ್ ಶರ್ಮಾ

ಅಂಡಮಾನ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕುಲದೀಪ್ ರಾಯ್ ಶರ್ಮಾ ಕೇವಲ 1,407 ಮತಗಳಿಂದ ಗೆಲುವು ದಾಖಲಿಸಿದ್ದರು.

ಅಪರೂಪಾ ಪೊದ್ದಾರ್

ಪಶ್ಚಿಮ ಬಂಗಾಳದ ಅರಾಂಬಾಗ್ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನ ಅಪರೂಪಾ ಪೊದ್ದಾರ್ ಅವರು ಬಿಜೆಪಿಯ ತಪನ್ ಕುಮಾರ್ ರೇ ವಿರುದ್ಧ 1,142 ಮತಗಳಿಂದ ಜಯಗಳಿಸಿದ್ದರು.

ಇಮ್ತಿಯಾಜ್ ಜಲೀಲ್

ಮಹಾರಾಷ್ಟ್ರದ ಔರಂಗಾಬಾದ್ ಕ್ಷೇತ್ರದಲ್ಲಿ ಕಣಕ್ಕೇ ಇಳಿದಿದ್ದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್‌ನ ಇಮ್ತಿಯಾಜ್ ಜಲೀಲ್ ಅವರು ಚಂದ್ರಕಾಂತ್ ಖೈರೆ ವಿರುದ್ಧ 1,142 ಮತಗಳ ಅಂತರದಿಂದ ಗೆದ್ದಿದ್ದರು.

Continue Reading

ಲೈಫ್‌ಸ್ಟೈಲ್

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Senior citizen: 2050ರ ವೇಳೆಗೆ ಭಾರತವು ವಿಶ್ವದ ಶೇ. 17 ಹಿರಿಯ ನಾಗರಿಕರನ್ನು ಹೊಂದಲಿದೆ. ಇದರಿಂದ ಅವರ ಅಗತ್ಯತೆಗಳನ್ನು ಪೂರೈಸವು ಹಿರಿಯ ನಾಗರಿಕ ಕೇಂದ್ರಗಳ ಬೇಡಿಕೆಯೂ ಹೆಚ್ಚಾಗಲಿದೆ ಎನ್ನುತ್ತದೆ ವರದಿಯೊಂದು. ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Senior citizen
Koo

ನವದೆಹಲಿ: ಭಾರತವು (india) 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು (Senior citizen) ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ (population) ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ ಇ (CBRE) ಸೌತ್ ಏಷ್ಯಾದ ವರದಿ ಬುಧವಾರ ತಿಳಿಸಿದೆ.

ವಿಶ್ವದಲ್ಲೇ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆರೈಕೆ ಮತ್ತು ಜೀವನಶೈಲಿಯ ಆಯ್ಕೆಗಳನ್ನು ಬಯಸುತ್ತಿರುವ ಹಿರಿಯರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಹಿರಿಯ ಜೀವನ ಸೌಲಭ್ಯಗಳ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳೂ ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ರಾಷ್ಟ್ರದಾದ್ಯಂತ 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

2024ರಲ್ಲಿ ಹಿರಿಯ ಜೀವನ ಸೌಲಭ್ಯಗಳ ಒಟ್ಟು ಅಂದಾಜು ಗುರಿ ಸುಮಾರು 1 ಮಿಲಿಯನ್ ಆಗಿದ್ದು, ಮುಂದಿನ 10 ವರ್ಷಗಳಲ್ಲಿ 2.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ವೇಗವಾಗಿ ಹೆಚ್ಚಳ

ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಇದು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಾಗಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ತಿಳಿಸಿದ್ದಾರೆ.


ಹೆಚ್ಚುತ್ತಿದೆ ಬೇಡಿಕೆ

ಕಳೆದ ದಶಕದಲ್ಲಿ ಭಾರತವು ಹಿರಿಯ ಜೀವನ ಯೋಜನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಸ್ವೀಕಾರ ಮತ್ತು ಬೇಡಿಕೆಯನ್ನುಇದು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಆರೈಕೆ ಘಟಕಗಳಲ್ಲಿ ಹೆಚ್ಚಿನವು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಪುಣೆ ಮತ್ತು ದೆಹಲಿ- ಎನ್ ಸಿಆರ್ ನಗರಗಳಲ್ಲಿ ಕೇಂದ್ರೀಕೃತವಾಗಿದೆ.

ಹಲವು ಕ್ರಮ

ಭಾರತದಲ್ಲಿ ವರ್ಧಿತ ವಯೋಸಹಜ ಆರೈಕೆಗಾಗಿ ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (NPHCE), ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳಂತಹ ಹಲವಾರು ನೀತಿ ಉಪಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತದೆ.

ವಯಸ್ಸಾದ ಜನಸಂಖ್ಯೆಯ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ರಚನಾತ್ಮಕ ಆರೈಕೆ ಕಾರ್ಯಕ್ರಮಗಳು, ಉದ್ದೇಶಿತ ನೀತಿಗಳು ಮತ್ತು ವಿಶೇಷ ವೈದ್ಯಕೀಯ ಸೇವೆಗಳ ಅಗತ್ಯವನ್ನು ಗುರುತಿಸಲಾಗಿದೆ. ಭಾರತ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ಆರೈಕೆ ಕ್ಷೇತ್ರದ ಉದ್ಯಮದ ಬಗ್ಗೆ ಜನ ನಾಯಕರು ಮಾತನಾಡುತ್ತಿದ್ದಾರೆ ಎಂದು ಕನ್ಸಲ್ಟಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮಿ ಕೌಶಲ್ ತಿಳಿಸಿದ್ದಾರೆ.

Continue Reading
Advertisement
Steet Food
ಆಹಾರ/ಅಡುಗೆ3 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ4 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ4 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ4 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ5 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ5 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ5 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ6 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ6 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ6 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌