FIFA World Cup | ಮೆಸ್ಸಿಗೆ ಗೋಲ್ಡನ್ ಗಿಫ್ಟ್​; 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡ ವಿಶ್ವ ಕಪ್​ ಚಾಂಪಿಯನ್​ - Vistara News

ಕ್ರೀಡೆ

FIFA World Cup | ಮೆಸ್ಸಿಗೆ ಗೋಲ್ಡನ್ ಗಿಫ್ಟ್​; 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡ ವಿಶ್ವ ಕಪ್​ ಚಾಂಪಿಯನ್​

ಫೈನಲ್​ನಲ್ಲಿ ಫ್ರಾನ್ಸ್​ ತಂಡವನ್ನು ಬಗ್ಗು ಬಡಿದ ಅರ್ಜೆಂಟೀನಾ ತಂಡ ಫಿಫಾ ವಿಶ್ವ ಕಪ್​ ಟ್ರೋಫಿ ತನ್ನದಾಗಿಸಿಕೊಂಡಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೋಹಾ : ಅತ್ಯಂತ ರೋಚಕವಾಗಿ ನಡೆದ ಫಿಫಾ ವಿಶ್ವ ಕಪ್​ ಫೈನಲ್​ ಪಂದ್ಯದಲ್ಲಿ ಫ್ರಾನ್ಸ್​ ತಂಡವನ್ನು ಸೋಲಿಸಿದ ಅರ್ಜೆಂಟೀನಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಪಂದ್ಯದ ಪೂರ್ಣ ಅವಧಿ 90 ನಿಮಿಷ ಹಾಗೂ ಹೆಚ್ಚುವರಿ 30 ನಿಮಿಷಗಳ ಆಟದಲ್ಲಿ ಇತ್ತಂಡಗಳು 3-3 ಗೋಲ್​ಗಳನ್ನು ಬಾರಿಸಿದ ಕಾರಣ ಪೆನಾಲ್ಟಿ ಮೊರೆ ಹೋಗಲಾಯಿತು. ಅಲ್ಲಿ 4-2 ಗೋಲ್​ಗಳ ಅಂತರದಿಂದ ಗೆದ್ದ ಅರ್ಜೆಂಟೀನಾ ತಂಡ ವಿಜಯೋತ್ಸವ ಆಚರಿಸಿತು.

ಫೈನಲ್​ ಎಂಬ ಘನತೆಗೆ ತಕ್ಕುದಾಗಿ ಹೋರಾಟ ನಡೆಯಿತು. ಅರ್ಜೆಂಟೀನಾ ತಂಡದ ಮೊದಲಾರ್ಧದಲ್ಲಿ ಎರಡು ಗೋಲ್​ ದಾಲಿಸಿದರೆ, ಫ್ರಾನ್ಸ್ ಬಳಗ ದ್ವಿತೀಯಾರ್ಧದಲ್ಲಿ ಸತತವಾಗಿ ಎರಡು ಗೋಲ್​ ಬಾರಿಸಿತು. ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್​ ಮೆಸ್ಸಿ (23ನೇ ನಿಮಿಷ), ಏಂಜೆಲೊ ಡಿ ಮಾರಿಯಾ (36ನೇ ನಿಮಿಷ) ಗೋಲ್​ಗಳನ್ನು ಬಾರಿಸಿದರೆ, ಫ್ರಾನ್ಸ್ ತಂಡದ ಕೈಲಿಯಾನ್​ ಎಂಬಾಪೆ 80 ಹಾಗೂ 81ನೇ ನಿಮಿಷದಲ್ಲಿ ಗೋಲ್​ ಬಾರಿಸಿ ಸಮಬಲದ ಸಾಧನೆ ಮಾಡಿದರು. ಬಳಿಕ ನಡೆದ 30 ನಿಮಿಷಗಳ ಹೆಚ್ಚುವರಿ ಆಟದಲ್ಲಿ ಅರ್ಜೆಂಟೀನಾ ಪರ ಲಿಯೋನೆಲ್​ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್​ ಬಾರಿಸಿದರೆ, ಎಂಬಾಪೆ 118 ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು.

ಫ್ರಾನ್ಸ್​ ತಂಡದ ಪರ ಕೈಲಿಯಾನ್​ ಎಂಬಾಪೆ ಹ್ಯಾಟ್ರಿಕ್​ ಗೋಲ್​ ದಾಖಲಿಸಿ ಸಾಧನೆ ಮಾಡಿದ ಹೊರತಾಗಿಯೂ ಅವರಿಗೆ ಗೆಲುವಿನ ಸವಿ ಸಿಗಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ ಒಟ್ಟು 8 ಗೋಲ್​ಗಳನ್ನು ಬಾರಿಸಿದ ಕೈಲಿಯಾನ್​ಗೆ ಗೋಲ್ಡನ್​ ಬೂಟ್​ ಗೌರವ ಲಭಿಸಿತು.

ಅರ್ಜೆಂಟೀನಾ ತಂಡ ಈ ಹಿಂದೆ 1978 ಹಾಗೂ 1986ರಲ್ಲಿ ವಿಶ್ವ ಕಪ್​ ಗೆದ್ದಿತ್ತು. ಇದೀಗ 36 ವರ್ಷಗಳ ಬಳಿಕ ಟ್ರೋಫಿ ಗೆದ್ದಂತಾಗಿದೆ. ಇದೇ ವೇಳೆ ಕಳೆದ ಬಾರಿಯ ಚಾಂಪಿಯನ್​ ಹಾಗೂ ಗೋಲ್​ಕೀಪರ್ ಹ್ಯೂಗೋ ಲೊರಿಸ್​ ನೇತೃತ್ವದ ಫ್ರಾನ್ಸ್​ ತಂಡದ ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಕಮರಿ ಹೋಯಿತು.

ಲುಸೈಲ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅರ್ಜೆಂಟೀನಾ ಬಳಗ ಪ್ರಥಮಾರ್ಧಕ್ಕೆ ಮೊದಲೇ ಎರಡು ಗೋಲ್​ಗಳನ್ನು ಬಾರಿಸಿ ವಿಶ್ವಾಸ ಪ್ರದರ್ಶಿಸಿತು. ಅದೇ ಲಯದಲ್ಲಿ ಆಡಿದರೂ ಎದುರಾಳಿ ತಂಡದಿಂದ ಪ್ರತಿರೋಧ ಎದುರಾಯಿತು. ನಿಗದಿತ ಅವಧಿ ಮುಕ್ತಾಯಕ್ಕೆ 10 ನಿಮಿಷ ಮೊದಲು ಕೈಲ್​ ಎಂಬಾಪೆ ಎರಡು ಗೋಲ್​ಗಳನ್ನು ಬಾರಿಸಿ ಅರ್ಜೆಂಟೀನಾ ತಂಡಕ್ಕೆ ಆಘಾತ ಕೊಟ್ಟರು. ಹೀಗಾಗಿ ಪಂದ್ಯ ಹೆಚ್ಚುವರಿ 30 ನಿಮಿಷಗಳ ಕಡೆಗೆ ಸಾಗಿತು. ಅಲ್ಲೂ 108ನೇ ನಿಮಿಷದಲ್ಲಿ ಮೆಸ್ಸಿ ಗೋಲ್​ ಬಾರಿಸಿದರೆ, 118ನೇ ನಿಮಿಷದಲ್ಲಿ ಎಂಬಾಪೆ ಗೋಲ್​ ಬಾರಿಸಿದರು.

ಫೈನಲ್ ಪಂದ್ಯ ಕ್ಷಣಕ್ಷಣಕ್ಕೂ ರೋಚಕವಾಗಿ ನಡೆಯಿತು. ಆರಂಭದಲ್ಲಿ ಅರ್ಜೆಂಟೀನಾ ತಂಡ ಪಾಸ್​ ಹಾಗೂ ನಿಖರತೆಯ ಮೂಲಕ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದರೆ, ದ್ವಿತೀಯಾರ್ಧದಲ್ಲಿ ಫ್ರಾನ್ಸ್ ತಂಡ ಹೆಚ್ಚು ಪ್ರಭಾವಿ ಆಟ ಪ್ರದರ್ಶಿಸಿತು. ಹೆಚ್ಚುವರಿ 30 ನಿಮಿಷದಲ್ಲಂತೂ ಇತ್ತಂಡಗಳು ರಣರಂಗದಲ್ಲಿರುವ ಸೇನಾನಿಗಳಂತೆ ಹೋರಾಟ ನಡೆಸಿದರು.

ಲುಸೈಲ್​ ಸ್ಟೇಡಿಯಮ್​ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡದ ಅಭಿಮಾನಿಗಳೇ ಹೆಚ್ಚಿದ್ದರು. ಭಾರತೀಯ ಫುಟ್ಬಾಲ್​ ಅಭಿಮಾನಿಗಳೂ ಮೆಸ್ಸಿ ಬಗಳಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಮಲಯಾಳಂ ಸಿನಿಮಾ ನಟರಾದ ಮೋಹನ್​ ಲಾಲ್​ ಹಾಗೂ ಮಮ್ಮೂಟಿ ಕೂಡ ಪಂದ್ಯ ವೀಕ್ಷಿಸಿದರು.

ಅರ್ಜೆಂಟೀನಾ ಸಾಧನೆ

ಮೆಸ್ಸಿ ನಾಯಕ್ವದ ಅರ್ಜೆಂಟೀನಾ ತಂಡ 2021ರಲ್ಲಿ ನಡೆದ ಕೋಪಾ ಅಮೇರಿಕ ಫುಟ್ಬಾಲ್​ ಟೂರ್ನಿಯಲ್ಲಿ ಬಲಿಷ್ಠ ಪ್ರತಿಸ್ಪರ್ಧಿ ಬ್ರೆಜಿಲ್​ ವಿರುದ್ಧ 1-0 ಗೋಲ್​ಗಳನ್ನು ದಾಖಲಿಸಿ ಜಯ ಸಾಧಿಸಿತು. ಈ ಮೂಲಕ ವಿದಾಯಕ್ಕೆ ಮೊದಲು ಫುಟ್ಬಾಲ್​ ಕ್ಷೇತ್ರದ ಆರಾಧ್ಯ ದೈವ್ಯ ಲಿಯೋನೆಲ್​ ಮೆಸ್ಸಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಂತಾಯಿತು.

ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್​ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ನೆಚ್ಚಿನ ತಂಡ ಯಾವುದು; ರಾಹುಲ್​ ಹೇಳಿದ ಉತ್ತರವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

IPL 2024: ಅಭ್ಯಾಸದ ವೇಳೆ ರಾಹುಲ್​ಗೆ ಪತ್ನಿಯಿಂದ ಸಾಥ್​; ವಿಡಿಯೊ ವೈರಲ್​

IPL 2024: ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

VISTARANEWS.COM


on

IPL 2024
Koo

ಲಕ್ನೋ: ನಿನ್ನೆಯಷ್ಟೇ ಕೆ.ಎಲ್​ ರಾಹುಲ್(KL Rahul)​ ಅವರು 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದ್ದಾರೆ. ಈ ಪಂದ್ಯಕ್ಕೆ ರಾಹುಲ್​ ಅಭ್ಯಾಸ ನಡೆಸುವ ವೇಳೆ ಪತ್ನಿ ಅಥಿಯಾ ಶೆಟ್ಟಿ(Athiya Shetty) ಕೂಡ ಸಾತ್​ ನೀಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ರಾಹುಲ್​ ಅವರು ಅಭ್ಯಾಸ ನಡೆಸುವ ವೇಳೆ ಅಥಿಯಾ ಶೆಟ್ಟಿ ರಾಹುಲ್​ ಅವರ ಲಕ್ನೋ ತಂಡದ ಜೆರ್ಸಿ ತೊಟ್ಟು ಮಾತನಾಡುತ್ತಿರುವ ವಿಡಿಯೊ ವೈರಲ್​ ಆಗಿದೆ. ರಾಹುಲ್​ ನಿನ್ನೆ ರಾತ್ರಿ ತಂಡದ ಆಟಗಾರರೊಂದಿಗೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಥಿಯಾ ಶೆಟ್ಟಿ ಲಕ್ನೋಗೆ ಬಂದಿದ್ದರು. ಇಂದು ನಡೆಯುವ ಪಂದ್ಯದ ವೇಳೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಏಪ್ರಿಲ್​ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್​ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.

ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

Continue Reading

ಕ್ರೀಡೆ

MS Dhoni: ಧೋನಿ ಅಭಿಮಾನಿಗಳಿಗೆ ನಿರಾಸೆ; ಇಂದಿನ ಪಂದ್ಯಕ್ಕೆ ಅನುಮಾನ

MS Dhoni: ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

VISTARANEWS.COM


on

IPL 2024
Koo

ಲಕ್ನೋ: ವಿದಾಯದ ಐಪಿಎಲ್(IPL 2024)​ ಟೂರ್ನಿ ಆಡುತ್ತಿರುವ ಚೆನ್ನೈ ಸೂಪರ್​ ಕಿಂಗ್ಸ್(CSK)​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಇಂದು ನಡೆಯುವ ಲಕ್ನೋ ಸೇರಿ ಮುಂದಿನ ಕೆಲ ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಧೋನಿ ಕಳೆದ ವರ್ಷ ಮುಂಬೈಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಕಳೆದ ಮುಂಬೈ ಮತ್ತು ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿದ ವೇಳೆ ಕುಂಟುತಾ ನಡೆದಾಡಿದ ಫೋಟೊ ಮತ್ತು ವಿಡಿಯೊ ವೈರಲ್​ ಆಗಿತ್ತು. ಮೂಲಗಳ ಪ್ರಕಾರ ಧೋನಿ ಮತ್ತೆ ಗಾಯಗೊಂಡಿದ್ದು ಕೆಲ ಪಂದ್ಯಗಳಿಂದ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಧೋನಿ ಗಾಯದ ಮಧ್ಯೆಯೇ ಸಂಪೂರ್ಣವಾಗಿ ನೋವು ನಿವಾರಕ ಪ್ಲಾಸ್ಟರ್​ ಸುತ್ತಿ ಟೂರ್ನಿ ಆಡಿದ್ದರು.

ಎಂ.ಎಸ್.ಧೋನಿ(MS Dhoni), ಕ್ಯಾಪ್ಟನ್‌ ಕೂಲ್‌, ಮಾಹಿ, ತಾಲಾ… ಎಂದೆಲ್ಲ ಪ್ರೀತಿಯಿಂದ ಕರೆಸಿಕೊಳ್ಳುವ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). ಅವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

ಸಂಭಾವ್ಯ ತಂಡ

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​), ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

ಲಕ್ನೋ: ಕೈಲ್​ ಮೇಯರ್ಸ್, ಕೆಎಲ್ ರಾಹುಲ್ (ನಾಯಕ), ದೀಪಕ್​ ಹೂಡಾ, ಮ್ಯಾಟ್​ ಹೆನ್ರಿ, ನಿಕೋಲಸ್ ಪೂರನ್, ಆಯುಷ್ ಬಡೋನಿ, ಕೆ. ಗೌತಮ್​, ರವಿ ಬಿಷ್ಣೋಯ್, ಶಮರ್​ ಜೋಸೆಫ್​, ಯಶ್ ಠಾಕೂರ್, ಮಯಾಂಕ್​ ಯಾದವ್​.

Continue Reading

ಕ್ರೀಡೆ

IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024
Koo

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಹಲವು ಆರೋಪಗಳು ಕೇಳಿ ಬರುತ್ತಲೇ ಇದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್​ ಚೀಟಿಂಗ್, ನೋಬಾಲ್​ ನೀಡದ​ ಆರೋಪ ಕೇಳಿಬಂದಿತ್ತು. ಇದೀಗ ಪಂಜಾಬ್​ ವಿರುದ್ಧ ಪಂದ್ಯದಲ್ಲಿ ಡಿಆರ್​ಎಸ್ ಚೀಟಿಂಗ್​ನ(‘DRS Cheating) ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಘಟನೆಯ ದೃಶ್ಯ ​ ವೈರಲ್​ ಆಗಿದ್ದು ಫ್ರಾಂಚೈಸಿ ವಿರುದ್ಧ ಹಲವರು ಛೀಮಾರಿ ಹಾಕಿದ್ದಾರೆ.

ಪಂದ್ಯದ 15ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಅರ್ಶ್​ದೀಪ್​ ಸಿಂಗ್​ ಎಸೆತ ಈ ಓವರ್​ನ 5ನೇ ಎಸೆತ ವೈಡ್​ ಲೈನ್​ನಲ್ಲಿ ಸಾಗಿ ಕೀಪರ್​ ಕೈ ಸೇರಿತು. ಸೂರ್ಯಕುಮಾರ್ ಯಾದವ್​ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಡಗೌಟ್​ನಲ್ಲಿದ್ದ ಟಿಮ್​ ಡೇವಿಡ್​ ಮತ್ತು ಕೋಚ್​ ಮಾರ್ಕ್​ ಬೌಚರ್ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸನ್ನೆಯ ಮೂಲಕ ಸೂರ್ಯ ಅವರಿಗೆ ಮನವಿ ಮಾಡಿದ್ದಾರೆ. ಇದು ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ​ಬೌಚರ್ ಮತ್ತು ಡೇವಿಡ್ ಡಿಆರ್​ಎಸ್​ ಸನ್ನೆ ಮಾಡುತ್ತಿರುವುದನ್ನು ಕಂಡ ಪಂಜಾಬ್​ ನಾಯಕ ಸ್ಯಾಮ್​ ಕರನ್​ ಓಡಿ ಬಂದು ಅಂಪೈರ್​ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.

ಇದೇ ಪಂದ್ಯದಲ್ಲಿ ಪಂಜಾಬ್​ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಎಸೆದ 19ನೇ ಓವರ್​ನಲ್ಲಿ ಬ್ಯಾಟರ್​ನ ಲೆಗ್​ ಸೈಡ್​ನಿಂದ ಚೆಂಡು ಸಾಗಿದರೂ ಕೂಡ ಅಂಪೈರ್​ ಇದನ್ನು ವೈಡ್​ ನೀಡಲಿಲ್ಲ. ಈ ವಿಚಾರವಾಗಿಯೂ ಮುಂಬೈ ಮತ್ತು ಅಂಪೈರ್​ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್​ ಬದಲು ಮುಂಬೈ ಅಂಪೈರ್ಸ್​ ಎಂದು ತಂಡಕ್ಕೆ ಹೆಸರಿಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಮುಂಬೈ ತಂಡ ಈ ಬಾರಿ ಕೇವಲ ವಿವಾದದಿಂದಲೇ ಸುದ್ದಿಯಾಗುತ್ತಿದೆ.

ಇದನ್ನೂ ಓದಿ IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

ಈ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

Continue Reading

ಕ್ರಿಕೆಟ್

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

IPL 2024: ಈ ಬಾರಿಯ ಐಪಿಎಲ್​ನಲ್ಲಿ ತಂಡವೊಂದು ಪವರ್​ ಪ್ಲೇಯಲ್ಲಿ ಬಾರಿಸಿದ ಸಿಕ್ಸರ್​ಗಳಿಗಿಂತ ಹೆಚ್ಚು ರೋಹಿತ್​ ಒಬ್ಬರೆ ಹೆಚ್ಚಿನ ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಈ ಬಾರಿ ಪವರ್​ ಪ್ಲೇಯಲ್ಲಿ 13 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ 12 ಸಿಕ್ಸರ್​ ಬಾರಿಸಿದೆ.

VISTARANEWS.COM


on

IPL 2024
Koo

ಮುಂಬಯಿ: ಪಂಜಾಬ್(Punjab Kings)​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 250ನೇ ಐಪಿಎಲ್(IPL 2024)​ ಪಂದ್ಯಗಳನ್ನು ಪೂರ್ತಿಗೊಳಿಸಿದ ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಇದೇ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians)​ ತಂಡದ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮ ಪಂಜಾಬ್​ ವಿರುದ್ಧ ಮೂರು ಸಿಕ್ಸರ್​ ಬಾರಿಸಿಸುವ ಮೂಲಕ ಮುಂಬೈ ತಂಡದ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ್ದ ಮಾಜಿ ಆಟಗಾರ ಕೈರಾನ್​ ಪೊಲಾರ್ಡ್ ಅವರ ದಾಖಲೆಯನ್ನು ಮುರಿದರು. ಪೊಲಾರ್ಡ್​ ಮುಂಬೈ ಪರ 223 ಸಿಕ್ಸರ್​ ಬಾರಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಈ ದಾಖಲೆಯನ್ನು ರೋಹಿತ್​ ಮುರಿದಿದ್ದಾರೆ. ಸದ್ಯ ರೋಹಿತ್​ ಮುಂಬೈ ಪರ 224* ಸಿಕ್ಸರ್​ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಪಾಂಡ್ಯ 104* ಸಿಕ್ಸರ್​ ಸಿಡಿಸಿದ್ದಾರೆ. ಇಶಾನ್​ ಕಿಶನ್​(104*) ಮತ್ತು ಸೂರ್ಯಕುಮಾರ್​(97*) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಮುಂಬೈ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ ಬ್ಯಾಟರ್​ಗಳು


ರೋಹಿತ್​ ಶರ್ಮ-224*

ಕೈರಾನ್​ ಪೊಲಾರ್ಡ್​-223

ಹಾರ್ದಿಕ್​ ಪಾಂಡ್ಯ-104*

ಇಶಾನ್​ ಕಿಶನ್​-103*

ಸೂರ್ಯಕುಮಾರ್​ ಯಾದವ್​-97*

ಮುಂಬೈ ಪರ ಮಾತ್ರವಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ತಂಡವೊಂದು ಪವರ್​ ಪ್ಲೇಯಲ್ಲಿ ಬಾರಿಸಿದ ಸಿಕ್ಸರ್​ಗಳಿಗಿಂತ ಹೆಚ್ಚು ರೋಹಿತ್​ ಒಬ್ಬರೆ ಹೆಚ್ಚಿನ ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಈ ಬಾರಿ ಪವರ್​ ಪ್ಲೇಯಲ್ಲಿ 13 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ 12 ಸಿಕ್ಸರ್​ ಬಾರಿಸಿದೆ.

ಇದನ್ನೂ ಓದಿ IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ


ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ


ಐಪಿಎಲ್​ನಲ್ಲಿ(IPL 2024) ಕಳೆದ ವರ್ಷ ಜಾರಿಗೆ ತಂದ ವಿನೂತನ ಇಂಪ್ಯಾಕ್ಟ್ ಪ್ಲೇಯರ್(Impact Player) ನಿಯಮದ ಬಗ್ಗೆ ಟೀಮ್​ ಇಂಡಿಯಾದ ನಾಯಕ, ಮುಂಬೈ ಇಂಡಿಯನ್ಸ್​ನ ಆಟಗಾರ ರೋಹಿತ್​ ಶರ್ಮ(Rohit Sharma) ಶರ್ಮ ​ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್​, ‘ಕ್ರಿಕೆಟ್ 11 ಜನ ಆಡುವ ಆಟ, 12 ಜನರಿಂದಲ್ಲ, ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ನೈಜ ಕ್ರಿಕೆಟ್​ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್​ ಬೆಳವಣಿಗೆಗೆ ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ನಿಯಮದಿಂದ ಓರ್ವ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಅವಕಾಶ ಸಿಗುತಿಲ್ಲ. ಉದಾಹರಣೆಗೆ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸೇರಿದಂತೆ ಅನೇಕ ಆಲ್ರೌಂಡರ್‌ಗಳಿಗೆ ಬ್ಯಾಟಿಂಗ್​ ಸಿಕ್ಕರೆ ಬೌಲಿಂಗ್​ ಸಿಗುತ್ತಿಲ್ಲ. ಬೌಲಿಂಗ್​ ಸಿಕ್ಕರೆ ಬ್ಯಾಟಿಂಗ್​ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.

Continue Reading
Advertisement
lok sabha Election
ಪ್ರಮುಖ ಸುದ್ದಿ59 seconds ago

Lok Sabah Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಯಿಂದ ಆಕ್ಷೇಪ!; ವಿಡಿಯೊ ಇದೆ

Road accident between bike and Bolero near Mudgal Two dead
ಕರ್ನಾಟಕ2 mins ago

Road Accident: ಮುದ್ಗಲ್‌ ಬಳಿ ಬೈಕ್‌ – ಬುಲೇರೋ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು

Wedding Saree Selection
ಫ್ಯಾಷನ್6 mins ago

Wedding Saree Selection: ಮದುವೆ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೀರೆ ಎಕ್ಸ್‌ಫರ್ಟ್‌ಗಳ ಟಿಪ್ಸ್

ಶಿವಮೊಗ್ಗ16 mins ago

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Wipro Q4 Results
ವಾಣಿಜ್ಯ20 mins ago

Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

Fraud Case in Bengaluru
ಬೆಂಗಳೂರು35 mins ago

Fraud Case : ಉದ್ಯಮಿಗೆ ಚಮತ್ಕಾರಿ ಚೆಂಬು ಕೊಟ್ಟವರು ಅರೆಸ್ಟ್‌; 22 ಬ್ಯಾಂಕ್‌ಗಳಿಗೆ ಟೋಪಿ ಹಾಕಿದ ಫ್ಯಾಮಿಲಿ ಲಾಕ್‌

Jackfruit benefits
ಆರೋಗ್ಯ36 mins ago

Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

Narayana Murthy
ಪ್ರಮುಖ ಸುದ್ದಿ37 mins ago

Narayana Murthy : 4.2 ಕೋಟಿ ರೂಪಾಯಿ ಡಿವಿಡೆಂಡ್​ ಜೇಬಿಗಿಳಿಸಿದ ನಾರಾಯಣ ಮೂರ್ತಿಯ 5 ತಿಂಗಳ ಮೊಮ್ಮಗ!

Neha Murder case Congress creates jihadi Karnataka R Ashok
ರಾಜಕೀಯ39 mins ago

Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

Group Clash
ಕರ್ನಾಟಕ47 mins ago

Group Clash: ರಾಮ ನವಮಿಯಂದು ಎರಡು ಕೋಮಿನ ಯುವಕರ ನಡುವೆ ಘರ್ಷಣೆ; ಇಬ್ಬರಿಗೆ ಚಾಕು ಇರಿತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ2 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ13 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌