ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ - Vistara News

ಕಲೆ/ಸಾಹಿತ್ಯ

ಹೊಸ ಪುಸ್ತಕ: Sunday read: ಹಿಂದೂ ಮಹಾಸಾಗರದ ಮೇಲೊಂದು ಮಹಾಜಾಲಕ್ಕೆ ನಾಂದಿ

ಕಾದಂಬರಿಕಾರ ಕೆ.ಎನ್‌ ಗಣೇಶಯ್ಯ ಅವರ ಹೊಸ ರೋಚಕ ಕಾದಂಬರಿ ʼಜಲ ಜಾಲʼ ಇತ್ತೀಚೆಗೆ ಬಿಡುಗಡೆಯಾಗಿದೆ. ಅದರಿಂದ ಆಯ್ದ ಒಂದು ಭಾಗ ಇಲ್ಲಿದೆ.

VISTARANEWS.COM


on

jala jaala KN ganeshaish book
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಗಸ್ಟ್ 21, 2023
ಮುಂಜಾನೆ 5:00 ಗಂಟೆ
ಹಿಂದೂ ಮಹಾಸಾಗರ

ಅಂದು ಮುಂಜಾನೆಯ ಮುಸುಕು ಇನ್ನೂ ತೆರೆಯದ ಸಮಯದಲ್ಲಿ ಭಾರತದ ವ್ಯಾಪಾರಿ ಹಡಗೊಂದು ಹಿಂದೂ ಮಹಾಸಾಗರದಲ್ಲಿ ಸಾಗುತ್ತಿತ್ತು. ಅದು ಸೀಶೆಲ್ಸ್ ದ್ವೀಪ ಸಮೂಹಕ್ಕೆ ಸರಕನ್ನು ಹೊತ್ತೊಯ್ದು ತಲುಪಿಸಿ, ಭಾರತಕ್ಕೆ ಹಿಂದಿರುಗುತ್ತಿತ್ತು. ಆಗ ತಾನೆ ರಾತ್ರಿ ಕಳೆದು ಹಗಲು ಮೂಡುತ್ತಿದ್ದು, ಮಂದ ಬೆಳಕು ಸುತ್ತಲೂ ಹರಡುತ್ತಿತ್ತು. ಹಡಗಿನಲ್ಲಿದ್ದ 20 ಮಂದಿ ಸಿಬ್ಬಂದಿಯಲ್ಲಿ ಕೆಲವರು ಆಗಲೆ ಎದ್ದು ಜೋಲಾಡುತ್ತಿದ್ದ ಹಡಗಿನ ಮೇಲೆ ಅತ್ತಿತ್ತ ಅಡ್ಡಾಡುತ್ತ ರಾತ್ರಿ ನಿದ್ದೆಯ ಮೈಜೋಮನ್ನು ಇಳಿಸುತ್ತಿದ್ದರು. ರಾತ್ರಿಯೆಲ್ಲ ಹಡಗನ್ನು ನಡೆಸಿದ್ದ ನಾವಿಕ ಮತ್ತು ಆತನ ಸಹಪಾಠಿಯನ್ನು ವಿಶ್ರಾಂತಿ ಪಡೆಯಲು ಕಳುಹಿಸಿದ ಮತ್ತೊಬ್ಬ ನಾವಿಕ ಮತ್ತು ಆತನ ಸಹಾಯಕ, ಈಗಾಗಲೆ ಹಡಗನ್ನು ತಮ್ಮ ಹತೋಟಿಗೆ ಪಡೆದಿದ್ದರು. ಆಗ ತಾನೆ ಮೇಲೇಳುತ್ತಿದ್ದ ಎಳೆ ಸೂರ್ಯ ನಿಂದಾಗಿ ಪೂರ್ವದ ಆಕಾಶದಲ್ಲಿ ಚಿಮ್ಮಿ ಹರಡಿದ್ದ ಹೊಂಬೆಳಕಿನಿಂದ, ಸಮುದ್ರವೂ ಕೆಂಪಾಗಿ ಕಾಣುತ್ತಿದ್ದು, ಅಲೆಗಳಲ್ಲಿ ಆ ಕೆಂಬಣ್ಣವು ಮತ್ತೆ ಮತ್ತೆ ಒಡೆದು ಮತ್ತೆ ಮತ್ತೆ ಮೂಡುತ್ತಿತ್ತು. ಆ ಮಸುಕಾದ ಕೆಂಪು ಬೆಳಕಿನಲ್ಲಿ ಸಮುದ್ರದ ನೀರಿನ ಮೇಲೆ ಹಡಗಿನ ಕೆಲವು ಸಿಬ್ಬಂದಿಗೆ ತುಸುದೂರದಲ್ಲಿ ಏನೋ ವಿಚಿತ್ರವಾಗಿ ತೇಲುತ್ತಿರುವುದು ಕಂಡುಬಂತು. ಕಣ್ಣು ದಿಟ್ಟಿಸಿ ನೋಡಿದರು. ಹಡಗು ಅತ್ತಲೇ ಸಾಗುತ್ತಿತ್ತು ಕೂಡ.

KN ganeshaish
ಕೆಎನ್‌ ಗಣೇಶಯ್ಯ

ಒಬ್ಬರಿಂದ ಒಬ್ಬರಿಗೆ ಆ ಸುದ್ದಿ ಹರಡಿ, ಎಲ್ಲರೂ ಅದನ್ನೇ ದಿಟ್ಟಿಸಿ ನೋಡುತ್ತ ಸೂಕ್ಷ್ಮವಾಗಿ ಅದರ ಚಲನೆಯನ್ನು ಪರಿಶೀಲಿಸಿದರು. ಸಾಗರಯಾನದಲ್ಲಿ ಪರಿಣತಿ ಹೊಂದಿರುವ ಅವರಿಗೆ ಸಮುದ್ರದ ಮೇಲಿನ ಆ ವಿಚಿತ್ರವು ಅತೀ ಸುಲಭವಾಗಿ ಕಾಣತೊಡಗಿತ್ತು. ಆ ಸುದ್ದಿ ಕ್ಯಾಪ್ಟನ್‍ಗೂ ತಲುಪಿ, ಆತ ತನ್ನ ಮುಂದಿದ್ದ ಟೆಲಿಸ್ಕೋಪ್ ಅನ್ನು ಆ ಕಡೆಗೆ ತಿರುಗಿಸಿ ಅದರ ಮೂಲಕ ವೀಕ್ಷಿಸಿದ. ಅನುಮಾನವೇ ಇರಲಿಲ್ಲ. ಅಲ್ಲೊಂದು ಮಾನವ ದೇಹ ತೇಲುತ್ತಿತ್ತು. ಆ ಸುದ್ದಿಯನ್ನು ತನ್ನ ಸಿಬ್ಬಂದಿಯೊಂದಿಗೆ ಹಂಚಿಕೊಂಡ ಕ್ಯಾಪ್ಟನ್, ಏನು ಮಾಡಬೇಕೆನ್ನುವುದರ ಬಗ್ಗೆ ತೀರ್ಮಾನಿಸಲಾರದಾದ. ಎಲ್ಲರೂ ಕ್ಯಾಪ್ಟನ್‍ನ ತೀರ್ಮಾನಕ್ಕೆ ಕಾತರದಿಂದ ಕಾಯುತ್ತಿದ್ದಂತೆ, ಹಡಗನ್ನು ನಿಲ್ಲಿಸಿ ಆ ದೇಹ ವನ್ನು ಪರೀಕ್ಷಿಸಬೇಕೋ ಬೇಡವೋ ಎಂಬ ತುಮುಲದಲ್ಲಿ ಸಿಕ್ಕಿಕೊಂಡ ಕ್ಯಾಪ್ಟನ್ ಅದನ್ನು ತನ್ನ ಮುಖದಲ್ಲಿಯೂ ವ್ಯಕ್ತಪಡಿಸುತ್ತ ಎಲ್ಲರತ್ತ ನೋಡಿದ. ಸಿಬ್ಬಂದಿಯೂ ಏನೂ ಹೇಳದೆ ಮೌನವಾಗಿದ್ದರು. ಯಾವುದನ್ನೂ ತೀರ್ಮಾನಿಸಲಾರದೆ ನಾವಿಕ ಏಕಾಏಕಿ ಹಡಗನ್ನು ಬೇರೆಡೆಗೆ ತಿರುಗಿಸತೊಡಗಿದ. ಕಾರಣ ಆ ದೇಹವು ಕಡಲ್ಗಳ್ಳರ ಷಡ್ಯಂತ್ರದ ಒಂದು ಭಾಗ ಇರಬಹುದು ಎಂಬ ಸಂಶಯ ಮತ್ತು ಅಂಜಿಕೆ ಅವರೆಲ್ಲರನ್ನೂ ಕಾಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು.

ಕೊಚ್ಚಿನ್‍ನಿಂದ ನೈರುತ್ಯದಲ್ಲಿರುವ ಸೀಶೆಲ್ಸ್ ದ್ವೀಪ ಸಮೂಹದಿಂದ ಹಿಂದಿರುಗುವ ಭಾರತದ ಹಡಗುಗಳು ಸಾಮಾನ್ಯವಾಗಿ ಉತ್ತರಕ್ಕೆ ಹೊರಟು, ಅರಬ್ಬೀ ಸಮುದ್ರದ ಮೂಲಕ ನೇರವಾಗಿ ಭಾರತಕ್ಕೆ ಬರುವುದೇ ಹತ್ತಿರದ ಹಾದಿ. ಆದರೆ, ಬಹುಪಾಲು ವ್ಯಾಪಾರಿ ಹಡುಗುಗಳು, ವಿಶೇಷವಾಗಿ ಮಧ್ಯಮ ಗಾತ್ರದ ಹಡಗುಗಳು, ಆ ಹಾದಿಯಲ್ಲಿ ಸಾಗಿ ಬರುತ್ತಿರಲಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ ಅರಬ್ಬೀ ಸಮುದ್ರದಲ್ಲಿ ಸದಾ ಕಾಡುವ ಸೊಮಾಲಿಯಾದ ಕಡಲ್ಗಳ್ಳರ ಕಾಟ. ಮಧ್ಯಮ ಗಾತ್ರದ ವ್ಯಾಪಾರೀ ಹಡಗುಗಳು ಈ ಕಡಲ್ಗಳ್ಳರ ವಿರುದ್ಧ ತಮ್ಮದೇ ರಕ್ಷಣಾವ್ಯವಸ್ಥೆ ಹೊಂದಿರಲು ಸಾಧ್ಯವಿಲ್ಲದ ಕಾರಣ, ಅವು ಉತ್ತರಕ್ಕೆ ಅರಬ್ಬೀ ಸಮುದ್ರದತ್ತ ಸಾಗದೆ, ಹಿಂದೂ ಮಹಾಸಾಗರದಲ್ಲಿಯೇ ಪೂರ್ವದತ್ತ ಹೊರಟು, ಮಾಲ್ಡೀವ್ ದ್ವೀಪ ಸಮೂಹದ ಸುತ್ತ ಹಾದು, ಭಾರತಕ್ಕೆ ಹಿಂದಿರುಗುವುದು ರೂಢಿ. ಈ ಹಾದಿಯ ಪ್ರಯಾಣ ದೂರವಾದರೂ ಅದು ಸುರಕ್ಷಿತವಾಗಿದ್ದುದರಿಂದ ಎಲ್ಲರೂ ಅದನ್ನೇ ಅನುಸರಿಸುತ್ತಿದ್ದರು. ಜೊತೆಗೆ, ಸೀಶೆಲ್ಸ್‌ನಲ್ಲಿ ಸಿಗುವ ಅತೀ ಅಗ್ಗವಾದ ಹೆಪ್ಪುಗಟ್ಟಿಸಿದ ಮೀನನ್ನು ಹೊತ್ತು, ಮಾಲ್ಡೀವ್ ದ್ವೀಪಕ್ಕೆ ಸಾಗಿಸಿ ಮಾರಾಟ ಮಾಡುವುದರಿಂದ ಈ ದೂರದ ಹಾದಿಯ ವೆಚ್ಚವನ್ನು ಸರಿದೂಗಿಸುವುದಷ್ಟೇ ಅಲ್ಲದೆ ಸಾಕಷ್ಟು ಲಾಭವನ್ನೂ ಪಡೆಯಬಹುದಾಗಿತ್ತು.

ಮಾಲ್ಡೀವ್‍ನ ಸುತ್ತಲೂ ಕೂಡ ಸಾಕಷ್ಟು ಮೀನು ಸಿಗುತ್ತಿದ್ದರೂ, ಇತ್ತೀಚೆಗೆ ಅಲ್ಲಿ ಹೆಚ್ಚಾಗಿರುವ ಪ್ರವಾಸೋದ್ಯಮದಿಂದಾಗಿ, ಮೀನುಗಾರರೆಲ್ಲರೂ ತಮ್ಮ ಮೂಲ ಕಸುಬು ಬಿಟ್ಟು ಹೋಟೆಲ್ ಮತ್ತು ಪ್ರವಾಸಕ್ಕೆ ಸಂಬಂಧಪಟ್ಟ ಹಲವು ವಿಧದ ಉದ್ಯಮಗಳಲ್ಲಿ ತೊಡಗಿಕೊಂಡಿರುವುದರಿಂದ, ಮೀನಿನ ಸರಬರಾಜು ಕಡಿಮೆಯಾಗಿ ಅದಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಹಾಗೆ ಹೆಚ್ಚಿದ ಬೇಡಿಕೆ ಕೂಡ ಸೊಮಾಲಿಯದಿಂದ ಹೊರಡುವ ಭಾರತದ ಹಡಗುಗಳನ್ನು ಈ ಹಾದಿಯತ್ತ ಆಕರ್ಷಿಸಿತ್ತು. ಸೊಮಾಲಿಯದಿಂದ ಅತೀ ದೂರದಲ್ಲಿದ್ದ ಮಾಲ್ಡೀವ್ ಕಡೆಯ ಈ ಹಾದಿಯಲ್ಲಿ ಕಡಲ್ಗಳ್ಳರ ಕಾಟ ಇರಲಿಲ್ಲವಾದರೂ ಸಮುದ್ರದ ಮೇಲೆ ತೇಲುತ್ತಿದ್ದ ಆ ದೇಹದ ಬಗ್ಗೆ ಖಚಿತವಾಗಿ ತೀರ್ಮಾನಿಸಲಾಗದೆ ಕ್ಯಾಪ್ಟನ್ ಹಡಗನ್ನು ಬೇರೆಡೆಗೆ ತಿರುಗಿಸಿದ್ದ.

ಇದನ್ನೂ ಓದಿ | ಹೊಸ ಪುಸ್ತಕ | ಮಾಯ ಮತ್ತು ಜೋಗದ ಬೆಳಕಿನಲ್ಲಿ | ಕಾಂತಾರದ ದಂತಕತೆ ಮತ್ತು ಮಾಯವಾಗುವ ದೈವಗಳು

ಎಲ್ಲ ಕಡೆಗೂ ದೃಷ್ಟಿ ಹಾಯಿಸಿ ಪರೀಕ್ಷಿಸಿದ ಸಿಬ್ಬಂದಿ, ಸುತ್ತಲೆಲ್ಲೂ ಕಡಲ್ಗಳ್ಳರ ಸುಳಿವು ಕಾಣದೆ, ಆ ದೇಹ ಏಕಾಂಗಿಯಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು, ಕ್ಯಾಪ್ಟನ್‍ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆಗ ಇದ್ದಕ್ಕಿದ್ದಂತೆ ಸಮುದ್ರದ ಮೇಲೆ ಆ ದೇಹ ಚಲಿಸಿದಂತೆ ತೋರಿತು. ಆ ದೇಹ ಬದುಕಲು ಹೆಣಗಾಡುತ್ತಿರುವುದನ್ನು ಗಮನಿಸಿದ ಎಲ್ಲರಲ್ಲೂ ಕರುಣಾಭಾವ ಮೂಡಿತ್ತು. ತಕ್ಷಣ ಎಲ್ಲರೂ ಒಕ್ಕೊರಳಿನಲ್ಲಿ ಕ್ಯಾಪ್ಟನ್‍ನ ಗಮನವನ್ನು ಸೆಳೆದು ಹಡಗನ್ನು ಆ ದೇಹದತ್ತ ನಡೆಸಲು ಬಲವಂತ ಪಡಿಸಿದರು. ಕಡಲ ಸಂಚಾರದ ದುರಂತಗಳನ್ನು ಅರಿತಿದ್ದ ಅವರೆಲ್ಲರೂ ಅಲ್ಲಿ ಬದುಕಲು ಒದ್ದಾಡುತ್ತಿದ್ದ ಜೀವದಲ್ಲಿ ತಮ್ಮನ್ನೇ ಕಾಣತೊಡಗಿದ್ದರು. ಎಲ್ಲರ ಮನೋ ಇಚ್ಛೆ ಅರಿತ ಕ್ಯಾಪ್ಟನ್ ಹಡಗನ್ನು ಆ ದೇಹದತ್ತ ತಿರುಗಿಸಿದ. ಸ್ವಲ್ಪ ದೂರ ಚಲಿಸುತ್ತಿದ್ದಂತೆ ಆ ದೇಹದ ಜೀವವೂ ತನ್ನನ್ನು ಕಾಪಾಡಿ ಎಂದು ಕೈ ಎತ್ತಿ ಕರೆಯುತ್ತಿದ್ದದ್ದು ಕಂಡಿತು.

ಹತ್ತಿರ ಸಾಗಿ, ಹೇಗೋ ಆತನನ್ನು ಹಡಗಿನ ಮೇಲೆ ಎಳೆದುಕೊಂಡರು. ಮೇಲೆ ಬರುತ್ತಿದ್ದಂತೆಯೇ ಆತ ದೊಪ್ಪನೆ ಕುಸಿದ- ತಾನು ಬದುಕಿದೆ ಅಷ್ಟು ಸಾಕು ಎನ್ನುವಂತೆ. ಆದರೆ, ಆತನಿಗೆ ಉಸಿರಾಡಲೂ ಕಷ್ಟ ಎನಿಸುವಷ್ಟು ಸುಸ್ತಾಗಿದ್ದ. ಮೈ ಎಲ್ಲ ಈಗಾಗಲೆ ತಣ್ಣಗಾಗಿತ್ತು. ಆರೂವರೆ ಅಡಿ ಎತ್ತರದ, ದಷ್ಟಪುಷ್ಟವಾದ ಮೈಕಟ್ಟಿನ, ಕಪ್ಪು ಮೈ ಬಣ್ಣದ ಆ ವ್ಯಕ್ತಿಯ ಮೈ ಮೇಲೆ ಒಂದು ಬನಿಯನ್ ಮತ್ತು ಚಡ್ಡಿಯ ಹೊರತಾಗಿ ಮತ್ತೇನೂ ಇರಲಿಲ್ಲ. ಆಫ್ರಿಕಾದವನಂತೆ ಕಂಡರೂ, ಆತನ ಬನಿಯನ್‍ನ ಒಳಗೆ ಅದರ ಮಾರಾಟದ ಕಂಪನಿಯನ್ನು ಪರೀಕ್ಷಿಸಿದ ನಾವಿಕನಿಗೆ ಆತ ಆಫ್ರಿಕಾ ಖಂಡದವನಿರಲಿಕ್ಕಿಲ್ಲ ಅನಿಸಿತು. ತನ್ನ ಸಿಬ್ಬಂದಿಗೆ ಆತನನ್ನು ಒಳಗೆ ಒಯ್ದು, ಶುಶ್ರೂಷೆ ಮಾಡಲು ಸೂಚಿಸಿದ. ಅದರಂತೆ ಎಲ್ಲರೂ ಆತನನ್ನು ತರಾತುರಿಯಿಂದ ಒಳಗೆ ಒಯ್ದರು- ತಾವು ಎದುರಿಸಬೇಕಿರುವ ಸವಾಲುಗಳ ಅರಿವಿಲ್ಲದೆ.

ಇದನ್ನೂ ಓದಿ : Sunday read | ಹೊಸ ಪುಸ್ತಕ | ಸಣ್ಣಕಥೆ | ಹೊಸ ಶಿಕಾರಿ

ಒಳಗೆ ಬಟ್ಟೆಗಳಲ್ಲಿ ಸುತ್ತಿ ಆತನ ಮೈ ಬೆಚ್ಚಗೆ ಮಾಡಿ, ಮೈಕೈ ಉಜ್ಜಿದರು. ಸ್ವಲ್ಪ ಹೊತ್ತಿನಲ್ಲಿಯೇ ಆತ ಕಣ್ಣು ತೆರೆದ. ಆತನನ್ನು ಎತ್ತಿ ಕೂರಿಸಿ ಬಿಸಿಯಾದ ಕಾಫಿ ಕೊಟ್ಟರು. ಎಲ್ಲರಲ್ಲೂ ನಗೆ ಮೂಡಿತ್ತು. ಆದರೆ ತಾವು ಕಾಪಾಡಿದ ಆ ವ್ಯಕ್ತಿ ಪ್ರಪಂಚದ ಒಂದು ಅತೀ ಕಠೋರ ಯೋಜನೆಯೊಂದನ್ನು ತನ್ನೊಂದಿಗೆ ಹೊತ್ತು ತಂದಿದ್ದಾನೆ ಎಂಬ ಬಗ್ಗೆ ಅವರು ಹೇಗೆ ತಾನೆ ನಿರೀಕ್ಷಿಸಲು ಸಾಧ್ಯ? ಒಂದು ರೀತಿಯಲ್ಲಿ ಆತನನ್ನು ಕಾಪಾಡುವುದರ ಮೂಲಕ, ಅವರು ಪ್ರಪಂಚದ ಲಕ್ಷಾಂತರ ಜನರನ್ನು ಕಾಪಾಡಿದ್ದರು ಎನ್ನಬಹುದು. ಒಂದು ಕ್ರೂರ ಯೋಜನೆಗೆ ಕಡಿವಾಣ ಹಾಕಿದ್ದರು. ದುರಂತವೆಂದರೆ ಆತನನ್ನು ಕಾಪಾಡಿದ್ದಕ್ಕಿಂತ ಹೆಚ್ಚಾಗಿ ತಮ್ಮ ಹಡಗಿನಿಂದ ಅವನನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸುವುದೆಂದು ಅವರಿಗೆ ಆ ಸದ್ಯಕ್ಕೆ ಹೊಳೆಯಲಿಲ್ಲ.

ಕೃತಿ: ಜಲ- ಜಾಲ (ರೋಚಕ ಕಾದಂಬರಿ)
ಲೇಖಕ: ಡಾ.ಕೆ.ಎನ್‌ ಗಣೇಶಯ್ಯ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: 170 ರೂ.

ಹೊಸ ಪುಸ್ತಕ ವಿಭಾಗದಲ್ಲಿ ಇನ್ನಷ್ಟು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಶೇಕ್ಸ್‌ಪಿಯರ್‌ ನೆನಪಿನಲ್ಲಿ ಓದುವ ಸುಖ ನೆನಪಿಸಿಕೊಳ್ಳುವ ಹೊತ್ತು

ರಾಜಮಾರ್ಗ ಅಂಕಣ: ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ.

VISTARANEWS.COM


on

reading rajamarga column
Koo
Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಏಪ್ರಿಲ್ 23 – ಇಂದು ವಿಶ್ವ ಪುಸ್ತಕ ದಿನ (World book day). ಓದುವ (Reading) ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗೆಯೇ ಇಂದು ಖ್ಯಾತ ನಾಟಕಕಾರ ಶೇಕ್ಸ್‌ಪಿಯರ್ (Shakespeare) ಹುಟ್ಟಿದ ದಿನ ಕೂಡ. ಹಾಗೆಯೇ ಆತ ಮೃತಪಟ್ಟ ದಿನ ಕೂಡ ಇದೇ ಏಪ್ರಿಲ್ 23!

ಓದುವ ಸುಖಕ್ಕೆ ಬೆಲೆ ಕಟ್ಟಲು ಸಾಧ್ಯವೇ?

ಪುಸ್ತಕಗಳು ಜ್ಞಾನವನ್ನು ಉದ್ದೀಪನ ಮಾಡುವ ದೀಪಸ್ತಂಭಗಳು ಮಾತ್ರವಲ್ಲ, ಸ್ಫೂರ್ತಿ ನೀಡುವ ಮಾಧ್ಯಮಗಳು. ಗಾಂಧೀಜಿಯವರು ಬಾಲ್ಯದಲ್ಲಿ ಓದಿದ ಜಾನ್ ರಸ್ಕಿನ್ ಬರೆದ ‘ಆನ್ ಟು ದ ಲಾಸ್ಟ್ ‘ ಪುಸ್ತಕವು ತನ್ನ ಬದುಕಿನ ಗತಿಯನ್ನೇ ಬದಲಾವಣೆ ಮಾಡಿತು ಎಂದು ಹೇಳಿದ್ದಾರೆ. ಹಾಗೆಯೇ ಅವರು ರಷ್ಯನ್ ಲೇಖನ ಲಿಯೋ ಟಾಲ್ಸ್ಟಾಯ್ ಅವರ ಪುಸ್ತಕಗಳನ್ನು ಓದಿ ಪ್ರಭಾವಿತರಾದರು.

ಭಗತ್ ಸಿಂಗ್ ಅವರು ಲೆನಿನ್ ಬರೆದ ‘ಸ್ಟೇಟ್ ಆಂಡ್ ರಿವೊಲ್ಯುಶನ್’ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆದೆ ಎಂದು ಹೇಳಿದ್ದಾರೆ. ಹೀಗೆ ಮಹಾಪುರುಷರು ಒಂದಲ್ಲ ಒಂದು ಪುಸ್ತಕಗಳಿಂದ ಪ್ರಭಾವಿತರಾದವರು .ಯಾವುದೇ ವ್ಯಕ್ತಿಯ ಬದುಕಿನ ಗತಿಯಲ್ಲಿ ಪ್ರಮುಖವಾದ ತಿರುವನ್ನು ತರುವ ಶಕ್ತಿಯು ಪುಸ್ತಕಗಳಿಗೆ ಇವೆ ಎಂದು ನೂರಾರು ಬಾರಿ ಸಾಬೀತು ಆಗಿದೆ.

ನನ್ನ ಬಾಲ್ಯದ ವಿಳಾಸ ಹೀಗೆ ಇತ್ತು – c/o ಲೈಬ್ರೆರಿ!

ನನಗೆ ಬಾಲ್ಯದಿಂದಲೂ ಓದುವ ಅನಿವಾರ್ಯ ವ್ಯಸನವನ್ನು ಅಂಟಿಸಿದವರು ನನ್ನ ಕನ್ನಡ ಶಾಲೆಯ ಅಧ್ಯಾಪಕರು. ಅವರು ತರಗತಿಯಲ್ಲಿ ಪಾಠವನ್ನು ಮಾಡುವಾಗ ಒಂದಲ್ಲ ಒಂದು ಪುಸ್ತಕದ ರೆಫರೆನ್ಸ್ ಕೊಡುತ್ತಿದ್ದರು. ಮತ್ತು ಸ್ಟಾಫ್ ರೂಮಿಗೆ ನಾವು ಹೋದಾಗ ಅದೇ ಪುಸ್ತಕವು ಅವರ ಟೇಬಲ್ ಮೇಲೆ ಸಿಂಗಾರಗೊಂಡು ಕೂತಿರುತಿತ್ತು. ನಾವು ಕೈಗೆ ಎತ್ತಿಕೊಂಡರೆ ‘ ಓದಿ ಹಿಂದೆ ಕೊಡು ಪುಟ್ಟ ‘ಎಂಬ ಮಾತು ತುಂಬ ಖುಷಿ ಕೊಡುತ್ತಿತ್ತು. ಹಾಗೆ ನಮ್ಮ ಕನ್ನಡ ಶಾಲೆಯ ಅಧ್ಯಾಪಕರಿಂದ ಆರಂಭವಾದ ನನ್ನ ಓದಿನ ವ್ಯಸನ ಇಂದಿನವರೆಗೂ ಮುಂದುವರೆದಿದೆ! ಈವರೆಗೆ ಸಾವಿರಾರು ಪುಸ್ತಕಗಳನ್ನು ಓದಿ ಮುಗಿಸಿದ್ದೇನೆ ಎನ್ನುವುದು ಅಭಿಮಾನದ ಮಾತು. ಈ ಓದು ನನ್ನ ಭಾಷೆ ಮತ್ತು ಚಿಂತನೆಯನ್ನು ಶ್ರೀಮಂತವಾಗಿ ಮಾಡಿತು.

ನನ್ನ ಬಾಲ್ಯ ಮತ್ತು ಯೌವ್ವನದ ಎಲ್ಲ ರಜೆಗಳು, ಸಂಜೆಗಳು ಕಳೆದದ್ದು ಕಾರ್ಕಳದ ವಿಸ್ತಾರವಾದ ಗ್ರಂಥಾಲಯದಲ್ಲಿ. ಹಾಗೆ ನನ್ನ ಗೆಳೆಯರು ನನ್ನನ್ನು C/O ಲೈಬ್ರೆರಿ ಎಂದು ತಮಾಷೆ ಮಾಡುತ್ತಿದ್ದರು.

ವಯಸ್ಸಿಗೆ ಸರಿಯಾದ ಪುಸ್ತಕಗಳ ಆಯ್ಕೆ

ನಮ್ಮ ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬಾಲ್ಯದಲ್ಲಿ ಮೂಡಿಸುವುದು ಹೆತ್ತವರ ಮತ್ತು ಶಿಕ್ಷಕರ ಹೊಣೆ. ನಮ್ಮ ಕೈಯ್ಯಲ್ಲಿ ಪುಸ್ತಕಗಳು ಇದ್ದರೆ ಮಕ್ಕಳಿಗೆ ಓದು ಓದು ಎಂದು ಹೇಳುವ ಅಗತ್ಯ ಬೀಳುವುದಿಲ್ಲ. ಆದರೆ ಮಕ್ಕಳ ವಯಸ್ಸಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಓದಿಸುವುದು ಅಗತ್ಯ. ಅದರ ಬಗ್ಗೆ ಒಂದಿಷ್ಟು ಸೂತ್ರಗಳು ಇಲ್ಲಿವೆ.

Book Reading Habit in Children

ಬಾಲ್ಯದ 5-8 ವರ್ಷ – ಕಲ್ಪನಾ ಲೋಕ

ಈ ವಯಸ್ಸು ಮಕ್ಕಳಲ್ಲಿ ರಚನಾತ್ಮಕ ಯೋಚನೆಗಳು ಮತ್ತು ಕಲ್ಪನೆಗಳು ಮೂಡುವ ಅವಧಿ. ಆ ವಯಸ್ಸಿನ ಮಕ್ಕಳಿಗೆ ಕಾಲ್ಪನಿಕವಾದ ಪ್ರಾಣಿ, ಪಕ್ಷಿಗಳ ಕಥೆ ಹೊಂದಿರುವ ಚಿತ್ರ ಪುಸ್ತಕಗಳು ( ಕಾಮಿಕ್ಸ್) ಹೆಚ್ಚು ಉಪಯುಕ್ತ. ಪಂಚತಂತ್ರದ ಕಥೆಗಳು, ಕಾಕೋಲುಕೀಯ, ಈಸೋಪನ ಕಥೆಗಳು ಈ ವಯಸ್ಸಿನ ಮಕ್ಕಳಿಗೆ ಸೂಕ್ತ. ರಾಷ್ಟ್ರೋತ್ಥಾನ ಪರಿಷತ್ ಹೊರತಂದಿರುವ ‘ಭಾರತ ಭಾರತೀ ‘ ಸರಣಿಯ ಸಾವಿರಾರು ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳಿಗೆ ಓದಲು ಚಂದ.

ಬಾಲ್ಯದ 9-12 ವರ್ಷ – ಕುತೂಹಲದ ಪರ್ವಕಾಲ

ಈ ವಯಸ್ಸಿನ ವಿದ್ಯಾರ್ಥಿಗಳು ಸೃಜನಶೀಲವಾಗಿ ಯೋಚನೆ ಮಾಡುತ್ತಾರೆ ಮತ್ತು ನೈತಿಕ ಮೌಲ್ಯಗಳನ್ನು ನಿಧಾನವಾಗಿ ಜೀರ್ಣ ಮಾಡಿಕೊಳ್ಳುತ್ತಾರೆ. ಅವರಿಗೆ ವಿಜ್ಞಾನಿಗಳ ಕಥೆಗಳು, ಸಿಂದಬಾದನ ಸಾಹಸದ ಕಥೆಗಳು, ರಾಮಾಯಣ, ಮಹಾಭಾರತದ ಕಿರು ಪುಸ್ತಕಗಳು ಹೆಚ್ಚು ಇಷ್ಟವಾಗುತ್ತವೆ. ಆ ಪುಸ್ತಕಗಳಲ್ಲಿ ಹೆಚ್ಚು ಚಿತ್ರಗಳು ಇದ್ದರೆ ಮಕ್ಕಳು ಖುಷಿಪಟ್ಟು ಓದುತ್ತಾರೆ.

ಹದಿಹರೆಯದ 12-15 ವರ್ಷ – ಸಣ್ಣ ಸಣ್ಣ ಕನಸು ಮೊಳೆಯುವ ವಯಸ್ಸು

ಸಣ್ಣ ಕತೆಗಳು ಹೆಚ್ಚು ಇಷ್ಟ ಆಗುವ ವಯಸ್ಸದು. ಸ್ಫೂರ್ತಿ ನೀಡುವ ವಿಕಸನದ ಲೇಖನಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಎಡಿಸನ್ ತನ್ನ ಬಾಲ್ಯದ ಸಮಸ್ಯೆಗಳನ್ನು ಹೇಗೆ ಗೆದ್ದನು? ಅಬ್ರಹಾಂ ಲಿಂಕನ್ ಕಡುಬಡತನವನ್ನು ಮೆಟ್ಟಿ ಅಮೇರಿಕಾದ ಅಧ್ಯಕ್ಷ ಆದದ್ದು ಹೇಗೆ? ಮೊದಲಾದ ಸ್ಫೂರ್ತಿ ಆಧಾರಿತ ಕಥೆಗಳನ್ನು ಆ ವಯಸ್ಸಿನ ವಿದ್ಯಾರ್ಥಿಗಳು ಖುಶಿ ಪಟ್ಟು ಓದುತ್ತಾರೆ. ಹಾಗೆಯೇ ರಾಷ್ಟ್ರ ಪ್ರೇಮದ ಪುಸ್ತಕಗಳನ್ನು ಓದಲು ಆರಂಭ ಮಾಡಬೇಕಾದ ವಯಸ್ಸು ಇದು. ನಾನು ಒಂಬತ್ತನೇ ತರಗತಿಯಲ್ಲಿ ಓದಿದ ಬಾಬು ಕೃಷ್ಣಮೂರ್ತಿ ಅವರ ‘ ಅಜೇಯ ‘ ಪುಸ್ತಕವು ನನ್ನ ಬದುಕಿನಲ್ಲಿ ಭಾರೀ ಬದಲಾವಣೆ ತಂದಿತ್ತು. ಅದು ಖ್ಯಾತ ಕ್ರಾಂತಿಕಾರಿ ಚಂದ್ರಶೇಖರ್ ಆಝಾದ್ ಅವರ ಬದುಕಿನ ಪುಸ್ತಕ ಆಗಿದೆ.

15-18 ವಯಸ್ಸು – ಹುಚ್ಚು ಖೋಡಿ ಮನಸ್ಸು

ಈ ವಯಸ್ಸಿನ ವಿದ್ಯಾರ್ಥಿಗಳು ಸ್ವಲ್ಪ ಕುತೂಹಲ ಮತ್ತು ಹೆಚ್ಚು ಉಡಾಫೆ ಹೊಂದಿರುತ್ತಾರೆ. ಈ ವಯಸ್ಸಿನವರಿಗೆ ಹೆಚ್ಚು ಆಪ್ತವಾಗುವುದು ವಿಕಸನದ ಸ್ಫೂರ್ತಿ ನೀಡುವ ಲೇಖನಗಳೇ ಆಗಿವೆ. ಸಾಹಸ, ಪ್ರವಾಸ, ಸಂಶೋಧನೆ, ಸ್ವಲ್ಪ ರೋಮಾನ್ಸ್ ಇರುವ ಕತೆಗಳನ್ನು ಹೊಂದಿರುವ ಪುಸ್ತಕಗಳು ಅವರಿಗೆ ಹೆಚ್ಚು ಇಷ್ಟವಾಗುತ್ತವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕತೆಗಳು, ಪೂರ್ಣಚಂದ್ರ ತೇಜಸ್ವಿ ಅವರ ರಂಜನೆ ಕಡಿಮೆ ಇರುವ ಕಥೆಗಳ ಪುಸ್ತಕಗಳನ್ನು ಅವರಿಗೆ ಕೊಟ್ಟು ನೋಡಿ. ಡುಂಡಿರಾಜರ ಹನಿಗವನಗಳು ಈ ವಯಸ್ಸಿನ ಓದುಗರಿಗೆ ತುಂಬ ಇಷ್ಟ ಆಗುತ್ತವೆ.

20-24 ವಯಸ್ಸು – ಯೌವ್ವನದ ಕಚಗುಳಿ

ಕಾಲೇಜು ಹಂತದ ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬಂದು ವಾಸ್ತವದ ನೆಲೆಗಟ್ಟಿನ ಚಿಂತನೆಗಳನ್ನು ಹೊಂದಿರುತ್ತಾರೆ. ಕುವೆಂಪು, ಕಾರಂತ, ಭೈರಪ್ಪ, ರವೀ ಬೆಳಗೆರೆ…….ಮೊದಲಾದವರ ಗಂಭೀರ ಚಿಂತನೆ ಹೊಂದಿರುವ ಮತ್ತು ವಾಸ್ತವದ ನೆಲೆಗಟ್ಟಿನ ಕಾದಂಬರಿಗಳನ್ನು ಈ ವಯಸ್ಸಿನಲ್ಲಿ ಓದಲು ಆರಂಭ ಮಾಡಬೇಕು. ಹಾಗೆಯೇ ಆತ್ಮಚರಿತ್ರೆಯ ಪುಸ್ತಕಗಳನ್ನು ಓದಲು ಆರಂಭಿಸಬೇಕಾದ ವಯಸ್ಸು ಇದು. ಅಬ್ದುಲ್ ಕಲಾಂ ಅವರ ಅಗ್ನಿಯ ರೆಕ್ಕೆಗಳು ಮತ್ತು ಪ್ರಜ್ವಲಿಸುವ ಮನಸುಗಳು ಇವೆರಡು ಪುಸ್ತಕಗಳನ್ನು ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ಕೊಟ್ಟರೆ ಅವರು ತುಂಬಾ ಖುಷಿ ಪಡುತ್ತಾರೆ. ಷಡಕ್ಷರಿ ಅವರ ‘ ಕ್ಷಣ ಹೊತ್ತು ಆಣಿ ಮುತ್ತು ‘ ಅಂಕಣಗಳು ಮತ್ತು ಪ್ರತಾಪ ಸಿಂಹ ಅವರ ‘ಬೆತ್ತಲೆ ಜಗತ್ತು ‘ ಅಂಕಣಗಳು ಹೆಚ್ಚು ಖುಷಿ ಕೊಡುವ ವಯಸ್ಸು ಅದು.

25-28 ವಯಸ್ಸು – ಬದುಕಿನ ಸೌಂದರ್ಯದ ವಸಂತ ಕಾಲ

ಮನಸ್ಸು ಮಾಗಿ ಪ್ರಬುದ್ಧತೆಯು ಮೂಡುವ ಈ ವಯಸ್ಸಲ್ಲಿ ಬದುಕಿನ ಸೌಂದರ್ಯದ ಅನುಭೂತಿ ಮೂಡಿಸುವ ತ್ರಿವೇಣಿ, ಸಾಯಿಸುತೆ, ಅನಕೃ, ದೇವುಡು, ತರಾಸು, ನಾ ಡಿಸೋಜಾ ಅವರ ಕಾದಂಬರಿಗಳು ಹೆಚ್ಚು ಆಪ್ತವಾಗುತ್ತವೆ. ಭಾವಗೀತೆಗಳ ಓದು ಖುಷಿ ಕೊಡುತ್ತದೆ. ಸೋತವರ ಕಥೆಗಳು ಹೆಚ್ಚು ಆಪ್ತವಾಗುತ್ತವೆ. ಕಾದಂಬರಿಯ ಓದು ಹೆಚ್ಚು ತಾಳ್ಮೆಯನ್ನು ಬೇಡುತ್ತದೆ. ಆದರೂ ಒಮ್ಮೆ ಅವರು ಓದುವ ಅಭಿರುಚಿ ರೂಢಿಸಿಕೊಂಡರೆ ಅವರು ಅಂತಹ ಪುಸ್ತಕಗಳನ್ನು ಪ್ರೀತಿ ಮಾಡಲು ತೊಡಗುತ್ತಾರೆ.

ಭರತ ವಾಕ್ಯ

ನನ್ನಂತಹ ಭಾಷಣಕಾರ ಮತ್ತು ತರಬೇತಿದಾರನನ್ನು ಜೀವಂತ ಆಗಿಡುವುದೇ ಪುಸ್ತಕಗಳು ಮತ್ತು ಪುಸ್ತಕಗಳು! ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಓದುಗರ ಸಂಖ್ಯೆ ಕಡಿಮೆ ಆಗಿದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಪೂರ್ತಿ ನಿಜವಲ್ಲ.

ವಿಶ್ವ ಪುಸ್ತಕ ದಿನವಾದ ಇಂದು ನೀವು ನಿಮ್ಮ ಮಕ್ಕಳಲ್ಲಿ ಓದುವ ಸಂಕಲ್ಪ ಹುಟ್ಟಿಸಿದಿರಿ ಅಂತಾದರೆ ಅದು ಸಾರ್ಥಕ ಹೆಜ್ಜೆ ಆಗುತ್ತದೆ. ಏನಂತೀರಿ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಸಿನೆಮಾ ಜಗತ್ತಿನ ಮೊದಲ ಸೂಪರ್ ಸ್ಟಾರ್ ಚಾರ್ಲಿ ಚಾಪ್ಲಿನ್!

ರಾಜಮಾರ್ಗ ಅಂಕಣ: ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ಚಾರ್ಲಿ ಚಾಪ್ಲಿನ್‌ಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ. A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ.

VISTARANEWS.COM


on

charlie chaplin rajamarga
Koo

ಜಗತ್ತಿಗೆ ನಗುವನ್ನು ಕಲಿಸಿದ ಚಾರ್ಲಿ ಬದುಕು ದುರಂತ ಆಗಿತ್ತು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಜಗತ್ತಿನ ಮಹೋನ್ನತವಾದ ಕಾಮಿಡಿ (comedy) ಸ್ಟಾರ್, ನಿರ್ಮಾಪಕ, ಎಡಿಟರ್, ನಿರ್ದೇಶಕ (Director), ಲೇಖಕ, ಮಹಾನ್ ನಟ (Actor), ಸಂಗೀತ ನಿರ್ದೇಶಕ…………..ಇನ್ನೂ ಏನೇನೋ ಅವತಾರಗಳು! ಚಾರ್ಲಿ ಚಾಪ್ಲಿನ್ (Charlie Chaplin) ಬದುಕಿದ ರೀತಿಯೇ ಹಾಗಿತ್ತು.

ಆತನ TRAMP ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರ!

ಆ ವಿಚಿತ್ರವಾದ ಬುಟ್ಟಿಯಾಕಾರದ ಟೋಪಿ, ಬೂಟ್ ಪಾಲಿಶ್ ಮೀಸೆ, ಉದ್ದವಾದ ನಡೆಕೋಲು ಈ ಮೂರು ಸೇರಿದರೆ ಚಾಪ್ಲಿನ್ ಚಿತ್ರವು ಕಣ್ಮುಂದೆ ಬಂದಾಯಿತು! ಆ ಪಾತ್ರದ ಹೆಸರು TRAMP. ಜಗತ್ತಿನ ಅತ್ಯಂತ ಜನಪ್ರಿಯ ಪಾತ್ರವದು!

1889ರ ಏಪ್ರಿಲ್ 16ರಂದು ಲಂಡನ್ನಿನಲ್ಲಿ ಹುಟ್ಟಿದ ಅವನ ಬಾಲ್ಯವು ದೊಡ್ಡ ಸಮಸ್ಯೆಗಳಿಂದ ಕೂಡಿತ್ತು. ಹುಟ್ಟಿಸಿದ ತಂದೆಯು ಮಗನನ್ನು ಬಿಟ್ಟು ಹೋಗಿದ್ದರು. ತಾಯಿಗಂತೂ ಗುಣವಾಗದ ಮನೋವ್ಯಾಧಿ. ಮಗ ಚಾರ್ಲಿ ಒಂಬತ್ತನೆಯ ವಯಸ್ಸಿಗೆ ತಲುಪಿದಾಗ ಅಮ್ಮ ಹೆಚ್ಚು ಕಡಿಮೆ ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು.

ಆಕೆ ಹಲವು ಮನೆಗಳಲ್ಲಿ ಕೆಲಸ ಮಾಡಿದ್ದು, ಹಲವು ನಾಟಕ ಮಂಡಳಿಗಳಲ್ಲಿ ಕಾಮಿಡಿ ಪಾತ್ರ ಮಾಡಿ ನಗಿಸಿದ್ದು ಎಲ್ಲವೂ ಹೊಟ್ಟೆಪಾಡಿಗಾಗಿ! ಅಮ್ಮನ ಮೇಲೆ ಮಗನಿಗೆ ಅತಿಯಾದ ಪ್ರೀತಿ. ಬದುಕು ಜಟಕಾ ಬಂಡಿ ಅವನನ್ನು ಅತ್ಯಂತ ಕಿರಿಯ ಪ್ರಾಯದಲ್ಲಿ ಅಮೆರಿಕಕ್ಕೆ ಕರೆದುಕೊಂಡು ಹೋಯಿತು. ಆ TRAMP ಪಾತ್ರದ ಕಲ್ಪನೆಯು ಮೂಡಿದ್ದು, ಚಾರ್ಲಿಯು ಸಿನೆಮಾದ ಭಾಷೆಯನ್ನು ಕಲಿತದ್ದು ಅಮೆರಿಕಾದಲ್ಲಿ.

ಆತನ ವಿಚಿತ್ರ ಮ್ಯಾನರಿಸಂ ಜಗತ್ತಿಗೆ ಹುಚ್ಚು ಹಿಡಿಸಿದವು!

1921ರಲ್ಲಿ ಅವನ ಮೊದಲ ಸಿನೆಮಾವಾದ The Kid ತೆರೆಗೆ ಬಂದಿತು. ಅವನ ವಿಚಿತ್ರವಾದ ನಡಿಗೆ, ದೇಹ ಭಾಷೆ, ವಿಚಿತ್ರ ಮ್ಯಾನರಿಸಂಗಳು ಮತ್ತು ವ್ಯಂಗ್ಯವಾದ ನಗು ಜಗತ್ತಿನ ಸಿನಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿ ಬಿಟ್ಟವು. ಆಗ ಟಾಕಿ ಸಿನೆಮಾಗಳು ಆರಂಭ ಆಗಿದ್ದರೂ ಚಾರ್ಲಿ ಆರಂಭದಲ್ಲಿ ಮಾಡಿದ್ದೆಲ್ಲವೂ ಮೂಕಿ ಸಿನಿಮಾಗಳೇ! SILENCE is the best mode of expressions ಎಂದು ಚಾರ್ಲಿ ನಂಬಿದ್ದ.

ಹಿಟ್ಲರನನ್ನು ನಗಿಸಿದ ಚಾಪ್ಲಿನ್!

ಅವನ ಸಿನೆಮಾಗಳ ಕಥೆಗಾರ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಎಡಿಟರ್ ಎಲ್ಲವೂ ಅವನೇ! ನಂತರ ಬಂತು ನೋಡಿ ಸಾಲು ಸಾಲು ಚಿತ್ರಗಳು. The Circus, Gold Rush, City Lights, Modern Times…. ಎಲ್ಲವೂ ಸೂಪರ್ ಹಿಟ್! ತನ್ನ ಮೊದಲ ಟಾಕಿ ಸಿನೆಮಾ ಆಗಿ The Great Dictator(1940) ತೆರೆಗೆ ತಂದ ಚಾರ್ಲಿ. ಅದು ಆ ಕಾಲದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನನ್ನು ಅಣಕಿಸುವ ಸಿನೆಮಾ. ಆಗ ಹಿಟ್ಲರನು ಜೀವಂತ ಇದ್ದ. ಆ ಸಿನೆಮಾವನ್ನು ನೋಡಿ ಸಿಟ್ಟು ಮಾಡಿಕೊಂಡು ಆತನು ಚಾರ್ಲಿಯನ್ನು ಕೊಂದೇ ಬಿಡ್ತಾನೆ ಎಂಬ ಸುದ್ದಿಯು ಎಲ್ಲೆಡೆಯು ಹರಡಿತ್ತು! ಆದರೆ ಆ ಸಿನೆಮಾವನ್ನು ನೋಡಿದ ಹಿಟ್ಲರ್ ಬಿದ್ದು ಬಿದ್ದು ನಕ್ಕು ಬಿಟ್ಟನು ಮತ್ತು ಚಾರ್ಲಿಗೆ ಶಾಬಾಷ್ ಹೇಳಿದ್ದನು ಅನ್ನೋದೇ ಚಾರ್ಲಿಗೆ ದೊರೆತ ಬಹುದೊಡ್ಡ ಪ್ರಶಸ್ತಿ!

charlie chaplin rajamarga

ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದ ಚಾರ್ಲಿ!

ದಾಖಲೆಯ ಪ್ರಕಾರ ಆತ ಮಾಡಿದ ಒಟ್ಟು ಸಿನೆಮಾಗಳು 83. ‘ನನಗೆ ಸಿನೆಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ’ ಅಂತ ಹೇಳುತ್ತಿದ್ದ ಆತ ಸಾಯುವವರೆಗೂ(1977) ಸಿನೆಮಾಗಳಲ್ಲಿ ಮುಳುಗಿಬಿಟ್ಟಿದ್ದ. ಅವನ ಸಿನೆಮಾಗಳು ಕೇವಲ ಕಾಮಿಡಿ, ನಗುವುದಕ್ಕಾಗಿ ಮಾತ್ರ ಇರದೇ ವಿಡಂಬನೆ, ವ್ಯಂಗ್ಯ, ಪ್ರೀತಿ, ಕಣ್ಣೀರು ಮತ್ತು ಪ್ರೇಮಗಳಿಂದ ಶ್ರೀಮಂತವಾಗಿ ಇದ್ದವು. ಅದರಲ್ಲಿಯೂ ಗೋಲ್ಡ್ ರಶ್, ಸಿಟಿ ಲೈಟ್ಸ್, ಮಾಡರ್ನ್ ಟೈಮ್ಸ್ ಮತ್ತು ದಿ ಗ್ರೇಟ್ ಡಿಕ್ಟೇಟರ್ ಸಿನೆಮಾಗಳು ಜಗತ್ತಿನ ಅತೀ ಶ್ರೇಷ್ಟ ಸಿನೆಮಾಗಳ ಸಾಲಿನಲ್ಲಿ ಸ್ಥಾನವನ್ನು ಪಡೆದವು. ಚಾರ್ಲಿಯ ಸಿನೆಮಾಗಳು ಎಷ್ಟು ರೋಚಕವಾಗಿ ಇದ್ದವೋ ಅವನ ಬದುಕು ಅಷ್ಟೇ ದುರಂತ ಆಗಿತ್ತು!

ಚಾಪ್ಲಿನ್ ಬದುಕಲ್ಲಿ ವಿವಾದಗಳು ಬೆನ್ನು ಬಿಡಲಿಲ್ಲ!

ಬೆನ್ನು ಬಿಡದ ನೂರಾರು ವಿವಾದಗಳು ಅವನನ್ನು ಹಿಂಡಿ ಹಿಪ್ಪೆ ಮಾಡಿದವು. ತನ್ನ ಸಿನೆಮಾದಲ್ಲಿ ಅಭಿನಯಿಸಿದ ಹದಿಹರೆಯದ ಎಲ್ಲ ಚಂದದ ಹುಡುಗಿಯರನ್ನು ಚಾರ್ಲಿ ಮಿತಿಗಿಂತ ಹೆಚ್ಚು ಮೋಹಿಸಿದ್ದ. ಜೀವನದಲ್ಲಿ 3 ಬಾರಿ ಮದುವೆಯಾಗಿ 11 ಮಕ್ಕಳನ್ನು ಪಡೆದ! ಅದರ ನಂತರವೂ ಅವನ ದಾಹವು ನೀಗಲಿಲ್ಲ. ಕೊನೆಯ ಕೆಲವು ಸಿನೆಮಾಗಳು ಸೋತು ಹೋದಾಗ ಚಾರ್ಲಿಯು ಕುಸಿದು ಹೋದರೂ ಸಿನೆಮಾ ಮಾಡುವುದನ್ನು ಬಿಡಲಿಲ್ಲ. ಚಾಪ್ಲಿನ್ ಕೊನೆಯ ಸಿನೆಮಾಗಳು ಪೂರ್ಣವಾಗಿ ಸೋತವು.

ಇನ್ನು ಸಿನೆಮಾ ಮಾಡುವುದಿಲ್ಲ ಅಂದ ಚಾಪ್ಲಿನ್!

ಅವನ ಜೀವನದ ಒಂದು ಘಟನೆಯನ್ನು ನಾನು ಉಲ್ಲೇಖ ಮಾಡಲೇಬೇಕು. ಅವನು ಜೀವಂತವಾಗಿ ಇದ್ದಾಗ ಅಮೇರಿಕಾದಲ್ಲಿ ಒಂದು ದೊಡ್ಡ ಸ್ಪರ್ಧೆ ನಡೆಯಿತು. ಅದು ಚಾರ್ಲಿಯನ್ನು, ಅವನ ಡ್ರೆಸ್ಸನ್ನು, ಅವನ ನಡಿಗೆ, ಅವನ ಅಭಿನಯ.. ಇತ್ಯಾದಿಗಳನ್ನು ಅನುಕರಣೆ ಮಾಡುವ ಸ್ಪರ್ಧೆ! ಕುತೂಹಲದಿಂದ ಚಾರ್ಲಿ ಚಾಪ್ಲಿನ್ ಆ ಸ್ಪರ್ಧೆಯಲ್ಲಿ ಬೇರೆ ಹೆಸರು ಕೊಟ್ಟು ಭಾಗವಹಿಸಿದ್ದನು. ಆದರೆ ಫಲಿತಾಂಶ ಬಂದಾಗ ಚಾರ್ಲಿಗೆ ನಿಜವಾದ ಶಾಕ್ ಆಯಿತು. ಏಕೆಂದರೆ ಅವನಿಗೇ ಸೆಕೆಂಡ್ ಪ್ರೈಜ್ ಬಂದಿತ್ತು!

ಅಂದು ವೇದಿಕೆ ಹತ್ತಿದ ಚಾಪ್ಲಿನ್ ವಿಜೇತ ಕಲಾವಿದನನ್ನು ಅಪ್ಪಿಕೊಂಡು ಅಭಿನಂದಿಸಿದನು ಮತ್ತು ತಾನು ಇನ್ನು ಯಾವ ಸಿನೆಮಾವನ್ನು ಕೂಡ ಮಾಡುವುದಿಲ್ಲ ಎಂದು ಆ ವೇದಿಕೆಯಲ್ಲಿಯೇ ಘೋಷಿಸಿದನು! ಅವನ ಕೊನೆಯ ಸಿನೆಮಾ A Countess from Hong Kong (1967).

ತನ್ನ ಅದ್ಭುತವಾದ ಅಭಿನಯ ಹಾಗೂ ರೋಚಕವಾದ ಸಿನೆಮಾಗಳ ಮೂಲಕ ಇಡೀ ಜಗತ್ತನ್ನು ನಗಿಸಿದ ಅವನಿಗೆ ಮೊನ್ನೆ ಮೊನ್ನೆ (ಏಪ್ರಿಲ್ 16) ಹುಟ್ಟುಹಬ್ಬ.

A day without laughter is a day wasted ಎಂದು ಹೇಳಿದ್ದ ಚಾಪ್ಲಿನ್ ಅದರಂತೆ ಬದುಕಿದ್ದ! ತನ್ನ ನೂರಾರು ನೋವುಗಳನ್ನು ನುಂಗಿ ಜಗತ್ತನ್ನು ನಗಿಸಿದ ಚಾರ್ಲಿ ಚಾಪ್ಲಿನ್ ಬದುಕು ಅವನ ಸಿನೆಮಾಗಳಷ್ಟೆ ರೋಚಕ ಆಗಿದೆ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತು ಪಡಿಸಿದ ಕಲ್ಪನಾ ಚಾವ್ಲಾ!

Continue Reading

ಶಿವಮೊಗ್ಗ

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Book Release: ಶಿವಮೊಗ್ಗ ಜಿಲ್ಲೆಯ ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

VISTARANEWS.COM


on

Koo

ಶಿವಮೊಗ್ಗ: ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ, ಲೇಖಕ ಡಾ. ಕೆ. ಎಸ್. ಕಣ್ಣನ್ ಅವರ ʼರಾಮನೇನು ದೇವನೇ?ʼ ಪುಸ್ತಕವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಪುಸ್ತಕದ (Book Release) ಲೇಖಕರಾದ ಡಾ. ಕೆ. ಎಸ್. ಕಣ್ಣನ್, ಶ್ರೀ ಭಾರತೀ ಪ್ರಕಾಶನದ ಕವಿತಾ ಜೋಯ್ಸ್, ನಾಗೇಂದ್ರ ಕೊಪ್ಪಲು ಉಪಸ್ಥಿತರಿದ್ದರು.

ಆದಿಕಾವ್ಯವೆಂದೇ ಪ್ರಸಿದ್ಧವಾದ ಕಾವ್ಯ ವಾಲ್ಮೀಕಿ ರಾಮಾಯಣ. ಅದು ಚಿತ್ರಿಸುವುದು ರಾಮನ ಕಥೆಯನ್ನು, ಅರ್ಥಾತ್ ರಾಮನು ನಡೆದ ಹಾದಿಯನ್ನು. ರಾಮನು ಎಲ್ಲಿಂದ ಎಲ್ಲಿಗೆ ನಡೆದದ್ದು? ಅಯೋಧ್ಯೆಯಿಂದ ಹೊರಟು ಕೊನೆಗೆ ಅಯೋಧ್ಯೆಗೇ ಬಂದು ಸೇರಿದನಲ್ಲವೇ? ಅದುವೇ ರಾಮಾಯಣವಾಯಿತು. ಇನ್ನೂ ಮುಖ್ಯವಾದ ರಾಮಾಯನವೊಂದಿದೆ. ದಿವಿಯಿಂದ ಹೊರಟು ಭುವಿಯಲ್ಲಿ ಇದ್ದು ಮತ್ತೆ ದಿವಿಗೆ ಬಂದು ಸೇರಿದನಲ್ಲವೇ? ಅದುವೇ ನಿಜವಾದ ರಾಮಾಯಣ! ನಾವೂ ನಮ್ಮ ಮೂಲವನ್ನು ಸೇರಿಕೊಳ್ಳಲು ಹಿಡಿಯಬೇಕಾದ ಹಾದಿಯನ್ನು ಅರುಹುವ ಅಮರಕೃತಿ ʼರಾಮನೇನು ದೇವನೇ?ʼ ಪುಸ್ತಕವಾಗಿದೆ.

‘ರಾಮನೂ ನಮ್ಮ-ನಿಮ್ಮಂತೆ ಮನುಷ್ಯ, ನಮಗಿಂತ ಹೆಚ್ಚು ಸಾಧನೆ ಮಾಡಿ ಪುರುಷೋತ್ತಮನಾದವ’ ಎನ್ನುವ ವಾದವೊಂದು ಪ್ರಚಲಿತವಾಗಿದೆ. ಈ ವಾದ ಮಾಡುವವರು ‘ರಾಮಾಯಣದಲ್ಲಿ ವಾಲ್ಮೀಕಿಗಳು ರಾಮ ದೇವರು ಎಂದಿಲ್ಲ’ ಎಂದು ಹೇಳುತ್ತಾರೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ರಾಮಾಯಣ, ಹೆಜ್ಜೆ ಹೆಜ್ಜೆಗೆ ರಾಮನ ದಿವ್ಯತೆಯನ್ನು ಗುರುತಿಸುತ್ತದೆ. ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಅದು ಕಾಣಸಿಗುತ್ತದೆ. ಅದನ್ನು ಸಾಧಿಸುವ ಸತ್ಕಾರ್ಯವನ್ನು ಈ ಕೃತಿ ಮಾಡಿದೆ.

ರಾಮಾಯಣದ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಅದರ ಆಶಯವನ್ನು ವಿವರಿಸುತ್ತಾ, ತರ್ಕಬದ್ಧವಾಗಿ ಸಾಗುವ ಈ
ಕೃತಿ, ಶಾಸ್ತ್ರೀಯ ಕ್ರಮದ ನಿರೂಪಣೆಯಿಂದ ಗಮನ ಸೆಳೆಯುತ್ತದೆ. ಇಲ್ಲಿ ಕಲ್ಪನೆಯಿಲ್ಲ, ಮನಸ್ಸಿಗೆ ಅನ್ನಿಸಿದ್ದನ್ನೆಲ್ಲ ರಾಮಾಯಣದಲ್ಲಿದೆ ಎನ್ನುವ ಅಪಭ್ರಂಶವಿಲ್ಲ, ತನಗನ್ನಿಸಿದ್ದೇ ಸತ್ಯ ಎಂದುಕೊಳ್ಳುವ ಅಹಂಕಾರವೂ ಇಲ್ಲ. ಋಷಿಹೃದಯದ ಒಳಹೊಕ್ಕು, ಆ ಆರ್ಷತನವನ್ನು ಆಸ್ವಾದಿಸುತ್ತಾ, ಸತ್ಯವನ್ನು ಮಾತ್ರ ಹೇಳುತ್ತೇನೆ ಎನ್ನುವ ವಿನಯಪೂರ್ವಕವಾದ ದಿಟ್ಟತನ ಕೃತಿಯಲ್ಲಿದೆ.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ರಾಮನೇನು ದೇವನೇ?

ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ 39ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ, ಮದ್ರಾಸು ಐಐಟಿಯಲ್ಲಿ ಪೀಠಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ, ಬಹುಶ್ರುತ ವಿದ್ವಾಂಸರಾದ ಡಾ. ಕೆ. ಎಸ್. ಕಣ್ಣನ್ ಅವರು ರಚಿಸಿರುವ, ಶ್ರೀ ಭಾರತೀ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಪ್ರತಿಗಳಿಗಾಗಿ ಶ್ರೀಪುಸ್ತಕಮ್ (9591542454) ಸoಪರ್ಕಿಸಬಹುದಾಗಿದೆ.

“ಶ್ರೀರಾಮ, ಶ್ರೀಮನ್ನಾರಾಯಣನ ಅವತಾರ. ವಾಲ್ಮೀಕಿ ರಾಮಾಯಣ ಇದನ್ನು ಬಗೆಬಗೆಯಾಗಿ ತೋರಿಸಿಕೊಡುತ್ತದೆ. ವ್ಯಕ್ತವಾಗಿಯಲ್ಲದೇ ರಾಮಾಯಣದ ಅಂತಃಸೂತ್ರವೇ ಇದಾಗಿದೆ. ವೈಕುಂಠದಿಂದ ಆರಂಭವಾಗಿ ಮತ್ತೆ ವೈಕುಂಠವನ್ನು ಸೇರುವುದೇ ರಾಮನ ಅಯನ. ಈ ಅಯನ ಜೀವಿಗಳೆಲ್ಲರದ್ದೂ ಆಗಬೇಕೆನ್ನುವುದೇ ರಾಮಾಯಣದ ಸಂದೇಶ, ಶ್ರೀರಾಮನ ಅವತಾರವೂ, ಶ್ರೀಮದ್ರಾಮಾಯಣದ ಅವತಾರವೂ ಈ ಉದ್ದೇಶದ್ದೇ ಆಗಿದೆ. ಇದೀಗ ರಾಮನೇನು ದೇವನೇ? ಕೃತಿ ವಾಲ್ಮೀಕಿಗಳು ರಾಮಾಯಣದಲ್ಲಿ ಎಲ್ಲೆಲ್ಲಿ ಈ ಅಂಶವನ್ನು ಪ್ರಸ್ತುತಪಡಿಸಿದ್ದಾರೆ ಎನ್ನುವುದನ್ನು ಸಾಧಾರವಾಗಿ ನಿರೂಪಿಸಿದೆ.
| ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ

Continue Reading

ಅಂಕಣ

ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ರಾಜಮಾರ್ಗ ಅಂಕಣ: ಇಂದು ಶ್ರೀರಾಮ ನವಮಿ. ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

VISTARANEWS.COM


on

sri rama rajamarga column
Koo

ಈ ಕತೆಯನ್ನು ಓದಿದ ನಂತರ ನೀವು ಯಾರನ್ನೂ ದ್ವೇಷ ಮಾಡುವುದಿಲ್ಲ!

Rajendra-Bhat-Raja-Marga-Main-logo

ಇಂದು ರಾಮನವಮಿ (Sri Ram Navami). ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರವೂ ಹೌದು! ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ!

ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ ಅನ್ನುವುದು ವಾಸ್ತವ. ಅದರಲ್ಲಿಯೂ ಮೊದಲನೆಯದ್ದು ಭಾರೀ ಕಷ್ಟ.

ವಾಲ್ಮೀಕಿಯು ಕೆತ್ತಿದ್ದು ಅದ್ಭುತವಾದ ವ್ಯಕ್ತಿತ್ವ ರಾಮ

ಶ್ರೀರಾಮನ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಗಂಟೆಗಳ ಕಾಲ ಮಾತಾಡಿದ್ದೇನೆ. ಅವನ ಜೀವನದ ಪ್ರತೀ ಒಂದು ಘಟನೆ ಕೂಡ ನನಗೆ ಬೆರಗನ್ನೇ ಮೂಡಿಸುತ್ತದೆ. ಆದಿ ಕವಿ ವಾಲ್ಮೀಕಿಯು ರಾಮಾಯಣದ ಮೂಲಕ ಕೆತ್ತಿದ ರಾಮನ ಪಾತ್ರವು ಅದು ವಿಶ್ವದ ಅದ್ಭುತ!

ನನಗೆ ಅಚ್ಚರಿ ಮೂಡಿಸಿದ ಒಂದೆರಡು ಘಟನೆಗಳು

ಶ್ರೀ ರಾಮನಿಗೆ ಪಟ್ಟಾಭಿಷೇಕಕ್ಕೆ ಸಂಕಲ್ಪವನ್ನು ದಶರಥನು ತೆಗೆದುಕೊಂಡಾಗಿತ್ತು. ಅದಕ್ಕಾಗಿ ತೀವ್ರ ಹಂಬಲ ಪಟ್ಟವರು ಅಯೋಧ್ಯೆಯ ಪ್ರತೀ ಒಬ್ಬ ನಾಗರಿಕರು. ರಾಮನು ಅರಸ ಆಗಬಾರದು ಅಂತ ಒಬ್ಬರೂ ಹೇಳಿರಲಿಲ್ಲ. ಪಟ್ಟಾಭಿಷೇಕಕ್ಕೆ ದಿನವನ್ನು ನಿಗದಿ ಮಾಡಿದ ದಶರಥ ಮಹಾರಾಜನು ಇಡೀ ಅಯೋಧ್ಯಾ ನಗರವನ್ನು ಸಿಂಗಾರ ಮಾಡಿ ಪಟ್ಟಕ್ಕೆ ಸಿದ್ಧತೆ ಮಾಡಿದ್ದನು.

ಆದರೆ ಮಂಥರೆ ಎಂಬ ಅತೃಪ್ತ ಆತ್ಮವು ಕೈಕೇಯಿ ರಾಣಿಯ ತಲೆಯನ್ನು ಕೆಡಿಸಿ ರಾಮನ ಪಟ್ಟಾಭಿಷೇಕಕ್ಕೆ ವಿಘ್ನವನ್ನು ಒಡ್ಡಿದ್ದು ನಮಗೆಲ್ಲ ಗೊತ್ತಿದೆ. ಹಿಂದೆ ಯಾವುದೋ ಒಂದು ಕಾಲದಲ್ಲಿ ಕೊಟ್ಟಿದ್ದ ಎರಡು ವರಗಳನ್ನು ಕೈಕೇಯಿಯು ಆ ಮಧ್ಯರಾತ್ರಿ ದಶರಥ ಮಹಾರಾಜನಿಗೆ ಕೇಳಿದಾಗ ರಾಜನು ಅದನ್ನು ನೆರವೇರಿಸಲು ಸಾಧ್ಯವೇ ಆಗದೇ ಕುಸಿದು ಬಿದ್ದ ಕಥೆಯು ಕೂಡ ನಮಗೆ ಗೊತ್ತಿದೆ.

ಪಿತೃ ವಾಕ್ಯಂ ಶಿರೋಧಾರ್ಯಂ!

ಆಗ ಶ್ರೀ ರಾಮನು ಕಟ್ಟು ಬಿದ್ದದ್ದು ಯಾವುದೋ ಒಂದು ಗಳಿಗೆಯಲ್ಲಿ ತನ್ನ ಅಪ್ಪ ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಒಂದು ಮಾತಿಗೆ! ಅದನ್ನು ತಂದೆಯು ನೇರವಾಗಿ ಹೇಳಲು ಸಾಧ್ಯ ಆಗದೆ ಕಣ್ಣೀರನ್ನು ಸುರಿಸುತ್ತ ನೆಲಕ್ಕೆ ಒರಗಿದಾಗಲೂ ರಾಮನಿಗೆ ಅದು ಖಂಡಿತವಾಗಿಯೂ ‘ಪಿತೃ ವಾಕ್ಯಮ್ ಶಿರೋಧಾರ್ಯಮ್’!

king dasharatha

ರಾಮನು ಅರಸ ಆಗಬಾರದು ಎಂದು ರಾಣಿ ಕೈಕೇಯಿಯ ಮನಸ್ಸಿನಲ್ಲಿ ಕೂಡ ಇರಲಿಲ್ಲ. ಆದರೆ ಆಕೆಯಲ್ಲಿ ಆ ಭ್ರಮೆ ಮತ್ತು ಪುತ್ರ ವಾತ್ಸಲ್ಯವನ್ನು ಹುಟ್ಟಿಸಿದವಳು ಆ ಗೂನಜ್ಜಿ ಮಂಥರೆ!

ಅವಳು ಹೇಗೂ ಅಯೋಧ್ಯೆಯ ಪ್ರಜೆ ಆಗಿರಲಿಲ್ಲ. ಅವಳು ಕೈಕೇಯಿಯ ತಾಯಿಯ ಮನೆಯಿಂದ ಕೈಕೇಯಿ ಜೊತೆಗೆ ಬಂದವಳು. ಒಂದು ರೀತಿಯಲ್ಲಿ ಶ್ರೀರಾಮನು ಪಟ್ಟವೇರಿ ಅರಸನಾಗಲು ಆ ಅಯೋಧ್ಯೆಯಲ್ಲಿ ನೂರು ಪ್ರತಿಶತದ ಬಹುಮತದ ಮುದ್ರೆ ಇತ್ತು! ಆದರೆ ರಾಮನು ತಂದೆ ಬಹಳ ಹಿಂದೆ ತನ್ನ ರಾಣಿಗೆ ಕೊಟ್ಟ ಒಂದು ಮಾತಿಗೆ ಕಟ್ಟು ಬಿದ್ದು ಅರಸೊತ್ತಿಗೆಯನ್ನು ಎಡಗಾಲಿನಿಂದ ಒದ್ದು ನಾರು ಮುಡಿ ತೊಟ್ಟು ಕಾಡಿಗೆ ಹೋದವನು. ತನ್ನದೇ ಹಕ್ಕಿನ ರಾಜ್ಯವನ್ನು ತ್ಯಾಗ ಮಾಡಲು ಆತ ಹಿಂದೆ ಮುಂದೆ ನೋಡಲಿಲ್ಲ!

‘ನೀನು ಕೊಟ್ಟ ಮಾತಿಗೆ ನಾನು ಹೇಗೆ ಹೊಣೆ ಆಗಬೇಕು?’ ಎಂದು ಅಪ್ಪನನ್ನು ಒಂದು ಮಾತು ಕೂಡ ಶ್ರೀ ರಾಮನು ಕೇಳಲಿಲ್ಲ! ಆ ರೀತಿಯ ಸಣ್ಣ ಯೋಚನೆ ಕೂಡ ಆತನ ಮನದಲ್ಲಿ ಬರಲಿಲ್ಲ ಅಂದರೆ ಅದು ಅದ್ಭುತವೇ ಹೌದು! ಸರ್ವಾಲಂಕಾರ ಆಗಿದ್ದ ಅಯೋಧ್ಯೆಯ ನಡುವೆ ಯಾವ ವಿಷಾದ ಕೂಡ ಇಲ್ಲದೆ ಎದ್ದು ಹೋಗುವುದು ಸುಲಭ ಅಲ್ಲ! ಅದು ರಾಮನಿಗೆ ಮಾತ್ರ ಸಾಧ್ಯವಾಗುವ ನಡೆ.

ರಾಮನಿಗೆ ನೂರು ಪ್ರತಿಶತ ಜನಮತದ ಬೆಂಬಲ ಇತ್ತು!

ಆಗ ಪೂರ್ಣ ಜನಮತ ತನ್ನ ಪರವಾಗಿ ಇದ್ದಾಗ ರಾಮನು ಪಿತೃ ವಾಕ್ಯವನ್ನು ಧಿಕ್ಕರಿಸಿ ಆಡಳಿತವನ್ನು ಮಾಡಬಹುದಿತ್ತು ಎಂದು ನನಗೆ ಹಲವರು ಕೇಳಿದ್ದಾರೆ. ಆದರೆ ಆಗ ರಾಮನು ಕೇವಲ ದಶರಥನ ಮಗ ಮಾತ್ರ ಆಗಿದ್ದ. ಅರಸ ಆಗಿರಲಿಲ್ಲ ಅನ್ನುವುದು ನನ್ನ ಉತ್ತರ!

ಮುಂದೆ ರಾಣಿ ಕೈಕೇಯಿ ಕಾಡಿಗೆ ಬಂದು ತಮ್ಮ ತಪ್ಪಿಗೆ ಕ್ಷಮೆ ಕೇಳಿ ಮತ್ತೆ ಅಯೋಧ್ಯೆಗೆ ಬರಬೇಕು ಎಂದು ಎಷ್ಟು ವಿನಂತಿ ಮಾಡಿದರೂ ರಾಮಚಂದ್ರನ ಮನಸ್ಸು ಒಂದಿಷ್ಟೂ ವಿಚಲಿತ ಆಗಲಿಲ್ಲ. ಕಣ್ಣೀರು ಸುರಿಸುತ್ತಾ ಬಂದ ಭರತನನ್ನು ಧೈರ್ಯ ತುಂಬಿಸಿ ಅರಸನಾಗಲು ಮಾನಸಿಕವಾಗಿ ಸಿದ್ಧತೆ ಮಾಡಿ ಕಳುಹಿಸಿದ್ದು ಅದೇ ರಾಮ. ಈ ರೀತಿಯ ನಿರ್ಧಾರಗಳು ರಾಮನ ವ್ಯಕ್ತಿತ್ವದ ಕೈಗನ್ನಡಿ.

Sri Ramachandra

ಮುಂದೆ ಅದೇ ರಾಮನು ರಾವಣನ ವಧೆಯಾದ ನಂತರ ಅತ್ಯಂತ ವಿಧಿವತ್ತಾಗಿ ಲಂಕೆಯಲ್ಲಿ ಆತನ ಕ್ರಿಯಾಕರ್ಮ ಮುಗಿಸುತ್ತಾನೆ. ಆಗ ರಾಮ ಹೇಳಿದ ಎರಡು ಮಾತುಗಳನ್ನು ಕೇಳಿ.

ರಾಮನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ!

‘ನಾನು ದ್ವೇಷ ಮಾಡಿದ್ದು ರಾವಣನನ್ನು ಅಲ್ಲ. ಅವನ ಒಳಗಿದ್ದ ರಾವಣತ್ವವನ್ನು! ಯಾರನ್ನೇ ಆದರೂ ಮರಣದ ನಂತರ ದ್ವೇಷ ಮಾಡಬಾರದು. ರಾವಣನು ಹೇಳಿ ಕೇಳಿ ಮಹಾ ಬ್ರಾಹ್ಮಣ. ಆತನು ದೈವಭಕ್ತ. ಆದ್ದರಿಂದ ಅವನನ್ನು ಗೌರವಿಸುವುದು ನಮ್ಮ ಕರ್ತವ್ಯ!’

ಸೀತೆಯನ್ನು ಅಗ್ನಿಪರೀಕ್ಷೆ ಮಾಡಿದ್ದು ಸರಿಯಾ?

ಮುಂದೆ ಅದೇ ರಾಮಚಂದ್ರನು ಅಯೋಧ್ಯೆಗೆ ಬಂದು ಪಟ್ಟಾಭಿಷೇಕ ಆಗುವ ಮೊದಲು ತನ್ನ ಪತ್ನಿ ಸೀತೆಯನ್ನು ಅಯೋಧ್ಯೆಯ ಜನರ ಮುಂದೆ ಅಗ್ನಿ ಪರೀಕ್ಷೆಗೆ ಒಡ್ಡಿದ ವಿಷಯದ ಬಗ್ಗೆ ತುಂಬಾ ಟೀಕೆಗಳು ಇವೆ. ಅದೇ ರೀತಿ ಒಬ್ಬ ಸಾಮಾನ್ಯ ಅಗಸನ ಮಾತನ್ನು ಕೇಳಿ ತನ್ನ ಕೈ ಹಿಡಿದ ಮಡದಿ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿದ ನಿರ್ಧಾರದ ಬಗ್ಗೆ ಕೂಡ ಸಾಕಷ್ಟು ಟೀಕೆಗಳು ಬಂದಿವೆ.

ಆದರೆ ಅವೆರಡು ಕೂಡ ಶ್ರೀರಾಮನು ರಾಜಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು. ಅವು ಸೀತಾರಾಮನಾಗಿ ತೆಗೆದುಕೊಂಡ ನಿರ್ಧಾರಗಳು ಅಲ್ಲ!

ರಾಜನ ನಡೆಗಳು ಸಂಶಯಾಸ್ಪದ ಆಗಿರಬಾರದು!

ರಾಜಾರಾಮನಾಗಿ ತನ್ನ ಪ್ರತಿಯೊಬ್ಬ ಪ್ರಜೆಯ ಮುಂದೆ ಸಂಶಯಾತೀತವಾಗಿ ಇರಬೇಕು ಮತ್ತು ಕಾಣಿಸಿಕೊಳ್ಳಬೇಕು ಎನ್ನುವುದು ರಾಜನ ಆದ್ಯ ಕರ್ತವ್ಯ. ತಾನು ನೆಟ್ಟಗಿರುವುದು ಮಾತ್ರವಲ್ಲ, ತನ್ನ ನೆರಳು ಕೂಡ ನೆಟ್ಟಗಿರಬೇಕು ಎಂದು ಭಾವಿಸುವುದು ಒಬ್ಬ ರಾಜನ ಆದ್ಯತೆಯೇ ಆಗಿದೆ. ಒಬ್ಬ ಬಹು ಸಾಮಾನ್ಯ ಅಗಸನೂ ಅರಸನಿಗೆ ಒಬ್ಬ ಗೌರವಾನ್ವಿತ ಪ್ರಜೆಯೇ ಆಗಿದ್ದಾನೆ. ಆತನ ಮನದ ಸಂಶಯವನ್ನು ಕೂಡ ನಿವಾರಣೆ ಮಾಡುವುದು ಒಬ್ಬ ಅರಸನ ಕರ್ತವ್ಯ. ಹೀಗೆ ಯಾವ ಕೋನದಲ್ಲಿ ನೋಡಿದರೂ ರಾಮನ ವ್ಯಕ್ತಿತ್ವದಲ್ಲಿ ಒಂದು ಕಪ್ಪುಚುಕ್ಕೆ ಕೂಡ ಕಂಡು ಬರುವುದು ಸಾಧ್ಯ ಇಲ್ಲ. ಆದ್ದರಿಂದ ರಾಮ ಆಗುವುದು ಎಲ್ಲರಿಗೂ ಕಷ್ಟ!

ರಾವಣ ಆಗುವುದು ಕಷ್ಟವೇ!

ರಾಮ ಆಗುವುದು ಎಷ್ಟು ಕಷ್ಟವೋ ರಾವಣ ಆಗುವುದು ಅಷ್ಟೇ ಕಷ್ಟ! ಕವಿ ವಾಲ್ಮೀಕಿಯು ಕಥಾ ನಾಯಕ ರಾಮನ ಪಾತ್ರಕ್ಕೆ ಎಷ್ಟು ಶಕ್ತಿ ತುಂಬಿದ್ದಾನೋ ಖಳನಾದ ರಾವಣನ ಪಾತ್ರಕ್ಕೆ ಕೂಡ ಅಷ್ಟೇ ಶಕ್ತಿಯನ್ನು ತುಂಬಿದ್ದಾನೆ. ಆತನ ಪಾತ್ರವೂ ಅಮೋಘವೆ ಆಗಿದೆ!

ಸೀತಾ ಸ್ವಯಂವರದಲ್ಲಿ ತನಗಾದ ಅಪಮಾನದಿಂದ ಕುದ್ದು ಹೋಗಿದ್ದ ರಾವಣನ ಅಂತರ್ಯದಲ್ಲಿ ಸೀತೆಯನ್ನು ಒಮ್ಮೆ ಗೆಲ್ಲಬೇಕು ಎಂದು ಮಾತ್ರ ಇತ್ತು. ಅನುಭವಿಸುವುದು ಆಗಿರಲಿಲ್ಲ. ಅನುಭವಿಸುವ ಆಸೆ ಇದ್ದಿದ್ದರೆ ಅವನದ್ದೇ ಲಂಕೆಯಲ್ಲಿ ಏಕಾಂಗಿ ಆಗಿದ್ದ ಸೀತೆಯು ತನ್ನ ಮಾನವನ್ನು ಉಳಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ!

ಹೀಗೊಂದು ಕಥೆಯನ್ನು ನಾನು ಓದಿದ್ದು!

ಈ ಕಥೆಯು ಮೂಲ ರಾಮಾಯಣದಲ್ಲಿ ಇಲ್ಲ. ಆದರೆ ಅದ್ಭುತವಾಗಿದೆ. ಕಾಲ್ಪನಿಕ ಎಂದು ಬೇಕಾದರೂ ಕರೆಯಿರಿ. ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದಿದ್ದ ಶ್ರೀರಾಮನಿಗೆ ರಾವಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳು ಆಲ್ಲಿ ಕೇಳಿಬರುತ್ತವೆ. ಆತನು ಮಹಾ ಯೋಧ. ಆತನನ್ನು ಸೋಲಿಸುವುದು ಖಂಡಿತ ಸುಲಭದ ಕೆಲಸ ಅಲ್ಲ ಎಂದು ಗೊತ್ತಾಗುತ್ತದೆ. ಅದಕ್ಕೆ ‘ಶತ್ರು ಸಂಹಾರ’ದ ಯಾಗವನ್ನು ಮಾಡಬೇಕು ಎಂದು ಅಲ್ಲಿದ್ದ ಹಿರಿಯರು ಹೇಳುತ್ತಾರೆ.

ಲಂಕೆ ಹೇಳಿ ಕೇಳಿ ರಾಕ್ಷಸರ ನಾಡು! ಅಲ್ಲಿ ಆ ಯಾಗವನ್ನು ಮಾಡಬೇಕು ಅಂತಾದರೆ ಪುರೋಹಿತರು ಯಾರು ಸಿಗುತ್ತಾರೆ? ಆಗ ಹಿರಿಯರು ಇನ್ನೊಂದು ಉಪಾಯವನ್ನು ಹೇಳುತ್ತಾರೆ. ಲಂಕೆಯಲ್ಲಿ ಒಬ್ಬನೇ ಬ್ರಾಹ್ಮಣ ಇರುವುದು ಅದು ರಾವಣ! ಆತನಿಗೆ ಎಲ್ಲಾ ವೇದ ವಿದ್ಯೆಗಳು ಗೊತ್ತಿವೆ. ಆತ ಪುರೋಹಿತನಾಗಿ ಬರಲು ಒಪ್ಪಿದರೆ ಆದೀತು ಎಂಬ ಅಭಿಪ್ರಾಯ ಬಂತು.

ತನ್ನದೇ ವಧೆಯನ್ನು ಮಾಡುವ ‘ಶತ್ರುಸಂಹಾರ ಯಾಗ’ಕ್ಕೆ ಪುರೋಹಿತನಾಗಿ ರಾವಣನು ಬರಬಹುದೇ? ಈ ಪ್ರಶ್ನೆಯು ಎದ್ದಾಗ ನೋಡೋಣ, ಒಮ್ಮೆ ಪ್ರಯತ್ನ ಮಾಡೋಣ ಎಂಬ ಮಾತು ಬಂತು. ಆಗ ರಾವಣನಿಗೆ ಶ್ರೀರಾಮನ ಕಡೆಯಿಂದ ಗೌರವಪೂರ್ವಕ ಆಮಂತ್ರಣವು ಹೋಯಿತು. ರಾವಣ ಬರಲು ಸಾಧ್ಯ ಇಲ್ಲವೇ ಇಲ್ಲ ಎಂದು ಎಲ್ಲರೂ ನಂಬಿದ್ದರು.

ಇದನ್ನೂ ಓದಿ: ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

ಆದರೆ ಶ್ರೀರಾಮನ ಆಮಂತ್ರಣಕ್ಕೆ ತಲೆ ಬಾಗಿ ರಾವಣನು ಬಂದೇ ಬಿಟ್ಟ! ಪುರೋಹಿತನಾಗಿ ಕೂತು ‘ಶತ್ರು ಸಂಹಾರ’ ಯಾಗವನ್ನು ಪೂರ್ತಿ ಮಾಡಿದ. ಪೂರ್ಣಾಹುತಿ ಆದ ನಂತರ ಶ್ರೀರಾಮನು ಪುರೋಹಿತ ರಾವಣನ ಪಾದ ಮುಟ್ಟಿ ನಮಸ್ಕಾರ ಮಾಡಿದ!

ಆಗ ರಾವಣ ರಾಮನಿಗೆ ಕೈ ಮುಗಿದು ಹೇಳಿದ ಮಾತು ಕೇಳಿ.

“ಶ್ರೀರಾಮ, ಸೀತೆಯನ್ನು ಅಪಹರಣ ಮಾಡಿಕೊಂಡು ಬಂದ ನಂತರ ಪಾಪ ಪ್ರಜ್ಞೆಯಿಂದ ಸರಿಯಾಗಿ ನಿದ್ದೆಯು ಬರುತ್ತಿಲ್ಲ. ನಿದ್ದೆ, ವಿಶ್ರಾಂತಿ ಇಲ್ಲದೆ ದಣಿದು ಬಿಟ್ಟಿದ್ದೇನೆ. ನಿನ್ನ ಕಾಲ ಮೇಲೆ ಒಂದು ಗಳಿಗೆ ಮಲಗಬೇಕು ಅನ್ನಿಸ್ತಾ ಇದೆ! ನಿನ್ನ ಅನುಮತಿಯನ್ನು ಕೊಡುವೆಯಾ?’

ತನ್ನ ಗೆಲುವಿಗೆ ಬೇಕಾಗಿ ದೊಡ್ಡ ಯಾಗವನ್ನೇ ಮಾಡಿಕೊಟ್ಟ ರಾವಣನ ವಿನಂತಿಯನ್ನು ಶ್ರೀರಾಮನು ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಶ್ರೀರಾಮ ಅಸ್ತು ಅಂದ. ರಾವಣನು ಪುಟ್ಟ ಮಗುವಿನ ಹಾಗೆ ರಾಮನ ಕಾಲಿನ ಮೇಲೆ ಸುದೀರ್ಘ ಕಾಲ ಮೈಮರೆತು ಮಲಗಿದ. ಎಲ್ಲವನ್ನೂ ಮರೆತು ಬಿಟ್ಟನು! ತನ್ನ ಪಾಪದ ಭೀತಿಯನ್ನು ರಾಮನ ಪಾದಮೂಲದಲ್ಲಿ ಇಟ್ಟು ಎದೆಯ ಭಾರವನ್ನು ಇಳಿಸಿ ಹೊರಟು ಹೋದನು ರಾವಣ!

ಈಗ ಹೇಳಿ ರಾವಣ ಆಗುವುದು ಅಷ್ಟು ಸುಲಭವಾ?

ಇದನ್ನೂ ಓದಿ: Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Continue Reading
Advertisement
bike taxi services
ಬೆಂಗಳೂರು10 mins ago

Bike Taxi Services: ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮಕ್ಕೆ ಹೈಕೋರ್ಟ್‌ ಸೂಚನೆ

Lok Sabha Election 2024 Priyanka Gandhi announces constitutional amendment
Lok Sabha Election 202422 mins ago

Lok Sabha Election 2024: ಸಂವಿಧಾನ ತಿದ್ದುಪಡಿ ಮಾಡುವುದಾಗಿ ಘೋಷಿಸಿದ ಪ್ರಿಯಾಂಕಾ ಗಾಂಧಿ!

Lok Sabha Election 2024
Lok Sabha Election 202423 mins ago

Lok Sabha Election 2024: ಸೂರತ್‌ನಲ್ಲಿ ಕಮಲ ಪಡೆಯ ಗೆಲುವಿಗೆ ಪರೋಕ್ಷ ಕಾರಣಕರ್ತರಾದ ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಸೇರ್ಪಡೆ?

Latest50 mins ago

Voter ID: ಮತದಾನಕ್ಕೆ ವೋಟರ್ ಐಡಿ ಇಲ್ಲದಿದ್ದರೆ ಚಿಂತೆ ಬೇಡ, ಈ ದಾಖಲೆಗಳು ಸಾಕು

Road Accident
ಕರ್ನಾಟಕ51 mins ago

Road Accident: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು; ಅಪಘಾತದ ಬಳಿಕ ಹೊತ್ತಿ ಉರಿದ ಬಸ್

Himanta Biswa Sarma
ರಾಜಕೀಯ55 mins ago

Himanta Biswa Sarma: ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ

Dungarees Fashion In Summer
ಫ್ಯಾಷನ್55 mins ago

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

Voting awareness programme in Shira
ತುಮಕೂರು58 mins ago

Lok Sabha Election 2024: ಶಿರಾದಲ್ಲಿ ಕ್ಯಾಂಡಲ್‌ ಹಿಡಿದು ಮತದಾನ ಜಾಗೃತಿ

Suresh Raina
ಪ್ರಮುಖ ಸುದ್ದಿ58 mins ago

Suresh Raina : ಧೋನಿ ನೇತೃತ್ವದಲ್ಲಿ ವಿಶ್ವ ಕಪ್ ಗೆದ್ದಿರುವುದು ಪೂರ್ವ ನಿಯೋಜಿತ; ಸ್ಫೋಟಕ ಮಾಹಿತಿ ಬಹಿರಂಗ ಮಾಡಿದ ರೈನಾ!

Karnataka Weather Forecast
ಮಳೆ1 hour ago

Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು1 day ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌