TTD Mobile App: ಜಿಯೋ ಸಹಕಾರದಿಂದ ಹೊಸ ಆ್ಯಪ್​ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇಗುಲ; ಭಕ್ತರಿಗೇನು ಅನುಕೂಲ? - Vistara News

ತಂತ್ರಜ್ಞಾನ

TTD Mobile App: ಜಿಯೋ ಸಹಕಾರದಿಂದ ಹೊಸ ಆ್ಯಪ್​ ಬಿಡುಗಡೆ ಮಾಡಿದ ತಿರುಮಲ ತಿರುಪತಿ ದೇಗುಲ; ಭಕ್ತರಿಗೇನು ಅನುಕೂಲ?

ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್​ ಗೇಟ್​ ವೇಯನ್ನು ನಾವು ಹೊರತಂದಿದ್ದೇವೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ತಿಳಿಸಿದ್ದಾರೆ.

VISTARANEWS.COM


on

TTD Devasthanms Mobile App
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತಿರುಮಲ ತಿರುಪತಿ ದೇವಸ್ಥಾನವು, ಜಿಯೋ ಪ್ಲಾಟ್​ಫಾರ್ಮ್​ ಸಹಕಾರದಿಂದ ‘ಶ್ರೀ ಟಿಟಿ ದೇವಸ್ಥಾನಂ (Sri TT Devasthanams)’ ಎಂಬ ಮೊಬೈಲ್​ ಆ್ಯಪ್​​ನ್ನು (TTD Mobile App) ಬಿಡುಗಡೆ ಮಾಡಿದೆ. ತಿರುಪತಿ ದೇಗುಲ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಹೊಂದಿದೆ. ಅವರಿಗೆ ತಿಮ್ಮಪ್ಪನ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮತ್ತು ಅನುಕೂಲಕರವಾಗಿಸಿಕೊಡಲು ಈ ಆ್ಯಪ್​ ಹೊರತಂದಿದ್ದಾಗಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಅಂದಹಾಗೇ, ಜಿಯೋ ಪ್ಲಾಟ್​ಫಾರ್ಮ್​ ಈ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಈ ಆ್ಯಪ್​ ಅಭಿವೃದ್ಧಿ ಪಡಿಸಿ ದೇವಸ್ಥಾನಕ್ಕೆ ದೇಣಿಗೆಯನ್ನಾಗಿ ನೀಡಿದೆ. ತಿರುಮಲ ತಿರುಪತಿ ದೇವಸ್ಥಾನದ ಐಟಿ ವಿಭಾಗವೂ ಆ್ಯಪ್​ ಅಭಿವೃದ್ಧಿಯಲ್ಲಿ ಕೈ ಜೋಡಿಸಿತ್ತು. ಈ ಆ್ಯಪ್​​ನ್ನು ಕ್ಲೌಡ್ ಕಂಪ್ಯೂಟಿಂಗ್​ ತಂತ್ರಜ್ಞಾನ ಬಳಸಿಕೊಂಡು ರಚಿಸಲಾಗಿದೆ.
Sri TT Devasthanams ಆ್ಯಪ್​ನಲ್ಲಿ ದೇವರ ದರ್ಶನಕ್ಕೆ ಟಿಕೆಟ್ ಬುಕ್​ ಮಾಡುವ ಆಯ್ಕೆಯಿಂದ ಹಿಡಿದು, ಯಾತ್ರಾರ್ಥಿಗಳು ವಸತಿಗೂ ಬುಕ್ಕಿಂಗ್​ ಮಾಡಿಕೊಳ್ಳಬಹುದು. ದೇವರಿಗೆ ಅರ್ಜಿತ ಸೇವೆಗೆ ಕಾಯ್ದಿರಿಸುವ ಆಯ್ಕೆಯನ್ನೂ ಆ್ಯಪ್​ನಲ್ಲಿ ನೀಡಲಾಗಿದೆ. ಹೀಗಾಗಿ ಯಾರಾದರೂ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ಕೊಡುವವರು ಇದ್ದರೆ ಅಂಥವರು ಈ ಆ್ಯಪ್ ಡೌನ್​ಲೋಡ್ ಮಾಡಿಕೊಂಡರೆ ಉಪಯೋಗ ಆಗುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: NIMBUS app: ಬಿಎಂಟಿಸಿ ಬಸ್ಸುಗಳ ಓಡಾಟದ ಮಾಹಿತಿ ನೀಡುವ ಆ್ಯಪ್‌ ಈ ವಾರ ಲಭ್ಯ

ಆ್ಯಪ್​ ಬಗ್ಗೆ ಮಾಹಿತಿ ನೀಡಿದ ಟಿಟಿಡಿ ಕಾರ್ಯಕಾರಿ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ, ‘ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನದಿಂದ ಒಂದು ಡಿಜಿಟಲ್​ ಗೇಟ್​ ವೇಯನ್ನು ನಾವು ಹೊರತಂದಿದ್ದೇವೆ. ಇದರಲ್ಲಿ ದೇವರ ದರ್ಶನಕ್ಕೆ ಟಿಕೆಟ್​ ಬುಕ್ಕಿಂಗ್ ಮಾಡುವ ಜತೆ, ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆ, ಉತ್ಸವ, ಕಾರ್ಯಕ್ರಮದ ಬಗ್ಗೆಯೂ ಮಾಹಿತಿಯನ್ನು ಅಪ್​ಡೇಟ್ ಮಾಡುತ್ತಿರುತ್ತೇವೆ. ಹೀಗಾಗಿ ಭಕ್ತರಿಗೆ ಇನ್ನಷ್ಟು ಪ್ರಯೋಜನ ಆಗಲಿದೆ. ಈ ಆ್ಯಪ್​ ಹೊರತರಲು ನಮ್ಮ ದೇಗುಲದ ಐಟಿ ವಿಭಾಗ ಮತ್ತು ಜಿಯೋ ಪ್ಲಾಟ್​ಫಾರ್ಮ್​​ ಸತತ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದವು’ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

DRDO Test: ದೇಶೀಯ ತಂತ್ರಜ್ಞಾನದ ಕ್ರೂಸ್‌ ಕ್ಷಿಪಣಿಯ ಯಶಸ್ವಿ ಪರೀಕ್ಷೆ

DRDO Test: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮತ್ತೊಂದು ಯಶಸ್ಸು ಲಭಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

VISTARANEWS.COM


on

DRDO
Koo

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಗುರುವಾರ (ಏಪ್ರಿಲ್‌ 18) ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ (ITCM)ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ (DRDO Test).

ಕ್ಷಿಪಣಿ ಹಾರಾಟದ ಪರೀಕ್ಷೆಯ ಎಲ್ಲ ಹಂತಗಳು ನಿರೀಕ್ಷೆಯಂತೆ ನಡೆದವು. ಹಾರಾಟ ಮಾರ್ಗದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (Electro-Optical Tracking System) ಮತ್ತು ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿಯ ಹಾರಾಟವನ್ನು ಐಎಎಫ್ ಸು-30-ಎಂಕೆ-I (IAF Su-30-Mk-I) ವಿಮಾನದ ಮೂಲಕವೂ ಮೇಲ್ವಿಚಾರಣೆ ನಡೆಸಲಾಯಿತು. “ಕ್ಷಿಪಣಿಯು ವೇಪಾಯಿಂಟ್ ನ್ಯಾವಿಗೇಷನ್ ಬಳಸಿ ನಿರೀಕ್ಷಿತ ಗುರಿಯನ್ನು ತಲುಪಿತು ಮತ್ತು ಅತ್ಯಂತ ಕಡಿಮೆ ಎತ್ತರದ ಹಾರಾಟ ನಡೆಸಿತು” ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಅಭಿವೃದ್ಧಿ

ವಿಶೇಷ ಎಂದರೆ ಇಡೀ ಕ್ಷಿಪಣಿ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಸಂಗಸಂಸ್ಥೆಯಾದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ADE) ಅಭಿವೃದ್ಧಿಪಡಿಸಿದೆ. ಜತೆಗೆ ಇತರ ಪ್ರಯೋಗಾಲಯಗಳು ಮತ್ತು ಉದ್ದಿಮೆಗಳೂ ಈ ಮಹತ್ತರ ಕಾರ್ಯದಲ್ಲಿ ಕೈ ಜೋಡಿಸಿವೆ ಎಂದು ಮೂಲಗಳು ತಿಳಿಸಿವೆ. ಐಟಿಸಿಎಂನ ಯಶಸ್ವಿ ಪರೀಕ್ಷೆಗಾಗಿ ಡಿಆರ್‌ಡಿಒವನ್ನು ಅಭಿನಂದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, “ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪ ಯಶಸ್ವಿ ಅಭಿವೃದ್ಧಿಯು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಮುಖ ಮೈಲಿಗಲ್ಲಾಗಿದೆ” ಎಂದು ಹೇಳಿದ್ದಾರೆ. ಜತೆಗೆ ರಕ್ಷಣಾ ಇಲಾಖೆ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ.ಸಮೀರ್ ವಿ. ಕಾಮತ್ ಕೂಡ ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ʼʼಐಟಿಸಿಎಂ ಕ್ಷಿಪಣಿಯು ಉತ್ತಮ ಮತ್ತು ಹೆಚ್ಚು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಏವಿಯಾನಿಕ್ಸ್ ಮತ್ತು ಸಾಫ್ಟ್‌ವೇರ್‌ ಅನ್ನು ಸಹ ಹೊಂದಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ- ಪ್ರೈಮ್‌ ಯಶಸ್ವಿ ಪರೀಕ್ಷೆ

ಕೆಲವು ದಿನಗಳ ಹಿಂದೆ ಭಾರತವು ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಇದರ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಪರೀಕ್ಷೆಯು ಎಲ್ಲಾ ಪ್ರಯೋಗದ ಉದ್ದೇಶಗಳನ್ನು ಪೂರೈಸಿದ್ದು, ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ದೃಢೀಕರಿಸಿದೆ. ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ಹಲವಾರು ಶ್ರೇಣಿಯ ಸೆನ್ಸರ್‌ಗಳಿಂದ ಸೆರೆಹಿಡಿಯಲಾದ ಡೇಟಾಗಳು ಇದನ್ನು ದೃಢೀಕರಿಸಿವೆ.

“ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆಗೆ ಹೊಸ ಪೀಳಿಗೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ಪ್ರೈಮ್‌ನ ಯಶಸ್ವಿ ಹಾರಾಟ- ಪರೀಕ್ಷೆಯನ್ನು ಒಡಿಶಾದ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಏಪ್ರಿಲ್ 3ರಂದು ಸುಮಾರು 7 ಗಂಟೆಗೆ ನಡೆಸಿತು,” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Mission Divyastra : ಏನಿದು ಮಿಷನ್​ ದಿವ್ಯಾಸ್ತ್ರ, ಸೇನೆ ಸೇರಲಿರುವ ಹೊಸ ಅಸ್ತ್ರ? ಇಲ್ಲಿದೆ ಪೂರ್ಣ ಮಾಹಿತಿ

Continue Reading

ಪ್ರಮುಖ ಸುದ್ದಿ

ಜಗದ ಜನರ ಕೈಗಳಲ್ಲಿ ಮಿನುಗುವ ಮೊಬೈಲ್ ಫೋನುಗಳಲ್ಲೀಗ ಮೇಕ್ ಇನ್ ಇಂಡಿಯಾದ್ದೇ ಮೊಹರು!

Make in India: ಭಾರತದಲ್ಲಿ ಆ್ಯಪಲ್ ಫೋನುಗಳ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ ಎನ್ನುವುದು ವಿಶೇಷ. 2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ.

VISTARANEWS.COM


on

Make In India
Koo

| ಚೈತನ್ಯ ಹೆಗಡೆ
ಭಾರತವು ಈ ಬಾರಿ ಪುಷ್ಕಳವಾದ ಆ್ಯಪಲ್ ಬೆಳೆ ತೆಗೆದಿದೆ. ಕಾಶ್ಮೀರದಲ್ಲೋ, ಹಿಮಾಚಲದಲ್ಲೋ ಬೆಳೆಯುವ ಸೇಬಿನ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಭಾರತದಲ್ಲಿ ತಯಾರಿಕೆ ಆಗುತ್ತಿರುವ ಆ್ಯಪಲ್ ಫೋನುಗಳ ಬಗೆಗಿನ ವಿದ್ಯಮಾನ ಇದು.

ಈ ವಿದ್ಯಮಾನವು ಎರಡು ಅಂಶಗಳನ್ನು ವಿಜೃಂಭಿಸುತ್ತಿದೆ. ಮೊದಲನೆಯದು, ಚೀನಾದ ಹೊರತಾಗಿಯೂ ಏಷ್ಯದಲ್ಲಿ ತನ್ನ ಪೂರೈಕೆ ಜಾಲ ಇರಬೇಕು ಎಂದು ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿದ್ದ ಆ್ಯಪಲ್ ಕಂಪನಿಯ ನಿರ್ಧಾರ ಸರಿ ಇದೆ ಎಂಬುದನ್ನು ಈ ವಿದ್ಯಮಾನ ಸಾರುವ ಮೂಲಕ, ಚೀನಾದಿಂದ ತಮ್ಮ ಉತ್ಪಾದಕ ಘಟಕಗಳನ್ನು ಹಂತ-ಹಂತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬಯಸುತ್ತಿರುವ ಪಾಶ್ಚಾತ್ಯ ಕಂಪನಿಗಳಿಗೆ, ಭಾರತವೇ ಅದಕ್ಕೆ ಪ್ರಶಸ್ತ ಸ್ಥಳ ಎಂಬುದನ್ನು ಹೇಳುತ್ತಿದೆ. ಎರಡನೆಯದಾಗಿ, 2014ರಿಂದೀಚೆಗೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ದಾಖಲಿಸುತ್ತಿರುವ ಅತಿದೊಡ್ಡ ಯಶೋಗಾಥೆಗೆ ಈ ವಿದ್ಯಮಾನವು ಮತ್ತಷ್ಟು ಮೆರಗು ತುಂಬಿದೆ.

2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ.

2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ. ಜಗತ್ತಿನ ಎರಡನೇ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಇಂಡಿಯಾ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ವರದಿಯ ಪ್ರಕಾರ ಭಾರತದ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯ ಈ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 18,900 ಕೋಟಿ ರುಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಭಾರತ ಉತ್ಪಾದಿಸಿತ್ತು. 2023-24ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೇ? ಬರೋಬ್ಬರಿ 4,10,000 ಕೋಟಿ ರೂ!

ಇವತ್ತಿಗೆ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ ಶೇ. 97ರಷ್ಟು ಭಾರತದಲ್ಲೇ ತಯಾರಾದಂಥವುಗಳು. ಇವತ್ತು ಮೊಬೈಲ್ ಫೋನ್ ರಫ್ತು 15 ಬಿಲಿಯನ್ ಡಾಲರುಗಳ ಮೌಲ್ಯದ್ದಾಗಿ ಬೆಳೆಸಿರುವ ಭಾರತ 2014-15ರ ವೇಳೆಗೆ ರಫ್ತು ಮಾಡಿದ್ದ ಮೊಬೈಲ್ ಫೋನ್ ಮೌಲ್ಯ 1,556 ಕೋಟಿ ರೂ. ಮಾತ್ರ.

ನಿಮ್ಮ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ವಿದೇಶಿ ಕಂಪನಿಯದ್ದೇ ಆಗಿರಬಹುದು. ಆ್ಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ಶಾಮಿ ಹೀಗೆ ಫೋನ್ ಯಾವುದೇ ಆಗಿದ್ದರೂ ಉತ್ಪಾದನೆ ಭಾರತದಲ್ಲೇ ಆಗಿರುತ್ತದೆ. ಈ ಹಂತದಲ್ಲಿ ಒಂದು ಪ್ರಶ್ನೆ ಹಲವರು ಕೇಳುವುದಿದೆ. ಇವೆಲ್ಲ ಏನೇ ಇದ್ದರೂ ಭಾರತದ್ದೇ ಒಂದು ಮೊಬೈಲ್ ಫೋನ್ ಉತ್ಪಾದನೆಯ ಬ್ರ್ಯಾಂಡ್‌ ಇಲ್ಲವಲ್ಲ ಎಂದು. ಅದು ಸೆಲ್ ಫೋನ್ ಉತ್ಪಾದನೆ ಇದ್ದಿರಬಹುದು, ಕಾರು ಇಲ್ಲವೇ ಮತ್ಯಾವುದೇ ತಂತ್ರಜ್ಞಾನ ಒಳಗೊಂಡ ಉತ್ಪಾದನೆಯೇ ಇದ್ದಿರಬಹುದು…ದೇಶವೊಂದು ಹಂತ-ಹಂತಗಳಲ್ಲಿ ಒಂದು ವಲಯವನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ, ಮೊಬೈಲ್ ಉತ್ಪಾದನೆಯನ್ನೇ ತೆಗೆದುಕೊಂಡರೆ, ಆ ಕೌಶಲವನ್ನು ಅದಾಗಲೇ ಸಿದ್ಧಿಸಿಕೊಂಡಿರುವ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಮಾಡುವಂತೆ ಮಾಡುವುದು ಮೊದಲ ಹೆಜ್ಜೆ. ಆ ಕಂಪನಿಗಳು ಇಲ್ಲಿ ಬಂದು ಉದ್ಯೋಗ ಸೃಷ್ಟಿಸುತ್ತವೆ. ಆ ಕೌಶಲಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಕೆಲಸಗಾರರ ಪ್ರತಿಭಾಪುಂಜವೊಂದು ಸಿದ್ಧಗೊಳ್ಳುತ್ತದೆ. ಮೊಬೈಲ್ ಫೋನ್ ಸಿದ್ಧಪಡಿಸಲು ಬೇಕಾಗುವ ಯಂತ್ರಗಳು ಭಾರತಕ್ಕೆ ಬರುತ್ತವೆ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಜಾಲವೊಂದು ಜಗತ್ತಿನ ನಾನಾ ಕಡೆಗಳಿಂದ ಭಾರತಕ್ಕೆ ಮುಖಮಾಡುತ್ತದೆ. ಹೀಗೆಲ್ಲ ಆದ ನಂತರದಲ್ಲಿ ಭಾರತೀಯ ಕಂಪನಿಗಳೇ ತಯಾರಿಕೆಗಳಲ್ಲಿ ಮುಂದೆ ಬರುವುದಕ್ಕೆ ಅನುಕೂಲಕರ ವಾತಾವರಣ ಹುಟ್ಟುತ್ತದೆ. ಚೀನಾದಂಥ ದೇಶಗಳು ಅಲ್ಲಿನ ಏಕೀಕೃತ ರಾಜಕೀಯ ವ್ಯವಸ್ಥೆ ರೂಪಿಸಿಕೊಂಡು ಈ ಪ್ರಕ್ರಿಯೆಯನ್ನು ವೇಗಗೊಳಿಸಿದ ಹಾಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತ್ವರಿತಗೊಳಿಸಲಾಗುವುದಿಲ್ಲ.

ಅದೇನೇ ಇರಲಿ. ಮೊಬೈಲ್ ಫೋನ್ ತಯಾರಿಕಾ ವಲಯವು ಭಾರತದಲ್ಲಿ ಬೃಹತ್ ಆಗಿ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ ಅದು ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತು. ಆ್ಯಪಲ್ ಕಂಪನಿಯೊಂದೇ ಸುಮಾರು 1 ಲಕ್ಷ ಉದ್ಯೋಗಗಳನ್ನು ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯಿಂದ ಸೃಜಿಸಿತು.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

2017ರಲ್ಲಿ ಕೇಂದ್ರ ಸರ್ಕಾರವು ಪೇಸ್ಡ್ ಮನುಫ್ಯಾಕ್ಟರಿಂಗ್ ಪ್ರೊಗ್ರಾಂ ಅಡಿಯಲ್ಲಿ ಮೊಬೈಲ್ ಫೋನಿಗೆ ಸಂಬಂಧಿಸಿದ ಹೆಡ್ಸೆಟ್, ಚಾರ್ಜರ್, ಸರ್ಕಿಟ್ ಬೋರ್ಡ್ ಇತ್ಯಾದಿಗಳಿಗೆ ದೇಸಿ ಉತ್ಪಾದನೆಗೆ ಪೂರಕವಾಗುವಂತೆ ಅವಕ್ಕೆ ಬೇಕಾದ ಕಚ್ಚಾವಸ್ತುಗಳ ಸುಂಕಗಳನ್ನು ಪರಿಷ್ಕರಿಸಿತು. ಭಾರತದಲ್ಲೇ ಮೊಬೈಲ್ ಫೋನ್ ತಯಾರಿಕೆ ಘಟಕಗಳನ್ನು ಇಟ್ಟುಕೊಳ್ಳುವುದು ಕಂಪನಿಗಳಿಗೆ ಆಕರ್ಷಕವಾಗುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, 2021-22ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಪಿ ಎಲ್ ಐ ಸ್ಕೀಮ್, ಅಂದರೆ ಉತ್ಪಾದನೆ ಆಧರಿತ ಉತ್ತೇಜನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತು. ಹೆಸರೇ ಹೇಳುವಂತೆ ಉತ್ಪಾದನೆ ಹೆಚ್ಚಿಸಿಕೊಂಡಷ್ಟೂ ಕಂಪನಿಗಳಿಗೆ ಇಲ್ಲಿ ಹಣಕಾಸು ಲಾಭಗಳು ದೊರೆಯುತ್ತವೆ. ಸ್ಯಾಮ್ಸಂಗ್, ವಿಸ್ತ್ರಾನ್, ಫಾಕ್ಸಕಾನ್ ಇತ್ಯಾದಿ ಕಂಪನಿಗಳು ಈ ಪಿ ಎಲ್ ಐ ಯೋಜನೆಯಡಿ ಬಂದಿವೆ. ಐದು ವರ್ಷಗಳ ಅವಧಿಯಲ್ಲಿ, ಮೊಬೈಲ್ ಫೋನುಗಳ ಉತ್ಪಾದನೆ ವಿಭಾಗಲ್ಲಿ ಇದರಿಂದ ಎರಡು ಲಕ್ಷ ನೇರ ಉದ್ಯೋಗಗಳು ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ.

ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

ಈ ವಿತ್ತೀಯ ವರ್ಷದಲ್ಲಿ ಆ್ಯಪಲ್ ಕಂಪನಿಯ ಚೀನಾ ಘಟಕದಿಂದ ಆಗುತ್ತಿರುವ ಸಾಗಣೆಯಲ್ಲಿ ಕುಸಿತ ಕಂಡಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡಿರುವುದು ಗಮನಾರ್ಹ. ಭಾರತದಲ್ಲಿ ಯಾವುದೇ ಕಂಪನಿಗೆ ಆಗುವ ಶ್ರೇಯೋವೃದ್ಧಿ ಅದು ಇಲ್ಲಿ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಆ್ಯಪಲ್ ಅದಾಗಲೇ ತನ್ನ ಫೋನಿನಲ್ಲಿ ಬಳಸುವ ಕೆಮರಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸುವುದಕ್ಕೆ ಟಾಟಾದ ಟೈಟಾನ್ ಸಮೂಹ ಹಾಗೂ ಮುರುಗಪ್ಪ ಸಮೂಹಗಳೊಂದಿಗೆ ಮಾತುಕತೆಯಲ್ಲಿರುವುದಾಗಿ ವರದಿಯಾಗಿದೆ. ಮೊಬೈಲ್ ಫೋನ್ ವಹಿವಾಟು ಎಂದಷ್ಟೇ ಅಲ್ಲದೇ, ಭಾರತದಲ್ಲಿ ನವೀಕೃತ ಇಂಧನ ಮೂಲಗಳ ವಿಸ್ತರಣೆಗೆ ಸಹಕರಿಸಿ ಇಂಗಾಲ ವಿಸರ್ಜನೆ ತಗ್ಗಿಸಿದ ಶ್ರೇಯಸ್ಸು ಪಡೆಯುವುದಕ್ಕಾಗಿ ಆ್ಯಪಲ್ ಕಂಪನಿಯು ಕ್ಲೀನ್ ಮ್ಯಾಕ್ಸ್ ಎಂಬ ನವೀಕೃತ ಇಂಧನಕ್ಕೆ ಸಂಬಂಧಿಸಿದ ಉದ್ದಿಮೆ ಜತೆ ಕೈಜೋಡಿಸಿದೆ. ಭಾರತದಾದ್ಯಂತ 6 ಕೈಗಾರಿಕಾ ಘಟಕಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ, 14.4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಪ್ರಯತ್ನ ಹುಟ್ಟು ಹಾಕಿದೆ.

ಮೊಬೈಲ್ ಫೋನುಗಳ ಉತ್ಪಾದನೆ ಮತ್ತು ವಹಿವಾಟುಗಳಲ್ಲಿ ಆಗುತ್ತಿರುವ ಈ ಅಭಿವೃದ್ಧಿ ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ ವಲಯಕ್ಕೆ ಹೊಸ ಸಾಮರ್ಥ್ಯ ಕೊಟ್ಟಿದೆ. ಮೊಬೈಲ್ ಫೋನುಗಳ ರಫ್ತಿನಲ್ಲಾಗಿರುವ ಹೆಚ್ಚಳವು ಒಟ್ಟಾರೆ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬಿಂಬಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 23.55 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತಾಗಿದ್ದರೆ ಈ ಬಾರಿ ಅದು 29.12 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ.

ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!

ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯಾ ಎಂದು ಕೇಳುವವರು ನೋಡಲೇಬೇಕಾದ ಯಶೋಗಾಥೆ ಭಾರತದ ಮೊಬೈಲ್ ಫೋನುಗಳ ಉತ್ಪಾದನೆಯದ್ದು.

Continue Reading

ಪ್ರಮುಖ ಸುದ್ದಿ

Best Airport: ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ; ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿದ ದೋಹಾದ ಹಮದ್

Best Airport ಪ್ರತಿವರ್ಷ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ ನ ಪಟ್ಟಿಯಲ್ಲಿ ಸಿಂಗಾಪುರ್ ಚಾಂಗಿ ಮೊದಲ ಸ್ಥಾನದಲ್ಲಿದ್ದರೆ ದೋಹಾದ ಹಮದ್ ಎರಡನೇ ಸ್ಥಾನದಲ್ಲಿರುತ್ತಿತ್ತು. ಆದರೆ 2024ರ ಅವಾರ್ಡ್ ಪಟ್ಟಿಯಲ್ಲಿ ದೋಹಾದ ಹಮದ್ ಮೊದಲ ಸ್ಥಾನ ಪಡೆದುಕೊಂಡು ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿದೆ.

VISTARANEWS.COM


on

Best Airport
Koo

ಬೆಂಗಳೂರು: ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್ ನ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರತಿವರ್ಷ ಅತ್ಯುತ್ತಮ ವಿಮಾನ ನಿಲ್ದಾಣ (Best Airport) ಎಂದು ಬಿರುದು ಪಡೆದುಕೊಳ್ಳುತ್ತಿರುವ ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿ ದೋಹಾದ ಹಮದ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಪ್ರತಿವರ್ಷ ಸ್ಕೈಟ್ರಾಕ್ಸ್ ವರ್ಲ್ಡ್ ಏರ್ ಪೋರ್ಟ್ ಅವಾರ್ಡ್‌ನ ಪಟ್ಟಿಯಲ್ಲಿ ಸಿಂಗಾಪುರ್ ಚಾಂಗಿ ಮೊದಲ ಸ್ಥಾನದಲ್ಲಿದ್ದರೆ ದೋಹಾದ ಹಮದ್ ಎರಡನೇ ಸ್ಥಾನದಲ್ಲಿರುತ್ತಿತ್ತು. ಆದರೆ 2024ರ ಅವಾರ್ಡ್ ಪಟ್ಟಿಯಲ್ಲಿ ದೋಹಾದ ಹಮದ್ ಮೊದಲ ಸ್ಥಾನ ಪಡೆದುಕೊಂಡು ಸಿಂಗಾಪುರ್ ಚಾಂಗಿಯನ್ನು ಹಿಂದಿಕ್ಕಿದೆ.

ದೋಹಾದ ಹಮದ್ ವಿಮಾನ ನಿಲ್ದಾಣದ ಸಿಇಒ ಬದರ್ ಮುಹಮ್ಮದ್ ಅಲ್ ಮೀರ್ ಅವರು ತಮ್ಮ ಗೆಲುವಿನ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ,“ಈ ವರ್ಷ ಎಚ್ ಐಎ ತನ್ನ ಕಾರ್ಯಾಚರಣೆಯ ಮೈಲಿಗಲ್ಲು 10ನೇ ವರ್ಷವನ್ನು ಆಚರಿಸುತ್ತಿದೆ ಮತ್ತು ಪ್ರಯಾಣಿಕರು ನಮ್ಮನ್ನು 3 ನೇ ಬಾರಿ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಮತ ಚಲಾಯಿಸಿದ್ದಾರೆ ಎಂದು ನಮಗೆ ನಿಜವಾಗಿಯೂ ಗೌರವವಿದೆ” ಎಂದು ಹೇಳಿದ್ದಾರೆ.

ಹಾಗೇ “ಸ್ಕೈಟ್ರಾಕ್ಸ್ ಪ್ರತಿಷ್ಠಿತ ಪ್ರಶಸ್ತಿಗಳು ನಮ್ಮ ಉದ್ಯೋಗಿಗಳ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ಅವರು ಪ್ರತಿದಿನ ನಮ್ಮ ಪ್ರಮುಖ ಸ್ಥಾನವನ್ನು ನವೀನಗೊಳಿಸಲು ಮತ್ತು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಾರೆ” ಎಂದು ಅವರು ತಿಳಿಸಿದ್ದಾರೆ.

ದೋಹಾದ ಹಮದ್ ಮತ್ತು ಸಿಂಗಾಪುರದ ಚಾಂಗಿ ನಂತರದ ಮೂರನೇ ಸ್ಥಾನವನ್ನು ಸಿಯೋಲ್ ಇಂಚಿಯಾಬ್ ವಿಮಾನ ನಿಲ್ದಾಣ ಪಡೆದುಕೊಂಡಿದೆ. ಟೋಕಿಯಾದ ಅವಳಿಗಳಾದ ಹನೆಡಾ ಮತ್ಯು ನರಿಟಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದೆ. ಕ್ರೈಸ್ಟ್ಚರ್ಚ್ 8ನೇ ಸ್ಥಾನದಲ್ಲಿದ್ದರೆ ವೆಲ್ಲಿಂಗ್ಟನ್ 10ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ವಿಮಾನ ನಿಲ್ದಾಣ 51ನೇ ಸ್ಥಾನದಿಂದ 45 ನೇ ಸ್ಥಾನಕ್ಕೆ ಜಿಗಿದಿದೆ.

ಕಳೆದ ವರ್ಷದಲ್ಲಿ ಸಿಂಗಾಪುರದ ಚಾಂಗಿ ಮೊದಲ ಸ್ಥಾನದಲ್ಲಿದ್ದರೆ ದೋಹಾ ಹಮದ್ ಎರಡನೇ ಸ್ಥಾನದಲ್ಲಿತ್ತು. ಟೋಕಿಯೊ ಹನೇಡಾ 3ನೇ ಸ್ಥಾನ ಹಾಗೂ ಸಿಯೋಲ್ ಇಂಚಿಯಾನ್ 4ನೇ ಸ್ಥಾನದಲ್ಲಿತ್ತು. ಪ್ಯಾರಿಸ್ ಸಿಡಿಜಿ 5ನೇ ಸ್ಥಾನದಲ್ಲಿದ್ದರೆ ಟೋಕಿಯೋ ನರಿಟಾ 9ನೇ ಸ್ಥಾನವನ್ನು ಪಡೆದುಕೊಂಡಿತ್ತು.

ಭಾರತದ ವಿಮಾನ ನಿಲ್ದಾಣಕ್ಕೆ ಸಿಕ್ಕ ಪ್ರಶಸ್ತಿಗಳು :

ದೇಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ. ಮತ್ತು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ’ ಎಂಬ ಬಿರುದನ್ನು ಪಡೆದುಕೊಂಡಿದೆ. ಹೈದರಾಬಾದ್ ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಸೇವೆ ’ ಎಂದು ಕರೆಯಲ್ಪಟ್ಟಿದೆ.

ಇದನ್ನೂ ಓದಿ: Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ಪಡೆದಿದೆ. ಕಳೆದ ವರ್ಷ 69 ಸ್ಥಾನದಲ್ಲಿತ್ತು, ಈ ವರ್ಷ 59ನೇ ಸ್ಥಾನ ಪಡೆದುಕೊಂಡಿದೆ.

Continue Reading

ದೇಶ

Samsung: ಎಐ ಫೀಚರ್‌ಗಳ ನಿಯೋ ಕ್ಯೂಎಲ್ಇಡಿ 8ಕೆ, 4ಕೆ, ಒಎಲ್ಇಡಿ ಟಿವಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್; ದರ ಎಷ್ಟು?

Samsung: ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಬುಧವಾರ ನಡೆದ ‘ಅನ್‌ಬಾಕ್ಸ್‌ & ಡಿಸ್ಕವರ್‌’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಒಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡಲಾಯಿತು.

VISTARANEWS.COM


on

Samsung launches Neo QLED 8K 4K OLED TV in India
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್‌ಸಂಗ್ (Samsung) ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಪ್ರಾರಂಭಿಸಿದೆ.

ಬೆಂಗಳೂರಿನ ಸ್ಯಾಮ್‌ಸಂಗ್ ಒಪೆರಾ ಹೌಸ್‌ನಲ್ಲಿ ಬುಧವಾರ ನಡೆದ ‘ಅನ್‌ಬಾಕ್ಸ್‌ & ಡಿಸ್ಕವರ್‌’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡಲಾಯಿತು.

2024ರ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳ ಶ್ರೇಣಿಯು ಅತ್ಯಂತ ಶಕ್ತಿಶಾಲಿ ಎಐ ಫೀಚರ್‌ಗಳನ್ನು ಹೊಂದಿದ್ದು, ನಿಮ್ಮ ಮನೆಯಲ್ಲಿ ಮನರಂಜನೆ ಪಡೆಯುವ ಅನುಭವವನ್ನು ಅದ್ಭುತಗೊಳಿಸಲಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್‌ ಸೇವೆ ಆರಂಭ

ಈ ಕುರಿತು ಸ್ಯಾಮ್‌ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್ ಮಾತನಾಡಿ, ಸ್ಯಾಮ್‌ಸಂಗ್ ಗ್ರಾಹಕರ ಜೀವನಶೈಲಿಯಲ್ಲಿ ಬದಲಾವಣೆ ತರಲು ತನ್ನ ಉನ್ನತ ವರ್ಗದ ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಅದ್ಭುತ ಶಕ್ತಿಯನ್ನು ಹೊಂದಿಸುತ್ತಿದೆ. ನಾವು ನಮ್ಮ ಗ್ರಾಹಕರಿಗೆ ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ನೀಡಲು ಎಐ ಫೀಚರ್‌ಗಳನ್ನು ನೀಡುತ್ತಿದ್ದೇವೆ. ನಮ್ಮ 2024 ರ ಶ್ರೇಣಿಯ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳು ಪ್ರತೀ ಮನೆಯ ಮನರಂಜನೆಯ ಅನುಭವವನ್ನು ಅದ್ಭುತಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಮಾತನಾಡಿ, ದೃಶ್ಯ ವೀಕ್ಷಣೆ ಮತ್ತು ಧ್ವನಿ ಗುಣಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲೆಂದೇ ವಿನ್ಯಾಸಗೊಳಿಸಲಾಗಿರುವ ಎಐ ಟಿವಿಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಹೊಸ ಶ್ರೇಣಿಯ ಎಐ-ಚಾಲಿತ 8ಕೆ ನಿಯೋ ಕ್ಯೂಎಲ್ಇಡಿಗಳು, 4K ನಿಯೋ ಕ್ಯೂಎಲ್ಇಡಿಗಳು ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆಯ ಮೂಲಕ ನಾವು ಭಾರತದಲ್ಲಿ ನಮ್ಮ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸುವ ವಿಶ್ವಾಸ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್‌ನ ಪ್ರಮುಖ ಟಿವಿ ಆಗಿರುವ ನಿಯೋ ಕ್ಯೂಎಲ್ಇಡಿ 8ಕೆ ಟಿವಿಯು ಅತ್ಯಾಧುನಿಕ ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್‌ ಹೊಂದಿದೆ. ಇದು ಎಐ ಟಿವಿ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್‌ಪಿಯು) ಅನ್ನು ಹೊಂದಿದೆ, ಅದು ಅದರ ಹಿಂದಿನ ಪ್ರೊಸೆಸರ್ ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ, ಜತೆಗೆ ನ್ಯೂರಲ್ ನೆಟ್‌ವರ್ಕ್‌ಗಳಲ್ಲಿ 64 ರಿಂದ 512 ವರೆಗೆ ಎಂಟು ಪಟ್ಟು ಹೆಚ್ಚಳವಾಗಿದ್ದು ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಕಾಣಿಸುವ ಮೂಲಕ ಗ್ರಾಹಕರಿಗೆ ಅಸಾಧಾರಣ ವೀಕ್ಷಣಾ ಅನುಭವ ಒದಗಿಸಲಿದೆ.

2024ರ ನಿಯೋ ಕ್ಯೂಎಲ್ಇಡಿ 8ಕೆಯಲ್ಲಿ ಲಭ್ಯವಿರುವ ಹಲವು ಎಐ ಫೀಚರ್‌ಗಳು

ಎಐ ಪಿಚ್ಚರ್ ಟೆಕ್ನಾಲಜಿ: ಮುಖಭಾವ ಮತ್ತು ಇತರ ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಅತ್ಯುತ್ತಮವಾದ ಸ್ಪಷ್ಟತೆ ಮತ್ತು ಸಹಜತೆಯೊಂದಿಗೆ ಇದು ನೋಡುಗರಿಗೆ ದಾಟಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Kodagu News: ಶ್ರದ್ಧಾ-ಭಕ್ತಿಯಿಂದ ಜರುಗಿದ ಮಳೂರು ಶ್ರೀ ಬೆಳ್ಳಾರಿಕಮ್ಮ ದೇವಾಲಯದ ಜಾತ್ರಾ ಮಹೋತ್ಸವ

ಎಐ ಅಪ್‌ಸ್ಕೇಲಿಂಗ್ ಪ್ರೊ: ಈ ವೈಶಿಷ್ಯ್ಟವು ಎಲ್ಲಾ ಕಂಟೆಂಟ್ ಅನ್ನು 8ಕೆ ಡಿಸ್‌ಪ್ಲೇಗೆ ಸರಿ ಹೊಂದಿಸುತ್ತದೆ.

ಎಐ ಮೋಷನ್ ಎನ್ ಹ್ಯಾನ್ಸರ್ ಪ್ರೊ- ಕ್ರೀಡೆಯಂತಹ ತೀವ್ರ ಭಾವನೆ ಉದ್ದೀಪಿಸುವ ಕಂಟೆಂಟ್ ಗಳನ್ನು ತುಂಬಾ ಸ್ಪಷ್ಟವಾಗಿ ಕಾಣಿಸಲು ಅತ್ಯಾಧುನಿಕ ಮೋಷನ್ ಡಿಟೆಕ್ಷನ್ ಅಲ್ಗಾರಿದಮ್ ಅನ್ನು ಈ ಫೀಚರ್ ಬಳಸುತ್ತದೆ. ಈ ಮೂಲಕ ಬಳಕೆದಾರರಿಗೆ ಪ್ರತಿ ಕ್ಷಣವನ್ನು ಆನಂದಿಸಲು ಸಹಾಯ ಮಾಡುತ್ತದೆ. ಪಂದ್ಯದ ಸಮಯದಲ್ಲಿ, ಯಾವುದೇ ಅಸ್ಪಷ್ಟತೆ ಇಲ್ಲದೆ ಚೆಂಡನ್ನು ನೋಡಲು ಇದು ಸಹಾಯ ಮಾಡುತ್ತದೆ. ಬಳಕೆದಾರರು ಕ್ರೀಡಾಂಗಣದಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವ ಅನುಭವವನ್ನು ಹೊಂದಲಿದ್ದಾರೆ.

ರಿಯಲ್ ಡೆಪ್ತ್ ಎನ್‌ಹಾನ್ಸರ್ ಪ್ರೊ ವೈಶಿಷ್ಟ್ಯವು ಚಿತ್ರಗಳಿಗೆ ತೀವ್ರತೆಯನ್ನು ಒದಗಿಸುತ್ತದೆ ಮತ್ತು ವೀಕ್ಷಕರು ದೃಶ್ಯದಲ್ಲಿ ಮುಳುಗಿಹೋಗುವಂತೆ ಮಾಡುತ್ತದೆ.

ಎಐ ಸೌಂಡ್ ಟೆಕ್ನಾಲಜಿ– ಇದು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊ ಮೂಲಕ ನಿಖರವಾದ ಆಡಿಯೊವನ್ನು ಒದಗಿಸಲು ಸಹಾಯ ಮಾಡುತ್ತದೆ. ಹಿನ್ನೆಲೆ ಶಬ್ದಗಳನ್ನು ಗ್ರಹಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ವಾಲ್ಯೂಮ್ ಅನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸುತ್ತದೆ. ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊ ತೆರೆಯ ಮೇಲಿನ ದೃಶ್ಯಕ್ಕೆ ಸೂಕ್ತವಾಗಿ ಧ್ವನಿಯನ್ನು ಸಿಂಕ್ ಮಾಡುವ ಮೂಲಕ ಆಡಿಯೊ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ. ಜತೆಗೆ ಹೆಚ್ಚು ಆಕರ್ಷಕ ಮತ್ತು ಆಹ್ಲಾದಕರ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ. ಅಡಾಪ್ಟಿವ್ ಸೌಂಡ್ ಪ್ರೊ ಆಡಿಯೊವನ್ನು ಕಂಟೆಂಟ್ ಮತ್ತು ಕೋಣೆಗೆ ತಕ್ಕಂತೆ ಅತಿ ಬುದ್ಧಿವಂತಿಕೆಯಿಂದ ಹೊಂದಿಸುವ ಮೂಲಕ ಆಡಿಯೊ ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ ಮತ್ತು ಶ್ರೀಮಂತಗೊಳಿಸುತ್ತದೆ.

ಎಐ ಆಟೋ ಗೇಮ್ ಮೋಡ್- ಇದು ಆಟ ಮತ್ತು ಆಟದ ಪ್ರಕಾರ ಎರಡನ್ನೂ ಗುರುತಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ದೃಶ್ಯದ ಗುಣಮಟ್ಟ ಮತ್ತು ಧ್ವನಿ ಗುಣಮಟ್ಟದ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.

ಎಐ ಕಸ್ಟಮೈಸೇಷನ್ ಮೋಡ್- ಇದು ಬಳಕೆದಾರರ ಆದ್ಯತೆಯ ಆಧಾರದ ಮೇಲೆ ಕಂಟೆಂಟ್ ಅನ್ನು ಆಧರಿಸಿ ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಚಿತ್ರವನ್ನು ಸರಿಹೊಂದಿಸುತ್ತದೆ.

ಎಐ ಎನರ್ಜಿ ಮೋಡ್– ಇದು ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿದ್ಯುತ್ ಉಳಿಸುತ್ತದೆ.

ನಿಯೋ ಕ್ಯೂಎಲ್ಇಡಿ 8ಕೆ ಟಿವಿ: ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಕ್ಯೂಎನ್900ಡಿ ಮತ್ತು ಕ್ಯೂಎನ್800ಡಿ ಎರಡು ಮಾದರಿಗಳಲ್ಲಿ ಲಭ್ಯವಿದೆ. 65, 75 ಮತ್ತು 85 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.

ನಿಯೋ ಕ್ಯೂಎಲ್ಇಡಿ 4ಕೆ ಟಿವಿ: ನಿಯೋ ಕ್ಯೂಎಲ್ಇಡಿ 4ಕೆ ಟಿವಿ ಕ್ಯೂಎನ್85ಡಿ ಮತ್ತು ಕ್ಯೂಎನ್90ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. 55, 65, 75, 85 ಮತ್ತು 98 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.

ಸ್ಯಾಮ್‌ಸಂಗ್ ವಿಶ್ವದಲ್ಲಿಯೇ ಮೊತ್ತ ಮೊದಲ ಗ್ಲೇರ್ ಫ್ರೀ ಓಎಲ್ಇಡಿ ಟಿವಿಯನ್ನು ಸಹ ಪರಿಚಯಿಸುತ್ತಿದೆ. ಇದು ಯಾವುದೇ ಬೆಳಕಿನ ಸ್ಥಿತಿಯಲ್ಲಿ ಸ್ಪಷ್ಟವಾದ ಚಿತ್ರಣವನ್ನು ತೋರಿಸುತ್ತದೆ. ಅನಗತ್ಯ ಪ್ರತಿಫಲನವನ್ನು ತೆಗೆದುಹಾಕುತ್ತದೆ. ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಯಂತೆಯೇ ಅದೇ ಅಸಾಧಾರಣ ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತದೆ. ಸ್ಯಾಮ್‌ಸಂಗ್‌ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್‌ಹಾನ್ಸರ್ ಮತ್ತು ಓಎಲ್ಇಡಿ ಎಚ್ ಡಿ ಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ದೃಶ್ಯಗಳ ಗುಣಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯುತ್ತವೆ.

ಹೆಚ್ಚುವರಿಯಾಗಿ, ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಸುಗಮ ಚಲನೆ ಮತ್ತು ತ್ವರಿತ ರೆಸ್ಪೋನ್ಸ್ ರೇಟ್ ಒದಗಿಸುತ್ತದೆ. ಅದರಿಂದಾಗಿಯೇ ಸ್ಯಾಮ್‌ಸಂಗ್ ಓಎಲ್ಇಡಿ ಗೇಮಿಂಗ್‌ಗೆ ಅತ್ಯುತ್ತಮ ಆಯ್ಕೆಯಾಗಿದೆ. ನಯವಾದ ಸುಂದರ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ವೀಕ್ಷಣೆಯ ಸ್ಥಳವನ್ನು ಹೆಚ್ಚು ನೀಡುತ್ತವೆ. ಸ್ಯಾಮ್‌ಸಂಗ್ ಓಎಲ್ಇಡಿ ಟಿವಿ ಎಸ್95ಡಿ ಮತ್ತು ಎಸ್90ಡಿ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. 55, 65, 77 ಮತ್ತು 83 ಇಂಚುಗಳ ಗಾತ್ರದಲ್ಲಿ ದೊರೆಯುತ್ತದೆ.

ಇದನ್ನೂ ಓದಿ: Karnataka Weather: ಬಾಗಲಕೋಟೆ, ಬೆಳಗಾವಿ, ವಿಜಯಪುರದಲ್ಲಿ ಇಂದು ರಾತ್ರಿ ಗುಡುಗು ಸಹಿತ ಮಳೆ ಸಾಧ್ಯತೆ

ಸ್ಯಾಮ್‌ಸಂಗ್ ಭಾರತೀಯ ಗ್ರಾಹಕರಿಗೆ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಹಲವಾರು ಸೇವೆಗಳನ್ನು ಒದಗಿಸಲು ಪ್ರಾದೇಶಿಕಗೊಳಿಸಿದ ಸ್ಮಾರ್ಟ್ ಸೌಲಭ್ಯಗಳನ್ನು ನೀಡುತ್ತದೆ.

2024ರ ನಿಯೋ ಕ್ಯೂಎಲ್ಇಡಿ 8ಕೆ, ಹೊಸ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಸೆಟಪ್ ಮಾಡಿದ ತಕ್ಷಣ ಸ್ಮಾರ್ಟ್ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಹೊಸ ಸ್ಯಾಮ್‌ಸಂಗ್ ಟಿವಿಯನ್ನು ಆನ್ ಮಾಡಿದ ತಕ್ಷಣ ಟಿವಿ ಗ್ರಹಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ನೆಟ್‌ವರ್ಕ್‌ಗಳು ಮತ್ತು ಸಾಧನಗಳಿಗೆ ಸಂಪರ್ಕ ನೀಡುತ್ತದೆ. ಜತೆಗೆ ಈ ಎಲ್ಲವನ್ನೂ ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ನೋಟಿಫಿಕೇಷನ್ ಕಳುಹಿಸುವ ಮೂಲಕ ತಿಳಿಸುತ್ತದೆ. ಪ್ರಯಾಸವಿಲ್ಲದ ಸೆಟಪ್ ವ್ಯವಸ್ಥೆಯು ಮನೆಯಲ್ಲಿರುವ ಎಲ್ಲಾ ಸ್ಯಾಮ್‌ಸಂಗ್ ಸಾಧನಗಳಿಗೆ ಹಾಗೂ ಥರ್ಡ್-ಪಾರ್ಟಿ ಉಪಕರಣಗಳು ಮತ್ತು ಐಓಟಿ ಸಾಧನಗಳಿಗೂ ಸಂಪರ್ಕ ಸಾಧಿಸುತ್ತದೆ.

ಸ್ಯಾಮ್‌ಸಂಗ್‌ನ 2024ರ ಟಿವಿ ಶ್ರೇಣಿಯು ಬಳಕೆದಾರರ ಸ್ಮಾರ್ಟ್‌ಫೋನ್‌ಗಳೊಂದಿಗೆ ಅತ್ಯುತ್ತಮ ಏಕೀಕರಣ ಸಾಧಿಸಲಿದ್ದು, ಈ ವಿಚಾರದಲ್ಲಿ ಮತ್ತೊಂದು ಎತ್ತರವನ್ನು ಸಾಧಿಸಿದೆ. ಸ್ಮಾರ್ಟ್ ಮೊಬೈಲ್ ಕನೆಕ್ಟ್ ಫೀಚರ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಯ ಬಳಿ ತಂದರೆ ಸಾಕು, ಅದು ಫೋನ್ ಅನ್ನು ಟಿವಿ ಮತ್ತು ಸಂಪರ್ಕಿತ ಗೃಹೋಪಯೋಗಿ ಉಪಕರಣಗಳಿಗೆ ಸಾರ್ವತ್ರಿಕ ರಿಮೋಟ್ ಆಗಿ ಪರಿವರ್ತನೆ ಹೊಂದುತ್ತದೆ.

ಬೆಲೆ ಮತ್ತು ಮುಂಗಡ ಬುಕ್ಕಿಂಗ್‌ ಆಫರ್ ಕುರಿತು

ಪ್ರೀ-ಆರ್ಡರ್ ಕೊಡುಗೆಯ ಭಾಗವಾಗಿ, ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಗ್ಲೇರ್ ಫ್ರೀ ಓಎಲ್ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ರೂ. 79990 ಮೌಲ್ಯದ ಉಚಿತ ಸೌಂಡ್‌ಬಾರ್, ರೂ. 59990 ಮೌಲ್ಯದ ಫ್ರೀಸ್ಟೈಲ್, ರೂ.29990 ಮೌಲ್ಯದ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಅನ್ನು ಅವಲಂಬಿಸಿರುತ್ತದೆ ಮತ್ತು ಏಪ್ರಿಲ್ 30, 2024ರವರೆಗೆ ಲಭ್ಯವಿರುತ್ತದೆ. ಗ್ರಾಹಕರು ಮಾಡೆಲ್ ಅನ್ನು ಅವಲಂಬಿಸಿ 20% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಬೆಲೆ ರೂ. 319990 ರಿಂದ ಪ್ರಾರಂಭ, ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯು ಬೆಲೆ ರೂ. 139990 ರಿಂದ ಪ್ರಾರಂಭ, ಸ್ಯಾಮ್‌ಸಂಗ್‌ನ ಒಎಲ್ಇಡಿ ಶ್ರೇಣಿಯು ಬೆಲೆ ರೂ. 164990 ರಿಂದ ಪ್ರಾರಂಭವಾಗುತ್ತದೆ.

Continue Reading
Advertisement
ಕರ್ನಾಟಕ5 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ5 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ5 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ5 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ6 hours ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 20246 hours ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ6 hours ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ6 hours ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ6 hours ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ13 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ24 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌