Rajinikanth: ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಒಳಗಾಗಿದ್ದ ನನ್ನನ್ನು ಬದಲಾಯಿಸಿದ್ದೇ ನನ್ನ ಪತ್ನಿ: ರಜನಿಕಾಂತ್‌ - Vistara News

ಕಾಲಿವುಡ್

Rajinikanth: ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಒಳಗಾಗಿದ್ದ ನನ್ನನ್ನು ಬದಲಾಯಿಸಿದ್ದೇ ನನ್ನ ಪತ್ನಿ: ರಜನಿಕಾಂತ್‌

ರಜನಿಕಾಂತ್ (Rajinikanth) ಖಾಸಗಿ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ನಾನು ಮದ್ಯಪಾನ ಮತ್ತು ಸಿಗರೇಟಿನ ವ್ಯಸನಿಯಾಗಿದ್ದೆ ಎಂದು ರಜಿನಿಕಾಂತ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

VISTARANEWS.COM


on

Rajinikanth my wife Latha's love changed me
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ದುಶ್ಚಟಗಳಿಗೆ ದಾಸರಾಗಿದ್ದು ತಮ್ಮ ಪತ್ನಿ ಲತಾ ಅವರೇ ನನ್ನನ್ನು ಬದಲಾಯಿಸಿದ್ದರು ಎಂದು ಖಾಸಗಿ ಜೀವನದ ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವೈ ಜಿ ಮಹೇಂದ್ರನ್ ಅವರ ಚಾರುಕೇಸಿ ನಾಟಕದ 50ನೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ರಜನಿಕಾಂತ್‌. ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ʻʻವೈ ಜಿ ಮಹೇಂದ್ರನ್ ಅವರು ಲತಾ ಅವರನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದ. ಲತಾ ಅವರು ನನ್ನ ಜೀವನದಲ್ಲಿ ಬಂದ ಮೇಲೆ ಹಲವಾರು ಬದಲಾವಣೆಗಳಾಗಿವೆ. ಕಂಡಕ್ಟರ್ ಆಗಿದ್ದಾಗ, ನಟನಾದ ನಂತರವೂ ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಬಿದ್ದಿದ್ದೆ. ಅದೆಲ್ಲವನ್ನು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ನಾನು ಮದ್ಯಪಾನ ಮತ್ತು ಸಿಗರೇಟಿನ ವ್ಯಸನಿಯಾಗಿದ್ದೆ ಎಂದು ರಜಿನಿಕಾಂತ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ʻʻನಾನು ವಿಪರೀತ ಮಾಂಸ ತಿನ್ನುತ್ತಿದೆ. ದಿನಕ್ಕೆ ಎರಡು ಹೊತ್ತಾದರೂ ಮಾಂಸ ಬೇಕಿತ್ತು. ಮದ್ಯ ಸೇವಿಸುತ್ತಿದ್ದೆ. ಸಿಗರೇಟು ಸೇದುತ್ತಿದ್ದೆ. ಯಾವುದೂ ನನ್ನ ಕಂಟ್ರೋಲ್‌ನಲ್ಲಿ ಇರಲಿಲ್ಲ. ಮದುವೆ ನಂತರದ ದಿನಗಳಲ್ಲಿ ಅವುಗಳನ್ನು ಕಡಿಮೆ ಮಾಡಿಸಿದ್ದು ಮತ್ತು ಸಂಪೂರ್ಣ ಬಿಡುವಂತೆ ಮಾಡಿದ್ದು ನನ್ನ ಪತ್ನಿ. ನನ್ನ ಪ್ರಕಾರ, ಈ ಮೂರನ್ನು ಹೆಚ್ಚು ಕಾಲ ಸೇವಿಸುವವರು 60ರ ನಂತರ ಆರೋಗ್ಯಕರ ಜೀವನವನ್ನು ನಡೆಸುವುದಿಲ್ಲ, ವಾಸ್ತವವಾಗಿ, ನನ್ನ ಹೆಂಡತಿ ಲತಾ ಅವರು ನನ್ನ ಮೇಲೆ ಪ್ರೀತಿಯಿಂದ ನನ್ನನ್ನು ಬದಲಾಯಿಸಿದರು. ನಾನು ಶಿಸ್ತಿನ ಜೀವನವನ್ನು ನಡೆಸಲು ಅವರು ದಾರಿ ತೋರಿದರುʼʼ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Santro Ravi case | ಸ್ಯಾಂಟ್ರೋ ರವಿ ಈಗ ಕೈದಿ ನಂಬರ್‌ 18894: ಜೈಲರ್‌ ಮಹೇಶ್‌ ಬೆಂಗಳೂರಿಗೆ ಶಿಫ್ಟ್‌

Rajinikanth my wife Latha's love changed me

ಇದನ್ನೂ ಓದಿ: Rajinikanth | ʻಜೈಲರ್‌ʼ ಸಿನಿಮಾ ಬಳಿಕ ಖ್ಯಾತ ನಿರ್ದೇಶಕರ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರಂತೆ ರಜನಿಕಾಂತ್‌!

ರಜನಿಕಾಂತ್ ಕೊನೆಯದಾಗಿ ನಿರ್ದೇಶಕ ಸಿರುತೈ ಶಿವ ಅವರ ಅಣ್ಣಾತ್ತೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ಅವರ ಜೈಲರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದೆ. ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ಶಿವರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುನಿಲ್, ತಮನ್ನಾ, ವಿಜಯಕನ್, ವಸಂತ್ ರವಿ ಮತ್ತು ರಮ್ಯಾ ಕೃಷ್ಣನ್ ಪೋಷಕ ಪಾತ್ರಗಳ ಭಾಗವಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಲಿವುಡ್

Aditi Rao and Siddharth: ದೇವಸ್ಥಾನದಲ್ಲಿ ಮದುವೆಯಾದರೆ ನಟ ಸಿದ್ಧಾರ್ಥ್-ಅದಿತಿ ರಾವ್ ಹೈದರಿ?

Aditi Rao and Siddharth: ಅದಿತಿ ರಾವ್ ಮತ್ತು ಸಿದ್ಧಾರ್ಥ್ ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಇಂದು ತೆಲಂಗಾಣದ ವನಪರ್ತಿ (Sri Ranganayakaswamy Temple) ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಜೋಡಿಯ ವಿವಾಹವಾಗಿದೆ ಎಂದು ವರದಿಯಾಗಿದೆ.

VISTARANEWS.COM


on

Aditi Rao and Siddharth
Koo

ಬೆಂಗಳೂರು: ನಟ ಸಿದ್ಧಾರ್ಥ್ (Actor Siddharth) ಅವರು ಅದಿತಿ ರಾವ್ ಹೈದರಿ ಜತೆ ಡೇಟಿಂಗ್‌ (Aditi Rao and Siddharth) ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಇದೀಗ ಈ ಜೋಡಿ ಇಂದು (ಮಾ.27) ತೆಲಂಗಾಣದ ವನಪರ್ತಿ (Sri Ranganayakaswamy Temple) ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಅದಿತಿ ರಾವ್ ಮತ್ತು ಸಿದ್ಧಾರ್ಥ್ (Aditi Rao and Siddharth) ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ʻಮಹಾ ಸಮುದ್ರಮ್‌ʼ ಚಿತ್ರದಲ್ಲಿ ಸಿದ್ಧಾರ್ಥ್‌ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು. ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಅವರು ತಮ್ಮ ವಿವಾಹದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ನೀಡಿಲ್ಲ.

ಈ ಹಿಂದೆ ರಾಜಕುಮಾರ್‌ ರಾವ್‌ ಅವರ ಮದುವೆಯಲ್ಲಿ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್‌ ಹುಟ್ಟುಹಬ್ಬಕ್ಕೆ ಅತ್ಯಂತ ಪ್ರೀತಿಯಿಂದ ಹಾರೈಸಿದ್ದರು ಅದಿತಿ. ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ಧಾರ್ಥ್​ ಕೂಡ ಮೇಘನಾ ನಾರಾಯಣ್​ ಜತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು.

ಇದನ್ನೂ ಓದಿ: Aditi Rao Hydari: ಸಿದ್ಧಾರ್ಥ್ ಪೋಸ್ಟ್‌ ಹಂಚಿಕೊಂಡು ʻಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್‌ʼ ಎಂದ ಅದಿತಿ!

ಅರುಣ್ ಕುಮಾರ್ ನಿರ್ದೇಶನದ “ಚಿತ್ತಾʼ ಚಿತ್ರದಲ್ಲಿ ಸಿದ್ಧಾರ್ಥ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಿಮಿಷಾ ಸಜಯನ್, ಅಂಜಲಿ ನಾಯರ್ ಮತ್ತು ಸಹಸ್ರ ಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಟಕಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿದ್ಧಾರ್ಥ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುಂದೆ ನಟ ಎಸ್ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ಜತೆಗೆ ಕಾಣಿಸಿಕೊಳ್ಳಲು ಸಹ ಸಿದ್ಧರಾಗಿದ್ದಾರೆ.

ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಇದನ್ನೂ ಓದಿ: Aditi Rao Hydari: ʻಲವ್ಲಿ ಜೋಡಿ’ ಎನ್ನುತ್ತಿದ್ದಂತೆ ನಾಚಿ ನೀರಾದ ಅದಿತಿ ರಾವ್ ಹೈದರಿ

ಮತ್ತೊಂದೆಡೆ, ಅದಿತಿ ರಾವ್ ಹೈದರಿ ಕೊನೆಯದಾಗಿ ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶಿಸಿದ ಜುಬಿಲಿ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡರು. ಈ ಸಿರೀಸ್‌ನಲ್ಲಿ ಅಪರಶಕ್ತಿ ಖುರಾನಾ, ವಾಮಿಕಾ ಗಬ್ಬಿ, ಸಿದ್ದಾಂತ್ ಗುಪ್ತಾ ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಮುಂದಿನ ಸಂಜಯ್ ಲೀಲಾ ಬನ್ಸಾಲಿಯವರ ನೆಟ್‌ಫ್ಲಿಕ್ಸ್ ಸಿರೀಸ್‌ ಹೀರಾಮಂಡಿಯಲ್ಲಿ ಸೋನಾಕ್ಷಿ ಸಿನ್ಹಾ, ಮನಿಶಾ ಕೊಯಿರಾಲಾ ಮತ್ತು ಇನ್ನೂ ಅನೇಕರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕಜ್ರಿ ಬಬ್ಬರ್ ನಿರ್ದೇಶನದ ಲಯನೆಸ್ ಎಂಬ ಇಂಗ್ಲಿಷ್ ಚಲನಚಿತ್ರದಲ್ಲಿ ನಟಿಸುತ್ತಿದ್ದಾರೆ.

Continue Reading

ಕಾಲಿವುಡ್

Shruti Haasan: ನಿರ್ದೇಶಕನ ಜತೆ ಸಖತ್‌ ರೊಮ್ಯಾನ್ಸ್‌ ಮಾಡಿದ ಕಮಲ್ ಹಾಸನ್ ಪುತ್ರಿ

Shruti Haasan: ʻಇನಿಮೆಲ್ʼ ಸಾಂಗ್‌ಗೆ ಲೋಕೇಶ್ ಕನಕರಾಜ್ ಅವರು ನಟರಾಗಿದ್ದಾರೆ. ಕಮಲ್ ಹಾಸನ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಸಂಪೂರ್ಣ ವಿಡಿಯೊ ಮಾರ್ಚ್ 25ರಂದು ರಿಲೀಸ್ ಆಗಲಿದೆ.

VISTARANEWS.COM


on

Shruti Haasan romance with lokesh
Koo

ಬೆಂಗಳೂರು: ಇಷ್ಟು ದಿನ ಕಾಲಿವುಡ್‌ನಲ್ಲಿ  ‘ಕೈದಿ’, ‘ಲಿಯೋ’ ಹೀಗೆ ಅನೇಕ ಹಿಟ್‌ ಸಿನಿಮಾಗಳನ್ನು ನೀಡಿದ್ದರು ಲೋಕೇಶ್ ಕನಕರಾಜ್ (Lokesh Kanagaraj) . ಇದೀಗ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ (Shruti Haasan) ಜತೆ ರೊಮ್ಯಾನ್ಸ್‌ ಮಾಡಿದ್ದಾರೆ ಲೋಕೇಶ್‌. ʻಇನಿಮೆಲ್ʼ ಸಾಂಗ್‌ (video titled Inimel) ಒಂದು ಬಿಡುಗಡೆಯಾಗುತ್ತಿದೆ. ಲೋಕೇಶ್ ಕನಕರಾಜ್ ಅವರು ನಟರಾಗಿದ್ದಾರೆ. ಕಮಲ್ ಹಾಸನ್ (Kamal Haasan) ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆದರೆ ಈ ಹಾಡಿಗೆ ನಿರ್ದೇಶನ ಇರೋದು ಶ್ರುತಿ ಹಾಸನ್ ಅವರದ್ದು. ಈ ಹಾಡಿನ ಪ್ರೋಮೊ ರಿಲೀಸ್ ಆಗಿದ್ದು, ಸಂಪೂರ್ಣ ವಿಡಿಯೊ ಮಾರ್ಚ್ 25ರಂದು ರಿಲೀಸ್ ಆಗಲಿದೆ.

ಒಂದು ವಾರದ ಹಿಂದೆ, ಶ್ರುತಿ (Shruti Haasan) ತಮ್ಮ ಇನ್‌ಸ್ಟಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದರು. ʻಇನಿಮೆಲ್ ರೋಲ್ ರಿವರ್ಸ್ ಹೊಸ ಪದ್ಯ” ಎಂದು ಬರೆದು, ಲೋಕೇಶ್ ನಟರಾಗಿ, ಕಮಲ್ ಗೀತರಚನೆಕಾರರಾಗಿ ಮತ್ತು ಶ್ರುತಿ ಸಂಯೋಜಕಿಯಾಗಿ ಹೊರಹೊಮ್ಮಿದ್ದಾರೆ ಎಂದು ಬರೆದುಕೊಂಡಿದ್ದರು.

ಮಾರ್ಚ್ 25 ರಂದು ಬಿಡುಗಡೆ

ಗುರುವಾರ (ಮಾ.21) ಸಂಜೆ ಹಾಡಿನ ಟೀಸರ್ ಬಿಡುಗಡೆ ಆಗಿದೆ. ಇನಿಮೆಲ್‌ನ ಪೂರ್ಣ ವಿಡಿಯೊವನ್ನು ಮಾರ್ಚ್ 25 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ವಿಡಿಯೊದಲ್ಲಿ, ಶ್ರುತಿ ಮತ್ತು ಲೋಕೇಶ್ ಪ್ರೇಮಿಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಲೋಕೇಶ್ ಹಾಗೂ ಶ್ರುತಿ ಹಾಸನ್ (Shruti Haasan) ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೂಡ ಹಾಡಿನ ಸುಳಿವು ನೀಡಿದ್ದು, ಶ್ರುತಿ ಅವರ ಗಾಯನವಿದೆ.

ಇದನ್ನೂ ಓದಿ: Shruti Haasan: ಮಗಳ ಸಿನಿಮಾ ನಿರ್ಮಾಣ ಮಾಡುತ್ತಿರುವ ʻಕಮಲ್ ಹಾಸನ್ʼ; ‘ವಿಕ್ರಮ್’ ಡೈರೆಕ್ಟರ್ ಆ್ಯಕ್ಷನ್ ಕಟ್!

ಶ್ರುತಿ ಹಾಸನ್‌ (Shruti Haasan) ಕೊನೆಯದಾಗಿ ʻಸಲಾರ್ʼನಲ್ಲಿ ಕಾಣಿಸಿಕೊಂಡರು. ಕೆಲವು ದಿನಗಳ ಹಿಂದೆ ಶ್ರುತಿ ತಮ್ಮ ಮುಂಬರುವ ಯೋಜನೆಗಳ ಕುರಿತು ಅಪ್‌ಡೇಟ್ ನೀಡಿ ʻಎರಡು ಚಿತ್ರಗಳಲ್ಲಿ ಏಕಕಾಲದಲ್ಲಿ ಕೆಲಸ ಮಾಡುತ್ತಿದ್ದೇನೆ. ಎರಡೂ ಇನ್ನೂ ಬಿಡುಗಡೆಯಾಗಬೇಕಿದೆʼʼಎಂದು ಹೇಳಿಕೊಂಡಿದ್ದರು. ಶನೈಲ್ ಡಿಯೋ ನಿರ್ದೇಶನದ ಮತ್ತು ಅಡಿವಿ ಶೇಷ್ ಸಹ-ನಟನಾಗಿ ಶ್ರುತಿ ಶೀಘ್ರದಲ್ಲೇ ʻಡಕಾಯತ್‌ʼ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಶ್ರುತಿ ಹೊಸ ಅವತಾರದಲ್ಲಿ ಕಾಣಲಿದ್ದಾರೆ. ಫಿಲಿಪ್ ಜಾನ್ ಅವರ ಚೆನ್ನೈ ಸ್ಟೋರಿಯಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.

Continue Reading

ಕಾಲಿವುಡ್

Yogi Babu: ಯೋಗಿಬಾಬು ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಕನ್ನಡ ʻಬಿಗ್‌ ಬಾಸ್‌ʼ ವಿನ್ನರ್‌!

Yogi Babu: ಬಿಗ್‌ ಬಾಸ್‌ ಖ್ಯಾತಿಯ ರೂಪೇಶ್ ಶೆಟ್ಟಿ ತಮಿಳು ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳು ಸಿನಿರಂಗದ ಹಾಸ್ಯ ದಿಗ್ಗಜ ಯೋಗಿಬಾಬು ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

VISTARANEWS.COM


on

Roopesh shety with Yogi Babu
Koo

ಬೆಂಗಳೂರು: ತುಳುನಾಡ ನಟ ರೂಪೇಶ್ ಶೆಟ್ಟಿ (Roopesh shety) ಈಗ ತಮಿಳು ಸಿನಿರಂಗಕ್ಕೆ ಹೆಜ್ಜೆ ಇಟ್ಟಿದ್ದಾರೆ. ʻಸರ್ಕಸ್ʼ ಸಿನಿಮಾ ಮೂಲಕ ತುಳು ಸಿನಿಮಾರಂಗದಲ್ಲಿ ಸಕ್ಸೆಸ್‌ ಕಂಡಿದ್ದ ರಾಕ್ ಸ್ಟಾರ್ ಸ್ಯಾಂಡಲ್‌ನಲ್ಲಿ ಅಧಿಪತ್ರ ಹೊರಡಿಸಿದ್ದಾರೆ. ಬಿಗ್ ಬಾಸ್ ನಿಂದ ಹೊರಬಂದ ತಕ್ಷಣ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುವವರ ನಡುವೆ ರೂಪೇಶ್ ಅಳೆದು ತೂಗಿ ʻಅಧಿಪತ್ರʼ ಆಯ್ಕೆ ಮಾಡಿಕೊಂಡಿದ್ದಾರೆ. ಅಧಿಪತ್ರ ಚಿತ್ರದ ಜತೆಗೆ ಮತ್ತೆರೆಡು ಹೊಸ ಕನ್ನಡ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿರುವ ರೂಪೇಶ್ ಈಗ ತಮಿಳು (Yogi Babu) ಸಿನಿಮಾರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ.

ಬಿಗ್ ಬಾಸ್ ಸೀಸನ್ 9 ವಿನ್ನರ್ ಆಗಿರುವ ರಾಕ್ ಸ್ಟಾರ್ ರೂಪೇಶ್, ʻಸನ್ನಿಧಾನಮ್ P. Oʼ (Sannidhanam P.O.) ಎಂಬ ತಮಿಳು ಪ್ರಾಜೆಕ್ಟ್ ನಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ತಮಿಳು ಸಿನಿರಂಗದ ಹಾಸ್ಯ ದಿಗ್ಗಜ ಯೋಗಿಬಾಬು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ಸಂತಸದಲ್ಲಿದ್ದಾರೆ ರೂಪೇಶ್.

ಮಧುರಾವ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಅಮುದ ಸಾರಥಿ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ʻಸನ್ನಿಧಾನಮ್ P. Oʼ ಚಿತ್ರದ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಜೂನ್‌ನಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ನಾಲ್ಕು ಭಾಷೆಯಲ್ಲಿ ʻಸನ್ನಿಧಾನಮ್ P. Oʼ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ: Lokayukta Raid : 50 ಸಾವಿರ ರೂ. ಲಂಚ ಕೇಳಿದ್ದ ಸಬ್‌ ರಿಜಿಸ್ಟ್ರಾರ್‌ ಲೋಕಾಯುಕ್ತ ದಾಳಿ ವೇಳೆ ಎಸ್ಕೇಪ್!‌

ತುಳು ಚಿತ್ರರಂಗದಲ್ಲಿ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ, ನಟನಾಗಿ, ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದವರು ರೂಪೇಶ್ ಶೆಟ್ಟಿ. ಅದರ ಬೆನ್ನಲ್ಲೇ ಬಿಗ್‌ಬಾಸ್‌ ವಿಜೇತರಾಗಿಯೂ ಹೊರಹೊಮ್ಮಿದರು. ಬಳಿಕ ಕನ್ನಡದ ಸಿನಿಮಾ ಅವಕಾಶಗಳ ಬಾಗಿಲೂ ತೆರೆಯಿತು. ತುಳು, ಕನ್ನಡ ಮಾತ್ರವಲ್ಲ ತೆಲುಗು, ಕೊಂಕಣಿ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರೂಪೇಶ್ ಅವರನ್ನು ತಮಿಳುಚಿತ್ರರಂಗ ರತ್ನ ಕಂಬಳಿ ಹಾಸಿ ಸ್ವಾಗತಿಸಿದೆ.

Continue Reading

ಕಾಲಿವುಡ್

SS Rajamouli: ಜಪಾನ್‌ ಭೂಕಂಪದಲ್ಲಿ ಬದುಕುಳಿದ ರಾಜಮೌಳಿ, ಮಗ ಕಾರ್ತಿಕೇಯ!

SS Rajamouli: ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಗ ಕಾರ್ತಿಕೇಯ ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಭೂಕಂಪದ ಬಗ್ಗೆ ಎಚ್ಚರಿಕೆ ನೀಡಿದ ಮೆಸೇಜ್‌ಅನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

SS Rajamouli and son Karthikeya
Koo

ಬೆಂಗಳೂರು: ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli ), ಅವರ ಮಗ ಕಾರ್ತಿಕೇಯ ಮತ್ತು ನಿರ್ಮಾಪಕ ಶೋಬು ಯರ್ಲಗಡ್ಡ ಅವರು ಮಾರ್ಚ್ 21ರ ಗುರುವಾರ ಆರ್‌ಆರ್‌ಆರ್‌ನ ವಿಶೇಷ ಪ್ರದರ್ಶನಕ್ಕಾಗಿ ಜಪಾನ್‌ನಲ್ಲಿದ್ದರು. ಈ ವೇಳೆ ಜಪಾನ್‌ನಲ್ಲಿ ನಡೆದ ತಮ್ಮ ಭೂಕಂಪನದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮ್ಮ ಸ್ಮಾರ್ಟ್ ವಾಚ್‌ನಲ್ಲಿ ಭೂಕಂಪನದ ಬಗ್ಗೆ ಎಚ್ಚರಿಕೆ ನೀಡಿದ ಮೆಸೇಜ್‌ಅನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಭೂಕಂಪ ಸಂಭವಿಸಿದಾಗ ನಮ್ಮ ಆರ್‌ಆರ್‌ಆರ್ ತಂಡ 28ನೇ ಮಹಡಿಯಲ್ಲಿ ಇತ್ತು ಎಂದು ಬಹಿರಂಗಪಡಿಸಿದರು.

ಕಾರ್ತಿಕೇಯ ಅವರು ತಮ್ಮ ವಾಚ್‌ ಚಿತ್ರವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಭೂಕಂಪದ ತುರ್ತು ಎಚ್ಚರಿಕೆಯ ಮೆಸೇಜ್‌ ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಹೀಗೆ ಬರೆದುಕೊಂಡಿದ್ದಾರೆ. “ಇದೀಗ ಜಪಾನ್‌ನಲ್ಲಿ ಭೂಕಂಪನದ ಅನುಭವ ಆಯ್ತು. ನಾವು 28ನೇ ಮಹಡಿಯಲ್ಲಿ ಇದ್ದೆವು. ಇದು ಭೂಕಂಪನ ಎಂದು ತಿಳಿದುಕೊಳ್ಳಲು ನಮಗೆ ಸ್ವಲ್ಪ ಸಮಯ ಹಿಡಿಯಿತು. ನಾವೆಲ್ಲ ಭಯಭೀತರಾದರೂ ಜಪಾನಿಯರು ಸ್ವಲ್ಪವೂ ಕದಲಲಿಲ್ಲ!!ʼʼಎಂದು ಪೋಸ್ಟ್‌ನಲ್ಲಿ ರಾಜಮೌಳಿ ಮತ್ತು ಶೋಬು ಅವರನ್ನು ಟ್ಯಾಗ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಫ್ಯಾನ್ಸ್‌ ಕೂಡ ʻʻಮೂವರು ಸುರಕ್ಷಿತವಾಗಿದ್ದರೆ ಸಾಕುʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಭೂಕಂಪ ಮುಂದುವರಿಯಬಹುದು, ಆದ್ದರಿಂದ ದಯವಿಟ್ಟು ಜಾಗರೂಕರಾಗಿರಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: IPL 2024: ಮೊಹಮ್ಮದ್ ಶಮಿ ಬದಲಿಗೆ ಗುಜರಾತ್​ ಸೇರಿದ ಸಂದೀಪ್ ವಾರಿಯರ್

ಮಹೇಶ್‌ ಬಾಬು ಸಿನಿಮಾ ಬಗ್ಗೆ ಜಪಾನ್‌ನಲ್ಲಿ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಜಮೌಳಿ!

ಎಸ್‌ಎಸ್ ರಾಜಮೌಳಿ (SS Rajamouli) ಅವರು ಪತ್ನಿ ರಮಾ ರಾಜಮೌಳಿ ಅವರೊಂದಿಗೆ ಮಾರ್ಚ್ 18ರಂದು ಜಪಾನ್‌ನಲ್ಲಿ ‘ಆರ್‌ಆರ್‌ಆರ್’ ಪ್ರದರ್ಶನಕ್ಕೆ ಹಾಜರಾಗಿದ್ದರು. ಮತ್ತೊಮ್ಮೆ ಸಿನಿಮಾ ಸ್ಕ್ರೀನಿಂಗ್‌ಗಾಗಿ ನಿರ್ದೇಶಕ ರಾಜಮೌಳಿ ಅಲ್ಲಿಗೆ ಹೋಗಿದ್ದರು.

ಜಪಾನ್‌ನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಮಾತನಾಡಿದ ಎಸ್‌ಎಸ್ ರಾಜಮೌಳಿ, “ನಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಕೆಲಸ ಮಗಿಸಿದ್ದೇವೆ. ಚಿತ್ರ ಪ್ರಿ-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದೆ. ಇನ್ನೂ ಕಾಸ್ಟಿಂಗ್ ಪೂರ್ಣಗೊಂಡಿಲ್ಲ. ಮುಖ್ಯ ನಾಯಕ, ಅಂದರೆ ಮಹೇಶ್‌ ಬಾಬು ಅವರು ಮಾತ್ರ ಫಿಕ್ಸ್‌ ಆಗಿದ್ದಾರೆ. ಆತ ತುಂಬಾ ಒಳ್ಳೆಯ ನಟ. ಸುಂದರ ಕೂಡ. ಸಿನಿಮಾ ಬಿಡುಗಡೆ ಸಮಯದಲ್ಲಿ ಅವರನ್ನು ಇಲ್ಲಿಗೆ ಕರೆತಂದು ನಿಮಗೆ ಪರಿಚಯಿಸುತ್ತೇನೆʼʼ ಎಂದರು.

ಸದ್ಯ ಚಿತ್ರಕ್ಕೆ ʼಎಸ್‌.ಎಸ್‌.ಬಿ.ಎಂ. 29ʼ (SSMB 29) ಎನ್ನುವ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದೆ. ಮೊದಲ ಬಾರಿಗೆ ಇಬ್ಬರು ಚಿತ್ರಕ್ಕಾಗಿ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಮತ್ತೊಂದು ಮುಖ್ಯ ಕಾರಣ.

Continue Reading
Advertisement
Suryakumar Yadav
ಕ್ರೀಡೆ1 min ago

SuryaKumar Yadav : ಮುಂಬೈ ತಂಡಕ್ಕೆ ಮತ್ತಷ್ಟು ಸಂಕಷ್ಟ; ಸೂರ್ಯಕುಮಾರ್​ ಸೇರ್ಪಡೆ ಅನುಮಾನ

modi
ದೇಶ11 mins ago

ಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ; ಮುಖ್ಯ ನ್ಯಾಯಮೂರ್ತಿಗೆ ಬರೆದ ವಕೀಲರ ಪತ್ರಕ್ಕೆ ಮೋದಿ ಪ್ರತಿಕ್ರಿಯೆ

Lok Sabha Election 202425 mins ago

Lok Sabha Election 2024: ಕೋಲಾರ ಕಾಂಗ್ರೆಸ್‌ ಗಲಾಟೆಗೆ ಸಿಎಂ, ಡಿಸಿಎಂ ಟ್ರೀಟ್ಮೆಂಟ್‌! ತಣ್ಣಗಾದ ರಮೇಶ್‌ ಕುಮಾರ್‌, ಮುನಿಯಪ್ಪ ಬಣ

Health Tips
ಬೆಂಗಳೂರು30 mins ago

Health Tips : ಬೇಸಿಗೆಯಲ್ಲಿ ಲೈಫ್‌ಸ್ಟೈಲ್‌ ಹೇಗಿರಬೇಕು? ಆರೋಗ್ಯ ಇಲಾಖೆಯಿಂದ ಸರಳ ಸೂತ್ರ

Anurag Thakur
ಕ್ರೀಡೆ34 mins ago

Anurag Thakur : 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್​​; ಅನುರಾಗ್ ಠಾಕೂರ್​

Side Effects Of Pillow
ಆರೋಗ್ಯ46 mins ago

Side Effects Of Pillow: ಎತ್ತರದ ದಿಂಬು ಬಳಸುತ್ತೀರಾ? ಸಮಸ್ಯೆ ತಪ್ಪಿದ್ದಲ್ಲ!

Naveen Polishetty
ಸಿನಿಮಾ51 mins ago

Naveen Polishetty: ಅಮೆರಿಕದಲ್ಲಿ ಬೈಕ್‌ ಅಪಘಾತ; ಅನುಷ್ಕಾ ಶೆಟ್ಟಿ ಜತೆ ತೆರೆ ಹಂಚಿಕೊಂಡಿದ್ದ ನಟನಿಗೆ ಗಾಯ

Hardik Pandya
ಕ್ರೀಡೆ1 hour ago

Hardik Pandya : ಹೈದರಾಬಾದ್​ನಲ್ಲೂ ಪಾಂಡ್ಯಗೆ ಕಾಟ ಕೊಟ್ಟ ಕ್ರಿಕೆಟ್​ ಪ್ರೇಕ್ಷಕರು

money guide
ಮನಿ-ಗೈಡ್1 hour ago

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

IPL 2024-CSKRCB
ಕ್ರೀಡೆ1 hour ago

IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್​ಸಿಬಿ ಮ್ಯಾಚ್​!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20245 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20246 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ14 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌