Australian Open : ಬೆಲಾರಸ್​ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್ ಚಾಂಪಿಯನ್​ - Vistara News

ಕ್ರೀಡೆ

Australian Open : ಬೆಲಾರಸ್​ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್ ಚಾಂಪಿಯನ್​

ಕಜಕಸ್ತಾನದ ಎಲೆನಾ ರಿಬಕಿನಾ ಅವರನ್ನು ಮಣಿಸಿದ ಬೆಲಾರಸ್​ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್​ ಓಪನ್ ಟ್ರೋಫಿ ಗೆದ್ದರು.

VISTARANEWS.COM


on

aryna sabalenka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೆಲ್ಬೋರ್ನ್​: ವರ್ಷದ ಮೊದಲ ಗ್ರ್ಯಾನ್​ ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್​ ಓಪನ್​ನ (Australian Open) ಮಹಿಳೆಯ ಸಿಂಗಲ್ಸ್​ ವಿಭಾಗದ ಚಾಂಪಿಯನ್​ ಪಟ್ಟವನ್ನು ಬೆಲಾರಸ್​ನ ಅರಿನಾ ಸಬಲೆಂಕಾ (aryna sablenka) ಅಲಂಕರಿಸಿದ್ದಾರೆ. ರಾಡ್​ ಲೇವರ್ ಅರೆನಾದಲ್ಲಿ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಅವರು 4-6, 6-3,6-4 ಸೆಟ್​ಗಳ ಅಂತರದಿಂದ ಕಜಕಸ್ತಾನದ ಎಲೆನಾ ರಿಬಕಿನಾ (Elena Rybakina) ಅವರನ್ನು ಮಣಿಸಿ ಟ್ರೋಫಿ ಮುಡಿಗೇರಿಸಿಕೊಂಡರು. ಇದು ಅರಿನಾ ಪಾಲಿನ ಮೊದಲ ಗ್ರ್ಯಾನ್​ಸ್ಲಾಮ್​ ಪ್ರಶಸ್ತಿಯಾಗಿದೆ.

ಅತ್ಯಂತ ರೋಚಕವಾಗಿ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್​ ಗೆದ್ದ ಕಜಕಸ್ತಾನದ ಅಟಗಾರ್ತಿ ಮುಂದೆನೆರಡು ಸುತ್ತಿನಲ್ಲಿ ಬೆಲಾರಸ್​ನ ಆಟಗಾರ್ತಿಯ ಪೈಪೋಟಿ ಎದುರಿಸಲು ವಿಫಲಗೊಂಡರು. ಇವರಿಬ್ಬರ ನಡುವಿನ ಕಾದಾಟ 2 ಗಂಟೆ 28 ನಿಮಿಷಗಳ ತನಕ ನಡೆಯಿತು. ಗ್ರೌಂಡ್​ ಸ್ಟ್ರೋಕ್​ಗಳು ಹಾಗೂ ನಿರಂತರ ರ್ಯಾಲಿಗಳು ರಾಡ್​ಲೇವರ್​ ಅರೆನಾದಲ್ಲಿ ಪಂದ್ಯ ವೀಕ್ಷಿಸಲು ಬಂದಿದ್ದ ಟೆನಿಸ್​ ಅಭಿಮಾನಿಗಳಿಗೆ ರಸದೌತಣ ನೀಡಿದವು.

ಇದನ್ನೂ ಓದಿ : Australian Open 2023: ಆಸ್ಟ್ರೇಲಿಯಾ ಓಪನ್​; ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ರನ್ನರ್​ ಅಪ್

ಮೊದಲ ಸೆಟ್​ 34 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಆ ಸೆಟ್​ ಗೆದ್ದ ರಿಬಕಿನಾ ಪ್ರಶಸ್ತಿ ಗೆಲ್ಲುವ ಮುನ್ಸೂಚನೆ ನೀಡಿದರು. ಆದರೆ, 57 ನಿಮಿಷಗಳ ಮುಂದಿನ ಸೆಟ್​ನಲ ಹೋರಾಟದಲ್ಲಿ ಸಬಲೆಂಕಾ ಗೆಲುವು ಸಾಧಿಸಿದರು. ನಿರ್ಣಾಯ ಸೆಟ್​​ ಹೆಚ್ಚು ಪೈಪೋಟಿಯಿಂದ ಕೂಡಿತ್ತು. ಈ ಗೆಲುವಿನೊಂದಿಗೆ ಸಬಲಂಕಾ ವಿಶ್ವ ರ್ಯಾಂಕ್​ನಲ್ಲಿ ಬಡ್ತಿ ಡೆಯಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024: ಹಾರ್ದಿಕ್​ ಪಾಂಡ್ಯ ಮೇಲೆ ಬೌಲಿಂಗ್​ ಕೋಚ್​ ಮುನಿಸು; ವಿಡಿಯೊ ವೈರಲ್​​

IPL 2024: ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಲಿಕರಾದ ನೀತಾ ಅಂಬಾನಿ ಕೂಡ ಪಂದ್ಯವನ್ನು ನೋಡುವ ಬದಲು ಸಿಟ್ಟಿನಲ್ಲಿ ಮೊಬೈಲ್​ ನೋಡುತ್ತಿರುವ ದೃಶ್ಯಗಳು ವೈರಲ್​ ಆಗಿತ್ತು. ಪಂದ್ಯದ ಬಳಿಕ ಫ್ರಾಂಚೈಸಿಯ ಅಧಿಕಾರಿಗಳು ರೋಹಿತ್​ ಜತೆ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂದಿತ್ತು. ಇದನ್ನೆಲ್ಲ ನೋಡುವಾಗ ಮುಂದಿನ ಪಂದ್ಯದಲ್ಲಿಯೂ ಮುಂಬೈ ಇದೇ ರೀತಿಯ ಕಳಪೆ ಪ್ರದರ್ಶನ ತೋರಿದರೆ ಪಾಂಡ್ಯ ತಲೆ ದಂಡ ಖಚಿತ ಎನ್ನಲಡ್ಡಿಯಿಲ್ಲ.

VISTARANEWS.COM


on

IPL 2024
Koo

ಮುಂಬಯಿ: 5 ಬಾರಿಯ ಐಪಿಎಲ್‌(IPL 2024) ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡದೊಳಗೆ ಎಲ್ಲವೂ ಸರಿ ಇದ್ದಂತೆ ಕಾಣುತ್ತಿಲ್ಲ. ಹಾರ್ದಿಕ್​ ಪಾಂಡ್ಯ(Hardik Pandya) ನಾಯಕನಾದ ಬಳಿಕ ಈ ತಂಡದಲ್ಲಿ ಸಮಸ್ಯೆಗಳ ಸಾಗರವೇ ತಾಂಡವವಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೋಚ್​ ಲಸಿತ್​ ಮಾಲಿಂಗ(Lasith Malinga) ಮುನಿಸಿಕೊಂಡಿರುವ ವಿಡಿಯೊವೊಂದು ವೈರಲ್​ ಆಗಿದೆ.

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ಅಲ್ಲದೆ ಪಂದ್ಯದ ಮುಕ್ತಾಯದ ವೇಳೆಯೂ ಮಾಲಿಂಗ ಅವರು ಪಾಂಡ್ಯ ಜತೆ ಸರಿಯಾಗಿ ಮಾತನಾಡಲು ಕೂಡ ನಿರಾಕರಿಸಿದ್ದಾರೆ.

ತಂಡದೊಳಗೆ ಎರಡು ಬಣಗಳಾಗಿವೆ ಎಂದು ಕೂಡ ಹೇಳಲಾಗಿದೆ. ರೋಹಿತ್‌ ಶರ್ಮಾ ಬಣದಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಪಾಂಡ್ಯ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. ಪಾಂಡ್ಯ ಅವರ ಕೆಲ ವರ್ತನೆ ಬಗ್ಗೆ ಸ್ವತಃ ಫ್ರಾಂಚೈಸಿಗೂ ಅಸಮಾಧಾನ ಇದೆ ಎಂದು ವರದಿಯಾಗಿದ್ದು ಮತ್ತೆ ರೋಹಿತ್​ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಳೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಮಾಲಿಕರಾದ ನೀತಾ ಅಂಬಾನಿ ಕೂಡ ಪಂದ್ಯವನ್ನು ನೋಡುವ ಬದಲು ಸಿಟ್ಟಿನಲ್ಲಿ ಮೊಬೈಲ್​ ನೋಡುತ್ತಿರುವ ದೃಶ್ಯಗಳು ವೈರಲ್​ ಆಗಿತ್ತು. ಪಂದ್ಯದ ಬಳಿಕ ಫ್ರಾಂಚೈಸಿಯ ಅಧಿಕಾರಿಗಳು ರೋಹಿತ್​ ಜತೆ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂದಿತ್ತು. ಇದನ್ನೆಲ್ಲ ನೋಡುವಾಗ ಮುಂದಿನ ಪಂದ್ಯದಲ್ಲಿಯೂ ಮುಂಬೈ ಇದೇ ರೀತಿಯ ಕಳಪೆ ಪ್ರದರ್ಶನ ತೋರಿದರೆ ಪಾಂಡ್ಯ ತಲೆ ದಂಡ ಖಚಿತ ಎನ್ನಲಡ್ಡಿಯಿಲ್ಲ. ಮುಂಬೈ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ತವರಿನ ವಾಖೆಂಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ಆಡಲಿದೆ. ಈ ಪಂದ್ಯ ಎಪ್ರಿಲ್​ 1 ರಂದು ನಡೆಯಲಿದೆ.

Continue Reading

ಕ್ರೀಡೆ

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Unmukt Chand: ಉನ್ಮುಕ್ತ್ ಚಂದ್‌(Unmukt Chand) ಅವರ ಟಿ20 ವಿಶ್ವಕಪ್(T20 World Cup 2024)​ ಆಡುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾದಂತೆ ತೋರುತ್ತಿದೆ.

VISTARANEWS.COM


on

Unmukt Chand
Koo

ನ್ಯೂಯಾರ್ಕ್​: 2021ರಲ್ಲಿ ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕ(USA) ತಂಡ ಸೇರಿದ್ದ, 2012ರ ಅಂಡರ್‌-19 ವಿಶ್ವಕಪ್‌ ಹೀರೊ ಉನ್ಮುಕ್ತ್ ಚಂದ್‌(Unmukt Chand) ಅವರ ಟಿ20 ವಿಶ್ವಕಪ್(T20 World Cup 2024)​ ಆಡುವ ಕನಸು ನನಸಾಗುವ ಸಾಧ್ಯತೆ ಕ್ಷೀಣವಾದಂತೆ ತೋರುತ್ತಿದೆ. ಇದೇ ಏಪ್ರಿಲ್ 7 ರಿಂದ ಹೂಸ್ಟನ್‌ನಲ್ಲಿ ನಡೆಯಲಿರುವ ಕೆನಡಾ(Canada T20Is) ವಿರುದ್ಧದ ಟಿ20 ಸರಣಿಗಾಗಿ ಅಮೆರಿಕ ಪ್ರಕಟಿಸಿದ 15 ಸದಸ್ಯರ ತಂಡದಿಂದ ಉನ್ಮುಕ್ತ್ ಚಂದ್ ಅವರನ್ನು ಕೈಬಿಡಲಾಗಿದೆ. ಇದು 2024 ರ T20 ವಿಶ್ವಕಪ್‌ನಲ್ಲಿ ಅಮೆರಿಕ ತಂಡವನ್ನು ಪ್ರತಿನಿಧಿಸುವ ಚಂದ್ ಅವರ ಕನಸಿಗೆ ಭಾರಿ ಹೊಡೆತ ಬಿದ್ದಂತಿದೆ.

ಇದೇ ವರ್ಷದ ಆರಂಭದಲ್ಲಿ ಉನ್ಮುಕ್ತ್ ಚಂದ್‌ ಅವರು ಭಾರತ ವಿರುದ್ಧ ಟಿ20 ವಿಶ್ವಕಪ್​ ಆಡುವುದು ನನ್ನ ಪ್ರಮುಖ ಗುರಿ ಎಂದು ಹೇಳಿದ್ದರು. ಆದರೆ, ಇದೀಗ ಅವರಿಗೆ ಸ್ಥಾನ ಸಿಗುವುದೇ ಅನುಮಾನ ಎನ್ನುವಂತಿದೆ. ಅಮೆರಿಕ ಕ್ರಿಕೆಟ್​ ಮಂಡಳಿಗೆ ಚಂದ್​ಗೆ ಸ್ಥಾನ ನೀಡುವ ಕುರಿತು ಆಸಕ್ತಿ ಇಲ್ಲವಾದಂತೆ ತೋರುತ್ತಿದೆ. ಇಲ್ಲವಾದಲ್ಲಿ ಅವರನ್ನು ಕೆನಡಾ ವಿರುದ್ಧದ ಸರಣಿಯಂದ ಕೈಬಿಡುವ ಸಾಧ್ಯತೆ ಇರುತ್ತಿರಲಿಲ್ಲ.

2012ರ ಅಂಡರ್‌-19 ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅಜೇಯ 111 ರನ್‌ ಬಾರಿಸಿ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಆದರೆ ಸೀನಿಯರ್‌ ಮಟ್ಟದಲ್ಲಿ ಆಡಲು ಅವರಿಗೆ ಅವಕಾಶ ಲಭಿಸಲೇ ಇಲ್ಲ. 67 ಪ್ರಥಮ ದರ್ಜೆ ಪಂದ್ಯಗಳಿಂದ 3,379 ರನ್‌, 120 ಲಿಸ್ಟ್‌ ಎ ಪಂದ್ಯಗಳಿಂದ 4,505 ರನ್‌, ಟಿ20 ಕ್ರಿಕೆಟ್‌ನಲ್ಲಿ 1,565 ರನ್‌ ಬಾರಿಸಿದ ಸಾಧನೆ ಉನ್ಮುಕ್ತ್ ಚಂದ್‌ ಅವರದು.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

2021 ಅವರು ಭಾರತೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಅಮೆರಿಕಕ್ಕೆ ತೆರಳಿದ್ದರು. ತಮ್ಮ ನಾಯಕತ್ವದಲ್ಲಿ ಸಿಲಿಕಾನ್‌ ಸ್ಟ್ರೈಕರ್ಸ್‌ ತಂಡಕ್ಕೆ ಮೈನರ್‌ ಲೀಗ್ ಕ್ರಿಕೆಟ್‌ ಗೆದ್ದುಕೊಟ್ಟಿದ್ದರು ಹಾಗೂ ಆಡಿದ್ದ ಮೂರೂ ಆವೃತ್ತಿಗಳಿಂದ 1500ಕ್ಕೂ ಹೆಚ್ಚಿನ ರನ್‌ಗಳನ್ನು ಸಿಡಿಸಿದ್ದರು. ಆದರೂ ಕೂಡ ಅವರಿಗೆ ಕೆನಡಾ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ.

ಐಪಿಎಲ್ 2013ರಲ್ಲಿ ರಾಜಸ್ಥಾನಕ್ಕಾಗಿ 1 ಪಂದ್ಯವನ್ನು ಆಡಿದ ಮತ್ತು ಭಾರತ ಅಂಡರ್​-19 ತಂಡವನ್ನು ಪ್ರತಿನಿಧಿಸಿರುವ ಹರ್ಮೀತ್ ಸಿಂಗ್​ ಅವರು ಕೆನಡಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ ಅಮೆರಿಕ ತಂಡದ ಪರ ಚೊಚ್ಚಲ ಕರೆ ಪಡೆದಿದ್ದಾರೆ.

ವೆಸ್ಟ್​ ಇಂಡೀಸ್​ ಮತ್ತು ಅಮೆರಿಕ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ ಜೂನ್ 1 ರಿಂದ ಆರಂಭವಾಗಲಿದೆ. ವಿಶ್ವಕಪ್​ ಟೂರ್ನಿಯ(T20 World Cup 2024) ವೇಳಾಪಟ್ಟಿಯನ್ನು ಐಸಿಸಿ ಈಗಾಗಲೇ ಪ್ರಕಟಿಸಿದೆ. ಜತೆಗೆ ತಂಡಗಳ ಪಟ್ಟಿಯನ್ನು ಅಂತಿಮಗೊಳಿಸಲು ಗಡುವು ಕೂಡ ನೀಡಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲ್ಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. 

Continue Reading

ಕ್ರೀಡೆ

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Riyan Parag: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪರಾಗ್​, ಕಳೆದ 3 ದಿನಗಳಿಂದ ನಾನು ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ನೀಡಿದ ಕೊಡುಗೆ ಖುಷಿ ಹೆಚ್ಚಿಸಿದೆ ಎಂದರು.

VISTARANEWS.COM


on

Riyan Parag
Koo

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ವಿರುದ್ಧದ ಪಂದ್ಯದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಜಸ್ಥಾನ್(Rajasthan Royals)​ ತಂಡದ ರಿಯಾನ್​ ಪರಾಗ್(Riyan Parag)​ ಅವರು ಈ ಬ್ಯಾಟಿಂಗ್​ ಪ್ರದರ್ಶನಕ್ಕೂ ಮುನ್ನ ತಾವು ಅನುಭವಿಸಿದ ನರಕಯಾತನೆಯನ್ನು ಬಹಿರಂಗಪಡಿಸಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಪರಾಗ್​, ಕಳೆದ 3 ದಿನಗಳಿಂದ ನಾನು ನಿರಂತರವಾಗಿ ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ. ಆದರೆ ಇಂದು ನಾನು ನನ್ನ ತಂಡಕ್ಕೆ ನೀಡಿದ ಕೊಡುಗೆ ಖುಷಿ ಹೆಚ್ಚಿಸಿದೆ ಎಂದರು. ಆದರೆ ಮಾತ್ರೆ ಸೇವಿದ ಕಾರಣ ಏನೆಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಅಸ್ಸಾಂ ಮೂಲದ 22 ವರ್ಷದ ಕ್ರಿಕೆಟಿಗನಾಗಿರುವ ಪರಾಗ್​ ಸೈಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದರು. ಆಡಿದ 10 ಇನ್ನಿಂಗ್ಸ್‌ಗಳಲ್ಲಿ 510 ರನ್‌ ಸಿಡಿಸಿದ್ದರು. 56 ಐಪಿಎಲ್​ ಪಂದ್ಯವಾಡಿ 727 ರನ್​ ಬಾರಿಸಿದ್ದಾರೆ. 4 ವಿಕೆಟ್​ ಕೂಡ ಪಡೆದಿದ್ದಾರೆ. 2018ರ ಅಂಡರ್​-19 ವಿಶ್ವಕಪ್ ವಿಜೇತ ತಂಡದಲ್ಲಿ ಸ್ಥಾನ ಪಡೆದಿದ್ದ ಪರಾಗ್ ಅವರು 2022-23ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಐದನೇ ಅತಿ ಹೆಚ್ಚು ರನ್​ಗಳಿಸಿದ್ದ ಆಟಗಾರರಾಗಿದ್ದರು. 69 ಸರಾಸರಿಯೊಂದಿಗೆ 552 ರನ್​ಗಳನ್ನು ಗಳಿಸಿದ್ದ ಪರಾಗ್​ ಮೂರು ಶತಕ ಮತ್ತು ಒಂದು ಅರ್ಧಶತಕ ಸಿಡಿಸಿದ್ದರು.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಪರಾಗ್​ ಕೇವಲ 45 ಎಸೆತಗಳಿಂದ 84 ರನ್​ ಬಾರಿಸಿದ್ದರು. ಅವರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 6 ಆಕರ್ಷಕ ಸಿಕ್ಸರ್​ ಮತ್ತು 7 ಬೌಂಡರಿ ದಾಖಲಾಯಿತು. ಅದರಲ್ಲೂ ಅನ್ರಿಚ್​ ನೋರ್ಜೆ ಅವರಿಗೆ ಸರಿಯಾಗಿ ದಂಡಿಸಿದರು.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಕಿರಿಕ್​ ಮಾಡಿದ್ದ ಹರ್ಷಲ್​ ಪಟೇಲ್​


2022ರಲ್ಲಿ ಆರ್‌ಸಿಬಿ ಮತ್ತು ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಆರ್​ಸಿಬಿ ತಂಡದ ಆಟಗಾರನಾಗಿದ್ದ ಹರ್ಷಲ್​ ಪಡೇಲ್​ ಅವರು ಪರಾಗ್​ ಜತೆ ಕಿರಿಕ್​ ಮಾಡಿಕೊಂಡು ಸರಿಯಾಗಿಯೇ ದಂಡಿಸಿಕೊಂಡಿದ್ದರು. ರಾಜಸ್ಥಾನ್‌ ಇನ್ನಿಂಗ್ಸ್‌ ವೇಳೆ ಹರ್ಷಲ್‌ ಪಟೇಲ್‌ ಎಸೆದ ಕೊನೆಯ ಓವರ್‌ನಲ್ಲಿ ರಿಯಾನ್‌ ಪರಾಗ್‌ ಒಂದು ಬೌಂಡರಿ, 2 ಸಿಕ್ಸರ್‌ ಸೇರಿದಂತೆ 18 ರನ್‌ ಚಚ್ಚಿದ್ದರು. ಅಂತಿಮ ಎಸೆತ ಸಿಕ್ಸರ್‌ ಸಿಡಿದಾಗ ಹರ್ಷಲ್​ ಆಕ್ರೋಶಗೊಂಡು ಇನ್ನಿಂಗ್ಸ್‌ ಮುಗಿಸಿ ಡಗೌಟ್‌ನತ್ತ ಸಾಗುತ್ತಿದ್ದಾಗ ಪರಾಗ್‌ ಜತೆ ಜಗಳಕ್ಕಿಳಿದಿದ್ದರು. ಪರಾಗ್‌ ಕೂಡ ತಕ್ಕ ಜವಾಬು ನೀಡಿದ್ದರು. ಇನ್ನೇನು ಕೈ ಮಿಲಾಯಿಸುವ ಹಂತಕ್ಕೆ ಬಂದಾಗ ಸಹ ಆಟಗಾರರು ಇವರಿಬ್ಬರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಇತ್ತಂಡಗಳ ಆಟಗಾರರು ಪಂದ್ಯದ ಬಳಿಕ ಪರಸ್ಪರ ಕೈ ಕುಲುಕುವ ವೇಳೆಯೂ ಸಿಟ್ಟಿನಲ್ಲಿದ್ದ ಹರ್ಷಲ್​ ಪಟೇಲ್‌, ಪರಾಗ್‌ ಅವರ ಕೈ ಕುಲುಕದೆ ತಮ್ಮ ಕೋಪವನ್ನು ಹೊರಹಾಕಿದ್ದರು. ಪರಾಗ್‌ ಶೇಕ್‌ಹ್ಯಾಂಡ್‌ ಮಾಡಲು ಬಂದರೂ ಪಟೇಲ್‌ ಇದಕ್ಕೆ ಸ್ಪಂದಿಸದೇ ಸಾಗಿದ್ದರು.

Continue Reading

ಕ್ರೀಡೆ

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

LSG vs PBKS: ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು ಲಕ್ನೋ ತಂಡ 2 ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಪಂಜಾಬ್​ ಒಂದು ಪಂದ್ಯ ಮಾತ್ರ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಬಲಿಷ್ಠವಾಗಿ ಗೋಚರಿಸಿದೆ.

VISTARANEWS.COM


on

Kaptaan KL is keeping
Koo

ಲಕ್ನೋ: ರಾಜಸ್ಥಾನ್​ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಕೆ.ಎಲ್​ ರಾಹುಲ್(KL Rahul)​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ಶನಿವಾರದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​​(LSG vs PBKS) ವಿರುದ್ಧ ಕಣಕ್ಕಿಳಿಯಲಿದೆ. ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಬೇಕಿದ್ದರೆ ತಂಡಕ್ಕೆ ಗೆಲುವು ಅತ್ಯಗತ್ಯ.

ಲಕ್ನೋ ತಂಡಕ್ಕೆ ಇದು ತವರಿನ ಮೊದಲ ಪಂದ್ಯವಾಗಿದೆ. ತಂಡ ಬಲಿಷ್ಠವಾಗಿದ್ದರೂ ಕೂಡ ಆಟಗಾರರ ಸಂಘಟಿತ ಪ್ರದರ್ಶನ ಮಾತ್ರ ಸಾಲದು. ಬೌಲಿಂಗ್​ ವಿಭಾಗದಲ್ಲಿ ನವೀನ್​ ಉಲ್​ ಹಕ್​ ಬದಲು ಗಬಾದಲ್ಲಿ ಆಸ್ಟ್ರೇಲಿಯಾದ ಹುಟ್ಟಡಗಿಸಿದ ವಿಂಡೀಸ್​ನ ಯುವ ಆಟಗಾರ ಶಮರ್​ ಜೋಸೆಪ್​ ಅವರನ್ನು ಆಡಿಸಿದರೆ ಉತ್ತಮ. ಬ್ಯಾಟಿಂಗ್​ನಲ್ಲಿಯೂ ಮಾರ್ಕಸ್​ ಸ್ಟೋಯಿಸ್​, ಕೃಣಾಲ್​ ಪಾಂಡ್ಯ, ಬದೋನಿ, ಪಡಿಕ್ಕಲ್​ ಮತ್ತು ಕ್ವಿಂಟನ್​ ಡಿ ಕಾಕ್​ ಸಿಡಿಯುವ ಅನಿವಾರ್ಯತೆ ಇದೆ.

ಕಳೆದ ಪಂದ್ಯದಲ್ಲಿ ರಾಹುಲ್​ ಮತ್ತು ಪೂರನ್​ ಮಾತ್ರ ತಂಡಕ್ಕೆ ಆಸರೆಯಾಗಿದ್ದರು. ಲಕ್ನೋ ಪರ ಚೊಚ್ಚಲ ಪಂದ್ಯವನ್ನಾಡಿದ ಪಡಿಕ್ಕಲ್​ ಶೂನ್ಯಕ್ಕೆ ಔಟಾಗಿದ್ದರು. ಹೀಗಾಗಿ ಈ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಿದೆ. ರವಿ ಬಿಷ್ಟೋಯಿ ಕೂಡ ತುರ್ತು ವೇಗದಲ್ಲಿ ಬೌಲಿಂಗ್​ ಲಯ ಕಂಡುಕೊಳ್ಳುವ ಅಗತ್ಯವಿದೆ. ರಾಜಸ್ಥಾನ್​ ವಿರುದ್ಧ ದುಬಾರಿಯಾಗಿ ಗೋಚರಿಸಿದ್ದರು.

ಪಂಜಾಬ್​ ಆಡಿದ 2 ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಸೋಲು ಕಂಡಿದೆ. ಇದು ತಂಡಕ್ಕೆ ಮೂರನೇ ಪಂದ್ಯವಾಗಿದೆ. ಶಿಖರ್​ ಧವನ್​, ಸ್ಯಾಮ್ ಕರನ್​, ಲಿಯಾಮ್​ ಲಿವಿಂಗ್ಸ್​ ಸ್ಟೋನ್​ ಬ್ಯಾಟಿಂಗ್​ ಬಲವಾದರೆ, ಬೌಲಿಂಗ್​ನಲ್ಲಿ ಅರ್ಶ್​ದೀಪ್​ ಸಿಂಗ್​, ಕಗಿಸೊ ರಬಾಡ, ರಾಹುಲ್​ ಚಹರ್​ ಮತ್ತು ಹರ್‌ಪ್ರೀತ್ ಬ್ರಾರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಒಟ್ಟಾರೆಯಾಗಿ ತಂಡ ಎಲ್ಲ ವಿಭಾಗದಲ್ಲಿ ಸಮರ್ಥವಾಗಿದೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಮುಖಾಮುಖಿ


ಉಭಯ ತಂಡಗಳು ಇದುವರೆಗೆ ಐಪಿಎಲ್​ನಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಲಕ್ನೋ ತಂಡ 2 ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಪಂಜಾಬ್​ ಒಂದು ಪಂದ್ಯ ಮಾತ್ರ ಗೆದ್ದಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಲಕ್ನೋ ಬಲಿಷ್ಠವಾಗಿ ಗೋಚರಿಸಿದೆ.

ಸಂಭಾವ್ಯ ತಂಡಗಳು


ಲಕ್ನೋ:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೇವದತ್ ಪಡಿಕ್ಕಲ್, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಶಮರ್​ ಜೋಸೆಫ್​, ಯಶ್ ಠಾಕೂರ್.

ಪಂಜಾಬ್​ ಕಿಂಗ್ಸ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರಾನ್​, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಾಹರ್.

Continue Reading
Advertisement
Juce Jacking
ಪ್ರಮುಖ ಸುದ್ದಿ13 mins ago

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Lok Sabha Election 2024
ಕರ್ನಾಟಕ35 mins ago

Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

Summer Nail Colours Trend
ಫ್ಯಾಷನ್57 mins ago

Summer Nail Colours Trend: ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Lok Sabha Election 20241 hour ago

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Board Exam
ಬೆಂಗಳೂರು1 hour ago

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

income Tax - how to save tax
ಪ್ರಮುಖ ಸುದ್ದಿ1 hour ago

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

Utthana Essay Competition 2023
ಕರ್ನಾಟಕ2 hours ago

Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Lok Sabha Election 20242 hours ago

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Kodagu University
ಕೊಡಗು2 hours ago

Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

Alia Bhatt wore diamond jewellery
ಸಿನಿಮಾ2 hours ago

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌