Madhya Pradesh: ನನ್ನ ಮಗಳ ಮದ್ವೆ, ಮಕ್ಕಳಿಗೋಸ್ಕರವಾದರೂ ಕೊಟ್ಟ ಸಾಲ ವಾಪಸ್ ಮಾಡಿ ಎಂದು ಉದ್ಯಮಿ ದಂಪತಿ ಆತ್ಮಹತ್ಯೆ - Vistara News

ದೇಶ

Madhya Pradesh: ನನ್ನ ಮಗಳ ಮದ್ವೆ, ಮಕ್ಕಳಿಗೋಸ್ಕರವಾದರೂ ಕೊಟ್ಟ ಸಾಲ ವಾಪಸ್ ಮಾಡಿ ಎಂದು ಉದ್ಯಮಿ ದಂಪತಿ ಆತ್ಮಹತ್ಯೆ

ಮಧ್ಯಪ್ರದೇಶದ ಉದ್ಯಮಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಮಕ್ಕಳಿಗಾಗಿಯಾದರೂ ತಮ್ಮಿಂದ ಪಡೆದುಕೊಂಡ ಸಾಲವನ್ನು ಹಿಂದಿರುಗಿಸುವಂತೆ ಡೆತ್‌ನೋಟ್ ಬರೆದಿಟ್ಟಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

VISTARANEWS.COM


on

A businessman couple commits suicide to asked to return the loan given
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭೋಪಾಲ್: ಮಧ್ಯಪ್ರದೇಶದ (Madhya Pradesh) ಪನ್ನಾದಲ್ಲಿ ಉದ್ಯಮಿಯೊಬ್ಬರು (Businessman) ತಮ್ಮ ಪತ್ನಿಗೆ ಗುಂಡು ಹಾರಿಸಿ ಕೊಂದು, ತಾವು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ದೊರೆತ ಡೆತ್‌ನೋಟ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಬಾಗೇಶ್ವರ ಧಾಮ್ (Bageshwar Dham) ಭಕ್ತರೂ ಆಗಿರುವ ಉದ್ಯಮಿ ಸಂಜಯ್ ಸೇಠ್ (Sanjay Seth) ಅವರು, ಡೆತ್‌ ನೋಟ್‌ನಲ್ಲಿ ತಮ್ಮ ಮಗಳ ಮದುವೆ ಕುರಿತು ಸೇರಿ ಅನೇಕ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಈ ಡೆತ್ ನೋಟ್ ಆಧರಿಸಿ ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸಿದ್ದಾರೆ.

ಗುರೂಜಿ ನನ್ನನ್ನು ಕ್ಷಮಿಸಿ. ಮತ್ತೊಂದು ಜನ್ಮ ಇದ್ದರೆ ಖಂಡಿತವಾಗಿಯೂ ನಾನು ನಿಮ್ಮ ಕಟ್ಟಾ ಭಕ್ತನಾಗಿಯೇ ಜನಿಸುವೆ ಎಂದು ಅವರು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ, ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು, ಅದರಲ್ಲಿ ಅಳುತ್ತಾ ಅವರು ತಮ್ಮಿಂದ ಸಾಲ ಪಡೆದು ಹಿಂದಿರುಗಿಸದವರ ಬಗ್ಗೆ ಮಾಹಿತಿ ನೀಡಿದ್ದಾರೆ.

ದಯವಿಟ್ಟು ನನ್ನ ಮಕ್ಕಳಿಗೋಸ್ಕರ, ನನ್ನ ಮಗಳ ಮದುವೆಗಾಗಿ ನಾನು ನೀಡಿದ ಸಾಲವನ್ನು ಹಿಂದುರಿಗಿಸಿ. 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಮಗಳ ಮದುವೆ ವೆಚ್ಚ ಮಾಡಿ. ಮಗಳ ಖಾತೆಯಲ್ಲಿ ಹಣವಿದೆ. ಲಾಕರ್‌ನಲ್ಲಿ 29 ಲಕ್ಷ ರೂ. ಇದೆ. ನಾನು ಮತ್ತು ನನ್ನ ಹೆಂಡತಿ ದೂರ ಹೋಗುತ್ತಿದ್ದೇವೆ. ನಮಗೆ ಬದುಕಲು ಆಗುತ್ತಿಲ್ಲ. ಮಗಳಿಗಾಗಿ ಸಾಕಷ್ಟು ಆಭರಣಗಳಿವೆ. ಮಕ್ಕಳೇ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಸಂಜಯ್ ಸೇಠ್ ಹೇಳಿದ್ದಾರೆ.

ಇದನ್ನೂ ಓದಿ: Women commits suicide : ಕೌಟುಂಬಿಕ ಕಲಹ ಹಿನ್ನೆಲೆ, 3 ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಸಂಜಯ್ ಹಾಗೂ ಅವರ ಪತ್ನಿ ಮೀನು ನಗರದ ಕಿಶೋರ್‌ಗಂಜ್‌ನಲ್ಲಿ ವಾಸವಾಗಿದ್ದರು. ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಅವರಿಬ್ಬರು ಗುಂಡ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಕುಟುಂಬದ ಸದಸ್ಯರು ಅವರಿದ್ದ ಸ್ಥಳಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಮೀನು ಮೃತಪಟ್ಟಿದ್ದರೆ, ಸಂಜಯ್ ಇನ್ನೂ ಉಸಿರಾಡುತ್ತಿದ್ದರು. ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Drunken Groom ತನ್ನನ್ನು ವರಿಸುವ ವರ ಬರಲಿದ್ದಾನೆ ಎಂದು ವಧು ಕನಸು ಕಾಣುತ್ತಿದ್ದಾರೆ ವರ ಮಹಾಶಯ ಸಿಕ್ಕಾಪಟ್ಟೆ ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾನೆ. ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ನಿರಾಕರಿಸಿದ್ದಾಳೆ.

VISTARANEWS.COM


on

Drunken Groom
Koo

ಮಧ್ಯಪ್ರದೇಶ: ‘ಒಂದು ಗಂಡಿಗೊಂದು ಹೆಣ್ಣು ಹೇಗೋ ಏನೋ ಹೊಂದಿಕೊಂಡು/ ದುಃಖ ಹಗುರ ಏನುತಿರೆ/ ಪ್ರೇಮವೇನು ಹಾಸ್ಯವೇ?’ ನರಸಿಂಹ ಸ್ವಾಮಿಯವರ ಈ ಕವಿತೆಯ ಸಾಲು ಕೇಳುತ್ತಿದ್ದರೆ ಮದುವೆ ಆಗದಿದ್ದವರಿಗೂ ಒಮ್ಮೆ ಮದುವೆಯಾಗಿಬಿಡೋಣ ಅನಿಸುತ್ತದೆ. ಸಂಗಾತಿಯ ಬಗ್ಗೆ, ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಈ ಕವಿತೆ ಹಸಿ ಎದೆಯಲ್ಲಿ ಪ್ರೇಮಾಂಕುರದ ಬೀಜ ಬಿತ್ತುತ್ತದೆ. ತಮ್ಮ ಮದುವೆಯನ್ನು ಹಾಗೇ ಆಚರಿಸಬೇಕು, ಈ ರೀತಿಯಾಗಿ ಮಾಡಬೇಕು ಎಂದು ಈಗಿನವರು ತಿಂಗಳಾನುಗಟ್ಟಲೆಯಿಂದ ತಯಾರಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ವರ ಮಹಾಶಯ ಸಿಕಾಪಟ್ಟೆ ಕುಡಿದು (Drunken Groom) ನಡೆಯಬೇಕಿದ್ದ ತನ್ನ ಮದುವೆಯನ್ನೇ ಮುರಿದುಕೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.

ತನ್ನನ್ನು ವರಿಸುವವನು ಬರುತ್ತಾನೆ ಎಂದು ವಧು ಕನಸು ಕಂಗಳಿನಿಂದ ಕಾಯುತ್ತಿದ್ದರೆ ಅವಳ ಕನಸಿಗೆ ವರನು ತಣ್ಣೀರು ಎರೆಚಿದ್ದಾನೆ. ಭಿಂಡ್ ಜಿಲ್ಲೆಯ ಲಹಾರ್ ಮೂಲದ ವೀರೇಂದ್ರ ರಾಜಾವತ್ ಅವರ ಮಗನ ಮದುವೆಯ ಮೆರವಣಿಗೆ ಬ್ಯಾಂಡ್ ವಾದ್ಯಗಳ ಮೂಲಕ  ವಧುವಿನ ಮನೆಯ ಬಾಗಿಲಿಗೆ ಬಂದಿತ್ತು. ಆದರೆ ವರ ಕುಡಿದ ಮತ್ತಿನಲ್ಲಿದ್ದ. ಕುದುರೆಯಿಂದ ಇಳಿಯುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಆತ ಇದ್ದ. ಅಲ್ಲಿದ್ದವರು ಕೆಳಗೆ ಬಿದ್ದ ವರನನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ. ಆದರೆ ಆತನಡೆಯುವಾಗ ಮತ್ತೆ ಎಡವಿ ಬಿದ್ದಿದ್ದಾನೆ. ಹಾಗೇ ಅವನ ಸ್ನೇಹಿತರು ಕೂಡ ಕುಡಿದ ಮತ್ತಿನಲ್ಲಿದ್ದಿದ್ದರು ಎನ್ನಲಾಗಿದೆ.

ವರನ ಈ ಸ್ಥಿತಿ ಕಂಡು ಬೇಸರಗೊಂಡ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಆಕೆಯ ಮನವೊಲಿಸಲು ಕುಟುಂಬಸ್ಥರು ಹಾಗೂ ವರನ ಕಡೆಯವರು ಎಷ್ಟೇ ಪ್ರಯತ್ನಿಸಿದರೂ ಆಕೆ ತನ್ನ ನಿಲುವನ್ನು ಬದಲಾಯಿಸಿದೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ವರನ ಕಡೆಯವರು ಕೋಪಗೊಂಡಿದ್ದು, ಎರಡು ಕುಟುಂಬದ ನಡುವೆ ವಾಗ್ವಾದ ಏರ್ಪಟ್ಟಿದೆ. ಆ ವೇಳೆ ವರನ ಕಡೆಯವರು ವಧುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಧುವಿನ ಕಡೆಯವರು ಹಾಗೂ ವರನ ಕಡೆಯವರು ಪರಸ್ಪರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕಡೆಯವರು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಇರುವಂತಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

ವರ ಕುಡಿದ ಅಮಲಿನಲ್ಲಿ ಬಂದಿದ್ದು, ವಧುವಿನ ಮನೆ ಬಾಗಿಲಿಗೆ ಬಂದ ಕೂಡಲೇ ಕುಸಿದು ಬಿದ್ದಿದ್ದಾನೆ. ಇದನ್ನು ಕಂಡು ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬಾರಾತ್ ಅನ್ನು ವಾಪಾಸ್ ಕಳುಹಿಸಿದ್ದಾಳೆ. ಇದರಿಂದ ಪರಸ್ಪರ ಹಲ್ಲೆ ಮತ್ತು ಸುಲಿಗೆ ಆರೋಪದಡಿ ಎರಡು ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಅಲ್ಲನ ನಗರ ಠಾಣಾ ಪ್ರಭಾರಿ ರಾಜ್ ಕುಮಾರ್ ತಿಳಿಸಿದ್ದಾರೆ.

Continue Reading

Latest

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Lok sabha election-2024: ಮತದಾನ ಎಂಬುದು ದೇಶಕ್ಕಾಗಿ ನಾವು ನಿಭಾಯಿಸಲೇ ಬೇಕಾದ ಕರ್ತವ್ಯ. ಐದು ವರ್ಷಗಳಿಗೊಮ್ಮೆ ಬರುವ ಈ ಹಬ್ಬದಲ್ಲಿ ಭಾಗಿಯಾಗುವುದನ್ನು ಯಾರೂ ತಪ್ಪಿಸಿಕೊಳ್ಳಬಾರದು. ಮತಗಟ್ಟೆಗಳಿಗೊಮ್ಮೆ ಸುತ್ತು ಹಾಕಿ ನೋಡಿದರೆ ತಿಳಿಯುತ್ತದೆ ನಮ್ಮ ಒಂದು ಮತ ಎಷ್ಟು ಅಮೂಲ್ಯ ಎಂಬುದು.

VISTARANEWS.COM


on

By

Lok sabha election-2024
Koo

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ (india) ಮತ್ತೆ ಲೋಕಸಭಾ ಚುನಾವಣೆಯಲ್ಲಿ (Lok sabha election-2024) ಮತದಾನ (vote) ಮಾಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಗ್ರಾಮ (village), ತಾಲ್ಲೂಕು (taluk), ಜಿಲ್ಲೆ (district), ರಾಜ್ಯ (state), ದೇಶ (nation) ಮಟ್ಟದ ಯಾವುದಾದರೊಂದು ಚುನಾವಣೆ (election) ಭಾರತದಲ್ಲಿ ನಡೆಯುತ್ತಲೇ ಇರುತ್ತದೆ. ಇದು ಹಲವಾರು ವಿಶೇಷ ಘಟನೆಗಳಿಗೆ ಸಾಕ್ಷಿಯಾಗುತ್ತದೆ.

ಹೊಸ ಮತದಾರರಿಂದ ಹಿಡಿದು ಹಿರಿಯ ನಾಗರಿಕರು (Senior citizens) ಇದೇ ಮೊದಲು ಎಂಬ ಹುಮ್ಮಸ್ಸಿನಿಂದ ಮತದಾನ ಮಾಡುತ್ತಾರೆ. ಇವರ ನಡುವೆ ಈ ಬಾರಿ ಮತದಾನ ಮಾಡದಿದ್ದರೆ ಏನಾಯಿತು ಎಂದು ನಿರ್ಲಕ್ಷ ತೋರುವ ಯುವ, ಮಧ್ಯವಯಸ್ಕರೂ ಇರುತ್ತಾರೆ. ಇವರೆಲ್ಲರಿಗೂ ವಯಸ್ಸಾದ ಹಿರಿಯ ಮತದಾರರು ಅದರಲ್ಲೂ ಶತಾಯುಷಿ ಮತದಾರರು ಸ್ಫೂರ್ತಿಯಾಗುತ್ತಾರೆ.

ಲೋಕಸಭಾ ಚುನಾವಣೆ ದೇಶದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ. ಮತದಾನ ಎಂಬುದು ದೇಶಕ್ಕಾಗಿ ನಾವು ಮಾಡುವ ಕರ್ತವ್ಯ. ಇದನ್ನು ಪ್ರತಿಯೊಬ್ಬರೂ ನಿಭಾಯಿಸಲೇಬೇಕು. ಮತಗಟ್ಟೆಗಳಿಗೊಮ್ಮೆ ಸುತ್ತು ಹಾಕಿದಾಗ ನಮ್ಮ ಮತ ಎಷ್ಟು ಅಮೂಲ್ಯ ಎಂಬುದು ಗೊತ್ತಾಗುತ್ತದೆ. ಯಾಕೆಂದರೆ ಅಲ್ಲಿ ವಯಸ್ಸಾದ ನಾಗರಿಕರು, ಅಂಗವಿಕಲರು, ಗರ್ಭಿಣಿಯರು, ಪುಟ್ಟಪುಟ್ಟ ಮಕ್ಕಳನ್ನು ಹೊತ್ತು ಬರುವ ತಾಯಂದಿರು.. ಹೀಗೆ ಕೆಲವರು ಎಷ್ಟೇ ಕಷ್ಟವಾದರೂ ಮತದಾನ ಮಾಡುವುದನ್ನು ತಪ್ಪಿಸುವುದಿಲ್ಲ.

ಮತದಾರರಿಗೆ ಸ್ಫೂರ್ತಿ ತುಂಬಲು ಹರಿಯಾಣದಲ್ಲಿ ಹೊಸ ಯೋಜನೆ ಮಾಡಲಾಗಿದೆ. ಅಲ್ಲಿ ಶತಾಯುಷಿ ಮತದಾರರನ್ನು ಚುನಾವಣೆಗಾಗಿ ಜಿಲ್ಲೆಗಳ ಐಕಾನ್ ಗಳಾಗಿ ಗುರುತಿಸಲಾಗಿದೆ.

ಇದನ್ನೂ ಓದಿ: PM Narendra Modi: ಬೆಂಗಳೂರಿನಲ್ಲಿ ಇಂದು ಮೋದಿ; ಸಂಚಾರಕ್ಕೆ ಪರ್ಯಾಯ ರಸ್ತೆಗಳ ಸೂಚನೆ

ಹರಿಯಾಣದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನುರಾಗ್ ಅಗರ್ವಾಲ್ ಅವರು ಶುಕ್ರವಾರ ಪಲ್ವಾಲ್ ಜಿಲ್ಲೆಯ 118 ವರ್ಷದ ಧರ್ಮವೀರ್ ರಾಜ್ಯದ ಅತ್ಯಂತ ಹಿರಿಯ ಮತದಾರರಾಗಿದ್ದಾರೆ. ವಯಸ್ಸಾದ ಇವರಂತಹ ಮತದಾರರು ಯುವ ಮತದಾರರಿಗೆ ಸ್ಫೂರ್ತಿಯಾಗುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.


ಐಕಾನ್ ಶತಾಯುಷಿಗಳು

ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ವಯೋವೃದ್ಧರು ಮತ್ತು ಯುವ ಮತದಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಜಿಲ್ಲೆಗಳ ಐಕಾನ್‌ಗಳಾಗಿ ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಹಿರಿಯ ಮಹಿಳೆ

ಮಹಿಳೆಯರಲ್ಲಿ ಸಿರ್ಸಾ ಜಿಲ್ಲೆಯ 117 ವರ್ಷದ ಬಲ್ಬೀರ್ ಕೌರ್ ರಾಜ್ಯದ ಅತ್ಯಂತ ಹಿರಿಯ ಮಹಿಳಾ ಮತದಾರರಾಗಿದ್ದು, ಸೋನೆಪತ್ ಜಿಲ್ಲೆಯ 116 ವರ್ಷದ ಭಗವಾನಿ ಅನಂತರದ ಸ್ಥಾನದಲ್ಲಿದ್ದಾರೆ ಎಂದರು.

ಶತಾಯುಷಿ ಮತದಾರರು

ಪಾಣಿಪತ್ ಜಿಲ್ಲೆಯ ಲಕ್ಷಿಶೇಕ್‌ಗೆ 115 ವರ್ಷ, ರೋಹ್ಟಕ್‌ನ ಚಂದ್ರೋ ಕೌರ್, ಫತೇಹಾಬಾದ್ ಜಿಲ್ಲೆಯ ರಾಣಿ ಮತ್ತು ಕುರುಕ್ಷೇತ್ರ ಜಿಲ್ಲೆಯ ಅಂಟಿದೇವಿ ಅವರ ವಯಸ್ಸು 112. ಇನ್ನು ಸರ್ಜಿತ್ ಕೌರ್ ಮತ್ತು ಚೋಬಿ ದೇವಿ ಇಬ್ಬರಿಗೂ 111 ವರ್ಷ, ರೇವಾರಿ ಜಿಲ್ಲೆಯ ನಾರಾಯಣಿ ಅವರಿಗೆ 110 ವರ್ಷ. ಕೈತಾಲ್ ಜಿಲ್ಲೆಯಲ್ಲಿ 109 ವರ್ಷ ವಯಸ್ಸಿನ ಮತದಾರ ಫುಲ್ಲಾ ಮತ್ತು ಫರಿದಾಬಾದ್ ಜಿಲ್ಲೆಯ ಚಂದೇರಿ ದೇವಿ 109 ವರ್ಷ ವಯಸ್ಸಿನವರಾಗಿದ್ದಾರೆ ಎಂದರು.

ಜಿಂದ್ ಜಿಲ್ಲೆಯ ರಾಮದೇವಿ ಮತ್ತು ನುಹ್ ಜಿಲ್ಲೆಯ ಹರಿ 108 ವರ್ಷ ವಯಸ್ಸಿನವರು. ಜಜ್ಜರ್ ಜಿಲ್ಲೆಯ ಮೇವಾ ದೇವಿ, ಕರ್ನಾಲ್ ಜಿಲ್ಲೆಯ ಗುಲ್ಜಾರ್ ಸಿಂಗ್, ಹಿಸಾರ್ ಜಿಲ್ಲೆಯ ಶಾಡ್ಕಿನ್ ಮತ್ತು ಶ್ರೀರಾಮ್ ಮತ್ತು ಚಾರ್ಖಿ ದಾದ್ರಿಯ ಗೀನಾ ದೇವಿ 106 ವರ್ಷ ವಯಸ್ಸಿನ ಮತದಾರರು. ಭಿವಾನಿ ಜಿಲ್ಲೆಯ ಹರ್ದೇಯಿ ಅವರಿಗೆ 103 ವರ್ಷ ಮತ್ತು ಯಮುನಾನಗರದ ಫೂಲ್ವತಿ ಅವರಿಗೆ 100 ವರ್ಷ ವಯಸ್ಸಾಗಿದೆ ಎಂದು ಅವರು ತಿಳಿಸಿದರು.

ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗೀಯ ಚುನಾವಣಾಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಚುನಾವಣೆಯ ಐಕಾನ್‌ಗಳನ್ನು ಮಾಡಲು ಅಗರ್ವಾಲ್ ಒತ್ತಾಯಿಸಿದರು.

ಈ ಬಾರಿ ಘೋಷಣೆ ಏನು?

ಈ ವರ್ಷ, ಭಾರತೀಯ ಚುನಾವಣಾ ಆಯೋಗವು ‘ಚುನಾವ್ ಕಾ ಪರ್ವ್ ದೇಶ್ ಕಾ ಗರ್ವ್’ ಎಂಬ ಘೋಷಣೆಯನ್ನು ಲೋಕಸಭೆ ಚುನಾವಣೆಯ ಪ್ರಮುಖ ಘೋಷಣೆಯನ್ನಾಗಿ ಮಾಡಿದೆ. ಇದರಿಂದಾಗಿ ನಾಗರಿಕರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.

ಐದು ವರ್ಷಕ್ಕೊಮ್ಮೆ ಬರುವ ಹಬ್ಬ

ರಾಜ್ಯದ 18- 19 ವರ್ಷ ವಯೋಮಾನದ ಯುವಕರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿದಾಗ ಪ್ರಜಾಪ್ರಭುತ್ವದ ಶಕ್ತಿ ಹಾಗೂ ಮತದಾನದ ಮಹತ್ವ ತಿಳಿಯುತ್ತದೆ. ಐದು ವರ್ಷಕ್ಕೊಮ್ಮೆ ಪ್ರಜಾಪ್ರಭುತ್ವದ ಹಬ್ಬ ಬರುವುದರಿಂದ ಯುವಕರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಎಂದು ಅವರು ಹೇಳಿದರು.

Continue Reading

ದೇಶ

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

Viral Video ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ ಹಾಗಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಮಹಿಳೆಯೊಬ್ದಳು ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜನರು ಕೂಡ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

Viral Video
Koo

ನವದೆಹಲಿ: ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾದರೆ ಅದು ಬಡತನಕ್ಕೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ನಿಟ್ಟಿನಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ಆದರೆ ಕೆಲವರು ಇದಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಅದರಲ್ಲೂ ಮುಸ್ಲಿಮ್ ಸಮುದಾಯದವರು ಈ ವಿಚಾರದಲ್ಲಿ ಸಂಪೂರ್ಣವಾಗಿ ಹಾದಿ ತಪ್ಪುತ್ತಿದ್ದಾರೆ. ಮಕ್ಕಳನ್ನು ದೇವರು ಕೊಡುವುದು ಎಂದು ಸಬೂಬು ನೀಡುತ್ತಾತೆ. ಈ ಕಾರಣಕ್ಕೆ ಅವರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇದ್ಯಾವುದೂ ಅರಿವಿಲ್ಲದ ಅವರು ಸರ್ಕಾರವನ್ನು ದೂರಲು ಆರಂಭಿಸುತ್ತಾರೆ. ಅಂತೆಯೇ 7 ಮಕ್ಕಳನ್ನು ಹೊಂದಿರುವ ಮುಸ್ಲಿಂ ಮಹಿಳೆಯೊಬ್ಬಳು “ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ರಾಹುಲ್ ಗಾಂಧಿ (Rahul Gandhi) ಪ್ರಧಾನಿಯಾಗಬೇಕು” ಎಂದು ಹೇಳಿದ ವಿಡಿಯೊ ಸಿಕ್ಕಾಪಟ್ಟೆ ವೈರಲ್ ( Viral Video) ಆಗಿದೆ. ಜನರು ಕೂಡಾ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಿಳೆಯು ದೇವರು ನಮಗೆ  7 ಮಕ್ಕಳನ್ನು ಕರುಣಿಸಿದ್ದಾನೆ. ಆದರೆ ಮೋದಿ ಸರ್ಕಾರ ತಾನು ಬಡತನದಲ್ಲಿರುವಂತೆ ಮಾಡಿದೆ. ಹಾಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಬೇಕು. ಇದರಿಂದ ಬಡತನ ದೂರವಾಗುತ್ತದೆ ಎಂದು ರಾಹುಲ್ ಗಾಂಧಿ ಪರ ಬೆಂಬಲ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ವಿವಾದ ಹುಟ್ಟುಹಾಕಿದೆ.

ಈ ವಿಡಿಯೋಗೆ 37.9k ವೀವ್ಸ್ ಸಿಕ್ಕಿದ್ದು, ಸುಮಾರು 3000 ಲೈಕ್ಸ್ ಬಂದಿದೆ. 1000ಕ್ಕೂ ಹೆಚ್ಚು ಈ ವಿಡಿಯೋ ಮರುಪೋಸ್ಟ್ ಆಗಿದೆ. ಹಾಗೇ ಆಕೆಗೆ 7 ಮಂದಿ ಮಕ್ಕಳನ್ನು ದೇವರು ಕೊಟ್ಟಿದ್ದಾನೆ ಎಂದ ಮೇಲೆ ಆಕೆಯ ಬಡತನಕ್ಕೆ ದೇವರೇ ಕಾರಣನಾಗುತ್ತಾನೆ ಹೊರತು ಪ್ರಧಾನಿ ಮೋದಿಯವರು ಹೇಗೆ ಕಾರಣವಾಗುತ್ತಾರೆ ಎಂದು ಜನರು ವ್ಯಂಗ್ಯಮಾಡಿದ್ದಾರೆ. ಹಾಗೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಪಡಿತರ ಚೀಟಿಗೆ ಅರ್ಹತೆ ಹೊಂದಿರಬಾರದು ಎಂದು ಹಲವರು ವಾದಿಸಿದ್ದಾರೆ. ಇದು ಟೀಕೆಗೆ ಕಾರಣವಾಗಿದೆ.

ಈ ಹಿಂದೆ ಏಪ್ರಿಲ್ 17ರಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ರಾಹುಲ್ ಗಾಂಧಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬಡತನವನ್ನು ತಕ್ಷಣವೇ ನಿರ್ಮೂಲನೆ ಮಾಡಲು ಸಾಧ್ಯವಾಗದಿದ್ದರೂ, ಸಂಘಟಿತ ಪ್ರಯತ್ನಗಳು ಅದನ್ನು ಗಮನಾರ್ಹವಾಗಿ ನಿವಾರಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರ ಬಡತನ ನಿರ್ಮೂಲನೆಯ ಪ್ರತಿಜ್ಞೆಯನ್ನು ಲೇವಡಿ ಮಾಡಿದ್ದರು.

ಇದನ್ನೂ ಓದಿ: Neha Murder Case: ನೇಹಾ ಹತ್ಯೆ: ಅಪರಾಧಿಗೆ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ

ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿಯವರು ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿಯವರ ಘೋಷಣೆಯನ್ನು ಲೇವಡಿ ಮಾಡಿದ್ದಾರೆ. ಮತ್ತು ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಪಕ್ಷವು ನೀಡಿರುವ ದೀರ್ಘಾವಾಧಿಯ ಭರವಸೆಗಳನ್ನು ಎತ್ತಿ ಹಿಡಿದ ಅವರು, ಕಾಂಗ್ರೆಸ್ ನವರ ಘೋಷಣೆ ನಗೆಪಾಟಲಿಗೀಡಾಗಿದೆ ಎಂದು ವ್ಯಂಗ್ಯವಾಡಿದ್ದರು.

Continue Reading

ದೇಶ

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

AC Helmet ಮನೆಯಲ್ಲಿ, ಆಫೀಸ್ ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ಸಣ್ಣಗೆ ಬೆವರುತ್ತಿದ್ದಾರೆ. ಇನ್ನು ಹೊರಗಡೆ ಕೂಲಿ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದು. ಅದರಲ್ಲೂ ಸುಡುಬಿಸಿಲನ್ನೂ ಲೆಕ್ಕಿಸದೇ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೊಲೀಸರ ಪಾಡಂತೂ ವಿವರಿಸಲು ಅಸಾಧ್ಯ.

VISTARANEWS.COM


on

AC Helmet
Koo

ಅಹಮದಾಬಾದ್: ಬಿಸಿಲಿನ ತಾಪ ಸಿಕ್ಕಾಪಟ್ಟೆ ಹೆಚ್ಚಿದೆ. ಮನೆಯಲ್ಲಿ, ಆಫೀಸ್ ನಲ್ಲಿ ಎಸಿ ಹಾಕಿಕೊಂಡು ಕುಳಿತುಕೊಳ್ಳುವವರೂ ಕೂಡ ಈ ಬಿಸಿಲಿನ ಝಳಕ್ಕೆ ಸಣ್ಣಗೆ ಬೆವರುತ್ತಿದ್ದಾರೆ. ಇನ್ನು ಹೊರಗಡೆ ಕೆಲಸ ಮಾಡುವವರ ಪರಿಸ್ಥಿತಿ ಹೇಳತೀರದು. ಅದರಲ್ಲೂ ಸುಡುಬಿಸಿಲನ್ನೂ ಲೆಕ್ಕಿಸದೇ ಕರ್ತವ್ಯನಿರತರಾಗಿರುವ ಟ್ರಾಫಿಕ್ ಪೊಲೀಸರ (Traffic Police) ಪಾಡಂತೂ ವಿವರಿಸಲು ಅಸಾಧ್ಯ. ಸುಡುವ ಇವರ ನೆತ್ತಿ ತಣ್ಣಗಿರಲಿ ಎಂದು ಎಸಿ ಹೆಲ್ಮಟ್ (AC Helmet) ಎಂಬ ವಿಶೇಷವಾದ ಹೆಲ್ಮೆಟ್ ಅನ್ನು ಪರಿಚಯಿಸಲಾಗಿದೆ. ಏನಿದು ಎಂಬ ಕುತೂಹಲ ನಿಮಗೂ ಇರಬಹುದು. ಇದಕ್ಕೆ ಸಂಬಂಧಪಟ್ಟ ಮಾಹಿತಿಗಳು ಇಲ್ಲಿವೆ.

ಸುಡುವ ಬಿಸಿಲಿನಲ್ಲಿ ನಿಂತು ಕಾರ್ಯ ನಿರ್ವಹಿಸುವ ಟ್ರಾಫಿಕ್ ಪೊಲೀಸರಿಗೆ ಇದು ಖುಷಿ ನೀಡುವ ಸಂಗತಿಯಾಗಿದೆ. ಬಿಸಿಲಿನ ತಾಪವನ್ನು ನಿಭಾಯಿಸಲು ಅಹಮದಾಬಾದ್ ಪೊಲೀಸರು ವಿಶೇಷ ಪರಿಹಾರವನ್ನು ಕಂಡುಕೊಂಡಿದ್ದಾರೆ. ಅಹಮದಾಬಾದ್ ನಲ್ಲಿ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಐದು ಜನ ಟ್ರಾಫಿಕ್ ಪೊಲೀಸರಿಗೆ ಎಸಿ ಹೆಲ್ಮೆಟ್ ಗಳ್ನು ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಎಸಿ ಹೆಲ್ಮೆಟ್ ಧರಿಸಿ ಖುಷಿಯಲ್ಲಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯದಲ್ಲಿ ಅಹಮದಾಬಾದ್ ನ ಪಿರಾನಾ, ಥಕ್ಕರ್ ನಗರ ಮತ್ತು ನಾನಾ ಚಿಲೋಡ್ ಪ್ರದೇಶಗಳನ್ನು ಈ ಎಸಿ ಹೆಲ್ಮೆಟ್ ಗಳ ಪ್ರಾಯೋಗಿಕ ಹಂತಕ್ಕಾಗಿ ಆಯ್ಕೆ ಮಾಡಲಾಗಿದೆ. ಇದು ಯಶಸ್ವಿಯಾದರೆ ನಗರದ ಎಲ್ಲಾ ಟ್ರಾಫಿಕ್ ಅಧಿಕಾರಿಗಳಿಗೆ ಹೆಲ್ಮೆಟ್ ಗಳನ್ನು ವಿತರಿಸಲಾಗುವುದು ಎನ್ನಲಾಗಿದೆ.

ಈ ಹೆಲ್ಮೆಟ್ ಗಳು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ಫ್ಯಾನ್ ರೀತಿಯ ಅಂತರ್ನಿರ್ಮಿತ ರಚನೆಯನ್ನು ಹೊಂದಿರುವ ಪ್ಲಾಸ್ಟಿಕ್ ಟಾಪ್ ಅನ್ನು ಒಳಗೊಂಡಿದೆ. ಈ ಹೆಲ್ಮೆಟ್ ಅನ್ನು ತಂಪಾಗಿಸುವ ಕಾರ್ಯವನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಸೊಂಟದ ಸುತ್ತಲೂ ಆರಾಮವಾಗಿ ಕಟ್ಟಿಕೊಂಡಿರುವ ಬ್ಯಾಟರಿ ಮಾಡುತ್ತದೆ. ಈ ಹೆಲ್ಮೆಟ್ ಗಳು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆಯಂತೆ. ಇದು ತಂಪಾಗಿಸುವುದರ ಜೊತೆಗೆ ಟ್ರಾಫಿಕ್ ಪೊಲೀಸರನ್ನು ಧೂಳು, ಮಾಲಿನ್ಯಕಾರಕಗಳಿಂದ ರಕ್ಷಣೆ ಕೂಡ ನೀಡುತ್ತದೆಯಂತೆ. ಹಾಗೇ ಈ ಹೆಲ್ಮೆಟ್ ಸಾಮಾನ್ಯ ಹೆಲ್ಮೆಟ್ ಗಳಿಗೆ ಹೋಲಿಸಿದರೆ 500ಗ್ರಾಂಗಳಷ್ಟು ಭಾರವನ್ನು ಹೊಂದಿದೆಯಂತೆ.

ಈ ಎಸಿ ಹೆಲ್ಮಟ್ ಗಳ ಪ್ರಾಯೋಗಿಕ ಹಂತವು ಆಗಸ್ಟ್ 10, 2023ರಂದು ಪ್ರಾರಂಭವಾಯಿತು. ಇದೀಗ ಅವು ಪ್ರಾಯೋಗಿಕ ಹಂತದಲ್ಲಿದ್ದು, ಯಾವುದೇ ಸಮಸ್ಯೆಯಾಗದೆ ಅನುಕೂಲಕರವಾಗಿದ್ದರೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೂ ವಿತರಿಸಲಾಗುತ್ತದೆಯಂತೆ.

ಇದನ್ನೂ ಓದಿ: Rowdy Sheeters: ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಮಚ್ಚು ಲಾಂಗ್, ಬೀದಿಯಲ್ಲೇ ಅಟ್ಟಾಡಿಸಿದರು!

ಈ ಕುರಿತು ಮಾತನಾಡಿದ ಅಹಮದಾಬಾದ್ ನ ಸಂಚಾರ ಪೂರ್ವದ ಉಪಪೊಲೀಸ್ ಕಮಿಷನರ್ ಸಫಿನ್ ಹಸನ್, “ಎಸಿ ಹೆಲ್ಮೆಟ್ ಗಳನ್ನು ಪ್ರತಿಕ್ರಿಯೆಗಾಗಿ ಹಿರಿಯ ಅಧಿಕಾರಿಗಳು ನನಗೆ ಹಸ್ತಾಂತರಿಸಿದ್ದಾರೆ. ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ನಂತರ ನಾವು ಮೂರು ಸ್ಥಳಗಳಲ್ಲಿ ಇದನ್ನು ಪ್ರಾಯೋಗಿಕ ಹಂತವಾಗಿ ಬಳಸಲಾಗಿದೆ. ಇದು 8 ಗಂಟೆಗಳ ಕಾಲ ಕೆಲಸ ಮಾಡಲಿದ್ದು, ಟ್ರಾಫಿಕ್ ಪೊಲೀಸರನ್ನು ಮಾಲಿನ್ಯ ಮತ್ತು ಧೂಳಿನಿಂದ ರಕ್ಷಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಆರಂಭದಲ್ಲಿ ಹೆಲ್ಮೆಟ್ ಗಳನ್ನು ಪರಿಚಯಿಸುವ ಮೊದಲು ಕಾರ್ಟ್ರಿಡ್ಜ್ ಮಾಸ್ಕ್ ಗಳನ್ನು ಪ್ರಯೋಗಿಸಿದ್ದೇವೆ. ಆದರೆ ದುರದೃಷ್ಟವಶಾತ್ ಅವು ತೃಪ್ತಿಕರ ಫಲಿತಾಂಶಗಳನ್ನು ನೀಡಲಿಲ್ಲ ಮತ್ತು ಅಧಿಕಾರಿಗಳಿಗೆ ಉಸಿರಾಟದ ಸಮಸ್ಯೆಯನ್ನು ಉಂಟುಮಾಡಿದೆ” ಎಂಬುದಾಗಿ ಅವರು ತಿಳಿಸಿದ್ದಾರೆ.

Continue Reading
Advertisement
Neha Murder case JDS slams hands for defending love jihad to protect accused
ಕ್ರೈಂ2 mins ago

Neha Murder Case: ನೇಹಾಳನ್ನು ಮದುವೆ ಮಾಡಿಸುವಂತೆ ಆಕೆಯ ಹೆತ್ತವರ ಪ್ರಾಣ ತಿಂದಿದ್ದ ಫಯಾಜ್!‌

Drunken Groom
ದೇಶ2 mins ago

Drunken Groom: ಕುಡಿದ ಮತ್ತಿನಲ್ಲಿಯೇ ಮಂಟಪಕ್ಕೆಬಂದ ವರ; ಒದ್ದೋಡಿಸಿದ ವಧು!

Nysa Devgan Kajol shares 3 new pics
ಸಿನಿಮಾ8 mins ago

Nysa Devgan: ಕಾಜೋಲ್‌ ಮಗಳಿಗೆ ಹುಟ್ಟು ಹಬ್ಬದ ಸಂಭ್ರಮ! ನೈಸಾಗೆ ವಯಸ್ಸೆಷ್ಟು?

IPL 2024
ಕ್ರೀಡೆ13 mins ago

IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್​, ರಾಹುಲ್​ಗೆ ದಂಡ

Neha Murder Case
ಹುಬ್ಬಳ್ಳಿ42 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Lok sabha election-2024
Latest53 mins ago

Lok sabha election-2024: ಶತಾಯುಷಿಗಳೇ ಚುನಾವಣೆಯ ಬ್ರಾಂಡ್​ ಅಂಬಾಸಿಡರ್​ಗಳು!

Viral Video
ದೇಶ57 mins ago

Viral Video: 7 ಮಕ್ಕಳನ್ನು ದೇವರು ಕೊಟ್ಟಿದ್ದಾದರೆ ಬಡತನಕ್ಕೆ ಮೋದಿ ಹೇಗೆ ಕಾರಣ? ಮುಸ್ಲಿಂ ಮಹಿಳೆಗೆ ತರಾಟೆ!

AC Helmet
ದೇಶ1 hour ago

AC Helmet: ಬೇಸಿಗೆ ಎಫೆಕ್ಟ್​​; ಟ್ರಾಫಿಕ್ ಪೊಲೀಸರ ಹೆಲ್ಮೆಟ್​ಗೆ ಎಸಿ!

Tarak Ponnappa out of udho udho sri renuka yellamma serial
ಕಿರುತೆರೆ1 hour ago

Tarak Ponnappa: ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ಧಾರಾವಾಹಿಗೆ ವಿದಾಯ ಹೇಳಿದ ʻಕೆಜಿಎಫ್‌ʼ ಖ್ಯಾತಿಯ ನಟ!

electoral Bond
ಪ್ರಮುಖ ಸುದ್ದಿ1 hour ago

Electoral Bond : ಎನ್​ಡಿಎ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್​ ವ್ಯವಸ್ಥೆ ಮರುಜಾರಿ; ನಿರ್ಮಲಾ ಸೀತಾರಾಮನ್​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ42 mins ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ7 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ21 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20246 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

ಟ್ರೆಂಡಿಂಗ್‌