Arshdeep Singh : ಅರ್ಶ್​ದೀಪ್​ ಸಿಂಗ್​ಗೆ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೊಟ್ಟ ಸಲಹೆಯೇನು? - Vistara News

ಕ್ರಿಕೆಟ್

Arshdeep Singh : ಅರ್ಶ್​ದೀಪ್​ ಸಿಂಗ್​ಗೆ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೊಟ್ಟ ಸಲಹೆಯೇನು?

ಅರ್ಶ್​ದೀಪ್​ ಸಿಂಗ್​ (Arshdeep Singh) ಬೌಲಿಂಗ್​ ನಿಖರತೆಯನ್ನು ಅಭ್ಯಾಸ ಮಾಡುವ ಜತೆಗೆ ನೋಬಾಲ್​ ಹಾಕದೇ ಇರುವಂತೆಯೂ ನೋಡಿಕೊಳ್ಳಬೇಕು ಎಂದು ಬಾಲಾಜಿ ಹೇಳಿದ್ದಾರೆ.

VISTARANEWS.COM


on

Arshdeep Singh
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ : ಭಾರತ ತಂಡದ ವೇಗದ ಬೌಲರ್​ಗಳಾದ ಅರ್ಶ್​ದೀಪ್​ ಸಿಂಗ್ (Arshdeep Singh) ಹಾಗೂ ಉಮ್ರಾನ್​ ಮಲಿಕ್​ ಬೌಲಿಂಗ್​ ಎಕಾನಮಿ ವಿಚಾರಕ್ಕೆ ಚರ್ಚೆಗೆ ಹುಟ್ಟುಹಾಕಿದ್ದಾರೆ. ಅದರಲ್ಲೂ ಅರ್ಶ್​ದೀಪ್​ ಸಿಂಗ್​ ನೋ ಬಾಲ್ ಎಸೆತ ಎಸೆಯುವ ಮೂಲಕ ಟೀಕೆಗೆ ಒಳಗಾಗಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅವರು ಕೊನೇ ಓವರ್​ನಲ್ಲಿ 27 ರನ್​ ಬಿಟ್ಟುಕೊಟ್ಟಿದ್ದರು. ಅದರಲ್ಲೊಂದು ನೋಬಾಲ್​ ಕೂಡ ಸೇರಿತ್ತು. ಹೀಗಾಗಿ ಹಿರಿಯ ಆಟಗಾರರನೇಕರು ಅರ್ಶ್​ದೀಪ್​ಗೆ ಸಲಹೆಗಳನ್ನು ಕೊಡುತ್ತಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ಬೌಲರ್​ ಲಕ್ಷ್ಮೀಪತಿ ಬಾಲಾಜಿ ಕೂಡ ಅರ್ಶ್​ದೀಪ್​ ಸಿಂಗ್​ಗೆ ಬೌಲಿಂಗ್ ಸಲಹೆ ಕೊಟ್ಟಿದ್ದಾರೆ.

ಅರ್ಶ್​​ದೀಪ್​ ಸಿಂಗ್​ ತಮ್ಮ ನೋಬಾಲ್​ ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ನೋಬಾಲ್​ನಂಥ ಸಮಸ್ಯೆಯನ್ನು ಸರಿಪಡಿಸುವುದು ಅಷ್ಟೊಂದು ಸುಲಭವಲ್ಲ. ಅವರು ರನ್​ಅಪ್​ ಎಷ್ಟು ಇರಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಅದೇ ರೀತಿ ಅವರು ಒತ್ತಡದಲ್ಲಿ ಬೌಲಿಂಗ್​ ಮಾಡುವುದು ಹೇಗೆ ಎಂಬುದನ್ನೂ ಕಲಿತುಕೊಳ್ಳಬೇಕಾಗುತ್ತದೆ. ಒಂದು ವೇಳೆ ಇದೇ ರೀತಿಯಾಗಿ ನೋಬಾಲ್​ ಎಸೆಯಲು ಆರಂಭಿಸಿದರೆ ಇನ್ನಷ್ಟು ಒತ್ತಡಕ್ಕೆ ಬೀಳಲಿದ್ದಾರೆ ಎಂದು ಹೇಳಿದರು.

ಅರ್ಶ್​ದೀಪ್​ ಸಿಂಗ್​ ಫೂಟ್​ವರ್ಕ್​ ಹೆಚ್ಚಿಸಿಕೊಳ್ಳಬೇಕು. ಬೌಲಿಂಗ್​ ಕೋಚ್​ ನೆರವು ಪಡೆಯುವುದು ಅಗತ್ಯ. ಮುಂದಿನ ಪಂದ್ಯಗಳಲ್ಲಿ ಅವರು ವಿಶ್ವಾಸ ಮೂಡಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | IND VS SL | ಅಂತಿಮ ಟಿ20 ಪಂದ್ಯದಿಂದ ಅರ್ಶ್​ದೀಪ್​ ಸಿಂಗ್​ಗೆ ಕೊಕ್​ ಸಾಧ್ಯತೆ; ಮುಕೇಶ್​ ಕುಮಾರ್​ಗೆ ಅವಕಾಶ?

ಫ್ರಂಟ್​ಫೂಟ್​ ನೊಬಾಲ್​ ದೊಡ್ಡ ಸಮಸ್ಯೆಯೇ ಆಗಿದೆ. ಹೀಗಾಗಿ ಅವರು ವಿಶ್ವಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಓಟದ ಲಯವನ್ನು ಹೆಚ್ಚಿಸಿಕೊಳ್ಳಬೇಕು. ಸರಿಯಾಗಿ ಎಲ್ಲಿ ಹೆಜ್ಜೆ ಇಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು ಎಂಬುದಾಗಿ ಬಾಲಾಜಿ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

Ashutosh Sharma: ಸದ್ಯ 4 ಐಪಿಎಲ್ ಪಂದ್ಯ ಆಡಿರುವ ಅಶುತೋಷ್‌ ಶರ್ಮ 156 ರನ್ ಬಾರಿಸಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನಸೆಳೆಯುತ್ತಿರುವ 25 ವರ್ಷದ, ಶಾಂತ ಸ್ವಭಾವದ ಈ ಬಿಗ್​ ಹಿಟ್ಟರ್​ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ.

VISTARANEWS.COM


on

Ashutosh Sharma
Koo

ಬೆಂಗಳೂರು: ಈ ಬಾರಿಯ ಐಪಿಎಲ್​ನಲ್ಲಿ(IPL 2024) ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ​ ಪಂಜಾಬ್​ ಕಿಂಗ್ಸ್(Punjab Kings)​ ತಂಡದ ಅಶುತೋಷ್‌ ಶರ್ಮ(Ashutosh Sharma) ಕ್ರಿಕೆಟ್​ ಆಡುವುದಕ್ಕು ಮುನ್ನ ಅಂಪೈರಿಂಗ್​ ಮಾಡಿ ಜೀವನ ಸಾಗಿಸುತ್ತಿದ್ದರು. ಕ್ರಿಕೆಟ್​ನಲ್ಲಿ ಅವಕಾಶ ಕಡಿಮೆಯಾದಾಗ 6 ತಿಂಗಳು ಖಿನ್ನತೆಗೂ ಒಳಗಾಗಿದ್ದರು.

ಹಾದು, ಅಶುತೋಷ್‌ ಮಧ್ಯಪ್ರದೇಶ ಮೂಲದವರು. ಬಡಕುಟುಂಬದಲ್ಲಿ ಜನಿಸಿದ ಅಶುತೋಷ್‌ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡೆ ಬೆಳೆದವರು. ಕ್ರಿಕೆಟ್​ಗಾಗಿಯೇ ಅವರು ಇಂದೋರ್‌ಗೆ ಶಿಫ್ಟ್ ಆದರು. ಆರಂಭಿಕ ಹಂತದಲ್ಲಿ ಅಶುತೋಷ್‌ ಸ್ಥಳೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಅಂಪೈರಿಂಗ್ ವೃತ್ತಿ ಆರಂಭಿಸಿದರು. ಜತೆಗೆ ತಮ್ಮ ನೆಚ್ಚಿನ ಕ್ರಿಕೆಟ್​ ಕೂಡ ಆಡುತ್ತಾ ಬೆಳೆದರು.

ಟೆನಿಸ್​ ಬಾಲ್​ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇವರನ್ನು ಮಧ್ಯಪ್ರದೇಶದ ಮಾಜಿ ಕ್ರಿಕೆಟಿಗ, ಅಮಾಯ್ ಖುರೇಸಿಯಾ ಗುರುತಿಸಿ ದೇಶೀಯ ಕ್ರಿಕೆಟ್​ಗೆ ಪರಿಚಯಿಸಿದರು. ಖುರೇಸಿಯಾ ಗರಡಿಯಲ್ಲೇ ಪಳಗಿದ ಅಶುತೋಷ್‌, 2018ರ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ಪರ ಆಡಿ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಈ ಪ್ರದರ್ಶನ ತೋರಿದರೂ ಕೂಡ 2019ರಲ್ಲಿ ತಂಡದಿಂದ ಕೈಬಿಡಲಾಯಿತು. ಇದರಿಂದ ತೀವ್ರವಾಗಿ ನೊಂದುಕೊಂಡ ಅವರು 6 ತಿಂಗಳ ಕಾಲ ಖಿನ್ನತೆಯಿಂದಲೂ ಬಳಲಿದ್ದರು.

ತವರು ತಂಡದಲ್ಲಿ ಸ್ಥಾನ ಸಿಗದ ಕಾರಣ ರೈಲ್ವೇಸ್​ ಪರ ಆಡುವ ಅವಕಾಶ ಪಡೆದರು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 11 ಎಸೆತಗಳಲ್ಲಿ 50 ರನ್ ಸಿಡಿಸಿ ತಮ್ಮ ಬ್ಯಾಟಿಂಗ್​ ಪರಾಕ್ರಮ ತೋರಿಸಿದ್ದರು.

ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಪಂಜಾಬ್​ ಕಿಂಗ್ಸ್​ ಇವರನ್ನು ಕೇವಲ 20 ಲಕ್ಷ ರೂ. ನೀಡಿ ಖರೀದಿ ಮಾಡಿತ್ತು. ಆರಂಭದಲ್ಲಿ ಇವರನ್ನು ಇಂಪ್ಯಾಕ್ಟ್​ ಆಟಗಾರನನ್ನಾಗಿ ಪಂಜಾಬ್​ ಕಣಕ್ಕಿಳಿಸಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಇವರು ಇದೀಗ ತಂಡದ ಪ್ರಮುಖ ಆಟಗಾರನಾಗಿ ಸ್ಥಾನ ಪಡೆಯುತ್ತಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಸ್​ಪ್ರೀತ್​ ಬುಮ್ರಾ ಎಸೆತಕ್ಕೆ ಸ್ವೀಪ್​ ಶಾಟ್​ ಮೂಲಕ ಸಿಕ್ಸರ್​ ಬಾರಿಸಿದ್ದು ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿತ್ತು. ಏಕೆಂದರೆ ಬುಮ್ರಾ ಅವರ ಘಾತಕ ಬೌಲಿಂಗ್​ಗೆ ಯಾರು ಕೂಡಚ ಇದುವರೆಗೆ ಈ ಶಾಟ್​ ಹೊಡೆದಿರಲಿಲ್ಲ. ಈ ಪ್ರತಿಭಾವಂತ ಆಟಗಾರ ಸಾಧನೆಗೆ ಸ್ವತಃ ಬುಮ್ರಾ ಅವರೇ ಪಂದ್ಯದ ಮುಕ್ತಾಯದ ಬಳಿಕ ಕೈ ಮುಗಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸದ್ಯ 4 ಐಪಿಎಲ್ ಪಂದ್ಯ ಆಡಿರುವ ಇವರು 156 ರನ್ ಬಾರಿಸಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನಸೆಳೆಯುತ್ತಿರುವ 25 ವರ್ಷದ, ಶಾಂತ ಸ್ವಭಾವದ ಈ ಬಿಗ್​ ಹಿಟ್ಟರ್​ ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾ ಪರ ಆಡಿದರೂ ಅಚ್ಚರಿಯಿಲ್ಲ.

Continue Reading

ಕ್ರೀಡೆ

IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

IPL 2024: ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

VISTARANEWS.COM


on

IPL 2024
Koo

ಲಕ್ನೋ: ರವೀಂದ್ರ ಜಡೇಜಾ(Ravindra Jadeja) ಎಂದರೆ ನೆನಪಾಗುವುದೇ ಚುರುಕಿನ ಫೀಲ್ಡಿಂಗ್. ಮೈದಾನದಲ್ಲಿ ಪಾದರಸದಂತೆ ಓಡಾಡಿ ಅಸಾಧ್ಯವಾದದನ್ನು ಸಾಧ್ಯವಾಗಿಸುವ ತಾಕತ್ತು ಅವರಿಗಿದೆ. ಸೋಮವಾರ ನಡೆದ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧದ(IPL 2024) ಪಂದ್ಯದಲ್ಲಿಯೂ ಜಡೇಜಾ ಒನ್ ಹ್ಯಾಂಡೆಡ್​ ಕ್ಯಾಚ್(Jadeja’s One-Handed Catch)​ ಹಿಡಿದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಈ ಪಂದ್ಯದಲ್ಲಿ ಅತ್ಯತ್ತಮ ಬ್ಯಾಟಿಂಗ್​ ನಡೆಸುತ್ತಿದ್ದ ಲಕ್ನೋ ತಂಡದ ನಾಯಕ ಕೆ.ಎಲ್​ ರಾಹುಲ್​ ಅವರು ಆಫ್​ ಸೈಡ್​ನಲ್ಲಿ ಬೌಂಡರಿ ಬಾರಿಸುವ ಪ್ರಯತ್ನದಲ್ಲಿ ಜಡೇಜಾಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಜಡೇಜಾ ಅವರು ಹಿಡಿದ ಈ ಕ್ಯಾಚ್​ ಕಂಡು ಒಂದು ಕ್ಷಣ ಸಹ ಆಟಗಾರರೇ ನಿಬ್ಬೆರಗಾದರು. ಅತ್ತ ಕಾಮೆಂಟ್ರಿ ಮಾಡುತ್ತಿದ್ದ ರವಿಶಾಸ್ತ್ರಿ ‘ಕ್ಯಾಚ್​ ಆಫ್​ ದಿ ದಿಸ್​ ಸೀಸನ್​’. ಬುಲೆಟ್​ ವೇಗದಲ್ಲಿ ಸಾಗಿದ ಚೆಂಡನ್ನು ಲೀಲಾಜಾಲವಾಗಿ ಹಿಡಿಯುವಲ್ಲಿ ಯಶಸ್ಸಿಯಾದರು. ನಿಜಕ್ಕೂ ಇದು ಅದ್ಭುತ” ಎಂದು ವರ್ಣಿಸಿದರು.

ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 40 ಎಸೆತ ಎದುರಿಸಿ ಅಜೇಯ 57 ರನ್​ ಬಾರಿಸಿದರು. ಈ ಇನಿಂಗ್ಸ್​ನಲ್ಲಿ 1 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿದರು. ಬೌಲಿಂಗ್​ನಲ್ಲಿ 3 ಓವರ್​ ಎಸೆದು 32 ರನ್​ ಬಿಟ್ಟುಕೊಟ್ಟರು. ರಾಹುಲ್​ 53 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 82 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. 176 ರನ್​ಗಳ ಗುರಿ ಬೆನ್ನತ್ತಿದ ಕೆ. ಎಲ್​ ರಾಹುಲ್ (KL Rahul) 53 ಎಸೆತಗಳಲ್ಲಿ 82 ರನ್ ಸಿಡಿಸಿ ಔಟಾದರು. ಈ ಮೂಲಕ ಐಪಿಎಲ್​ನಲ್ಲಿ ಹೊಸ ದಾಖಲೆ ಮಾಡಿದರು. ಅವರು ಅತಿ ಹೆಚ್ಚು 50+ ರನ್ ಗಳಿಸಿದ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿಯ (MS Dhoni) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ IPL 2024 : ಡಿಆರ್​ಎಸ್ ಅಕ್ರಮ; ಟಿಮ್ ಡೇವಿಡ್, ಕೀರನ್ ಪೊಲಾರ್ಡ್​ಗೆ ದಂಡ

ಧೋನಿ ಹಿಂದಿಕ್ಕಿದ ರಾಹುಲ್​

ಕೆಎಲ್ ರಾಹುಲ್ ಐಪಿಎಲ್​​ನಲ್ಲಿ ಹೆಚ್ಚು 50+ ಸ್ಕೋರ್​ಗಳನ್ನು ಗಳಿಸಿದ ವಿಕೆಟ್ ಕೀಪರ್ ಆಗಿ ಸಿಎಸ್​ಕೆ ಮಾಜಿ ನಾಯಕನನ್ನು ಹಿಂದಿಕ್ಕಿದರು. ಇದು ಕೆ.ಎಲ್.ರಾಹುಲ್ ಅವರ 25ನೇ ಅರ್ಧಶತಕ. ಧೋನಿ ಈವರೆಗೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೆಎಲ್ ರಾಹುಲ್ ಅವರ ಆರಂಭಿಕ ಪಾಲುದಾರ ಕ್ವಿಂಟನ್ ಡಿ ಕಾಕ್ 23 50+ ಸ್ಕೋರ್​​ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Continue Reading

ಕ್ರೀಡೆ

PBKS vs GT: ಗುಜರಾತ್​ ವಿರುದ್ಧವಾದರೂ ಪಂಜಾಬ್​ಗೆ ಒಲಿದೀತೇ ಗೆಲುವಿನ ಅದೃಷ್ಟ?

PBKS vs GT: ಗುಜರಾತ್​ ಟೈಟಾನ್ಸ್ ಮತ್ತು ಪಂಜಾಬ್​ ಕಿಂಗ್ಸ್ ಇದುವರೆಗೆ ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ಕೂಡ ತಲಾ 2 ಗೆಲುವು ಮತ್ತು ಸೋಲು ಕಂಡಿದೆ. ಕಳೆದ ಆವೃತ್ತಿಯ ಮುಖಾಮುಖಿಯಲ್ಲಿ ಪಂಜಾಬ್​ ಗೆಲುವು ಸಾಧಿಸಿತ್ತು.

VISTARANEWS.COM


on

PBKS vs GT
Koo

ಮುಲ್ಲಾನ್‌ಪುರ್‌ (ಚಂಡೀಗಢ): ಪ್ರತಿ ಪಂದ್ಯದಲ್ಲಿಯೂ ಗೆಲುವಿನಂಚಿಗೆ ಬಂದು ವಿರೋಚಿತ ಸೋಲು ಕಾಣುತ್ತಿರುವ ಪಂಜಾಬ್​ ಕಿಂಗ್ಸ್(Punjab Kings)​ ತಂಡ ಭಾನುವಾರದ ರಾತ್ರಿಯ ಐಪಿಎಲ್(IPL 2024) ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(PBKS vs GT)​ ವಿರುದ್ಧ ಆಡಲಿದೆ. ಪಂಜಾಬ್‌ನ ನೂತನ ಹೋಮ್‌ ಗ್ರೌಂಡ್‌ ಆಗಿರುವ ಮುಲ್ಲಾನ್‌ಪುರ್‌ನಲ್ಲಿ ಈ ಮಹತ್ವದ ಮುಖಾಮುಖಿ ಸಾಗಲಿದೆ. ಪ್ಲೇ ಆಫ್​ ಹಾದಿ ಜೀವಂತವಿರಿಸಬೇಕಿದ್ದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಮುಖ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.

ಪಂಜಾಬ್​ಗೆ ದೊಡ್ಡ ಸಮಸ್ಯೆಯೆಂದರೆ ಓಪನಿಂಗ್‌ನಲ್ಲಿ ಅನುಭವಿಸುತ್ತಿರುವ ಹಿನ್ನಡೆ. ಬ್ಯಾಟಿಂಗ್‌ ಲೈನ್‌ಆಪ್‌ ಉತ್ತಮ ವಾಗಿದ್ದರೂ ಕೂಡ ಯಾರೊಬ್ಬರು ನಿಂತು ಆಡುತ್ತಿಲ್ಲ. ಯುವ ಬ್ಯಾಟರ್‌ಗಳಾದ ಶಶಾಂಕ್‌ ಸಿಂಗ್‌ ಮತ್ತು ಅಶುತೋಷ್‌ ಶರ್ಮ ಜೋಡಿಯಷ್ಟೇ ಭರವಸೆ ಮೂಡಿಸಿದೆ. ಉಭಯ ಆಟಗಾರರೇ ಪ್ರತಿ ಪಂದ್ಯದಲ್ಲಿಯೂ ತಂಡಕ್ಕೆ ಆಸರೆಯಾಗಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಉಳಿದವರು ಛಾತಿಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ.

ಇದನ್ನೂ ಓದಿ Impact Player Rule : ಇಂಪ್ಯಾಕ್ಟ್​ ಪ್ಲೇಯರ್​​ ಸಿಕ್ಕಾಪಟ್ಟೆ ವಿರೋಧ; ಇದೀಗ ಋತುರಾಜ್​ ಸರದಿ

ಖಾಯಂ ನಾಯಕ ಶಿಖರ್​ ಧವನ್​ ಈ ಪಂದ್ಯದಲ್ಲಿಯೂ ಆಡುವುದು ಅನುಮಾನ. ಹೀಗಾಗಿ ಹಂಗಾಮಿ ನಾಯಕ ಸ್ಯಾಮ್​ ಕರನ್​ ಅವರೇ ತಂಡವನ್ನು ಮುನ್ನಡೆಸಬಹುದು. ಪಂಜಾಬ್‌ ಬೌಲಿಂಗ್‌ ಈವರೆಗೆ ಘಾತಕವಾಗಿ ಪರಿಣಮಿ ಸಿಲ್ಲ. ಕಗಿಸೊ ರಬಾಡ, ಅರ್ಷದೀಪ್‌ ಸೀಂಗ್​, ಕರನ್‌, ಬ್ರಾರ್‌ ಮ್ಯಾಜಿಕ್‌ ಮಾಡಿದರಷ್ಟೇ ಗೆಲುವು ಸಾಧ್ಯ.

ಗುಜರಾತ್​​ ತಂಡ ತವರಿನ ಪಂದ್ಯದಲ್ಲಿ ಹೆಚ್ಚು ಪಂದ್ಯ ಗೆದ್ದಿದೆ. ಹೊರಗಡೆ ಆಡಿದ ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ತಂಡದ ಮೇಲೆ ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ. ಬೌಲಿಂಗ್​ ಮತ್ತು ಬ್ಯಾಟಿಂಗ್​ ಸಾಧಾರಣ ಮಟ್ಟದಲ್ಲಿದೆ. ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 89 ರನ್​ಗೆ ಸರ್ವಪತನ ಕಂಡಿತ್ತು. ಬೌಲಿಂಗ್​ ಕೂಡ ಚೆತರಿಕೆ ಕಾಣದ ಹೊರತು ಗೆಲುವು ದೂರದ ಬೆಟ್ಟವಾಗಿ ಉಳಿಯಲಿದೆ.

ಮುಖಾಮುಖಿ


ಗುಜರಾತ್​ ಟೈಟಾನ್ಸ್ ಮತ್ತು ಪಂಜಾಬ್​ ಕಿಂಗ್ಸ್ ಇದುವರೆಗೆ ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ಕೂಡ ತಲಾ 2 ಗೆಲುವು ಮತ್ತು ಸೋಲು ಕಂಡಿದೆ. ಕಳೆದ ಆವೃತ್ತಿಯ ಮುಖಾಮುಖಿಯಲ್ಲಿ ಪಂಜಾಬ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಗುಜರಾತ್​: ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆ), ಸಾಯಿ ಸುದರ್ಶನ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಸಂದೀಪ್ ವಾರಿಯರ್.

ಪಂಜಾಬ್​ ಕಿಂಗ್ಸ್​: ರಿಲೀ ರೊಸೊವ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕರ್ರಾನ್ (ನಾಯಕ), ಜಿತೇಶ್ ಶರ್ಮಾ (ವಿಕೆ), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

Continue Reading

ಕ್ರೀಡೆ

IPL 2024 : ಡಿಆರ್​ಎಸ್ ಅಕ್ರಮ; ಟಿಮ್ ಡೇವಿಡ್, ಕೀರನ್ ಪೊಲಾರ್ಡ್​ಗೆ ದಂಡ

IPL 2024: ಈ ವಾರದ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಿಬಿಕೆಎಸ್ ನಡುವೆ ನಿಕಟ ಥ್ರಿಲ್ಲರ್ ಮುಖಾಮುಖಿಯಲ್ಲಿ ಯುವ ಆಟಗಾರ ಅಶುತೋಷ್ ಶರ್ಮಾ ಕ್ರೀಸ್​ನಲ್ಲಿ ತಮ್ಮ ಪ್ರತಿಭೆಯಿಂದ ಮುಂಬೈ ಇಂಡಿಯನ್ಸ್ ಅನ್ನು ಮೀರಿಸಿದ್ದರು. ಆದರೆ ಅಂತಿಮವಾಗಿ ಪಂದ್ಯವನ್ನು ಮುಂಬೈ ತಂಡ 9 ರನ್​ಗಳಿಂದ ಗೆದ್ದಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾದ ಟಿಮ್ ಡೇವಿಡ್ ಮತ್ತು ಕೀರನ್ ಪೊಲಾರ್ಡ್ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್​​ ಪಂದ್ಯದ (IPL 2024) ವೇಳೆ ಡಿಆರ್​ಎಸ್​ ಅಕ್ರಮ ಎಸಗಿ ಐಪಿಎಲ್​​ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ದಂಡ ಪಾವತಿ ಮಾಡುವಂತಾಗಿದೆ. ಅವರಿಬ್ಬರೂ ಡಗ್​ಔಟ್​ನಲ್ಲಿ ಕುಳಿತು ಸೂರ್ಯಕುಮಾರ್ ಯಾದವ್​ಗೆ ಡಿಆರ್​ಎಸ್​​ ರೆಫರ್ ಮಾಡಲು ಸಹಾಯ ಮಾಡಿದ್ದರು. ಇದು ನಿಯಮ ಉಲ್ಲಂಘನೆಯಾಗಿದೆ.

ಈ ವಾರದ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಿಬಿಕೆಎಸ್ ನಡುವೆ ನಿಕಟ ಥ್ರಿಲ್ಲರ್ ಮುಖಾಮುಖಿಯಲ್ಲಿ ಯುವ ಆಟಗಾರ ಅಶುತೋಷ್ ಶರ್ಮಾ ಕ್ರೀಸ್​ನಲ್ಲಿ ತಮ್ಮ ಪ್ರತಿಭೆಯಿಂದ ಮುಂಬೈ ಇಂಡಿಯನ್ಸ್ ಅನ್ನು ಮೀರಿಸಿದ್ದರು. ಆದರೆ ಅಂತಿಮವಾಗಿ ಪಂದ್ಯವನ್ನು ಮುಂಬೈ ತಂಡ 9 ರನ್​ಗಳಿಂದ ಗೆದ್ದಿತ್ತು.

ಪಿಬಿಕೆಎಸ್ ವಿರುದ್ಧ ಮೋಸ ಮಾಡಿದೆಯೇ ಮುಂಬಯಿ?

ಮೊದಲ ಇನ್ನಿಂಗ್ಸ್​​ನ 15 ನೇ ಓವರ್​ನಲ್ಲಿ ಅರ್ಶ್​ದೀಪ್​ ಸಿಂಗ್ ಅವರ ವೈಡ್ ಯಾರ್ಕರ್ ಅನ್ನು ಸರಿಯಾದ ಎಸೆತ ಎಂದು ಅಂಪೈರ್​ ಪರಿಗಣಿಸಿದ್ದರು. ಆದರೆ ಡಗೌಟ್​ನಿಂದ ಪೊಲಾರ್ಡ್ ಹಾಗೂ ಡೇವಿಡ್​ ನೆರವು ನೀಡಿದ ಕಾರಣ ಸೂರ್ಯಕುಮಾರ್​ ಡಿಆರ್​​ಎಸ್ ತೆಗೆದುಕೊಂಡರು.

ಟಿಮ್ ಡೇವಿಡ್ ಮತ್ತು ಕೀರನ್ ಪೊಲಾರ್ಡ್ ಇದು ನಿಜವಾಗಿಯೂ ವೈಡ್ ಎಸೆತ ಮತ್ತು ಸೂರ್ಯ ಡಿಆರ್​​ಎಸ್​ ತೆಗೆದುಕೊಳ್ಳಬೇಕು ಎಂದು ಮಾಡಿದ್ದರು. ಮೂರನೇ ಅಂಪೈರ್​​ ವೀಡಿಯೊ ಪರಿಶೀಲನೆ ಮಾಡಿ ಆನ್​ಫೀಲ್ಡ್ ಅಂಪೈರ್​​​ ನಿರ್ಧಾರವನ್ನು ರದ್ದುಗೊಳಿಸಿದ್ದರು.

ಇದನ್ನೂ ಓದಿ :MS Dhoni : ಧೋನಿ ಮುಟ್ಟಿದ್ದೆಲ್ಲ ದಾಖಲೆ, ಲಕ್ನೊ ವಿರುದ್ಧವೂ ಮತ್ತೊಂದು ರೆಕಾರ್ಡ್​​

ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆಯ ನಂತರ, ಐಪಿಎಲ್ ಅಧಿಕಾರಿಗಳು ಲೀಗ್​ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಡೇವಿಡ್ ಮತ್ತು ಪೊಲಾರ್ಡ್​ಗೆ ದಂಡ ವಿಧಿಸಿದ್ದಾರೆ. ಇವರಿಬ್ಬರು ಆಟದ ಸ್ಫೂರ್ತಿಯಾಗಿರುವ ಉಲ್ಲಂಘನೆಯನ್ನು ಹೇಳುವ ಆರ್ಟಿಕಲ್ 2.20 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.

ಐಪಿಎಲ್ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ಈ ಘಟನೆಯನ್ನು ನಿರ್ದಿಷ್ಟಪಡಿಸದಿದ್ದರೂ, ಇದು ಅಂತರ್ಜಾಲದಲ್ಲಿ ಉಂಟಾದ ಕೋಲಾಹಲವನ್ನು ಗಮನಿಸಿದರೆ ವೈಡ್ ಕಾಲ್ ಘಟನೆಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ. ಟಿಮ್ ಡೇವಿಡ್ ಮತ್ತು ಕೀರನ್ ಪೊಲಾರ್ಡ್ ಇಬ್ಬರೂ ಲೆವೆಲ್ 1 ಉಲ್ಲಂಘನೆಯ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವರ ಪಂದ್ಯದ ಶುಲ್ಕದ 20% ಅನ್ನು ದಂಡವಾಗಿ ಪಾವತಿಸಲು ಆದೇಶಿಸಲಾಗಿದೆ.

Continue Reading
Advertisement
Modi in Karnataka Govt turns tax city Bengaluru into tanker city and attacks girls too PM Narendra Modi
ಕರ್ನಾಟಕ9 mins ago

Modi in Karnataka: ಟ್ಯಾಕ್ಸ್ ಸಿಟಿ ಬೆಂಗಳೂರನ್ನು ಟ್ಯಾಂಕರ್ ಸಿಟಿ ಮಾಡಿದ ಸರ್ಕಾರ, ಹೆಣ್ಣು ಮಕ್ಕಳ ಮೇಲೂ ಹಲ್ಲೆ: ಮೋದಿ ವಾಗ್ದಾಳಿ

Kalki 2898 AD
ಸಿನಿಮಾ11 mins ago

Kalki 2898 AD: ನಾಳೆ ಮಹತ್ವದ  ಅಪ್‌ಡೇಟ್‌ ನೀಡಲಿದೆ ಪ್ರಭಾಸ್‌ ಅಭಿನಯದ ʼಕಲ್ಕಿ 2898 ಎಡಿʼಚಿತ್ರತಂಡ; ಹೊಸ ರಿಲೀಸ್‌ ದಿನಾಂಕ ಘೋಷಣೆ?

Lok Sabha Election
ದೇಶ20 mins ago

Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

Ashutosh Sharma
ಕ್ರೀಡೆ21 mins ago

Ashutosh Sharma: ಖಿನ್ನತೆಗೆ ಒಳಗಾಗಿದ್ದ ಬಿಗ್​ ಹಿಟ್ಟರ್​ ಅಶುತೋಷ್‌ ಶರ್ಮ; ಕ್ರಿಕೆಟ್​ ಜರ್ನಿಯೇ ರೋಚಕ

DK Shivakumar
ಕರ್ನಾಟಕ21 mins ago

DK Shivakumar: ಮತಯಾಚನೆ ವೇಳೆ ಬೆದರಿಕೆ ಆರೋಪ; ಡಿಕೆಶಿ ವಿರುದ್ಧ ಎಫ್‌ಐಆರ್‌

Karnataka Weather Forecast
ಮಳೆ37 mins ago

Karnataka Weather : ಎತ್ತಿನ ಬಂಡಿಯಲ್ಲಿ ಬರುವಾಗ ಸಿಡಿಲು ಬಡಿದು ಬಾಲಕ ಸಾವು; ಭಾರಿ ಮಳೆಗೆ ನಲುಗಿದ ಜನರು

Trust Of The Nation 2024
ಪ್ರಮುಖ ಸುದ್ದಿ54 mins ago

Trust Of The Nation 2024 : ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತ; ಡೈಲಿಹಂಟ್ ಸಮೀಕ್ಷೆ

Modi in Karnataka PM Modi to address rally in Bengaluru Here live video
Lok Sabha Election 20241 hour ago

Modi in Karnataka: ಬೆಂಗಳೂರಲ್ಲಿ ಮೋದಿ ಸಮಾವೇಶ; ಇಲ್ಲಿದೆ LIVE ವಿಡಿಯೊ

Narendra Modi
ದೇಶ1 hour ago

Narendra Modi: ಅಮೇಥಿಯಂತೆ ವಯನಾಡಿನಲ್ಲೂ ರಾಹುಲ್‌ ಗಾಂಧಿಗೆ ಸೋಲು; ಮೋದಿ ಭವಿಷ್ಯ!

Horseshoe Septum Ring Fashion
ಫ್ಯಾಷನ್1 hour ago

Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ2 hours ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20242 hours ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20244 hours ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ6 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ7 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ1 day ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ2 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ4 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ5 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

ಟ್ರೆಂಡಿಂಗ್‌