Book Release : ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನ ಅಪ್ರಯೋಜಕ: ಧಮ್ಮಪದ ಕೃತಿ ಬಿಡುಗಡೆ ಮಾಡಿದ ಭಿಕ್ಕು ಬುದ್ಧದತ್ತ - Vistara News

ಕಲೆ/ಸಾಹಿತ್ಯ

Book Release : ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನ ಅಪ್ರಯೋಜಕ: ಧಮ್ಮಪದ ಕೃತಿ ಬಿಡುಗಡೆ ಮಾಡಿದ ಭಿಕ್ಕು ಬುದ್ಧದತ್ತ

ಬುದ್ಧಧಮ್ಮ ಕೃತಿಯ ಜತೆಗೆ ಎದ್ದೇಳು ಭಾರತೀಯ, ಹಿಂದೂ ಎಂದರೇನು, ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು ಕೃತಿಗಳನ್ನೂ ಲೋಕಾರ್ಪಣೆಗೊಳಿಸಲಾಯಿತು

VISTARANEWS.COM


on

Buddha Dhamma book
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಎರಡೂವರೆ ಸಾವಿರ ವರ್ಷಗಳ ಹಿಂದೆ ಭಗವಾನ್ ಬುದ್ಧ ಹೇಳಿದ ಸರಳತೆ, ಜ್ಞಾನ, ಚಿತ್ತನಿಯಂತ್ರಣ, ಸತ್ಯ, ಧರ್ಮಗಳ ಮೇಲಿನ ಬೋಧನೆಗಳು ಇಂದಿಗೂ ಪ್ರಸ್ತುತ. ಬುದ್ಧನ ಧರ್ಮವನ್ನು ಅನುಸರಿಸುತ್ತೇವೆನ್ನುವವರು ಎಲ್ಲರೂ ಧಮ್ಮಪದದ ಒಂದೊಂದು ಗಾಹೆಯನ್ನೂ ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಹಾಬೋಧಿ ಸಂಶೋಧನ ಕೇಂದ್ರದ ನಿರ್ದೇಶಕ ಭಿಕ್ಕು ಬುದ್ಧದತ್ತ ಹೇಳಿದರು.

ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಅಯೋಧ್ಯಾ ಪಬ್ಲಿಕೇಶನ್ಸ್ ಭಾನುವಾರ ಪ್ರಕಟಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬುದ್ಧ ಅಧ್ಯಾತ್ಮದ ಮಹಾನ್ ಸಾಧಕ. ಅಧ್ಯಾತ್ಮದ ಸ್ಪರ್ಶವಿಲ್ಲದ ಜ್ಞಾನದಿಂದ ಹೆಚ್ಚೇನೂ ಲಾಭವಿಲ್ಲ. ಬುದ್ಧ ಪ್ರೇಮದ ಸಂದೇಶವನ್ನು ಜಗತ್ತಿಗೆಲ್ಲ ಸಾರಿದ. ಆತನು ಜೇತವನದಲ್ಲಿ ಶ್ರಮಣರಿಗೆ ನೀಡಿದ ಸಂದೇಶಗಳ ಸಾರಸಂಗ್ರಹವೇ ಧಮ್ಮಪದ. ಇದರಲ್ಲಿರುವ ಒಂದೊಂದು ಗಾಹೆಯೂ ಮನನ ಮತ್ತು ಅನುಸರಣೆಗೆ ಯೋಗ್ಯವಾದುದು. ಜಗತ್ತಿನ ವ್ಯಕ್ತಿಗಳೆಲ್ಲರೂ ಧಮ್ಮಪದದ ಗಾಹೆಗಳನ್ನು ಅನುಸಂಧಾನ ಮಾಡಿಕೊಂಡು ಬಾಳುವೆ ಮಾಡಿದರೆ ಜಗತ್ತಿನ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸಾಲಭಂಜಿಕೆ ಅಂಕಣ: ಎರಡು ಕವಿತೆಗಳಲ್ಲಿ ಒಂದೇ ಹಾಡು

ಶತಾವಧಾನಿ ಡಾ. ಆರ್. ಗಣೇಶ್ ಮಾತನಾಡಿ, ಬುದ್ಧನ ಮಾತುಗಳಿಗೆ ಸಂವಾದಿಯಾದ ಮಾತುಗಳನ್ನು ವೇದ, ಉಪನಿಷತ್ತು, ಮಹಾಭಾರತ-ರಾಮಾಯಣ ಮಹಾಕಾವ್ಯಗಳು ಹಾಗೂ ಭಗವದ್ಗೀತೆಯಲ್ಲಿಯೂ ನೋಡಬಹುದು. ಬೌದ್ಧದರ್ಶನಕ್ಕೂ ಮತ್ತು ಸನಾತನಧರ್ಮಕ್ಕೂ ಶತಮಾನಗಳ ತಿಕ್ಕಾಟ, ಸಂಘರ್ಷವಿದೆ ಎಂದೇ ಬಿಂಬಿಸಲಾಗುತ್ತಿದೆ. ಇದು ಸಂಪೂರ್ಣ ಪೂರ್ವಗ್ರಹದ ಸುಳ್ಳುಕಥನ ಎಂಬುದು ಧಮ್ಮಪದವನ್ನು ಓದಿದರೆ ಗೊತ್ತಾಗುತ್ತದೆ. ಬುದ್ಧನ ಅನಾತ್ಮವಾದವು ಈಗಿನವರು ಹೇಳುವಂತೆ ಆತ್ಮದ ಅಸ್ತಿತ್ವವನ್ನು ನಿರಾಕರಿಸುವ ಸಿದ್ಧಾಂತವಲ್ಲ; ಬುದ್ಧನು ಆತ್ಮ, ಪುನರ್ಜನ್ಮ, ಪಾಪ-ಪುಣ್ಯ ಇತ್ಯಾದಿ ಅಂಶಗಳನ್ನು ಪುರಸ್ಕರಿಸಿದ್ದಾನೆ ಎಂದು ಅವರು ಹೇಳಿದರು.

ಧಮ್ಮಪದದ ಅನುವಾದಕ, ಚಿಂತಕ ಡಾ. ಜಿ. ಬಿ. ಹರೀಶ ಮಾತನಾಡಿ, ಬುದ್ಧನನ್ನು ಇಂದು ಭಾರತದವನಲ್ಲ ಎಂದು ಪ್ರಚಾರ ಮಾಡುವ ಹುನ್ನಾರ ನಡೆಯುತ್ತಿದೆ. ಚೀನಾ ದೇಶವು ವ್ಯವಸ್ಥಿತವಾಗಿ ಬುದ್ಧನನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಕಮ್ಯುನಿಸ್ಟರು ಜಗತ್ತಿನೆಲ್ಲ ಭಾಗಗಳಲ್ಲಿ ಹಿಂಸಾಚಾರ ಮಾಡಿ ನಂತರ ತಾವು ಬುದ್ಧನ ಅನುಯಾಯಿಗಳು ಎಂದು ಹೇಳಿಕೊಳ್ಳುವುದು ವಿಡಂಬನೆ ಎಂದರು.

ಇದನ್ನೂ ಓದಿ : ವಿಸ್ತಾರ ಅಂಕಣ : ಅಭಿವೃದ್ಧಿಗೆ ನಮ್ಮದೇ ಮಾದರಿಯತ್ತ ನೋಡಲು ಮಡಿವಂತಿಕೆ ಏಕೆ?

ಭಾರತದಲ್ಲಿ ಒಂದು ಬುದ್ಧಿಜೀವಿ ವರ್ಗ ಬುದ್ಧನ ಬಗ್ಗೆ ನಿರಂತರವಾಗಿ ಅಪವ್ಯಾಖ್ಯಾನಗಳನ್ನು ಬರೆಯುತ್ತ ಬಂದಿದ್ದರ ಫಲವಾಗಿ ಇಂದು ಹಿಂದೂಗಳಲ್ಲೇ ಬುದ್ಧನ ಬಗ್ಗೆ ಅನಾದರವಿದೆ. ಆದರೆ ಬುದ್ಧನ ಬೋಧನೆಗಳೆಲ್ಲವೂ ಸನಾತನಧರ್ಮಕ್ಕೆ ಪೂರಕವಾಗಿಯೇ ಇವೆ. ಜಗತ್ತಿನ ಸಮಸ್ಯೆಗಳೆಲ್ಲವನ್ನೂ ಸಮಾಜದಲ್ಲಿರುವ ಆರ್ಥಿಕ ಅಸಮಾನತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಕಮ್ಯುನಿಸ್ಟರು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಬುದ್ಧನ ಬೋಧನೆಗಳನ್ನು ತಿರುಚಿ, ಆತ ಹಿಂದುಧರ್ಮದ ದ್ವೇಷಿಯೆಂದು ಬಿಂಬಿಸಿದರು ಎಂದು ಹರೀಶ ಟೀಕಿಸಿದರು.

ಲೇಖಕ ರೋಹಿತ್ ಚಕ್ರತೀರ್ಥ ಮಾತನಾಡಿ, ಪಠ್ಯಪುಸ್ತಕಗಳಲ್ಲಿ ಬರಗೂರು ರಾಮಚಂದ್ರಪ್ಪ ತಮ್ಮ ವೈಯಕ್ತಿಕ ಚಿಂತನೆಗಳನ್ನು ಹರಿಯಬಿಟ್ಟು ಬುದ್ಧನನ್ನು ವೇದವಿರೋಧಿಯಾಗಿ ಬಿಂಬಿಸಿದರು ಎಂದರು.

ಸುಚಿತ್ರ ಸಿನೆಮ ಮತ್ತು ಸಂಸ್ಕೃತಿ ಅಕಾಡೆಮಿಯ ಟ್ರಸ್ಟಿ ವೃಷಾಂಕ್ ಭಟ್ ಮಾತನಾಡಿ, ಬುದ್ಧನ ಮೂಲಬೋಧನೆಗಳನ್ನು ಇಂದು ಹೇಳಹೋದರೆ ಬುದ್ಧನ ಅನುಯಾಯಿಗಳೆಂದು ಕರೆದುಕೊಳ್ಳುವ ಕೆಲವರಿಂದ ಪ್ರಬಲ ವಿರೋಧ ಎದುರಿಸಬೇಕಾಗುತ್ತದೆ. ಅನುಯಾಯಿಗಳೆಂದು ಹೇಳಿಕೊಳ್ಳುವವರು ಯಾರೂ ಬುದ್ಧನ ಧಮ್ಮಪದವನ್ನು ಓದಿರುವಂತೆ ಕಾಣುವುದಿಲ್ಲ. ಬುದ್ಧ ಸಂಸಾರ ತ್ಯಜಿಸಿದ್ದು ಅವನ ರಾಜ್ಯದಲ್ಲಿ ಕ್ಷಾಮ ಕಾಣಿಸಿಕೊಂಡ ಕಾರಣಕ್ಕೆ ಎಂಬೆಲ್ಲ ಚಿತ್ರವಿಚಿತ್ರ ವಾದಗಳನ್ನು ದಿನನಿತ್ಯ ಹೊಸೆಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

KUWJ Awards: ಕಾರ್ಯನಿರತ ಪತ್ರಕರ್ತರ ಸಂಘದ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ: ಪುರಸ್ಕೃತರ ಪಟ್ಟಿ ಇಲ್ಲಿದೆ

KUWJ Awards: ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

VISTARANEWS.COM


on

kuwj awards
Koo

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ (KUWJ) ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು (KUWJ Awards) ಪ್ರಕಟಿಸಲಾಗಿದೆ. ಪ್ರಶಸ್ತಿಗಳು ಹಾಗೂ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:

ಪ್ರಶಸ್ತಿಗಳ ವಿವರ:

ಡಾ. ಬಾಬಾ ಸಾಹೇಬ ಅಂಬೇಡ್ಕರ್ ಪ್ರಶಸ್ತಿ: ಬಿ.ಎಂ.ಬಶೀರ್, ಮಂಗಳೂರು

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಕುಂತಿನಾಥ ಕಲಮನಿ, ಬೆಳಗಾವಿ

ಡಿವಿಜಿ ಪ್ರಶಸ್ತಿ: ವಿ. ವೆಂಕಟೇಶ್, ಬೆಂಗಳೂರು

ಸಿ.ಆರ್.ಕೃಷ್ಣರಾವ್(ಸಿಆರ್‌ಕೆ) ಪ್ರಶಸ್ತಿ: ಸಿ.ಜಿ.ಮಂಜುಳ, ಬೆಂಗಳೂರು

ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ಮಲ್ಲಿಗೆ ಮಾಚಮ್ಮ, ಮೈಸೂರು

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಮೋಹನ ಹೆಗಡೆ, ಹುಬ್ಬಳ್ಳಿ

ಡಾ.ಎಂ.ಎಂ. ಕಲಬುರ್ಗಿ ಪ್ರಶಸ್ತಿ: ಸನತ್ ಕುಮಾರ್ ಬೆಳಗಲಿ

mahendra basheer
ಸಿ.ಕೆ ಮಹೇಂದ್ರ, ಬಿ.ಎಂ ಬಶೀರ್

ಕಿಡಿ ಶೇಷಪ್ಪ ಪ್ರಶಸ್ತಿ: ಬಿ.ಎಂ.ನಂದೀಶ್, ಹಾಸನ

ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ: ಆರ್. ಜಯಕುಮಾರ್, ಬೆಂಗಳೂರು

ಪಿ.ಆರ್. ರಾಮಯ್ಯ ಪ್ರಶಸ್ತಿ: ಸಿ.ಕೆ.ಮಹೇಂದ್ರ, ಮೈಸೂರು

ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ: ಅಶೋಕ್ ರಾಮ್, ರಾಮನಗರ

ರಾಜಶೇಖರ ಕೋಟಿ ಪ್ರಶಸ್ತಿ: ಶಶಿಕುಮಾರ್ ಬಿ ಕೆರೂರ, ಬಾಗಲಕೋಟೆ

ಪಿ.ರಾಮಯ್ಯ ಪ್ರಶಸ್ತಿ: ಮನೋಹರ ಮಲ್ಲಾಡದ, ರಾಣೆಬೆನ್ನೂರು

ಮ. ರಾಮಮೂರ್ತಿ ಪ್ರಶಸ್ತಿ: ಎಚ್.ಕೆ. ಬಸವರಾಜು, ಬೆಂಗಳೂರು

ಗರುಡನಗಿರಿ ನಾಗರಾಜ್ ಪ್ರಶಸ್ತಿ: ಪ್ರಭುಲಿಂಗ ಶಾಸ್ತ್ರಿಮಠ, ಬೆಂಗಳೂರು

ಮಹದೇವ ಪ್ರಕಾಶ್ ಪ್ರಶಸ್ತಿ: ವಿಜಯಕುಮಾರ್ ವಾರದ, ಕಲಬುರಗಿ

ಶಿವಮೊಗ್ಗದ ಮಿಂಚು ಶ್ರೀನಿವಾಸ್ ಪ್ರಶಸ್ತಿ: ಎನ್.ಬಾಬು, ಭದ್ರಾವತಿ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ನಾಮದೇವ ವಾಟ್ಕರ್, ಯಾದಗಿರಿ

ಎಂ.ನಾಗೇಂದ್ರರಾವ್ ಪ್ರಶಸ್ತಿ: ರವಿ ಆರ್, ದಾವಣಗೆರೆ

ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ: ಕೆ.ಗೋಪಿಕಾ ಮಲ್ಲೇಶ್, ಕೋಲಾರ

ಗುರುಲಿಂಗಸ್ವಾಮಿ ಹೊಳಿಮಠ ಪ್ರಶಸ್ತಿ: ಆರ್.ಸಿ.ಪುಟ್ಟರಾಜು, ಚಾಮರಾಜನಗರ

ವಿಶೇಷ ಪ್ರಶಸ್ತಿ:
ಚಿಕ್ಕಪ್ಪನಳ್ಳಿ ಷಣ್ಮುಖ
ಎಸ್.ಬಿ.ರವಿಕುಮಾರ್
ಶ.ಮಂಜುನಾಥ್
ರವಿ ಮಲ್ಲಾಪುರ

ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತವೆ. ಚಿತ್ರದುರ್ಗದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Dr Shripad Bhat: ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Continue Reading

ಕಲೆ/ಸಾಹಿತ್ಯ

Dr Shripad Bhat: ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Dr Shripad Bhat: ಮಾರ್ಚ್ 30ರಂದು ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಅವರಿಗೆ ʼರಂಗ ಭೂಪತಿʼ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

VISTARANEWS.COM


on

Dr Shripad Bhat
Koo

ಧಾರವಾಡ: ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ (Dr Shripad Bhat) ಅವರಿಗೆ ಖ್ಯಾತ ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ‘ರಂಗ ಭೂಪತಿ’ ಮೊದಲ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ, ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಮಾರ್ಚ್ 30 (ಶನಿವಾರ) ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ರಂಗಕರ್ಮಿ ಧನಂಜಯ ಕುಲಕರ್ಣಿ ಹಾಗೂ ಹಿರಿಯ ಪತ್ರಕರ್ತ, ಬಹುರೂಪಿ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥರಾದ ಜಿ.ಎನ್. ಮೋಹನ್, ರವಿ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ. ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು, ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಂ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಗೋ.ವಾ. ರಂಗ-ಸಂಗದ ರಾಜಕುಮಾರ ಮಡಿವಾಳರ ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದ ಶ್ರೀಪಾದ ಭಟ್ ಅವರು ಕನ್ನಡ ರಂಗಭೂಮಿಯ ಮಹತ್ವದ ಹೆಸರು. ರಂಗಭೂಮಿಯ ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಎರಡೂ ರಂಗಗಗಳಲ್ಲಿ ನುರಿತವರು. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜಾನಪದ ಅಧ್ಯಯನ, ಸಂಗೀತ, ಸಂಘಟನೆ ಇವರ ಆಸಕ್ತಿಯ ಕ್ಷೇತ್ರಗಳು. ಶಿಕ್ಷಣ, ಕಾವ್ಯ ಹಾಗೂ ಮಕ್ಕಳ ರಂಗಭೂಮಿಯಲ್ಲಿ ಇವರು ನಡೆಸಿದ ಪ್ರಯೋಗಗಳು ದೇಶಾದ್ಯಂತ ಹೆಸರುವಾಸಿಯಾಗಿದೆ. ಗಾಂಧಿ- 150 ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ‘ಪಾಪು-ಬಾಪು’ ನಾಟಕವು 2 ಸಾವಿರ ಪ್ರಯೋಗ ಕಂಡಿದೆ. ಇದುವರೆಗೂ ಸುಮಾರು 150 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ದಡವ ನೆಕ್ಕಿದ ಹೊಳೆ’ ನಟನೆಯ ಕೈಪಿಡಿ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ರಂಗಭೂಮಿ ಕುರಿತ ಅಧ್ಯಯನಕ್ಕೆ ಪಿಎಚ್‌ಡಿ ಪಡೆದಿದ್ದಾರೆ.

ಇದನ್ನೂ ಓದಿ | Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

ನನ್ನ ದೇಶ ನನ್ನ ದನಿ ಅಂಕಣ: ಶತಕೋಟಿ ಹಿಂದೂಗಳ ಪರಮೇಶ್ವರ ಇನ್ನೆಷ್ಟು ಕಾಯಬೇಕು? ಕಾದಿದ್ದು ಸಾಕು. ನಮಗೆ ಮುಕ್ತಿ ದಯಪಾಲಿಸುವ ಆ ಮುಕ್ತಿನಾಥನಿಗೆ ಇನ್ನಾದರೂ ವಿಮೋಚನೆಯಾಗಲಿ.

VISTARANEWS.COM


on

varanasi nandi
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath

ನನ್ನ ದೇಶ ನನ್ನ ದನಿ: ಭಾರತವನ್ನು ತುಂಡರಿಸಲಿಚ್ಛಿಸುವ ವಿಚ್ಛಿದ್ರಕಾರೀ ಶಕ್ತಿಗಳು ವಿಜೃಂಭಿಸುತ್ತಿವೆ! ಆಸುರೀ ಶಕ್ತಿಗಳೇ ಹಾಗೆ. ನಿಜ. ಅಬ್ಬರ ಜಾಸ್ತಿ. ಸನಾತನ ಧರ್ಮದ ಬಗೆಗೆ ಅಣು ಪ್ರಮಾಣದ ಅರಿವು ಇಲ್ಲದಿದ್ದರೂ, ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತ ಎಂಬುದು ಶತಪ್ರತಿಶತ ಅಬದ್ಧ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದ್ದರೂ, ದ್ರಾವಿಡ ಪಕ್ಷದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವವರು ನಾಲಿಗೆ ಹರಿಬಿಡುತ್ತಾರೆ. ಇನ್ನು ಕೆಲ “ಸಜ್ಜನರು” ಶ್ರೀರಾಮನ ಬಗೆಗೇ ವಿಷ ಕಾರುತ್ತಾರೆ.

ನಿಜ, ಇದು ಎಂದೆಂದಿಗೂ ಮುಗಿಯದ ಹೋರಾಟ. ಶ್ರೀರಾಮ ಜನ್ಮಭೂಮಿ ದೇವಾಲಯದ ಪುನರ್ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆಗಳು ಒಂದು ಹಂತಕ್ಕೆ ಬರುತ್ತಿದ್ದಂತೆ ಭಾರತ-ವಿರೋಧೀ ಶಕ್ತಿಗಳಿಗೆ ಸಹಿಸಲಾರದಂತಹ ಸಂಕಟ.

ಭಾರತವನ್ನು ಜೋಡಿಸುವ ಹೆಸರಿನಲ್ಲಿ, ಜನರನ್ನು ಒಂದುಗೂಡಿಸುವ ಬದಲು, ಕೆಲವರು ಇನ್ನಷ್ಟು ವಿಭಜನೆಗೆ ಸನ್ನಾಹ ಮಾಡುತ್ತಿದ್ದಾರೆ. ಇನ್ನು ಕೆಲವರು ಉತ್ತರ ಭಾರತ – ದಕ್ಷಿಣ ಭಾರತಗಳನ್ನು ಬೇರೆ ಬೇರೆ ಮಾಡಲು ಹವಣಿಸುತ್ತಿದ್ದಾರೆ. ಕರ್ನಾಟಕದ ಕುಡಿಯುವ ನೀರನ್ನೂ ತಮಿಳುನಾಡಿಗೆ ಹರಿಸಿದವರು, ದಕ್ಷಿಣ ಭಾರತವೇ ಪ್ರತ್ಯೇಕವಾಗಬೇಕು ಎನ್ನುತ್ತಾರೆ. ಕರ್ನಾಟಕದ ಹಣ ಉತ್ತರ ಭಾರತಕ್ಕೆ ಹೋಗುತ್ತಿದೆ, ಎಂದು ಗುರುಗುಟ್ಟುವವರು ತೆರಿಗೆಯನ್ನೇ ಕಟ್ಟದ ಸಮುದಾಯಗಳಿಗೆ ತೆರಿಗೆದಾರರ ಕೋಟಿಕೋಟಿ ಹಣವನ್ನು ಸುರಿಯುತ್ತಾರೆ. ದೇವಾಲಯಗಳ ಹಣ ಸೂರೆಮಾಡಿ, ಚರ್ಚು – ಮಸೀದಿಗಳಿಗೆ ಬಹಳ ದೊಡ್ಡ ಮೊತ್ತವನ್ನು ಹಂಚಿ ಮೆರೆಯುತ್ತಿದ್ದಾರೆ.

ಸೋಮನಾಥನ, ಶ್ರೀರಾಮನ ದೇವಾಲಯಗಳ ವಿಮೋಚನೆಯಾಗಲು ಏಳೆಂಟು ದಶಕಗಳೇ ಬೇಕಾದವು. ಇದೀಗ ಮಥುರೆ – ಕಾಶಿಗಳು ಕಾಯುತ್ತಿವೆ.

ಕಾಶಿಯನ್ನು ಧ್ವಂಸ ಮಾಡಿದವನು ಬರೀ ಔರಂಗಜೇಬನಷ್ಟೇ ಅಲ್ಲ. ವಿಗ್ರಹ ಭಂಜನೆಗೇ ಕುಖ್ಯಾತನಾದ ಇಸ್ಲಾಮೀ ದಾಳಿಕೋರ ಕುತ್ಬುದ್ದೀನ್ ಐಬಕ್, ಸಾಮಾನ್ಯ ಯುಗದ 1194ರಲ್ಲಿ ಇದೇ ಕಾಶಿ ವಿಶ್ವನಾಥನ ದೇವಾಲಯವನ್ನು ಧ್ವಂಸ ಮಾಡಿದ. ಆ ಕಾಲದ (ಸಮಕಾಲೀನ) ಮುಸ್ಲಿಂ ಇತಿಹಾಸಕಾರ ಹಸನ್ ನಿಜಾಮಿ ದಾಖಲಿಸಿರುವಂತೆ, ಒಂದು ಸಾವಿರ ದೇವಾಲಯಗಳನ್ನು ನಾಶ ಮಾಡಿ ಲೂಟಿ ಮಾಡಿದ ಐಶ್ವರ್ಯವನ್ನು, ಈ ಐಬಕ್ ಹದಿನೆಂಟು ಒಂಟೆಗಳ ಮೇಲೆ ಮುನ್ನೂರು ಆನೆಗಳ ಮೇಲೆ ಕೊಂಡೊಯ್ದ. ಅಷ್ಟೇ ಅಲ್ಲ, ಸುಪ್ರಸಿದ್ಧ ಸಾರನಾಥ್ ಸೇರಿದಂತೆ, ಅನೇಕ ಬೌದ್ಧ ದೇವಾಲಯಗಳನ್ನೂ ಧ್ವಂಸ ಮಾಡಿದ. ಇಂದು ಸಾರನಾಥದ ಎಲ್ಲೆಡೆ ಕಾಣುವ ಧ್ವಂಸಾವಶೇಷಗಳನ್ನು ನೋಡಿದರೆ, ಮನಸ್ಸು – ನಾಲಿಗೆ – ಹೃದಯಗಳು ಕಹಿಯಾಗಿಬಿಡುತ್ತವೆ.

vikram sampath

ಭಾರತೀಯರು ತಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸಿದವರಲ್ಲ. ಇಂದಿಗೂ ನಿಲ್ಲಿಸಬೇಕಿಲ್ಲ. ಸಾ|| ಯುಗದ 1212ರಲ್ಲಿ ಬಂಗಾಳದ ಸೇನ್ ವಂಶದ ರಾಜ ವಿಶ್ವರೂಪನು, ಕಾಶಿಗೆ ಬಂದು, ವಿಶ್ವನಾಥನ ದೇವಾಲಯದ ತಾಣದಲ್ಲಿಯೇ “ಈ ನಗರವು ವಿಶ್ವೇಶ್ವರನದು” ಎಂದು ಬರೆಸಿದ ಕಂಬವೊಂದನ್ನು ಸ್ಥಾಪಿಸಿದ. ಪೂರ್ವ ಭಾರತದ ರಾಜರೂ ದೇವಾಲಯ ಪುನರ್-ಸ್ಥಾಪನೆಯ ಈ ಹೋರಾಟದಲ್ಲಿ ಕೈಜೋಡಿಸಿದರು. ಗುಜರಾತ್ ಪ್ರಾಂತದ ವ್ಯಾಪಾರಿ ಸೇಠ್ ವಸ್ತುಪಾಲನು 1230ರಲ್ಲಿ ಒಂದು ಲಕ್ಷ ಸ್ವರ್ಣ ವರಹಗಳನ್ನು ಅರ್ಪಿಸಿ ಪುನರ್ನಿರ್ಮಾಣಕ್ಕೆ ಚಾಲನೆ ನೀಡಿದ. ಈ ನಿರ್ಮಾಣ ಕಾರ್ಯಕ್ಕೆ ಕನಿಷ್ಠ ನಲವತ್ತು ಐವತ್ತು ವರ್ಷಗಳು ಬೇಕಾದವು.

ಪೂರ್ವ-ಪಶ್ಚಿಮ, ಉತ್ತರ – ದಕ್ಷಿಣ ಎಂದು ಮತ್ತೆ ಮತ್ತೆ ನಮ್ಮ ದೇಶವನ್ನು ವಿಚ್ಛೇದಿಸುವ, ತುಂಡು ತುಂಡು ಮಾಡುವ ಉದ್ದೇಶದ ದೇಶದ್ರೋಹಿಗಳು ಈ ಎಲ್ಲ ಐತಿಹಾಸಿಕ ಸಂಗತಿಗಳನ್ನೂ ಅಧ್ಯಯನ ಮಾಡಬೇಕಿದೆ. ಜಾತಿ, ವರ್ಣ, ಪ್ರಾಂತ, ಭಾಷೆಗಳ ಮೇಲೆ ಜನರನ್ನು ಒಡೆದು ಆಳುವ ದುರ್ಬುದ್ಧಿಜೀವಿಗಳನ್ನು ನಮ್ಮ ಜನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ.

ಅದೊಂದು ದುರ್ಭರ ಕಾಲ. ಇಸ್ಲಾಮೀ ದುರಾಡಳಿತಕ್ಕೆ ಕಾಶಿಯ ಪ್ರಾಂತ್ಯ ಸಿಲುಕಿತ್ತು. ತಮ್ಮ ದೇಶದಲ್ಲಿಯೇ ಕಾಫಿರರೆನಿಸಿಕೊಂಡ ದೌರ್ಭಾಗ್ಯದ ಹಿಂದೂಗಳು ಅತ್ಯಂತ ಅವಮಾನಕಾರವಾದ ಜಿಜಿಯಾ ತೆರಿಗೆಯನ್ನು ತೆರಬೇಕಿತ್ತು. ಅದೂ ತುಂಬಾ ಹೀನಾಯವಾಗಿ. ಜಿಜಿಯಾ ಕಿತ್ತುಕೊಳ್ಳುವ ಲೂಟಿಕೋರನು ಕುದುರೆಯ ಮೇಲೆ ಕುಳಿತು ದರ್ಪದಿಂದ ವಸೂಲಿ ಮಾಡುತ್ತಿದ್ದ. ತೆರಿಗೆದಾರರು ದೈನ್ಯದಿಂದ ಬರಿಗಾಲಲ್ಲಿ ಹೋಗಿ, ಜೀಹುಜೂರ್ ಸಲ್ಲಿಸಿ ಜಿಜಿಯಾ ತೆರಬೇಕಿತ್ತು. ಆದರೇನು. ಹಿಂದೂಗಳ ಧರ್ಮಶ್ರದ್ಧೆ ಅನುಪಮವಾದುದು. ಕಾಶಿಯ ವಿಶ್ವನಾಥನ ದರ್ಶನ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ನಮ್ಮ ಕರ್ನಾಟಕದ ಹೊಯ್ಸಳರ ಮೂರನೆಯ ವೀರನರಸಿಂಹನು ಕಾಶಿಯ ಯಾತ್ರಿಕರು ಈ ತೆರಿಗೆ ಪಾವತಿಸಲು ನೆರವಾಗಲು, ಹೆಬ್ಬಾಳೆ ಎಂಬ ಗ್ರಾಮದ ಪೂರ್ಣ ಆದಾಯವನ್ನೇ ಮೀಸಲಾಗಿಟ್ಟಿದ್ದ. ಇತ್ತೀಚಿನ ಉತ್ಖನನದಲ್ಲಿ ವೀರನರಸಿಂಹನ ಶಿಲಾಶಾಸನವೊಂದು ಬೆಳಕಿಗೆ ಬಂದಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಪಕ್ಕದ ಆಂಧ್ರದ ತೆಲುಗು ಕವಿ ಶ್ರೀನಾಥನು ವಿಜಯನಗರದ ಆಸ್ಥಾನ ಕವಿ. ಅವನು ಕಾಶಿ ಖಂಡವನ್ನು ತೆಲುಗಿಗೆ ಅನುವಾದಿಸಿದ್ದಾನೆ. ಭಾಷೆಯ ಹೆಸರಿನಲ್ಲಿ ಭಾರತೀಯರನ್ನು ಒಡೆದು ಆಳುವ ದ್ರೋಹಿಗಳಿಗೆ, ಅವರ ಕೊರಳಪಟ್ಟಿ ಹಿಡಿದು ನಮ್ಮ ಜನ ಈ ಅಂಶವನ್ನು ತಿಳಿಸಬೇಕಿದೆ, ಪ್ರಶ್ನಿಸಬೇಕಿದೆ.

ಇಸ್ಲಾಮೀ ದಾಳಿಯ ಅಮಾನುಷ ಹೊಡೆತಕ್ಕೆ ಸಿಲುಕಿ ಕಾಶಿಯ ಅನೇಕ ವಿದ್ವಾಂಸರು – ಪಂಡಿತರು ದಕ್ಷಿಣ ಭಾರತದ ಅನೇಕ ಪ್ರಾಂತಗಳಿಗೆ ವಲಸೆ ಬಂದರು. ಭಟ್ಟ, ಶೇಷ, ಧರ್ಮಾಧಿಕಾರಿ ಮೊದಲಾದ ಉಪನಾಮಗಳ ಈ ವಿದ್ವಾಂಸರು, ಮತ್ತೆ ಕಾಶಿಗೆ ಹಿಂತಿರುಗಿ ಅಲ್ಲಿಯ ವಿದ್ವತ್-ಪುನರುತ್ಥಾನಕ್ಕೆ ಶ್ರಮಿಸಿದರು. ಕೆಲವು ಮೂರ್ಖರು ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕ ಮಾಡಲು ನಿರಾಕರಿಸಿದಾಗ, ಕಾಶಿಯಿಂದ ಬಂದ ಗಾಗಾ ಭಟ್ಟರು ಈ ಪಟ್ಟಾಭಿಷೇಕವನ್ನು ನಿರ್ವಹಿಸಿದುದು ಇತಿಹಾಸವೇ ಆಗಿದೆ. ವಿಶೇಷವೆಂದರೆ, ಅಂತಹ ವಲಸೆಯ ಋತ್ವಿಕರಾದ ದೀಕ್ಷಿತರೇ ಶ್ರೀರಾಮ ಜನ್ಮಭೂಮಿ ದೇವಾಲಯದ ಇತ್ತೀಚಿನ ಪ್ರಾಣಪ್ರತಿಷ್ಠೆಯ ಸೂತ್ರಧಾರರಾಗಿದ್ದುದು ಗಮನಿಸಬೇಕಾದುದು.

14ನೆಯ ಶತಮಾನದಲ್ಲಿ ಜೌನಪುರದ ನವಾಬ ಮತ್ತೆ ಕಾಶಿಯ ದೇವಾಲಯವನ್ನು ಧ್ವಂಸ ಮಾಡಿದ. ಮತ್ತೆ ನಿರ್ಮಿಸಲ್ಪಟ್ಟ ದೇವಾಲಯವನ್ನು ಸಿಕಂದರ್ ಲೋಧಿಯು ನೆಲಸಮ ಮಾಡಿದ. ಯಾರಪ್ಪಾ, ಈ ಲೋಧಿ ಎನ್ನುವಿರೋ? ದೆಹಲಿಯಲ್ಲಿ ಲೋಧಿ ಎಸ್ಟೇಟ್, ಲೋಧಿ ರೋಡ್, ಲೋಧಿ ಕಾಲೋನಿ ಇತ್ಯಾದಿ ಇತ್ಯಾದಿ ಇವೆಯಲ್ಲಾ, ಆ ಲೋಧಿ ವಂಶದವನೇ ಈತ. ಭಾರತದ ರಾಜಧಾನಿಯಲ್ಲಿ ಅಕ್ಬರ್ ರೋಡ್, ಬಾಬರ್ ರೋಡ್, ಔರಂಗಜೇಬ್ ರೋಡ್, ಮೊದಲಾದವನ್ನು ಹೆಸರಿಸಿದವರು, ಹಾಗೆ ಹೆಸರಿಸಿ ಧನ್ಯರಾದವರು ಮತ್ತು ಬ್ರಿಟಿಷರಿಗೆ ಪ್ರೀತಿಪಾತ್ರರಾಗಿ ಅವರಿಂದ ಅಧಿಕಾರ ಹಸ್ತಾಂತರ ಪಡೆದವರೇ. ಇಂದು ಆ ದಾಳಿಕೋರರ ಹೆಸರುಗಳನ್ನು ಬದಲಾಯಿಸಬೇಕೆಂದರೆ ಅಡ್ಡಗಾಲು ಹಾಕುತ್ತಿರುವವರೂ ಈ ಬ್ರಿಟಿಷ್ ಪ್ರೀತಿಪಾತ್ರರ ವಂಶೀಕರೇ!

ಲೋಧಿಯ ಅನಂತರ ಹಿಂದೂಗಳು ಮತ್ತೆ ಕಾಶಿಯ ವಿಶ್ವನಾಥನ ದೇವಾಲಯದ ಮರು-ನಿರ್ಮಾಣಕ್ಕೆ, ನಾರಾಯಣ ಭಟ್ಟರ ನೇತೃತ್ವದಲ್ಲಿ ರಾಜಾ ತೋಡರಮಲ್ ಸಹಾಯ ಪಡೆದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು

ಔರಂಗಜೇಬನು ಇಸ್ಲಾಮಿನ ಕಡುನಿಷ್ಠ ಅನುಯಾಯಿ. ತನ್ನ ಮತಶ್ರದ್ಧೆಗೆ ಅನುಸಾರವಾಗಿ ಮಥುರೆ – ಕಾಶಿಗಳೂ ಸೇರಿದಂತೆ, ಅಕ್ಷರಶಃ ಸಾವಿರಾರು ದೇವಾಲಯಗಳನ್ನು ಧ್ವಂಸ ಮಾಡಿದ. ಆ ಅವಧಿಯಲ್ಲಿ ಮತ್ತು ಅನಂತರದಲ್ಲಿ ಅನೇಕ ಮರಾಠಾ ರಾಜರು, ಈ ಹಿಂದೂ ದೇವಾಲಯಗಳನ್ನು ಹಿಂಪಡೆಯಲು ಶ್ರಮಿಸಿದರೂ ಅದೇಕೋ ಸಾಧ್ಯವೇ ಆಗಲಿಲ್ಲ. ಮಲ್ಹಾರ್ ರಾವ್ ಹೋಳ್ಕರ್ ಸಹ ಕಾಶಿಯನ್ನು ಪಡೆಯಲು ಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. ವಿಶೇಷವೆಂದರೆ, ಅವರ ಸೊಸೆ ಅಹಲ್ಯಾಬಾಯಿ ಹೋಳ್ಕರ್ ಅವರು ಮೂಲ ಕಾಶಿ ದೇವಾಲಯದ ಪಕ್ಕದಲ್ಲಿ ಹೊಸದೊಂದು ದೇವಾಲಯವನ್ನೇ ನಿರ್ಮಿಸಿದರು. ಅದೇ ಇಂದು ನಮ್ಮ ನಡುವೆ ಇರುವ ದೇವಾಲಯ. ಹಿಮಾಲಯದಿಂದ ಮೊದಲ್ಗೊಂಡು ನಮ್ಮ ಗೋಕರ್ಣವೂ ಸೇರಿದಂತೆ, ಇಡೀ ಭಾರತದಲ್ಲಿ ಅಹಲ್ಯಾಬಾಯಿ ಅವರು ಅನೇಕ ದೇವಾಲಯಗಳನ್ನು ನಿರ್ಮಿಸಿದರು, ಜೀರ್ಣೋದ್ಧಾರ ಮಾಡಿಸಿದರು. ಪ್ರತಿಕೂಲ ವಾತಾವರಣದಲ್ಲಿಯೂ ಅವರ ಈ ಸಾಹಸವು ಸನಾತನ ಧರ್ಮದ ಪುನರುತ್ಥಾನದ ಅಪೂರ್ವ ಘಟ್ಟವಾಗಿದೆ. ಕನ್ನಡ, ಮರಾಠೀ, ತೆಲುಗು, ತಮಿಳು ಎಂದೆಲ್ಲಾ ಭೇದ ಮಾಡಿ ಹೊಸ ಹೊಸ ವಿಚ್ಛಿದ್ರಕಾರೀ ಸಿದ್ಧಾಂತಗಳನ್ನು ಹೆಣೆಯುವ ದ್ರೋಹಿ ಅಕಾಡೆಮಿಷಿಯನ್ನರು ಈ ಸಂಗತಿಗಳನ್ನು ಅಪ್ಪಿತಪ್ಪಿ ಉಲ್ಲೇಖಿಸುವುದಿಲ್ಲ. 1835ರಲ್ಲಿ ಪಂಜಾಬಿನ ಸಿಂಹ, ಸಿಖ್ ದೊರೆ ರಣಜಿತ್ ಸಿಂಹರು ಕಾಶಿ ವಿಶ್ವನಾಥನ ಈ ದೇವಾಲಯದ ಗೋಪುರಕ್ಕೆ ಒಂದು ಟನ್ ತೂಕದ ಚಿನ್ನದ ತಗಡುಗಳನ್ನು ಹೊದಿಸುವ ಸೇವೆ ಸಲ್ಲಿಸಿದರು. ಹಿಂದೂಗಳ – ಸಿಖ್ಖರ ನಡುವೆ ಖಲಿಸ್ತಾನವನ್ನು ಹುಟ್ಟುಹಾಕಿದ ಬೆಳೆಸಿದ ದೇಶದ್ರೋಹಿಗಳಿಗೆ, ಜನರೇ ಈ ಅಂಶವನ್ನು ತಿಳಿಸಬೇಕಿದೆ.

ಶತಕೋಟಿ ಹಿಂದೂಗಳ ಪರಮೇಶ್ವರ ಇನ್ನೆಷ್ಟು ಕಾಯಬೇಕು? ಕಾದಿದ್ದು ಸಾಕು. ನಮಗೆ ಮುಕ್ತಿ ದಯಪಾಲಿಸುವ ಆ ಮುಕ್ತಿನಾಥನಿಗೆ ಇನ್ನಾದರೂ ವಿಮೋಚನೆಯಾಗಲಿ. ಶೀಘ್ರವಾಗಿ ನಂದಿಯ ಪ್ರತೀಕ್ಷೆಗೆ ಒಂದು ಸಕಾರಾತ್ಮಕ ಅಂತ್ಯ ದೊರೆಯಲಿ. ಸತ್ಯಂ ಶಿವಂ ಸುಂದರಂ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್

Continue Reading

ಕಲೆ/ಸಾಹಿತ್ಯ

Kannada and Culture Department: ಕನ್ನಡ ಪುಸ್ತಕ ಪ್ರಾಧಿಕಾರ ಸೇರಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ

Kannada and Culture Department: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಲಾಗಿದೆ.

VISTARANEWS.COM


on

Appointment of Presidents of various academies, including Kannada Book Authority
Koo

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ (Kannada and Culture Department) ವ್ಯಾಪ್ತಿಯ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಮೂರು ವರ್ಷಗಳ ಅವಧಿಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ.

ವಿವಿಧ ಅಕಾಡೆಮಿ, ಪ್ರಾಧಿಕಾರಿಗಳ ಅಧ್ಯಕ್ಷರು

1.ಕನ್ನಡ ಪುಸ್ತಕ ಪ್ರಾಧಿಕಾರ- ಮೈಸೂರು ಮಾನಸ
2.ಕರ್ನಾಟಕ ಸಾಹಿತ್ಯ ಅಕಾಡೆಮಿ- ಎಲ್ ಎನ್ ಮುಕುಂದರಾಜ್
3.ಕರ್ನಾಟಕ ನಾಟಕ ಅಕಾಡೆಮಿ- ಕೆವಿ ನಾಗರಾಜಮೂರ್ತಿ
4.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ- ಕೃಪಾ ಫಡಕಿ
5.ಕರ್ನಾಟಕ ಶಿಲ್ಪ ಕಲಾ ಅಕಾಡಮಿ- ಎಂಸಿ ರಮೇಶ್
6.ಲಲಿತ ಕಲಾ ಅಕಾಡಮಿ- ಡಾ.ಪಸ ಕುಮಾರ್
7.ಯಕ್ಷಗಾನ ಅಕಾಡೆಮಿ- ತಲ್ಲೂರು ಶಿವರಾಂ ಶೆಟ್ಟಿ
8.ಜಾನಪದ ಅಕಾಡೆಮಿ- ಶಿವ ಪ್ರಸಾದ್ ಗೊಲ್ಲಹಳ್ಳಿ
9.ತುಳು ಸಾಹಿತ್ಯ ಅಕಾಡೆಮಿ- ತಾರಾನಾಥ ಗಟ್ಟಿ ಕಾಪಿಕಾಡ್
10.ಕೊಂಕಣಿ ಸಾಹಿತ್ಯ ಅಕಾಡೆಮಿ- ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್
11.ಬ್ಯಾರಿ ಸಾಹಿತ್ಯ ಅಕಾಡೆಮಿ- ಉಮರ್ ಯು ಎಚ್
12.ಅರೆ ಭಾಷಾ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿ- ಸದಾನಂದ ಮಾವಜಿ
13.ಬಯಲಾಟ ಅಕಾಡೆಮಿ ದುರ್ಗದಾಸ್
14.ಬಂಜಾರ ಅಕಾಡೆಮಿ ಡಾಕ್ಟರ್‌ ಎಂ ಆರ್ ಗೋವಿಂದಸ್ವಾಮಿ
15.ರಂಗ ಸಮಾಜ- ಡಾ.ರಾಮಕೃಷ್ಣಯ್ಯ
16.ಕೊಡವ ಸಾಹಿತ್ಯ ಅಕಾಡೆಮಿ- ಅಜ್ಜಿನಕೊಂಡ ಮಹೇಶ್

ವಿವಿಧ ಅಕಾಡೆಮಿ, ಪ್ರಾಧಿಕಾರಿಗಳ ಅಧ್ಯಕ್ಷರು, ಸದಸ್ಯರ ಪೂರ್ಣಪಟ್ಟಿ ಇಲ್ಲಿದೆ

Continue Reading
Advertisement
Arvind Kejriwal
ದೇಶ5 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!

CM Siddaramaiah hugs DK Suresh in Bangalore Rural Lok Sabha constituency election campaign
Lok Sabha Election 202412 mins ago

Lok Sabha Election 2024: ಕಷ್ಟಕ್ಕೆ ಸ್ಪಂದಿಸುವ ಡಿಕೆಸು ಬೇಕೋ? ವೈಟ್‌ ಕಾಲರ್‌ ಡಾ. ಮಂಜುನಾಥ್‌ ಬೇಕೋ? ಸಿಎಂ ಪ್ರಶ್ನೆ

Mudhol Movie Sanjana
ಸ್ಯಾಂಡಲ್ ವುಡ್15 mins ago

Mudhol Movie: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಜತೆ ಸಂಜನಾ ರೊಮ್ಯಾನ್ಸ್!

narendra modi
ದೇಶ29 mins ago

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Varun Gandhi
ಪ್ರಮುಖ ಸುದ್ದಿ51 mins ago

Varun Gandhi: ಸಂಸದ ಅಲ್ಲದಿದ್ದರೂ ನಿಮ್ಮ ಮಗ; ಜನಕ್ಕೆ ಟಿಕೆಟ್‌ ವಂಚಿತ ವರುಣ್‌ ಗಾಂಧಿ ಭಾವುಕ ಪತ್ರ!

supreme court CJI DY chandrachud
ಪ್ರಮುಖ ಸುದ್ದಿ59 mins ago

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

40 per cent commission advertisement against BJP and Summons to CM Siddaramaiah and DCM DK Shivakumar
ರಾಜಕೀಯ1 hour ago

40 percent commission: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು; ಸಿಎಂ, ಡಿಸಿಎಂಗೆ ಸಮನ್ಸ್‌

Murder case Family Dispute
ಬೆಂಗಳೂರು ಗ್ರಾಮಾಂತರ1 hour ago

Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ

Bengaluru News air pressure pipe
ಬೆಂಗಳೂರು2 hours ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20244 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌