RSS Chief Mohan Bhagwat: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಗುಂಪಿನಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದ ಭಾಗವತ್ - Vistara News

ದೇಶ

RSS Chief Mohan Bhagwat: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ, ಒಂದು ಗುಂಪಿನಿಂದ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದ ಭಾಗವತ್

RSS Chief Mohan Bhagwat: ಇತ್ತೀಚಿನ ಕೆಲವು ದಿನಗಳಿಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರ ಪ್ರಮುಖ ನಾಯಕರು ತಮ್ಮ ಎಂದಿನ ಸಿದ್ಧಾಂತಕ್ಕೆ ಹೊರತಾದ ಮಾತುಗಳನ್ನಾಡುತ್ತಿರುವುದು ಕಂಡು ಬರುತ್ತಿದೆ. ಈಗ ಮೋಹನ್ ಭಾಗವತ್ ಅವರು ಒಬ್ಬರಿಂದಲೇ ದೇಶ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

missionaries take advantage of the situation, Says RSS chief Mohan Bhagwat
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾಗ್ಪುರ್, ಮಹಾರಾಷ್ಟ್ರ: ಒಬ್ಬ ವ್ಯಕ್ತಿ, ಒಂದು ಸಿದ್ಧಾಂತ ಅಥವಾ ಒಂದೇ ಗುಂಪಿನಿಂದ ಮಾತ್ರವೇ ದೇಶವನ್ನು ನಿರ್ಮಾಣ ಮಾಡುವುದಾಗಲೀ ಅಥವಾ ವಿನಾಶ ಮಾಡುವುದಾಗಲೀ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ ರಾಜರತ್ನ ಪುರಸ್ಕಾರ ಸಮಿತಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್ ಅವರು, ಒಬ್ಬ ವ್ಯಕ್ತಿ, ಒಂದು ವಿಚಾರ, ಒಂದು ಗುಂಪು, ಒಂದು ಸಿದ್ಧಾಂತವು ದೇಶವನ್ನು ನಿರ್ಮಾಣ ಮಾಡಲು ಅಥವಾ ಒಡೆಯಲು ಸಾಧ್ಯವಿಲ್ಲ. ಪ್ರಪಂಚದ ಉತ್ತಮ ದೇಶಗಳು ಎಲ್ಲಾ ರೀತಿಯ ಆಲೋಚನೆಗಳನ್ನು ಹೊಂದಿವೆ. ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಹೊಂದಿವೆ. ಈ ಬಹುಸಂಖ್ಯೆಯ ವ್ಯವಸ್ಥೆಗಳೊಂದಿಗೆ ಅವು ಬೆಳೆಯುತ್ತವೆ ಎಂದು ಹೇಳಿದರು.

ಆದರೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಈ ಹೇಳಿಕೆಯು ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ನೀತಿಗಳಿಗೆ ವಿರುದ್ಧವಾಗಿದೆ. ಮೋದಿ ಸರ್ಕಾರವು ತನ್ನೆಲ್ಲ ಯೋಜನೆಗಳನ್ನು, ನೀತಿಗಳನ್ನು ಒನ್ ನೇಷನ್ ಪರಿಕಲ್ಪನೆಯಡಿ ಜಾರಿಗೆ ತರುತ್ತಿದೆ. ಇದೀಗ ಒನ್ ನೇಷನ್ ಒನ್ ಎಲೆಕ್ಷನ್‌ಗೂ ತನ್ನ ದಾಳವನ್ನು ಉರುಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಈ ಬಗ್ಗೆ ತಮ್ಮ ವಿಚಾರವನ್ನು ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: Mohan Bhagwat Remark: ಪಂಡಿತ ಎಂದರೆ ವಿದ್ವಾಂಸ, ಮೋಹನ್ ಭಾಗವತ್ ಹೇಳಿಕೆಗೆ ಸ್ಪಷ್ಟನೆ ನೀಡಿದ ಆರೆಸ್ಸೆಸ್

ಇದಕ್ಕೂ ಮುನ್ನ ಕಾನೂನು ಆಯೋಗವು ಏಕಕಾಲಕ್ಕೆ ಚುನಾವಣೆ ನಡೆಸುವುದು, ಲೋಕಸಭೆಯ ಸ್ಪೀಕರ್ ಆಗಿ ಪ್ರಧಾನಿ, ಮುಖ್ಯಮಂತ್ರಿಗಳ ನೇಮಕ ಕುರಿತು ವಿವಿಧ ಪಾಲುದಾರರ ಅಭಿಪ್ರಾಯಗಳನ್ನು ಕೇಳಿತ್ತು. ಆದರೆ, ಕೇಂದ್ರ ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಡಿಸಿದ್ದವು. ಬಿಜೆಪಿಗೆ ಕೇವಲ ಒಂದು ಅನ್ನುವ ಒಂದೇ ಒಂದು ಪದ ಮಾತ್ರ ಗೊತ್ತು ಟೀಕಿಸಿದ್ದವು. ಈಗ ಆರೆಸ್ಸೆಸ್ ಮುಖ್ಯಸ್ಥರೇ ಬಹುತ್ವದ ಬಗ್ಗೆ ಮಾತನಾಡುತ್ತಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ನೀತಿ ನಿರೂಪಣೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳಬಹುದೇ ಕಾದು ನೋಡಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

Arvind Kejriwal: ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

VISTARANEWS.COM


on

arvind kejriwal in tihar jail
Koo

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯ (Delhi Excise policy) ಹಿನ್ನೆಲೆಯಲ್ಲಿ ಅಕ್ರಮ ಹಣ (Illegal money transaction) ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal), ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ (K Kavitha) ಮತ್ತು ಆಮ್ ಆದ್ಮಿ ಪಕ್ಷದ (Aam Admi Party) ಗೋವಾ ಚುನಾವಣೆ ನಿಧಿ ವ್ಯವಸ್ಥಾಪಕ ಚನ್‌ಪ್ರೀತ್ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು (Judicial custody) ದೆಹಲಿ ನ್ಯಾಯಾಲಯ ಮೇ 7ರವರೆಗೆ ವಿಸ್ತರಿಸಿದೆ.

ಅಬಕಾರಿ ನೀತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಇದೀಗ ರದ್ದಾಗಿರುವ ಈ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಕವಿತಾ ಅವರ ನ್ಯಾಯಾಂಗ ಬಂಧನವನ್ನು ಮೇ 7ರವರೆಗೆ ರೋಸ್ ಅವೆನ್ಯೂ ನ್ಯಾಯಾಲಯ ವಿಸ್ತರಿಸಿದೆ. ಮೂವರೂ ಆರೋಪಿಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಅರವಿಂದ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ತಮ್ಮ ವೈದ್ಯರೊಂದಿಗೆ ಪ್ರತಿದಿನ 15 ನಿಮಿಷಗಳ ವೈದ್ಯಕೀಯ ಸಮಾಲೋಚನೆಗೆ ಅವಕಾಶ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷದ ಸಂಚಾಲಕರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದಾಗಿ ಒಂದು ದಿನದ ನಂತರ ನ್ಯಾಯಾಲಯದ ಈ ನಿರ್ಧಾರವು ಬಂದಿದೆ.

ದೆಹಲಿ ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವಂತೆ ನಿರ್ದೇಶಿಸಿದೆ ಮತ್ತು ಯಾವುದೇ ವಿಶೇಷ ಸಮಾಲೋಚನೆಯ ಅಗತ್ಯವಿದ್ದಲ್ಲಿ, ತಿಹಾರ್ ಜೈಲು ಅಧಿಕಾರಿಗಳು ಅಂತಃಸ್ರಾವಶಾಸ್ತ್ರಜ್ಞರು ಮತ್ತು ಮಧುಮೇಹಶಾಸ್ತ್ರಜ್ಞರನ್ನು ಒಳಗೊಂಡ AIIMS ನಿರ್ದೇಶಕರು ರಚಿಸಿರುವ ವೈದ್ಯಕೀಯ ಮಂಡಳಿಗೆ ತಿಳಿಸಬೇಕಿದೆ.

ಸೋಮವಾರ ಸಂಜೆ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಿದ್ದು, ನಂತರ ಅವರಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ ಅನ್ನು ನೀಡಲಾಯಿತು ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಹನುಮ ಜಯಂತಿಯ ಸಂದರ್ಭದಲ್ಲಿ ಬಂದಿರುವ ಈ ಸುದ್ದಿಯನ್ನು ಆಪ್ ಸ್ವಾಗತಿಸಿದ್ದು, ಈ ಬೆಳವಣಿಗೆಯು ದೇವರ ಆಶೀರ್ವಾದದ ಫಲವಾಗಿದೆ ಎಂದು ಹೇಳಿದೆ. ತಿಹಾರ್ ಅಧಿಕಾರಿಯೊಬ್ಬರ ಪ್ರಕಾರ, ಏಮ್ಸ್ ವೈದ್ಯರ ಸಲಹೆಯ ಮೇರೆಗೆ ಕೇಜ್ರಿವಾಲ್ ಅವರಿಗೆ ಸೋಮವಾರ ಸಂಜೆ ಕಡಿಮೆ ಪ್ರಮಾಣದ ಇನ್ಸುಲಿನ್ ಎರಡು ಘಟಕಗಳನ್ನು ನೀಡಲಾಯಿತು.

ಇಡಿಯ ಕಾನೂನು ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ನಂತರ ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಬಂಧಿಸಿತು. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಇಡಿ ಮತ್ತು ಸಿಬಿಐ ದಾಖಲಿಸಿರುವ ಎರಡೂ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತೆಲಂಗಾಣ ಎಂಎಲ್‌ಸಿಯನ್ನು ಸಿಬಿಐ ಬಂಧಿಸಿತ್ತು.

ಮತ್ತೊಂದೆಡೆ, 2022ರ ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಹಣವನ್ನು ನಿರ್ವಹಿಸಿದ ವ್ಯಕ್ತಿ ಚನ್‌ಪ್ರೀತ್ ಸಿಂಗ್ ಅವರನ್ನು ಇಡಿ ಬಂಧಿಸಿದೆ. ದೆಹಲಿ ಅಬಕಾರಿ ನೀತಿಯಲ್ಲಿ ಲಂಚ ಸಂಗ್ರಹಿಸಿದ ಆರೋಪ ಇವರ ಮೇಲಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಹಿನ್ನಡೆ; ವಿಶೇಷ ವೈದ್ಯಕೀಯ ಸಮಾಲೋಚನೆಯ ಅರ್ಜಿ ವಜಾ

Continue Reading

Lok Sabha Election 2024

S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

1948ರಲ್ಲಿ ಇಸ್ರೇಲ್‌ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ 1992ರವರೆಗೂ ಅಲ್ಲಿ ಭಾರತದ ರಾಯಭಾರಿಯನ್ನು ನೇಮಿಸಲಿಲ್ಲ. ಆ ಬಳಿಕ 1992ರಲ್ಲಿ ಇಸ್ರೇಲ್‌ನಲ್ಲಿ ತೀರ ವಿಳಂಬವಾಗಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ 2017ರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಲಿಲ್ಲ. ಕಾಂಗ್ರೆಸ್‌ನ ಮುಸ್ಲಿಂ ಓಲೈಕೆ ನೀತಿಯೇ ಇದಕ್ಕೆ ಕಾರಣ ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಟೀಕಿಸಿದ್ದಾರೆ.

VISTARANEWS.COM


on

jaishankar
Koo

ಹೊಸದಿಲ್ಲಿ: ಈ ಹಿಂದೆ ಕೇಂದ್ರದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಪಕ್ಷ ವಿದೇಶಾಂಗ ನೀತಿಯಲ್ಲೂ ಮುಸ್ಲಿಂ ಮತ ಬ್ಯಾಂಕ್‌ ರಾಜಕಾರಣ ನಡೆಸುವ ಮೂಲಕ ದೇಶದ ಹಿತಾಸಕ್ತಿ ಕಡೆಗಣಿಸಿತ್ತು ಎಂದು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ (S Jaishankar) ಆಪಾದಿಸಿದ್ದಾರೆ.

ವಿಡಿಯೊ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಮುಸ್ಲಿಂ ಮತ ಬ್ಯಾಂಕ್‌ ಭದ್ರಪಡಿಸಿಕೊಳ್ಳಲು ಮತ್ತು ಮುಸ್ಲಿಮರನ್ನು ಓಲೈಸಲು ಯಾವ ರೀತಿ ಕಾಂಗ್ರೆಸ್‌ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿತ್ತು ಎನ್ನುವುದನ್ನು ವಿವರಿಸಿದ್ದಾರೆ.

1948ರಲ್ಲಿ ಇಸ್ರೇಲ್‌ ಸ್ವತಂತ್ರ ದೇಶವಾಗಿ ಹೊರ ಹೊಮ್ಮಿತು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ 1992ರವರೆಗೂ ಅಲ್ಲಿ ಭಾರತದ ರಾಯಭಾರಿಯನ್ನು ನೇಮಿಸಲಿಲ್ಲ. ಆ ಬಳಿಕ 1992ರಲ್ಲಿ ಇಸ್ರೇಲ್‌ನಲ್ಲಿ ತೀರ ವಿಳಂಬವಾಗಿ ರಾಯಭಾರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ 2017ರವರೆಗೂ ಯಾವೊಬ್ಬ ಪ್ರಧಾನಿಯೂ ಇಸ್ರೇಲ್‌ಗೆ ಭೇಟಿ ನೀಡಲಿಲ್ಲ. ಇಸ್ರೇಲ್‌ ಜತೆ ಬಾಂಧವ್ಯ ಹೊಂದಿದರೆ, ಆ ದೇಶದ ಜತೆ ವ್ಯವಹಾರ ನಡೆಸಿದರೆ, ಆ ದೇಶಕ್ಕೆ ಭೇಟಿ ನೀಡಿದರೆ ಭಾರತದ ಮುಸಲ್ಮಾನರು ತಮ್ಮ ಪಕ್ಷದ ವಿರುದ್ಧ ಸಿಟ್ಟಾಗುತ್ತಾರೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್‌ ಆಡಳಿತ ಇಸ್ರೇಲ್‌ನಂಥ ಬಲಿಷ್ಠ ದೇಶವನ್ನು ಕಡೆಗಣಿಸಿತು ಎಂದು ಜೈಶಂಕರ್‌ ಹೇಳಿದ್ದಾರೆ.

ಕೃಷಿ, ತಂತ್ರಜ್ಞಾನ, ರಕ್ಷಣೆಯಂಥ ಹಲವು ವಿಷಯಗಳಲ್ಲಿ ಇಸ್ರೇಲ್‌ ಅತ್ಯಂತ ಬಲಿಷ್ಠ ಮತ್ತು ಪ್ರಮುಖ ದೇಶ. ಇಸ್ರೇಲ್‌ ಭಾರತದ ಮಿತ್ರ ದೇಶ. ಇಸ್ರೇಲ್‌ನಿಂದ ಭಾರತದ ರಕ್ಷಣಾ ವಲಯಕ್ಕೆ ಹಲವು ಪ್ರಯೋಜನಗಳು ಇದ್ದವು. ಇಷ್ಟಾಗಿಯೂ ಕಾಂಗ್ರೆಸ್‌, ಮುಸ್ಲಿಮರನ್ನು ಓಲೈಸಲು ಇಸ್ರೇಲ್‌ ಸಂಬಂಧದಿಂದ ದೂರ ಉಳಿಯಿತು. ಇದರಿಂದ ನಮ್ಮ ದೇಶಕ್ಕೆ ತುಂಬಾ ನಷ್ಟವಾಯಿತು ಎಂದು ಜೈಶಂಕರ್‌ ವಿವರಿಸಿದ್ದಾರೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು. ಈ ಮೂಲಕ, ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.

ಭಾರತದ ಶತ್ರು ದೇಶ ಪಾಕಿಸ್ತಾನದ ವಿಚಾರದಲ್ಲೂ ಕಾಂಗ್ರೆಸ್‌ ಆಡಳಿತ ಮುಸ್ಲಿಂ ಓಲೈಕೆಯ ನೀತಿ ಅನುಸರಿಸಿತು. ದೇಶದ ಒಳಗಷ್ಟೇ ಅಲ್ಲ, ಹೊರಗೂ ಓಟ್‌ ಬ್ಯಾಂಕ್‌ ರಾಜಕಾರಣ ನಡೆಸಿತು ಎಂದು ಜೈಶಂಕರ್‌ ಆಪಾದಿಸಿದ್ದಾರೆ.

ಮೋದಿಯಿಂದಲೂ ಕಾಂಗ್ರೆಸ್‌ ವಿರುದ್ಧ ಮತ ಬ್ಯಾಂಕ್‌ ರಾಜಕಾರಣ ಆರೋಪ

ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾ ಅಪರಾಧ. ಶೋಭಾ ಯಾತ್ರೆ ನಡೆಸಲೂ ಅಲ್ಲಿ ಅವಕಾಶ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಪ್ರಚಾರದ (Lok Sabha Election 2024) ವೇಳೆ ಕರ್ನಾಟಕದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಮಂಗಳವಾರ ಬೆಳಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಕಾಂಗ್ರೆಸ್‌ ಎಂದೂ ಅಭಿವೃದ್ಧಿ ರಾಜಕಾರಣವನ್ನು ಮಾಡಿಯೇ ಇಲ್ಲ. ಅದು ಮಾಡುತ್ತಿರುವುದು ವೋಟ್‌ ಬ್ಯಾಂಕ್‌ ಪಾಲಿಟಿಕ್ಸ್‌, ಒಂದು ಸಮುದಾಯದ ಓಲೈಕೆ ರಾಜಕಾರಣ ಎಂದೂ ಮೋದಿ ಟೀಕಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಮೊದಲ ಆದ್ಯತೆಯಾಗಿ ಹಂಚುತ್ತದೆ ಎಂಬ ಆರೋಪವನ್ನು ಮತ್ತೊಮ್ಮೆ ಪ್ರಸ್ತಾಪ ಮಾಡಿದ ಮೋದಿ, ನಾನು ಸತ್ಯ ಹೇಳಿದರೆ ಕಾಂಗ್ರೆಸ್‌ಗೆ ಮೆಣಸಿನ ಉರಿ ಬಿದ್ದಂತಾಗುತ್ತದೆ. ಈ ದೇಶದ ಸಂಪತ್ತಿನಲ್ಲಿ ಮುಸಲ್ಮಾನರಿಗೆ ಮೊದಲ ಪಾಲು ಸಿಗಬೇಕು ಎಂದು ಮನಮೋಹನ್‌ ಸಿಂಗ್‌ ತಾವು ಪ್ರಧಾನಿಯಾಗಿದ್ದ ಹೇಳಿದ್ದನ್ನು ನೀವು ಮರೆಯಬೇಡಿ. ನಿಮ್ಮ ಕೊರಳಿನ ಮಂಗಳಸೂತ್ರವನ್ನೂ ಅವರು ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.

ದಲಿತರ ಮೀಸಲು ಮುಸಲ್ಮಾನರಿಗೆ

ದಲಿತರು ಮತ್ತು ಆದಿವಾಸಿಗಳ ಮೀಸಲ ಪಾಲನ್ನು ಕಿತ್ತು ಕಾಂಗ್ರೆಸ್‌ ಮುಸಲ್ಮಾನರಿಗೆ ನೀಡಲು ಸದಾ ಪ್ರಯತ್ನಿಸುತ್ತಿರುತ್ತದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪರಿಶಿಷ್ಟರ ಮೀಸಲಿನ ಪಾಲನ್ನು ಕಿತ್ತು ಮುಸಲ್ಮಾನರಿಗೆ ನೀಡಿತ್ತು. ಮುಂದೆ ಅಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದನ್ನು ರದ್ದುಪಡಿಸಿ ಎಸ್‌ಸಿ, ಎಸ್‌ಟಿಯವರಿಗೆ ನ್ಯಾಯ ದೊರಕಿಸಲಾಯಿತು. ಆಂಧ್ರ ಪ್ರದೇಶದ ಕಾಂಗ್ರೆಸ್‌ ಸರ್ಕಾರ ಕೂಡ ಎಸ್‌ಸಿ, ಎಸ್‌ಟಿ ಮೀಸಲು ಕಡಿಮೆ ಮಾಡಿ ಮುಸಲ್ಮಾನರ ಮೀಸಲು ಹೆಚ್ಚಿಸಲು ನಾಲ್ಕು ಬಾರಿ ವಿಧೇಯಕ ಮಂಡಿಸಿ ಕಾಯಿದೆ ರೂಪಿಸಿತ್ತು. ಆದರೆ ಕೋರ್ಟ್‌ ಮಧ್ಯಪ್ರವೇಶದ ಕಾರಣ ಅದು ಸಾಧ್ಯವಾಗಲಿಲ್ಲ. 2012ರಲ್ಲಿ ಕೇಂದ್ರದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಹೀಗೆಯೇ ಮಾಡಲು ಹೊರಟಿತ್ತು. ಎಸ್‌ಸಿ-ಎಸ್‌ಟಿ ಮತ್ತು ಆಸಿವಾಸಿಗಳಿಗೆ ನಾನು ಯಾವ ಕಾರಣಕ್ಕೂ ಮೀಸಲಿನಲ್ಲಿ ನಷ್ಟ ಮಾಡಲು ಬಿಡುವುದಿಲ್ಲ. ಇದು ಮೋದಿ ಗ್ಯಾರಂಟಿ ಎಂದು ಮೋದಿ ಘೋಷಿಸಿದ್ದರು.

ನುಸುಳುಕೋರರಿಗೆ ಸೌಲಭ್ಯ ಕೊಡಬೇಕೆ?

ನುಸುಳುಕೋರರಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಈ ದೇಶದ ಸಂಪತ್ತು ಹಂಚಲು ಬಯಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮೋದಿ, ನೆರೆಯ ದೇಶದಿಂದ ಪದೇಪದೆ ದಾಳಿಗೆ ಒಳಗಾಗುವ ನಮ್ಮ ವೀರ ಸೈನಿಕರಿಗೆ ಯಾವುದೇ ನೆರವು ನೀಡುತ್ತಿರಲಿಲ್ಲ. ಆದರೆ ನಾವು ನಮ್ಮ ಯೋಧರಿಗೆ ಎಲ್ಲ ರೀತಿಯ ನೆರವು ನೀಡುತ್ತಿದ್ದೇವೆ. ಅವರ ಆತ್ಮಸ್ಥೈರ್ಯ ಹೆಚ್ಚಿಸುತ್ತಿದ್ದೇವೆ ಎಂದಿದ್ದರು.

ಇದನ್ನೂ ಓದಿ: S Jaishankar : ಪಾಠ ಹೇಳಲು ಬರಬೇಡಿ; ಭಾರತದ ಚುನಾವಣಾ ವಿಚಾರಕ್ಕೆ ಮೂಗು ತೂರಿಸಿದ ವಿಶ್ವ ಸಂಸ್ಥೆಗೆ ಜೈಶಂಕರ್​​ ತಿರುಗೇಟು

ಕಾಂಗ್ರೆಸ್‌ ಪ್ರಣಾಳಿಕೆಯನ್ನು ನೀವು ಎಚ್ಚರಿಕೆಯಿಂದ ಓದಿ. ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತಿನ ಸರ್ವೆ ನಡೆಸುತ್ತಾರಂತೆ. ಆ ಬಳಿಕ ಅದನ್ನು ಅಗತ್ಯ ಇದ್ದವರಿಗೆ ಹಂಚುತ್ತಾರಂತೆ. ಆ ಅಗತ್ಯ ಇದ್ದವರು ಯಾರು ಎಂಬುದು ನಿಮಗೆ ಗೊತ್ತಿರಲಿ ಎಂದು ಮೋದಿ ಹೇಳಿದ್ದರು.

Continue Reading

ಪ್ರಮುಖ ಸುದ್ದಿ

Patanjali Case: ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ: ಪತಂಜಲಿ ಪ್ರಕರಣದಲ್ಲಿ ವೈದ್ಯಕೀಯ ಸಂಘಕ್ಕೂ ಸುಪ್ರೀಂ ಚಾಟಿ

Patanjali Case: “ಪತಂಜಲಿಯನ್ನು ಒಂದು ಬೆಟ್ಟು ಮಾಡಿ ತೋರುವಾಗ ನಾಲ್ಕು ಬೆರಳುಗಳು ಅವರತ್ತಲೂ ತೋರಿಸುತ್ತಿವೆ. ನಿಮ್ಮ (ಐಎಂಎ) ವೈದ್ಯರು ಕೂಡ ಅಲೋಪತಿ ಕ್ಷೇತ್ರದಲ್ಲಿ ದುಬಾರಿ ಮತ್ತು ಅನಗತ್ಯ ಔಷಧಿಗಳನ್ನು ಅನುಮೋದಿಸುತ್ತಿದ್ದಾರೆ. ನಾವು ನಿಮ್ಮ (ಐಎಂಎ) ಕಡೆ ಏಕೆ ಪ್ರಕರಣವನ್ನು ತಿರುಗಿಸಬಾರದು?” ಎಂದು ಸುಪ್ರೀಂ ಕೋರ್ಟ್ ಐಎಂಎಗೆ ಪ್ರಶ್ನಿಸಿದೆ.

VISTARANEWS.COM


on

supreme court baba ramdev IMA
Koo

ಹೊಸದಿಲ್ಲಿ: ತಪ್ಪುದಾರಿಗೆಳೆಯುವ ಜಾಹೀರಾತು (Misleading advertisements) ಪ್ರಕರಣದಲ್ಲಿ (Patanjali Case) ಪತಂಜಲಿ ಆಯುರ್ವೇದ (Patanjali Ayurved) ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸುಪ್ರೀಂ ಕೋರ್ಟ್‌ (Supreme court), ಅಲೋಪತಿಯಲ್ಲಿ (Allopathy) “ದುಬಾರಿ ಮತ್ತು ಅನಗತ್ಯ” ಔಷಧಿಗಳನ್ನು ಅನುಮೋದಿಸುತ್ತಿರುವ ಭಾರತೀಯ ವೈದ್ಯಕೀಯ ಸಂಘ (IMA) ಅರ್ಜಿದಾರರಿಗೂ ಚಾಟಿ ಬೀಸಿದೆ. “ಇತರರನ್ನು ದೂರುವ ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ” ಎಂದು ಪೀಠ ತೀಕ್ಷ್ಣವಾಗಿ ನುಡಿದಿದೆ.

ಪತಂಜಲಿ ಆಯುರ್ವೇದ ಸಂಸ್ಥೆ, ಅದರ ಸ್ಥಾಪಕರಾದ ಬಾಬಾ ರಾಮ್‌ದೇವ್ (Baba Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balakrishna) ಅವರ ವಿರುದ್ಧದ ಐಎಂಎ ದೂರಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಐಎಂಎ ಬಗ್ಗೆ ಹೇಳುವ ಮುನ್ನ ಪೀಠವು, ಕ್ಷಮೆಯಾಚನೆಯನ್ನು ಅದರ ಉತ್ಪನ್ನಗಳ ಜಾಹೀರಾತು ಮಾದರಿಯಲ್ಲೇ ದೊಡ್ಡದಾಗಿ ಪತ್ರಿಕೆಗಳನ್ನು ಪ್ರಕಟಿಸುವಂತೆ ಪತಂಜಲಿಗೆ ತಾಕೀತು ಮಾಡಿತ್ತು.

ನಂತರ ತೀಕ್ಷ್ಣವಾದ ಪದಗಳೊಂದಿಗೆ ನ್ಯಾಯಪೀಠವು ದೇಶದ ಪ್ರಮುಖ ವೈದ್ಯರ ಸಂಘದತ್ತ ಚಾಟಿ ಬೀಸಿತು. “ಪತಂಜಲಿಯನ್ನು ಒಂದು ಬೆಟ್ಟು ಮಾಡಿ ತೋರುವಾಗ ನಾಲ್ಕು ಬೆರಳುಗಳು ಅವರತ್ತಲೂ ತೋರಿಸುತ್ತಿವೆ. ನಿಮ್ಮ (ಐಎಂಎ) ವೈದ್ಯರು ಕೂಡ ಅಲೋಪತಿ ಕ್ಷೇತ್ರದಲ್ಲಿ ದುಬಾರಿ ಮತ್ತು ಅನಗತ್ಯ ಔಷಧಿಗಳನ್ನು ಅನುಮೋದಿಸುತ್ತಿದ್ದಾರೆ. ನಾವು ನಿಮ್ಮ (ಐಎಂಎ) ಕಡೆ ಏಕೆ ಪ್ರಕರಣವನ್ನು ತಿರುಗಿಸಬಾರದು?” ಎಂದು ಸುಪ್ರೀಂ ಕೋರ್ಟ್ ಐಎಂಎಗೆ ಪ್ರಶ್ನಿಸಿದೆ.

“ಐಎಂಎಯ ಅನೈತಿಕ ವರ್ತನೆಗೆ ಸಂಬಂಧಿಸಿದಂತೆ ಹಲವಾರು ದೂರುಗಳಿವೆ. ಶಿಶುಗಳು, ಶಾಲೆಗೆ ಹೋಗುವ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಉತ್ಪನ್ನಗಳ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಎಫ್‌ಎಂಸಿಜಿ ಕಂಪನಿಗಳು ಸಾರ್ವಜನಿಕರ ಮೇಲೆ ಸವಾರಿ ಮಾಡುತ್ತಿವೆ” ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾನಗಿ ಅಧಿಕಾರಿಗಳನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಕೇಳಿದೆ. ಕಳೆದ ಮೂರು ವರ್ಷಗಳಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸಚಿವಾಲಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

“ಈಗ ನಾವು ಎಲ್ಲವನ್ನೂ ನೋಡುತ್ತಿದ್ದೇವೆ. ನಾವು ಮಕ್ಕಳು, ಶಿಶುಗಳು, ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದೇವೆ. ಯಾರನ್ನೂ ಸುಲಭವಾಗಿ ಯಾಮಾರಿಸಲಾಗುವುದಿಲ್ಲ” ಎಂದ ನ್ಯಾಯಾಲಯ, “ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದೂ ಹೇಳಿದೆ.

ಪತಂಜಲಿ ವಿರುದ್ಧದ ಪ್ರಕರಣವೇನು?

ಪತಂಜಲಿ ಆಯುರ್ವೇದ್‌ನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ನ್ಯಾಯಾಲಯದ ಮೆಟ್ಟಿಲೇರಿದೆ. ರೋಗಗಳನ್ನು ಗುಣಪಡಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಆಧುನಿಕ ಔಷಧದ ವಿರುದ್ಧ ಅಪಪ್ರಚಾರ ನಡೆಸಿದ್ದಕ್ಕಾಗಿ ಪತಂಜಲಿಯುನ್ನು ಕೋರ್ಟಿಗೆಳೆಯಲಾಗಿದೆ. ಕಳೆದ ವರ್ಷ, ಸುಪ್ರೀಂ ಕೋರ್ಟ್‌ ತಪರಾಕಿಯ ನಂತರ, ಪತಂಜಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿತ್ತು. ಆದರೂ ಈ ವರ್ಷದ ಆರಂಭದಲ್ಲಿ ತನ್ನ ಮಾತನ್ನು ಉಲ್ಲಂಘಿಸಿತ್ತು.

ಎಪ್ರಿಲ್ 16ರಂದು, ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ “ಅಲೋಪತಿಯನ್ನು ಕೀಳಾಗಿ ಹಾಕುವ” ಯಾವುದೇ ಪ್ರಯತ್ನದ ವಿರುದ್ಧ ಎಚ್ಚರಿಕೆ ನೀಡಿತು. ಒಂದು ವಾರದೊಳಗೆ “ಸಾರ್ವಜನಿಕ ಕ್ಷಮೆಯಾಚನೆ ಮತ್ತು ಪಶ್ಚಾತ್ತಾಪವನ್ನು ತೋರಿಸಲು” ಅನುಮತಿ ನೀಡಿತು. ಆದರೂ ಅವರಿಬ್ಬರೂ ಬಗ್ಗಿರಲಿಲ್ಲ. ಇಂದು ಕಂಪನಿಯು 60ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ತನ್ನ ಕ್ಷಮೆಯಾಚನೆಯನ್ನು ಸಣ್ಣದಾಗಿ ಪ್ರಕಟಿಸಿದೆ. ಇದನ್ನು ಗಮನಿಸಿದ ನ್ಯಾಯಾಲಯ, ಜಾಹೀರಾತುಗಳಷ್ಟೇ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸುವಂತೆ ಚಾಟಿ ಬೀಸಿದೆ.

ಇದನ್ನೂ ಓದಿ: Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

Continue Reading

ದೇಶ

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Everest Spices Row: ಎವರೆಸ್ಟ್ ಜೊತೆಗೆ, ʼMDH’ ಎಂದು ಜನಪ್ರಿಯವಾಗಿರುವ ಮಹಾಶಿಯಾನ್ ಡಿ ಹಟ್ಟಿಯ ಮಸಾಲೆಗಳು ಸಹ ವಿವಾದದಲ್ಲಿ ಸಿಲುಕಿಕೊಂಡಿವೆ. MDH ನವದೆಹಲಿ ಮೂಲದ ಭಾರತೀಯ ಮಸಾಲೆ ಉತ್ಪಾದಕ ಮತ್ತು ಮಾರಾಟಗಾರ. ಎವರೆಸ್ಟ್ ನಂತರ ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಮಸಾಲೆ ಬ್ರಾಂಡ್.

VISTARANEWS.COM


on

MDH everest spices row
Koo

ಹೊಸದಿಲ್ಲಿ: ಕ್ಯಾನ್ಸರ್ (Cancer) ಉಂಟುಮಾಡುವ ಕೀಟನಾಶಕ (pesticide) ಅಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ಗಳಲ್ಲಿ (Hongkong) ಆಹಾರ ನಿಗಾ ಸಂಸ್ಥೆಗಳ ತೀವ್ರ ನಿಗಾಕ್ಕೆ (Spices Row) ಕಾರಣವಾಗಿರುವ ಭಾರತೀಯ ಮೂಲದ ಎವರೆಸ್ಟ್‌ (Everest spices) ಮಸಾಲೆ ಉತ್ಪನ್ನಗಳ ಕಂಪನಿ, ಇದೀಗ ತಮ್ಮ ಉತ್ಪನ್ನಗಳು ಬ್ಯಾನ್‌ (ban) ಆಗಿಲ್ಲ ಎಂದಿವೆ. ಭಾರತೀಯ ಮಸಾಲೆ ಮಂಡಳಿ ಮತ್ತು ಎಫ್‌ಎಸ್‌ಎಸ್‌ಎಐನಂತಹ ಶಾಸನಬದ್ಧ ಸಂಸ್ಥೆಗಳು ನಿಗದಿಪಡಿಸಿದ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಎರಡೂ ದೇಶಗಳಲ್ಲಿ ತಮ್ಮ ಮಸಾಲೆಗಳನ್ನು ನಿಷೇಧಿಸಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳನ್ನು ರವಾನೆ ಮಾಡುವ ಮೊದಲು ಮತ್ತು ರಫ್ತು ಮಾಡುವ ಮೊದಲು ಕಟ್ಟುನಿಟ್ಟಾದ ತಪಾಸಣೆಗೆ ಒಳಪಡಿಸುತ್ತೇವೆ ಎಂದು ಹೇಳಿದೆ. ಪ್ರತಿ ಸಾಗಣೆಯೂ ಭಾರತೀಯ ಮಸಾಲೆ ಮಂಡಳಿಯಿಂದ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ. ಪ್ರಸ್ತುತ ಸಮಸ್ಯೆಯ ನಿವಾರಣೆಗೆ ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದು, ನಮ್ಮ ಗುಣಮಟ್ಟ ನಿಯಂತ್ರಣ ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದಿದೆ.

ತಮ್ಮ ಮಸಾಲೆಗಳನ್ನು ಸಿಂಗಾಪುರ ಅಥವಾ ಹಾಂಕಾಂಗ್‌ನಲ್ಲಿ ನಿಷೇಧಿಸಲಾಗಿಲ್ಲ ಎಂದು ಎವರೆಸ್ಟ್‌ನ ವಕ್ತಾರರು ತಿಳಿಸಿದ್ದಾರೆ. “ಸಿಂಗಾಪುರದ ಆಹಾರ ಸುರಕ್ಷತಾ ಪ್ರಾಧಿಕಾರವು ಹಾಂಕಾಂಗ್‌ನ ಉತ್ಪನ್ನ ವಾಪಸಾತಿ ಎಚ್ಚರಿಕೆಯನ್ನು ಉಲ್ಲೇಖಿಸಿದೆ ಮತ್ತು ಹೆಚ್ಚಿನ ತಪಾಸಣೆಗಾಗಿ ಉತ್ಪನ್ನವನ್ನು ಮರುಪಡೆಯಲು ಮತ್ತು ತಾತ್ಕಾಲಿಕವಾಗಿ ಹಿಡಿದಿಡಲು ನಮ್ಮ ಸಿಂಗಾಪುರ್ ಆಮದುದಾರರನ್ನು ಕೇಳಿದೆ” ಎಂದು ವಕ್ತಾರರು ಸ್ಪಷ್ಟಪಡಿಸಿದರು.

ದಿವಂಗತ ವಾದಿಲಾಲ್ ಭಾಯ್ ಶಾ ಸ್ಥಾಪಿಸಿದ 57 ವರ್ಷ ಹಳೆಯ ಮಸಾಲೆ ಬ್ರಾಂಡ್ ಎವರೆಸ್ಟ್‌ ಕಂಪನಿಯು ಶುದ್ಧ ಮತ್ತು ಮಿಶ್ರಿತ ಮಸಾಲೆಗಳ ಭಾರತದ ಅತಿದೊಡ್ಡ ತಯಾರಕ. ಜಾಗತಿಕವಾಗಿ 80ಕ್ಕೂ ಹೆಚ್ಚು ದೇಶಗಳಲ್ಲಿ ಚಲಾವಣೆಯಲ್ಲಿದೆ.

ಎವರೆಸ್ಟ್ ಜೊತೆಗೆ, ʼMDH’ ಎಂದು ಜನಪ್ರಿಯವಾಗಿರುವ ಮಹಾಶಿಯಾನ್ ಡಿ ಹಟ್ಟಿಯ ಮಸಾಲೆಗಳು ಸಹ ವಿವಾದದಲ್ಲಿ ಸಿಲುಕಿಕೊಂಡಿವೆ. MDH ನವದೆಹಲಿ ಮೂಲದ ಭಾರತೀಯ ಮಸಾಲೆ ಉತ್ಪಾದಕ ಮತ್ತು ಮಾರಾಟಗಾರ. ಎವರೆಸ್ಟ್ ನಂತರ ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಮಸಾಲೆ ಬ್ರಾಂಡ್.

ವಿವಾದ ಏನು?

ಹಾಂಕಾಂಗ್ ಮತ್ತು ಸಿಂಗಾಪುರಗಳು ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಇವುಗಳಲ್ಲಿ ನಿಗದಿತ ಮಿತಿಯನ್ನು ಮೀರಿ ಕೀಟನಾಶಕ ʼಎಥಿಲೀನ್ ಆಕ್ಸೈಡ್ʼ ಇದೆ ಎಂದು ಆರೋಪಿಸಲಾಗಿದೆ. ಹಾಂಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರ (CFS) ಗ್ರಾಹಕರನ್ನು ಈ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ವ್ಯಾಪಾರಿಗಳನ್ನು ಮಾರಾಟ ಮಾಡದಂತೆ ಕೇಳಿಕೊಂಡಿದೆ. ಸಿಂಗಾಪುರ್ ಫುಡ್ ಏಜೆನ್ಸಿ, ಈ ಮಸಾಲೆಗಳನ್ನು ಮರುಪಡೆಯಲು ಕಂಪನಿಗೆ ನಿರ್ದೇಶಿಸಿದೆ.

ಸಿಂಗಾಪುರವು ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ಹಿಂಪಡೆದಿದೆ. MDHನ ಮದ್ರಾಸ್ ಕರಿ ಪೌಡರ್ (ಮದ್ರಾಸ್ ಮೇಲೋಗರ ಮಸಾಲೆ ಮಿಶ್ರಣ), ಎವರೆಸ್ಟ್ ಫಿಶ್ ಕರಿ ಮಸಾಲಾ, MDH ಸಾಂಬಾರ್ ಮಸಾಲಾ ಮಿಶ್ರಿತ ಮಸಾಲಾ ಪೌಡರ್ ಮತ್ತು MDH ಕರಿ ಪುಡಿ ಮಿಶ್ರಿತ ಮಸಾಲಾ ಪೌಡರ್ ಅನ್ನು ಖರೀದಿಸದಂತೆ ಹಾಂಕಾಂಗ್ ಗ್ರಾಹಕರನ್ನು ಕೇಳಿದೆ.

ಈಗ ಭಾರತದಲ್ಲಿ ಪರೀಕ್ಷೆ

ಇದರ ನಡುವೆ, ಭಾರತದಲ್ಲಿ ಮಾರಾಟವಾಗುವ ಮಸಾಲೆಗಳ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ (FSSAI) ಮುಂದಾಗಿದೆ. ಸಿಂಗಾಪುರ ಮತ್ತು ಹಾಂಕಾಂಗ್‌ಗಳು ಎತ್ತಿರುವ ಕಾಳಜಿಯ ಹಿನ್ನೆಲೆಯಲ್ಲಿ, ದೇಶದಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಪುಡಿ ರೂಪದ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.

“ಪ್ರಸ್ತುತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, FSSAI ಎಮ್‌ಡಿಹೆಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಮಸಾಲೆಗಳ ಮಾದರಿಗಳನ್ನು ಮಾರುಕಟ್ಟೆಯಿಂದ ತೆಗೆದುಕೊಳ್ಳುತ್ತಿದೆ. ಅವುಗಳು ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುತ್ತಿದೆ” ಎಂದು ಸರ್ಕಾರಿ ಮೂಲ ತಿಳಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ರಫ್ತು ಮಾಡುವ ಮಸಾಲೆಗಳ ಗುಣಮಟ್ಟವನ್ನು ನಿಯಂತ್ರಿಸುವುದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ FSSAI, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ಮಾರುಕಟ್ಟೆಯಿಂದ ನಿಯಮಿತವಾಗಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Continue Reading
Advertisement
arvind kejriwal in tihar jail
ದೇಶ8 mins ago

Arvind Kejriwal: ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

jaishankar
Lok Sabha Election 20249 mins ago

S Jaishankar: ವಿದೇಶಾಂಗ ನೀತಿಯಲ್ಲೂ ಕಾಂಗ್ರೆಸ್‌ನಿಂದ ಮುಸ್ಲಿಂ ವೋಟ್‌ಬ್ಯಾಂಕ್‌ ರಾಜಕಾರಣ: ಸಚಿವ ಜೈಶಂಕರ್‌ ಆರೋಪ

Road Accident
ಉಡುಪಿ42 mins ago

Road Accident : ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು

supreme court baba ramdev IMA
ಪ್ರಮುಖ ಸುದ್ದಿ43 mins ago

Patanjali Case: ಮೊದಲು ನಿಮ್ಮನ್ನು ಸರಿಪಡಿಸಿಕೊಳ್ಳಿ: ಪತಂಜಲಿ ಪ್ರಕರಣದಲ್ಲಿ ವೈದ್ಯಕೀಯ ಸಂಘಕ್ಕೂ ಸುಪ್ರೀಂ ಚಾಟಿ

Lok Sabha Election 2024 Are you planning to visit Mysore Palace on April 26 No entry if no vote
Lok Sabha Election 202448 mins ago

Lok Sabha Election 2024: ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

Murder case in hublli
ಹುಬ್ಬಳ್ಳಿ1 hour ago

Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ

Rafael Nadal
ಕ್ರೀಡೆ1 hour ago

Rafael Nadal: ಲೇವರ್‌ ಕಪ್‌ ಬಳಿಕ 22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್​ ನಡಾಲ್‌ ನಿವೃತ್ತಿ!

Modi in Karnataka PM Narendra Modi to visit from April 28 and 29
Lok Sabha Election 20242 hours ago

Modi in Karnataka: ಏಪ್ರಿಲ್‌ 28 – 29ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ; ಯಾವ ಯಾವ ಕ್ಷೇತ್ರದಲ್ಲಿ ಮತ ಬೇಟೆ?

Murder Case In Bengaluru
ಬೆಂಗಳೂರು2 hours ago

Murder Case : ಒಂಟಿ ಮಹಿಳೆ ಕೊಲೆ ಕೇಸ್‌; ಅತಿಯಾದ ಸೆಕ್ಸ್‌ಗೆ ಒತ್ತಾಯಿಸಿದವಳನ್ನು ಬೆಡ್‌ ರೂಂನಲ್ಲೇ ಕೊಂದ ಯುವಕ

MDH everest spices row
ದೇಶ2 hours ago

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು21 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ23 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌