Govt. Employees strike : 17% ವೇತನ ಹೆಚ್ಚಿಸಿದ ಸಿಎಂ ಬೊಮ್ಮಾಯಿಗೆ ನೌಕರರ ಸಂಘದಿಂದ ಅಭಿನಂದನೆ - Vistara News

ಕರ್ನಾಟಕ

Govt. Employees strike : 17% ವೇತನ ಹೆಚ್ಚಿಸಿದ ಸಿಎಂ ಬೊಮ್ಮಾಯಿಗೆ ನೌಕರರ ಸಂಘದಿಂದ ಅಭಿನಂದನೆ

ರಾಜ್ಯ ಸರ್ಕಾರಿ ನೌಕರರಿಗೆ ಶೇ. 17ರಷ್ಟು ವೇತನ ಹೆಚ್ಚಳ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸರ್ಕಾರಿ ನೌಕರರ ಸಂಘ ಅಭಿನಂದಿಸಿದೆ.

VISTARANEWS.COM


on

Govt. Employees protest
ಸರ್ಕಾರಿ ನೌಕರರ ಸಂಘಟನೆ ವತಿಯಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶೇ. 17ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ನೌಕರರ ಸಂಘದ ವತಿಯಿಂದ ಗುರುವಾರ ಅಭಿನಂದಿಸಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಬೈರಪ್ಪ ಅವರ ನೇತೃತ್ವದಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಸಿಎಂ ಅವರ ಆರ್‌.ಟಿ. ನಗರದ ನಿವಾಸಕ್ಕೆ ತೆರಳಿದ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.

ಸರ್ಕಾರಿ ನೌಕರರ ಸಂಘಟನೆ ವತಿಯಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು, ಈಗಲೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಮಾರ್ಚ್‌ 1ರಂದು ರಾಜ್ಯ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿದ್ದರು. ಈ ನಡುವೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಮುಂದಿನ ಏಪ್ರಿಲ್‌ 1ರಿಂದ ಜಾರಿಗೆ ಬರುವಂತೆ ಶೇ. 17ರಷ್ಟು ವೇತನ ಹೆಚ್ಚಳ ಘೋಷಿಸಿದರು. ಜತೆಗೆ ಹಳೆ ಪಿಂಚಣಿ ಪದ್ಧತಿ ಜಾರಿಗೆ ಸಂಬಂಧಿಸಿ ಅಧ್ಯಯನ ನಡೆಸಲು ಸಮಿತಿಯನ್ನು ರಚನೆಯನ್ನು ಪ್ರಕಟಿಸಿದರು. ಈ ಭರವಸೆಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟಿದ್ದರು.

ಸರ್ಕಾರಿ ನೌಕರರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಅಭಿನಂದನೆ ಸಲ್ಲಿಸಿದೆ. ಅದರ ಭಾಗವಾಗಿ ಮುಖ್ಯಮಂತ್ರಿಗಳನ್ನು ಸನ್ಮಾನದ ಮೂಲಕ ಗೌರವಿಸಿದೆ.

ಇದನ್ನೂ ಓದಿ : Govt Employees Strike : ಸರ್ಕಾರದಿಂದ ವೇತನ ಹೆಚ್ಚಳದ ಆದೇಶ; ಮುಷ್ಕರ ಹಿಂದಕ್ಕೆ ಪಡೆದ ಸರ್ಕಾರಿ ನೌಕರರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತುಮಕೂರು

Lok Sabha Election 2024: ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತಯಾಚನೆ

Lok Sabha Election 2024: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಮಂಗಳವಾರ ಶಿರಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು, ಮತ ಯಾಚನೆ ನಡೆಸಿದರು.

VISTARANEWS.COM


on

Chitradurga Lok Sabha Constituency BJP candidate Govinda M karajola election campaign in shira
Koo

ಶಿರಾ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ ಮಂಗಳವಾರ ಶಿರಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಚುನಾವಣಾ ಪ್ರಚಾರ ಕೈಗೊಂಡು, ಮತಯಾಚನೆ (Lok Sabha Election 2024) ನಡೆಸಿದರು.

ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಶ್ರೀ ಬಂಡಿ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ಮಾತನಾಡಿದ ಗೋವಿಂದ ಎಂ.ಕಾರಜೋಳ, ಸ್ವಾತಂತ್ರ್ಯ ನಂತರ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಿಫಲವಾಗಿದ್ದು, ಪ್ರಧಾನಿ ಮೋದಿ ಅವರು ಕೇವಲ 10 ವರ್ಷದ ಆಡಳಿತದಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನರು ಮತ್ತೊಮ್ಮೆ ತಮ್ಮನ್ನು ಆಯ್ಕೆ ಮಾಡುವಂತೆ ಮತದಾರರದಲ್ಲಿ ಅವರು ಮನವಿ ಮಾಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಸತ್ಯಪ್ರಕಾಶ್‌ ಮಾತನಾಡಿ, ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ, ಸುಳ್ಳಿನ ಹೇಳಿಕೆಗೆ ಬೆಲೆ ಕೊಡದೆ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶಿರಾ ವಿಧಾನಸಭಾ ಕ್ಷೇತ್ರದ ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ, ಕಸಬಾ ಹೋಬಳಿಯ ಮದಲೂರಿನಲ್ಲಿ, ಕಳ್ಳಂಬೆಳ್ಳ ಹೋಬಳಿಯ ಹನುಮಂತಪುರ, ಗೌಡಗೆರೆ ಹೋಬಳಿಯ ತಾವರೆಕೆರೆ ಹಾಗೂ ಶಿರಾ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಎಂ. ಕಾರಜೋಳ, ಚುನಾವಣಾ ಪ್ರಚಾರ ಕೈಗೊಂಡು ಮತಯಾಚಿಸಿದರು.

ಇದನ್ನೂ ಓದಿ: IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಅರ್. ಉಗ್ರೇಶ್, ಮುಖಂಡರಾದ ಎಸ್.ಆರ್. ಗೌಡ್, ಬಿ.ಕೆ. ಮಂಜುನಾಥ್ ಹಾಗೂ ಬಿಜೆಪಿ- ಜೆಡಿಎಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ಪರಿಸರ

Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಕಳೆದೆರಡು ವಾರದಲ್ಲಿ ಅಡಿಕೆಯ (Areca Price) ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.

VISTARANEWS.COM


on

Areca Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಒಂದು ನಿರ್ದಿಷ್ಟ ಪಕ್ಷ (Areca Price) ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ, ಷೇರು ಮಾರುಕಟ್ಟೆ ಏರುತ್ತದೆ. ಇನ್ನೊಂದು ನಿರ್ದಿಷ್ಟ ಪಕ್ಷ ಎಲೆಕ್ಷನ್‌ನಲ್ಲಿ ಗೆಲ್ಲುತ್ತದೆ ಅಂತ ಸರ್ವೆ ಏಜೆನ್ಸಿಗಳು ಹೇಳುವಾಗ ಷೇರು ಮಾರುಕಟ್ಟೆ ಕುಸಿಯುತ್ತದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಷೇರು ಮಾರುಕಟ್ಟೆಯ ಏರಿಳತವೂ ತಲ್ಲಣವನ್ನೇ ಸೃಷ್ಟಿ ಮಾಡುತ್ತದೆ. ಆದರೆ, ಈ ಬಾರಿ ಮುಂಬಯಿ ಸ್ಟಾಕ್ ಎಕ್ಸ್ಚೇಂಜ್ ಏರಿಳಿತವನ್ನು ಮೀರಿಸುವಂತೆ ಅಡಿಕೆ ದರ ಗೂಳಿಯ ಕುಣಿತವಾಗಿದೆ! ಕಳೆದೆರಡು ವಾರದಲ್ಲಿ ಅಡಿಕೆಯ ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ, ಮೂರು ತಿಂಗಳ ಹಿಂದೆ 53,000 ಇದ್ದ ಬೆಟ್ಟ ಅಡಿಕೆ ಧಾರಣೆ ಕಳೆದ ವಾರ 55,000 ರೂ. ದಾಟಿ, ಇವತ್ತು 56,333 ರೂ.ಗೆ ತಲುಪಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ.

Areca nuts image

ಶಿವಮೊಗ್ಗ APMC ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ರಾಶಿ ಇಡಿ ಅಡಿಕೆ ಆವಕ ಬಾರೀ ಏರಿಕೆ ಕಂಡಿದೆ:
ದಿನಾಂಕ 17.04.2024: 3,907 ಕ್ವಿಂಟಾಲ್
ದಿನಾಂಕ 19.04.2024: 4,378 ಕ್ವಿಂಟಾಲ್
ದಿನಾಂಕ 22.04.2024: 4543 ಕ್ವಿಂಟಾಲ್
ದಿನಾಂಕ 23.04.2024: 17,474 ಕ್ವಿಂಟಾಲ್
ರಾಶಿ ಇಡಿ ಧಾರಣೆ 53,800 ರೂ., ಬೆಟ್ಟೆ 56,300 ರೂ. ದಾಟಿದಾಗ ಸಹಜವಾಗಿಯೇ ಗೊರಬಲು 41 ಸಾವಿರದ ಸನಿಹ ತಲುಪಿದೆ. ಈ ಎಲ್ಲ ವೆರೈಟಿಗಳ ಧಾರಣೆಯ ಏರಿಕೆಯ ಹಿನ್ನೆಲೆಯಲ್ಲಿ ಸಿಪ್ಪೆ ಗೋಟು ದರವೂ ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ 20,000 ರೂ. ದಾಟುವ ನಿರೀಕ್ಷೆ ರೈತರದು. APMC ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ವ್ಯವಹಾರವೂ ಬಹಳ ಕಮ್ಮಿ. APMC ಒಳಗೆ ವ್ಯಾಪ್ತಿಗೆ ಬರದೆಯೇ ಸಿಪ್ಪೆ ಗೋಟು ವ್ಯವಹಾರ ನೆಡೆಯುತ್ತದೆ. ಅದನ್ನು APMC ವ್ಯಾಪ್ತಿಯ ಒಳಗೆ ಸಂಪೂರ್ಣ ತರಲು ಪ್ರಯತ್ನ ನೆಡೆಯುತ್ತಿಲ್ಲ.

Areca nut

ಚುನಾವಣೆ ಬಳಿಕ ಏನಾಗಲಿದೆ?

ಎಲ್ಲಾ ವೆರೈಟಿ ಅಡಿಕೆಗಳ (ಹಸ, ಬೆಟ್ಟೆ, ಇಡಿ, ಗೊರಬಲು, ಸಿಪ್ಪೆ ಗೋಟು) ದೊಡ್ಡ ಮಟ್ಟದ ಓಪನ್ ನಗದು ವ್ಯವಹಾರಕ್ಕೆ ಒಂದಿಷ್ಟು ಚುನಾವಣೆ ನೀತಿ ಸಂಹಿತೆ ನಿರ್ಬಂಧ ಇರುವುದರಿಂದ, ಎಲೆಕ್ಷನ್ ಮುಗಿದ ಮೇಲೆ ಅಡಿಕೆ ನಗದು ವ್ಯವಹಾರ ಇನ್ನಷ್ಟು ತೀವ್ರತೆ ಪಡೆದ ಮೇಲೆ ಧಾರಣೆ ಏರಿಕೆಯ ಸಾಧ್ಯತೆಯೂ ಇದೆ ಎಂದು ಅಭಿಪ್ರಾಯ ಇದೆ.
ಏನೇ ಆದರೂ, ಅಡಿಕೆ ಮಾರುಕಟ್ಟೆಯ ಧಾರಣೆ ಸಂಪೂರ್ಣ ಲೆಕ್ಕಾಚಾರಕ್ಕೆ ಸಿಗುವಂಥದ್ದಲ್ಲ! ಅದೂ ಷೇರು ಮಾರುಕಟ್ಟೆಯ ರೀತಿ, ಯಾವಾಗ ಗೂಳಿ ಮುನ್ನುಗ್ಗುತ್ತದೆ, ಕರಡಿ ಕುಣಿಯುತ್ತದೆ ಗೊತ್ತಾಗುವುದಿಲ್ಲ.
ಅಡಿಕೆ ಧಾರಣೆಯ ಗೂಳಿ ನುಗ್ಗುವ ಸಮಯದಲ್ಲೇ ಕಾಳು ಮೆಣಸಿನ ಧಾರಣೆಯೂ ಏರು ಮುಖ ಕಾಣುತ್ತಿದೆ. ಕಾಳು ಮೆಣಸಿನ ದರ ಈಗ 57,000 ರೂ. ತಲುಪಿದೆ. ಒಟ್ಟಿನಲ್ಲಿ ಅಡಿಕೆ, ಕಾಳು ಮೆಣಸು ಧಾರಣೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ನಾಲ್ಕು ಜನ ಸೇರಿದಲ್ಲಿ, ರಾಜಕೀಯ ವಿಚಾರದೊಂದಿಗೆ ಅಡಿಕೆ ಧಾರಣೆಯ ಚರ್ಚೆಯೂ ಜೋರಾಗಿ ಸೌಂಡ್ ಮಾಡ್ತಾ ಇದೆ!

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳಿಗೆ, ಇಳುವರಿ ಕ್ಷೀಣಿಸುವುದಕ್ಕೆ ಕಾರಣವೇ ಇದು! ಬೆಳೆಗಾರರೇ ಗಮನಿಸಿ…

Continue Reading

ಶ್ರದ್ಧಾಂಜಲಿ

Arjun Deva: ಹಿರಿಯ ಪತ್ರಕರ್ತ ಅರ್ಜುನ್ ದೇವ ನಿಧನ; ಗಣ್ಯರ ಕಂಬನಿ

Arjun Deva: ಅರ್ಜುನ್​ ದೇವ ಅವರು ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ. ಪತ್ರಿಕೋದ್ಯಮದ ಸೂಕ್ಷ್ಮತೆಯನ್ನು ಅರಿತಿದ್ದ ಇವರು, ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ಇದಲ್ಲದೆ, ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಹುಟ್ಟೂರು ಕೋಲಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

VISTARANEWS.COM


on

Veteran journalist Arjun Deva passes away
Koo

ಬೆಂಗಳೂರು: ಹಿರಿಯ ಪತ್ರಕರ್ತ ಅರ್ಜುನ್ ದೇವ (Arjun Deva) ಅವರು ಬುಧವಾರ (ಏಪ್ರಿಲ್​ 24) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ (ಹಿಂದಿನ ಪತ್ರಕರ್ತರ ಅಕಾಡೆಮಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಅರ್ಜುನ್​ ದೇವ ಅವರಿಗೆ 92 ವರ್ಷವಾಗಿತ್ತು. ಅನಾರೋಗ್ಯ ಹಿನ್ನೆಲಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ಅರ್ಜುನ್​ ದೇವ ಅವರು ತಾಯಿನಾಡು ಪತ್ರಿಕೆ, ಸಂಯುಕ್ತ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಣೆ ಮಾಡಿದ್ದಾರೆ. ಪತ್ರಿಕೋದ್ಯಮದ ಸೂಕ್ಷ್ಮತೆಯನ್ನು ಅರಿತಿದ್ದ ಇವರು, ಸರಳ ವ್ಯಕ್ತಿತ್ವವನ್ನು ಹೊಂದಿದ್ದರು. ಇದಲ್ಲದೆ, ಸೂರ್ಯೋದಯ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು.

ಅರ್ಜುನ್​ ದೇವ ಅವರು ಕೋಲಾರ ಜಿಲ್ಲೆಯ ಚೌಡದೇವನಹಳ್ಳಿಯಲ್ಲಿಯವರಾಗಿದ್ದಾರೆ. ಬುಧವಾರ ಸಂಜೆ ಚೌಡದೇವನಹಳ್ಳಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

ಹಿರಿಯ ಪತ್ರಕರ್ತರಾದ ಅರ್ಜುನ್ ದೇವ್‌ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಸಲ್ಲಿಸಿದ್ದ ಸೇವೆ ಅನನ್ಯವಾದದ್ದು. ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದ ಅರ್ಜುನ್ ದೇವ ಅವರ ನಿಧನದಿಂದ ಸುದ್ದಿಮನೆಗೆ ತುಂಬಲಾರದ ನಷ್ಟವಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್‌ಡಿಕೆ ಸಂತಾಪ

ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ನಾಡಿನ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಅರ್ಜುನ ದೇವ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ಹಲವು ತಲೆಮಾರುಗಳ ಮಾಧ್ಯಮ ಬೆಳವಣಿಗೆಯ ಕೊಂಡಿಯಾಗಿದ್ದ ಅವರು ನಿಷ್ಠೆ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದರು. ಅನೇಕ ಗ್ರಾಮೀಣ ಪ್ರತಿಭೆಗಳನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ್ದರು. ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳು, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಬೆಂಗಳೂರು ಗ್ರಾಮಾಂತರಕ್ಕೆ ಡಬಲ್ ಸೆಕ್ಯೂರಿಟಿ; 28 ಲೋಕಸಭಾ ಕ್ಷೇತ್ರದ ಮತದಾರರು ಎಷ್ಟು?

ಕೆಯುಡಬ್ಲ್ಯೂಜೆ ಕಂಬನಿ

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ನಿಧನಕ್ಕೆ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ವ್ತಕ್ತಪಡಿಸಿದೆ. ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಚೇತನ ಅರ್ಜುನ್ ದೇವ್ ಅವರಾಗಿದ್ದರು ಎಂದು ಕೆಯುಡಬ್ಲ್ಯೂಜೆ ಶೋಕ ವ್ಯಕ್ತಪಡಿಸಿದೆ.

ಪತ್ರಕರ್ತರ ಸಂಘಟನೆಯಲ್ಲಿ ಅವರಿಗಿದ್ದ ಬದ್ಧತೆ, ಸಮಾಜಮುಖಿಯಾಗಿಯಾಗಿ ತೊಡಗಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದ ಅರ್ಜುನ್ ದೇವ್ ಅವರ ನಿಧನ ಸುದ್ದಿಮನೆಗೆ ತುಂಬಲಾರದ ನಷ್ಟ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂತಾಪ ಸೂಚಿಸಿದ್ದಾರೆ.

Continue Reading

ಬೆಂಗಳೂರು ಗ್ರಾಮಾಂತರ

Lok Sabha Election 2024: ಬೆಂಗಳೂರು ಗ್ರಾಮಾಂತರಕ್ಕೆ ಡಬಲ್ ಸೆಕ್ಯೂರಿಟಿ; 28 ಲೋಕಸಭಾ ಕ್ಷೇತ್ರದ ಮತದಾರರು ಎಷ್ಟು?

Lok Sabha Election 2024: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮಗಳು ನಡೆಯಬಹುದು. ಈ ಕ್ಷೇತ್ರದಲ್ಲಿ ಪ್ರಭಾವಿ ಎದುರಾಳಿಗಳು ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಭದ್ರತೆ ಹಾಗೂ ಅರೆ ಸೇನಾ ಪಡೆಯನ್ನು ನಿಯೋಜನೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ರಾಜ್ಯ ಚುನಾವಣಾ ಆಯೋಗವು ಈ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಲಾಗಿತ್ತು. ಅದರನ್ವಯ ಈಗ ಕ್ರಮ ವಹಿಸಲಾಗಿದೆ. ಚುನಾವಣಾಧಿಕಾರಿಗಳ ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದು ಮನೋಜ್‌ ಕುಮಾರ್ ಮೀನಾ ಹೇಳಿದ್ದಾರೆ.

VISTARANEWS.COM


on

Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇದೇ ಏಪ್ರಿಲ್‌ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಇನ್ನು ಅತಿ ಸೂಕ್ಷ್ಮ ಲೋಕಸಭಾ ಕ್ಷೇತ್ರವೆಂದು ಪರಿಗಣಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ (Bangalore Rural Lok Sabha constituency) ಡಬಲ್ ಸೆಕ್ಯೂರಿಟಿ ಸಿಸ್ಟಮ್ ಅನ್ನು ಅಳವಡಿಕೆ ಮಾಡಲಾಗಿದೆ. ಇಲ್ಲಿಗೆ ಒಟ್ಟು 7 ಪ್ಯಾರಾ ಮಿಲಿಟರಿ ತುಕಡಿಯನ್ನು (Para military contingent) ನಿಯೋಜನೆ ಮಾಡಲಾಗಿದೆ. ಅಲ್ಲದೆ, 28 ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ, ಮತದಾನ ಪ್ರಕ್ರಿಯೆಯ ನಿಯಮಗಳನ್ನು ಸಹ ಚುನಾವಣಾ ಆಯೋಗವು ಪ್ರಕಟಿಸಿದೆ.

ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಲ್ಲ ಮತಗಟ್ಟೆಯಲ್ಲಿ ಶೇಕಡಾ 100 ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮಗಳು ನಡೆಯಬಹುದು. ಈ ಕ್ಷೇತ್ರದಲ್ಲಿ ಪ್ರಭಾವಿ ಎದುರಾಳಿಗಳು ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಭದ್ರತೆ ಹಾಗೂ ಅರೆ ಸೇನಾ ಪಡೆಯನ್ನು ನಿಯೋಜನೆ ಮಾಡುವಂತೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್.‌ ಮಂಜುನಾಥ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ರಾಜ್ಯ ಚುನಾವಣಾ ಆಯೋಗವು ಈ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನೆ ಮಾಡಿತ್ತು. ಅಲ್ಲಿಂದ ಜಿಲ್ಲಾಧಿಕಾರಿಗೆ ಸೂಚನೆಯನ್ನು ನೀಡಲಾಗಿತ್ತು. ಅದರನ್ವಯ ಈಗ ಕ್ರಮ ವಹಿಸಲಾಗಿದೆ. ಚುನಾವಣಾಧಿಕಾರಿಗಳ ಕೋರಿಕೆಯಂತೆ ಹೆಚ್ಚು ಭದ್ರತೆ ಮಾಡಲಾಗಿದೆ ಎಂದು ಮನೋಜ್‌ ಕುಮಾರ್ ಮೀನಾ ಹೇಳಿದರು.

ಸಿಎಂ, ಡಿಸಿಎಂ ಪ್ರತಿಭಟನೆ ವಿರುದ್ಧ ದೂರು ಬಂದಿದೆ

ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಇದುವರೆಗೆ 23 ಕೇಸ್ ದಾಖಲಾಗಿದೆ. ಬಿಜೆಪಿ 12, ಕಾಂಗ್ರೆಸ್ 9, ಹಾಗೂ ಜೆಡಿಎಸ್ ಮೇಲೆ 2 ಪ್ರಕರಣಗಳು ದಾಖಲಾಗಿವೆ. ಇನ್ನಿತರ ನಾಯಕರ ಮೇಲೆ 5 ಕೇಸ್‌ಗಳು ದಾಖಲಾಗಿವೆ. ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವಿಚಾರವಾಗಿ ದೂರು ಸಲ್ಲಿಕೆಯಾಗಿದೆ. ಈ ಕುರಿತು ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಮೇಲ್ನೋಟಕ್ಕೆ ಸಾಬೀತಾದರೆ ಮುಂದಿನ ಕ್ರಮವನ್ನು ಜರುಗಿಸಲಾಗುವುದು ಎಂದು ಮನೋಜ್‌ ಕುಮಾರ್ ಮೀನಾ ಹೇಳಿದರು.

28 ಲೋಕಸಭಾ ಕ್ಷೇತ್ರಗಳ ಮತದಾರರ ವಿವರ; ಬೇಕಿರುವ ದಾಖಲೆ, ನಿಯಮ ಏನು? ಈ ಪಿಡಿಎಫ್‌ ಡೌನ್ಲೋಡ್‌ ಆಯ್ಕೆ ಮೇಲೆ ಕ್ಲಿಕ್ ಮಾಡಿ

ಆಂಬ್ಯಲೆನ್ಸ್‌ ನಿಯೋಜನೆ

ಈಗ ಬೇಸಿಗೆ ಕಾಲವಾಗಿದ್ದರಿಂದ ಬಿಸಿಲಿನ ಪ್ರಮಾನ ಹೆಚ್ಚಿದೆ. ಹೀಗಾಗಿ ಮತದಾನದ ವೇಳೆ ಬಿಸಿಲಿನ ಕಾರಣಕ್ಕಾಗಿ ಏನಾದರೂ ಸಮಸ್ಯೆಯಾಗಬಹುದು ಎಂಬ ಕಾರಣಕ್ಕಾಗಿ ಆಂಬ್ಯುಲೆನ್ಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲ ರೀತಿಯಲ್ಲಿಯೂ ಸಜ್ಜಾಗಲಾಗಿದೆ. ಜತೆಗೆ ತುರ್ತು ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮನೋಜ್‌ ಕುಮಾರ್ ಮೀನಾ ಹೇಳಿದರು.

ಇದನ್ನೂ ಓದಿ: Modi in Karnataka: ಏಪ್ರಿಲ್‌ 28 – 29ಕ್ಕೆ ಕರ್ನಾಟಕಕ್ಕೆ ಮೋದಿ; 2ನೇ ಹಂತಕ್ಕೆ ಬಿಜೆಪಿ ಪ್ಲ್ಯಾನ್‌ ರೆಡಿ!

5.47 ಕೋಟಿ ಮತದಾರರು

ಕರ್ನಾಟಕದ 28 ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಮತದಾರರ ಸಂಖ್ಯೆಯನ್ನು ಸಹ ಚುನಾವಣಾ ಆಯೋಗವು ಬಿಡುಗಡೆ ಮಾಡಿದೆ. ಇದರ ಅನುಸಾರ ಒಟ್ಟು 5,47,36,835 ಮತದಾರರು ಈ ಬಾರಿ ಸಂಸತ್‌ ಚುನಾವಣೆಯ ಭವಿಷ್ಯವನ್ನು ಬರೆಯಲಿದ್ದಾರೆ. ಇದಲ್ಲದೆ, ಮತದಾರರು ಯಾವ ದಾಖಲೆಗಳನ್ನು ತರಬೇಕು? ಮತದಾನ ಪ್ರಕ್ರಿಯೆಯಲ್ಲಿನ ನಿಯಮಗಳು ಏನು? ಕೊನೆಯ 48 ಗಂಟೆಯ ಶೂನ್ಯ ಅವಧಿಗೆ ಸಂಬಂಧಪಟ್ಟಂತೆ ಇರುವ ನಿಯಮಗಳೇನು? ಎಂಬಿತ್ಯಾದಿ ಅಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸಿದೆ.

Continue Reading
Advertisement
Railway Ticket
ದೇಶ1 min ago

Railway Ticket: ಎಲ್ಲರಿಗೂ ರೈಲ್ವೆ ಟಿಕೆಟ್‌, ವೇಟಿಂಗ್‌ ಮಾತೇ ಇಲ್ಲ; ಕೇಂದ್ರ ಮಹತ್ವದ ಘೋಷಣೆ!

shubman gill
ಕ್ರಿಕೆಟ್2 mins ago

Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

Chitradurga Lok Sabha Constituency BJP candidate Govinda M karajola election campaign in shira
ತುಮಕೂರು7 mins ago

Lok Sabha Election 2024: ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮತಯಾಚನೆ

Dhanya Ramkumar reels with Kishen Bilagali
ಸ್ಯಾಂಡಲ್ ವುಡ್8 mins ago

Dhanya Ramkumar: ಕಿಶನ್ ಬಿಳಗಲಿ ಜತೆ ಡಾ. ರಾಜ್​ಕುಮಾರ್ ಮೊಮ್ಮಗಳ ಡ್ಯೂಯೆಟ್‌!

Sachin Tendulkar
ಕ್ರಿಕೆಟ್10 mins ago

Sachin Birthday: ಬದುಕಿನಲ್ಲಿ ಸಚಿನ್‌ ಅರ್ಧ ಶತಕ; ಕ್ರಿಕೆಟ್ ದೇವರ ಕುರಿತ 30 ಕುತೂಹಲಕರ ಸಂಗತಿಗಳಿವು

Viral News
ವೈರಲ್ ನ್ಯೂಸ್32 mins ago

Viral News: ತಂಗಿಗೆ ಟಿವಿ ಗಿಫ್ಟ್‌ ಕೊಡಲು ಮುಂದಾದ ಪತಿಯನ್ನು ಕೊಲ್ಲಿಸಿದ ಪತ್ನಿ!

Rajkumar Birth Anniversary ​​Jaggesh said that Rajkumar blessed him when he was admitted due to suicide attempt
ಸ್ಯಾಂಡಲ್ ವುಡ್35 mins ago

Rajkumar Birth Anniversary: ಆತ್ಮಹತ್ಯೆಗೆ ಯತ್ನಿಸಿ ಅಡ್ಮಿಟ್‌ ಆದಾಗ ಅಣ್ಣಾವ್ರು ಆಶೀರ್ವಾದ ಮಾಡಿದ್ದರೆಂದ ಜಗ್ಗೇಶ್‌!

World Chess Championship
ಕ್ರೀಡೆ38 mins ago

World Chess Championship: ಡಿ.ಗುಕೇಶ್‌-ಲಿರೆನ್‌ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪಂದ್ಯಕ್ಕೆ ಮುಹೂರ್ತ ಫಿಕ್ಸ್​

VVPAT Verification
ದೇಶ55 mins ago

VVPAT Verification: ವಿವಿಪ್ಯಾಟ್‌ ಕೇಸ್; ಚುನಾವಣೆಯನ್ನು ನಾವು ನಿಯಂತ್ರಿಸಲಾಗದು ಎಂದ ಸುಪ್ರೀಂಕೋರ್ಟ್; ಮತಯಂತ್ರ ವಿರೋಧಿಗಳಿಗೆ ಹಿನ್ನಡೆ

Sunita Williams
ದೇಶ55 mins ago

Sunita Williams: ಸುನೀತಾ ವಿಲಿಯಮ್ಸ್‌ 3ನೇ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಲು ಸಜ್ಜು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌