ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು! - Vistara News

ವೈರಲ್ ನ್ಯೂಸ್

ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

ಕಳ್ಳ ಮನೆಗೆ ನುಗ್ಗಿ ಜಾಲಾಡಿ ಸಿಕ್ಕಿದ್ದನ್ನೆಲ್ಲಾ ಮೂಟೆ ಕಟ್ಟಿದ. ಆಮೇಲೆ ಅವನಿಗೆ ಗೊತ್ತಾದ್ದು- ಅದು ಅವನ ಅಧ್ಯಾಪಕರ ಮನೆ! ಆಮೇಲೇನು ಮಾಡಿದ ಗೊತ್ತೆ?

VISTARANEWS.COM


on

theft
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅದೊಂದು ನಿವೃತ್ತ ಮುಖ್ಯೋಪಾಧ್ಯಾಯರ ಮನೆ. ಅವರ ಹೆಸರು ಹರಿಶ್ಚಂದ್ರ ರಾಯ್.‌ ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಅವರು ನಿವೃತ್ತರಾಗಿ ೨೫ ವರ್ಷ ಕಳೆದಿದ್ದರೂ, ಸ್ಥಳೀಯರ ಗೌರವಕ್ಕೆ ಪಾತ್ರರಾದವರು. ಬದಲಿಗೆ, ಸುತ್ತಮುತ್ತಲಿನ ಬಡ ಮಕ್ಕಳ ಓದು-ವಿದ್ಯೆಗೆ ನೆರವಾಗುತ್ತಾ ನಿವೃತ್ತ ಜೀವನವನ್ನು ಕಳೆಯುತ್ತಿರುವವರು. ಕೆಲಕಾಲದಿಂದ ಅನಾರೋಗ್ಯಕ್ಕೆ ಈಡಾಗಿರುವ ರಾಯ್‌ ಅವರೊಂದಿಗೆ ಅವರ ಸಹೋದರರ ಕುಟುಂಬವಿದ್ದು ಆರೈಕೆ ಮಾಡುತ್ತಿದೆ. ದಿನಂಪ್ರತಿ ಔಷಧ ಮತ್ತು ಫಿಸಿಯೊಥೆರಪಿಯ ಅಗತ್ಯವಿದೆ ನಿವೃತ್ತ ಅಧ್ಯಾಪಕರಿಗೆ.

ವಿಷಯ ಈವರೆಗಿನದ್ದಲ್ಲ: ಇನ್ನು ಮುಂದೆ ಪ್ರಾರಂಭ. ಅದೊಂದು ರಾತ್ರಿ ಊಟದ ನಂತರ ಹವಾ ಸೇವನೆಗೆಂದು ಮನೆಯ ಬಾಗಿಲು ತೆರೆಯುತ್ತಿದ್ದಂತೆ, ಹರಿತ ಆಯುಧಗಳನ್ನು ಹೊಂದಿದ ಇಬ್ಬರು ಮುಸುಕುಧಾರಿ ಆಗಂತುಕರು ಮನೆಯೊಳಗೆ ದಾಂಗುಡಿಯಿಟ್ಟರು. ಅವರನ್ನು ತಡೆಯಲು ಯತ್ನಿಸಿದ ರಾಯ್‌ ಅವರ ತಮ್ಮನನ್ನು ತಳ್ಳಿ, ಟಾಯ್ಲೆಟ್ಟಿನೊಳಗೆ ಕೂಡಿಟ್ಟರು. ವೃದ್ಧ ಅಧ್ಯಾಪಕರನ್ನು ಬೆದರಿಸಿದ ಚೋರರು, ಇರುವ ಹಣ ಮತ್ತು ಒಡವೆಯನ್ನೆಲ್ಲಾ ನೀಡುವಂತೆ ಒತ್ತಾಯಿಸಿದರು. ಹೆದರಿದ ರಾಯ್‌, ತಮ್ಮಲ್ಲಿದ್ದ ಸುಮಾರು ೧೭ ಸಾವಿರ ರೂ.ಗಳನ್ನು ಕಳ್ಳರಿಗೆ ಒಪ್ಪಿಸಿದರು. ಈ ಹೊತ್ತಿಗೆ ಮನೆಯನ್ನೆಲ್ಲಾ ಜಾಲಾಡಿದ ಖದೀಮರು, ಎದುರಿಗಿದ್ದ ಎರಡು ಮೊಬೈಲ್‌ ಫೋನ್‌ಗಳನ್ನೂ ಕಿಸೆಗಿಳಿಸಿದರು. ಈವರೆಗೆ ನಡೆದಿದ್ದೆಲ್ಲಾ ಮಾಮೂಲಿ ದರೋಡೆಯ ಪ್ರಕರಣವೇ. ನಂತರ ಒಂದು ವಿಲಕ್ಷಣ ಘಟನೆ ನಡೆಯಿತು.

ಬಂದಿದ್ದ ಕಳ್ಳರ ಪೈಕಿ ಒಬ್ಬ ಇದ್ದಕ್ಕಿದ್ದಂತೆ ನಿವೃತ್ತ ಅಧ್ಯಾಪಕರ ಎದುರು ಗೌರವ ತೋರುವಂತೆ ಬಾಗಿದ. ತಾನು ಕದಿಯುತ್ತಿರುವುದು ತನಗೆ ಪಾಠ ಹೇಳಿಕೊಟ್ಟ ಗುರುಗಳ ಮನೆಯಲ್ಲಿ, ದೋಚುತ್ತಿರುವುದು ಅವರನ್ನೇ ಎಂಬುದು ಅರ್ಥವಾದವರಂತೆ, ಸುಮ್ಮನೆ ನಿಂತ. ಈ ಚೋರರು ತನಗಾಗಲೀ, ತನ್ನ ಮನೆಯವರಿಗಾಗಲೀ ಅಪಾಯ ಮಾಡುವುದಿಲ್ಲ ಎಂಬುದನ್ನು ಅರಿತ ರಾಯ್‌ ಅವರು, ಮರುದಿನ ಬೆಳಗಿನ ಹಾಲು-ತರಕಾರಿಗೆ ಮತ್ತು ಫಿಸಿಯೊಥೆರಪಿಗೆ ಸ್ವಲ್ಪ ಹಣ ಕೊಟ್ಟು ಹೋಗಿ ಎಂದು ಕೇಳಿದರು. ತಕ್ಷಣ ೨೦೦ ರೂ.ಗಳನ್ನು ಮತ್ತು ಒಂದು ಮೊಬೈಲ್‌ ಫೋನನ್ನು ಅವರ ಪಾದಮೂಲದಲ್ಲಿಟ್ಟು ಅಲ್ಲಿಂದ ಪರಾರಿಯಾದರು.

ʻಇರುವ ಹಣವನ್ನೆಲ್ಲಾ ಅವರ ಕೈಗಿತ್ತರೂ, ಇಡೀ ಮನೆಯನ್ನು ಕಳ್ಳರು ಕಿತ್ತಾಡಿದರು. ಆದರೆ ಹೋಗುವಾಗ ನನ್ನೆದುರು ಬಾಗಿ ವಂದಿಸಿದರುʼ ಎಂದು ರಾಯ್‌ ಹೇಳಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಗಾಬರಿ ಹುಟ್ಟಿಸಿದ್ದು, ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಿಯೊಬ್ಬ ರಜೆ ಕೇಳಿ ಬಾಸ್‌ಗೆ ಕಳಿಸಿದ ಇ-ಮೇಲ್‌ ವೈರಲ್‌; ಪ್ರಾಮಾಣಿಕತೆ ಮೆಚ್ಚುವಂಥದ್ದು !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Shani Louk Photo: ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ.

VISTARANEWS.COM


on

shani louk photo hamas terrorists
Koo

ನ್ಯೂಯಾರ್ಕ್‌: ಹಮಾಸ್‌ ಉಗ್ರರಿಂದ (Hamas Terrorists) ಹತ್ಯೆಗೀಡಾದ ಯಹೂದಿ ಮಹಿಳೆ ಶಾನಿ ಲೌಕ್‌ (Shani Louk) ಬೆತ್ತಲೆ ದೇಹವನ್ನು ಗಾಜಾದ (Gaza strip) ಬೀದಿಗಳಲ್ಲಿ ಹಮಾಸ್ ಭಯೋತ್ಪಾದಕರು ಮೆರವಣಿಗೆ ಮಾಡುತ್ತಿರುವ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ (Photo Award) ನೀಡಲಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿದೆ.

ಬಹುತೇಕ ಪೂರ್ಣ ಬೆತ್ತಲೆಯಾಗಿರುವ ಇಸ್ರೇಲಿ ಮಹಿಳೆ ಶಾನಿ ಲೌಕ್ ಅವರ ದೇಹವನ್ನು ಜೀಪಿನಲ್ಲಿ ಹಾಕಿ ಮೆರವಣಿಗೆ ಮಾಡುತ್ತಿರುವ ಕರುಳು ಕಿವುಚುವಂಥ ಫೋಟೋವು ಪ್ರಶಸ್ತಿ ಪಡೆದ ಚಿತ್ರಗಳಲ್ಲಿ ಒಂದಾಗಿದೆ. ಇದನ್ನು ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗಾಗಿ ತೆಗೆಯಲಾಗಿತ್ತು. ಯುಎಸ್ ಮೂಲದ ಡೊನಾಲ್ಡ್ ಡಬ್ಲ್ಯೂ. ರೆನಾಲ್ಡ್ಸ್ ಜರ್ನಲಿಸಂ ಇನ್ಸ್ಟಿಟ್ಯೂಟ್ ಈ ಸ್ಪರ್ಧೆಯನ್ನು ನಡೆಸುತ್ತಿದ್ದು, ಪ್ರಶಸ್ತಿಯನ್ನು ನೀಡುತ್ತದೆ.

ʼಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್ʼ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದಿದೆ. ಆದರೆ ಈ ಪ್ರಶಸ್ತಿ ಘೋಷಣೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಜನ ಲೌಕ್ ಅವರ ಫೋಟೋವನ್ನು “ಯಹೂದಿ ಮಹಿಳೆಯ ಬದುಕಿನ ಘನತೆಗೆ ಮಾಡಿದ ಅವಮಾನ” ಎಂದು ದೂಷಿಸಿದ್ದಾರೆ.

ಶಾನಿ ಲೌಕ್‌ 22 ವರ್ಷ ವಯಸ್ಸಿನ ಜರ್ಮನ್-ಇಸ್ರೇಲಿ ಮಹಿಳೆಯಾಗಿದ್ದು, ಹಮಾಸ್‌ ನಡೆಸಿದ ಕಳೆದ ವರ್ಷದ ಅಕ್ಟೋಬರ್ 7ರ ದಾಳಿಯ ಸಂದರ್ಭದಲ್ಲಿ ಉಗ್ರರ ಕೈಗೆ ಸಿಕ್ಕಿಬಿದ್ದಿದ್ದರು. ಅವರನ್ನು ಅಪಹರಿಸಿ ಗಾಜಾ ಪಟ್ಟಿಗೆ ಕರೆದೊಯ್ಯಲಾಗಿತ್ತು. ಪ್ಯಾಲೇಸ್ಟಿನಿಯನ್ ಉಗ್ರರು ಈಕೆಯನ್ನು ಗಾಯಗೊಳಿಸಿ, ತೆರೆದ ಜೀಪಿನಲ್ಲಿ ಬೋರಲು ಮಲಗಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. ಈಕೆಯ ಮೈಯ ಮೇಲಿದ್ದ ಉಡುಪು ಬಹುತೇಕ ಹರಿದು ಆಕೆ ವಿವಸ್ತ್ರಳಾಗಿದ್ದು, ಆಕೆಯ ಮೇಲೆ ಹಮಾಸ್‌ ಉಗ್ರನೊಬ್ಬ ಕುಳಿತಿದ್ದುದು ಕಂಡುಬಂದಿತ್ತು. ಈ ಫೋಟೋಗೆ ಪ್ರಶಸ್ತಿ ದೊರೆತಿದೆ.

“ಈ ಫೋಟೋವನ್ನು ತೆಗೆದ ವ್ಯಕ್ತಿಯು ನಾಗರಿಕರನ್ನು ಹತ್ಯೆ ಮಾಡುವ, ಚಿತ್ರಹಿಂಸೆ ನೀಡುವ ಮತ್ತು ಅತ್ಯಾಚಾರ ಮಾಡುವ ಜಿಹಾದಿ ಗ್ಯಾಂಗ್‌ನ ಭಾಗವಾಗಿದ್ದಾನೆ. ಅವಳನ್ನು ಹೀಗೆ ನೆನಪಿಸಿಕೊಳ್ಳುವುದು ಆಕೆಯ ಮನೆಯವರಿಗೆ ಖಂಡಿತಕ್ಕೂ ಇಷ್ಟವಿಲ್ಲ. ಈ ಪ್ರಶಸ್ತಿಯು ಅವಳ ಘನತೆಗೆ ನಿರಂತರ ಅಪಚಾರ ಎಸಗುತ್ತದೆ” ಎಂದು ಒಬ್ಬರು ಆಕ್ರೋಶಿಸಿದ್ದಾರೆ.

“ಶಾನಿ ಲೌಕ್ ಅವರ ದೇಹವನ್ನು ಭಯೋತ್ಪಾದಕರು ಪರೇಡ್ ಮಾಡುತ್ತಿರುವ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಛಾಯಾಗ್ರಹಣ ಪ್ರಶಸ್ತಿಯನ್ನು ಗೆದ್ದಿದ್ದಾನೆ. ಈ ಛಾಯಾಗ್ರಾಹಕರು ಹಮಾಸ್ ಭಯೋತ್ಪಾದಕರೊಂದಿಗೆ 10/7ರಂದು ಇಸ್ರೇಲ್‌ಗೆ ಬಂದರು ಮತ್ತು ದಾಳಿಯ ಬಗ್ಗೆ ತಿಳಿದಿದ್ದರು” ಎಂದು ಇನ್ನೊಬ್ಬ ಬಳಕೆದಾರರು ಎಕ್ಸ್‌ನಲ್ಲಿ ಸಿಟ್ಟಿನಿಂದ ಟ್ವೀಟ್‌ ಮಾಡಿದ್ದಾರೆ.

ಈ ಫೋಟೋವನ್ನು ಆಲಿ ಮಹಮದ್‌ ಎಂಬ ಫೋಟೋಗ್ರಾಫರ್‌ ಕ್ಲಿಕ್ಕಿಸಿದ್ದಾನೆ. ಈತ ಎಪಿ ಸಂಸ್ಥೆಗೆ ಫೋಟೋ ಒದಗಿಸುವ ಏಜೆನ್ಸಿಗಳಲ್ಲಿ ಒಂದರಲ್ಲಿ ಕೆಲಸ ಮಾಡುತ್ತಾನೆ. “ಈ ಫೋಟೋಗ್ರಾಫರ್‌ ಹಮಾಸ್‌ ಉಗ್ರರ ಜೊತೆಗಿದ್ದ” ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಮಂದಿ ಆರೋಪಿಸಿದ್ದಾರೆ. ಆದರೆ ಈ ದಾಳಿಯ ಮಾಹಿತಿ ಮೊದಲೇ ಇತ್ತು ಎಂಬುದನ್ನು ಎಪಿ ಸಂಸ್ಥೆ ನಿರಾಕರಿಸಿದೆ.

ಇದನ್ನೂ ಓದಿ: ʼಅವನೇಕೆ ನನ್ನನ್ನು ರೇಪ್‌ ಮಾಡಲಿಲ್ಲ ಎಂದರೆ…ʼ ಹಾರರ್‌ ಸ್ಟೋರಿ ಬಿಚ್ಚಿಟ್ಟ ಹಮಾಸ್‌ ಒತ್ತೆಯಾಳು

Continue Reading

ವೈರಲ್ ನ್ಯೂಸ್

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karimani Malika Ninalla: ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಹಲವು ಪ್ರತಿಭೆಗಳು ಲಿಪ್‌ ಸಿಂಕ್‌ ಮಾಡಿವೆ.  ಇದೀಗ ವಯೋಲಿನ್‌ ವಾದಕ ಹೇಗೆ ನುಡಿಸಿದ್ದಾರೆ ಎಂದು ನೀವೇ ನೋಡಿ!

VISTARANEWS.COM


on

Karimani Malika Ninalla play by violinist Aneesh Vidyashankar
Koo

ಬೆಂಗಳೂರು: ʻಬೆಳ್ಳುಳ್ಳಿ ಕಬಾಬ್‌ʼ ಖ್ಯಾತಿಯ ಚಂದ್ರು ಹಾಗೂ ʻರಾವುಲ್ಲʼ ಜತೆಗೂಡಿ ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ ಶೇರ್‌ ಮಾಡಿದ ಬಳಿಕ ಇನ್ನಷ್ಟು ಪ್ರತಿಭೆಗಳು ಈ ರೀಲ್ಸ್‌ಗೆ ಲಿಪ್‌ ಸಿಂಕ್‌ ಮಾಡಿವೆ.  ಇದುವರೆಗೆ ಈ ರೀಲ್ಸ್‌ಗೆ ಕ್ರೇಜ್‌ ಕಡಿಮೆಯಾಗಿಲ್ಲ. ವಿಕ್ಕಿಪೀಡಿಯಾ ಖ್ಯಾತಿಯ (Vicky Pedia) ವಿಕಾಸ್‌ (vickypedia) ʻಕರಿಮಣಿ ಮಾಲೀಕ ನೀನಲ್ಲʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದರು. ಇದೀಗ ನಡೆದಾಡುವ ವಯೋಲಿನ್‌ ವಾದಕ ಎಂದೇ ಖ್ಯಾತರಾಗಿರುವ ʻಅನೀಶ್‌ ವಿದ್ಯಾಶಂಕರ್‌ʼ (violinist Aneesh Vidyashankar) ಈ ಹಾಡನ್ನು ನುಡಿಸಿದ್ದಾರೆ. ವಿಕ್ಕಿಪೀಡಿಯಾ, ಚಂದ್ರು, ಹಾಗೂ ರಾವುಲ್ಲಾ ಶಾಸ್ತ್ರೀಯ ಸಂಗೀತ ತರಗತಿಗೆ ಹೋದರೆ ಎಷ್ಟು ಸೊಗಸಾಗಿರಬಹುದಲ್ಲವೇ ಎಂದು ವಿಡಿಯೊ ಹಂಚಿಕೊಂಡು ಕ್ಯಾಪ್ಷನ್‌ ಕೊಡಲಾಗಿದೆ.

ಅನೀಶ್‌ ವಿದ್ಯಾಶಂಕರ್‌ ಅವರಿಗೆ 33 ವರ್ಷ ಇರಬಹುದು. ಆದರೆ ಅವರು ಸುಮಾರು 25 ವರ್ಷಗಳಿಂದ ವೃತ್ತಿಪರ ಸಂಗೀತಗಾರರಾಗಿದ್ದಾರೆ. 2,000ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅವರು ವಯೋಲಿನ್‌ ನುಡಿಸಿದ್ದಾರೆ. ಇನ್ನು ಅನೀಶ್‌ ವಿದ್ಯಾಶಂಕರ್‌ ಈ ವಿಡಿಯೊ ಪೋಸ್ಟ್‌ ಮಾಡಿದ ಬಳಿಕ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್‌ ಹಾರ್ಟ್‌ ಇಮೋಜಿ ಕಮೆಂಟ್‌ ಮಾಡಿದ್ದಾರೆ.

ಉಪೇಂದ್ರ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ. ಅವರು ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್‌ ಮಾಡಿದ್ದರು. ಇದು ಸಖತ್‌ ವೈರಲ್‌ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್‌ ಹಂಚಿಕೊಂಡಿದೆ. ಅದರ ಜತೆಗೆ ಇನ್ನು ಹೋಟೆಲ್ ಉದ್ಯಮಿ ಹಾಗೂ ಬಾಣಸಿಗ ಚಂದ್ರು ಮಾಡಿದ ತಮ್ಮ ವಿಡಿಯೋಗಳಲ್ಲಿ “ರಾವುಲ್ಲಾ… ರಾವುಲ್ಲಾ” ಎಂದು ಹೇಳಿರುವುದು ವೈರಲ್ ಆಗಿಬಿಟ್ಟಿದೆ. 1999ರ ಅಕ್ಟೋಬರ್ 22ರಂದು ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. ಆಗ ಈ ಸಿನಿಮಾ ಸೂಪರ್‌ ಹಿಟ್ ಆಗಿತ್ತು. ಈ ಚಿತ್ರಕ್ಕೆ ನಟಿ ಪ್ರೇಮಾ, ರವೀನಾ ಟಂಡನ್ ಮತ್ತು ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರೀ ಸದ್ದು ಮಾಡಿದ್ದವು.

ಇದನ್ನೂ ಓದಿ: Karimani Malika Ninalla: ಗೋಕರ್ಣದ ವಿದೇಶಿಯರ ಬಾಯಲ್ಲೂ ʻಕರಿಮಣಿ ಮಾಲಿಕ ರಾವುಲ್ಲಾʼ ಸಾಂಗ್‌!

ಅನೀಶ್‌ ವಿದ್ಯಾಶಂಕರ್‌ ಶೇರ್‌ ಮಾಡಿರುವ ವಿಡಿಯೊ

ಏನಿಲ್ಲ..ಏನಿಲ್ಲ ಪದ ಹುಟ್ಟಿದ್ದು ಹೇಗೆ?

ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿಯಾಗಿತ್ತು. ಮುಂದೆ ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಕೊಟ್ಟಿದ್ದರು.

Continue Reading

ಬೆಂಗಳೂರು

Attempt To Murder : ಹಣದಾಸೆಗೆ ಚಿಕ್ಕಮ್ಮನ ಕೊಲ್ಲಲು ಮುಂದಾದ ಮಗಳು ಮತ್ತು ಅಳಿಯ

Attempt To Murder : ಹಣದಾಸೆಗೆ ಇದ್ದು ವೃದ್ಧೆಯ ಕೊಲೆಗೆ ಭಾರೀ ಸ್ಕೆಚ್ ಹಾಕಿದ್ದ ಖತರ್ನಾಕ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Attempt to murder case
ಆರೋಪಿಗಳ ಬಂಧನ
Koo

ಬೆಂಗಳೂರು: ಹಣ ಅಂದರೆ ಹೆಣನೂ ಬಾಯಿಬಿಡುತ್ತೆ. ಹಣ- ಆಸ್ತಿ, ಚಿನ್ನಾಭರಣದ ವ್ಯಾಮೋಹದ ಮುಂದೆ ಯಾವ ಸಂಬಂಧಕ್ಕೂ ಕಿಂಚಿತ್ತು ಬೆಲೆ ಇಲ್ಲ. ಒಮ್ಮೊಮ್ಮೆ ನಾವೆಲ್ಲರೂ ನಾಗರೀಕ ಸಮಾಜದಲ್ಲಿ ಇದ್ದೀವಾ ಎನ್ನುವ ಅನುಮಾನ ಮೂಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕ್ರೂರಿ ಮಗಳೊಬ್ಬಳು ತನ್ನ ಪತಿ ಜತೆ ಸೇರಿ ಹಣಕ್ಕಾಗಿ ಚಿಕ್ಕಮ್ಮನ ಜೀವವನ್ನೇ ತೆಗೆಯಲು (Attempt To Murder) ಮುಂದಾಗಿದ್ದಾಳೆ.

ಇಂತಹದೊಂದು ಅಮಾನವೀಯ ಘಟನೆ ಬೆಂಗಳೂರಲ್ಲಿ ನಡೆದಿದೆ. ಅಣ್ಣಮ್ಮ ಅವರ ಅಕ್ಕನ ಮಗಳು ಸುಚಿತ್ರ ಹಾಗೂ ಅಳಿಯ ಮುನಿರಾಜು ಎಂಬುವವರಿಂದ ಈ ಕೃತ್ಯ ನಡೆದಿದೆ. ಅಣ್ಣಮ್ಮ ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಮನೆ ಮಾಡಿಕೊಂಡಿದ್ದರು. ಮಕ್ಕಳಿಲ್ಲದಿದ್ದರೂ ಮನೆ ಮಾಡಿಕೊಂಡು ಸೆಟಲ್ ಆಗಿದ್ದರು. ಒಂದಷ್ಟು ಮನೆಗಳನ್ನು ಬಾಡಿಗೆ ಬಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್ ವ್ಯವಹಾರ ತಿಳಿಯದ ಕಾರಣಕ್ಕೆ ಹಣ, ಬಂಗಾರವನ್ನೆಲ್ಲ ಮನೆಯಲ್ಲೇ ಇಡುತ್ತಿದ್ದರು.

ಅಣ್ಣಮ್ಮರ ಅಕ್ಕನ ಮಗಳು ಸುಚಿತ್ರ ಆಗಾಗ ಮನೆಗೆ ಬಂದು ಹೋಗುತ್ತಿದ್ದಳು. ಈ ವೇಳೆ ಚಿಕ್ಕಮ್ಮನ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದಳು. ಹೀಗಾಗಿ ಸುಚಿತ್ರ ತನ್ನ ಎರಡನೇ ಗಂಡ ಮುನಿರಾಜು ಜತೆ ಸೇರಿ ಕೊಲೆಗೆ ಪ್ಲಾನ್ ಮಾಡಿದ್ದಳು.

Attempt to murder case in bengaluru
ಪ್ರಾಣಾಪಾಯದಿಂದ ಪಾರಾದ ಅಣ್ಣಮ್ಮ

ಅಜ್ಜಿಯ ಜೀವ ಉಳಿಸಿದ್ದ ಮೊಮ್ಮಗ

ಈ ಹಿಂದೆಯೇ ಖತರ್ನಾಕ್‌ ದಂಪತಿ ಒಮ್ಮೆ ಮನೆಯಲ್ಲಿ ಅಣ್ಣಮ್ಮನ ಕೊಲೆಗೆ ಯತ್ನಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಅಣ್ಣಮ್ಮ ಮಲಗಿದ್ದಾಗಲೇ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಲು ಮುಂದಾಗಿದ್ದರು. ಇನ್ನೇನು ಕೊಲ್ಲಬೇಕು ಎಂದಾಗ ಸುಚಿತ್ರಾಳ ಮಗ (15) ಅಜ್ಜಿ ಜಿರಳೆ ಬಂತು ಎಂದು ಕೂಗಿ ಎಚ್ಚರಿಸಿದ್ದ. ಹೀಗಾಗಿ ಮೊದಲ ಪ್ಲಾನ್‌ ಫ್ಲಾಪ್‌ ಆಗಿತ್ತು.

ಈ ಘಟನೆ ಬಳಿಕ ಸ್ವಲ್ಪ ಸಮಯ ಸುಮ್ಮನಿದ್ದ ಮುನಿರಾಜು ಹಾಗೂ ಸುಚಿತ್ರಾ, ಕಳೆದ ವಾರ ಮತ್ತೆ ಕೊಲೆಗೆ ಯತ್ನಿಸಿದ್ದರು. ರಾತ್ರಿ ನೆಪವೊಡ್ಡಿ ಗೊರಗುಂಟೆ ಪಾಳ್ಯದ ಸ್ಮಶಾನದ ಬಳಿ ಚಿಕ್ಕಮ್ಮಳನ್ನು ಕರೆಸಿಕೊಂಡಿದ್ದಳು. ಇತ್ತ ದೂರಿದಲ್ಲಿದ್ದ ಮುನಿರಾಜು, ಅಣ್ಣಮ್ಮ ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದ್ದ. ಏಕಾಏಕಿ ದಾಳಿ ಮಾಡಿ ತೀವ್ರವಾಗಿ ಹಲ್ಲೆ ಮಾಡಿದ್ದ. ಅಳಿಯನ ಹಲ್ಲೆಯಿಂದ ಅಣ್ಣಮ್ಮ ಕುಸಿದು ಬಿದ್ದಿದ್ದರು. ಇತ್ತ ಮಗಳು ಸುಮಿತ್ರಾ ಚಿಕ್ಕಮ್ಮನ ಬಳಿ ಇದ್ದ ಚಿನ್ನಾಭರಣ ಹಾಗೂ ಹಣವನ್ನೆಲ್ಲ ಕಿತ್ತುಕೊಂಡು ಪತಿ ಜತೆಗೆ ಪರಾರಿ ಆಗಿದ್ದಳು.

ಚಿಕ್ಕಮ್ಮ ಸತ್ತಿದ್ದಾಳೆಂದು ಎಂದುಕೊಂಡ ಸುಚಿತ್ರಾ ಹಾಗೂ ಮುನಿರಾಜು ನೆಮ್ಮದಿಯಿಂದ ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ ಹಲ್ಲೆಗೊಳಾಗಿ ನರಳಾಡುತ್ತಿದ್ದ ಅಣ್ಣಮ್ಮ ಜೋರಾಗಿ ಕಿರುಚಾಡಿದ್ದಾರೆ. ಇದನ್ನೂ ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಅದೃಷ್ಟವಶಾತ್‌ ಅಣ್ಣಮ್ಮ ಪ್ರಾಣಾಪಾಯದಿಂದ ಪಾರಾಗಿದ್ದರು.

ಇತ್ತ ಚಿಕ್ಕಮ್ಮ ಬದುಕಿರುವ ವಿಚಾರ ತಿಳಿದ ಈ ಖತರ್ನಾಕ್‌ ದಂಪತಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ನಂತರ ಪೊಲೀಸರ ಕಣ್ತಪ್ಪಿಸಿ ಹಾಸನ, ಸಕೇಲಶಪುರದ ಸುತ್ತಮುತ್ತ ಸುತ್ತಾಡುತ್ತಿದ್ದರು. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಮಾತಿನಂತೆ ಖತರ್ನಾಕ್‌ ದಂಪತಿ ಜೈಲುಪಾಲಾಗಿದ್ದಾರೆ. ಆರ್‌ಎಂಸಿ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ, ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ:Heart Attack : ಬಸ್‌ ಏರಿ ಕುಳಿತಾಗಲೇ ಹಠಾತ್ ಹೃದಯಾಘಾತ; ಹಾರಿ ಹೋಯ್ತು ವೃದ್ಧನ ಪ್ರಾಣ ಪಕ್ಷಿ

ಚಿಕ್ಕಬಳ್ಳಾಪುರದಲ್ಲಿ ಅತ್ತೆಯನ್ನು ಎಳೆದೊಯ್ದು ತಿಪ್ಪೆಗೆ ಎಸೆದ ಕ್ರೂರ ಸೊಸೆ; ವೃದ್ಧೆಯ ತಪ್ಪೇನು?

ಚಿಕ್ಕಬಳ್ಳಾಪುರ‌: ಹೆತ್ತ ತಂದೆ-ತಾಯಿಯನ್ನೇ ವಯಸ್ಸಾಗುತ್ತಲೇ ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳಿದ್ದಾರೆ. ಇನ್ನು, ತಾಯಿ ಸಮಾನಳಾದ ಅತ್ತೆ ಮೇಲೆ ಸೊಸೆಯಂದಿರುವ ತೋರುವ ದರ್ಪ, ಹಲ್ಲೆಯ ಸುದ್ದಿಗಳಂತೂ ಆಗಾಗ ಕೇಳಿಸುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (Chikkaballapur District) ಮಹಿಳೆಯೊಬ್ಬರು 80 ವರ್ಷದ ಅತ್ತೆಯನ್ನು (Mother In Law) ಎಳೆದೊಯ್ದು, ತಿಪ್ಪೆಗೆ ಎಸೆಯುವ ಮೂಲಕ ಅಮಾನವೀಯತೆ ತೋರಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಿಪಲ್ಲಿ ಗ್ರಾಮದಲ್ಲಿ ಸೊಸೆಯು ಅತ್ತೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾಳೆ. 80 ವರ್ಷದ ವೆಂಕಟಲಕ್ಷ್ಮಮ್ಮ ಅವರು ಮನೆಯ ಎದುರು ಮಲಗಿದ್ದಾಗ ಲಕ್ಷ್ಮೀದೇವಮ್ಮ ಎಂಬ ಮಹಿಳೆಯು ಅವರನ್ನು ಎಳೆದಿದ್ದಾರೆ. ವೃದ್ಧೆ ಎಂಬುದನ್ನೂ ಲೆಕ್ಕಿಸದ ಸೊಸೆಯು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಸಿಲು ಎಂದು ನೆರಳಿನಲ್ಲಿ ಮಲಗಿದ್ದ ಅತ್ತೆಯ ಮೇಲೆ ಸೊಸೆ ತೋರಿದ ಕ್ರೌರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಳಿಯ ವಯಸ್ಸಿನಲ್ಲಿ ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಬಯಸುವ ಜೀವಕ್ಕೆ ಕಿರುಕುಳ ನೀಡಲು ಅವರು ಮಾಡಿದ ತಪ್ಪೇನು ಎಂಬುದು ತಿಳಿದುಬಂದಿಲ್ಲ. ವೆಂಕಟಲಕ್ಷ್ಮಮ್ಮ ಅವರನ್ನು ಎಳೆದು, ತಿಪ್ಪೆಗೆ ಎಸೆಯುವಾಗ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

Rishabh Pant: ಸ್ಮರಣೀಯ ಪಂದ್ಯದಲ್ಲೂ ತಾಳ್ಮೆ ಕಳೆದುಕೊಂಡ ಪಂತ್​; ವಿಡಿಯೊ ವೈರಲ್​

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್​ಗಳಲ್ಲಿ 34.33ರ ಸರಾಸರಿಯಲ್ಲಿ 2884 ರನ್ ಗಳಿಸಿದ್ದಾರೆ.

VISTARANEWS.COM


on

Pant Loses Cool
Koo

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಪರ 100ನೇ ಐಪಿಎಲ್(IPL 2024) ಪಂದ್ಯವನ್ನಾಡಿದ ನಾಯಕ ರಿಷಭ್ ಪಂತ್(Rishabh Pant)​ ಅವರು ತಾಳ್ಮೆ ಕಳೆದುಕೊಂಡ ಫಟನೆ ಸಂಭವಿಸಿದೆ. ಔಟಾಗಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕುವ ವೇಳೆ ಪಂತ್​ ತಮ್ಮ ಬ್ಯಾಟನ್ನು ಜೋರಾಗಿ ಗೋಡೆಗೆ ಬಡಿದಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.

ರಾಜಸ್ಥಾನ್ ರಾಯಲ್ಸ್​ ನೀಡಿದ ಮೊತ್ತವನ್ನು ಬೆನ್ನಟ್ಟುವ ವೇಳೆ 14ನೇ ಓವರ್‌ನ ಮೊದಲ ಎಸೆತದಲ್ಲಿ ಪಂತ್​ ಅವರು ಯಜುವೇಂದ್ರ ಚಾಹಲ್ ಎಸೆತದಲ್ಲಿ ವಿಕೆಟ್​ ಕೈಚೆಲ್ಲಿದರು. ಇವರ ವಿಕೆಟ್​ ಪತನಗೊಂಡದ್ದು ಪಂದ್ಯದ ಪ್ರಮುಖ ಹಂತದಲ್ಲಿ. ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದ ಬೇಸರ ಮತ್ತು ಸಿಟ್ಟಿನಿಂದ ಪಂತ್​ ಈ ರೀತಿಯ ವರ್ತನೆ ತೋರಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅವರು 26 ಎಸೆತಗಳಿಂದ 28 ರನ್​ ಬಾರಿಸಿದರು.

2022 ರ ಡಿಸೆಂಬರ್​ನಲ್ಲಿ ಅಪಘಾತದಿಂದ ಬದುಕುಳಿದ ನಂತರ 26 ವರ್ಷದ ಪಂತ್​​ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದ ಸಮಯದಲ್ಲಿ ಕ್ರಿಕೆಟ್​ ಮೈದಾನಕ್ಕೆ ಪುನರಾಗಮನ ಮಾಡಿದ್ದರು. ತಮ್ಮ ಪುನರಾಗಮನದ ಪಂದ್ಯದಲ್ಲಿ ಅವರು 18 (13 ಎಸೆತ) ರನ್ ಗಳಿಸಿದ್ದರು. ಜತೆಗೆ ಒಂದು ಸ್ಟಂಪಿಂಗ್ ಮತ್ತು ಅದ್ಭುತ ಕ್ಯಾಚ್ ಪಡೆದಿದ್ದರು.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್​ಗಳಲ್ಲಿ 34.33ರ ಸರಾಸರಿಯಲ್ಲಿ 2884 ರನ್ ಗಳಿಸಿದ್ದಾರೆ. 2018ರಲ್ಲಿ ಅವರು 14 ಇನ್ನಿಂಗ್ಸ್​ಗಳಿಂದ 52.61 ಸರಾಸರಿಯಲ್ಲಿ 684 ರನ್ ಮತ್ತು 173.6 ಸ್ಟ್ರೈಕ್​ರೇಟ್​ನೊಂದಿಗೆ ಆವೃತ್ತಿಯ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ರಾಜಸ್ಥಾನ್​ಗೆ ಗೆಲುವು


ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿತು.

ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

Continue Reading
Advertisement
Lok Sabha Election 2024 Brijesh Chowta declares assets
Lok Sabha Election 20246 mins ago

Lok Sabha Election 2024: ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Drowned in canal
ದಾವಣಗೆರೆ18 mins ago

Bhadra canal : ಭದ್ರಾ ನಾಲೆಗೆ ಬಿದ್ದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

Unmukt Chand
ಕ್ರೀಡೆ32 mins ago

Unmukt Chand: ಭಾರತ ತಂಡ ತೊರೆದು ಯುಎಸ್​ಎ ಸೇರಿದ ಉನ್ಮುಕ್ತ್‌ಗೆ ಟಿ20 ವಿಶ್ವಕಪ್​ನಲ್ಲಿ ಸ್ಥಾನ ಅನುಮಾನ

Bullet Train
ದೇಶ1 hour ago

Bullet Train: ಬುಲೆಟ್‌ ರೈಲು ಓಡೋದು ಯಾವಾಗ? ರೈಲ್ವೆ ಸಚಿವ ಹೇಳೋದಿಷ್ಟು

Lok Sabha Election 2024 BJP JDS coordination committee meeting successful Fight to win with the workers
Lok Sabha Election 20241 hour ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ1 hour ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ1 hour ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ2 hours ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ2 hours ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು2 hours ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌