Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ - Vistara News

ಆರೋಗ್ಯ

Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ

ವಿಸ್ತಾರ ಮೀಡಿಯಾ ಸಂಸ್ಥೆಯ “ವಿಸ್ತಾರ ಹೆಲ್ತ್’ (Vistara Health) ಯುಟ್ಯೂಬ್ ಚಾನೆಲ್ ಅನ್ನು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಬುಧವಾರ ಉದ್ಘಾಟಿಸಿದರು.

VISTARANEWS.COM


on

Vistara Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ʻʻನಮ್ಮ ಪರಿಸರದಲ್ಲೇ ವೈದ್ಯರಿದ್ದಾರೆ, ಸೂರ್ಯನ ಬೆಳಕು, ಹಿತಮಿತ ಆಹಾರ, ವ್ಯಾಯಾಮ, ಆತ್ಮವಿಶ್ವಾಸ, ನಗು. ಈಗ ಈ ಸಾಲಿಗೆ ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಕೂಡ ಸೇರಿಸಬಹುದು,”- ಹೀಗೆಂದರು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.‌ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೊಸ ಯೂ ಟ್ಯೂಬ್‌ ಚಾನೆಲ್ ವಿಸ್ತಾರ ಹೆಲ್ತ್ (Vistara Health)‌ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ತಮ್ಮ ಮಾತಿನದುದ್ದಕ್ಕೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಲೇ ವಿಸ್ತಾರ ಹೆಲ್ತ್ ಚಾನೆಲ್ ಯಾವ ರೀತಿಯಲ್ಲಿದ್ದರೆ ಚೆನ್ನ, ಏನೆಲ್ಲ ಕಾರ್ಯಕ್ರಮಗಳು ಇರಬೇಕು, ಯಾವೆಲ್ಲ ಮಾಹಿತಿಯನ್ನು ನೀಡಬಹುದು ಎಂದು ತಮ್ಮ ಅನುಭವದ ಮೂಲಕ ಕಂಡುಕೊಂಡ ಸಲಹೆಗಳು, ಸೂಚನೆಗಳನ್ನು ನೀಡಿದರು.

“ವಿಸ್ತಾರ ಮೀಡಿಯಾ ಸಂಸ್ಥೆಯು ಹೆಲ್ತ್ ಯುಟ್ಯೂಬ್ ಚಾನೆಲ್ ಆರಂಭಿಸಿರುವುದು ಉತ್ತಮ ನಿರ್ಧಾರವಾಗಿದೆ. ನಾವು-ನೀವು ಸಾರ್ವಜನಿಕವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೇವೆ. ಹಾಗಾಗಿ, ನಮ್ಮ ಸಂಸ್ಥೆಯಿಂದ ಯಾವುದೇ ರೀತಿಯ ಸಹಾಯ ಮತ್ತು ಸಹಕಾರ ನೀಡಲು ಸಿದ್ಧ” ಎಂದು ತಿಳಿಸಿದರು.

ಆರೋಗ್ಯದ ಗುಟ್ಟು ರಟ್ಟು
ನಾವೆಲ್ಲರೂ ನಗು ನಗುತ್ತ ಇರಬೇಕು. ನಗು ಕೂಡ ಔಷಧ. ಉತ್ತಮ ಗೆಳೆತನವೂ ನಮ್ಮನ್ನು ಆರೋಗ್ಯದಿಂದ ಇಡಬಲ್ಲದು. ನಡೆಯುವುದು, ನಗುವುದು, ಉತ್ತಮ ನಿದ್ದೆ, ತರಕಾರಿ, ಹಣ್ಣು, ಸಂತೃಪ್ತಿ ಭಾವಗಳೆಲ್ಲವೂ ನಮ್ಮ ಆರೋಗ್ಯವನ್ನು ಹೆಚ್ಚಿಸುವ ಗುಟ್ಟುಗಳು ಎಂದು ಹೇಳಿದರು.

ಗೋಡೆ ಕಟ್ಟದಿರಲಿ
“ನಾವೆಲ್ಲರೂ ಸೋಷಿಯಲ್ ಮೀಡಿಯಾದ ಯುಗದಲ್ಲಿದ್ದೇವೆ. ಬಹಳಷ್ಟು ಜನರು ತಲುಪಲು ಈ ಮೀಡಿಯಾ ನೆರವು ನೀಡುತ್ತಿದೆ ಎನ್ನುವುದು ನಿಜ. ಸೋಷಿಯಲ್ ಮೀಡಿಯಾಗಳು ಜನರನ್ನು ಬೆಸೆಯುವ ಸೇತುವೆಗಳಾಗಬೇಕು. ಆದರೆ, ಗೋಡೆಗಳನ್ನು ನಿರ್ಮಿಸುತ್ತಿರುವುದು ವಿಪರ್ಯಾಸ. ಇವುಗಳಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ, ವಿಸ್ತಾರ ಹೆಲ್ತ್ ಚಾನೆಲ್ ನಿಖರವಾದ ಮತ್ತು ವೈಜ್ಞಾನಿಕವಾದ ಆರೋಗ್ಯ ಮಾಹಿತಿಯನ್ನು ನೀಡಲಿ” ಎಂದು ಮಂಜನಾಥ್ ಅವರು ಆಶಿಸಿದರು.

ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಏಕೆ?
ಆರೋಗ್ಯವೇ ಸಂಪತ್ತು. ಆರೋಗ್ಯವೇ ಭಾಗ್ಯ ಅನ್ನುವ ಮಾತಿದೆ. ಅದೇ ರೀತಿ ಯಾರೇ ಆಗಲಿ, ಆರೋಗ್ಯವಾಗಿ ಇದ್ದರೆ ಮಾತ್ರವೇ ಜೀವನ. ಆದರೆ, ಬ್ಯುಸಿ ಲೈಫ್‌ನಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನೇ ಜನ ಮರೆತು ಬಿಡುತ್ತಾರೆ. ಆ ಸಣ್ಣ ನಿರ್ಲಕ್ಷ್ಯವೇ ಮುಂದೆ ಪ್ರಾಣಕ್ಕೆ ಕುತ್ತು ತಂದು ಬಿಡುತ್ತದೆ. ಹೀಗಾಗಿ, ಪ್ರತಿಯೊಬ್ಬರ ಆರೋಗ್ಯಕ್ಕೂ ಅನುಕೂಲವಾಗಲೆಂದು, ಆರೋಗ್ಯದಿಂದಿರಲು ದಾರಿ ತೋರಿಸಲೆಂದು ವಿಸ್ತಾರ ಮೀಡಿಯಾದ ಹೆಲ್ತ್ ಯುಟ್ಯೂಬ್ ಚಾನೆಲ್ ರೂಪಿಸಲಾಗಿದೆ. ಸ್ವಲ್ಪ ನಿರ್ಲಕ್ಷಿಸಿದರೂ ಎಂಥ ದೊಡ್ದ ಸಮಸ್ಯೆ ಅನುಭವಿಸಬೇಕಾಗುತ್ತದೆ ಹಾಗೂ ಆರೋಗ್ಯದ ಕಾಳಜಿಯ ಅಗತ್ಯವೇನು ಎಂಬ ಈ ಚಾನೆಲ್‌ನಲ್ಲಿ ನಾವು ನಿಯಮಿತವಾಗಿ ಮಾಹಿತಿ ನೀಡುತ್ತೇವೆ.

ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅವರು ಮಹತ್ವದ ಸಲಹೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ. ಕೇವಲ ಮಾಹಿತಿ ಮಾತ್ರವಲ್ಲದೇ ವೀಕ್ಷಕರನ್ನು ಸರ್ವರೀತಿಯಲ್ಲೂ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್‌ನ ಮುಖ್ಯ ಧ್ಯೇಯವಾಗಿದೆ.

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗಿನವರಿಗೆ ಅಗತ್ಯವಾಗಿರುವ ಆರೋಗ್ಯ ಕಾಳಜಿಗಳು, ಔಷಧೋಪಚಾರಗಳು, ಟಿಪ್ಸ್ ಇತ್ಯಾದಿ ಮಾಹಿತಿಯನ್ನು ನೀವು ಚಾನೆಲ್‌ನಿಂದ ಪಡೆದುಕೊಳ್ಳಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಆಯಾ ಋತುಗಳಿಗೆ ಅನುಗುಣವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಸಂಗತಿಗಳನ್ನು ತಿಳಿಸಲಾಗುತ್ತದೆ. ಒಟ್ಟಿನಲ್ಲಿ ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ನಿಮ್ಮ ಆರೋಗ್ಯದ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಆರೋಗ್ಯ ಕ್ಷೇತ್ರದಲ್ಲಾಗುತ್ತಿರುವ ಹೊಸ ಸಂಶೋಧನೆಗಳು, ಕಾಡುವ ಬಾಧೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಅಂಗೈನಲ್ಲಿ ಒದಗಿಸಲಿದೆ. ನಿಜಾರ್ಥದಲ್ಲಿ ವಿಸ್ತಾರ ಹೆಲ್ತ್ ಚಾನೆಲ್ ನಿಮ್ಮ ಡಾಕ್ಟರ್ ಆಗಿರಲಿದೆ!

ಇದನ್ನೂ ಓದಿ | ವಿಶ್ವಾಸಾರ್ಹ ಆರೋಗ್ಯ ಜಾಗೃತಿಗಾಗಿ ವಿಸ್ತಾರ ಹೆಲ್ತ್‌ ಚಾನೆಲ್‌: ಹರಿಪ್ರಕಾಶ್‌ ಕೋಣೆಮನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tips To Drink More Water: ನಾವು ಕುಡಿಯುವ ನೀರಿನ ಪ್ರಮಾಣವನ್ನು ಹೀಗೆ ಹೆಚ್ಚಿಸಬಹುದು!

ಸುಲಭವಾಗಿ ಮಾಡುವಂಥ ಕೆಲಸಗಳಿಗೂ ಕಷ್ಟ ಪಡುತ್ತೇವೆ ಎಂಬುದಕ್ಕೆ ನಾವು ಸಾಕಷ್ಟು ನೀರು ಕುಡಿಯದಿರುವುದೇ ಸಾಕ್ಷಿ. ಬರೀ ನೀರು ಕುಡಿಯಲಾರೆ, ಮರೆತೇಹೋಯ್ತು, ದಾಹವೇ ತಿಳಿಯುವುದಿಲ್ಲ… ಇಂಥ ಏನೇನೋ ಕಾರಣಗಳನ್ನು ನೀಡುತ್ತೇವೆಯೇ ಹೊರತು ನೀರು ಕುಡಿಯುವುದಿಲ್ಲ. ದೇಹಕ್ಕೆ ಹೆಚ್ಚು ನೀರುಣಿಸುವುದಕ್ಕೆ ನಾವೇನು ಮಾಡಬಹುದು? ಇಲ್ಲಿವೆ (tips to drink more water) ಸರಳ ಉಪಾಯಗಳು.

VISTARANEWS.COM


on

Water Bottle
Koo

ಸುಲಭವಾದ ಯಾವುದಾದರೂ ಕೆಲಸಕ್ಕೆ, ʻನೀರು ಕುಡಿದಷ್ಟು ಸುಲಭವಾಗಿ ಮಾಡಬಹುದುʼ ಎನ್ನುತ್ತೇವೆ. ʻಎದುರಾಳಿಗೆ ನೀರು ಕುಡಿಸಿದರುʼ ಎನ್ನುವಾಗ ಸುಲಭವಾಗಿ ಸೋಲಿಸಿದರು ಎಂದು ಭಾವಿಸುತ್ತೇವೆ. ಅಂತೂ ನೀರು ಕುಡಿಯುವುದೆಂದರೆ ಸುಲಭವಾದ ಕೆಲಸ ಎಂಬ ಭಾವ ನಮ್ಮದು. ಹಾಗಾದರೆ, ಈ ಬೇಸಿಗೆಯ ದಿನಗಳಲ್ಲಿ ನೀರು ಕುಡಿಯುವುದಕ್ಕೆ ಯಾಕಿಷ್ಟು ಕಷ್ಟ ಪಡುತ್ತೇವೆ ನಾವು? ದೇಹಕ್ಕೆ ನೀರು ಸಾಕಾಗದಿದ್ದರೆ ಹಲವು ರೀತಿಯಲ್ಲಿ ತೊಂದರೆಗಳು ವಕ್ಕರಿಸಿಕೊಳ್ಳುತ್ತವೆ ಎಂಬುದನ್ನು ತಿಳಿದಿದ್ದರೂ, ನೀರು ಕುಡಿಯುವುದನ್ನು ಮುಂದೂಡುತ್ತೇವೆ.
ದೇಹದ ಜೀರ್ಣಾಂಗಗಳು ಸರಿಯಾಗಿ ಕೆಲಸ ಮಾಡುವುದಕ್ಕೆ, ಮಲಬದ್ಧತೆ ನಿವಾರಣೆಗೆ, ಕಿಡ್ನಿ ಕ್ಷಮತೆ ಹೆಚ್ಚಿಸಲು, ಕೀಲು ಮತ್ತು ಸ್ನಾಯುಗಳು ಸ್ವಸ್ಥವಾಗಿರಲು, ಚರ್ಮ ನಳನಳಿಸಲು, ದೇಹದ ಉಷ್ಣತೆ ಸರಿಯಾಗಿರಲು… ಇಂಥ ಬಹಳಷ್ಟು ಕೆಲಸಗಳು ನಡೆಯುವುದಕ್ಕೆ ನಮಗೆ ನೀರು ಬೇಕು. ಇವೆಲ್ಲ ನಮಗೆ ಹೊಸ ವಿಷಯಗಳು ಅಲ್ಲದಿದ್ದರೂ, ನಿತ್ಯದ ಕೆಲಸಗಳ ಒತ್ತಡದಲ್ಲಿ ನೀರು ಕುಡಿಯುವುದನ್ನು ಮಾತ್ರ ಮರೆಯುತ್ತೇವೆ. ನಿರ್ಜಲೀಕರಣಕ್ಕೆ ಈಡಾಗಿ, ತಲೆನೋವು, ಚರ್ಮ ಒಣಗುವಂಥ ಹಲವು ಸಮಸ್ಯೆಗಳಿಂದ ಒದ್ದಾಡುತ್ತೇವೆ. ಹಾಗಾದರೆ ನೀರು ಹೆಚ್ಚು ಕುಡಿಯುವಂತೆ ನಮಗೆ ನಾವು ಹೇಗೆ (tips to drink more water) ಸ್ಫೂರ್ತಿ ತುಂಬಬಹುದು?

Woman drinking water.

ಬರೀ ನೀರಲ್ಲ

ನೀರಿಗೆ ಇನ್ನೇನಾದರೂ ಇಷ್ಟವಾಗುವಂಥದ್ದನ್ನು ಸೇರಿಸಿ ನೋಡಿ. ಇದರರ್ಥ ಸಕ್ಕರೆ, ಬೆಲ್ಲ, ಸೋಡಾಗಳನ್ನೆಲ್ಲ ಸೇರಿಸುವುದಲ್ಲ. ನಾಲ್ಕೆಂಟು ಪುದೀನಾ ಅಥವಾ ಬೆಸಿಲ್‌ ಎಲೆಗಳು, ಸ್ಟ್ರಾಬೆರಿ, ಕಿತ್ತಳೆ ಅಥವಾ ಅನಾನಸ್ ಹೋಳುಗಳು, ಒಂದು ಚಮಚ ಚಿಯಾ ಬೀಜ, ಸೌತೇಕಾಯಿ ತುಂಡುಗಳು… ಹೀಗೆ ನಿಮ್ಮಿಷ್ಟದ ಏನನ್ನಾದರೂ ಸೇರಿಸಿ. ಆದರೆ ಇದಕ್ಕೆ ಕೃತಕ ಸಿಹಿಯನ್ನು ಸೇರಿಸುವಂತಿಲ್ಲ. ಈ ರೀತಿಯಿಂದ ದಿನಕ್ಕೆ 8-10 ಗ್ಲಾಸ್‌ ನೀರು ಕುಡಿಯುವ ಗುರಿಯನ್ನು ತಲುಪಲು ಸಾಧ್ಯವಾದೀತು.

Alarm

ಅಲರಾಂ ಇಡಿ

ಪ್ರತಿ ಗಂಟೆಗೊಮ್ಮೆ ಇರುವ ಸ್ಥಳದಿಂದ ಎದ್ದು ಹೋಗಿ ನೀರು ಕುಡಿಯಬೇಕು ಎಂಬುದನ್ನು ನೆನಪಿಸಲು ತಾಸಿಗೊಮ್ಮೆ ಅಲರಾಂ ಇಟ್ಟುಕೊಳ್ಳಬಹುದು. ಒಂದೊಮ್ಮೆ ಇದು ಹಳೆಯ ಕಾಲದ್ದಾಯಿತು ಎನಿಸಿದರೆ, ವಾಟರ್‌ ರಿಮೈಂಡರ್‌ ಇರುವ ಆಪ್‌ಗಳನ್ನು ಬಳಸಬಹುದು. ಇದರಿಂದ ಆಯಾ ದಿನಕ್ಕೆ ಎಷ್ಟು ಬಾರಿ ನೀರು ಕುಡಿದಿದ್ದೀರಿ ಎಂಬುದನ್ನು ಲೆಕ್ಕ ಹಾಕುವುದಕ್ಕೂ ಸುಲಭವಾಗುತ್ತದೆ.

ಸೆಕ್ಸಿ ವಾಟರ್‌!

ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಇದರದ್ದೇ ಗಾಳಿ ಬೀಸುತ್ತಿದೆ. ವಿಷಯ ಮತ್ತೇನಲ್ಲ, ಕುಡಿಯುವ ನೀರಿಗೆ ನಿಮ್ಮಿಷ್ಟದ ಆರೋಗ್ಯಕರ ವಸ್ತುಗಳನ್ನು ಸೇರಿಸಿ, ನೋಡುವುದಕ್ಕೆ ಸಿಕ್ಕಾಪಟ್ಟೆ ಸುಂದರವಾಗಿರುವ ಕಪ್‌, ಬಾಟಲಿಗಳಲ್ಲಿ ಅವುಗಳನ್ನು ತುಂಬಿಸಿ, ಅದಕ್ಕೊಂದು ಫ್ಯಾನ್ಸಿ ಸ್ಟ್ರಾ ಸಿಕ್ಕಿಸಿದರೆ- ಸೆಕ್ಸಿ ವಾಟರ್‌ ಸಿದ್ಧ. ಇದನ್ನು ಹೇಗೆಲ್ಲಾ ಕುಡಿದು ಮುಗಿಸುತ್ತೀರಿ ಎನ್ನುವುದನ್ನೂ ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಬಿತ್ತರಿಸಬಹುದು.

Boy Drinking Water from Glass

ನೀರು ಕುಡಿಯುವ ಆಟ

ನಿಮ್ಮ ಕುಟುಂಬ ಅಥವಾ ಮಿತ್ರರೊಂದಿಗೆ ನೀರು ಕುಡಿಯುವ ಆಟ ಆಡಬಹುದು. ನಿಂನಿಮ್ಮ ಗುಂಪಿನಲ್ಲಿ ಪ್ರತಿ ದಿನದ ನೀರಿನ ಸವಾಲು ಮುಂದಿಟ್ಟು, ಯಾರೆಲ್ಲ ಅದನ್ನು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡಬಹುದು. ದಿನದ ವಿಜೇತರಿಗೆ ಏನಾದರೂ ಬಿರುದಾವಳಿಗಳನ್ನು ನೀಡಿ ಮಜಾ ಮಾಡಬಹುದು. ತಿಂಗಳಿಗೊಮ್ಮೆ ಎಲ್ಲರೂ ಸೇರಿ ನೀರಿಗಾಗಿ ಆರೋಗ್ಯಕರ ಪಾರ್ಟಿ ಮಾಡಬಹುದು.

ವಿನೂತನ ಬಾಟಲ್‌ಗಳು

ನೀರಿನ ಅಳತೆಯ ಗುರುತು ಮಾತ್ರವಲ್ಲ, ಸಮಯದ ಗುರುತನ್ನೂ ಹೊಂದಿರುವ ಸುಂದರ ನೀರಿನ ಬಾಟಲಿಗಳು, ಮುದ್ದಾದ ಕಪ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಒಮ್ಮೆ ತುಂಬಿಸಿದರೆ ಎಷ್ಟು ತಾಸಿಗೆ ಎಷ್ಟು ನೀರು ಕುಡಿದಿರಿ ಎನ್ನುವ ಲೆಕ್ಕವನ್ನೂ ಈ ಬಾಟಲಿಗಳು ಸುಲಭವಾಗಿ ಹೇಳಿಬಿಡುತ್ತವೆ. ನೋಡಿ, ನೀರು ಕುಡಿಸುವುದಕ್ಕೆ ಮಾರುಕಟ್ಟೆಯ ಮಂದಿ ಎಷ್ಟೊಂದು ಉತ್ಸುಕರಾಗಿದ್ದಾರೆ! ನಾವು ಕುಡಿಯಬೇಕಷ್ಟೆ.

Green tea, black coffee

ಗ್ರೀನ್‌ ಟೀ, ಬ್ಲಾಕ್‌ ಕಾಫಿ

ನಿತ್ಯದ ಜ್ಯೂಸ್‌, ಸೋಡಾದ ಸರ್ವಿಂಗ್‌ ಇದ್ದರೆ ಅದನ್ನು ಗ್ರೀನ್‌ ಟೀ ಅಥವಾ ಬ್ಲಾಕ್‌ ಕಾಫಿಗೆ ಬದಲಾಯಿಸಬಹುದು. ಅಂಥವು ಯಾವುದೂ ಬೇಡ ಎನಿಸಿದರೆ ಕೋಕಂ, ನೆಲ್ಲಿಕಾಯಿ, ಬೇಲದಹಣ್ಣು ಮುಂತಾದವುಗಳ ಪಾನಕ ಸೇವಿಸಬಹುದು. ಇದರಿಂದ ಬೇಸಿಗೆಯಲ್ಲಿ ಶರೀರ ತಂಪಾಗಿಯೂ ಇರುತ್ತದೆ, ನೀರೂ ಹೆಚ್ಚಿಗೆ ದೊರೆತಂತೆ ಆಗುತ್ತದೆ.

Fasting Fruits image

ರಸಭರಿತ ಹಣ್ಣುಗಳು

ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಸೌತೇಕಾಯಿಯಂಥ ರಸಭರಿತ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಶರೀರ ಬಳಲದಂತೆ ಕಾಪಾಡಿಕೊಳ್ಳುವುದರ ಜೊತೆಗೆ ಅಗತ್ಯವಾದ ನೀರಿನ ಪ್ರಮಾಣವನ್ನೂ ಹೆಚ್ಚಿಸಬಹುದು. ಜೊತೆಗೆ ಕಬ್ಬಿನಹಾಲು, ಎಳನೀರಿನಂಥ ನೈಸರ್ಗಿಕ ಪೇಯಗಳು ಬೇಸಿಗೆಯ ದಾಹ ತಣಿಸುವುದರ ಜೊತೆಗೆ, ಶರೀರಕ್ಕೆ ಭರಪೂರ ಖನಿಜಗಳನ್ನೂ ಒದಗಿಸುತ್ತವೆ.

Continue Reading

ಆರೋಗ್ಯ

Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

ಸೋಡಿಯಂ, ಪೊಟಾಶಿಯಂ, ಪಾಸ್ಪರಸ್‌ ಮತ್ತಿತರ ಖನಿಜಾಂಶಗಳನ್ನು ಅತಿಯಾಗಿಸದೆ ಕಿಡ್ನಿಯ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರೆ ಕಿಡ್ನಿಯ ತೊಂದರೆಗಳನ್ನು ತಪ್ಪಿಸಬಹುದು. ಕಿಡ್ನಿ ಆರೋಗ್ಯ ಕುರಿತ (healthy foods for kidney) ಮತ್ತಷ್ಟು ಮಾಹಿತಿ ಇಲ್ಲಿದೆ.

VISTARANEWS.COM


on

Healthy Foods For Kidney
Koo

ಕಿಡ್ನಿಯ ಆರೋಗ್ಯ ಸಮತೋಲನದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಸಮತೋಲಿತ ಆಹಾರ ಬಹಳ ಮುಖ್ಯ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇಲ್ಲದೆ ಹೋದರೆ, ಕಿಡ್ನಿಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ ಎಂದೇ ಅರ್ಥ. ಯಾಕೆಂದರೆ, ಕಿಡ್ನಿಗೆ ಅತಿಯಾದ ಕೆಲಸ, ಒತ್ತಡ ನೀಡುವ ಮೂಲಕವೇ ನಾವು ಕಿಡ್ನಿಯ ಆರೋಗ್ಯವನ್ನು ಹದಗೆಡಿಸಲು ಕಾರಣ. ಸೋಡಿಯಂ, ಪೊಟಾಶಿಯಂ, ಪಾಸ್ಪರಸ್‌ ಮತ್ತಿತರ ಖನಿಜಾಂಶಗಳನ್ನು ಅತಿಯಾಗಿಸದೆ, ಕಿಡ್ನಿಯ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರೆ, ಕಿಡ್ನಿಯ ತೊಂದರೆಗಳನ್ನು ತಪ್ಪಿಸಬಹುದು. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಹಂಪಲುಗಳ ಸೇವನೆ, ತರಕಾರಿ, ಧಾನ್ಯಗಳು, ಬೇಳೆಕಾಳುಗಳು ಇತ್ಯಾದಿಗಳ ಸೇವನೆ ಬಹಳ ಮುಖ್ಯ. ಪ್ರೊಟೀನ್‌ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವ ಸಮೃದ್ಧ ಆಹಾರದ ಸೇವನೆ ಅತೀ ಅಗತ್ಯ. ಹಾಗಾದರೆ ಬನ್ನಿ, ಕಿಡ್ನಿಗೆ ಒತ್ತಡ ಬೀಳದಂತೆ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸುವ ಯಾವ ಬಗೆಯ ಆಹಾರ ಕ್ರಮವನ್ನು (healthy foods for kidney) ನಾವು ಅನುಸರಿಸಬಹುದು ಎಂಬುದನ್ನು ನೋಡೋಣ.

Pear, apple, papaya and pineapple

ಹಣ್ಣು ಹಂಪಲುಗಳನ್ನು ಮರೆಯಲೇಬಾರದು

ಆರೋಗ್ಯಕರ ಕಿಡ್ನಿಗಳ ವಿಚಾರಕ್ಕೆ ಬಂದಾಗ ಹಣ್ಣು ಹಂಪಲುಗಳನ್ನು ಮರೆಯಲೇಬಾರದು. ಪೇರಳೆ, ಸೇಬು, ಪೀಯರ್‌, ಪಪ್ಪಾಯಿ ಹಾಗೂ ಅನನಾಸು ಈ ಐದು ಹಣ್ಣುಗಳು ಕಿಡ್ನಿ ಸ್ನೇಹಿ. ಇವು ಕಿಡ್ನಿಗೆ ಹಾನಿಯಾಗುವುದನ್ನು ತಪ್ಪಿಸಿ, ಕಿಡ್ನಿಯನ್ನು ಆರೋಗ್ಯವಾಗಿಸುತ್ತವೆ.

Iron rich foods

ಕಬ್ಬಿಣಾಂಶ ಇರುವ ಆಹಾರಗಳು

ವಿಟಮಿನ್‌ ಕೆ ಹಾಗೂ ಕಬ್ಬಿಣಾಂಶ ಇರುವ ಆಹಾರಗಳು ಯಾವಾಗಲೂ ಕಿಡ್ನಿಗೆ ಒಳ್ಳೆಯದನ್ನೇ ಮಾಡುತ್ತವೆ. ಹೀಗಾಗಿ ಈ ಪೋಷಕಾಂಶಗಳು ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಹಸಿರು ತರಕಾರಿಗಳಲ್ಲಿ ಇವು ಹೆಚ್ಚಿದ್ದು, ಬಸಳೆ, ಕಾಳೆ, ಬ್ರೊಕೋಲಿ, ಕ್ಯಾಬೇಜ್‌ ಇತ್ಯಾದಿಗಳನ್ನು ಸೇವಿಸಬಹುದು. ಆದರೆ ಹಿತಮಿತವಾಗಿರಲಿ.

ಪ್ರೊಟೀನ್‌ ಆಹಾರ ಸೂಕ್ತ

ಮೀನು ಹಾಗೂ ಟೋಫು ಸೇರಿದಂತೆ, ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಕಿಡ್ನಿಗೆ ಅತ್ಯಂತ ಒಳ್ಳೆಯದು. ಈ ಆಹಾರಗಳು ಕಿಡ್ನಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.

The seeds

ಧಾನ್ಯಗಳ ಸೇವನೆ

ಧಾನ್ಯಗಳ ಸೇವನೆ ಕಿಡ್ನಿಗೆ ಅತ್ಯಂತ ಅಗತ್ಯ. ಕುಚ್ಚಲಕ್ಕಿ, ಕ್ವಿನೋವಾ, ಇವೆರಡೂ ಆಹಾರಗಳು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನೂ ಸಮತೋಲನದಲ್ಲಿಡಲು ನೆರವಾಗುತ್ತದೆ.
ಆಹಾರ ಸೇವನೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರದತ್ತ ಗಮನ ಹರಿಸಿದರೆ, ಕಿಡ್ನಿ ಸಂಬಂಧಿತ ಸಮಸ್ಯೆಗಳು ಬಾರದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಕಿಡ್ನಿಯ ಆರೋಗ್ಯಕ್ಕೆ ಬಹಳ ಮುಖ್ಯ. ಡಯಟ್‌ ಅಥವಾ ಇನ್ಯಾವುದೋ ಹೆಸರಿನಲ್ಲಿ ಇದ್ದಕ್ಕಿದ್ದಂತೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಇತ್ಯಾದಿಗಳಿಂದ ಕಿಡ್ನಿಯ ಮೇಲೆ ಒತ್ತಡ ಬೀಳುತ್ತದೆ.

ಕೆಲವು ಆಹಾರಗಳಿಂದ ದೂರ ಇರಬೇಕು

ಕಿಡ್ನಿಯ ತೊಂದರೆ, ಸಮಸ್ಯೆ ಇದ್ದವರು, ಕೆಲವು ಆಹಾರಗಳನ್ನು ದೂರವಿಡುವುದನ್ನು ಮರೆಯಬಾರದು. ಬ್ರೆಡ್‌ ಮತ್ತಿತರ ಸಂಸ್ಕರಿಸಿದ ಆಹಾರಗಳು, ಕ್ಯಾನ್‌ನಲ್ಲಿ ಸಂರಕ್ಷಿಸಲ್ಪಟ್ಟ ಆಹಾರಗಳು, ಬೆಣ್ಣೆಹಣ್ಣು, ಬಾಳೆಹಣ್ಣು, ಕಿತ್ತಳೆ, ಕೆಲವು ಒಣ ಹಣ್ಣುಗಳು, ಟೊಮೆಟೋ, ಸಂಸ್ಕರಿಸಿದ ಮಾಂಸ, ಉಪ್ಪಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಏನೇ ಕಿಡ್ನಿಯ ಸಮಸ್ಯೆ ಇದ್ದರೂ ವೈದ್ಯರ ಸಲಹೆಯ ಪ್ರಕಾರ ಆಹಾರಕ್ರಮವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

Continue Reading

ಪ್ರಮುಖ ಸುದ್ದಿ

ಯಾವ ಗ್ರೂಪಿನ ರಕ್ತದವರು ಯಾರಿಗೆ ರಕ್ತ ಕೊಡಬಹುದು? ಕಂಪ್ಲೀಟ್‌ ಮಾಹಿತಿ ಇಲ್ಲಿದೆ

ಯಾವ ಗ್ರೂಪಿನ ರಕ್ತ ಹೊಂದಿದವರು ಯಾವ ಗ್ರೂಪಿನವರಿಗೆ ರಕ್ತ ಕೊಡಬಹುದು ಎಂಬುದರ ಕುರಿತು ಕೇಂದ್ರ ಸರ್ಕಾರವು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಆ ಮಾಹಿತಿ ಇಲ್ಲಿದೆ.

VISTARANEWS.COM


on

Blood Donation
Koo

ನವದೆಹಲಿ: ರಕ್ತದಾನ ಮಹಾದಾನ ಎನ್ನುತ್ತಾರೆ. ಬೇರೆಯವರ ಪ್ರಾಣ ಉಳಿಯಲಿ, ಬೇರೆಯವರ ಮೈಯಲ್ಲೂ ನಮ್ಮ ರಕ್ತ ಹರಿಯಲಿ ಎಂದು ಜನ ರಕ್ತದಾನ (Blood Donation) ಮಾಡುತ್ತಾರೆ. ಆಸ್ಪತ್ರೆಗಳಲ್ಲಿ ರೋಗಿಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂದರೆ ಹೋಗಿ ರಕ್ತದಾನ ಮಾಡಿ, ಅವರ ಜೀವ ಉಳಿಸುತ್ತಾರೆ. ಆದರೆ, ತುಂಬ ಸಂದರ್ಭಗಳಲ್ಲಿ ಯಾವ ಗ್ರೂಪ್‌ನ ರಕ್ತ ಹೊಂದಿವರು, ಯಾವ ಗ್ರೂಪ್‌ನ ರಕ್ತ (Blood Group) ಹೊಂದಿರುವರಿಗೆ ದಾನ ಮಾಡಬಹುದು ಎಂಬುದು ತುಂಬ ಜನರಿಗೆ ಗೊತ್ತಾಗುವುದಿಲ್ಲ. ಆದರೆ, ಈ ಗೊಂದಲವನ್ನು ನಿವಾರಿಸಲು ಕೇಂದ್ರ ಸರ್ಕಾರವು ಯಾರಿಗೆ ಯಾರು ರಕ್ತದಾನ ಮಾಡಬಹುದು ಎಂಬುದರ ಪಟ್ಟಿ ಇರುವ ವಿಡಿಯೊ ಒಂದನ್ನು ಹಂಚಿಕೊಂಡಿದೆ.

ಹಾಗಾದರೆ, ಯಾವ ಗ್ರೂಪ್‌ನ ರಕ್ತ ಹೊಂದಿದವರು, ಯಾವ ಗ್ರೂಪ್‌ನ ರಕ್ತ ಹೊಂದಿದವರಿಗೆ ದಾನ ಮಾಡಬಹುದು? ಯಾರು ಯಾರಿಗೆ ಕೊಡಬಾರದು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಹೀಗಿದೆ.

ಒ ಪಾಸಿಟಿವ್ (O+):‌ ಒ ಪಾಸಿಟಿವ್‌ ರಕ್ತ ಇರುವವರು ಒ ಪಾಸಿಟಿವ್‌, ಎ ಪಾಸಿಟಿವ್‌, ಬಿ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ರಕ್ತದ ಗ್ರೂಪ್‌ನವರಿಗೆ ರಕ್ತ ಕೊಡಬಹುದಾಗಿದೆ.

ಎ ಪಾಸಿಟಿವ್‌ (A+): ರಕ್ತ ಹೊಂದಿದವರು ಎ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ಗ್ರೂಪ್‌ನವರಿಗೆ ರಕ್ತ ಕೊಡಬಹುದು

ಬಿ ಪಾಸಿಟಿವ್‌ (B+): ಬಿ ಪಾಸಿಟಿವ್‌ ರಕ್ತ ಇರುವವರು ಬಿ ಪಾಸಿಟಿವ್‌ ಹಾಗೂ ಎಬಿ ಪಾಸಿಟಿವ್‌ ಇರುವವರಿಗೆ ರಕ್ತದಾನ ಮಾಡಬಹುದು

ಎಬಿ ಪಾಸಿಟಿವ್‌ (AB+): ಎಬಿ ಪಾಸಿಟಿವ್‌ ರಕ್ತ ಹೊಂದಿದವರು ಎಬಿ ಪಾಸಿಟಿವ್‌ ರಕ್ತ ಹೊಂದಿವರಿಗೆ ಮಾತ್ರ ಕೊಡಬಹುದು

ಒ ಮೈನಸ್‌ (O-): ಒ ಮೈನಸ್‌ ರಕ್ತ ಹೊಂದಿದವರು ಎಲ್ಲರಿಗೂ ಅಂದರೆ, ಒ ಪಾಸಿಟಿವ್‌, ಎ ಪಾಸಿಟಿವ್‌, ಬಿ ಪಾಸಿಟಿವ್‌, ಎಬಿ ಪಾಸಿಟಿವ್‌, ಒ ನೆಗೆಟಿವ್‌, ಎ ನೆಗೆಟಿವ್‌, ಬಿ ನೆಗೆಟಿವ್‌, ಎಬಿ ನೆಗೆಟಿವ್‌ ಇರುವವರಿಗೆ ರಕ್ತದಾನ ಮಾಡಬಹುದು

ಎ ನೆಗೆಟಿವ್‌ (A-): ಈ ರಕ್ತ ಹೊಂದಿದವರು ಎ ಪಾಸಿಟಿವ್‌, ಎಬಿ ಪಾಸಿಟಿವ್‌, ಎ ನೆಗೆಟಿವ್‌ ಹಾಗೂ ಎಬಿ ನೆಗೆಟಿವ್‌ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಬಹುದು

ಬಿ ಪಾಸಿಟಿವ್‌ (B+): ಈ ರಕ್ತದ ಗುಂಪಿನವರು ಬಿ ಪಾಸಿಟಿವ್‌, ಎಬಿ ಪಾಸಿಟಿವ್, ಬಿ ನೆಗೆಟಿವ್‌ ಹಾಗೂ ಎಬಿ ನೆಗೆಟಿವ್‌ನವರಿಗೆ ರಕ್ತ ಕೊಡಬಹುದು

ಇದನ್ನೂ ಓದಿ: Foods That Prevent Blood Sugar: ರಕ್ತದಲ್ಲಿ ಸಕ್ಕರೆ ಅಂಶ ಏರದಂತೆ ತಡೆಯುವ ಆಹಾರಗಳಿವು

ಎಬಿ ನೆಗೆಟಿವ್‌ (AB-): ಈ ರಕ್ತದ ಗುಂಪಿನವರು ಎಬಿ ಪಾಸಿಟಿವ್‌ ಹಾಗೂ ಎಬಿ ನೆಗೆಟಿವ್‌ ರಕ್ತ ಹೊಂದಿರುವವರಿಗೆ ಕೊಡಬಹುದಾಗಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

Dry Fruits: ಡ್ರೈಫ್ರುಟ್ಸ್‌ಗಳನ್ನು ಯಾವಾಗ, ಎಷ್ಟು ತಿನ್ನಬೇಕು? ಈ ಮಾಹಿತಿ ತಿಳಿದಿರಲಿ

ಈ ಬೀಜಗಳ ನಿಜವಾದ ಉಪಯೋಗವನ್ನು ನಮ್ಮ ದೇಹ ಪಡೆದುಕೊಳ್ಳಬೇಕೆಂದರೆ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಒಳ್ಳೆಯದು. ಈ ಬಗ್ಗೆ (Dry fruits) ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

dry fruits
Koo

ಅತ್ಯಂತ ಆರೋಗ್ಯಕರ ಆಹಾರಗಳ ವಿಚಾರ ಬಂದಾಗ ಒಣಹಣ್ಣುಗಳು ಹಾಗೂ ಬೀಜಗಳನ್ನು ನಾವು ಖಂಡಿತ ಮರೆಯುವುದಿಲ್ಲ. ಒಣಬೀಜಗಳು ಅತ್ಯಂತ ಆರೋಗ್ಯಕರ ಹಾಗೂ ಇವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಬೇಕಾದ ಹಲವು ಬಗೆಯ ಪೋಷಕಾಂಶಗಳಾದ, ಖನಿಜಾಂಶಗಳೂ, ಬಗೆಬಗೆಯ ಜೀವಸತ್ವಗಳೂ ಇದರಿಂದ ಲಭಿಸುವುದು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ, ಬಹಳಷ್ಟು ಮಂದಿ, ಈ ಒಣಬೀಜಗಳನ್ನು ಯಾವಾಗ, ಎಲ್ಲಿ, ಹೇಗೆ ಮತ್ತು ಎಷ್ಟು ತಿನ್ನಬೇಕು ಎಂಬ ವಿಚಾರದಲ್ಲಿ ಮಾತ್ರ ಗೊಂದಲ ಅನುಭವಿಸುವುದುಂಟು. ಯಾಕೆಂದರೆ, ಈ ಬೀಜಗಳ ನಿಜವಾದ ಉಪಯೋಗವನ್ನು ನಮ್ಮ ದೇಹ ಪಡೆದುಕೊಳ್ಳಬೇಕೆಂದರೆ, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ ತೆಗೆದುಕೊಂಡರೆ ಒಳ್ಳೆಯದು. ಬನ್ನಿ ಈ ಬಗ್ಗೆ (Dry fruits) ತಿಳಿದುಕೊಳ್ಳೋಣ.

Image Of Dry Fruits for Womens Health

ಸಸ್ಯಾಧಾರಿತ ಆಹಾರ

ಸಸ್ಯಾಧಾರಿತ ಆಹಾರಗಳ ಪೈಕಿ ಅತ್ಯಂತ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳು ದೊರಕುವುದು ಈ ಬೀಜಗಳಲ್ಲಿಯೇ. ನಾರಿನಂಶ, ಆರೋಗ್ಯಕರ ಕೊಬ್ಬು ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳನ್ನೂ ಹೊಂದಿದ ಬೀಜಗಳು ಯಾವುದೇ ಆಹಾರಗಳಲ್ಲಿ ಸಿಗದಷ್ಟು ಬಗೆಯ ಪೋಷಕಾಂಶಗಳನ್ನು ತಮ್ಮಲ್ಲಿ ಅಡಗಿಸಿಟ್ಟಿರುತ್ತವೆ. ಉದಾಹರಣೆಗೆ, ಕಬ್ಬಿಣಾಂಶ, ಕ್ಯಾಲ್ಶಿಯಂ, ಬಗೆಬಗೆಯ ಜೀವಸತ್ವಗಳು, ಒಮೆಗಾ 3 ಫ್ಯಾಟಿ ಆಸಿಡ್‌ಗಳು, ತಾಮ್ರ, ಮ್ಯಾಂಗನೀಸ್‌, ಮೆಗ್ನೀಶಿಯಂ, ಪೊಟಾಶಿಯಂ, ಝಿಂಕ್‌ ಹೀಗೆ ಎಲ್ಲ ಬಗೆಯ ಪೋಷಕಾಂಶಗಳನ್ನು ಹೊಂದಿರುವ ಸಂಪೂರ್ಣ ಆಹಾರ ಈ ಬೀಜಗಳು. ಇವುಗಳು ಕೊಲೆಸ್ಟೆರಾಲ್‌ ಅನ್ನು ಕಡಿಮೆಗೊಳಿಸುವಲ್ಲಿ, ರಕ್ತನಾಳಗಳು ಸಮರ್ಪಕವಾಗಿ ಕೆಲಸ ಮಾಡುವಲ್ಲಿ, ಹಾಗೂ ಮಾಂಸಖಂಡಗಳ ಬಲವರ್ಧನೆಗೆ ತಮ್ಮದೇ ಆದ ಕೊಡುಗೆ ನೀಡುತ್ತವೆ. ಕೆಲವು ಬೀಜಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಕೊಬ್ಬು ಹೊಂದಿರಬಹುದಾದ್ದರಿಂದ, ಅಂತಹುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

ಕೆಟ್ಟ ಕೊಲೆಸ್ಟೆರಾಲ್‌

ಹಾಗಾದರೆ, ಇಂತಹ ಬೀಜಗಳ ಸಂಪೂರ್ಣ ಲಾಭವನ್ನು ಪಡೆಯಬೇಕಾದರೆ ಯಾವ ಸಮಯದಲ್ಲಿ ಸೇವಿಸಿದರೆ ಉತ್ತಮ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವವಾಗಿರಬಹುದು. ಬೆಳಗ್ಗೆ ಉಪಾಹಾರಕ್ಕೆ ಅಥವಾ ಉಪಾಹಾರದ ಜೊತೆಗೆ ಬೀಜಗಳನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನಗೊಳಿಸಲು ಬಹಳ ಸಹಾಯವಾಗುತ್ತದೆ. ಇವು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟೆರಾಲ್‌ ಅನ್ನು ದೇಹದಿಂದ ಹೊರಕ್ಕೆ ಕಳಿಸುವಲ್ಲಿ ಸಹಾಯ ಮಾಡುತ್ತವೆ, ಜೊತೆಗೆ ಹೃದಯವು ಸಮರ್ಪಕವಾಗಿ ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತವೆ. ಹೃದಯ ಚುರುಕಾಗಿರಿಸುವಲ್ಲಿ ಬೀಜಗಳ ಪಾತ್ರ ದೊಡ್ಡದು.

Dry fruits like prunes apricots raisins Potassium Deficiency

ಯಾವಾಗ ತಿನ್ನಬೇಕು?

ಬಾದಾಮಿಯನ್ನು ಬೆಳಗ್ಗಿನ ಹೊತ್ತಿನಲ್ಲಿ ತಿನ್ನುವುದು ಬಹಳ ಒಳ್ಳೆಯದು. ಇದು ದೇಹದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದರಿಂದ ಬೆಳಗ್ಗೆ ಇದನ್ನು ಸೇವಿಸುವ ಮೂಲಕ ಇಡೀ ದಿನಕ್ಕೆ ಬೇಕಾದ ಶಕ್ತಿ, ಚೈತನ್ಯವನ್ನು ಈ ಮೂಲಕ ಪಡೆಯಬಹುದು. ಮುನ್ನಾದಿನವೇ ನಾಲ್ಕೈದು ಬಾದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ತಿನ್ನುವ ಮೂಲಕ ಇದರ ಒಳ್ಳೆಯ ಗುಣಗಳನ್ನು ಪಡೆಯಬಹುದು.
ಸಂಜೆಯ ಹೊತ್ತು ಪಿಸ್ತಾ, ಗೋಡಂಬಿಯಂತಹ ಬೀಜಗಳನ್ನು ಸೇವಿಸಬಹುದು. ಇವು ರೋಗನಿರೋಧಕತೆಯನ್ನು ಹೆಚ್ಚು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಶಕ್ತಿವರ್ಧನೆಗೂ ಇವು ಒಳ್ಳೆಯದು. ಸಂಜೆಯ ಹೊತ್ತಿನ ಸ್ನ್ಯಾಕ್‌ ಸಂದರ್ಭ ಇವುಗಳನ್ನು ಸೇವಿಸಬಹುದು.

Sleeping Tips

ರಾತ್ರಿ ಮಲಗುವ ಮೊದಲು

ರಾತ್ರಿ ಮಲಗುವ ಮೊದಲು ತಿನ್ನಬಹುದಾದವುಗಳು ಖರ್ಜೂರ, ಪ್ರೂನ್‌ ಹಾಗೂ ವಾಲ್ನಟ್‌ಗಳು. ಇವು ನಾರಿನಂಶದಿಂದ ಸಮೃದ್ಧವಾಗಿರುವಂಥವು. ಹಾಗಾಗಿ, ಜೀರ್ಣಕ್ರಿಯೆಗೆ ಇವು ಸಹಾಯ ಮಾಡಬಲ್ಲವು. ಮಲಬದ್ಧತೆ, ಎದ್ದ ಕೂಡಲೇ ಮಲವಿಸರ್ಜನೆ ಕಷ್ಟವಾಗುವ ಮಂದಿ, ಹೊಟ್ಟೆಯುಬ್ಬರ, ಎದೆಯುರಿ ಮತ್ತಿತರ ಗ್ಯಾಸ್‌ ಸಮಸ್ಯೆಯನ್ನು ಹೊಂದಿರುವ ಮಂದಿ ಇವುಗಳನ್ನು ರಾತ್ರಿಯ ಹೊತ್ತು ಸೇವಿಸುವ ಮೂಲಕ ಪ್ರಯೋಜನ ಪಡೆಯಬಹುದು. ಈ ಸಮಸ್ಯೆಗಳಿಂದಲೂ ಮುಕ್ತಿ ಪಡೆಯಬಹುದು.
ರಾತ್ರಿಯ ಹೊತ್ತು, ಹೆಚ್ಚು ಕೊಬ್ಬನ್ನು ಹೊಂದಿರುವ ಗೋಡಂಬಿಯನ್ನು ಸೇವಿಸದಿರಿ. ಇವು ನಿಮ್ಮ ನಿದ್ದೆಗೆ ಭಂಗ ತರಬಹುದು. ಹೊಟ್ಟೆ ಭಾರವಾದ ಅನುಭವದಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೆ ಇರಬಹುದು. ಅಷ್ಟೇ ಅಲ್ಲ, ಚಾಕೋಲೇಟ್‌ ಹಾಗೂ ಎಣ್ಣೆಯಲ್ಲಿ ಕರಿದ ಮಸಾಲೆಭರಿತ ಬೀಜಗಳನ್ನು ರಾತ್ರಿಯ ಹೊತ್ತು ಸೇವಿಸಬೇಡಿ.

Image Of Dry Fruits For Hair Fall

ಎಷ್ಟು ತಿನ್ನಬೇಕು?

ಪ್ರತಿಯೊಬ್ಬರೂ ತಮ್ಮ ಮುಷ್ಠಿಗಾತ್ರದಷ್ಟು ಬೀಜಗಳನ್ನು ಪ್ರತಿದಿನ ಸೇವಿಸಬಹುದು. ಅಂದರೆ ಸುಮಾರು 20ರಿಂದ 25 ಬೀಜಗಳನ್ನು ಪ್ರತಿ ದಿನ ಸೇವಿಸಬಹುದು. ಇವು ಎಲ್ಲ ಬಗೆಯ ಬೀಜಗಳನ್ನು ಒಂದು ಮುಷ್ಟಿಯಲ್ಲಿ ಹಿಡಿಯುವಷ್ಟು ಅಂದರೆ 20ರಿಂದ 25 ಬೀಜಗಳನ್ನು ಪ್ರತಿದಿನ ಬೇರೆ ಬೇರೆ ಹೊತ್ತಿನಲ್ಲಿ ಸೇವಿಸುವ ಮೂಲಕ ಅವುಗಳ ಗರಿಷ್ಠ ಪ್ರಯೋಜನ ಪಡೆಯಬಹುದು.

Continue Reading
Advertisement
Arvind Kejriwal
ದೇಶ8 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!

CM Siddaramaiah hugs DK Suresh in Bangalore Rural Lok Sabha constituency election campaign
Lok Sabha Election 202415 mins ago

Lok Sabha Election 2024: ಕಷ್ಟಕ್ಕೆ ಸ್ಪಂದಿಸುವ ಡಿಕೆಸು ಬೇಕೋ? ವೈಟ್‌ ಕಾಲರ್‌ ಡಾ. ಮಂಜುನಾಥ್‌ ಬೇಕೋ? ಸಿಎಂ ಪ್ರಶ್ನೆ

Mudhol Movie Sanjana
ಸ್ಯಾಂಡಲ್ ವುಡ್18 mins ago

Mudhol Movie: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರನ ಜತೆ ಸಂಜನಾ ರೊಮ್ಯಾನ್ಸ್!

narendra modi
ದೇಶ32 mins ago

ಮೋದಿ ಅವರ ಡೀಸೆಲ್ ಚಾಲಿತ ವಿಶೇಷ ವಾಹನಗಳ ನೋಂದಣಿ ವಿಸ್ತರಣೆ ತಿರಸ್ಕರಿಸಿದ ಎನ್‌ಜಿಟಿ; ಕಾರಣವೇನು?

Varun Gandhi
ಪ್ರಮುಖ ಸುದ್ದಿ54 mins ago

Varun Gandhi: ಸಂಸದ ಅಲ್ಲದಿದ್ದರೂ ನಿಮ್ಮ ಮಗ; ಜನಕ್ಕೆ ಟಿಕೆಟ್‌ ವಂಚಿತ ವರುಣ್‌ ಗಾಂಧಿ ಭಾವುಕ ಪತ್ರ!

supreme court CJI DY chandrachud
ಪ್ರಮುಖ ಸುದ್ದಿ1 hour ago

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

40 per cent commission advertisement against BJP and Summons to CM Siddaramaiah and DCM DK Shivakumar
ರಾಜಕೀಯ1 hour ago

40 percent commission: ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು; ಸಿಎಂ, ಡಿಸಿಎಂಗೆ ಸಮನ್ಸ್‌

Murder case Family Dispute
ಬೆಂಗಳೂರು ಗ್ರಾಮಾಂತರ1 hour ago

Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ

Bengaluru News air pressure pipe
ಬೆಂಗಳೂರು2 hours ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20242 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20244 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ11 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌