Motivational story : ನೀರಿಗೆ ಬಿದ್ದು ಒದ್ದಾಡಿದರೆ ಮಾತ್ರ ಈಜು ಬರೋದು! ಬದುಕಲ್ಲೂ ಹಾಗೇನೇ! - Vistara News

ಪ್ರಮುಖ ಸುದ್ದಿ

Motivational story : ನೀರಿಗೆ ಬಿದ್ದು ಒದ್ದಾಡಿದರೆ ಮಾತ್ರ ಈಜು ಬರೋದು! ಬದುಕಲ್ಲೂ ಹಾಗೇನೇ!

Motivational story : ಇರುವುದರಲ್ಲೇ ಸುಖವನ್ನು ಕಾಣುವ ಯಾರೂ ಬದುಕಿನಲ್ಲಿ ಮುಂದೆ ಬರುವುದಿಲ್ಲ. ಈಜಬೇಕು ಎಂದರೆ ನೀರಿಗೆ ಇಳಿಯಲೇಬೇಕು.. ಹಾಗೇನೇ ಬದುಕು.

VISTARANEWS.COM


on

guru shishya
ಪ್ರಾತಿನಿಧಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ-motivational story
ಒಂದು ಬಾರಿ ಗುರು ಶಿಷ್ಯರಿಬ್ಬರು ಒಂದೂರನ್ನು ದಾಟಿ ಹೋಗುತ್ತಿದ್ದರು. ಇಬ್ಬರಿಗೂ ಹಸಿವೆಯಾಗಿತ್ತು, ಆಗಲೇ ಕತ್ತಲೂ ಆವರಿಸುತ್ತಿತ್ತು. ಹೀಗೇ ಮುಂದೆ ಸಾಗಿದರೆ ತಿನ್ನಲು ಏನೂ ಸಿಗಲಾರದು ಎಂದು ಭಾವಿಸಿದ ಅವರು ಅಕ್ಕಪಕ್ಕದಲ್ಲಿ ಮನೆ ಏನಾದರೂ ಇದೆಯೇ ಎಂದು ನೋಡಿದರು.

ಅವರಿಗೆ ದೂರದಲ್ಲೊಂದು ಸಣ್ಣ ಮನೆ ಕಾಣಿಸಿತು. ಅಲ್ಲಿ ಹೋಗಿ ಬಾಗಿಲು ತಟ್ಟಿದರು.`ನಾವು ಮುಂದಿನೂರಿಗೆ ಹೋಗಬೇಕಾಗಿದೆ. ಈಗ ಹಸಿವೆಯಾಗಿದೆ. ಏನಾದರೂ ಸಿಗಬಹುದಾ?’ ಎಂದು ಕೇಳಿದರು. ಮನೆಯಲ್ಲಿ ಒಬ್ಬ ವ್ಯಕ್ತಿ, ಅವನ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದರು. ಮೂವರೂ ಹಾಕಿದ ಬಟ್ಟೆ ಅವರ ಬಡತನವನ್ನು ಎತ್ತಿ ತೋರಿಸುತ್ತಿತ್ತು. ಆದರೂ ಬಂದ ಅತಿಥಿಗಳನ್ನು ಗೌರವದಿಂದಲೇ ನೋಡಿಕೊಂಡರು. ಮತ್ತು ಆ ರಾತ್ರಿ ಅಲ್ಲೇ ಉಳಿದು ಮರುದಿನ ಮುಂಜಾನೆ ಪ್ರಯಾಣ ಮುಂದುವರಿಸುವಂತೆ ಕೇಳಿಕೊಂಡರು.

ಆವತ್ತು ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದ್ದರು. ಮಧ್ಯರಾತ್ರಿ ಮೆಲ್ಲಗೆ ಎದ್ದ ಗುರುಗಳು, ಶಿಷ್ಯನನ್ನೂ ಎಬ್ಬಿಸಿದರು. ʻಈ ಮನೆಯಲ್ಲೊಂದು ದನ ಇದೆ. ಅದನ್ನು ಹಿಡಿದುಕೊಂಡು ನಾವು ಓಡಿಹೋಗೋಣ’ ಎಂದರು ಗುರುಗಳು. ಶಿಷ್ಯ ವಿರೋಧಿಸಿದ. `ʻಗುರುಗಳೇ ಇವರು ತುಂಬ ಬಡವರು. ಅವರ ಜೀವನಕ್ಕೆ ಆಸರೆಯಾಗಿರುವುದೊಂದೇ ದನ. ಅದರ ಹಾಲು ಮಾರಿಯೇ ಇವರು ಬದುಕುತ್ತಿರುವುದು. ಅದನ್ನೇ ಕಿತ್ತುಕೊಳ್ಳುವುದು ಅನ್ಯಾಯ. ಅದಕ್ಕಿಂತಲೂ ಹೆಚ್ಚಾಗಿ ನಾವು ಕಳ್ಳರಾಗುತ್ತೇವೆ,” ಎಂದ. ಆದರೆ, ಗುರುಗಳು ಒಪ್ಪಲಿಲ್ಲ.

ಯಜಮಾನ ಬೆಳಗ್ಗೆ ಎದ್ದು ನೋಡಿದಾಗ ದನ ಇಲ್ಲದ್ದನ್ನು ಕಂಡು ಗೋಳಾಡಿದ. ಅಯ್ಯೋ ಗುರುಗಳು ಎಂದು ನಂಬಿ ಮೋಸ ಹೋದೆ. ಅವರಿಗೆ ಆಶ್ರಯ ಕೊಟ್ಟದ್ದಕ್ಕೆ, ಉಂಡ ಮನೆಗೇ ಎರಡು ಬಗೆದರಲ್ಲಾ ಎಂದು ಬೇಜಾರು ಮಾಡಿಕೊಂಡ. ತಲೆ ಮೇಲೆ ಕೈ ಇಟ್ಟುಕೊಂಡ.

ಇದಾಗಿ ಐದು ವರ್ಷದ ಬಳಿಕ ಅದೇ ಗುರು-ಶಿಷ್ಯರು ಅದೇ ದಾರಿಯಾಗಿ ಬಂದರು. ನೋಡಿದರೆ ಹಳೆಯ ಗುಡಿಸಲಿನ ಜಾಗದಲ್ಲಿ ಒಂದು ದೊಡ್ಡ ಮನೆ ಇದೆ. ಎದುರಿನ ಗದ್ದೆಯಲ್ಲಿ ನಳನಳಿಸುವ ತರಕಾರಿಗಳು!

ಮನೆಗೆ ಬಂದ ಅತಿಥಿಗಳನ್ನು ಅದೇ ಯಜಮಾನ ಮತ್ತು ಮಕ್ಕಳು ಪ್ರೀತಿಯಿಂದ ಆದರಿಸಿದರು. ಮತ್ತು ತಮ್ಮ ಬದುಕಿನ ಕಥೆಯನ್ನು ಹೇಳಿದರು.

ಐದು ವರ್ಷದ ಹಿಂದೆ ನಿಮ್ಮ ಹಾಗೆಯೇ ಗುರು-ಶಿಷ್ಯರು ಬಂದಿದ್ದರು. ನಮಗೆ ಆಸರೆಯಾಗಿದ್ದ ಒಂದೇ ಒಂದು ಹಸುವನ್ನು ಅವರು ಕದ್ದೊಯ್ದರು. ನಮಗೆ ಅದು ಬಿಟ್ಟರೆ ಬೇರೆ ಯಾವುದೇ ಆದಾಯ ಮೂಲ ಇರಲಿಲ್ಲ. ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಗ ನನ್ನ ಪುಟ್ಟ ಮಗ ಹೇಳಿದ: ಅಪ್ಪಾ, ಎದುರುಗಡೆ ಪಾಳು ಬಿಟ್ಟಿರುವ ಭೂಮಿಯಲ್ಲಿ ತರಕಾರಿ ಬೆಳೆಯೋಣ ಅಪ್ಪ, ಎಲ್ಲರೂ ಸೇರಿ ದುಡಿಯೋಣ ಅಂದ. ದನವನ್ನು ಕಳೆದುಕೊಂಡಿದ್ದ ನನಗೆ ಅದೇ ಸರಿ ಅನಿಸಿತು. ಮೊದಲು ಕೆಲವೇ ದಿನದಲ್ಲಿ ಬೆಳೆಯುವ ಸೊಪ್ಪು ತರಕಾರಿಗಳನ್ನು ಬೆಳೆದು ಮಾರಾಟ ಮಾಡಿದೆ. ಮುಂದೆ ದೀರ್ಘಕಾಲಿಕ ಬೆಳೆಗಳನ್ನು ಮಾಡಿದೆ. ಈಗ ನಾನು ಈ ಊರಿನಲ್ಲಿ ಒಳ್ಳೆಯ ಕೃಷಿಕನಾಗಿದ್ದೇನೆ. ಇದಕ್ಕೆಲ್ಲ ದನ ಕದ್ದುಕೊಂಡು ಹೋದ ಆ ಗುರುಗಳಿಗೆ ಧನ್ಯವಾದ ಹೇಳಬೇಕು-ಎಂದ.

ಆವತ್ತು ಅಲ್ಲೇ ಉಳಿದ ಗುರು ಶಿಷ್ಯರು ಮರುದಿನ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಗುರುಗಳು ಶಿಷ್ಯನಿಗೆ ಹೇಳಿದರು: ಐದು ವರ್ಷದ ಹಿಂದೆ ಆ ಮನೆಗೆ ಹೋದಾಗ ಅವರ ಬಡತನಕ್ಕೆ ನಿರುತ್ಸಾಹಿ ಮತ್ತು ಆಲಸ್ಯದ ಜೀವನವೇ ಕಾರಣ ಎಂದು ನನಗೆ ಅನಿಸಿತು. ಮನೆ ಎದುರಿನ ಜಾಗ ಅವರದೆಂದೂ ತಿಳಿಯಿತು. ಆದರೆ ಪಾಳು ಬಿಟ್ಟಿದ್ದರು. ದನದಿಂದ ಸಿಗುವ ಆದಾಯ ಸಾಕು ಎನ್ನುವ ಸೀಮಿತತೆ ಅವರದಾಗಿತ್ತು. ಅದನ್ನು ಕಿತ್ತುಕೊಂಡರೆ ಮಾತ್ರ ಅವರು ಬೇರೆ ಆಯ್ಕೆಗಳ ಬಗ್ಗೆ ಯೋಚಿಸುತ್ತಾರೆ ಅಂತ ನಾನು ತೀರ್ಮಾನ ಮಾಡಿ.. ದನವನ್ನು ಆ ಮನೆಯಿಂದ ತಪ್ಪಿಸಲು ನಿರ್ಧರಿಸಿದೆ.

ಶಿಷ್ಯ ಹೇಳಿದ: ನನಗೆ ಆವತ್ತು ಇದೆಲ್ಲ ಅರ್ಥವಾಗಲಿಲ್ಲ. ಮನುಷ್ಯ ಅನಿವಾರ್ಯತೆಗೆ ಬಿದ್ದಾಗಲೇ ಹೊಸ ಯೋಚನೆ ಮಾಡುತ್ತಾನೆ ಅಂತ ಇವತ್ತು ಅರ್ಥವಾಯಿತು.

ಅಷ್ಟು ಹೊತ್ತಿಗೆ ಶಿಷ್ಯನಲ್ಲೂ ನಾನೇಕೆ ಗುರುವಾಗಬಾರದು ಎಂಬ ಸಣ್ಣ ಆಸೆಯೊಂದು ಮೊಳಕೆಯೊಡೆಯಿತು.

ಇದನ್ನೂ ಓದಿ | Motivational story| ದೇವರು ಒಂದಿಡೀ ದಿನ ನಮ್ಮ ಜತೆಗೇ ಸುತ್ತಾಡಿದರೆ ಹೇಗಿರ್ತದೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Juice Jacking: ‘ಜ್ಯೂಸ್ ಜಾಕಿಂಗ್​’ ಎಂದು ಕರೆಯುವ ಹ್ಯಾಕಿಂಗ್ ಮಾದರಿ ಮೂಲಕ ಡೇಟಾ ಸುರಕ್ಷತಾ ಬೆದರಿಕೆಗಳು ಹೆಚ್ಚಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಯುಎಸ್​ಸಿಬಿ ಚಾರ್ಚರ್​ಗಳ ಮೂಲಕ ಮೊಬೈಲ್ ಮತ್ತು ಲ್ಯಾಪ್​ಟಾಪ್ ಚಾರ್ಜ್ ಮಾಡದಂತೆ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಸೂಚನೆ ನೀಡಿದೆ. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸುವ ಮೂಲಕ ಅಥವಾ ಅವರ ಹಾರ್ಡ್​ವೇರ್​ ಬದಲಾಯಿಸುವ ಮೂಲಕ ಮಾಹಿತಿ ಕದಿಯುತ್ತಾರೆ. ಬ್ಯಾಂಕ್​ ಸೇರಿದಂತೆ ಎಲ್ಲ ಡೇಟಾವನ್ನು ಕದಿಯಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.

VISTARANEWS.COM


on

Juce Jacking
Koo

ಬೆಂಗಳೂರು: ವ್ಯಕ್ತಿಗಳು ತಮ್ಮ ಫೋನ್​​ನ ಬ್ಯಾಟರಿ ಕಡಿಮೆಯಾದಾಗ ಚಾರ್ಜಿಂಗ್ ಪೋರ್ಟ್​ಗಳೊಂದಿಗೆ ಸಮೀಪದ ಕಾಫಿ ಶಾಪ್​ಗಳು, ಮಾಲ್​ಗಳು ಸೇರಿದಂತೆ ನಾನಾ ಕಡೆ ಹೋಗಿ ಕುಳಿತು ಚಾರ್ಚ್ ಮಾಡಲು ಯತ್ನಿಸುತ್ತಾರೆ. ಆದರೆ, ಇದು ಅತ್ಯಂತ ಅಪಾಯಕಾರಿ ನಡೆ ಎಂಬುದನ್ನು ವರ್ಷಗಳ ಹಿಂದಿನಿಂದಲೇ ಹೇಳುತ್ತಾ ಬರಲಾಗುತ್ತಿದೆ. ಆದಾಗ್ಯೂ ಜನರ ಹವ್ಯಾಸ ಕಡಿಮೆಯಾಗದಿರುವ ಕಾರಣ ಸರ್ಕಾರ ಪದೇ ಪದೆ ಎಚ್ಚರಿಕೆ ನೀಡುತ್ತಿದೆ. ಇದು ನಿಮ್ಮ ಮಾಹಿತಿಯನ್ನು ಕದಿಯಲು ಸೈಬರ್ ಕಳ್ಳರಿಗೆ ಅವಕಾಶ ಕೊಟ್ಟ (Juice Jacking) ಹಾಗೆ ಎಂದು ಹೇಳಲಾಗುತ್ತದೆ. ಅಂತೆಯೇ ಇದೀಗ ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್​ (CRET-in) ಹೊಸ ಸೂಚನೆ (Juice Jacking) ನೀಡಿದ್ದು ಈ ರೀತಿಯ ಸಾಮಾನ್ಯ ಅಭ್ಯಾಸಗಳು ಸೈಬರ್ ವಂಚನೆಗೆ ಬಲಿಯಾಗುವಂತೆ ಮಾಡಬಹುದು ಎಂದು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) kUw ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಸಾರ್ವಜನಿಕ ಚಾರ್ಜರ್​ಗಳ ಮೂಲಕ ತಮ್ಮ ಎಲೆಕ್ಟ್ರಾನಿಕ್​ ಸಾಧನಗಳನ್ನು ಚಾರ್ಜ್ ಮಾಡದಂತೆ ಸಲಹೆ ನೀಡಿತ್ತು. “ಜ್ಯೂಸ್ ಜಾಕಿಂಗ್” (Juice Jacking) ಸೈಬರ್ ದಾಳಿಯಿಂದ ಉಂಟಾಗುವ ಭದ್ರತಾ ಸುರಕ್ಷತೆಯ ಆತಂಕದ ಕಾರಣಕ್ಕೆ ಈ ಎಲ್ಲ ಸಂಸ್ಥೆಗಳು ಎಚ್ಚರಿಕೆಗಳನ್ನು ನೀಡುತ್ತಿವೆ.

ಜ್ಯೂಸ್ ಜಾಕಿಂಗ್ ಎಂದರೇನು?

“ಜ್ಯೂಸ್ ಜಾಕಿಂಗ್” ಎಂಬ ಪದವನ್ನು ಮೊದಲು 2011 ರಲ್ಲಿ ಸೈಬರ್ ಭದ್ರತಾ ತಜ್ಞ ಬ್ರಿಯಾನ್ ಕ್ರೆಬ್ ರಚಿಸಿದ್ದಾರೆ. ಇದು ಒಂದು ರೀತಿಯ ಸೈಬರ್ ದಾಳಿಯಾಗಿದ್ದು. ಹ್ಯಾಕರ್​ಗಳು ಸಾರ್ವಜನಿಕ ಯುಎಸ್​ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್ವೇರ್ ಅನ್ನು ಸ್ಥಾಪಿಸಿ ಮಾಹಿತಿ ಕದಿಯುವ ಮಾದರಿ ಇದು. ಯಾರಿಗೂ ಗೊತ್ತಿಲ್ಲದೇ ಇಲ್ಲಿ ಲಿಂಕ್ ಮಾಡಿದ ಸಾಧನಗಳಿಂದ ಡೇಟಾವನ್ನು ಕದಿಯಲಾಗುತ್ತದೆ.

ಪ್ರಮುಖವಾಗಿ ವಿಳಾಸಗಳು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಪಾಸ್ವರ್ಡ್​ಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಹ್ಯಾಕರ್​ಗಳು ಪಡೆಯುತ್ತಾರೆ. ಮಾಲ್ ಗಳು, ಹೋಟೆಲ್ ಗಳು, ಕೆಫೆಗಳು ಮತ್ತು ವಿಮಾನ ನಿಲ್ದಾಣಗಳು ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ದಾಳಿಗಳು ಸುಲಭವಾಗಿ ನಡೆಯುತ್ತವೆ.

ಇದನ್ನೂ ಓದಿ: Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಕಿಯೋಸ್ಕ್​ನ ಪರದೆಯ ಮೇಲೆ ಉಚಿತ ಸೆಲ್ ಫೋನ್ ಚಾರ್ಜಿಂಗ್ ಸ್ಟೇಷನ್ ಎಂದು ಬರೆದಿರುತ್ತದೆ. ಆದರೆ ಗ್ರಾಹಕರು ತಮ್ಮ ಫೋನ್​ಗಳನ್ನು ಪ್ಲಗ್ ಇನ್ ಮಾಡಿದ ತಕ್ಷಣ ಮಾಲ್ವೇರ್​ಗಳನ್ನು ಅಪ್​ಲೋಡ್ ಮಾಡಿ ಮಾಹಿತಿ ಕದಿಯುತ್ತಾರೆ.

ಇದು ಹೇಗೆ ಕೆಲಸ ಮಾಡುತ್ತದೆ?

ಮಾಹಿತಿಯೇ ಇರುವುದಿಲ್ಲ: ಇಂಥ ಚಾರ್ಜಿಂಗ್ ಪಾಯಿಂಟ್​ಗಳ ಮೂಲಕ ಜನರನ್ನು ಸುಲಭವಾಗಿ ವಂಚಿಸಬಹುದು. ಯಾಕೆಂದರೆ ಇಲ್ಲಿಗೆ ಚಾರ್ಜ್ ಮಾಡಲು ಬರುವವರಿಗೆ ಸಣ್ಣ ಅರಿವು ಕೂಡ ಇರುವುದಿಲ್ಲ. ಅವರೆಲ್ಲರಿಗೆ ಮಾಹಿತಿ ಕದ್ದರೂ ಗೊತ್ತಾಗುವುದಿಲ್ಲ.

ಡೇಟಾ ಕಳ್ಳತನ: ಹ್ಯಾಕರ್​ಗಳ ಮೋಸಕ್ಕೆ ಬಲಿಯಾಗುವ ಬಳಕೆದಾರರು ತಮ್ಮ ಸಾಧನವನ್ನು ಹ್ಯಾಕ್ ಮಾಡಿದ ಚಾರ್ಜಿಂಗ್ ಸಂಪರ್ಕಕ್ಕೆ ಸಂಪರ್ಕಿಸಿದ ತಕ್ಷಣ ದುರುದ್ದೇಶಪೂರಿತ ಸಾಫ್ಟ್ ವೇರ್ ಅಥವಾ ಹಾರ್ಡ್ ವೇರ್ ಸಂಪರ್ಕಿತ ಸಾಧನಕ್ಕೆ ಲೋಡ್ ಆಗುತ್ತದೆ. ಅದರ ಮೂಲಕ ಕಾಲಕಾಲಕ್ಕೆ ಮಾಹಿತಿ ಕದಿಯಬಹುದು.

ಮಾಲ್ವೇರ್ ಇಂಜೆಕ್ಷನ್: ಕೆಲವು ಹಗರಣಗಳಲ್ಲಿ, ವ್ಯಕ್ತಿಯ ಫೋನ್ ಅಥವಾ ಟ್ಯಾಬ್ಲೆಟ್ ಮಾಲ್ವೇರ್​ಗಳಿಂದ ತುಂಬಿಕೊಳ್ಳುತ್ತದೆ. ಅಂಥ ಸಾಧನಗಳ ಮಾಹಿತಿ ಸೋರಿಕೆಯಾಗುವ ಜತೆಗೆ ಬಳಕೆ ಮಾಡಲಾಗದ ಸ್ಥಿತಿಗೆ ಬರುತ್ತದೆ.

ನೀವು ಏನು ಮಾಡಬಹುದು?

ಜ್ಯೂಸ್-ಜಾಕಿಂಗ್ ಹಗರಣಕ್ಕೆ ಬಲಿಯಾಗದಂತೆ ರಕ್ಷಿಸಲು ನೀವು ಇನ್ನೂ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು. “ಯುಎಸ್​ಬಿ ಕಾಂಡೋಮ್​ಗಳು ” ಎಂದೂ ಕರೆಯಲ್ಪಡುವ ಯುಎಸ್​ಬಿ ಡೇಟಾ ಬ್ಲಾಕರ್​ಗಳನ್ನು ಬಳಸಬೇಕು. ಅವು ಸಣ್ಣ ಅಡಾಪ್ಟರ್​ಗಳು. ಅವು ಡೇಟಾದ ಹರಿವನ್ನು ತಡೆಗಟ್ಟುವ ಜತೆಗೆ ಚಾರ್ಜಿಂಗ್​ಗೆ ಮಾತ್ರ ಅವಕಾಶ ಕೊಡತ್ತದೆ. ಚಾರ್ಜಿಂಗ್ ಮಾಡುವಾಗ ಯಾವುದೇ ಡೇಟಾ ವಿನಿಮಯವನ್ನು ಸಾಧ್ಯವಿಲ್ಲ.

ಸಿಇಆರ್​ಟಿ ಎಚ್ಚರಿಕೆಯೇನು?

  • ಸೈಬರ್ ಅಪರಾಧಿಗಳು ವಿಮಾನ ನಿಲ್ದಾಣಗಳು, ಕೆಫೆಗಳು, ಹೋಟೆಲ್ ಗಳು ಮತ್ತು ಬಸ್ ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಗಳನ್ನು ದುರುದ್ದೇಶಪೂರಿತ ಚಟುವಟಿಕೆಗಳಿಗೆ ಬಳಸಬಹುದು.
  • ಅಂತಹ ಸೋಂಕಿತ ಯುಎಸ್ ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನವನ್ನು ಚಾರ್ಜ್ ಮಾಡಿದರೆ, ನೀವು ಜ್ಯೂಸ್-ಜಾಕಿಂಗ್ ಸೈಬರ್ ದಾಳಿಗೆ ಬಲಿಯಾಗಬಹುದು.

ಉತ್ತಮ ಅಭ್ಯಾಸಗಳು

  • ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಅಥವಾ ಪೋರ್ಟಬಲ್ ವಾಲ್ ಚಾರ್ಜರ್ ಗಳಿಗೆ ಪ್ಲಗ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಚಾರ್ಜ್ ಮಾಡಲು ಎಲೆಕ್ಟ್ರಿಕಲ್ ವಾಲ್ ಔಟ್ ಲೆಟ್ ಬಳಸಿ.
  • ನಿಮ್ಮ ಸ್ವಂತ ವೈಯಕ್ತಿಕ ಕೇಬಲ್ ಅಥವಾ ಪವರ್ ಬ್ಯಾಂಕ್ ಅನ್ನು ಒಯ್ಯಲು ಪ್ರಯತ್ನಿಸಿ.
  • ನಿಮ್ಮ ಮೊಬೈಲ್ ಸಾಧನವನ್ನು ಲಾಕ್ ಮಾಡಿ ಮತ್ತು ಸಂಪರ್ಕಿತ ಸಾಧನದೊಂದಿಗೆ ಜೋಡಿಸುವುದನ್ನು ನಿಷ್ಕ್ರಿಯಗೊಳಿಸಿ.
  • ನಿಮ್ಮ ಫೋನ್ ಸ್ವಿಚ್ ಆಫ್ ಸ್ಥಿತಿಯಲ್ಲಿದ್ದಾಗ ಅದನ್ನು ಚಾರ್ಜ್ ಮಾಡಲು ಪ್ರಯತ್ನಿಸಿ.
    ಸೈಬರ್ ವಂಚನೆ ಘಟನೆಯನ್ನು https://www.cybercrime.gov.in ಗಂಟೆಗೆ ವರದಿ ಮಾಡಿ ಅಥವಾ 1930 ಗೆ ಕರೆ ಮಾಡಿ
    ಭದ್ರತೆ ನಮ್ಮ ಮೊದಲ ಆದ್ಯತೆ
    ಹೆಚ್ಚಿನ ಸುರಕ್ಷತಾ ಸಲಹೆಗಳಿಗಾಗಿ ಭೇಟಿ ನೀಡಿ: https://www.cert-in.org.in ಮತ್ತು https://www.csk.gov.in
Continue Reading

Lok Sabha Election 2024

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Lok Sabha Election 2024: ಗೃಹ ಸಚಿವ ಅಮಿತ್‌ ಶಾ ವಿರುದ್ಧ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾಡಿರುವ ಆರೋಪಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಎನ್.‌ ರವಿಕುಮಾರ್‌ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೌಡಿ, ಗೂಂಡಾ ಎಂಬೆಲ್ಲ ಪದ ಬಳಕೆಯನ್ನು ಮಾಡಿದ್ದಾರೆ. ಅಲ್ಲದೆ, ಕೊಲೆಗಡುಕರು ಎಂದೂ ಹೇಳಿದ್ದಾರೆ. ಹೀಗಾಗಿ ಯತೀಂದ್ರ ಅವರು ತಮ್ಮ ಹೇಳಿಕೆಯಲ್ಲಿ ಮಾಡಲಾಗಿರುವ ಆರೋಪವನ್ನು ನಿರೂಪಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

VISTARANEWS.COM


on

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಭಾಷಣದಲ್ಲಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ (BJP Karnataka) ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿರುದ್ಧ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗವು ದೂರು ನೀಡಿದೆ. ಈಗ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಅವರು ತಮ್ಮ ಹೇಳಿಕೆಯನ್ನು ಸಾಬೀತು ಮಾಡಬೇಕು. ಸಾಬೀತುಪಡಿಸುವಲ್ಲಿ ಅವರು ವಿಫಲವಾದರೆ ಚುನಾವಣಾ ಆಯೋಗವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಎನ್. ರವಿಕುಮಾರ್, ಮಾ. 28ರಂದು ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಅಮಿತ್ ಶಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರೌಡಿ, ಗೂಂಡಾ ಎಂಬೆಲ್ಲ ಪದ ಬಳಕೆಯನ್ನು ಮಾಡಿದ್ದಾರೆ. ಅಲ್ಲದೆ, ಕೊಲೆಗಡುಕರು ಎಂದೂ ಹೇಳಿದ್ದಾರೆ. ಹೀಗಾಗಿ ಯತೀಂದ್ರ ಅವರು ತಮ್ಮ ಹೇಳಿಕೆಯಲ್ಲಿ ಮಾಡಲಾಗಿರುವ ಆರೋಪವನ್ನು ನಿರೂಪಿಸಬೇಕು. ಇಲ್ಲವಾದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಗೃಹ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಂದನೀಯ ಪದವನ್ನು ಬಳಕೆ ಮಾಡಲಾಗಿದೆ. ಖಂಡನೀಯ. ಈ ಬಗ್ಗೆ ದೂರು ನೀಡಿದ್ದೇವೆ. ಯತೀಂದ್ರ ಅವರು 153a, 153b, 171c, 295a, 505(2) ಈ ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ತಂದಾಗ ಅವರು ಇವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಮೊದಲ ಬಾರಿ ಮಾತನಾಡಿದ್ದಾರೆ. ಈ ಹಿಂದೆ ಈ ರೀತಿ ಮಾತನಾಡಿರುವವರ ವಿರುದ್ಧ ಕ್ರಮ ಆಗಿದೆ. ಇವರ ವಿರುದ್ಧವೂ ಕ್ರಮ ಆಗಬೇಕು. ಇಲ್ಲದೆ ಹೋದರೆ ಬಿಜೆಪಿಯಿಂದ ಉಗ್ರ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದು ರವಿಕುಮಾರ್‌ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಗುರುವಾರ (ಮಾ. 28) ಹನೂರಿನ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒಬ್ಬ ಗೂಂಡಾ, ರೌಡಿ ಎಂದು ಹೇಳಿಕೆ ನೀಡಿದ್ದರು. ಗುಜರಾತ್‌ನಲ್ಲಿ ನಡೆದಿದ್ದ ನರಮೇಧದ ರೂವಾರಿ ಎಂಬ ಆರೋಪವನ್ನು ಅಮಿತ್‌ ಹೊತ್ತಿದ್ದಾರೆ. ಅವರು ಈಗ ದೇಶದ ಉನ್ನತ ಸ್ಥಾನದಲ್ಲಿದ್ದು, ಇಂತಹವರನ್ನು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಹನೂರಿನಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಯತೀಂದ್ರ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಇದಕ್ಕೆ ಈಗ ರಾಜ್ಯ ಬಿಜೆಪಿ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ, ಈಗ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.

ಬಿಜೆಪಿ ನಾಯಕರ ವಾಗ್ದಾಳಿ

ಯತೀಂದ್ರ ಅವರ ಹೇಳಿಕೆಯನ್ನು ಖಂಡಿಸಿ ಬಿಜೆಪಿ ನಾಯಕರು ತೀವ್ರ ವಾಗ್ದಾಳಿಯನ್ನು ನಡೆಸಿದ್ದರು. ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದೂ ಹೇಳಿದ್ದರು. ಅಲ್ಲದೆ, ಆಯೋಗಕ್ಕೆ ದೂರು ನೀಡುವುದಾಗಿಯೂ ಶುಕ್ರವಾರ ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಯತೀಂದ್ರ ಕ್ಷಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹ

ಯತೀಂದ್ರ ವಿರುದ್ಧ ದೂರು ಕೊಡುತ್ತೇವೆ: ಅಶೋಕ್

ಯತೀಂದ್ರ ಸಿದ್ದರಾಮಯ್ಯ ಅವರಿಗೆ ಇನ್ನೂ ಮೆಚ್ಯುರಿಟಿ, ಬುದ್ಧಿ ಇಲ್ಲ. ಯಾರ ಬಗ್ಗೆ ಮಾತಾಡಬೇಕು ಎಂಬ ಬಗ್ಗೆ ಗೊತ್ತಿಲ್ಲ, ಸ್ಥಾನಮಾನ ಇಲ್ಲದ ವ್ಯಕ್ತಿ. ಅಮಿತ್ ಶಾ ಈ ದೇಶದ ಗೃಹ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಹಿಂದಿನಿಂದಲೂ ಕೊಟ್ಟುಕೊಂಡು ಬರುತ್ತಿದೆ. ಸಿದ್ದರಾಮಯ್ಯ ಅವರ ಮಗ ಎಂಬ ಕಾರಣಕ್ಕೆ ಬಾಲಿಶ ಹೇಳಿಕೆ ನೀಡಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಅವರು ಜೈಲು ಶಿಕ್ಷೆಯನ್ನು ಅನುಭವಿಸುವ ಹಂತಕ್ಕೆ ಬಂದಿದ್ದಾರೆ. ಇವರ ಡಿಎನ್ಎನಲ್ಲೇ ಇಂತಹ ವಿಚಾರಗಳು ಬಂದಿದೆ. ಇವರ ವಿರುದ್ಧ ದೂರು ನೀಡುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆ: ಸಿಟಿ ರವಿ

ಅಪ್ಪನ ಹೆಸರ ಮೇಲೆ ಅಧಿಕಾರಕ್ಕೆ ಬಂದವರು ಹೀಗೆಯೇ ಮಾತನಾಡುತ್ತಾರೆ. ಎಂದಾದರೂ ಪಕ್ಷದ ಕೆಲಸ ಮಾಡಿದ್ದಾರಾ? 1982ರಲ್ಲಿ ಅಮಿತ್ ಶಾ ಬೂತ್ ಅಧ್ಯಕ್ಷ ಆಗಿದ್ದರು. ಆಗ ಇವರಪ್ಪ ಎಂಎಲ್‌ಎ ಕೂಡ ಆಗಿರಲಿಲ್ಲ. ಅಪ್ಪನ ದುಡ್ಡಿನ ಮೇಲೆ ಶಾಸಕ ಆದವರು‌ ಇವರು. ನಾವು ವಿದ್ಯಾರ್ಥಿಗಳಾಗಿದ್ದಾಗ ವಿದ್ಯಾರ್ಥಿ ನಾಯಕರಾಗಿದ್ದೆವು. ಆಗ ನಮ್ಮ ಮೇಲೂ ಗೂಂಡಾ ಕೇಸ್‌ ಹಾಕಿದ್ದರು. ಹಾಗಾದರೆ ನಾನು ಗೂಂಡಾನಾ? ಅಪ್ಪನ ಹೆಸರು ಹೇಳಿಕೊಂಡು, ಅಧಿಕಾರ ಚಲಾಯಿಸುವವರಿಗೆ ಬಡವರ ಕಷ್ಟ ಕಾಣಿಸುತ್ತಾ? ಎಂದು ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Narendra Modi: ಮೋದಿ ಜತೆ ಚಾಟ್; ಭಾರತದ ಡಿಜಿಟಲ್ ಕ್ರಾಂತಿಗೆ ಬಿಲ್ ಗೇಟ್ಸ್ ಶ್ಲಾಘನೆ

ಕೂಡಲೇ ಯತೀಂದ್ರ ಕ್ಷಮೆ ಯಾಚಿಸಲಿ: ಅಶ್ವಥ್ ನಾರಾಯಣ್

ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಮಾತಿನ ಮೇಲೆ, ನಡವಳಿಕೆ ಮೇಲೆ ನಿಲ್ಲಬೇಕು. ಮಾತಿನಲ್ಲಿ ಲಕ್ಷ್ಮಣ ರೇಖೆ ಇರಬೇಕು. ಎಲ್ಲಿಯೂ ಎಲ್ಲೆ ಮೀರಿದ ಮಾತನಾಡಬಾರದು. ಯತೀಂದ್ರ ಅವರ ಇಂಥ ಕೀಳು ಮಟ್ಟದ ರಾಜಕೀಯ ಹೇಳಿಕೆಯನ್ನು ವಿರೋಧಿಸುತ್ತೇವೆ. ಅಲ್ಲದೆ, ನಮ್ಮ ಗೃಹ ಸಚಿವ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿದ್ದಕ್ಕೆ ಯತೀಂದ್ರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವ ಡಾ. ಸಿ.ಎನ್.‌ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.

ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ: ಡಿವಿಎಸ್‌

ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಮಾತನಾಡಿ, ಬೈಗುಳದಿಂದ ರಾಜಕಾರಣ ಮಾಡುವುದಾದರೆ ಅನೇಕರು ರಾಜಕಾರಣವನ್ನು ಮಾಡಬಹುದಿತ್ತು. ಬೈಗುಳದಿಂದ ರಾಜಕಾರಣ ಮಾಡುವವರ ಸಾಲಿಗೆ ಯತೀಂದ್ರ ಸೇರಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ, ದೊಡ್ಡ ರಾಜಕಾರಣಿ ಆಗುತ್ತೇನೆ ಎಂದು ಭಾವಿಸಿದರೆ ಕೊನೇ ಮೊಳೆ ಆಗಲಿದೆ. ಅವರ ತಂದೆ ಮಂಡಿಸಿದ ಬಜೆಟ್ ಬಗ್ಗೆ ಮಾತಾಡಲಿ. ಅದು ಬಿಟ್ಟು ಬಿಜೆಪಿ, ಬಿಜೆಪಿ ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮಗನಾಗಿ, ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ ಎಂದು ಕಿವಿಮಾತು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು Income Tax: ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

VISTARANEWS.COM


on

income Tax - how to save tax
Koo

ಬೆಂಗಳೂರು: 2023-24ರ ಹಣಕಾಸು ವರ್ಷವು ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದೆ. ಇದೇ ವೇಳೆ ಆದಾಯ ತೆರಿಗೆ (Income Tax) ಕಟ್ಟುವವರಿಗೆ ಹಣಕಾಸು ವರ್ಷದಲ್ಲಿ ತಮ್ಮ ಟ್ಯಾಕ್ಸ್​ಗಳನ್ನು (Tax Savings) ಉಳಿಸಲು ಕೊನೆಯ ಅವಕಾಶ ಇದು. ಆದರೆ ಸಾಕಷ್ಟು ಮಂದಿ ಕೊನೆಯ ಕ್ಷಣದ ಅವಸರದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಈ ಬಾರಿ ಆ ರೀತಿ ಮಾಡಬೇಡಿ. ಮಾರ್ಚ್ 31ರ ಗಡುವು ಹತ್ತಿರದಲ್ಲಿರುವುದರಿಂದ ಏನು ಮಾಡಬೇಕು ಎಂಬುದನ್ನು ಪರಿಣತರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಮಾರ್ಚ್ 31ರಿಂದ ಕೇವಲ ಒಂದೆರಡು ದಿನಗಳು ಮಾತ್ರ ಇರುವುದರಿಂದ ಹೂಡಿಕೆ ಸಲಹೆಗಾರರು, ತೆರಿಗೆ ಸಲಹೆಗಾರರು ಮತ್ತು ತೆರಿಗೆದಾರರು ಬ್ಯುಸಿಯಾಗಿರುತ್ತಾರೆ. ಹೀಗಾಗಿ ತೆರಿಗೆ ಲಾಭವನ್ನು ಪಡೆಯಲು ತೆರಿಗೆ ಉಳಿತಾಯ ಹೂಡಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡಲೇಬೇಕು ಎಂದು ಹೇಳುತ್ತಾರೆ.

ಆದಾಯ ತೆರಿಗೆ ಕಾಯ್ದೆ, 1961, ಪಿಪಿಎಫ್, ಎಲ್ಐಸಿ ಪ್ರೀಮಿಯಂಗಳು, ಫಿಕ್ಸೆಡ್​ ಡೆಪಾಸಿಟ್​ಗಳು, ಇಎಲ್ಎಸ್ಎಸ್, ಯುಲಿಪ್, ಎನ್ಎಸ್ಸಿ ಮುಂತಾದ ನಿರ್ದಿಷ್ಟ ಸೆಕ್ಯುರಿಟಿಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು ಎಂದು ರೌಟೆ ಹೇಳುತ್ತಾರೆ.

ಹೂಡಿಕೆ ಮಾಡುವಾಗ ಪ್ರತಿಯೊಬ್ಬರು ಸಮಗ್ರ ಮತ್ತು ದೀರ್ಘಕಾಲೀನ ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಹೂಡಿಕೆ ಮೇಲಿನ ಆದಾಯ, ಲಾಕ್-ಇನ್ ಅವಧಿ ಸೇರಿದಂತೆ ಹಲವಾರು ಮಾನದಂಡಗಳನ್ನು ಹೊಂದಿರುವ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ತೆರಿಗೆ ಲಾಭ ದೊರೆಯುವುದು. ಉದಾಹರಣೆಗೆ ಪಿಪಿಎಫ್ ತೆರಿಗೆ ಮುಕ್ತ ಉತ್ತಮ ಆದಾಯ ನೀಡುತ್ತದೆ. ಆದರೆ ತೆರಿಗೆದಾರರು ವಾರ್ಷಿಕವಾಗಿ ಕನಿಷ್ಠ 500 ರೂ.ಗಳನ್ನು ಪಾವತಿ ಮಾಡಲೇಬೇಕು. ಆದರೆ ಇದಕ್ಕೆ 15 ವರ್ಷಗಳ ಲಾಕ್-ಇನ್ ಅವಧಿಯೂ ಇದೆ. ಒಂದು ಬಾರಿ ಹೂಡಿಕೆ ಮಾಡಿ ಮತ್ತೆ ನಿಲ್ಲಿಸಿದರೆ ಅಥವಾ ಮಧ್ಯದಲ್ಲಿಯೇ ವಾಪಸ್ ಪಡೆಯಲು ಪ್ರಯತ್ನಿಸಿದರೆ ನಷ್ಟವೇ ಹೆಚ್ಚು.

ತೆರಿಗೆ ಉಳಿತಾಯ ಅನುಕೂಲ ನೀಡುವ ಸ್ಥಿರ ಠೇವಣಿಗಳು ಕಡಿಮೆ ಬಡ್ಡಿದರವನ್ನು ನೀಡುತ್ತವೆ. ಆದರೆ ಇದು ಸುಮಾರು 5 ವರ್ಷಗಳವರೆಗೆ ಲಾಕ್-ಇನ್ ಹೊಂದಿರುತ್ತವೆ. ಹೀಗಾಗಿ, ಸರಿಯಾದ ಆಯ್ಕೆಯನ್ನು ಮಾಡಲು ಮತ್ತು ನಿಮ್ಮ ಪ್ರಯೋಜನಗಳನ್ನು ಉತ್ತಮಗೊಳಿಸಲು ನಿರ್ದಿಷ್ಟ ಹೂಡಿಕೆ ಮಾಡಬೇಕು ಎಂದು ಅವರು ಹೇಳಿದ್ದಾರೆ. ತೆರಿಗೆ ಉಳಿತಾಯವನ್ನು ಹೆಚ್ಚಿಸಲು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಮಾಡುವ ತಪ್ಪುಗಳು

ಸೆಕ್ಷನ್ 80 ಸಿ ನಿರ್ಲಕ್ಷಿಸುವುದು: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಇಎಲ್ಎಸ್ಎಸ್ (ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್), ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್), ಎನ್ಎಸ್ಸಿ (ನ್ಯಾಷನಲ್ ಸೇವಿಂಗ್ಸ್​ ಸರ್ಟಿಫೀಕೇಟ್​) ಮುಂತಾದ ವಿವಿಧ ಮಾರ್ಗಗಳಿವೆ. ಅನೇಕ ತೆರಿಗೆದಾರರು ಸೆಕ್ಷನ್ 80 ಸಿ ಅಡಿಯಲ್ಲಿ ಲಭ್ಯವಿರುವ 1.5 ಲಕ್ಷ ರೂ.ಗಳ ಸಂಪೂರ್ಣ ಮಿತಿಯನ್ನು ಬಳಸಿಕೊಳ್ಳಲು ವಿಫಲರಾಗುತ್ತಾರೆ. ಎಲ್ಲಾ ಆಯ್ಕೆಗಳನ್ನು ಮೌಲ್ಯಮಾಪನ ಮಾಡಿ ಮತ್ತು ಈ ವಿಭಾಗದ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡುವಂಥ ಹೂಡಿಕೆ ಮಾಡಿ.

ಇದನ್ನೂ ಓದಿ : LIC Offices: ವೀಕೆಂಡ್‌ನಲ್ಲೂ ಕಾರ್ಯನಿರ್ವಹಿಸಲಿವೆ ಎಲ್‌ಐಸಿ ಕಚೇರಿಗಳು; ಕಾರಣ ಇಲ್ಲಿದೆ

ಅಪೂರ್ಣ ದಾಖಲೆಗಳು: ತೆರಿಗೆ ಉಳಿತಾಯ ಹೂಡಿಕೆಗಳಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ. ಇದರಲ್ಲಿ ಹೂಡಿಕೆ ರಸೀದಿಗಳು, ಪ್ರೀಮಿಯಂ ಪಾವತಿ ಪ್ರಮಾಣಪತ್ರಗಳು, ಸಾಲ ಪ್ರಮಾಣಪತ್ರಗಳು ಇತ್ಯಾದಿಗಳು ಸೇರಿಕೊಂಡಿವೆ. ಅಪೂರ್ಣ ದಾಖಲೆಗಳು ತೆರಿಗೆ ಕಡಿತದ ಅವಕಾಶ ಸಿಗದಂತೆ ಮಾಡಬಹುದು. ಹೀಗಾಗಿ ನಿಮ್ಮ ಹೂಡಿಕೆಗಳು ಮತ್ತು ಕಡಿತಗಳ ದಾಖಲೆಗಳನ್ನು ಇರಿಸಿಕೊಳ್ಳಿ. ಯಾಕೆಂದರೆ ನಿಮ್ಮ ತೆರಿಗೆ ಫೈಲಿಂಗ್ ಗಳನ್ನು ಪರಿಶೀಲಿಸಲು ಐಟಿ ಇಲಾಖೆ ದಾಖಲೆಗಳ ಮರುಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

ತೆರಿಗೆ ಯೋಜನೆಗಳನ್ನು ನಿರ್ಲಕ್ಷಿಸುವುದು: ಸೆಕ್ಷನ್ 80 ಸಿ ಹೊರತುಪಡಿಸಿ, ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾದ 80 ಡಿ (ಆರೋಗ್ಯ ವಿಮಾ ಪ್ರೀಮಿಯಂ), 80 ಇ (ಶಿಕ್ಷಣ ಸಾಲದ ಬಡ್ಡಿ) ಮತ್ತು 80 ಜಿ (ನಿರ್ದಿಷ್ಟ ನಿಧಿಗಳಿಗೆ ದೇಣಿಗೆ) ನಂತಹ ಇತರ ವಿಭಾಗಗಳಿವೆ. ಈ ಲಾಭವನ್ನು ನಿರ್ಲಕ್ಷಿಸುವುದರಿಂದ ತೆರಿಗೆ ಉಳಿಸುವ ಅವಕಾಶಗಳನ್ನು ಕಳೆದುಕೊಳ್ಳಬಹುದು.

ದೀರ್ಘಾವಧಿಯ ಹಣಕಾಸು ಗುರಿಯ ನಿರ್ಲಕ್ಷ್ಯ: ತೆರಿಗೆ ಉಳಿತಾಯ ಹೂಡಿಕೆಗಳು ನಿಮ್ಮ ದೀರ್ಘಾವಧಿಯ ಹಣಕಾಸು ಉದ್ದೇಶಗಳಿಗೆ ಹೊಂದಿಕೆಯಾಗಬೇಕು. ತೆರಿಗೆ ಲಾಭ ಪಡೆಯುವ ಉದ್ದೇಶದಿಂದ ಮಾತ್ರ ಹೂಡಿಕೆ ಮಾಡಿದರೆ ಅದು ನಿಮ್ಮ ಹಣಕಾಸಿನ ಅಗತ್ಯಕ್ಕೆ ಅದು ಹೊಂದಿಕೆಯಾಗದೇ ಹೋದರೆ ಅದರಿಂದ ಹೆಚ್ಚಿನ ಲಾಭವು ಸಿಗುವುದಿಲ್ಲ.

Continue Reading

Lok Sabha Election 2024

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Lok Sabha Election 2024: ಯತೀಂದ್ರ ಸಿದ್ದರಾಮಯ್ಯ ಅವರದ್ದು ಬಾಲಿಶ, ಬುದ್ಧಿಭ್ರಮಣೆಯ ಹಾಗೂ ಅಪ್ರಬುದ್ಧ ಹೇಳಿಕೆಯಾಗಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಹೇಳಿದ್ದರು. ಯತೀಂದ್ರ ಅವರಿಗೂ ರಾಹುಲ್‌ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ. ಗೂಂಡಾ ಗುರು ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್‌ನದ್ದು ಗೂಂಡಾ ಸಂಸ್ಕೃತಿಯಾಗಿದೆ ಎಂದು ಆರ್.‌ ಅಶೋಕ್‌ ಗುಡುಗಿದ್ದಾರೆ.

VISTARANEWS.COM


on

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Koo

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಭಾಷಣದಲ್ಲಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ (BJP Karnataka) ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್‌ ಗಾಂಧಿಯಂತೆ (Rahul Gandhi) ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮಗ ಎನ್ನುವ ಕಾರಣಕ್ಕೆ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆ, ಇದರಿಂದ ಬೆಲೆ ಬರುತ್ತದೆ ಎನ್ನುವ ಕಾರಣಕ್ಕೆ ಯತೀಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕುರಿತು ಟೀಕೆ ಮಾಡಿದ್ದಾರೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ. ಅವರ ಪ್ರಜ್ಞೆಯ ಮಟ್ಟ ಬಹಳ ಕಡಿಮೆ ಇದೆ ಎಂದರು.

ಮೈಸೂರಿನ ರಾಜಕಾರಣದ ಬಗ್ಗೆ ಮಾತನಾಡಲು ಯತೀಂದ್ರ ಅವರಿಗೆ ಯೋಗ್ಯತೆ ಇಲ್ಲ. ಅಲ್ಲಿನ ರಾಜಕಾರಣ ಬಿಟ್ಟು ಕೇಂದ್ರದ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಬಾಲಿಶ ಹಾಗೂ ಕೊಬ್ಬಿನ ಹೇಳಿಕೆ ನೀಡುವುದು ಕಾಂಗ್ರೆಸ್ಸಿನ ಡಿಎನ್‌ಎ ನಲ್ಲೇ ಇದೆ. ಈಗಾಗಲೇ ರಾಹುಲ್‌ ಗಾಂಧಿ ಬಾಲಿಶ ಹೇಳಿಕೆ ನೀಡಿ ಜೈಲಿಗೆ ಹೋಗುವ ಸ್ಥಿತಿ ಬಂದಿದೆ. ಯತೀಂದ್ರ ಅವರೂ ಹೀಗೆ ಮಾತನಾಡುತ್ತಿದ್ದರೆ ಕೊನೆಗೆ ಜೈಲೇ ಗತಿಯಾಗಲಿದೆ. ಅವರು ಎಚ್ಚರದಿಂದ ಮಾತನಾಡಲಿ ಎಂದರು.

ಸಿಎಂ ಸಿದ್ದರಾಮಯ್ಯ ಗೂಂಡಾ ಗುರು

ಯತೀಂದ್ರ ಅವರಿಗೆ ತಮ್ಮ ತಂದೆಯ ಗೂಂಡಾಗಿರಿ ಮಾತ್ರ ಕಣ್ಣಿಗೆ ಕಾಣುವುದಿಲ್ಲ. ರಾಜ್ಯದಲ್ಲೀಗ ಅಪ್ಪ-ಮಕ್ಕಳ ಗೂಂಡಾಗಿರಿ ಜಾರಿಯಲ್ಲಿದೆ. ಸದನದಲ್ಲಿ ಪೊಲೀಸರನ್ನು ಬೆದರಿಸುವುದು, ಸ್ಪೀಕರ್‌ಗೆ ಧಮ್ಕಿ ಹಾಕುವುದು ಮಹಿಳೆಯರ ಬಟ್ಟೆ ಎಳೆದು ದೌರ್ಜನ್ಯ ಮಾಡುವುದು, ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು-ಹೀಗೆ ಸಿಎಂ ಸಿದ್ದರಾಮಯ್ಯ ಮಾಡಿದ ರೌಡಿಸಂಗೆ ಲೆಕ್ಕವೇ ಇಲ್ಲ. ಪ್ರಧಾನಿಗೆ, ರಾಷ್ಟ್ರಪತಿಗೆ ಅವನು, ಇವಳು ಎಂದು ಕರೆಯುವವರು, ಪ್ರಧಾನಿಗೆ ಹೊಡೆಯುತ್ತೇನೆ ಎನ್ನುವವರು ನಿಜವಾದ ಗೂಂಡಾಗಳು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದರೆ ಇವರು ನಡೆಸುವುದು ರಾವಣ ರಾಜ್ಯ. ಯತಿ ಎಂದರೆ ಸನ್ಯಾಸಿ. ಆದರೆ ಇವರ ಬಾಯಲ್ಲಿ ಬರುವ ಮಾತು ರಾಕ್ಷಸನಂತಿದೆ. ಇವರ ಹೆಸರಿಗೂ ಮಾತಿಗೂ ಸಂಬಂಧವೇ ಇಲ್ಲ ಎಂದರು.

ರಾಜ್ಯದಲ್ಲಿ ಗೂಂಡಾ ಸರ್ಕಾರವಿದ್ದು, ಸಿಎಂ ಸಿದ್ದರಾಮಯ್ಯ ಗೂಂಡಾಗುರುವಾಗಿ ವರ್ತಿಸುತ್ತಿದ್ದಾರೆ. ಕರಸೇವಕರನ್ನು ಬಂಧಿಸಿ, ಹನುಮ ಧ್ವಜ ಇಳಿಸಿ, ಮುಸ್ಲಿಂ ದಂಗೆಕೋರರಿಗೆ ಆಶ್ರಯ ನೀಡಿದ್ದು ಇದೇ ಗೂಂಡಾ ಕಾಂಗ್ರೆಸ್‌. ಹನುಮಾನ್‌ ಚಾಲಿಸಾ ಹಾಕಿದ್ದಕ್ಕೆ ಹೊಡೆದವರು ಹಾಗೂ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದವರು ಗೂಂಡಾ ಕಾಂಗ್ರೆಸ್ಸಿಗರೇ ಆಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ಗೆ ಯಾರು ಗೂಂಡಾ ಎಂದು ಪಾಠ ಕಲಿಸಲಿದ್ದಾರೆ ಎಂದರು.

ಇದನ್ನೂ ಓದಿ: Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

ಸಮನ್ವಯ ಸಭೆ

ಬಿಜೆಪಿ-ಜೆಡಿಎಸ್‌ ಹಾಲು ಜೇನಿನಂತೆ ಕೆಲಸ ಮಾಡುತ್ತಿದೆ. ಇನ್ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸಲು ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುವುದು. ರೈತರಿಗೆ ಪರಿಹಾರ ಕೊಡದ, ಕುಡಿಯುವ ನೀರು ಕೊಡದ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಇಂತಹ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.

Continue Reading
Advertisement
Juce Jacking
ಪ್ರಮುಖ ಸುದ್ದಿ5 mins ago

Juice Jacking : ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್​ ಚಾರ್ಚರ್​ ಬಳಸುವಾಗ ಎಚ್ಚರಿಕೆ; ಸೈಬರ್ ಕಳ್ಳರಿದ್ದಾರೆ!

Lok Sabha Election 2024
ಕರ್ನಾಟಕ28 mins ago

Lok Sabha Election 2024: ಅನುಮಾನ ಬೇಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ: ಸಾಹಿತಿ ಎಸ್.ಎಲ್. ಭೈರಪ್ಪ

Summer Nail Colours Trend
ಫ್ಯಾಷನ್49 mins ago

Summer Nail Colours Trend: ಸಮ್ಮರ್‌ ಸೀಸನ್‌ನಲ್ಲಿ ಬದಲಾಯ್ತು ನೇಲ್‌ ಕಲರ್ಸ್‌ ಟ್ರೆಂಡ್‌

Lok Sabha Election 2024 and BJP files complaint with Election Commission against Yathindra for calling Amit Shah a rowdy and also CM Siddaramaiah in this Photo
Lok Sabha Election 202454 mins ago

Lok Sabha Election 2024: ಅಮಿತ್‌ ಶಾ ರೌಡಿ ಎಂದಿದ್ದ ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Board Exam
ಬೆಂಗಳೂರು59 mins ago

Board Exams: ಬೋರ್ಡ್‌ ಎಕ್ಸಾಂ ವ್ಯಾಲ್ಯುವೇಶನ್‌; 3 ದಿನದ ಗಡುವು ಆದೇಶ ವಾಪಸ್‌

income Tax - how to save tax
ಪ್ರಮುಖ ಸುದ್ದಿ1 hour ago

Income Tax : ತೆರಿಗೆ ಉಳಿತಾಯ ಮಾಡಲು ಇನ್ನೆರಡೇ ದಿನ ಅವಕಾಶ, ಏನೇನು ಮಾಡಬಹುದು ಇನ್ನು?

Utthana Essay Competition 2023
ಕರ್ನಾಟಕ2 hours ago

Utthana Essay Competition 2023: ಉತ್ಥಾನ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಂಗಳೂರಿನ ಕಾವ್ಯಜೋಗಿ ಪ್ರಥಮ

Lok Sabha Election 2024 R Ashok attack on Yathindra Siddaramaiah for he says Amit Shah is Rowdy and goonda
Lok Sabha Election 20242 hours ago

Lok Sabha Election 2024: ಸಿದ್ದರಾಮಯ್ಯ ಗೂಂಡಾ ಗುರು; ಯತೀಂದ್ರ ಜೈಲಿಗೆ ಹೋಗ್ತಾರೆ: ಆರ್.‌ ಅಶೋಕ್‌ ಕೆಂಡ

Kodagu University
ಕೊಡಗು2 hours ago

Kodagu University : ಉದ್ಯೋಗ ಸೃಷ್ಟಿ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಪ್ರೊ.ಅಶೋಕ್ ಸಂಗಪ್ಪ

Alia Bhatt wore diamond jewellery
ಸಿನಿಮಾ2 hours ago

Alia Bhatt: ಲಂಡನ್‌ ʻಹೋಪ್ ಗಾಲಾʼದಲ್ಲಿ ಆಲಿಯಾ ಭಟ್‌ ಧರಿಸಿದ ವಜ್ರದ ನೆಕ್ಲೇಸ್ ಬೆಲೆ ಎಷ್ಟು?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ14 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ3 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ4 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌