Viral Video | ಸುದ್ದಿ ಓದುತ್ತಿದ್ದ ನಿರೂಪಕಿಗೆ ಪೀಕಲಾಟ; ಗಂಟಲು ಕಟ್ಟಿತು, ಮುಖದ ಭಾವವೇ ಬದಲಾಯಿತು ! - Vistara News

ವೈರಲ್ ನ್ಯೂಸ್

Viral Video | ಸುದ್ದಿ ಓದುತ್ತಿದ್ದ ನಿರೂಪಕಿಗೆ ಪೀಕಲಾಟ; ಗಂಟಲು ಕಟ್ಟಿತು, ಮುಖದ ಭಾವವೇ ಬದಲಾಯಿತು !

ಸುದ್ದಿ ಓದುತ್ತಿದ್ದ ನಿರೂಪಕಿ ತನಗಾದ ಕಷ್ಟವನ್ನು ವಿಡಿಯೋ ಸಮೇತ ವಿವರಿಸಿದ್ದಾರೆ. ಜಗತ್ತಿನಲ್ಲಿ ನಗುವಿಗೆ ಕೊರತೆಯಿದೆ. ನನ್ನ ಈ ವಿಡಿಯೋ ನೋಡಿ ಎಲ್ಲರೂ ನಗಿ ಎಂದೂ ಆಕೆ ಹೇಳಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆನಡಾದ ಗ್ಲೋಬಲ್​​​ ನ್ಯೂಸ್​​ ಚಾನೆಲ್​​ನ ನಿರೂಪಕಿಯೊಬ್ಬರು ಲೈವ್​​ನಲ್ಲಿ ಸುದ್ದಿ ಓದುತ್ತಿದ್ದಾಗ ಪೀಕಲಾಟಕ್ಕೆ ಸಿಲುಕಿದ್ದಾರೆ. ಆನ್ ಏರ್​​ನಲ್ಲಿ ತಾವು ಸುದ್ದಿ ನಿರೂಪಣೆ ಮಾಡುತ್ತಿದ್ದಾಗ ಏನಾಯಿತು? ತಾನ್ಯಾಕೆ ಒಂದು ಕ್ಷಣ ಮುಖದ ಭಾವವನ್ನು ಬದಲಿಸಿದೆ? ತನ್ನ ಗಂಟಲು ಕಟ್ಟಿ, ಧ್ವನಿ ಏಕೆ ಬದಲಾಯಿತು ಎಂಬುದನ್ನು ಈಕೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಆ ಕ್ಷಣದ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಸುದ್ದಿ ನಿರೂಪಕಿಯ ಹೆಸರು ಫರಾ ನಾಸರ್ ಎಂದಾಗಿದ್ದು, ಟೊರಂಟೊ ಮೂಲದ ಪತ್ರಕರ್ತೆ. ಗ್ಲೋಬಲ್​ ನ್ಯೂಸ್​​ನಲ್ಲಿ ಕೆಲಸ ಮಾಡುತ್ತಿರುವ ಇವರು ಎಂದಿನಂತೆ ಸುದ್ದಿ ಓದುತ್ತಿದ್ದರು. ಪಾಕಿಸ್ತಾನದ ಭೀಕರ ಪ್ರವಾಹ, ಅಲ್ಲಿ ಉಂಟಾದ ಹಾನಿಯ ಬಗ್ಗೆ ವಿವರಿಸುತ್ತಿದ್ದರು. ಆಗ ಒಂದು ಕ್ಷಣ ಅವರು ತುಂಬ ಕಷ್ಟದಿಂದ ಉಗುಳು ನುಂಗುತ್ತಾರೆ. ಕಣ್ಮುಚ್ಚುತ್ತಾರೆ. ಅವರ ಧ್ವನಿಯಲ್ಲೂ ಬದಲಾವಣೆಯಾಗುತ್ತದೆ. ಯಾಕಾಗಿ ಹಾಗೆ ಮಾಡಿದ್ದಾರೆ ಎಂದರೆ, ಆ ಹೊತ್ತಲ್ಲಿ ಅವರು ಒಂದು ‘ನೊಣ’ವನ್ನು ನುಂಗಿದ್ದಾರಂತೆ…!

ಯಾರಾದರೂ ತುಂಬ ದೊಡ್ಡದಾಗಿ ಬಾಯಿ ತೆರೆದು ಆಕಳಿಸುತ್ತಿದ್ದಾಗ, ಅವರ ಬಳಿಕ ಸಾಕು ಬಾಯಿಮುಚ್ಚು ನೊಣ ಹೊಟ್ಟೆಯೊಳಗೆ ಹೋದೀತು ಎಂದು ಕಾಲೆಳೆಯುವುದೂ ಇದೆ. ಆ ನೊಣ ಒಳ ಹೋಗಬಹುದು ಎಂಬ ಮಾತು ಈ ನಿರೂಪಕಿ ವಿಚಾರದಲ್ಲಿ ಸತ್ಯವಾಗಿದೆ. ಆಕೆ ಬಾಯಿ ತೆರೆದು ಒಂದೇ ಸಮ ಮಾತನಾಡುತ್ತಿದ್ದಾಗ ಅಲ್ಲೇ ಹಾರಾಡುತ್ತಿದ್ದ ನೊಣವೊಂದು ಅವರ ಬಾಯೊಳಗೆ ಹೋಗಿ ಗಂಟಲು ಸೇರಿದೆ. ಇನ್ನೇನು ಮಾಡಲು ಸಾಧ್ಯ? ತಾನು ಆನ್​ ಏರ್​​ನಲ್ಲಿ ಇದ್ದೇನೆ. ಸುದ್ದಿ ಲೈವ್ ಹೋಗುತ್ತದೆ ಎಂದು ಅರಿತಿದ್ದ ಫರಾ ನಾಸರ್ ನೊಣವನ್ನು ಹಾಗೇ ನುಂಗಿಬಿಟ್ಟಿದ್ದಾರೆ. ಅದೇ ಕಾರಣಕ್ಕೆ ಆಕೆಯ ಮುಖದ ಭಾವ ಬದಲಾಗಿ, ಗಂಟಲು ಕಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿ, ವಿಡಿಯೋ ಶೇರ್ ಮಾಡಿಕೊಂಡ ಫರಾ, ‘ಜಗತ್ತಿನಲ್ಲಿ ಈ ಕಾಲದಲ್ಲಿ ನಗು ಎಂಬುದು ಬಹಳ ಮುಖ್ಯ. ಎಲ್ಲರೂ ನೋಡಿ ನಗಲೆಂದೇ ಈ ವಿಡಿಯೋ ಶೇರ್​ ಮಾಡುತ್ತಿದ್ದೇನೆ. ನಾನಿವತ್ತು ಗಾಳಿಯಲ್ಲಿ ಹಾರುತ್ತಿದ್ದ ಒಂದು ನೊಣವನ್ನು ನುಂಗಿದೆ’ ಎಂದು ಬರೆದುಕೊಂಡಿದ್ದಾರೆ. ವಿಡಿಯೋವನ್ನು ಭರ್ಜರಿ ಜನರು ಮೆಚ್ಚಿಕೊಂಡಿದ್ದಾರೆ. 99 ಸಾವಿರಕ್ಕೂ ಅಧಿಕ ವೀವ್ಸ್​ ಬಂದಿದ್ದು, 1600ಕ್ಕೂ ಹೆಚ್ಚು ಜನ ಲೈಕ್ಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: Viral Video | ಪಂಜಾಬ್​ ಆಮ್​ ಆದ್ಮಿ ಪಕ್ಷದ ಶಾಸಕಿಗೆ ಪತಿಯಿಂದಲೇ ಥಳಿತ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Video Viral: ಬ್ಯಾಲೆಟ್‌ ಪೇಪರ್‌ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್;‌ ಕಾಂಗ್ರೆಸ್‌ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!

Video Viral: ತುಮಕೂರಿನಲ್ಲಿ ಏಪ್ರಿಲ್‌ 16ರಂದು ನಡೆದಿದ್ದ ಯಾದವ ಸಮುದಾಯದ ಸಭೆಯಲ್ಲಿ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ಇವಿಎಂ ಬರುವ ಮೊದಲು ಚುನಾವಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸಿದ್ದರು. ಯಾದವ ಸಮುದಾಯ ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ. ಈ ಹಿಂದೆ ಬ್ಯಾಲೆಟ್‌ ಪೇಪರ್‌ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು ಎಂದು ಹೇಳಿರುವ ವಿಡಿಯೊ ಸಖತ್‌ ವೈರಲ್‌ ಆಗಿದೆ.

VISTARANEWS.COM


on

Video Viral Parameshwara statement on ballot paper bogus voting
Koo

ಬೆಂಗಳೂರು/ತುಮಕೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತುಮಕೂರಿನಲ್ಲಿ ನಡೆದ ಯಾದವ ಸಮುದಾಯದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwara) ಅವರು ಈ ಹಿಂದಿನ ಬ್ಯಾಲೆಟ್‌ ಮತದಾನ (Ballot paper voting) ಹಾಗೂ ಈಗಿನ ಇವಿಎಂ ಮತದಾನದ (EVM Voting) ಬಗ್ಗೆ ಸ್ಮರಿಸುತ್ತಾ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಈಡು ಮಾಡಿದ್ದಲ್ಲದೆ, ವೈರಲ್‌ (Video Viral) ಆಗಿದೆ. ಜತೆಗೆ, ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. “ಈ ಹಿಂದೆ ಬ್ಯಾಲೆಟ್‌ ಪೇಪರ್‌ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು” ಎಂಬ ಪರಮೇಶ್ವರ್‌ ಹೇಳಿಕೆ ಈಗ ಸಖತ್‌ ವೈರಲ್‌ ಆಗಿದೆ. ಈ ವಿಡಿಯೊವನ್ನು ಜೆಡಿಎಸ್‌ ರಾಜ್ಯ ಘಟಕವು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಪ್ಲೋಡ್‌ ಮಾಡಿದ್ದು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಕಿಡಿಕಾರಿದೆ.

ವೈರಲ್‌ ಆಯ್ತು ಗೃಹ ಸಚಿವರ ಹೇಳಿಕೆ!

ತುಮಕೂರಿನಲ್ಲಿ ಏಪ್ರಿಲ್‌ 16ರಂದು ನಡೆದಿದ್ದ ಯಾದವ ಸಮುದಾಯದ ಸಭೆಯಲ್ಲಿ ಮಾತನಾಡಿದ್ದ ಡಾ. ಜಿ. ಪರಮೇಶ್ವರ್, ಇವಿಎಂ ಬರುವ ಮೊದಲು ಚುನಾವಣೆ ಹೇಗೆ ನಡೆಯುತ್ತಿತ್ತು ಎಂಬುದನ್ನು ವಿವರಿಸಿದ್ದರು. ಯಾದವ ಸಮುದಾಯ ತಮ್ಮ ಮೇಲೆ ಇಟ್ಟಿದ್ದ ಪ್ರೀತಿಯ ಬಗ್ಗೆ ಹೇಳುವ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿ ಈಗ ವಿವಾದಕ್ಕೆ ಸಿಲುಕಿದ್ದಾರೆ.

ಪರಮೇಶ್ವರ್‌ ಹೇಳಿದ್ದೇನು?

ಮೊದಲೆಲ್ಲ ಮತದಾನಕ್ಕಾಗಿ ಎಲ್ಲವೂ ಒತ್ತೋದು. ಈ ಇವಿಎಂ ಇರಲಿಲ್ಲ. ಅವಾಗ ಒಬ್ಬರೋ ಇಬ್ಬರೋ ಸೇರಿಕೊಂಡು ಒತ್ತಿಬಿಡ್ರೋ ಅತ್ಲಾಗೆ ಅನ್ನೋರು. ಅನೇಕ ಸಂದರ್ಭದಲ್ಲಿ ನಾನು ಅದನ್ನು ಜ್ಞಾಪಿಸಿಕೊಳ್ಳುತ್ತೇನೆ. ನಮ್ಮ ಮಧುಚಂದ್ರ ಇವಾಗಲೂ ಇದ್ದಾನೆ. ನಮ್ಮ ಹಟ್ಟಿ ಒಳಗೆ ಒಬ್ರೋ ಇಬ್ರೋ ಕುಳಿತುಕೊಂಡು ಮತಕ್ಕೆ ಸಂಬಂಧಿಸಿ ಸೀಲ್‌ ಒತ್ತಿ ಅಂತಾ ಕಳುಹಿಸೋರು. ಇವತ್ತಿಗೂ ಸಹ ಯಾದವ ಸಮುದಾಯದವರು ನನ್ನನ್ನು ಕರೆಯೋದು ನಮ್ಮಯಪ್ಪ ಅಂತಲೇ. ಅದಕ್ಕಾಗಿ ನಾನು ಯಾದವ ಸಮುದಾಯದ ಖುಣ ತೀರಿಸುವ ಕೆಲಸವನ್ನು ಮಾಡಬೇಕಿದೆ. ಆ ಕೆಲಸವನ್ನು ನಾನು ಮಾಡಿಯೇ ತೀರುತ್ತೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಸಖತ್‌ ವೈರಲ್‌ ಆಗಿದೆ.

ಕಾಂಗ್ರೆಸ್‌ ಗೆಲುವಿನ ಫಾರ್ಮುಲಾ ಈ ಕಳ್ಳವೋಟು; ಜೆಡಿಎಸ್‌ ಕಿಡಿ

ಈ ಬಗ್ಗೆ ಜೆಡಿಎಸ್‌ ರಾಜ್ಯ ಘಟಕವು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ. ಡಾ. ಜಿ. ಪರಮೇಶ್ವರ್‌ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ ವಿಡಿಯೊವನ್ನು ಸಹ ಅಪ್ಲೋಡ್‌ ಮಾಡಿದೆ. ಕಾಂಗ್ರೆಸ್‌ ಗೆಲುವಿನ ಫಾರ್ಮೂಲಾದ ಸೀಕ್ರೆಟ್‌ ಇದೇ ಆಗಿದೆ ಎಂದು ಕಿಡಿಕಾರಿದೆ. ಅಂದಹಾಗೆ ಇದನ್ನು ನಾವು ಹೇಳುತ್ತಿರುವುದಲ್ಲ, ಸ್ವತಃ ರಾಜ್ಯದ ಗೃಹ ಮಂತ್ರಿ ಪರಮೇಶ್ವರ್‌ ಅವರು ನೀಡಿರುವ ಹೇಳಿಕೆ ಇದಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: Neha Murder Case: ಕಾಂಗ್ರೆಸ್‌ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್. ಅಶೋಕ್‌ ಗುಡುಗು

ಜೆಡಿಎಸ್‌ ಪೋಸ್ಟ್‌ನಲ್ಲೇನಿದೆ?

“ಕಳ್ಳ ವೋಟು was the secret Winning Formula of @INCIndia!” ಇದನ್ನು ನಾವು ಹೇಳಿದಲ್ಲ, ಸ್ವತಃ ನಮ್ಮ ರಾಜ್ಯದ ಗೃಹಮಂತ್ರಿಗಳಾದ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಇದು ಅವರು ಬಯಲು ಮಾಡಿರುವ ಸತ್ಯ. ಈ ಹೇಳಿಕೆಯು ಕಾಂಗ್ರೆಸ್‌ ಪಕ್ಷದ ಅಸಲಿ ಮುಖವನ್ನು ಬಯಲು ಮಾಡಿದೆ.

ಇವಿಎಂ ಬರುವ ಮುಂಚೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದವರು ಒಬ್ಬರೋ ಇಬ್ಬರನ್ನೋ ಕೂರಿಸಿ ಕಳ್ಳ ಮತದಾನ ಮಾಡಿಸಿಕೊಂಡು, ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುತ್ತಿತ್ತು. ಈ ಸತ್ಯವನ್ನು ಸಚಿವರೇ ಒಪ್ಪಿಕೊಂಡಿದ್ದಾರೆ.

ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ!!” ಎಂದು ಜೆಡಿಎಸ್‌ ಆಕ್ರೋಶ ವ್ಯಕ್ತಪಡಿಸಿದೆ.

Continue Reading

ಪ್ರಮುಖ ಸುದ್ದಿ

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಪಿಯಿಂದ ಆಕ್ಷೇಪ!; ವಿಡಿಯೊ ಇದೆ

Lok Sabah Election: ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

VISTARANEWS.COM


on

lok sabha Election
Koo

ಮುಂಬಯಿ: ಮಹಾರಾಷ್ಟ್ರದ ಸೋಲಾಪುರದಲ್ಲಿ (Lok Sabha Election) ಕಾಂಗ್ರೆಸ್ ಅಭ್ಯರ್ಥಿ ಪ್ರಣೀತಿ ಶಿಂಧೆ ಪರ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ (Shah Rukh Khan) ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಪ್ರಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ಪಕ್ಷದ ‘ಹಗರಣ’ ಎಂದು ಕರೆದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ ಪ್ರಚಾರದ ಬಗ್ಗೆ ಕೆಲವು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ . “ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಯಿಲ್ಲದೆ ಮತ್ತು ಬಹಿರಂಗವಾಗಿ ಮೂರ್ಖರನ್ನಾಗಿಸಲು ಮುಂದಾಗಿದೆ.. ನಕಲಿ ಸಮೀಕ್ಷೆಗಳನ್ನು ಹರಡುವುದು, ಭಾರತ ವಿರೋಧಿ ನಿರೂಪಣೆಗಳನ್ನು ರಚಿಸುವುದು, ಎಐ ಬಳಸಿ ಸೆಲೆಬ್ರಿಟಿಗಳ ಡೀಪ್ ಫೇಕ್​​ಗಳನ್ನು ನಿರ್ಮಿಸುತ್ತದೆ. ಈ ಪಕ್ಷವು ಈಗಾಗಲೇ ಇವಿಎಂಗಳನ್ನು ದೂಷಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ ಇದು ಶಾರುಖ್ ಖಾನ್ ಅವರ ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ರಾಹಿಂ ಖಾದ್ರಿ ಶಾರುಖ್ ಖಾನ್ ಅವರ ತದ್ರೂಪಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್​ ಖಾನ್​ ಅವರ ರಯೀಸ್ ಸಿನಿಮಾ ಬಿಡುಗಡೆಯಾದಾಗ ಗುಜರಾತ್ ಮೂಲದ ಇಬ್ರಾಹಿಂ ಖಾದ್ರಿ ಖ್ಯಾತಿ ಪಡೆದುಕೊಂಡಿದ್ದರು. ಏಕೆಂದರೆ ಶಾರುಖ್​ ಅವರೊಂದಿಗಿನ ಖಾದ್ರಿ ಅವರ ಹೋಲಿಕೆ ಈ ವೇಳೆ ಗಮನಕ್ಕೆ ಬಂದಿತ್ತು. ಖಾದ್ರಿ ಶಾರುಖ್​ ಅವರಂತೆಯೇ ಮಾತನಾಡುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಶಾರುಖ್ ಅವರ ಸಿಗ್ನೇಚರ್ ಸ್ಟೈಲ್​ಗಳನ್ನು ನಕಲ ಮಾಡುತ್ತಾರೆ. ಅವರ ನೃತ್ಯ ಚಲನೆಗಳನ್ನೂ ಅನುಕರಣೆ ಮಾಡುತ್ತಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಾರುಖ್ ಅವರ ತದ್ರೂಪಿ ಖಾದರ್​ ಪೋನಿಟೈಲ್ ಹೊಂದಿದ್ದಾರೆ. ಜನರತ್ತ ಕೈ ಬೀಸುತ್ತಾ ತೆರೆದ ವಾಹನದಲ್ಲಿ ಸಾಗಿದ್ದಾರೆ. ಆವಾಹನದಲ್ಲಿ ರಾಹುಲ್ ಗಾಂಧಿ, ಪ್ರಣೀತಿ ಶಿಂಧೆ ಅವರ ಭಾವಚಿತ್ರವಿರುವ ಕಾಂಗ್ರೆಸ್ ಬ್ಯಾನರ್ ಇತ್ತು.

ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. 2019 ರಲ್ಲಿ ಸುಶೀಲ್ ಶಿಂಧೆ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಜೈಸಿದ್ದೇಶ್ವರ ಸ್ವಾಮಿ ವಿರುದ್ಧ ಸೋತಿದ್ದರು. ಈ ಬಾರಿ ಸುಶೀಲ್ ಶಿಂಧೆ ಅವರ ಪುತ್ರಿಯ ವಿರುದ್ಧ ಬಿಜೆಪಿ ರಾಮ್ ಸಾತ್ಪುತೆ ಅವರನ್ನು ಕಣಕ್ಕಿಳಿಸಿದೆ. ರಾಮ್ ಅವರು ಮಹಾರಾಷ್ಟ್ರದ ಮಾಲ್ಶಿರಾಸ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ವೀಡಿಯೊ ವೈರಲ್ ಆಗಿತ್ತು.

Continue Reading

ಕ್ರೀಡೆ

IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

IPL 2024: ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

VISTARANEWS.COM


on

IPL 2024
Koo

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಹಲವು ಆರೋಪಗಳು ಕೇಳಿ ಬರುತ್ತಲೇ ಇದೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಟಾಸ್​ ಚೀಟಿಂಗ್, ನೋಬಾಲ್​ ನೀಡದ​ ಆರೋಪ ಕೇಳಿಬಂದಿತ್ತು. ಇದೀಗ ಪಂಜಾಬ್​ ವಿರುದ್ಧ ಪಂದ್ಯದಲ್ಲಿ ಡಿಆರ್​ಎಸ್ ಚೀಟಿಂಗ್​ನ(‘DRS Cheating) ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಘಟನೆಯ ದೃಶ್ಯ ​ ವೈರಲ್​ ಆಗಿದ್ದು ಫ್ರಾಂಚೈಸಿ ವಿರುದ್ಧ ಹಲವರು ಛೀಮಾರಿ ಹಾಕಿದ್ದಾರೆ.

ಪಂದ್ಯದ 15ನೇ ಓವರ್​ನಲ್ಲಿ ಈ ಘಟನೆ ನಡೆದಿದೆ. ಅರ್ಶ್​ದೀಪ್​ ಸಿಂಗ್​ ಎಸೆತ ಈ ಓವರ್​ನ 5ನೇ ಎಸೆತ ವೈಡ್​ ಲೈನ್​ನಲ್ಲಿ ಸಾಗಿ ಕೀಪರ್​ ಕೈ ಸೇರಿತು. ಸೂರ್ಯಕುಮಾರ್ ಯಾದವ್​ ಬ್ಯಾಟಿಂಗ್​ ನಡೆಸುತ್ತಿದ್ದರು. ಈ ವೇಳೆ ಡಗೌಟ್​ನಲ್ಲಿದ್ದ ಟಿಮ್​ ಡೇವಿಡ್​ ಮತ್ತು ಕೋಚ್​ ಮಾರ್ಕ್​ ಬೌಚರ್ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಸನ್ನೆಯ ಮೂಲಕ ಸೂರ್ಯ ಅವರಿಗೆ ಮನವಿ ಮಾಡಿದ್ದಾರೆ. ಇದು ಪಂದ್ಯದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ​ಬೌಚರ್ ಮತ್ತು ಡೇವಿಡ್ ಡಿಆರ್​ಎಸ್​ ಸನ್ನೆ ಮಾಡುತ್ತಿರುವುದನ್ನು ಕಂಡ ಪಂಜಾಬ್​ ನಾಯಕ ಸ್ಯಾಮ್​ ಕರನ್​ ಓಡಿ ಬಂದು ಅಂಪೈರ್​ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.

ಇದೇ ಪಂದ್ಯದಲ್ಲಿ ಪಂಜಾಬ್​ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಎಸೆದ 19ನೇ ಓವರ್​ನಲ್ಲಿ ಬ್ಯಾಟರ್​ನ ಲೆಗ್​ ಸೈಡ್​ನಿಂದ ಚೆಂಡು ಸಾಗಿದರೂ ಕೂಡ ಅಂಪೈರ್​ ಇದನ್ನು ವೈಡ್​ ನೀಡಲಿಲ್ಲ. ಈ ವಿಚಾರವಾಗಿಯೂ ಮುಂಬೈ ಮತ್ತು ಅಂಪೈರ್​ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಮುಂಬೈ ಇಂಡಿಯನ್ಸ್​ ಬದಲು ಮುಂಬೈ ಅಂಪೈರ್ಸ್​ ಎಂದು ತಂಡಕ್ಕೆ ಹೆಸರಿಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಮುಂಬೈ ತಂಡ ಈ ಬಾರಿ ಕೇವಲ ವಿವಾದದಿಂದಲೇ ಸುದ್ದಿಯಾಗುತ್ತಿದೆ.

ಇದನ್ನೂ ಓದಿ IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

ಈ ಪಂದ್ಯದಲ್ಲಿ (IPL 2024) ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದ ಕಾರಣಕ್ಕೆ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ(Hardik Pandya)​ ಅವರಿಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ. “ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಾರಾಜಾ ಯಾದವೀಂದ್ರ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 192 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.1 ಓವರ್​ಗಳಲ್ಲಿ 183 ರನ್​ಗೆ ಆಲ್​ಔಟ್​ ಆಗಿ ಕೇವಲ 9 ರನ್​ ಅಂತರದಿಂದ ಸೋಲೊಪ್ಪಿಕೊಂಡಿತು. ಗೆಲುವು ಸಾಧಿಸಿದ ಮುಂಬೈ ಅಂಕಪಟ್ಟಿಯಲ್ಲಿ(IPL 2024 Points Table) ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 9ನೇ ಸ್ಥಾನದಲ್ಲಿದ್ದ ಮುಂಬೈ ಈ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿದೆ. ಸೋಲು ಕಂಡ ಪಂಜಾಬ್​ 9ನೇ ಸ್ಥಾನಕ್ಕೆ ಕುಸಿದಿದೆ.

Continue Reading

ವೈರಲ್ ನ್ಯೂಸ್

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Pesticide: ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಎಂದು ಸಿಂಗಾಪುರ ಹೇಳಿದೆ,

VISTARANEWS.COM


on

pesticide everest fish curry masala
Koo

ಹೊಸದಿಲ್ಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest) ಫಿಶ್ ಕರಿ ಮಸಾಲಾ (Fish Curry Masala) ಅನ್ನು ಹಿಂಪಡೆಯಲು ಸಿಂಗಾಪುರ (Singapore) ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ (Pesticide) ಎಥಿಲೀನ್ ಆಕ್ಸೈಡ್ (Ethylene oxide) ಇದೆ ಎಂದು ಅದು ಆರೋಪಿಸಿದೆ.

ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

“ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ” ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ.

“ಈ ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದರೆ ಈ ಮಸಾಲೆಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಅದು ಹೇಳಿದೆ. “ಸಂಬಂಧಿತ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

ಮಸಾಲೆ ಉತ್ಪಾದನೆ ಸಂಸ್ಥೆ ಎವರೆಸ್ಟ್ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Continue Reading
Advertisement
Lok sabha Election
ರಾಜಕೀಯ19 mins ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Actor Darshan
ಕರ್ನಾಟಕ24 mins ago

Actor Darshan: ನಟ ದರ್ಶನ್‌ ಇದ್ದ ಪ್ರಚಾರ ವಾಹನಕ್ಕೆ ವಿದ್ಯುತ್‌ ಸ್ಪರ್ಶ; ತಪ್ಪಿದ ಭಾರೀ ಅನಾಹುತ!

Boat Capsizes
ದೇಶ37 mins ago

Boat Capsizes: ದೋಣಿ ಮುಳುಗಿ ಇಬ್ಬರು ಜಲಸಮಾಧಿ; ಏಳು ಮಂದಿ ನಾಪತ್ತೆ

Chikkaballapur Lok Sabha Constituency NDA candidate Dr K Sudhakar election campaign
ಚಿಕ್ಕಬಳ್ಳಾಪುರ45 mins ago

Lok Sabha Election: ಯಲಹಂಕದಲ್ಲಿ ಡಾ.ಕೆ.ಸುಧಾಕರ್ ಗೆ 1 ಲಕ್ಷ ಮತಗಳ ಲೀಡ್ ಕೊಡಿಸುತ್ತೇನೆ: ಎಸ್ ಆರ್ ವಿಶ್ವನಾಥ್ ಪ್ರತಿಜ್ಞೆ

Chikkaballapur Lok Sabha Constituency Congress candidate Raksha Ramaiah election campaign in Yalahanka
ಬೆಂಗಳೂರು1 hour ago

Lok Sabha Election 2024: ಬಿಜೆಪಿ ಆಡಳಿತದಲ್ಲಿ ಶೇ. 5ರಷ್ಟೂ ಉದ್ಯೋಗ ಸೃಷ್ಟಿಯಾಗಿಲ್ಲ: ರಕ್ಷಾ ರಾಮಯ್ಯ

kaalnadige Jatha programme in Uttara kannada
ಉತ್ತರ ಕನ್ನಡ2 hours ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ2 hours ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Neha Murder Case
ಕರ್ನಾಟಕ2 hours ago

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

IPL 2024
ಪ್ರಮುಖ ಸುದ್ದಿ2 hours ago

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

Lok Sabha Election 2024
Lok Sabha Election 20242 hours ago

Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ7 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ18 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌