Kantara Movie | ಕಾಂತಾರ ಸಕ್ಸೆಸ್‌ ಸಂಭ್ರಮದಲ್ಲಿ ಮಾಲಿವುಡ್‌ ನಟ ಫಹಾದ್ ಫಾಸಿಲ್‌ - Vistara News

ಸಿನಿಮಾ

Kantara Movie | ಕಾಂತಾರ ಸಕ್ಸೆಸ್‌ ಸಂಭ್ರಮದಲ್ಲಿ ಮಾಲಿವುಡ್‌ ನಟ ಫಹಾದ್ ಫಾಸಿಲ್‌

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ (Kantara Movie ) ಕಾಂತಾರ ಸಿನಿಮಾ ಸಂಭ್ರಮದಲ್ಲಿ ಮಾಲಿವುಡ್‌ ನಟ ಫಹಾದ್‌ ಫಾಸಿಲ್‌ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ಫೋಟೊ!

VISTARANEWS.COM


on

Kantara Movie (success celebration )
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ (Kantara Movie) 400 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ. ನವೆಂಬರ್‌ 24ರಂದು ಒಟಿಟಿಯಲ್ಲಿಯೂ ಕಾಂತಾರ ಸಿನಿಮಾ ಸ್ಟ್ರೀಮ್‌ ಆಗಿದ್ದು ವಿಶ್ವಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಕಾಂತಾರ ಚಿತ್ರತಂಡ ಸಕ್ಸೆಸ್‌ ಸೆಲೆಬ್ರೆಷನ್‌ ಮಾಡಿದೆ. ಯಶಸ್ಸು ಕಂಡಿರುವ ಖುಷಿಯಲ್ಲಿ ಚಿತ್ರತಂಡ ಆಚರಿಸಿರುವ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್‌ ಸಿನಿಮಾ ನಂತರದಲ್ಲಿ ಕಾಂತಾರ ಸಿನಿಮಾ ಖ್ಯಾತಿ ಗಳಿಸಿದೆ. ಚಿತ್ರದ ಸಕ್ಸೆಸ್‌ ಸಂಭ್ರಮದಲ್ಲಿ ಮಾಲಿವುಡ್‌ ನಟ ಫಹಾದ್‌ ಫಾಸಿಲ್‌ ಕೂಡ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಪಕ ವಿಜಯ್‌ ಕಿರಗಂದೂರು, ರಿಷಬ್‌ ದಂಪತಿ, ನಟಿ ಸಪ್ತಮಿ ಗೌಡ, ನಟ ಪ್ರಮೋದ್‌ ಶೆಟ್ಟಿ ಆಚರಣೆಗೆ ಸಾಕ್ಷಿಯಾದರು.

ಇದನ್ನೂ ಓದಿ | Kantara Movie | ವರಾಹ ರೂಪಂ ವಿವಾದ: ತಡೆಯಾಜ್ಞೆ ತೆರವು ಕೋರಿದ ಹೊಂಬಾಳೆ ಅರ್ಜಿ ವಜಾ

ಕರ್ನಾಟಕ ಒಂದರಲ್ಲೇ ಕಾಂತಾರದ ಗಳಿಕೆ ೧೮೦ ಕೋಟಿ ರೂಪಾಯಿ ದಾಟಿದೆ. ಉಳಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಭರಪೂರ ಗಳಿಕೆ ಮಾಡಿದೆ. ಜತೆಗೆ ವಿದೇಶಗಳಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿವೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ತೆಗೆದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಆದಾಯ ಪಡೆಯುವ ಮೂಲಕ ಕನ್ನಡ ಚಲನಚಿತ್ರ ರಂಗದೊಳಗೆ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ.

Kantara Movie (Kantara success Celebration )

ಇದನ್ನೂ ಓದಿ | Kantara Movie | ಒಟಿಟಿಯಲ್ಲಿ ಕಾಂತಾರ: ಪ್ರೇಕ್ಷಕರು ʻಸಿನಿಮಾ ನೋಡಲು ಮನಸ್ಸಾಗಲ್ಲʼ ಅಂದಿದ್ಯಾಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸಿನಿಮಾ

Akshya Kumar: ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಕ್ಷಯ್ ಕುಮಾರ್!

Akshya Kumar ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ ಅವರು ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸುವುದರ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರಂತೆ

VISTARANEWS.COM


on

Akshya Kumar
Koo

ಬೆಂಗಳೂರು: ‘ಕಣ್ಣಪ್ಪ’ ತೆಲುಗು ಚಿತ್ರರಂಗದಲ್ಲಿ ಶೀಘ್ರದಲ್ಲಿಯೇ ಸೆಟ್ಟೇರಲಿರುವ ಚಿತ್ರವಾಗಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಕೆಲವು ಖ್ಯಾತ ನಟರು ನಟಿಸಲಿದ್ದಾರಂತೆ. ಇತ್ತೀಚಿಗೆ ಕೇಳಿ ಬಂದ ಸುದ್ಧಿಯ ಪ್ರಕಾರ ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ (Akshya Kumar) ಅವರು ಈ ಚಿತ್ರದಲ್ಲಿ ನಟಿಸುವುದರ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರಂತೆ.

ನಟ ಅಕ್ಷಯ್ ಕುಮಾರ್ ಅವರು ಶೀಘ್ರದಲ್ಲಿಯೇ ಚಿತ್ರದ ಸೆಟ್ ಗೆ ಸೇರಲಿದ್ದಾರೆ. ಈ ಹಿನ್ನಲೆಯಲ್ಲಿ ಹೈದರಾಬಾದ್ ಗೆ ಆಗಮಿಸಿದ ನಟ ಅಕ್ಷಯ್ ಕುಮಾರ್ ಅವರು ನಟ ವಿಷ್ಣು ಮಂಚು ಮತ್ತು ಮೋಹನ್ ಬಾಬು ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಲ್ಲದೇ ಅಕ್ಷಯ್ ಕುಮಾರ್ ಚಿತ್ರದ ಕ್ಲೈಮ್ಯಾಕ್ಸ್ ನ ಗಮನಾರ್ಹ ಭಾಗ ಸೇರಿದಂತೆ ಕೆಲವು ನಿರ್ಣಾಯಕ ದೃಶ್ಯಗಳನ್ನು ಶೂಟ್ ಮಾಡಲಾಗುವುದಾಗಿ ತಿಳಿಸಿದ್ದಾರೆ.

ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ತೆಲುಗು ಚಲನಚಿತ್ರೋದ್ಯಮಕ್ಕೆ ಸ್ವಾಗತಿಸುವ ಮೂಲಕ ಕಣ್ಣಪ್ಪ ಚಿತ್ರದ ಬಗ್ಗೆ ಜನರ ಆಸಕ್ತಿ ಹೆಚ್ಚಾಗಲಿದೆ. ಕಣ್ಣಪ್ಪ ಮೂಲಕ ತೆಲುಗು ಚಿತ್ರರಂಗಕ್ಕೆ ಅಕ್ಷಯ್ ಕುಮಾರ್ ಅವರು ಪಾದಾರ್ಪಣೆ ಮಾಡುವುದನ್ನು ಘೋಷಿಸಲು ಥ್ರಿಲ್ ಆಗುತ್ತದೆ ಎಂದು ನಟ ವಿಷ್ಣು ಮಂಚು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ ಈ ಬಗ್ಗೆ ಮಾತನಾಡಿದ ನಟ ವಿಷ್ಣು “ ಅಕ್ಷಯ್ ಸರ್ ಅವರೊಂದಿಗೆ ಚಿತ್ರೀಕರಣ ಮಾಡುವುದು ನಿಜಕ್ಕೂ ಖುಷಿಯಾಗಿದೆ. ನಾವು ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಒಟ್ಟಿಗೆ ಪ್ರಾರಂಭಿಸುತ್ತೇವೆ. ಖ್ಯಾತ ನಟ ನಮ್ಮೊಂದಿಗೆ ಸೇರುವುದು ನಮಗೆ ಸಿಕ್ಕ ದೊಡ್ಡ ಗೌರವ. ಅಕ್ಷಯ್ ಕುಮಾರ್ ಕಾರಣದಿಂದ ಕಣ್ಣಪ್ಪ ಚಿತ್ರ ಪ್ಯಾನ್ –ಇಂಡಿಯನ್ ಚಿತ್ರವಾಗಿ ಮೂಡಿಬರಲಿದೆ” ಎಂದು ತಿಳಿಸಿದ್ದಾರೆ.

ಮೋಹನ್ ಬಾಬು ಮತ್ತು ಅವರ ಮಗ, ನಟ ವಿಷ್ಣು ಮಂಚು ನಿರ್ಮಿಸಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಪುರಾಣ ಆಧಾರಿತ ಚಿತ್ರವಾಗಿದ್ದು, ಭಗವಾನ್ ಶಿವನ ಭಕ್ತನ ಕುರಿತಾಗಿದೆ. ಈ ಚಿತ್ರದಲ್ಲಿ ವಿಷ್ಣು ಮಂಚು ನಾಯಕ ನಟನಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಚಿತ್ರದುರ್ಗದ ಸರ್ವತೋಮುಖ ಅಭಿವೃದ್ಧಿಗಾಗಿ ಕಾರಜೋಳಗೆ ಬೆಂಬಲಿಸಲು ಮನವಿ

ಕಣ್ಣಪ್ಪ ಶಿವನ ಭಕ್ತನಾಗಿದ್ದು, ತನ್ನ ಇಷ್ಟದೇವನಾದ ಶಿವನಿಗೆ ಅರ್ಪಣೆಯಾಗಿ ತನ್ನ ಕಣ್ಣನ್ನೇ ಕಿತ್ತುಕೊಟ್ಟನು. ಈ ಹಿಂದೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅದರಲ್ಲಿ ವಿಷ್ಣು ಮಂಚು ಬಿಲ್ಲು ಬಾಣ ಹಿಡಿದು ಜಲಪಾತದಿಂದ ಹೊರಬರುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಕಣ್ಣಪ್ಪ ಚಿತ್ರದಲ್ಲಿ ಮೋಹನ್ ಬಾಬು, ಶರತ್ ಕುಮಾರ್, ಬ್ರಾಹ್ಮಾನಂದಂ, ಪ್ರೀತಿ ಮುಖಂಧನ್ , ಮಧು ನಟಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Actor Dwarakish: ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು.

VISTARANEWS.COM


on

By

Actor Dwarakish
Koo

ಬೆಂಗಳೂರು: ಮದುವೆಯಾಗಿ ಮಕ್ಕಳಾದ ಮೇಲೆ ಇನ್ನೊಂದು ಮದುವೆ ಅಷ್ಟೊಂದು ಸುಲಭವಲ್ಲ. ಅದೂ ಪ್ರೀತಿಸಿ ಮದುವೆಯಾಗುವುದೆಂದರೆ ಅದೊಂದು ಅಪರೂಪದಲ್ಲೊಂದು ಪ್ರಕರಣವಾಗುವುದು ಖಚಿತ. ಅಂಥದ್ದೇ ಅಪರೂಪದ ವ್ಯಕ್ತಿಯಾಗಿದ್ದು ನಟ ದ್ವಾರಕೀಶ್​. ಸಿನಿಮಾ ನಟನಾಗಿ. ನಿರ್ಮಾಪಕನಾಗಿದ್ದುಕೊಂಡು ಸಿನಿಮಾ ಕತೆಯ ರೀತಿಯಲ್ಲೇ ತಮ್ಮ ಜೀವನವನ್ನು ಸಾಗಿಸಿದ್ದರು ಸ್ಯಾಂಡಲ್​ವುಡ್​ನ ಕುಳ್ಳ. ಆದರೆ ನನ್ನ ಬದುಕಲ್ಲಿ ಎಲ್ಲವೂ ಸುಖಾಂತ್ಯವಾಗಿ ಎಂದು ನಗುತ್ತಿದ್ದರು ಹಾಸ್ಯ ನಟ (comedian) ದ್ವಾರಕೀಶ್ (actor dwarakish).

ನಟನಾಗಿ (actor), ನಿರ್ಮಾಪಕನಾಗಿ (producer), ನಿರ್ದೇಶಕನಾಗಿ (director) ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು. ಅದನ್ನು ಸುಖಾಂತ್ಯಗೊಳಿಸಲು ಪ್ರಯತ್ನಿಸಿದ್ದರು.

ಮೊದಲ ಮದುವೆ

ವಯಸ್ಸಿನಲ್ಲಿ ದೊಡ್ಡವರೂ, ಸಂಬಂಧಿಯು ಆಗಿದ್ದ ಅಂಬುಜಾ ಅವರನ್ನು ಪ್ರೀತಿಸಿ 1967 ಏಪ್ರಿಲ್ 26ರಂದು ದ್ವಾರಕೀಶ್ ಕೈ ಹಿಡಿದಿದ್ದು, ನಾಲ್ಕು ಗಂಡು ಮಕ್ಕಳ ತಂದೆಯಾದರು. ಇದಾಗಿ ಕೆಲವು ವರ್ಷಗಳ ಬಳಿಕ ಅಕ್ಕನ ಮಗಳಿಗೆ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಶೈಲಜಾ ಅವರು ದ್ವಾರಕೀಶ್‌ ಬಳಿ ಬಂದಿದ್ದರು.

ಇದನ್ನೂ ಓದಿ: ‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

ಪ್ರೀತಿಯಲ್ಲಿ ಬಿದ್ದ ಕುಳ್ಳ

ಈ ಮೂಲಕ ಶೈಲಜಾ ದ್ವಾರಕೀಶ್‌ ಅವರಿಗೆ ಪರಿಚಿತರಾದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಹಾಗೂ ನಟ ದ್ವಾರಕೀಶ್‌ ಅವರ ನಡುವೆ ಮೊದಲು ಸ್ನೇಹ ಬೆಳೆದು ಬಳಿಕ ಅದು ಪ್ರೀತಿಗೆ ತಿರುಗಿತ್ತು. ಆದರೆ ಈ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಗೆ ಹೇಳಬೇಕು ಎನ್ನುವ ಗೊಂದಲ, ಚಿಂತೆ ಅವರನ್ನು ಕಾಡಿತ್ತು. ಹೀಗಾಗಿ ಒಂದು ದಿನ ಎಲ್ಲರಿಗೂ ವಿಷಯ ತಿಳಿಸಬೇಕು ಎಂದು ನಿರ್ಧರಿಸಿಯೇ ಬಿಟ್ಟರು.

ಹೆಂಡತಿ ಒಪ್ಪಿಗೆ

ಈ ವಿಷಯವನ್ನು ಮನೆ ಮಂದಿಗೆ ತಿಳಿಸಬೇಕು ಎಂದು ನಿರ್ಧರಿಸಿ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಮದ್ರಾಸ್ ನ ಫೈವ್ ಸ್ಟಾರ್ ಹೊಟೇಲ್ ಗೆ ಹೋದ ಅವರು ಊಟ ಮಾಡುವ ಮುನ್ನ ಪತ್ನಿ ಅಂಬುಜಾ ಅವರಿಗೆ ಒಂದು ನೋಟ್ ಪುಸ್ತಕ ಕೊಟ್ಟು ಹೀಗೆ ಹೇಳಿದರು…

ಇದೊಂದು ಕಾದಂಬರಿ ಅಂತಾ ತಿಳಿದುಕೋ. ಆದರೆ ಇದು ನನ್ನ ಜೀವನದ ಕಥೆ. ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗುತ್ತೇನೆ. ಇಲ್ಲವಾದರೆ ಇಲ್ಲ. ಎಲ್ಲವನ್ನೂ ಮರೆತು ಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯಲ್ಲಿ ನಿನ್ನ ಅಭಿಪ್ರಾಯವನ್ನು ಬರೆ. ಅದು ಖುಷಿ ಕೊಟ್ಟರೂ ಸರಿ ದುಃಖ ನೀಡಿದರೂ ಸರಿ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿ ಮೌನವಾದರು.

ಸುಮಾರು ಐದು ನಿಮಿಷ ಯೋಚಿಸಿದ ಅಂಬುಜಾ, ನೋಟ್ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಏನೋ ಬರೆದರು. ಬಳಿಕ ಅದನ್ನು ತೆರೆದು ಓದಿದ ದ್ವಾರಕೀಶ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂಬುಜಾ ಅವರು ಅದರಲ್ಲಿ ನಿಮ್ಮ ಸಂತೋಷವೇ ನನ್ನ ಸಂತೋಷ ಎಂದು ಹೇಳಿದ್ದರು.

ಎರಡನೇ ಮದುವೆ

ಮಡದಿಯ ಒಪ್ಪಿಗೆ ಸಿಕ್ಕಿದ ಬಳಿಕ ಅಲ್ಲಿಂದಲೇ ಶೈಲಜಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಂಬುಜಾ ಕೂಡಾ ಶೈಲಜಾ ಅವರೊಂದಿಗೆ ಮಾತನಾಡಡಿದ್ದರು. ಈ ವಿಷಯ ಕೇಳಿ ಅವರ ಮಕ್ಕಳೂ ಖುಷಿ ಪಟ್ಟಿದ್ದರು. ಎಲ್ಲರೂ ಶುಭ ಹಾರೈಸಿದರು. ಬಳಿಕ ಎಲ್ಲರ ಸಮ್ಮುಖದಲ್ಲೂ ಶೈಲಜಾ ಅವರನ್ನು ಮದುವೆಯಾಗಿರುವುದಾಗಿ ದ್ವಾರಕೀಶ್ ನೆನಪಿಸಿಕೊಂಡಿದ್ದರು.

ದ್ವಾರಕೀಶ್ ಅವರಿಗೆ ಎರಡನೇ ಮದುವೆಯಾದಾಗ ಅವರಿಗೆ 51 ವರ್ಷ. ಮೊದಲ ಹೆಂಡತಿಯ ಒಪ್ಪಿಗೆ ಪಡೆದು ಅವರು ಎರಡನೇ ಮದುವೆಯಾದರೂ ಇದು ಆಗ ಸಾಕಷ್ಟು ವಿವಾದ ಎಬ್ಬಿಸಿತ್ತು.


ದ್ವಾರಕೀಶ್ ಮತ್ತು ಅಂಬುಜಾ ಅವರ ಮೊದಲ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಉಳಿದವರು ಒಂದೆರಡು ಚಿತ್ರಗಳ ಬಳಿಕ ಬೇರೆ ಕೆಲಸಗಳಲ್ಲಿ ಆಸಕ್ತಿ ತೋರಿಸಿದರು. ದ್ವಾರಕೀಶ್ ಮತ್ತು ಶೈಲಜಾ ಅವರಿಗೆ ಓರ್ವ ಮಗನಿದ್ದಾನೆ. ಒಟ್ಟಿನಲ್ಲಿ ಇಬ್ಬರು ಮಡದಿಯರ ಮುದ್ದಿನ ಗಂಡನಾಗಿ ದ್ವಾರಕೀಶ್ ಅವರ ಪ್ರೇಮ ಕಥೆ ಅವರ ಎರಡನೇ ಮದುವೆ ವೇಳೆ ಸಾಕಷ್ಟು ಸುದ್ದಿ ಮಾಡಿತ್ತು.

Continue Reading

ಸಿನಿಮಾ

‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

‌Actor Dwarakish: ಅಂಬರೀಶ್, ಅನಂತನಾಗ್ ರೀತಿಯಲ್ಲಿ ವಿಧಾನ ಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ನಟ ದ್ವಾರಕೀಶ್‌ ಅವರು, 2004 ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು.

VISTARANEWS.COM


on

Actor Dwarakish
Koo

ಬೆಂಗಳೂರು: ನಟ ದ್ವಾರಕೀಶ್ (‌Actor Dwarakish) ಅವರು ಬರೀ ನಟ, ನಿರ್ಮಾಪಕ ಅಷ್ಟೇ ಅಲ್ಲ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. ಅಂಬರೀಶ್, ಅನಂತನಾಗ್ ಅವರ ರೀತಿಯಲ್ಲಿ ವಿಧಾನಸಭೆ ಪ್ರವೇಶ ಮಾಡುವ ಆಸೆ ಹೊಂದಿದ್ದ ಅವರು, 2004ರಲ್ಲಿ ಆಪ್ತಮಿತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಹೀಗಾಗಿ ಆಪ್ತಮಿತ್ರ ಸಿನಿಮಾಕ್ಕೂ ರಾಜಕೀಯಕ್ಕೂ ನಂಟು ಇದೆ.

ʼಕನ್ನಡ ನಾಡುʼ ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಮಾಡಿದ ದ್ವಾರಕೀಶ್‌ ಅವರು, 2004ರಲ್ಲಿ ಆ ಪಕ್ಷದಿಂದ ಹುಣಸೂರಿನಿಂದ ಸ್ಪರ್ಧೆ ಮಾಡಿದ್ದರು. ಹುಣಸೂರು ತಮ್ಮ ಹುಟ್ಟೂರು ಆಗಿದ್ದರಿಂದ ಅಲ್ಲಿ ಜನರು ಕೈ ಹಿಡಿಯುತ್ತಾರೆ ಎಂದು ಚುನಾವಣಾ ಕಣಕ್ಕಿಳಿದಿದ್ದರು. ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಹೋದಾಗ ಉತ್ತಮ ಬೆಂಬಲ ಸಿಕ್ಕಿತ್ತು. ಆದರೆ ಚುನಾವಣೆಯಲ್ಲಿ ಕೇವಲ 2300 ಮತಗಳನ್ನು ಪಡೆದು ಡೆಪಾಸಿಟ್ ಸಹ ಕಳೆದುಕೊಂಡರು.

ಇದನ್ನೂ ಓದಿ | Actor Dwarakish: ಕರುನಾಡ ಕುಳ್ಳ, ಹಿರಿಯ ನಟ ದ್ವಾರಕೀಶ್‌ ಇನ್ನಿಲ್ಲ

ಅಂದು ಕನ್ನಡ ನಾಡು ಪಕ್ಷದಿಂದ ಗೆದ್ದಿದ್ದು ಕೇವಲ ಸುರಪುರದ ರಾಜುಗೌಡ ಮಾತ್ರ (ಈಗ ಉಪಚುನಾವಣೆ ನಡೆಯಿತ್ತಿದ್ದು, ರಾಜುಗೌಡ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ). ಆಪ್ತಮಿತ್ರ ಸಿನಿಮಾ ಶೂಟಿಂಗ್ ನಡುವೆಯೇ ದ್ವಾರಕೀಶ್‌ ಅವರು ಪ್ರಚಾರ ನಡೆಸಿದರು. ಆದರೆ ಕ್ಷೇತ್ರದ ಜನ ಕೈ ಹಿಡಿದಿರಲಿಲ್ಲ, ಆಪ್ತಮಿತ್ರ ಸಿನಿಮಾ ಮಾತ್ರ ಕೈ ಹಿಡಿದಿತ್ತು. ಬ್ಯಾಲೆಟ್‌ನಲ್ಲಿ ಸೋಲಿಸಿದ್ದ ಜನ‌, ಸಿನಿಮಾ ಮಂದಿರದಲ್ಲಿ ದ್ವಾರಕೀಶ್ ಅವರನ್ನು ನಿರ್ಮಾಪಕ ಹಾಗೂ ಸಹನಟನಾಗಿ ಗೆಲ್ಲಿಸಿದ್ದರು.

ಅಣ್ಣಾವ್ರಿಗೆ ಆಪ್ತ, ವಿಷ್ಣುವರ್ಧನ್‌ಗೆ ಆಪ್ತಮಿತ್ರ ದ್ವಾರಕೀಶ್;‌ ಇವರ ನಂಟು ಹೇಗಿತ್ತು?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್‌ (81) (Actor Dwarakish) ಅವರು ಮಂಗಳವಾರ (ಏಪ್ರಿಲ್‌ 16) ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆ, ಗಮನ ಸೆಳೆಯುವ ವ್ಯಕ್ತಿತ್ವ ಹೊಂದಿದ್ದ ದ್ವಾರಕೀಶ್‌ ಅವರು ಸ್ನೇಹಜೀವಿಯೂ ಆಗಿದ್ದರು. ಅದರಲ್ಲೂ, ಡಾ.ರಾಜಕುಮಾರ್‌ (Dr Rajkumar), ಡಾ.ವಿಷ್ಣುವರ್ಧನ್‌ (Dr Vishnuvardhan) ಅವರೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದರು. ಅದರಲ್ಲೂ, ವಿಷ್ಣುವರ್ಧನ್‌ ಅವರ ಜತೆ ಹೆಚ್ಚು ಆತ್ಮೀಯತೆ ಹೊಂದಿದ್ದರು.

ವಿಷ್ಣುವರ್ಧನ್-ದ್ವಾರಕೀಶ್‌ ಜೋಡಿ ಮೋಡಿ

ಕನ್ನಡ ಸಿನಿಮಾ ರಂಗದಲ್ಲಿ ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಜೋಡಿಯು ಮೋಡಿ ಮಾಡಿತ್ತು. ಕಳ್ಳ-ಕುಳ್ಳ, ಕಿಟ್ಟು-ಪುಟ್ಟು, ಸಿಂಗಾಪೂರ್‌ನಲ್ಲಿ ರಾಜ-ಕುಳ್ಳ, ಗುರು-ಶಿಷ್ಯರು, ಕಿಲಾಡಿಗಳು ಸೇರಿ ಹಲವು ಸೂಪರ್‌ ಡೂಪರ್‌ ಹಿಟ್‌ ಆದ ಸಿನಿಮಾಗಳಲ್ಲಿ ಇವರ ಜೋಡಿಯು ಮೋಡಿ ಮಾಡಿತ್ತು. ದ್ವಾರಕೀಶ್‌ ನಿರ್ದೇಶನದ ಮೊದಲ ಚಿತ್ರ ನೀ ಬರೆದ ಕಾದಂಬರಿಯು ಕೂಡ ಭಾರಿ ಹಿಟ್‌ ಆಯಿತು. “ಒಂದು ದಿನವೂ ವಿಷ್ಣುವರ್ಧನ್‌ ಕಾಲ್‌ಶೀಟ್‌ ಇಲ್ಲ ಎಂದಿರಲಿಲ್ಲ” ಎಂಬುದಾಗಿ ಆಗಾಗ ದ್ವಾರಕೀಶ್‌ ಅವರು ಹೇಳುತ್ತಲೇ ಇದ್ದರು.

ಗೆಳೆಯನಿಗಾಗಿ ಸಿನಿಮಾ ಮಾಡಿದ ವಿಷ್ಣು

ಆಪ್ತಮಿತ್ರ ಸಿನಿಮಾ ಬಿಡುಗಡೆಗೂ ಮೊದಲು ದ್ವಾರಕೀಶ್‌ ಅವರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದರು. ಅವರು ಮನೆ ಕೂಡ ಮಾರಿಕೊಂಡು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದರು. ಆಗ, ದ್ವಾರಕೀಶ್‌ ನೆರವಿಗೆ ಧಾವಿಸಿದ ವಿಷ್ಣುವರ್ಧನ್‌ ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆಯದೆ ದ್ವಾರಕೀಶ್‌ ನಿರ್ಮಾಣದ ಆಪ್ತಮಿತ್ರ ಸಿನಿಮಾದಲ್ಲಿ ನಟಿಸಿದರು. ಆಪ್ತ ಮಿತ್ರ ಸಿನಿಮಾವು ಹಿಟ್‌ ಆಗಿ, ಕಾಲವನ್ನು ತಡೆಯೋರು ಯಾರೂ ಇಲ್ಲ ಎಂದು ವಿಷ್ಣು-ದ್ವಾರಕೀಶ್‌ ಜೋಡಿ ಹಾಡು ಮನೆಮಾತಾಗಿದ್ದಲ್ಲದೆ, ದ್ವಾರಕೀಶ್‌ ಅವರು ಮತ್ತೆ ಸ್ವಂತ ಮನೆಗೆ ಯಜಮಾನರಾದರು. ಅಷ್ಟರಮಟ್ಟಿಗೆ, ಇವರ ಜೋಡಿ, ಸ್ನೇಹವು ಗಟ್ಟಿಯಾಗಿತ್ತು.

ಸ್ನೇಹದ ಸೊಗಸಿನ ಮಧ್ಯೆ ಮುನಿಸು

ವಿಷ್ಣುವರ್ಧನ್‌ ಹಾಗೂ ದ್ವಾರಕೀಶ್‌ ಅವರ ಮಧ್ಯೆ ಆಗಾಗ ಮುನಿಸು, ರಾಜಿ ನಡೆಯುತ್ತಲೇ ಇದ್ದವು. ನಾನು ಯಾವಾಗ ವಿಷ್ಣುವರ್ಧನ್‌ ಜತೆ ಮುನಿಸಿಕೊಂಡು, ನಂತರ ಒಂದಾಗಿ ಸಿನಿಮಾ ಮಾಡಿದ್ದೇನೆಯೋ, ಆ ಸಿನಿಮಾಗಳೆಲ್ಲ ಹಿಟ್‌ ಆಗಿವೆ ಎಂದು ದ್ವಾರಕೀಶ್‌ ಅವರೇ ಹೇಳುತ್ತಿದ್ದರು. ಆದರೆ, ಆಪ್ತಮಿತ್ರ ಸಿನಿಮಾ ಬಳಿಕ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಅವರ ಬಗ್ಗೆ ನೀಡಿದ ಹೇಳಿಕೆಯು ಇಬ್ಬರ ಮಧ್ಯೆ ಮತ್ತೆ ಬಿರುಕು ಮೂಡಿಸಿತು.

ಇನ್ನು, ವಿಷ್ಣುವರ್ಧನ್‌ ಅವರ ಅಗಲಿಕೆಯ ಬಳಿಕ ಯಾವಾಗ ಮಾತನಾಡಿದರೂ ದ್ವಾರಕೀಶ್‌ ಅವರು ವಿಷ್ಣುವರ್ಧನ್‌ ಹೆಸರು ಪ್ರಸ್ತಾಪಿಸದೆ ಇರುತ್ತಿರಲಿಲ್ಲ. “ಸೂಪರ್‌ ಸ್ಟಾರ್‌ ಆಗಿದ್ದ ವಿಷ್ಣುವರ್ಧನ್‌ ಇಲ್ಲದೆ ನಾನಿಲ್ಲ. ಆದರೂ, ಆತನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ” ಎಂದು ದ್ವಾರಕೀಶ್‌ ಅವರು ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದರು.

ಅಣ್ಣಾವ್ರಿಗೂ ಆಪ್ತರಾಗಿದ್ದ ದ್ವಾರಕೀಶ್

ಡಾ.ರಾಜಕುಮಾರ್‌ ಅವರಿಗೆ ದ್ವಾರಕೀಶ್‌ ಅವರು ಅತ್ಯಾಪ್ತರಾಗಿದ್ದರು. ಇವರಿಗೆ ಎರಡು ಸಿನಿಮಾಗಳನ್ನು ದ್ವಾರಕೀಶ್‌ ನಿರ್ಮಾಣ ಮಾಡಿದ್ದರು. ಅದರಲ್ಲೂ, ಮೇಯರ್‌ ಮುತ್ತಣ್ಣ ಸಿನಿಮಾದಲ್ಲಿ ರಾಜಕುಮಾರ್‌ ಹಾಗೂ ದ್ವಾರಕೀಶ್‌ ಅವರು ಒಟ್ಟಿಗೆ ನಟಿಸಿದ್ದರು. ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ರಾಜಕುಮಾರ್‌ ಅವರೊಂದಿಗೆ ನಟಿಸಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. “ಡಾ.ರಾಜಕುಮಾರ್‌ ಅವರು ಯಾವಾಗ ಸಿಕ್ಕರೂ ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಅವರೊಂದಿಗೆ ಹೆಚ್ಚು ಸಿನಿಮಾ ಮಾಡಲು ಆಸೆ ಇತ್ತು. ಆದರೆ, ಅವರು ತುಂಬ ಬ್ಯುಸಿ ಇರುತ್ತಿದ್ದರು. ಆತ್ಮೀಯತೆ ಮಾತ್ರ ಚೆನ್ನಾಗಿತ್ತು” ಎಂದು ದ್ವಾರಕೀಶ್‌ ಹೇಳಿದ್ದರು.

ಮುನಿಸು, ಸಿಟ್ಟು, ಸೆಡವಿನ ಮಧ್ಯೆಯೂ ದ್ವಾರಕೀಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ನೇಹ ಸಂಪಾದಿಸಿದ್ದರು. ರೆಬೆಲ್‌ ಸ್ಟಾರ್‌ ಅಂಬರೀಶ್‌, ಸೂಪರ್‌ ಸ್ಟಾರ್‌ ರಜನಿಕಾಂತ್‌, ಶಂಕರ್‌ನಾಗ್‌ ಅವರ ಜತೆಯೂ ದ್ವಾರಕೀಶ್‌ ಅವರು ಉತ್ತಮ ಬಾಂಧವ್ಯ ಹೊಂದಿದ್ದರು.

ಇದನ್ನೂ ಓದಿ | Actor Dwarakish: ಕನ್ನಡ ಸಿನಿಮಾದ ʼಪ್ರಚಂಡ ಕುಳ್ಳʼ ದ್ವಾರಕೀಶ್ ಬಗ್ಗೆ ನೀವರಿಯದ 12 ವಿಶಿಷ್ಟ ಸಂಗತಿಗಳು ಇಲ್ಲಿವೆ

Continue Reading

ಸ್ಯಾಂಡಲ್ ವುಡ್

Uttarakaanda Movie: ಶಿವಣ್ಣ- ಧನಂಜಯ್‌ ಅಭಿನಯದ ʼಉತ್ತರಕಾಂಡʼ ಚಿತ್ರಕ್ಕೆ ಚೈತ್ರಾ ಆಚಾರ್‌ ಎಂಟ್ರಿ

ttarakaanda Movie: ಈ ವರ್ಷದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಇಂದಾದ ʼಉತ್ತರಕಾಂಡʼ ದ ಚಿತ್ರೀಕರಣ ಆರಂಭವಾಗಿದೆ. ಡಾ. ಶಿವರಾಜ್‌ ಕುಮಾರ್‌, ಡಾಲಿ‌ ಧನಂಜಯ್‌ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿರುವ ಈ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಕನ್ನಡ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಲಚ್ಚಿ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಪೋಸ್ಟರ್‌ ಹೊರ ಬಂದಿದ್ದು, ಕುತೂಹಲ ಮೂಡಿಸಿದೆ.

VISTARANEWS.COM


on

Uttarakaanda Movie
Koo

ಬೆಂಗಳೂರು: ಈ ವರ್ಷದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ʼಉತ್ತರಕಾಂಡʼ (Uttarakaanda Movie)ವೂ ಒಂದು. ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌, ಡಾಲಿ‌ ಧನಂಜಯ್‌ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿರುವ ಕಾರಣಕ್ಕೆ ಈ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ. ನಿನ್ನೆ (ಏ. 15) ಸಿನಿಮಾದ ಶೂಟಿಂಗ್‌ ಆರಂಭಿಸಲಾಗಿದೆ. 15 ದಿನಗಳ ಶೂಟಿಂಗ್‌ ವಿಜಯಪುರದಲ್ಲಿ ನಡೆಯಲಿದೆ. ಈ ಮಧ್ಯೆ ಈ ಚಿತ್ರಕ್ಕೆ ನಟಿ ಚೈತ್ರಾ ಜೆ. ಆಚಾರ್ (Chaithra J. Achar) ಸೇರ್ಪಡೆಯಾಗಿದ್ದಾರೆ. ʼಟೋಬಿʼ, ʼಸಪ್ತ ಸಾಗರದಾಚೆ ಸೈಡ್‌ ಬಿʼ ಮುಂತಾದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಚೈತ್ರಾ ʼಉತ್ತರಕಾಂಡʼ ಚಿತ್ರತಂಡವನ್ನು ಸೇರಿದ್ದು, ಇನ್ನಷ್ಟು ನಿರೀಕ್ಷೆ ಮೂಡಿಸಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡ ʼಉತ್ತರಕಾಂಡʼ ಸಿನಿಮಾಕ್ಕೆ ರೋಹಿತ್ ಪದಕಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚೈತ್ರಾ ಆಚಾರ್ ಈ ಚಿತ್ರದಲ್ಲಿ ಲಚ್ಚಿ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ಪೋಸ್ಟರ್‌ ಕೂಡ ರಿಲೀಸ್‌ ಮಾಡಿದೆ. ರಗಡ್‌ ಲುಕ್‌ ಮೂಲಕ ಚೈತ್ರಾ ಪೋಸ್ಟರ್‌ನಲ್ಲಿ ಮಿಂಚು ಹರಿಸಿದ್ದಾರೆ. ಕೆಂಪು ಸೇರಿ ಸುತ್ತಿಕೊಂಡು ಖಡಕ್‌ ನೋಟ ಬೀರಿದ್ದಾರೆ. ಕತ್ತಿನಲ್ಲಿ ಮಾಂಗಲ್ಯ ಸರವೂ ಇದ್ದು, ಅವರ ಪಾತ್ರದ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ. ರಾಜ್ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ.

ನಾಯಕಿ ಪಾತ್ರದಿಂದ ಹೊರ ಬಂದಿದ್ದ ರಮ್ಯಾ

ಚಿತ್ರತಂಡ ಆರಂಭದಲ್ಲಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರನ್ನು ಹೆಸರಿಸಿತ್ತು. ಮಾತ್ರವಲ್ಲ ರಮ್ಯಾ ಚಿತ್ರದ ಮುಹೂರ್ತದಲ್ಲಿಯೂ ಭಾಗವಹಿಸಿದ್ದರು. ಆದರೆ ಇತ್ತೀಚೆಗೆ ಅವರು ಚಿತ್ರತಂಡದಿಂದ ಹೊರಬಂದು ಶಾಕ್‌ ನೀಡಿದ್ದರು. ಕಳೆದ ವರ್ಷ ʼಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ನಾಯಕಿ ಪಾತ್ರದಿಂದ ಹಿಂದೆ ಸರಿದಿದ್ದ ರಮ್ಯಾ ಕೆಲವು ದಿನಗಳ ಹಿಂದೆ ʼಉತ್ತರಕಾಂಡʼ ಸಿನಿಮಾದಿಂದಲೂ ಹೊರ ಬಂದಿದ್ದರು. ʼ‘ಡೇಟ್ಸ್​ ಕೊರತೆಯಿಂದಾಗಿ ನಾನು ʼಉತ್ತರಕಾಂಡʼದಲ್ಲಿ ಕೆಲಸ ಮಾಡುತ್ತಿಲ್ಲ (ಸಿನಿಮಾ ಮತ್ತು ರಾಜಕೀಯದ ಕೆಲಸಗಳನ್ನು ನಾನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇನೆ). ಚಿತ್ರತಂಡಕ್ಕೆ ನಾನು ಶುಭ ಹಾರೈಸುತ್ತೇನೆ’ʼ ಎಂದು ರಮ್ಯಾ ಕಾರಣ ತಿಳಿಸಿದ್ದರು. ಆ ಮೂಲಕ ಅನೇಕ ವರ್ಷಗಳ ಬಳಿಕ ಅವರನ್ನು ತೆರೆ ಮೇಲೆ ನೋಡಬೇಕೆಂಬ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಇದನ್ನೂ ಓದಿ: Kannada New Movie: ಚಿತ್ರೀಕರಣ ಆರಂಭಿಸಿದ ಬಹುನಿರೀಕ್ಷಿತ ಚಿತ್ರ ʼಉತ್ತರಕಾಂಡʼ

ವಿಳಂಬಕ್ಕೆ ಕಾರಣವೇನು?

ʼʼಉತ್ತರಕಾಂಡʼದ ಮುಹೂರ್ತ 2022ರಲ್ಲಿ‌ಯೇ ಆಗಿತ್ತು. ಆದರೆ ಇದುವರೆಗೆ ಚಿತ್ರೀಕರಣ ಆರಂಭವಾಗಿರಲಿಲ್ಲ. ಚಿತ್ರಕಥೆಯು ಬಯಲುಸೀಮೆಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವುದರಿಂದ ಹಾಗೂ ಉತ್ತರ ಕರ್ನಾಟಕದ ಆಡುಭಾಷೆಯನ್ನು ಹೊಂದಿರುವುದರಿಂದ ಚಿತ್ರಕ್ಕೆ ನಿಖರವಾದ ಸಂಶೋಧನೆ ಮತ್ತು ಪ್ಲ್ಯಾನಿಂಗ್‌ನ ಅಗತ್ಯವಿತ್ತು. ಈ ಕಾರಣದಿಂದ ಮತ್ತು ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ಚಿತ್ರೀಕರಣ ವಿಳಂಬಗೊಂಡಿತು. ಆದರೆ ಇದೀಗ ಸರ್ವ ಸಿದ್ಧತೆಗಳೊಂದಿಗೆ ಚಿತ್ರೀಕರಣ ಆರಂಭಗೊಂಡಿದೆʼʼ ಎಂದು ಚಿತ್ರತಂಡ ತಿಳಿಸಿದೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Continue Reading
Advertisement
UPSC Results 2023
ದೇಶ4 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ4 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ4 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ4 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ5 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ5 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ5 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ5 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ6 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ23 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ6 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌