Karnataka Politics: ಮುಗಿಯದ ಸಂಪುಟ ತಿಕ್ಕಾಟ, ದಿಲ್ಲಿಯಿಂದ ಮರಳಿದ ಡಿಕೆಶಿ, ಪ್ರತಾಪ್‌ ಟೀಕೆಗೆ ವ್ಯಂಗ್ಯ - Vistara News

ಕರ್ನಾಟಕ

Karnataka Politics: ಮುಗಿಯದ ಸಂಪುಟ ತಿಕ್ಕಾಟ, ದಿಲ್ಲಿಯಿಂದ ಮರಳಿದ ಡಿಕೆಶಿ, ಪ್ರತಾಪ್‌ ಟೀಕೆಗೆ ವ್ಯಂಗ್ಯ

ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿ‌ ಕಾರಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಮನೆಯ ಮುಂದೆಯೇ ಬಂದು ಮಲಗಿಕೊಳ್ಳಲಿ ಎಂದಿದ್ದಾರೆ.

VISTARANEWS.COM


on

dks
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪ್ರಕ್ರಿಯೆಯಲ್ಲಿ ತಮ್ಮವರನ್ನು ಸೇರಿಸಿಕೊಳ್ಳುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ (DK shivakumar) ತಿಕ್ಕಾಟ ದೆಹಲಿಯಲ್ಲಿ ಮುಂದುವರಿದಿದೆ. ದೆಹಲಿಯಿಂದ ಶುಕ್ರವಾರ ಖಾಸಗಿ ಕಾರ್ಯಕ್ರಮಕ್ಕಾಗಿ ವಾಪಸ್ಸಾಗಿರುವ ಡಿ.ಕೆ ಶಿವಕುಮಾರ್, ಇಂದು ಮತ್ತೆ ರಾಷ್ಟ್ರ ರಾಜಧಾನಿಗೆ ಮರಳಲಿದ್ದಾರೆ.

ದೆಹಲಿಯಿಂದ ಬಂದಿದ್ದೀನೆ, ವಾಪಸ್ಸು ಹೋಗಬೇಕು. ನಮ್ಮ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮ ಇದೆ. ಅದನ್ನು ಮುಗಿಸಿಕೊಂಡು ನಾಳೆ‌ ಹೋಗ್ತೇನೆ. ಕ್ಯಾಬಿನೆಟ್ ರಚನೆ ಚರ್ಚೆಗಾಗಿಯೇ ದೆಹಲಿಗೆ ಹೋಗಿದ್ದೆ. ನಾಳೆ ಒಂದು ದಿನ ಅಷ್ಟೇ, ಎಲ್ಲವನ್ನೂ ತಿಳಿಸುತ್ತೇವೆ ಎಂದು ಶಿವಕುಮಾರ್‌ ತಿಳಿಸಿದ್ದಾರೆ.

ಸರ್ಕಾರದ ಗ್ಯಾರಂಟಿಗಳ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿ‌ ಕಾರಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರತಿಭಟನೆ ಮಾಡಲಿ ಎಂದಿದ್ದಾರೆ. ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಜೂನ್ ನಂತರ ಪ್ರತಿಭಟನೆ ಮಾಡುವುದಾಗಿ ಪ್ರತಾಪ್ ಸಿಂಹ ಹೇಳಿದ್ದರು. ಇಲ್ಲೇ ನಮ್ಮ ಮನೆ ಹತ್ತಿರ ಬಂದು ಮಲಗಿಕೊಳ್ಳುವುಕ್ಕೆ ಹೇಳಿ. ಜೂನ್ ಯಾಕೆ, ನಾಳೆಯಿಂದಲೇ ಬಂದು ಮಲಗಿಕೊಳ್ಳಲು ಹೇಳಿ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.

ಕುಟುಂಬದ ಖಾಸಗಿ ಕೆಲಸದ ಮೇಲೆ ಗುರುವಾರ ರಾತ್ರಿ ದೆಹಲಿಯಿಂದ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದ ಡಿಸಿಎಂ, ಬೆಳಗ್ಗೆ ಆರು ಗಂಟೆಗೆ ಮನೆಯಿಂದ ತೆರಳಿದ್ದಾರೆ. ಇಂದು ಮತ್ತೆ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ಪ್ರಯಾಣ ಮಾಡಲಿದ್ದಾರೆ.

ಇದನ್ನೂ ಓದಿ: Karnataka Politics: ದಿಲ್ಲಿಯಲ್ಲಿ ಸಂಪುಟ ಸರ್ಕಸ್‌; ಯಾರಿಗೆ ಅವಕಾಶ? ಯಾರಿಗೆ ಗೇಟ್‌ ಬಂದ್?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

Ram Navami : ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

VISTARANEWS.COM


on

Ram Navami
Koo

ಪ್ರತಿ ವರ್ಷದಂತೆ ಈ ಬಾರಿಯು ಭಗವಾನ್ ಶ್ರೀ ರಾಮನ (sriram) ಜನ್ಮ ದಿನವಾದ ರಾಮ ನವಮಿ (Ram Navami) ಮತ್ತೆ ಬಂದಿದೆ. ದೇಶಾದ್ಯಂತ ರಾಮ ನವಮಿ ಉತ್ಸವಕ್ಕೆ ರಾಮ ಭಕ್ತರು ಸಜ್ಜಾಗಿದ್ದಾರೆ. ರಾಮ ಮಂದಿರಗಳನ್ನೂ (ram mandir) ಸುಂದರವಾಗಿ ಅಲಂಕರಿಸಿ ಅತ್ಯಂತ ವೈಭವದಿಂದ ಉತ್ಸವವನ್ನು ಆಚರಿಸಲು ಸಿದ್ದತೆಗಳು ಭರದಿಂದ ಸಾಗುತ್ತಿದೆ.

ರಾಮ ನವಮಿಯಂದು ಸಾಮಾನ್ಯವಾಗಿ ರಾಮ ಭಕ್ತರು (Ram Bhaktas) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಹಲವಾರು ಮಂದಿ ಉಪವಾಸ (fasting) ವ್ರತವನ್ನು ಆಚರಿಸುತ್ತಾರೆ. ದೇವಾಲಯಗಳಲ್ಲಿ (temple) ಆಧ್ಯಾತ್ಮಕ ಪ್ರವಚನ, ಭಜನೆ, ಸಂಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ತೊಟ್ಟಿಲಲ್ಲಿ ಪುಟ್ಟ ರಾಮನನ್ನು ಇಟ್ಟು ತೂಗಿ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಈ ದಿನ ಎಲ್ಲರೂ ರಾಮನ ಭಕ್ತಿಯಲ್ಲಿ ಮಿಂದೇಳುತ್ತಾರೆ.

ರಾಮ ನವಮಿ ಆಚರಣೆ ಯಾವಾಗ?

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದ್ದಾನೆ. ಹೀಗಾಗಿ ಹಿಂದೂ ಚಾಂದ್ರಮಾನ ಪಂಚಾಂಗದಲ್ಲಿ ಬರುವ ಏಪ್ರಿಲ್ 17 ಬುಧವಾರದಂದು ರಾಮನವಮಿಯನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:

ರಾಮ ನವಮಿ ದಿನ ಮಧ್ಯಾಹ್ನ ಗಂಟೆ 11.03 ರಿಂದ 1.38 ವಿಶೇಷವೆಂದು ಪರಿಗಣಿಸಲಾಗಿದೆ. ರಾಮ ನವಮಿ ತಿಥಿಯು ಏಪ್ರಿಲ್ 16ರಂದು ಬೆಳಗ್ಗೆ 1.23ಕ್ಕೆ ಪ್ರಾರಂಭವಾಗಿ ಏಪ್ರಿಲ್ 17ರಂದು ರಾತ್ರಿ 3.14 ಕ್ಕೆ ಮುಕ್ತಾಯವಾಗುತ್ತದೆ.

ರಾಮ ನವಮಿಯ ಇತಿಹಾಸವೇನು?

ಹಿಂದೂ ಪುರಾಣಗಳಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದೇ ಪರಿಗಣಿಸಲ್ಪಟ್ಟಿರುವ ಭಗವಾನ್ ರಾಮನ ರಾಮ ನವಮಿಯಂದು ಜನ್ಮ ತಾಳಿದ್ದನು. ಹಿಂದೂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕವಾಗಿ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ವಿಷ್ಣುವಿನ ಏಳನೇ ಅವತಾರವೆಂದು ನಂಬಲಾಗುತ್ತದೆ. ಸದಾಚಾರ ಮತ್ತು ಸದ್ಗುಣಗಳ ಪ್ರತಿಪಾದಕನೆಂದು ರಾಮನನ್ನು ಕರೆಯಲಾಗುತ್ತದೆ. ಅನೇಕ ಶತಮಾನಗಳಿಂದ ರಾಮ ನವಮಿಯನ್ನು ಅತ್ಯಂತ ವೈಭವಾಗಿ ಆಚರಿಸಲಾಗುತ್ತದೆ.

ರಾಮ ನವಮಿ ಆಚರಣೆ ಏಕೆ ?

ಪ್ರಪಂಚದಾದ್ಯಂತದ ಹಿಂದೂಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ. ರಾಮ ನವಮಿಯು ಧರ್ಮ ಅಥವಾ ಸದಾಚಾರದ ನಿರಂತರ ಮೌಲ್ಯಗಳನ್ನು ಗೌರವಿಸುವ ಆಚರಣೆಯಾಗಿದೆ. ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಇದು ಸೂಚಿಸುತ್ತದೆ. ಭಗವಾನ್ ರಾಮನ ಕರ್ತವ್ಯ, ಗೌರವ ಮತ್ತು ತ್ಯಾಗದ ಉದಾಹರಣೆಯು ಜನರಲ್ಲಿ ನೈತಿಕ ತತ್ತ್ವ ಗಳನ್ನು ಸಂರಕ್ಷಿಸಲು ಮತ್ತು ಸದ್ಗುಣಶೀಲ ಜೀವನವನ್ನು ನಡೆಸಲು ಪ್ರೇರೇಪಿಸುತ್ತದೆ.

ಹೇಗೆ ಆಚರಣೆ ?

ರಾಮ ನವಮಿಯನ್ನು ಭಾರತದಲ್ಲಿ ಜನರು ಬಹಳ ಉತ್ಸಾಹ ಮತ್ತು ಆಸಕ್ತಿಯಿಂದ ಆಚರಿಸುತ್ತಾರೆ. ಭಗವಾನ್ ರಾಮನ ಸಣ್ಣ ವಿಗ್ರಹವನ್ನು ಪೀಠದ ಮೇಲೆ ಇರಿಸಲಾಗುತ್ತದೆ. ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಅಲಂಕರಿಸಲಾಗುತ್ತದೆ. ಮನೆ ಬಾಗಿಲಲ್ಲಿ ರಂಗೋಲಿಗಳನ್ನು ಬರೆಯಲಾಗುತ್ತದೆ. ಭಗವಾನ್ ರಾಮನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಉಪವಾಸ, ಮೆರವಣಿಗೆ, ಮಹಾಕಾವ್ಯ ರಾಮಾಯಣ ಪಠಿಸುವುದು ಮತ್ತು ಕೇಳುವುದು, ಹವನಗಳಂತ ವಿವಿಧ ಆಚರಣೆಗಳಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ರಾಮ ನವಮಿಯು ಒಂಬತ್ತು ದಿನಗಳ ಚೈತ್ರ ನವರಾತ್ರಿ ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಈ ಸಂದರ್ಭದಲ್ಲಿ ಜಾತಿ, ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲ ಸಮುದಾಯಗಳು ಏಕತೆ ಮತ್ತು ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳುತ್ತದೆ.

ಅಯೋಧ್ಯೆಯತ್ತ ಎಲ್ಲರ ಚಿತ್ತ

ಉತ್ತರಪ್ರದೇಶದ ಅಯೋಧ್ಯೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾಕೆಂದರೆ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಮೊದಲ ಬಾರಿಗೆ ಹೊಸ ಮಂದಿರದಲ್ಲಿ ರಾಮನ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ತಯಾರಿಗಳು ನಡೆದಿದ್ದು, ವಿಶ್ವದ ಗಮನ ಸೆಳೆದಿದೆ. ಹೊರದೇಶಗಳಲ್ಲೂ ಆಚರಣೆ ರಾಮ ಜನ್ಮದಿನವನ್ನು ಭಾರತದಲ್ಲಿ ಮಾತ್ರವಲ್ಲ ನೇಪಾಳ, ಬಾಂಗ್ಲಾದೇಶದ ಹಿಂದೂಗಳೂ ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಉತ್ತರ ಅಮೆರಿಕ ಮತ್ತು ಯುರೋಪ್ ನ ಕೆಲವು ರಾಷ್ಟ್ರಗಳಲ್ಲೂ ರಾಮನವಮಿಯನ್ನು ಆಚರಿಸಲಾಗುತ್ತದೆ.

Continue Reading

ಉತ್ತರ ಕನ್ನಡ

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ಪ್ರಚಾರಕ್ಕೆ‌ ಇಳಿದಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ‌ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

VISTARANEWS.COM


on

State Administrative Reforms Commission Chairman R V Deshpande statement
Koo

ಕಾರವಾರ: ಗ್ಯಾರಂಟಿ (Guarantee) ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಮೋದಿ ಗ್ಯಾರಂಟಿ ಎಂದು ಪ್ರಚಾರಕ್ಕೆ‌ ಇಳಿದಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ‌ಆರ್.ವಿ. ದೇಶಪಾಂಡೆ (Lok Sabha Election 2024) ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಿಜೆಪಿ 400 ಸ್ಥಾನ ಗೆಲ್ಲುತ್ತದೆ ಎಂದು ಬಿಜೆಪಿಗರು ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಸಾಧನೆ ನೋಡಿ, ಗೆಲ್ಲುವುದು ಸುಲಭವಿಲ್ಲ ಎಂದು ತಿಳಿದು ತಾವೂ ಗ್ಯಾರಂಟಿ ಕೊಡುತ್ತೇವೆಂದು ಜನರ ಮುಂದೆ ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: UPSC Results 2023: ಯುಪಿಎಸ್‌ಸಿ ಪರೀಕ್ಷೆ; ಯುನಿವರ್ಸಲ್‌ನ 18 ಅಭ್ಯರ್ಥಿಗಳ ಅಭೂತಪೂರ್ವ ಸಾಧನೆ

ಸದ್ಯ ರಾಜ್ಯದಲ್ಲಿ ಬರಗಾಲ ಇದೆ. ಕೇಂದ್ರದಿಂದ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ವಿದ್ಯಾಭ್ಯಾಸ ಮಾಡಿದ ನಂತರ ಯುವಕರು ಕೆಲಸ ಸಿಗದೇ ಮನೆಯಲ್ಲಿ ಕೂರುವ ಪರಿಸ್ಥಿತಿ ಇದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಇಂತಹ ಸಮಸ್ಯೆಯನ್ನು ಮನಗಂಡ ಕಾಂಗ್ರೆಸ್ ರಾಜ್ಯದಲ್ಲಿ ಯುವನಿಧಿ ನೀಡುವ ಮೂಲಕ ಯುವಕರ ಏಳಿಗೆಗೆ ಸಹಕಾರಿಯಾಗುವ ಕಾರ್ಯಕ್ರಮ ಚಾಲನೆ ತಂದಿದೆ.

ರೈತರ, ಮಹಿಳೆಯರ, ಯುವಕರ, ಶ್ರಮಿಕರ ಪರ ಗ್ಯಾರಂಟಿ ಯೋಜನೆ ಘೋಷಿಸಿದ್ದೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಈಡೇರಿಸುತ್ತೇವೆ. ರಾಜ್ಯದಲ್ಲಿ ಮಾತು ಕೊಟ್ಟಂತೆ ಗ್ಯಾರಂಟಿ ಜಾರಿಗೆ ತಂದಿದ್ದು ಹಾಗೇ ಕೇಂದ್ರದಲ್ಲೂ ತರಲಿದ್ದೇವೆ ಎಂದರು.

ಇದನ್ನೂ ಓದಿ: Uttara Kannada News: ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಉತ್ತರ ಕನ್ನಡ ಡಿಸಿ ಸೂಚನೆ

ಈ ಬಾರಿ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಸಿಲನ್ನು ಲೆಕ್ಕಿಸದೇ ಜನರು ಬಂದಿರುವುದನ್ನು ನೋಡಿದರೆ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.

Continue Reading

ಕರ್ನಾಟಕ

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

Chitradurga News: ಚಿತ್ರದುರ್ಗದ ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಮಠದಲ್ಲಿ ಅನುಮಾನಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆಯಾಗಿವೆ.

VISTARANEWS.COM


on

Murder Case
Koo

ಚಿತ್ರದುರ್ಗ: ನೀರಿನ‌ ತೊಟ್ಟಿ ಪಕ್ಕ ಅನುಮಾನಸ್ಪದವಾಗಿ ತಾಯಿ-ಮಗಳ ಶವ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ (Chitradurga News) ಕೆಳಗೋಟೆಯ ತಿಪ್ಪೇರುದ್ರಸ್ವಾಮಿ ಮಠದಲ್ಲಿ ನಡೆದಿದ್ದು, ಶವಗಳನ್ನು ಕಂಡು ತಂದೆ-ಮಗ ಗಾಬರಿಯಾಗಿದ್ದಾರೆ. ನೀರಿನಲ್ಲಿ ಮುಳುಗಿ ತಾಯಿ, ಮಗಳು ಪ್ರಾಣಬಿಟ್ಟರಾ ಅಥವಾ ಕೊಲೆ ಮಾಡಲಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಕೆಳಗೋಟೆ ನಿವಾಸಿ ಸುರೇಶ್ ಎಂಬುವವರ ಪತ್ನಿ ಗೀತಾ(42), ಮಗಳು ಪ್ರಿಯಾಂಕಾ(20) ಮೃತರು, ನಗರದ ಕೆಳಗೋಟೆ ತಿಪ್ಪೇರುದ್ರಸ್ವಾಮಿ ಮಠದ ತೊಟ್ಟಿ ಪಕ್ಕ ಮೃತರ ಶವಗಳು ಪತ್ತೆಯಾಗಿವೆ. ನೀರಿನಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಕೂಡ ವ್ಯಕ್ತವಾಗಿವೆ. ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಇದನ್ನೂ ಓದಿ | Physical Abuse : ಇವನೆಂಥ ಗಂಡ! ಕಾಲ್‌ ಗರ್ಲ್‌ ಕರೆಸಿ ಪತ್ನಿ ಮುಂದೆಯೇ ಅಸಭ್ಯ ವರ್ತನೆ

ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ

Theft Case in Bengaluru

ಬೆಂಗಳೂರು: ಬೈಯ್ಯಪ್ಪನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳನನ್ನು (Theft Case) ಬಂಧಿಸಿದ್ದಾರೆ. ದೀಪಕ್ ಅಲಿಯಾಸ್‌ ದೀಪು ಬಂಧಿತ ಆರೋಪಿಯಾಗಿದ್ದಾನೆ. ದೀಪಕ್‌ ಸ್ವಿಗ್ಗಿ ಡೆಲಿವರಿ ಬಾಯ್ (Swiggy Boy) ಆಗಿ ಕೆಲಸ ಮಾಡುತ್ತಿದ್ದ. ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಸುಮಾರು 14 ಪ್ರಕರಣ ದಾಖಲಾಗಿವೆ.

ಬೆಳಗಿನಿಂದ ಸಂಜೆವರೆಗೂ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ. ಕದ್ದ ಬೈಕ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಬೈಕ್‌ ಮಾರಾಟಕ್ಕೂ ಮೊದಲು ದಾಖಲಾತಿಯನ್ನೆಲ್ಲ ನಂತರ ಕೊಡುತ್ತೇನೆ ಎಂದು ಯಮಾರಿಸಿ, ಕಡಿಮೆ ಬೆಲೆಗೆ ಬೈಕ್ ಮಾರುತ್ತಿದ್ದ.

23 ವರ್ಷದ ದೀಪಕ್ ತನ್ನ 18ನೇ ವಯಸ್ಸಿನಲ್ಲೇ ಹತ್ತಕ್ಕೂ ಹೆಚ್ಚು ಗಾಡಿಗಳನ್ನು ಕದ್ದು ರಿಮ್ಯಾಂಡ್ ಹೋಮ್‌ ಸೇರಿದ್ದ. ಇಲ್ಲಿಂದ ಹೊರಬಂದ ದೀಪಕ್‌ ಹೊಸ ಜೀವನ ಕಟ್ಟಿಲಿಲ್ಲ, ಬದಲಿಗೆ ಈ ದಾರಿಯಲ್ಲಿ ಮತ್ತಷ್ಟು ಪಳಗಿ ನಟೋರಿಯಸ್‌ ಆಗಿದ್ದ. ದುಡಿಮೆ ಈತನಿಗೆ ಪಾರ್ಟ್ ಟೈಂ ಕೆಲಸವಾದರೆ, ಕದಿಯುವುದನ್ನೂ ಪ್ರವೃತ್ತಿ ಮಾಡಿಕೊಂಡಿದ್ದ.

ಬೆಂಗಳೂರಿನ ಬನಶಂಕರಿ ನಿವಾಸಿಯಾದ ದೀಪಕ್‌ಗೆ ತಂದೆ ಇಲ್ಲ. ತಾಯಿ ಇದ್ದರೂ ಅವರನ್ನು ಈತ ನೋಡಿಕೊಳ್ಳುತ್ತಿರಲಿಲ್ಲ. ದೀಪಕ್‌ ಹೆಚ್ಚು ಮಾವನ ಆಸರೆಯಲ್ಲೆ ಬೆಳೆದಿದ್ದ. ದೀಪಕ್ ಮಾವ ಮಂಜುನಾಥ್ ಅವರು ಬಿಜಿಎಸ್ ಮಠದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ನಂತರ ಅಮೇರಿಕಾದಲ್ಲಿರುವ ಬಿಜಿಎಸ್‌ನ ಬ್ರಾಂಚ್‌ಗೆ ಶಿಫ್ಟಾಗಿದ್ದರು. ಇದಾದ ಬಳಿಕವೇ ದೀಪಕ್ ದಾರಿ ತಪ್ಪಿದ್ದ. ಮೊದಲ ಬಾರಿ ಜೆಪಿ ನಗರದಲ್ಲಿ ರಾಬರಿ ಮಾಡಿ ರಿಮ್ಯಾಂಡ್ ಹೋಂ ಸೇರಿದ್ದ. ಒಮ್ಮೆ ಕಳ್ಳತನದ ರುಚಿ ಸವಿದ ನಂತರ ಇದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಸುಮಾರು 73ಕ್ಕೂ ಹೆಚ್ಚು ಬೈಕ್ ಹಾಗೂ ಟಾಟಾ ಏಸ್ ಗಾಡಿ ಕದ್ದಿರುವುದು ಬೆಳಕಿಗೆ ಬಂದಿದೆ.

ಅಷ್ಟೆ ಅಲ್ಲದೆ ವಿದ್ಯಾರಣ್ಯಪುರದಲ್ಲಿ ಮನೆ ಕಳ್ಳತನ ಮಾಡಿ ಜೈಲು ಸೇರಿದವನು 15 ದಿನಗಳ ಹಿಂದಷ್ಟೇ ಹೊರ ಬಂದಿದ್ದ. ಜೈಲಿನಲ್ಲಿದ್ದಾಗ ರಘು ಅಲಿಯಾಸ್‌ ಪೆಪ್ಸಿ ಎಂಬಾತ ಪರಿಚಯವಾಗಿದ್ದ. ಕಳ್ಳತನಕ್ಕೆ ಒಂದಷ್ಟು ಮನೆಗಳನ್ನು ಹುಡುಕು ಎಂದಿದ್ದ ಎನ್ನಲಾಗಿದೆ. ಅದರಂತೆ ಈತ ಬನಶಂಕರಿಯಲ್ಲಿ ಮೂರ್ನಾಲ್ಕು ಮನೆಗಳನ್ನೂ ಹುಡುಕಿಕೊಟ್ಟಿದ್ದನಂತೆ. ಇನ್ನು ಈತ ಫುಲ್ ಟೈಂ ಕಳ್ಳನಾಗಿದ್ದು, ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಆಗಾಗ ಕೆಲಸ ಮಾಡುತ್ತಿದ್ದ. ಸ್ವಿಗ್ಗಿ ಡೆಲಿವರಿ ಮಾಡುತ್ತಾ ಮನೆಗಳನ್ನು ಹಾಗು ಬೈಕ್‌ಗಳನ್ನು ಗುರುತಿಸಿ, ರಾತ್ರಿ ವೇಳೆ ಕದಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ .‌

ಇದನ್ನೂ ಓದಿ | Robbery case : ಎಎಸ್‌ಐ ಬೈಕ್‌ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್‌ ಗ್ಯಾಂಗ್‌ ಅರೆಸ್ಟ್‌

ಸದ್ಯ ಬೈಯ್ಯಪ್ಪನಹಳ್ಳಿ ಪೊಲೀಸರು ಈ ಖತರ್ನಾಕ್‌ ಕಳ್ಳನಿಂದ ಮೂರು ಲಕ್ಷ ಮೌಲ್ಯದ ಐದು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Continue Reading

ಕರ್ನಾಟಕ

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

UPSC Results 2023: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗೆಣಿಕೆ ಹಾಳ್‌ ಗ್ರಾಮದ ಶಾಂತಪ್ಪ ಕುರುಬರ ಅವರು ಯುಪಿಎಸ್‌ ಪರೀಕ್ಷೆಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

VISTARANEWS.COM


on

UPSC Results 2023
Koo

ಬಳ್ಳಾರಿ: ಸೋಲೇ ಗೆಲುವಿನ‌ ಸೋಪಾನ ಎಂಬ ಗಾದೆ ಮಾತು‌ ಅಕ್ಷರಶಃ ಸತ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಜಿಲ್ಲೆಯ ಯುಪಿಎಸ್‌ಸಿ ಅಭ್ಯರ್ಥಿ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗೆಣಿಕೆ ಹಾಳ್‌ ಗ್ರಾಮದ ಕಡೇಮನೆ ಶಿವಕುಮಾರಪ್ಪ ಹಾಗೂ ಜಡಿಯಮ್ಮ ಅವರ ಪುತ್ರ ಶಾಂತಪ್ಪ ಕುರುಬರ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC Results 2023) 644 ರ‍್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇನ್ನು ಇವರು ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆಗಿರುವುದು ವಿಶೇಷವಾಗಿದೆ.

ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ವಿಷಯದಲ್ಲಿ ಫೇಲ್, ಬಿಎಸ್ಸಿಯಲ್ಲಿ ಫೇಲ್, ಕೆಎಎಸ್ ಪರೀಕ್ಷೆಯಲ್ಲಿ ಪ್ರಯತ್ನ ವಿಫಲ, ಯುಪಿಎಸ್ ಪರೀಕ್ಷೆಯಲ್ಲಿ ಆರಂಭದಲ್ಲಿ ವಿಫಲ. ಆದರೆ ನಿಶ್ಚಿಯಿಸಿದ ಗುರಿ ತಲುಪಲು ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ಸಾಧ್ಯ ಎಂಬ ಸತ್ಯ ಅರಿತು, ಸೋಲನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಶಾಂತಪ್ಪ ಕುರುಬರ ಸಕ್ಸಸ್ ಆಗಿದ್ದಾರೆ.

ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದ ಇವರು ಬಳಿಕ ಉತ್ತೀರ್ಣರಾಗಿ, ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. 2017ರಲ್ಲಿ ಪಿಎಸ್‌ಐ ಆಗಿ ನೇಮಕವಾಗುವ ಮೂಲಕ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದ್ದು, ಪ್ರಸ್ತುತ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಇವರು ವಿದ್ಯಾಭ್ಯಾಸ ಮಾಡುವ ಬಡ ಮಕ್ಕಳಿಗೆ ವೈಯಕ್ತಿಕವಾಗಿ ನೆರವಾಗುವುದು, ಎಸ್ಸೆಸ್ಸೆಲ್ಸಿಯಲ್ಲಿ ರ‍್ಯಾಂಕ್‌ ಪಡೆದವರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು, ಕೋವಿಡ್‌ ವೇಳೆ ಶಾಲೆಗಳಿಗೆ ತೆರಳಿ ಪಾಠ ಮಾಡುವುದು ಸೇರಿದಂತೆ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ | UPSC Result 2024: 12 ಪ್ರಯತ್ನದ ಹೊರತಾಗಿಯೂ ಸಿಗದ ಯಶಸ್ಸು; ಯುಪಿಎಸ್‌ಸಿ ಆಕಾಂಕ್ಷಿಯ ಪೋಸ್ಟ್‌ ವೈರಲ್‌

ಯುಪಿಎಸ್‌ಸಿ ಮಾಡಬೇಕೆಂಬ ಗುರಿಯನ್ನು ಬೆನ್ನತ್ತಿದ್ದ ಇವರು ಸತತ 7ನೇ ಬಾರಿ ಪರೀಕ್ಷೆ ಬರೆದಿದ್ದು, ಎರಡು ಬಾರಿ ಸಂದರ್ಶನ ಹಂತಕ್ಕೂ ತೆರಳಿದ್ದರೂ ಆಯ್ಕೆಯಾಗಿರಲಿಲ್ಲ. ನಂತರ ಪ್ರಯತ್ನವನ್ನು ಮುಂದುವರಿಸಿದ ಇವರು 8ನೇ ಬಾರಿಗೆ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇವರು ದೆಹಲಿಯ ವಾಜಿರಾಮ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದಾರೆ.

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಪಿಎಸ್‌ಐ ಶಾಂತಪ್ಪ ಕುರುಬರ್ ಪ್ರತಿಕ್ರಿಯಿಸಿ, ಕನ್ನಡದಲ್ಲಿ ಪರೀಕ್ಷೆ ಬರೆಯುವುದು ತುಂಬಾ ಕಷ್ಟ. ಪಿಯುಸಿ ಅನುತ್ತೀರ್ಣವಾಗಿದ್ದೆ, ಆಗ ಊರಿನಲ್ಲಿ ಜನ ಅಡಿಕೊಂಡಿದ್ದರು. ಅಗ ತೀರ್ಮಾನ ಮಾಡಿ ಓದಲು ಮುಂದೆ ಬಂದೆ. ನಂತರ ಸಬ್ ಇನ್ ಸ್ಪೆಕ್ಟರ್ ಆದೆ. ಕೆಲಸ ಮಾಡಿಕೊಂಡು ಅಧ್ಯಯನ ಮಾಡಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಶಾಂತಪ್ಪ ಕುರುಬರ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಹೋಗಿ ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್‌ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದಿದ್ದಾರೆ.

ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯ

ಶಾಂತಪ್ಪ ಕುರುಬರ ಅವರು ಪೊಲೀಸ್‌ ಆಗಿ ಕೆಲಸ ನಿರ್ವಹಿಸುತ್ತಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಿದ್ದಾರೆ. ಇವರು ಮೊಬೈಲ್‌ ಟಾಯ್ಲೆಟ್‌ ವ್ಯವಸ್ಥೆ ಮಾಡಲು ಕಾರಣ ಅವರ ತಾಯಿ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್‌ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದ್ದಾರೆ.

Continue Reading
Advertisement
UPSC Results 2023
ದೇಶ4 hours ago

ವಿಸ್ತಾರ ಸಂಪಾದಕೀಯ: ಯುಪಿಎಸ್‌ಸಿ ಸಾಧಕರ ಕತೆಗಳು ಇತರರಿಗೆ ಸ್ಫೂರ್ತಿಯಾಗಲಿ

Ram Navami
ಪ್ರಮುಖ ಸುದ್ದಿ4 hours ago

Ram Navami : ಇಂದು ದೇಶಾದ್ಯಂತ ರಾಮ ನವಮಿ ಸಂಭ್ರಮ; ಏನು ಈ ದಿನದ ಮಹತ್ವ?

State Administrative Reforms Commission Chairman R V Deshpande statement
ಉತ್ತರ ಕನ್ನಡ4 hours ago

Lok Sabha Election 2024: ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ದ ಬಿಜೆಪಿಗರೇ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ: ಆರ್.ವಿ.ದೇಶಪಾಂಡೆ

IPL 2024
ಪ್ರಮುಖ ಸುದ್ದಿ4 hours ago

IPL 2024 : ಬಟ್ಲರ್ ಮುಂದೆ ಮಂಕಾದ ನರೈನ್​; ಕೆಕೆಆರ್ ವಿರುದ್ಧ ಆರ್​​ಆರ್​ಗೆ 2 ವಿಕೆಟ್ ಜಯ

Murder Case
ಕರ್ನಾಟಕ5 hours ago

Chitradurga News: ಚಿತ್ರದುರ್ಗದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಾಯಿ-ಮಗಳ ಶವ ಪತ್ತೆ

amith shah
ದೇಶ5 hours ago

Amit Shah: ಶೀಘ್ರದಲ್ಲೇ ಭಾರತ ನಕ್ಸಲ್‌ ಮುಕ್ತವಾಗಲಿದೆ; ಅಮಿತ್ ಶಾ

Nitin Gadkari
ದೇಶ5 hours ago

Nitin Gadkari : ನಾಗ್ಪುರ ಕ್ಷೇತ್ರಕ್ಕೆ ಮತ್ತೊಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ

UPSC Results 2023
ಕರ್ನಾಟಕ5 hours ago

UPSC Results 2023: ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್‌ ಪಡೆದ ಶಾಂತಪ್ಪ ಕುರುಬರ; ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡ ಸಾಧಕ!

Dalip Singh Majithia
ಪ್ರಮುಖ ಸುದ್ದಿ6 hours ago

Dalip Singh Majithia : 2ನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಐಎಎಫ್ ಯೋಧ 103 ನೇ ವಯಸ್ಸಿನಲ್ಲಿ ನಿಧನ

Ayodhya Ram Mandir
ದೇಶ6 hours ago

Ayodhya Ram Mandir: ನಾಳೆ ಅಯೋಧ್ಯೆ ಶ್ರೀರಾಮನಿಗೆ ಸೂರ್ಯ ತಿಲಕ; ಮನೆಯಲ್ಲೇ ಕೂತು ಹೀಗೆ ಕಣ್ತುಂಬಿಕೊಳ್ಳಿ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya
ಭವಿಷ್ಯ23 hours ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20242 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20242 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ3 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ4 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ5 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ5 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ6 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

Lok Sabha Election 2024 Rahul Gandhi should apologise for lying demand BS Yediyurappa
Lok Sabha Election 20246 days ago

Lok Sabha Election 2024: ಸುಳ್ಳು ಹೇಳಿದ ರಾಹುಲ್‌ ಗಾಂಧಿ ಕ್ಷಮೆ ಕೋರಲಿ: ಬಿ.ಎಸ್.‌ ಯಡಿಯೂರಪ್ಪ ಆಗ್ರಹ

ಟ್ರೆಂಡಿಂಗ್‌