Latest OTT Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳಿವು! - Vistara News

ಒಟಿಟಿ

Latest OTT Releases This Week: ಈ ವಾರ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿರುವ ಸಿನಿಮಾಗಳಿವು!

Latest OTT Releases This Week: ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಆಡ್ವಾಣಿ ಅಭಿನಯದ ʻಸತ್ಯಪ್ರೇಮ್ ಕಿ ಕಥಾʼ ಕೂಡ ರಿಲೀಸ್‌ ಆಗಿದೆ.

VISTARANEWS.COM


on

Latest OTT Releases This Week june 29
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಈ ವಾರ ಹಲವಾರು ಚಿತ್ರಗಳು ಚಿತ್ರಮಂದಿರಗಳಲ್ಲಿ (Latest OTT Releases This Week) ಹಾಗೂ ಒಟಿಟಿಯಲ್ಲಿ ಲಗ್ಗೆ ಇಡುತ್ತಿವೆ. ಈ ವಾರ (ಜೂನ್‌ 29) ಬಿಡುಗಡೆಯಾಗುತ್ತಿರುವ ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ವಾರ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಆಡ್ವಾಣಿ ಅಭಿನಯದ ʻಸತ್ಯಪ್ರೇಮ್ ಕಿ ಕಥಾʼ ಕೂಡ ರಿಲೀಸ್‌ ಆಗಿದೆ.

‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾ

‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾಗೆ ಎರಡು ದಿನಗಳ ಹಿಂದೆ ಬುಕ್ಕಿಂಗ್​ ಶುರುವಾಯಿತು. ಜೂನ್‌ 29ರಂದು ಸಿನಿಮಾ ಬಿಡುಗಡೆಯಾಗಿದೆ. ಕಿಯಾರಾ ಆಡ್ವಾಣಿ ಮತ್ತು ಕಾರ್ತಿಕ್​ ಆರ್ಯನ್​ ಅವರ ಹಿಟ್​ ಕಾಂಬಿನೇಷನ್​ ಈ ಸಿನಿಮಾದಲ್ಲಿ ಇರುವುದರಿಂದ ಅಭಿಮಾನಿಗಳಿಗೆ ನಿರೀಕ್ಷೆ ಮನೆ ಮಾಡಿದೆ. ಮೀಡಿಯಂ ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಿದೆ. ಹಾಗಾಗಿ ಒಂದು ಹಂತದ ಕಲೆಕ್ಷನ್​ ಮಾಡಿದರೂ ಕೂಡ ನಿರ್ಮಾಪಕರಿಗೆ ಲಾಭ ಆಗಲಿದೆ. ಬುಕ್ಕಿಂಗ್‌ಗೆ ಜನರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ.

ಮೂಲಗಳ ಪ್ರಕಾರ, ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರದ 40 ಸಾವಿರಕ್ಕೂ ಅಧಿಕ ಟಿಕೆಟ್​ಗಳು ಬುಕ್​ ಆಗಿವೆ. ಪಿವಿಆರ್​, ಐನಾಕ್ಸ್​ ಮತ್ತು ಸಿನಿಪೊಲಿಸ್​ ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಿಮಾದ ಅಡ್ವಾನ್ಸ್​ ಬುಕಿಂಗ್​ಗೆ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಮೊದಲ ದಿನ ಅಂದಾಜು 8ರಿಂದ 10 ಕೋಟಿ ರೂಪಾಯಿ ಕಲೆಕ್ಷನ್​ ಆಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಲಸ್ಟ್‌ ಸ್ಟೋರಿಸ್‌ 2

ಲಸ್ಟ್ ಸ್ಟೋರೀಸ್ 2 ನಾಲ್ಕು ಭಾಗಗಳಲ್ಲಿ ಬರಲಿದ್ದು, ನೆಟ್‌ಫ್ಲಿಕ್ಸ್ ಇಂಡಿಯಾದ ಎಮ್ಮಿ ನಾಮನಿರ್ದೇಶಿತ ಸರಣಿ ಲಸ್ಟ್ ಸ್ಟೋರೀಸ್ (2018)ನ ಮುಂದಿನ ಭಾಗವಾಗಿದೆ. ಇದನ್ನು ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಫಿಲ್ಮ್ಸ್ ಮತ್ತು ಆಶಿ ದುವಾ ಅವರ ಫ್ಲೈಯಿಂಗ್ ಯುನಿಕಾರ್ನ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ. ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಅಮೃತಾ ಸುಭಾಷ್, ನೀನಾ ಗುಪ್ತಾ, ಅಂಗದ್ ಬೇಡಿ ಮತ್ತು ಮೃಣಾಲ್ ಠಾಕೂರ್ ಕೂಡ ನಟಿಸಿದ್ದಾರೆ. ಲಸ್ಟ್ ಸ್ಟೋರೀಸ್ 2 ಜೂನ್ 29 ರಂದು ನೆಟ್‌ಫ್ಲಿಕ್ಸ್ ಇಂಡಿಯಾದಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Bastar Movie: `ದಿ ಕೇರಳ ಸ್ಟೋರಿ’ ತಂಡದಿಂದ ಹೊಸ ಸಿನಿಮಾ ಅನೌನ್ಸ್‌!

ನೈಟ್‌ ಮ್ಯಾನೇಜರ್‌ 2

ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಮತ್ತು ಶೋಭಿತಾ ಧೂಳಿಪಾಲ ಅಭಿನಯದ ದಿ ನೈಟ್ ಮ್ಯಾನೇಜರ್‌ನ ಭಾಗ 2 ಈ ವಾರ ಬಿಡುಗಡೆಯಾಗಲಿದೆ. ಬಿಗ್ ಬಜೆಟ್ ವೆಬ್ ಸೀರಿಸ್, ಡಿಸ್ನಿ ಪ್ಲಸ್ ಹಾಟ್​ ಸ್ಪಾರ್ಟ್​​ನಲ್ಲಿ ಸ್ಟ್ರೀಮ್ ಆಗಲಿದೆ. ಈ ಸೀರಿಸ್ ಜೂನ್ 30 ರಂದು ಸ್ಟ್ರೀಮ್ ಆಗಲಿದೆ. ನೌಕಾಪಡೆಯ ಮಾಜಿ ಅಧಿಕಾರಿ ಶಾನ್ ಸೇನ್​ ಗುಪ್ತಾ ಅವರ ಸುತ್ತ ಕಥೆ ಸುತ್ತುತ್ತದೆ.

ಸೆಲೆಬ್ರಿಟಿ

ಈ ವಾರದ ಬಹು ನಿರೀಕ್ಷಿತ ಕೆ-ಡ್ರಾಮಾ ಥ್ರಿಲ್ಲರ್ ಸಿರೀಸ್‌ ಸೆಲೆಬ್ರಿಟಿ ಸಿನಿಮಾವಾಗಿದೆ. ಪಾರ್ಕ್ ಗ್ಯು ಯಂಗ್, ಕಾಂಗ್ ಮಿನ್ ಹ್ಯುಕ್ ಮತ್ತು ಲೀ ಚುಂಗ್ ಆಹ್ ಮುಂತಾದವರು ನಟಿಸಿದ್ದಾರೆ. ಹೊಸ ವರ್ಗದ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಅವರಂತೆಯೇ ಇರಲು ಬಯಸುವವರ ಸುತ್ತ ಕಥೆ ಸುತ್ತುತ್ತದೆ. ಜೂನ್‌ 30ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ದಿ ವಿಚರ್ ಸೀಸನ್ 3

ದಿ ವಿಚರ್ ನ 3ನೇ ಸೀಸನ್ ಜೂನ್ 29 ರಂದು ಬಿಡುಗಡೆಯಾಗಲಿದ್ದು, ಹಾಲಿವುಡ್ ನಟ ಹೆನ್ರಿ ಕ್ಯಾವಿಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೆರಾಲ್ಟ್ ಆಫ್ ರಿವಿಯಾ ಪಾತ್ರ ಈ ಸೀರಿಸ್​​ನಲ್ಲಿ ಕೊನೆಗೊಳ್ಳುತ್ತದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ನೆಟ್​ಫಿಕ್ಸ್ ಅಧಿಕೃತ ಟ್ರೈಲರ್‌ ರಿಲೀಸ್ ಆಗಿತ್ತು.

ಇದನ್ನೂ ಓದಿ: Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!

ಅಫ್ವಾ

ಅಫ್ವಾ ಸುಧೀರ್ ಮಿಶ್ರಾ ಬರೆದು ನಿರ್ದೇಶಿಸಿದ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಆಗಿದೆ. ಬನಾರಸ್ ಮೀಡಿಯಾ ವರ್ಕ್ಸ್ ಮತ್ತು ಟಿ-ಸೀರೀಸ್ ಫಿಲ್ಮ್ಸ್ ಬ್ಯಾನರ್​ಗಳ ಅಡಿಯಲ್ಲಿ ಅನುಭವ್ ಸಿನ್ಹಾ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಭೂಮಿ ಪೆಡ್ನೇಕರ್ ಮತ್ತು ಸುಮೀತ್ ವ್ಯಾಸ್ ನಟಿಸಿದ್ದಾರೆ. ಚಿತ್ರವು ನೆಟ್​ಫಿಕ್ಸ್ ಮೂಲಕ ಜೂನ್ 30 ರಂದು ಪ್ರದರ್ಶನ ಪ್ರಾರಂಭವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

The Legend of Hanuman: ಹನುಮ ಜಯಂತಿಯಂದೇ ‘ದಿ ಲೆಜೆಂಡ್ ಆಫ್ ಹನುಮಾನ್’ ಸೀಸನ್ 4 ಘೋಷಣೆ

The Legend of Hanuman: ರಾಮ ಭಕ್ತ ಹನುಮಂತನ ಕಥೆಯನ್ನು ಎಲ್ಲರೂ ಕೇಳಿದ್ದಾರೆ. ಆದರೆ ಹೊಸ ಪೀಳಿಗೆಯನ್ನು ಆಕರ್ಷಿಸಲು ಬಂದಿರುವ ದಿ ಲೆಜೆಂಡ್ ಆಫ್ ಹನುಮಾನ್ ನ ನಾಲ್ಕನೇ ಸರಣಿ ಘೋಷಣೆಯಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

By

The Legend of Hanuman
Koo

ಹಿಂದೂಗಳ (hindu) ಆರಾಧ್ಯ ದೇವರಾದ ಶ್ರೀ ರಾಮನ (sriram) ಭಕ್ತ ಹನುಮಾನ್ ಜನ್ಮ ದಿನದ ಶುಭ ಸಂದರ್ಭದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney Plus Hotstar) ಜನಪ್ರಿಯ ಅನಿಮೇಟೆಡ್ ಸರಣಿ ‘ದಿ ಲೆಜೆಂಡ್ ಆಫ್ ಹನುಮಾನ್’ ನ (The Legend of Hanuman) ನಾಲ್ಕನೇ ಸರಣಿಯನ್ನು ಏಪ್ರಿಲ್ 23ರಂದು ಘೋಷಣೆ ಮಾಡಿದೆ. ಹನುಮಾನ್ ಜಯಂತಿಯ ದಿನದಂದೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಈ ಘೋಷಣೆ ಮಾಡಿರುವುದು ಬಹುತೇಕ ಹನುಮಾನ್ ಭಕ್ತರಲ್ಲಿ ಸಂತಸ ತಂದಿದೆ.

ನಾಲ್ಕನೇ ಸರಣಿಯ ಕಥಾವಸ್ತುವಿನ ಕುರಿತಾದ ವಿವರಗಳನ್ನೂ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಅಭಿಮಾನಿಗಳು ಹನುಮಂತನ ಶೌರ್ಯ, ಭಕ್ತಿ ಮತ್ತು ಅಚಲ ನಂಬಿಕೆಯ ಹೆಚ್ಚಿನ ಕಥೆಗಳನ್ನು ಇದರಲ್ಲಿ ನಿರೀಕ್ಷಿಸಬಹುದು. ಹಿಂದಿನ ಸರಣಿಯಲ್ಲಿ ಹನುಮಂತನ ಆರಂಭಿಕ ಜೀವನ, ಭಗವಾನ್ ರಾಮನೊಂದಿಗಿನ ಅವನ ಭೇಟಿ, ಲಂಕಾಕ್ಕೆ ಮಹಾಕಾವ್ಯದ ಪ್ರಯಾಣ ಮತ್ತು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತಿಮ ಯುದ್ಧವನ್ನು ವಿವರಿಸಲಾಗಿತ್ತು.

ಡಿಸ್ನಿ+ ಹಾಟ್‌ಸ್ಟಾರ್‌ಗೆ ‘ದಿ ಲೆಜೆಂಡ್ ಆಫ್ ಹನುಮಾನ್’ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸನ್ನು ಗಳಿಸಿದೆ. ಕಾರ್ಯಕ್ರಮದ ಬೆರಗುಗೊಳಿಸುವ ಅನಿಮೇಷನ್, ಆಕರ್ಷಕ ಕಥೆ ಹೇಳುವಿಕೆ ಮತ್ತು ಹಿಂದೂ ಪುರಾಣಗಳ ಚಿತ್ರಣವು ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: OM Puri: ಹೊಟ್ಟೆಪಾಡಿಗಾಗಿ ಚಹಾ ಅಂಗಡಿಯಲ್ಲಿ ಲೋಟ ತೊಳೆಯುತ್ತಿದ್ದರು ಈ ಹೆಸರಾಂತ ನಟ!

‘ದಿ ಲೆಜೆಂಡ್ ಆಫ್ ಹನುಮಾನ್’ ನ ಹೊಸ ಸೀಸನ್‌ನಲ್ಲಿ ನಟ ಮತ್ತು ರಾವಣನ ಧ್ವನಿ, ಶರದ್ ಕೇಳ್ಕರ್ ಅವರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಲೆಜೆಂಡ್ ಆಫ್ ಹನುಮಾನ್ ನ ಹೊಸ ಸೀಸನ್‌ನಲ್ಲಿ ರಾವಣ ರಾಜನಿಗೆ ಧ್ವನಿ ನೀಡುವುದು ನನಗೆ ಆಳವಾದ ವೈಯಕ್ತಿಕ ಪ್ರಯಾಣವಾಗಿದೆ. ಒಂದು ಪೌರಾಣಿಕ ಸಿದ್ಧಾಂತವನ್ನು ಆಧರಿಸಿ ಮತ್ತು ಇದರ ಮೂಲಕ ನಾನು ಅನೇಕ ಲೇಯರಿಂಗ್ ಕಥೆಗಳನ್ನು ಕಂಡುಹಿಡಿದಿದ್ದೇನೆ. ಇದರಿಂದ ನನಗೆ ಹೆಚ್ಚು ತಿಳಿಯಲು ಸಾಧ್ಯವಾಯಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ದಿ ಲೆಜೆಂಡ್ ಆಫ್ ಹನುಮಾನ್‌ನ ಹೊಸ ಸರಣಿ ಇನ್ನಷ್ಟು ಶ್ರೇಷ್ಠವಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.


ಸಾಹಸಮಯ, ಭಕ್ತಿಪ್ರಧಾನವಾದ ಹನುಮಂತನ ಜೀವನ ಕಥೆಯನ್ನು ಹೇಳುವ ಮೂರು ಸರಣಿಯನ್ನು ಇಷ್ಟಪಟ್ಟಿರುವವರು ನಾಲ್ಕನೇ ಸರಣಿಗೆ ಕುತೂಹಲದಿಂದ ಕಾಯುವಂತಾಗಿದೆ.

ರಾವಣನ ದುಷ್ಟತನವನ್ನು ಎದುರಿಸಲು, ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅವನ ದಾರಿಯಲ್ಲಿ ಎದುರಾಗುವ ವಿನಮ್ರ ರಾಮ ಭಕ್ತನಾದ ವಾನರನು ತನ್ನ ಭಕ್ತಿಯಿಂದಾಗಿಯೇ ದೇವರಾಗಿರುವ ಕಥೆಯನ್ನು ಇದು ಒಳಗೊಂಡಿದೆ. ಗ್ರಾಫಿಕ್ ಇಂಡಿಯಾ ರಚಿಸಿರುವ ಈ ಸರಣಿಗೆ ಶರದ್ ದೇವರಾಜನ್, ಜೀವನ್ ಜೆ. ಕಾಂಗ್, ಶರದ್ ಕೇಳ್ಕರ್ ಮತ್ತು ದಮನ್ ಬಗ್ಗನ್ ಧ್ವನಿ ನೀಡಿದ್ದಾರೆ.

Continue Reading

ಒಟಿಟಿ

Tillu Square: ಅನುಪಮಾ ಪರಮೇಶ್ವರನ್‌‌ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ

Tillu Square: ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಲು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಜ್ಯೂನಿಯರ್‌ ಎನ್‌ಟಿಆರ್‌ ಅವರು (Jr NTR Fans) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

VISTARANEWS.COM


on

Tillu Square anupama parameswaran movie tillu square release date
Koo

ಬೆಂಗಳೂರು: ನಟ ಸಾರ್ವಭೌಮʼ ಚಿತ್ರದ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅಭಿನಯದ ʻಟಿಲ್ಲು ಸ್ಕ್ವೇರ್’ ಸಿನಿಮಾ 100 ಕೋಟಿ ರೂ. ಗಳಿಕೆ ಕಂಡಿದ್ದು ಗೊತ್ತೇ ಇದೆ. 2002ರಲ್ಲಿ ಬಂದಿದ್ದ ʻಡಿಜೆ ಟಿಲ್ಲು’ ಚಿತ್ರದ ಮುಂದುವರಿದ ಭಾಗ ಈ `ಟಿಲ್ಲು ಸ್ಕ್ವೇರ್’. ಸಿದ್ದು ಜೊನ್ನಲಗಡ್ಡ ( Siddhu Jonnalagadda ) ಈ ಚಿತ್ರದ ನಾಯಕ. ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಟಿಲ್ಲು ಸ್ಕ್ವೇರ್’ (Tillu Square) ಸಿನಿಮಾದಲ್ಲಿ ನಟಿ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಚಿತ್ರತಂಡ ಇತ್ತೀಚೆಗೆ ಯಶಸ್ಸನ್ನು ಆಚರಿಸಿಕೊಂಡಿತ್ತು. ಇದೀಗ ಸಿನಿಮಾ ಸಿನಿಮಾ ಒಟಿಟಿಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ.

‘ಟಿಲ್ಲು ಸ್ಕ್ವೇರ್’ 2024, ಮಾರ್ಚ್ 29ರಂದು ರಿಲೀಸ್ ಆಗಿತ್ತು. ‘ಡಿಜೆ ಟಿಲ್ಲು’ 30 ಕೋಟಿ ರೂಪಾಯಿ ಲೂಟಿ ಮಾಡಿದ್ದರೆ, ‘ಟಿಲ್ಲು ಸ್ಕ್ವೇರ್’ ಬಾಕ್ಸಾಫೀಸ್‌ನಲ್ಲಿ ಬರೋಬ್ಬರು 125 ಕೋಟಿ ರೂಪಾಯಿ ದೋಚಿದೆ. ಈ ವರ್ಷದ ಟಾಲಿವುಡ್‌ನ ಮೋಸ್ಟ್ ಸಕ್ಸೆಸ್‌ಫುಲ್‌ ಸಿನಿಮಾ ಎನಿಸಿಕೊಂಡಿದೆ. ನೆಟ್‌ಫ್ಲಿಕ್ಸ್ ‘ಟಿಲ್ಲು ಸ್ಕ್ವೇರ್’ ಸಿನಿಮಾ ಖರೀದಿ ಮಾಡಿದೆ. ತನ್ನ ಅಫಿಶಿಯಲ್ ಎಕ್ಸ್ ಖಾತೆಯಲ್ಲಿ ಏಪ್ರಿಲ್ 26ಕ್ಕೆ ‘ಟಿಲ್ಲು ಸ್ಕ್ವೇರ್’ ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದೆ. ಈ ಸಿನಿಮಾ, ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

ಇದನ್ನೂ ಓದಿ: Tillu Square: 100 ಕೋಟಿ ರೂ. ಗಳಿಕೆ ಕಂಡ ಅನುಪಮಾ ಪರಮೇಶ್ವರನ್ ಸಿನಿಮಾ

`ಟಿಲ್ಲು ಸ್ಕ್ವೇರ್’ ಒಳ್ಳೆಯ ಕಥಾಹಂದರ ಮತ್ತು ಆಕರ್ಷಕ ಪ್ರದರ್ಶನ ಪ್ರೇಕ್ಷಕರನ್ನು ಮೋಡಿ ಮಾಡಿತ್ತು.
ಟಿಲ್ಲು ಸ್ಕ್ವೇರ್‌ನ ನಿರ್ಮಾಪಕರ ಇತ್ತೀಚಿನ ವರದಿಗಳ ಪ್ರಕಾರ, ಚಿತ್ರವು ಈಗಾಗಲೇ ಕೇವಲ 9 ದಿನಗಳಲ್ಲಿ ವಿಶ್ವಾದ್ಯಂತ 100 ಕೋಟಿ ರೂಪಾಯಿಗಳನ್ನು ದಾಟಿದೆ. ತೆಲುಗು ಚಿತ್ರ ಟಿಲ್ಲು ಸ್ಕ್ವೇರ್ 100 ಕೋಟಿ ಗಳಿಸಿದ ಮೊದಲ ಹಾಸ್ಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ʻಜಾತಿ ರತ್ನಲುʼ ಸಿನಿಮಾ ಈ ಮುಂಚೆ ದಾಖಲೆ ಮಾಡಿತ್ತು.

ಟಿಲ್ಲು ಸ್ಕ್ವೇರ್ ಚಿತ್ರವನ್ನ ಮಲ್ಲಿಕ್ ರಾಮ್ ನಿರ್ದೇಶಿಸಿದ್ದಾರೆ. ಸೂರ್ಯದೇವರ ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. `ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ.

Continue Reading

ಸಿನಿಮಾ

Banned Film: ಈ 9 ಹಾಲಿವುಡ್ ಚಿತ್ರಗಳು ಭಾರತದಲ್ಲಿ ಬ್ಯಾನ್!

Banned Film: ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಒಂದಷ್ಟು ಹಾಲಿವುಡ್ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿಲ್ಲ. ಭಾರತದಲ್ಲಿ ಪ್ರದರ್ಶನಗೊಳ್ಳದ ಆ ಸಿನಿಮಾಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

VISTARANEWS.COM


on

Banned Films
Koo

ಬೆಂಗಳೂರು: ಭಾರತದಲ್ಲಿ ಯಾವುದೇ ಚಲನಚಿತ್ರಗಳು ಪ್ರದರ್ಶನ ಕಾಣಬೇಕೆಂದರೆ ಮೊದಲು ಭಾರತೀಯ ಸೆನ್ಸಾರ್ ಮಂಡಳಿಯ ಅನುಮತಿ ಪಡೆಯಬೇಕು.  ಭಾರತೀಯ ಸೆನ್ಸಾರ್ ಮಂಡಳಿಯು ಉತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಶ್ಲೀಲ ದೃಶ್ಯಾವಳಿ, ಕೆಟ್ಟ ಬೈಗುಳ ಪದಗಳಿರುವಂತಹ ಚಿತ್ರಗಳನ್ನು ಬ್ಯಾನ್ (Banned Film) ಮಾಡಲಾಗುತ್ತದೆ. ಇಂತಹ ಚಿತ್ರಗಳು ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಸೆನ್ಸಾರ್ ಮಂಡಳಿ ಅನುಮತಿ ನೀಡುವುದಿಲ್ಲ.

ಒಟಿಟಿ ಅಥವಾ ವಿದೇಶಿ ಮಾರುಕಟ್ಟೆಗಳಲ್ಲಿ ದೊಡ್ಡ ಹೆಸರು ಗಳಿಸಿರುವಂತಹ ಕೆಲವೊಂದು ಚಲನಚಿತ್ರಗಳು ಭಾರತದಲ್ಲಿ ಬಿಡುಗಡೆಯಾಗಲಿಲ್ಲ. ಸೆನ್ಸಾರ್ ಮಂಡಳಿ ಇದಕ್ಕೆ ಅನುಮತಿ ನೀಡಿರಲಿಲ್ಲ. ಈ ಪ್ರಸಿದ್ಧ ಚಲನಚಿತ್ರಗಳನ್ನು ಭಾರತೀಯ ಸೆನ್ಸಾರ್ ಮಂಡಳಿಯು ಸ್ಪಷ್ಟ ವಿಷಯಗಳ ಕಾರಣದಿಂದ ಭಾರತದಲ್ಲಿ ನಿಷೇಧಿಸಿದೆ. ಅಂತಹ ಹಾಲಿವುಡ್ ಚಿತ್ರಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

Banned Film

1. ಫಿಫ್ಟಿ ಶೇಡ್ಸ್ ಆಫ್ ಗ್ರೇ(Fifty Shade Of Gray)

ಈ ಚಿತ್ರದ ಕಥೆ ಅನಾ ಎಂಬ ಕಾಲೇಜು ವಿದ್ಯಾರ್ಥಿನಿಯ ಸುತ್ತ ಸುತ್ತುತ್ತದೆ. ಆಕೆ ಒಬ್ಬ ವ್ಯಾಪಾರಿ ಉದ್ಯಮಿ ಕ್ರಿಶ್ಚಿಯನ್ನೊಂದಿಗೆ ಸಂಬಂಧ ಹೊಂದುತ್ತಾಳೆ. ಈ ಚಿತ್ರದಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಚಿತ್ರೀಕರಿಸಲಾಗಿದೆ. ಹಾಗಾಗಿ ಈ ಚಿತ್ರವನ್ನು ಭಾರತೀಯ ಸೆನ್ಸರ್ ಮಂಡಳಿ ನಿಷೇಧಿಸಿದೆ.

Banned Film

2. ದ ಡಾ ವಿನ್ಸಿ ಕೋಡ್ (The Da Vinci Code)

ಈ ಚಿತ್ರ ಡಿ ವಿನ್ಸಿ ಕೋಡ್ ರಾಬರ್ಟ್ ಲ್ಯಾಂಗ್ಡನ್ ಎಂಬ ಸಂಕೇತಶಾಸ್ತ್ರಜ್ಞನ ಬಗ್ಗೆ ಚಿತ್ರಿಸುತ್ತದೆ. ಅವರು ಪ್ಯಾರಿಸ್ ನಿಂದ ಲಂಡನ್ ಗೆ ಒಂದು ಕೊಲೆಯ ಬಗ್ಗೆ ತಿಳಿಯಲು ಹೋಗುತ್ತಾರೆ. ಈ ಚಿತ್ರದಲ್ಲಿ ಕ್ರಿಶ್ಚಿಯನ್ ವಿರೋಧಿ ಸಂದೇಶವನ್ನು ನೀಡಲಾಗಿದೆ. ಹಾಗಾಗಿ ಈ ಚಿತ್ರವನ್ನು ನಿಷೇಧಿಸುವಂತೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬಾರತೀಯ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ಬ್ಯಾನ್ ಮಾಡಿದೆ.

3. ದ ಗರ್ಲ್ ವಿತ್ ಡ್ರ್ಯಾಗನ್ ಟ್ಯಾಟೂ (The Girl With Dragon Tattoo)

ಈ ಚಿತ್ರ ನಲವತ್ತು ವರ್ಷಗಳ ಹಿಂದೆ ನಾಪತ್ತೆಯಾದ ಮಹಿಳೆಯೊಬ್ಬಳ ಪ್ರಕರಣವನ್ನು ಭೇದಿಸಲು ಕಂಪ್ಯೂಟರ್ ಹ್ಯಾಕರ್ ಅನ್ನು ನೇಮಿಸಿಕೊಳ್ಳುವ ಪತ್ರಕರ್ತನ ಸುತ್ತ ಸುತ್ತುತ್ತದೆ. 2011ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಸೆನ್ಸರ್ ಮಂಡಳಿ ತೆಗೆದುಹಾಕುವಂತೆ ಹೇಳಿತು. ಆದರೆ ನಿರ್ದೇಶಕ ಡೇವಿಡ್ ಫಿಂಚರ್ ಇದನ್ನು ನಿರಾಕರಿಸಿದ್ದರಿಂದ ಭಾರತದಲ್ಲಿ ಈ ಚಿತ್ರ ಬಿಡುಗಡೆಯಾಗಲಿಲ್ಲ.

Banned Film

4. ಡರ್ಟಿ ಗ್ರ್ಯಾಂಡ್ ಪಾ( durty Grand pa)

ಇದು  ಯುಎಸ್ ನ ಮಿಲಿಟರಿ ಪರಿಣತರನ್ನು ಆಧರಿಸಿದ ಚಿತ್ರವಾಗಿದೆ. ಒಬ್ಬ ಅಜ್ಜ ಮೊಮ್ಮಗ ಜೇಸನ್ ಎನ್ನುವವನನ್ನು ತನ್ನ ಜೊತೆ ಪ್ಲೋರಿಡಾಕ್ಕೆ ಕರೆದೊಯ್ದರು. ಪ್ರವಾಸದ ವೇಳೆ ಅಜ್ಜನ ಸರಣಿ ದುಷ್ಕೃತ್ಯಗಳ ಬಗ್ಗೆ ಆತನಿಗೆ ತಿಳಿದಿರುವುದಿಲ್ಲ. ಈ ಚಿತ್ರದಲ್ಲಿ ಲೈಂಗಿಕತೆಯ ಬಗ್ಗೆ ಬಿಂಬಿಸಿದ ಕಾರಣ ಇದು ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Banned Film

5. ಬ್ಲೂ ಜಾಸ್ಮಿನ್ ( Blue Jasmine)

ಈ ಚಿತ್ರದಲ್ಲಿ ಕೆಲವು ಪಾತ್ರಗಳು ಹೆಚ್ಚು ಧೂಮಪಾನ ಮಾಡುತ್ತಿರುವುದು ಕಂಡುಬಂದ ಕಾರಣ ಅದನ್ನು ತೆಗೆಯುವಂತೆ ಸೆನ್ಸಾರ್ ಮಂಡಳಿ ತಿಳಿಸಿದ್ದು, ಇದಕ್ಕೆ ನಿರ್ದೇಶಕರು ಒಪ್ಪದ ಕಾರಣ ಈ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

6. ಐ ಸ್ಪಿಟ್ ಆನ್ ಯುವರ್ ಗ್ರೇವ್ ( I Spit On Your Grave)

ಈ ಚಿತ್ರ ವಿವಾದಾತ್ಮಕವಾಗಿದ್ದು, ಹಲವಾರು ಭಯಾನಕ ಲೈಂಗಿಕ ಕಿರುಕುಳದ ದೃಶ್ಯಗಳನ್ನು ಹೊಂದಿದೆ. ಮೀರ್ ಜಾರ್ಚಿ ನಿರ್ದೇಶನದ ಈ ಚಿತ್ರವನ್ನು ಭಾರತ ಮಾತ್ರವಲ್ಲದೇ ಯುಕೆ, ಕೆನಡಾ, ಚೀನಾ, ಆಸ್ಟ್ರೇಲಿಯಾ ಮತ್ತು ಇತರ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ.

7. ಇಂಡಿಯಾನ ಜೋನ್ಸ್ ಆ್ಯಂಡ್ ದ ಟೆಂಪಲ್ ಆಫ್ ಡೂಮ್( Indiana Jones And The Temple Of Doom)

ಆರಾಧನೆಯ ಹೆಸರಿನಲ್ಲಿ ಬಲಿಪಶುಗಳನ್ನು ಬೆಂಕಿಗೆ ಎಸೆಯುವಂತಹ ಕ್ರೂರ ದೃಶ್ಯವನ್ನು ಒಳಗೊಂಡ ಈ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಿಲ್ಲ. ಭಾರತೀಯ ಸೆನ್ಸಾರ್ ಮಂಡಳಿ ಇದನ್ನು ಕೆಟ್ಟ ಆಚರಣೆಯ ಮನಸ್ಥಿತಿ ಎಂದು ನಿಷೇಧಿಸಿದೆ.

8. ಗೆಟ್ ಹಾರ್ಡ್(Get Hard)

ಕಾಮಿಡಿ ಥ್ರಿಲ್ಲರ್ ಜೇಮ್ಸ್ ಕಿಂಗ್ ಎಂಬ ವ್ಯಕ್ತಿಯನ್ನು ಬಗ್ಗೆ ತಿಳಿಸುತ್ತದೆ ಮತ್ತು ಅವರು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ. ಇದರಿಂದ ಜನರು ಆಕ್ರೋಶಗೊಳ್ಳಬಹುದು ಎಂದು ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿಲ್ಲ.

ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Banned Film

9. ಮ್ಯಾಜಿಕ್ ಮೈಕ್ XXL( magic mike XXL)

ಈ ಚಿತ್ರ ಸ್ಟ್ರಿಪ್ಪರ್ ಎಂಬ ಪುರುಷನ ಜೀವನವನ್ನು ಬಿಂಬಿಸುತ್ತದೆ. ಈ ವ್ಯಕ್ತಿ ಸಮಾವೇಶಕ್ಕಾಗಿ ಮಿರ್ಟಲ್ ಬೀಚ್ ಗೆ ತಮ್ಮ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಾನೆ. ಆ ವೇಳೆ ಅವರು ತಮ್ಮ ಹಿಂದಿನ ಹಳೆಯ ನೆನಪುಗಳನ್ನು ಪುನರುಜ್ಜೀವನ ಗೊಳಿಸುತ್ತಾರೆ. ಇದರಲ್ಲಿ ಹೆಚ್ಚು ಲೈಂಗಿಕತೆಯ ಬಗ್ಗೆ ಬಿಂಬಿಸಲಾದ್ದರಿಂದ ಭಾರತದಲ್ಲಿ ಮೊದಲ ಬಾರಿಗೆ ನಿಷೇಧಗೊಂಡಿತ್ತು. ನಂತರ ಅದರಲ್ಲಿರುವ ದೃಶ್ಯವನ್ನು ಕತ್ತರಿಸಲು ಸೆನ್ಸಾರ್ ಮಂಡಳಿ ತಿಳಿಸಿದರೂ ಅದನ್ನು ನಿರಾಕರಿಸಿದ ಕಾರಣ ಅದು ಎರಡನೇ ಬಾರಿ ನಿಷೇಧಗೊಂಡಿತ್ತು. ಹಾಗಾಗಿ ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.

Continue Reading

ಸಿನಿಮಾ

12th fail Film: ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆ `12th fail’ ಚಿತ್ರ

12th fail Film ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನದ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸೆ ಅವರು ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.

VISTARANEWS.COM


on

12th fail Film
Koo

ಬೆಂಗಳೂರು: ಭಾರತೀಯ ಸಿನಿಮಾಗಳು ಹೆಚ್ಚಾಗಿ ಭಾರತದಾದ್ಯಂತ ಬಿಡುಗಡೆಯಾಗುತ್ತದೆ. ಆ ವೇಳೆ ಕೆಲವು ಚಿತ್ರಗಳನ್ನು ಯಶಸ್ಸಿನತ್ತ ಮುನುಗ್ಗಿದ್ದರೆ ಕೆಲವು ನೆಲಕಚ್ಚುತ್ತವೆ. ಆದರೆ ಇದೀಗ ಭಾರತೀಯ ಸಿನಿಮಾವೊಂದು (12th fail Film) ವಿದೇಶದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲು ರೆಡಿಯಾಗಿದೆಯಂತೆ.

ಹೌದು. ವಿಧು ವಿನೋದ್ ಚೋಪ್ರಾ ಅವರು ನಿರ್ದೇಶನದ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ವಿಕ್ರಾಂತ್ ಮಾಸ್ಸೆ ಅವರು ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರ ಅಕ್ಟೋಬರ್ 27ರಂದು 2023ರಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು, ನಂತರ ಒಟಿಟಿಯಲ್ಲಿಯೂ ಬಿಡುಗಡೆಯಾಗಿದ್ದು, ಬಾಲಿವುಡ್ ನ ತಾರೆಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಕಂಗನಾ ರಾಣವತ್, ಕತ್ರಿನಾ ಕೈಪ್ ಮುಂತಾದವರು ಈ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಇದೀಗ ಚಿತ್ರ ಚೀನಾದಲ್ಲಿಯೂ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ವಿಕ್ರಾಂತ್ ಅವರು ಸುದ್ದಿ ವಾಹಿನಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಚಿತ್ರ ಯುಪಿಎಸ್ ಸಿ ಆಕಾಂಕ್ಷಿಗಳ ಸುತ್ತ ಸುತ್ತುತ್ತದೆ. ಇದು ನಿಜ ಜೀವನದ ಅನುಭವಗಳನ್ನು ಆಧರಿಸಿದೆ. ಯುಪಿಎಸ್ ಸಿ ಪ್ರವೇಶ ಪರೀಕ್ಷೆಗೆ ಪ್ರಯತ್ನಿಸುವ ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ. ಬಡತನವನ್ನು ಮೆಟ್ಟಿ ನಿಂತು ಐಪಿಎಸ್ ಅಧಿಕಾರಿಯಾದ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನು ಈ ಚಿತ್ರ ವಿವರಿಸುತ್ತದೆ. ಈ ಚಿತ್ರದಲ್ಲಿ ಮನೋಜ್ ಕುಮಾರ್ ಶರ್ಮಾ ಅವರ ಪತ್ನಿ ಶ್ರದ್ಧಾ ಜೋಶಿ ಅವರ ಪಾತ್ರದಲ್ಲಿ ಮೇಧಾ ಶಂಕರ್ ನಟಿಸಿದ್ದಾರೆ.

ಇದನ್ನೂ ಓದಿ: Ram Navami: ಅಯೋಧ್ಯೆ ರಾಮ ಮಂದಿರಲ್ಲಿ ಮೊದಲ ರಾಮ ನವಮಿ; ದೇಶದ ಜನತೆಗೆ ಮೋದಿ ನೀಡಿದ ಸಂದೇಶ ಇದು

ಚೀನಾದಲ್ಲಿ ಭಾರತೀಯ ಸಿನಿಮಾಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಹಿಂದೆ ಅಮೀರ್ ಖಾನ್ ಅವರ ದಂಗಲ್ ಮತ್ತು 3 ಈಡಿಯಟ್ಸ್ ಚಿತ್ರಕ್ಕೆ ಚೀನಾದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಅದೇ ರೀತಿ 12th fail ಚಿತ್ರ ಚೀನಾದಲ್ಲಿ 20000ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುವುದರ ಮೂಲಕ ಚೀನಾದ ಜನತೆಗೆ ಮನರಂಜನೆಯನ್ನು ನೀಡುತ್ತದೆ ಎಂಬ ನಂಬಿಕೆ ಹುಸಿಯಾಗಲಾರದು ಎನ್ನಲಾಗುತ್ತಿದೆ.

Continue Reading
Advertisement
Pushpa The Rule first single on May 1
ಟಾಲಿವುಡ್3 mins ago

Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

actress amulya father in law election officers ride
ಕ್ರೈಂ8 mins ago

Election Officer Raid: ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ

Rahul Gandhi
ದೇಶ12 mins ago

Rahul Gandhi: ಶೀಘ್ರವೇ ಅಯೋಧ್ಯೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ; ರಾಮಲಲ್ಲಾನ ದರ್ಶನ!

IPL 2024
ಕ್ರೀಡೆ22 mins ago

IPL 2024: ದುಬಾರಿ ರನ್​ ನೀಡಿ ಐಪಿಎಲ್​ನಲ್ಲಿ ಅನಗತ್ಯ ದಾಖಲೆ ಬರೆದ ಮೋಹಿತ್​ ಶರ್ಮ

Amitabh Bachchan, AR Rahman honoured with Deenanath Mangeshkar award
ಸಿನಿಮಾ33 mins ago

Amitabh Bachchan: ಅಮಿತಾಭ್‌ ಬಚ್ಚನ್, ಎ ಆರ್ ರೆಹಮಾನ್‌ ಸೇರಿ ಹಲವರಿಗೆ ʻದೀನನಾಥ್ ಮಂಗೇಶ್ಕರ್ ಪ್ರಶಸ್ತಿʼ ಗೌರವ

Lok Sabha Election
ಕರ್ನಾಟಕ46 mins ago

Lok Sabha Election: ಕರ್ನಾಟಕ ಸೇರಿ 13 ರಾಜ್ಯದಲ್ಲಿ ನಾಳೆ 2ನೇ ಹಂತದ ಮತದಾನ; ಪಿನ್‌ ಟು ಪಿನ್‌ ಮಾಹಿತಿ ಇಲ್ಲಿದೆ

Subramanya Dhareshwar
ಶ್ರದ್ಧಾಂಜಲಿ46 mins ago

Subramanya Dhareshwar: ಜೇನುದನಿಯ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

IPL 2024 Points Table
ಕ್ರೀಡೆ49 mins ago

IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

road accident tumkur news
ತುಮಕೂರು1 hour ago

Road Accident: ದ್ರಾಕ್ಷಿ ತುಂಬಿಕೊಂಡು ಬರುತ್ತಿದ್ದ ಬೊಲೆರೋ ಲಾರಿಗೆ ಡಿಕ್ಕಿ, ಇಬ್ಬರು ಸಾವು

karnataka CET Exam 2024
ಪ್ರಮುಖ ಸುದ್ದಿ1 hour ago

JEE Main 2024 Result: ಜೆಇಇ ಮೇನ್‌ ಫಲಿತಾಂಶ ಪ್ರಕಟ, 56 ಅಭ್ಯರ್ಥಿಗಳಿಗೆ ಶೇ.100 ಅಂಕ, ಕಟ್‌ಆಫ್‌ 2.45% ಹೆಚ್ಚಳ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌