ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌? - Vistara News

bigbreaking

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?

VISTARANEWS.COM


on

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಾ ಮೇ ಕ್ಲೈಮ್ಯಾಕ್ಸ್‌?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಪಂಚರಾಜ್ಯಗಳ ಚುನಾವಣಾ ಪರ್ವ ಮುಗಿದಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಪೈಪೋಟಿ ತೀವ್ರಗೊಂಡಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಬಣಗಳ ನಡುವೆ ನೀನಾ..ನಾನಾ ಸಮರ ಜೋರಾಗಿದೆ. ಮೇ ಕ್ಲೈಮ್ಯಾಕ್ಸ್‌ಗೆ ವೇದಿಕೆ ಸಜ್ಜಾಗಿದೆ. ಮತ್ತೊಂದು ಪ್ರಬಲ ರಾಜಕೀಯ ಸಂಘರ್ಷದ ಮುನ್ಸೂಚನೆ ಸಿಕ್ಕಿದೆ.

ಸಿದ್ದರಾಮಯ್ಯ ಮಹಾಮೌನ:
ರಾಜಕೀಯ ಬೆಳವಣಿಗೆಗಳು ತಾರಕಕ್ಕೆ ಏರುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ ಮಹಾಮೌನಕ್ಕೆ ಜಾರಿದ್ದಾರೆ. ಈ ಮೌನ ಸಿದ್ದರಾಮಯ್ಯ ಬಣದ ಆತಂಕಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಧಿಕಾರ ತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂಬಂತ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರತೊಡಗಿದೆ. ಇಷ್ಟೇ ಅಲ್ಲ, ಇನ್ನೊಂದು ಕಡೆ ಡಿಕೆ ಶಿವಕುಮಾರ್‌ ಬಣ ಮೇ ತಿಂಗಳ ಶುಭಸುದ್ದಿಯ ನಿರೀಕ್ಷೆಯಲ್ಲಿದೆ.

ಅಹಿಂದ-ದಲಿತ ಸಿಎಂ?
ಒಂದು ವೇಳೆ ಸಿದ್ದರಾಮಯ್ಯ ಪದತ್ಯಾಗ ಮಾಡಿದರೆ, ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ, ಗೊಂದಲ ತೀವ್ರಗೊಂಡಿದೆ. ಈ ಮಧ್ಯೆ, ಡಿಕೆಶಿ ಸಿಎಂ ಆಗುವುದನ್ನು ತಪ್ಪಿಸಲು ರಣತಂತ್ರ ರಚಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಬಣದ ಸಚಿವರಾದ ಸತೀಶ್‌ ಜಾರಕಿಹೊಳಿ ಮತ್ತು ಹೆಚ್‌ ಸಿ ಮಹದೇವಪ್ಪ, ಅಹಿಂದ ಕಾರ್ಡ್‌ ಅಸ್ತ್ರ ಪ್ರಯೋಗ ಮಾಡಿದ್ದಾರೆ. ದಲಿತ ಸಿಎಂ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ. ದಲಿತ ಸಿಎಂ ಅಸ್ತ್ರದ ಪ್ರಯೋಗ ಅಂದರೆ, ಇನ್ನೊಂದು ರೀತಿಯಲ್ಲಿ ಡಿಕೆಶಿ ಸಿಎಂ ಆಗಬಾರದು ಎಂಬ ಪರೋಕ್ಷ ಸಂದೇಶದ ರವಾನೆ. ದಲಿತ ಸಿಎಂ ಚರ್ಚೆ ಬಂದಾಗ ರೇಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪರಮೇಶ್ವರ್‌, ಹೆಚ್‌ ಸಿ ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ಕೆ. ಹೆಚ್‌ ಮುನಿಯಪ್ಪ ಹೆಸರುಗಳು ಮುಂಚೂಣಿಯಲ್ಲಿರುತ್ತದೆ. ಈ ಎಲ್ಲಾ ಹೆಸರುಗಳು ಕಳೆದ ಒಂದು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಚಾಲ್ತಿಯಲ್ಲಿವೆ.

ನಡೆಯುತ್ತಾ ಮೇ ಕ್ರಾಂತಿ?:
ಮೇ ನಾಲ್ಕರಂದು ಐದು ರಾಜ್ಯಗಳ ಫಲಿತಾಂಶ ಹೊರಬರಲಿದೆ. ಅಂದೇ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣಾ ರಿಸಲ್ಟ್‌ ಕೂಡಾ ಬರಲಿದೆ. ಡಿಕೆಶಿ ಬಣ ಅಧಿಕಾರ ಬದಲಾವಣೆ ನಿರೀಕ್ಷೆಯಲ್ಲಿದೆ. ಅದನ್ನು ತಪ್ಪಿಸಲು ಸಿದ್ದರಾಮಯ್ಯ ಬಣ ನಾನಾ ತಂತ್ರಗಾರಿಕೆ ನಡೆಸುತ್ತಿದೆ. ರಾಜಣ್ಣ ದಲಿತಾಸ್ತ್ರ ಪ್ರಯೋಗ ಮಾಡಿದ್ದಾರೆ. ಸತೀಶ್‌ ಜಾರಕಿಹೊಳಿ, ಹೆಚ್‌.ಸಿ. ಮಹದೇವಪ್ಪ ಮೊದಲಾದ ಸಿಎಂ ಬಣದ ಸಚಿವರು ಪ್ರಯೋಗ ಮಾಡಿದ್ದು ದಲಿತಾಸ್ತ್ರವೇ. ಅಧಿಕಾರ ಬದಲಾವಣೆಯಾದರೂ, ದಲಿತರೇ ಮುಖ್ಯಮಂತ್ರಿಯಾಗಬೇಕು ಎಂಬ ಹಠ ಈ ನಾಯಕರದ್ದು. ಈ ಮೂಲಕ ಡಿಕೆಶಿ ಸಿಎಂ ಆಗುವುದನ್ನು ತಪ್ಪಿಸಬೇಕು ಎಂಬ ರಣತಂತ್ರ ಹೆಣೆಯಲಾಗಿದೆ. ಡಿಕೆಶಿ ಬಣ ಕೂಡಾ ಪ್ರತಿತಂತ್ರ ಹೆಣೆಯುತ್ತಿದೆ. ಸಿದ್ದರಾಮಯ್ಯನವರ ಒಪ್ಪಿಗೆ ಇಲ್ಲದೇ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬುದನ್ನೂ ಹಲವು ಸಚಿವರು ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ

ರಾಜಕೀಯ

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

VISTARANEWS.COM


on

ಪಶ್ಚಿಮ ಬಂಗಾಳವನ್ನು ಈ ಸಲ ಗೆದ್ದೇ ಗೆಲ್ಲಬೇಕು ಎಂಬ ಬಿಜೆಪಿ ಹಠ-ನಾಲ್ಕನೇ ಬಾರಿಯೂ ಸಿಎಂ ಪಟ್ಟ ಉಳಿಸಿಕೊಳ್ಳಬೇಕು ಎಂಬ ಮಮತಾ ಬ್ಯಾನರ್ಜಿ ಛಲ – ಈ ಸಲ ಪಶ್ಚಿಮ ಬಂಗಾಲದಲ್ಲಿ ಮೋದಿಯಾ..ದೀದಿಯಾ ಅನ್ನೋ ಪ್ರಶ್ನೆಗೆ ಬುಧವಾರದ ವೋಟಿಂಗ್‌ ನಿರ್ಧರಿಸಲಿದೆ. ಬುಧವಾರ 142 ಸೀಟುಗಳೇ ಬಂಗಾಳದ ರಾಜಕೀಯ ಭವಿಷ್ಯ ಬರೆಯಲಿವೆ.

ಯಾಕೆ ಬುಧವಾರ ನಿರ್ಣಾಯಕ?:
ಬುಧವಾರ ಎರಡನೇ ಹಂತದಲ್ಲಿ ಬಂಗಾಳದ 8 ಜಿಲ್ಲೆಗಳಲ್ಲಿ ಮತದಾನ ನಡೆಯಲಿವೆ. ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಹೂಗ್ಲಿ ಮತ್ತು ಪೂರ್ವ ಬರ್ಧಮನ್‌ ಜಿಲ್ಲೆಗಳಲ್ಲಿ ಮತಯುದ್ಧ ನಡೆಯಲಿವೆ. ಹಾಗೆ ನೋಡಿದರೆ ಈ ಎಂಟೂ ಜಿಲ್ಲೆಗಳು ಟಿಎಂಸಿಯ ಭದ್ರಕೋಟೆ. 2021ರ ಫಲಿತಾಂಶ ಒಮ್ಮೆ ನೋಡಿದರೆ, 142 ಸೀಟುಗಳಲ್ಲಿ ಟಿಎಂಸಿ 123ನ್ನು ಗೆದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು ಕೇವಲ 18 ಸೀಟುಗಳಲ್ಲಿ. ಮತ್ತೊಂದು ಸೀಟು ಐಎಸ್‌ಎಫ್‌ ಪಾಲಾಗಿದೆ. ಹಾಗಾಗಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿಗೆ, ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಈ 142 ಸೀಟುಗಳೇ ನಿರ್ಣಾಯಕ.
ವೋಟಿನ ಲೆಕ್ಕಾಚಾರ ಗಮನಿಸಿದರೆ ಎರಡನೇ ಹಂತದ ಮತದಾನದಲ್ಲಿ ಟಿಎಂಸಿ ಮುಂದೆ ಬಿಜೆಪಿ ಲೆಕ್ಕಕ್ಕೇ ಇಲ್ಲ. 2021ರಲ್ಲಿ ಎರಡನೇ ಹಂತದ ಕ್ಷೇತ್ರಗಳಲ್ಲಿ ಟಿಎಂಸಿಯದ್ದು ಅಭೂತಪೂರ್ವ ಶೇ. 82ರ ಸ್ಟ್ರೈಕ್‌ ರೇಟ್‌ (142ರಲ್ಲಿ 123 ಸೀಟು). ಬಿಜೆಪಿಯದ್ದು ಏನಿದ್ದರೂ ಶೇ. 17 ( 142ರಲ್ಲಿ 18 ಸೀಟು). ಆದರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಎಂಟು ಜಿಲ್ಲೆಗಳಲ್ಲಿ ಬಿಜೆಪಿಯ ವೋಟ್‌ ಶೇರಿಂಗ್‌ ಗಣನೀಯವಾಗಿ ಸುಧಾರಿಸಿದೆ. ಹಾಗಾಗಿ ಎರಡನೇ ಹಂತ ಮಮತಾ ಬ್ಯಾನರ್ಜಿಗೆ ಸುಲಭದ ತುತ್ತಲ್ಲ.

ಎರಡನೇ ಹಂತದ ಮೇಲೆ ಬಿಜೆಪಿ ಕಣ್ಣೇಕೆ?
ಪಶ್ಚಿಮ ಬಂಗಾಳದಲಿ ಬಿಜೆಪಿ ಧ್ವಜ ಹಾರಿಸಬೇಕಾದರೆ ಬುಧವಾರ ಮತದಾನವನ್ನು ಗೆಲ್ಲಲೇಬೇಕು ಎಂಬ ಸತ್ಯ ಬಿಜೆಪಿಗೆ ಅರಿವಿದೆ. ದೀದಿಯಿಂದ ಅಧಿಕಾರ ಕಿತ್ತುಕೊಳ್ಳಬೇಕಾದರೆ ಬಂಗಾಳದ ದಕ್ಷಿಣದ 8 ಜಿಲ್ಲೆಗಳಲ್ಲಿ ಬಿಜೆಪಿ ಪರಾಕ್ರಮ ತೋರಲೇ ಬೇಕಿದೆ. ಯಾಕಂದರೆ, ಉತ್ತರ ಬಂಗಾಳದಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಅಲ್ಲಿ 59 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆದರೆ, ದಕ್ಷಿಣ ಬಂಗಾಳದಲ್ಲಿ ಆ ಪಾರಮ್ಯವನ್ನು ಸಾಬೀತುಪಡಿಸಬೇಕಿದೆ. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧ್ವಜ ರಾರಾಜಿಸಬಹುದು.

ಪ. ಬಂಗಾಳದಲ್ಲಿ ಬಿಜೆಪಿ ಗುಪ್ತಗಾಮಿನಿ:
ದೀದಿನಾಡಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರಾನೇರ ಹಣಾಹಣಿ ಇದೆ. ಮೂರು ಸಲ ಸತತ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಕಳೆದ ಸಲ ಈ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೂ ಅದರ ಸೀಟು ಮೂರರಿಂದ 77ಕ್ಕೆ ಏರಿತ್ತು. ಇದು ಕೂಡಾ ಗಮನಾರ್ಹ ಸಾಧನೆಯೇ. ಒಮ್ಮೆ ಪಶ್ಚಿಮ ಬಂಗಾಳದ ಅತಿದೊಡ್ಡ ಶಕ್ತಿಯಾಗಿ ಮೆರೆದಿದ್ದ ಎಡಪಕ್ಷಗಳು ಈಗ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್‌ ಕೂಡಾ ಕಣದಲ್ಲಿದೆಯಾದರೂ ಆ ಪಕ್ಷಕ್ಕೇ ಗೆಲ್ಲುವ ಯಾವುದೇ ಆತ್ಮವಿಶ್ವಾಸ ಇಲ್ಲ. ಆದರೆ, ಬಿಜೆಪಿ ಈ ಸಲ ತನ್ನ ರಣತಂತ್ರ ಬದಲಾಯಿಸಿದೆ. ಗುಪ್ತಗಾಮಿನಿಯಾಗಿ ಬಿಜೆಪಿಯ ಕಾರ್ಯಕರ್ತರು ಜನರ ನಡುವೆ ಸೇರಿದ್ದು, ಪಕ್ಷದ ಪರ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೈವೋಲ್ಟೇಜ್‌ ಪ್ರಚಾರದಿಂದ ಬಿಜೆಪಿ ದೂರ ಉಳಿದಿದೆ. ಜೊತೆಗೆ ಮಮತಾ ಬ್ಯಾನರ್ಜಿಗೆ ವ್ಯಕ್ತಿಗತ ನಿಂದನೆಯಿಂದ ಹಿಂದೆ ಸರಿದಿದೆ. ಮಮತಾ ಆಡಳಿತ ವಿರೋಧಿ ಅಲೆ, ನುಸುಳುಕೋರರ ಸಮಸ್ಯೆ, ತುಷ್ಟೀಕರಣ ನೀತಿಯನ್ನೇ ಹೈಲೈಟ್‌ ಮಾಡಿ ಪ್ರಚಾರ ನಡೆಸುತ್ತಿದೆ. ಮತದಾರರ ಧ್ರುವೀಕರಣಕ್ಕೂ ಬಿಜೆಪಿ ರಣತಂತ್ರ ರೂಪಿಸಿದೆ. ಇದು ಫಲನೀಡಿದ್ರೆ, ಕಮಲ ಅರಳುವ ಎಲ್ಲಾ ಸಾಧ್ಯತೆಗಳಿವೆ.

ದಾಖಲೆ ವೋಟಿಂಗ್‌ ಯಾರಿಗೆ ವರ?
ಮೊದಲ ಹಂತದಲ್ಲಿ ಪ. ಬಂಗಾಳದಲ್ಲಿ ಶೇ. 93.19ರಷ್ಟು ಮತದಾನವಾಗಿದೆ. ಇದೊಂದು ಮಹಾ ದಾಖಲೆ. ಯಾಕೆ ಇಷ್ಟೊಂದು ಪ್ರಮಾಣದ ವೋಟಿಂಗ್‌ ಆಗಿದೆ ಅನ್ನೋದಕ್ಕೆ ಮೊದಲು ಸಿಗುವ ಉತ್ತರ ಎಸ್‌ಐಆರ್‌. ಮತಪಟ್ಟಿಯ ನವೀಕರಣ ಸಂದರ್ಭದಲ್ಲಿ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸುಮಾರು 90 ಲಕ್ಷ ಮತದಾರರು ಪಟ್ಟಿಯಿಂದ ಡಿಲೀಟ್‌ ಆಗಿದ್ದಾರೆ. ಇದು ಕೂಡಾ ಮತದಾನದ ದಾಖಲೆಗೆ ಕಾರಣ. ಈ ದಾಖಲೆ ವೋಟಿಂಗ್‌ ಲಾಭ ಬಿಜೆಪಿ ಪಡೆಯುತ್ತಾ? ಟಿಎಂಸಿಗೆ ಸಿಗುತ್ತಾ ಎಂಬುದಕ್ಕೆ ಹಲವು ತರ್ಕಗಳಿವೆ. ಇದಕ್ಕೆ ಉತ್ತರ ಮೇ 4ಕ್ಕೆ ಸಿಗಲಿದೆ

Continue Reading

bigbreaking

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

VISTARANEWS.COM


on

ಬೆಂಗಳೂರು: ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯವನ್ನು ಬೆಚ್ಚಿಬೀಳಿಸುವಂತಹ ಗಂಭೀರ ಆರೋಪವೊಂದು ಹೊರಬಂದಿದೆ. 2007-08ರಿಂದ ಇದುವರೆಗೆ ನಡೆದಿರುವ 20 ಸಾವಿರ ಕೋಟಿಗೂ ಹೆಚ್ಚು ಮೊತ್ತದ TDR ಹಗರಣಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳು ಈಗಿನ ಜಿಬಿಎ ಯ ಭೂಸ್ವಾಧೀನ ಮತ್ತು ಟಿಡಿಆರ್‌ ವಿಭಾಗದ ಕಚೇರಿಯಿಂದ ನಾಪತ್ತೆಯಾಗಿವೆ ಎನ್ನುವ ಆಘಾತಕಾರಿ ವಿಷಯವನ್ನು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್ ಬಹಿರಂಗಪಡಿಸಿದ್ದಾರೆ.
ಇಂದು ಜಿಬಿಎ ಕೇಂದ್ರ ಕಚೇರಿ ಮುಂಭಾಗ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹಿರಿಯ ನಾಯಕ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಟಿಡಿಆರ್‌ ಹಗರಣದ ದಾಖಲೆಗಳ ನಾಪತ್ತೆ ಬಗ್ಗೆ ಮಹತ್ವದ ಮಾಹಿತಿಗಳನ್ನು ತಿಳಿಸಿದರು. ರಸ್ತೆ ಅಭಿವೃದ್ಧಿ ಮತ್ತು ವಿವಿಧ ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ನಿಯಮಾನುಸಾರ ಸ್ವಾಧೀನಪಡಿಸಿಕೊಂಡು, ಅದಕ್ಕೆ ಬದಲಾಗಿ ನಿಗದಿತ ಮೊತ್ತದ ಪರಿಹಾರ ಧನ ಅಥವಾ TDR /DRC ನೀಡುವ ಕಾರ್ಯ 2007-08 ರಲ್ಲಿ ಚಾಲನೆಗೆ ಬಂದಿತ್ತು. ಇದಾದ ನಂತರ TDR ನಿಯಮಗಳಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್ ಪ್ರಮಾಣದಲ್ಲಿ ಬೆಳೆದು, ಬಿಬಿಎಂಪಿ ಮತ್ತು ಬಿಡಿಎ ನ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಗರಣ ನಡೆದಿದೆ ಎಂದು ಎನ್‌.ಆರ್‌.ರಮೇಶ್‌ ಆರೋಪಿಸಿದ್ದಾರೆ.
ಟಿಡಿಆರ್‌ ಹಗರಣ ಪ್ರಕರಣದ ವಿಚಾರ ಈಗಾಗಲೇ ಜಾರಿ ನಿರ್ದೇಶನಾಲಯ (ED) ಮತ್ತು ಲೋಕಾಯುಕ್ತದಲ್ಲಿ ತನಿಖೆ ಹಾಗೂ ವಿಚಾರಣಾ ಹಂತದಲ್ಲಿದೆ. ಆದರೆ ಇದೀಗ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಾಣೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಇದರಲ್ಲಿ ಜಿಬಿಎ ಅಧಿಕಾರಿಗಳು ಮತ್ತು ವಂಚಕರ ಪಾತ್ರ ಇದೆ ಎಂದು ಎನ್‌.ಆರ್‌.ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳೊಂದಿಗೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತದಲ್ಲಿ ದೂರುಗಳನ್ನು ದಾಖಲಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Continue Reading

bigbreaking

ಬಿಜೆಪಿಗೆ ಸೇರಿದ ಎಎಪಿ ದಿಗ್ಗಜ ರಾಘವ್ ಚಡ್ಡಾ: ಆಮ್ ಆದ್ಮಿ ಪಕ್ಷಕ್ಕೆ ಬಿಗ್ ಶಾಕ್! ಪಕ್ಷಾಂತರಕ್ಕೆ ಕೊಟ್ಟ ಕಾರಣವೇನು?

VISTARANEWS.COM


on

ರಾಷ್ಟ್ರ ರಾಜಕಾರಣದಲ್ಲಿ ಇಂದು ಭಾರಿ ಸಂಚಲನ ಮೂಡಿದ್ದು, ಆಮ್ ಆದ್ಮಿ ಪಕ್ಷದ (AAP) ಅತ್ಯಂತ ಪ್ರಭಾವಿ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಚಡ್ಡಾ ಅವರ ಈ ನಡೆ ಎಎಪಿ ಪಾಳಯಕ್ಕೆ ಅನಿರೀಕ್ಷಿತ ಪೆಟ್ಟು ನೀಡಿದೆ. ಕಳೆದ ಕೆಲವು ದಿನಗಳಿಂದ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದ ಅವರು, ಇಂದು ಕೇಸರಿ ಧ್ವಜ ಹಿಡಿಯುವ ಮೂಲಕ ದೆಹಲಿ ಮತ್ತು ಪಂಜಾಬ್ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ರಾಘವ್ ಚಡ್ಡಾ ಅವರ ಈ ಪಕ್ಷಾಂತರದ ಹಿಂದೆ ಹಲವು ದಿನಗಳಿಂದ ತಯಾರಿ ನಡೆದಿತ್ತು ಎಂಬ ಮುನ್ಸೂಚನೆಗಳು ಲಭ್ಯವಾಗಿದ್ದವು. ಇತ್ತೀಚೆಗೆ ಆಮ್ ಆದ್ಮಿ ಪಕ್ಷವು ಅವರ ಬಳಿಯಿದ್ದ ಕೆಲವು ಮಹತ್ವದ ಜವಾಬ್ದಾರಿಗಳನ್ನು ಹಿಂಪಡೆದಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ, ಚಡ್ಡಾ ಅವರು ಕಳೆದ ಕೆಲವು ಸಮಯದಿಂದ ಬಿಜೆಪಿಯ ಕೇಂದ್ರ ನೀತಿಗಳ ವಿರುದ್ಧ ಯಾವುದೇ ಟೀಕೆಗಳನ್ನು ಮಾಡದೆ ಮೌನಕ್ಕೆ ಶರಣಾಗಿದ್ದರು. ಅಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಈ ಹಿಂದೆ ತಾವು ಮಾಡಿದ್ದ ಹಳೆಯ ಟ್ವೀಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದು ವದಂತಿಗಳಿಗೆ ಪುಷ್ಟಿ ನೀಡಿತ್ತು.

ತಮ್ಮ ನಿರ್ಧಾರದ ಕುರಿತು ಮಾತನಾಡಿದ ರಾಘವ್ ಚಡ್ಡಾ, ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಧಾನಿ ಮೋದಿಯವರ ದಕ್ಷ ನಾಯಕತ್ವಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಎಎಪಿ ನಾಯಕತ್ವದೊಂದಿಗಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಾರ್ಯವೈಖರಿಯ ಬಗ್ಗೆ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಾಣಾಕ್ಷ ರಾಜಕಾರಣಿ ಎಂದು ಹೆಸರಾಗಿದ್ದ ಚಡ್ಡಾ ಅವರ ಸೇರ್ಪಡೆಯಿಂದ ದೆಹಲಿಯಲ್ಲಿ ಬಿಜೆಪಿಗೆ ಹೊಸ ಬಲ ಬಂದಂತಾಗಿದ್ದು, ಕೇಜ್ರಿವಾಲ್ ಪಡೆ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಈಗ ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Continue Reading

bigbreaking

Karnataka SSLC Result 2026 : ಇತಿಹಾಸದಲ್ಲೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ 94. 1% ಫಲಿತಾಂಶ: 7 ವಿದ್ಯಾರ್ಥಿಗಳಿಗೆ 625ಕ್ಕೆ 625

VISTARANEWS.COM


on

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದ್ದು ಶೇ 94. 1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ದಾಖಲೆಯ ಫಲಿತಾಂಶವಾಗಿದೆ. ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಹಾಸನದ ಜಾನವಿ, ಬೆಳಗಾವಿಯ ರೂಪಾ ಚನಗೌಡ ಪಾಟೀಲ, ಹಾಸನದ ಉತ್ಸವ ಪಾಟೀಲ 625ಕ್ಕೆ 625 ಅಂಕ ಪಡೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು ಕಲುಬುರ್ಗಿ ಕೊನೆಯ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://karresults.nic.in ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದ್ದು, ತಾಂತ್ರಿಕ ತೊಂದರೆ ತಪ್ಪಿಸಲು ಎಸ್‌ಎಂಎಸ್ ವ್ಯವಸ್ಥೆಯನ್ನೂ ಸಮರ್ಪಕವಾಗಿ ಬಳಸಿಕೊಳ್ಳಲು ಇಲಾಖೆ ಕೋರಿದೆ.

Continue Reading
Advertisement
Latest25 minutes ago

ಅಬುಧಾಬಿಯಲ್ಲಿ ಮೋದಿ: ಯುಎಇ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ

Latest5 hours ago

ವಾಹನ ಸವಾರರಿಗೆ ಶಾಕ್! ಪೆಟ್ರೋಲ್, ಡೀಸೆಲ್ ತಲಾ ₹3 ಏರಿಕೆ.

Latest5 hours ago

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್‌, ಜಾಮೀನು ಅರ್ಜಿ ವಜಾ

Latest23 hours ago

ಚೀನಾದಲ್ಲಿ ಟ್ರಂಪ್‌, ಶಿ ಜಿನ್‌‌ಪಿಂಗ್‌ ಹೈವೋಲ್ಟೇಜ್‌ ಮೀಟಿಂಗ್‌‌

Latest24 hours ago

ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿ; ನಿಯಮ ಉಲ್ಲಂಘಿಸಿದ್ರೆ ಜೈಲು ಶಿಕ್ಷೆ, ದಂಡ

ಪ್ರಮುಖ ಸುದ್ದಿ1 day ago

ಕರ್ನಾಟಕ ಸೇರಿ 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌

Latest1 day ago

ಹಿಜಾಬ್‌ ಓಕೆ, ಕೇಸರಿ ಶಾಲುಗೆ ನೋ: ಪರ- ವಿರೋಧ ಚರ್ಚೆ ಶುರು

Latest1 day ago

ವಿ.ಡಿ. ಸತೀಶನ್‌ ಸಿಎಂ ಆಗಿ ಆಯ್ಕೆ ಹಿಂದಿನ ರಿಯಲ್ ಸ್ಟೋರಿ

Latest1 day ago

ಕೇರಳಂ ನೂತನ ಸಿಎಂ ಆಗಿ ವಿ.ಡಿ. ಸತೀಶನ್‌ ಆಯ್ಕೆ

Latest2 days ago

ಮನಸೆಳೆದ ಎಸ್‌ಜೆಬಿಐಟಿ ವಿದ್ಯಾರ್ಥಿಗಳ ʼವರ್ಚಸ್ವ ಫ್ಲ್ಯಾಶ್ ಮಾಬ್ʼ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌