Site icon Vistara News

Bigg Boss Kannada | ಕ್ಯಾಪ್ಟನ್‌ ಆದ ದೀಪಿಕಾ ದಾಸ್‌: ಕಳಪೆ ಪ್ರದರ್ಶನ ತೋರಿದ ಅರುಣ್‌ ಸಾಗರ್‌!

Bigg Boss Kannada

ಬೆಂಗಳೂರ: ಬಿಗ್‌ ಬಾಸ್‌ ಸೀಸನ್‌ 9ರಲ್ಲಿ (Bigg Boss Kannada) 20ನೇ ದಿನ ಈ ವಾರ ಕ್ಯಾಪ್ಟನ್‌ ಆಗಿ ದೀಪಿಕಾ ದಾಸ್‌ ಆಯ್ಕೆ ಆಗಿದ್ದಾರೆ. ʻಗೋಲ್ಡ್‌ ಮೈನ್‌ ಗೇಮ್‌ʼನಲ್ಲಿ ದೀಪಿಕಾ, ಅನುಪಮಾ ಹಾಗೂ ರೂಪೇಶ್‌ ಶೆಟ್ಟಿ ಫೈನಲ್‌ ರೌಂಡ್‌ ತಲುಪಿದ್ದರು. ಫೈನಲ್‌ ಟಾಸ್ಕ್‌ನಲ್ಲಿ ದೀಪಿಕಾ ವಿಜೇತರಾದರು. ಸದಸ್ಯರು ಈ ವಾರ ಕಳಪೆ ಮತ್ತು ಉತ್ತಮವನ್ನು ಸ್ಪರ್ಧಿಗಳಿಗೆ ನೀಡಿದ್ದಾರೆ.

ಮನೆಯವರಿಗೆ ಬಿಗ್‌ ಬಾಸ್‌ ಟಾಸ್ಕ್‌ ನೀಡಿದ್ದು, ಇದರ ಅನುಸಾರ ಕ್ಯಾಪ್ಟನ್ಸಿ ಆಡುವ ಮೂವರು ಸದಸ್ಯರು ಕಣ್ಣು ಪಟ್ಟಿ ಕಟ್ಟಿಕೊಂಡು ತಮಗೆ ಮೀಸಲಿರುವ ದಾರಿಯಿಂದ ವ್ಯೂಹದೊಳಗೆ ಹೋಗಿ ಆಕೃತಿಗಳನ್ನು ಹುಡುಕಬೇಕು. ಹೀಗೆ ಆರು ಆಕೃತಿಗಳನ್ನು ಹುಡುಕಿ ತಮ್ಮ ಆರಂಭಿಕ ಸ್ಥಾನಕ್ಕೆ ಮರಳಿರುವ ಮೊದಲ ಸದಸ್ಯ ಈ ಟಾಸ್ಕ್‌ ವಿಜೇತರಾಗುತ್ತಾರೆ ಅನುಪಮಾ ಆಕೃತಿ ಸ್ಟಾರ್‌, ರೂಪೇಶ್‌ ಆಕೃತಿ ಸರ್ಕಲ್‌ ಹಾಗೂ ದೀಪಿಕಾ ಆಕೃತಿ ಚೌಕ ಆಗಿತ್ತು. ಈ ಟಾಸ್ಕ್‌ನಲ್ಲಿ ದೀಪಿಕಾ ದಾಸ್‌ ವಿಜೇತರಾಗಿ ಹೊರಹೊಮ್ಮಿದರು. ಹಾಗೂ ಈ ವಾರದ ಕ್ಯಾಪ್ಟನ್‌ ಆಗಿ ಆಯ್ಕೆಗೊಂಡರು. ಈ ವಾರ ಕಳಪೆ ಅರುಣ್‌ ಸಾಗರ್‌ ಆಗಿದ್ದಾರೆ. ಉತ್ತಮ ಪ್ರದರ್ಶನಕಾರನಾಗಿ ದೀಪಿಕಾ ಹೊರಹೊಮ್ಮಿದರು.

ಇದನ್ನೂ ಓದಿ | Bigg Boss Kannada | ಇನ್ನು ಮುಂದೆ ವಾರಾಂತ್ಯದ ಎಪಿಸೋಡ್‌ಗಳು ರಾತ್ರಿ 9ಕ್ಕೆ ಪ್ರಸಾರ: ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌!
ಮಯೂರಿ ಮೊದಲಿಗೆ ಉತ್ತಮವನ್ನು ಅನುಪಮಾಗೆ ನೀಡಿದರೆ, ಕಳಪೆಯನ್ನು ಪ್ರಶಾಂತ್‌ ಸಂಬರಗಿಗೆ ನೀಡಿದರು. ಹಾಗೂ ಅವರ ಸ್ಟೇಟ್‌ಮೆಂಟ್‌ಗಳು ನೋವಾಗುವ ರೀತಿಯಲ್ಲಿ ಇರುತ್ತದೆ ಎಂದು ಕಾರಣ ಕೊಟ್ಟರು. ಅಮೂಲ್ಯ ಕಳಪೆಯನ್ನು ಪ್ರಶಾಂತ್‌ ಉತ್ತಮವನ್ನು ಅನುಪಮಾಗೆ ನೀಡಿದರು. ಕಳಪೆಯನ್ನು ಪ್ರಶಾಂತ್‌ ಗೆ ಕೊಟ್ಟರು. ಪ್ರಶಾಂತ್‌ ಉತ್ತಮ-ದೀಪಿಕಾ ದಾಸ್‌ ಕಳಪೆ-ರೂಪೇಶ್‌ ರಾಜಣ್ಣ, ರಾಕೇಶ್‌ ಉತ್ತಮ ದೀಪಿಕಾ ದಾಸ್‌, ಕಳಪೆ-ಅರುಣ್‌ ಸಾಗರ್‌, ರೂಪೇಶ್‌-ಉತ್ತಮ ದೀಪಿಕಾ ದಾಸ್‌ ಕಳಪೆ-ಅರುಣ್‌ ಸಾಗರ್‌, ದಿವ್ಯಾ ಉರುಡುಗ-ಉತ್ತಮ ದೀಪಿಕಾ ದಾಸ್‌ ಕಳಪೆ-ಆರ್ಯವರ್ಧನ್‌, ಅರುಣ್‌ ಸಾಗರ್‌ ಉತ್ತಮ ದೀಪಿಕಾ ದಾಸ್‌ ಕಳಪೆ-ಕಾವ್ಯಶ್ರೀ, ದರ್ಶ್‌ ಉತ್ತಮ- ದೀಪಿಕಾ, ಕಳಪೆ-ಅರುಣ್‌ ಸಾಗರ್‌, ಸಾನ್ಯ ಉತ್ತಮ-ರೂಪೇಶ್‌, ಕಳಪೆ-ಕಾವ್ಯಶ್ರೀ, ರೂಪೇಶ್‌ ಶೆಟ್ಟಿ ಉತ್ತಮ ದೀಪಿಕಾ, ಕಳಪೆ-ಅರುಣ್‌ ಸಾಗರ್‌, ನೇಹಾ-ಕಳಪೆ-ಆರ್ಯವರ್ಧನ್‌, ಉತ್ತಮ-ಅನುಪಮಾ, ಅನುಪಮಾ ಉತ್ತಮ-ದೀಪಿಕಾ ಕಳಪೆ-ಆರ್ಯವರ್ಧನ್‌, ದೀಪಿಕಾ ಉತ್ತಮ ದರ್ಶ್‌, ಕಳಪೆ ಕಾವ್ಯಗೆ ನೀಡಿದರು. ಕಳಪೆ ಕೊಟ್ಟ ನಂತರ ಅರುಣ್‌ ಸಾಗರ್‌ ಮನೆಯವರಿಗೆ ಕ್ಲಾಸ್‌ ತೆಗೆದುಕೊಂಡರು.

ಇದನ್ನೂ ಓದಿ | Bigg Boss Kannada | ಈ ವಾರದ ಕ್ಯಾಪ್ಟನ್‌ ರೇಸ್‌ನಲ್ಲಿ ಈ ಮೂವರು ಸ್ಪರ್ಧಿಗಳು!

Exit mobile version