Site icon Vistara News

Bigg Boss Telugu 8: ಶುರುವಾಗ್ತಿದೆ ಬಿಗ್​ಬಾಸ್ ತೆಲುಗು ಸೀಸನ್ 8; ಸ್ಪರ್ಧಿಗಳು ಯಾರೆಲ್ಲ?

Bigg Boss Telugu 8 Contestants List Leaked

ಬೆಂಗಳೂರು:ಬಿಗ್ ಬಾಸ್ ತೆಲುಗು ಸೀಸನ್-7 ಮುಗಿದ ಬಳಿಕ ಸೀಸನ್‌ 8 (Bigg Boss Telugu 8) ಶುರು ಯಾವಾಗ ಎಂದು ಪ್ರೇಕ್ಷಕರು ಕಾಯುತ್ತಿದ್ದರು. TRP ರೇಟಿಂಗ್‌ಗಳಿಗೆ ಸಂಬಂಧಿಸಿದಂತೆ ಕಳೆದ ಸೀಸನ್ ಭರ್ಜರಿ ಹಿಟ್ ಆಗಿತ್ತು. ಮಾತ್ರವಲ್ಲ ಬಿಗ್ ಬಾಸ್ ತೆಲುಗು ಸೀಸನ್-7 (Bigg Boss Telugu 7) ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್‌ ಆಗಿ ಸಖತ್‌ ಸುದ್ದಿಯಲ್ಲಿದ್ದರು. ಇದೀಗ ಬಿಗ್​ಬಾಸ್ ತೆಲುಗು ಮತ್ತೆ ಪ್ರಾರಂಭವಾಗುತ್ತಿದೆ.ಆಗಸ್ಟ್ 4 ರಂದು ಬಿಗ್​ಬಾಸ್ ತೆಲುಗು ಸೀಸನ್ 8 ಪ್ರಾರಂಭ ಆಗಲಿದೆ. ಈ ಬಾರಿ ಬಿಗ್​ಬಾಸ್​ನಲ್ಲಿ ಭಾಗಿಯಾಗಲಿರುವ ಸ್ಪರ್ಧಿಗಳು ಈಗಾಗಲೇ ಖಾತ್ರಿ ಆಗಿದ್ದಾರೆ ಎನ್ನಲಾಗುತ್ತಿದೆ.

ಜೂನಿಯರ್ ಎನ್‌ಟಿಆರ್ ಮೊದಲ ಆವೃತ್ತಿಯನ್ನು ಹೋಸ್ಟ್ ಮಾಡಿದ್ದರೆ, ನಾನಿ ಎರಡನೇ ಆವೃತ್ತಿಯನ್ನು ಹೋಸ್ಟ್ ಮಾಡಿದ್ದರು. ಆ ಬಳಿಕ ನಾಗಾರ್ಜುನ ಅವರು ಹೋಸ್ಟ್‌ ಮಾಡುತ್ತ ಬಂದಿದ್ದಾರೆ. ಸೀಸನ್‌ 7ರ ವರೆಗೆ ನಾಗಾರ್ಜುನ ಅವರೇ ನಿಭಾಯಿಸುತ್ತಿದ್ದಾರೆ. ನಾಗುರ್ಜನ ಅವರ ವಿಶಿಷ್ಟ ವರ್ಚಸ್ಸು ಮತ್ತು ಮಾತನಾಡುವ ಶೈಲಿಗೆ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಮಾಹಿತಿ ಪ್ರಕಾರ ಈ ಸೀಸನ್‌ನಲ್ಲಿ ನಟರು, ಯೂಟ್ಯೂಬರ್‌ಗಳು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಸಮ್ಮಿಶ್ರಣ ಇರಲಿದೆ ಎಂದು ವರದಿಯಾಗಿದೆ. . ಪ್ರತಿಬಾರಿಯಂತೆ ನಟ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ: Bigg Boss Telugu 7: ಬಿಗ್ ಬಾಸ್ ತೆಲುಗು ಸೀಸನ್-7 ವಿಜೇತ ಪಲ್ಲವಿ ಪ್ರಶಾಂತ್ ಅರೆಸ್ಟ್‌!

ಸಂಭಾವ್ಯ ಪಟ್ಟಿ ಹೀಗಿದೆ!

ಬಾಂಚಿಕ್ ಬಬ್ಲು: ಜನಪ್ರಿಯ ಯೂಟ್ಯೂಬರ್. ರಾಜ್ ತರುಣ್: ಟಾಲಿವುಡ್‌ನ ಪ್ರಸಿದ್ಧ ನಟ. ಸೋನಿಯಾ ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಬಳಗ ಹೊಂದಿರುವ ನಟಿ, ಡ್ರಗ್ಸ್ ಪ್ರಕರಣದ ಆರೋಪಿ ಹೇಮಾ ಸಹ ಈ ಬಾರಿ ಬಿಗ್​ಬಾಸ್​ಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಮರ್ಯಾದಾ ಹತ್ಯೆಯ ಸಂತ್ರಸ್ತೆ ಅಮೃತಾ ಪ್ರಣಯ್ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ. ಭಾರಿ ದುಬಾರಿ ಬೆಲೆಗೆ ಆಹಾರ ಮಾರಾಟ ಮಾಡುತ್ತಾ ಜನಪ್ರಿಯವಾಗಿರುವ ಕುಮಾರಿ ಆಂಟಿ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಜನಪ್ರಿಯ ಯೂಟ್ಯೂಬ್ ಕಪಲ್ ಆಗಿರುವ ನೇತ್ರಾ ಮತ್ತು ವಂಶಿ ಸಹ ಈ ಬಾರಿ ಬಿಗ್​ಬಾಸ್​ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸೆಪ್ಟೆಂಬರ್ 3 ರಂದು ತೆಲುಗು ಬಿಗ್​ಬಾಸ್ ಸೀಸನ್ 7 ಆರಂಭವಾಗಿತ್ತು. 19 ಮಂದಿ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಿದ್ದರು. ಅವರಲ್ಲೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದಿದ್ದರು. ಅಲ್ಲಿಗೆ ಒಟ್ಟು 21 ಸ್ಪರ್ಧಿಗಳು ಈ ಬಾರಿಯ ಬಿಗ್​ಬಾಸ್ ತೆಲುಗು ಸೀಸನ್ 7ರಲ್ಲಿ ಆಡಿದರುಪಲ್ಲವಿ ಪ್ರಶಾಂತ್ ವಿನ್ನರ್ ಆಗಿದ್ದು, ಹಲವರಿಗೆ ಖುಷಿ ನೀಡಿತ್ತು. ಆದರೆ ಮೊದಲಿನಿಂದಲೂ ಶಿವಾಜಿ ವಿನ್ನರ್ ಎಂದುಕೊಂಡಿದ್ದ ಹಲವರಿಗೆ ಬೇಸರವಾಗಿತ್ತು.

Exit mobile version