Site icon Vistara News

Milana Nagaraj: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಲವ್‌ ಮಾಕ್ಟೆಲ್‌ʼ ಜೋಡಿ!

Love Mocktel milana nagaraj couple expecting first child
ಕನ್ನಡ ನಟಿ ಮಿಲನಾ ನಾಗರಾಜ್‌ (milana nagaraj) ಮತ್ತು ನಟ ಡಾರ್ಲಿಂಗ್‌ ಕೃಷ್ಣ (darling krishna) ಇತ್ತೀಚೆಗೆ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.

ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಮಿಲನಾ ನಾಗರಾಜ್‌ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.ಮಾ.8ರಂದು ನಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. 

ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಸುಮಾರು ಎಂಟು ವರ್ಷ ಲವ್‌ ಮಾಡಿದ್ದರು. ಬಳಿಕ ಕುಟುಂಬದವರ ಒಪ್ಪಿಗೆ ಪಡೆದು ಮೂರು ವರ್ಷದ ಹಿಂದೆ ವಿವಾಹವಾಗಿದ್ದರು.

ಇದನ್ನೂ ಓದಿ: Karataka Damanaka: ಇಂದು ʻರಂಗನಾಯಕʼ-ʻಕರಟಕ ದಮನಕʼ ಒಂದೇ ದಿನ ರಿಲೀಸ್;  ಯಾವ ಸಿನಿಮಾ ನೋಡುತ್ತೀರಿ?

ಮಿಲನಾ ನಾಗರಾಜ್‌ ಮತ್ತು ಡಾರ್ಲಿಂಗ್‌ ಕೃಷ್ಣ ಜೋಡಿಯಾಗಿ ಲವ್‌ ಮಾಕ್ಟೆಲ್‌ ಸಿನಿಮಾದಲ್ಲಿ ನಟಿಸಿದ್ದರು. ಇದು ಭರ್ಜರಿ ಹಿಟ್‌ ಕಂಡಿತ್ತು. ಬಳಿಕ ಲವ್‌ ಮಾಕ್ಟೆಲ್‌ 2 ಸಹ ಬಿಡುಗಡೆಯಾಗಿತ್ತು.

ಮಿಲನಾ ನಾಗರಾಜ್‌ ಅವರು ಲಿಖಿತ್‌ ಶೆಟ್ಟಿ ಜತೆ ನʻಮ್ಮ ದುನಿಯಾ ನಮ್‌ ಸ್ಟೈಲ್‌ʼ ಚಿತ್ರದಲ್ಲಿ ನಟಿಸಿದ್ದರು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ʻಬೃಂದಾವನʼ ಸಿನಿಮಾದಲ್ಲೂ ನಟಿಸಿದ್ದರು.

Exit mobile version