Unstoppable with NBK: ವಿಜಯ್‌ ದೇವರಕೊಂಡ ಧ್ವನಿ ಕೇಳಿದ್ದೇ ತಡ ನಾಚಿ ನೀರಾದ ರಶ್ಮಿಕಾ ಮಂದಣ್ಣ Vistara News

South Cinema

Unstoppable with NBK: ವಿಜಯ್‌ ದೇವರಕೊಂಡ ಧ್ವನಿ ಕೇಳಿದ್ದೇ ತಡ ನಾಚಿ ನೀರಾದ ರಶ್ಮಿಕಾ ಮಂದಣ್ಣ

Unstoppable with NBK: ʻಅನಿಮಲ್ʼ ಸಿನಿಮಾ ಪ್ರಚಾರ ಮಾಡಲು ಅನ್‌ಸ್ಟಾಪಬಲ್ ಶೋ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಾಲಯ್ಯ ಅವರ ಕ್ರಶ್‌ ರಶ್ಮಿಕಾ ಅವರನ್ನು ಸಖತ್‌ ಆಗಿಯೇ ಕಾಲೆಳೆದಿದ್ದಾರೆ.

VISTARANEWS.COM


on

Unstoppable with NBK: Ranbir Kapoor, Rashmika
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಶೋ (Unstoppable with NBK) ಕಳೆದ 1 ಮತ್ತು 2 ಸೀಸನ್‌ಗಳಲ್ಲಿ ಎಸ್‌ಎಸ್ ರಾಜಮೌಳಿ, ಎಂಎಂ ಕೀರವಾಣಿ, ಪ್ರಭಾಸ್, ವಿಜಯ್ ದೇವರಕೊಂಡ ಮತ್ತು ಇನ್ನೂ ಅನೇಕ ಪ್ರಮುಖ ವ್ಯಕ್ತಿಗಳು ಬಂದಿದ್ದರು. ʻದಿ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಲಿಮಿಟೆಡ್ ಎಡಿಷನ್ ಶೋʼ ಅಕ್ಟೋಬರ್ 17ರಂದು ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಬಾಲಯ್ಯ ಅವರ ಇತ್ತೀಚಿನ ಚಿತ್ರ ಭಗವಂತ ಕೇಸರಿಯ ಪಾತ್ರವರ್ಗ ಮತ್ತು ಸಿಬ್ಬಂದಿ ಇದ್ದರು. ನವೆಂಬರ್ 24ರಂದು ಪ್ರಸಾರವಾಗಲಿರುವ ಇತ್ತೀಚಿನ ಮುಂಬರುವ ಸಂಚಿಕೆಯಲ್ಲಿ, ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಸಂದೀಪ್ ರೆಡ್ಡಿ ವಂಗಾ ತಮ್ಮ ಮುಂಬರುವ ಚಲನಚಿತ್ರ ʻಅನಿಮಲ್ʼ ಸಿನಿಮಾ ಪ್ರಚಾರ ಮಾಡಲು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಬಾಲಯ್ಯ ಅವರ ಕ್ರಶ್‌ ರಶ್ಮಿಕಾ ಅವರನ್ನು ಸಖತ್‌ ಆಗಿಯೇ ಕಾಲೆಳೆದಿದ್ದಾರೆ.

ಈ ಶೋನಲ್ಲಿ ಮೊದಲ ಸಂಚಿಕೆಯಲ್ಲಿ ತೆಲುಗು ನಟ ವಿಶ್ವಕ್‌ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ಕಾಣಿಸಿಕೊಂಡಿದ್ದರು. ವಿಶ್ವಕ್ ಸೇನ್ ಮತ್ತು ಸಿದ್ಧು ಜೊನ್ನಲಗಡ್ಡ ನಂದಮೂರಿ ಬಾಲಕೃಷ್ಣರಿಗೆ ನಿಮ್ಮ ಕ್ರಶ್‌ ಯಾರೆಂದು ಕೇಳಿದ್ದರು. ಉತ್ತರಿಸಿದ ನಂದಮೂರಿ ಬಾಲಕೃಷ್ಣ ಅವರು ರಶ್ಮಿಕಾ ಎಂದು ಹೇಳಿದ್ದರು. ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕಾ ಮಂದಣ್ಣ ಸ್ವತಃ ತೆಲುಗು ಸ್ಟಾರ್ ಬಾಲಯ್ಯ ಅವರಿಗೂ ಇಷ್ಟವಾಗಿದ್ದರು. ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ಅನ್‌ಸ್ಪಾಪಬಲ್‌ ಶೋ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು ಒಟಿಟಿ ಆಹಾದಲ್ಲಿ ಈ ಶೋ ಸ್ಟ್ರೀಮಿಂಗ್ ಆಗುತ್ತಿದೆ.

ಇದನ್ನೂ ಓದಿ: Pawan Kalyan: ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ ಪವನ್ ಕಲ್ಯಾಣ್‌! ಬದುಕು ನೀಡಿದ್ದು ಚಿರಂಜೀವಿ

ರಣಬೀರ್ ಕಪೂರ್ ಹೊಗಳಿದ ಬಾಲಯ್ಯ

ರಣಬೀರ್ ಕಪೂರ್ ಜತೆಗಿನ ನಂದಮೂರಿ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ಶೋನ ಪ್ರೋಮೊವನ್ನು ಟ್ವೀಟರ್‌ನಲ್ಲಿ ಪ್ರಸಾರ ಮಾಡಲಾಗಿದೆ. ಪ್ರೋಮೊದಲ್ಲಿ ನಂದಮೂರಿ ಬಾಲಕೃಷ್ಣ ಅವರು ರಣಬೀರ್ ಕಪೂರ್ ಅವರನ್ನು ಕಾರ್ಯಕ್ರಮಕ್ಕೆ ಪರಿಚಯಿಸಿದರು, ಅವರನ್ನು “ರಕ್ತ ಚಂದ್ರನಂತೆ ಸುಂದರ, ಗೋಸುಂಬೆಯಂತೆ ಅತ್ಯಂತ ಪ್ರತಿಭಾವಂತ ಮತ್ತು ಕಪೂರ್ ಕುಟುಂಬದ ಅತ್ಯಂತ ಪ್ರತಿಭಾನ್ವಿತ ಮೊಮ್ಮಗ” ಎಂದು ವಿವರಿಸಿದರು. ನಂತರ ರಣಬೀರ್ ಕಪೂರ್ ಬಾಲಕೃಷ್ಣ ಅವರ ಫೇಮಸ್ ಡೈಲಾಗ್ ಹೇಳುವ ಮೂಲಕ ವೇದಿಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರೋಮೊದಲ್ಲಿ ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಶೋನಲ್ಲಿ ವಿಜಯ್‌ ದೇವರಕೊಂಡ ಬಗ್ಗೆ ಸಖತ್‌ ಆಗಿ ಕಾಲೆಳೆದಿದ್ದಾರೆ ಬಾಲಯ್ಯ. ಮಾತ್ರವಲ್ಲ ವಿಜಯ್‌ ದೇವರಕೊಂಡಗೆ ರಶ್ಮಿಕಾರಿಂದ ಕಾಲ್‌ ಕೂಡ ಮಾಡಿಸಿದ್ದಾರೆ. ವಿಜಯ್‌ ದೇವರಕೊಂಡ ಕೂಡ ಕಾಲ್‌ ರಿಸೀವ್‌ ಮಾಡಿ ʻʻವಾಟ್ಸ್‌ ಅಪ್‌ ಕ್ರಶ್‌? ʻʻWhat’s up, KRUSH?ಎಂದು ಕೇಳಿದ್ದಾರೆ. ಪ್ರೋಮೊದಲ್ಲಿ ರಶ್ಮಿಕಾ ಈ ವೇಳೆ ನಾಚಿ ನೀರಾಗಿದ್ದು, ಡಿಯರ್ ಕಾಮ್ರೇಡ್ ಚಿತ್ರದ ಕಡಲಲ್ಲೇ ಜನಪ್ರಿಯ ಹಾಡು ಹಿನ್ನಲೆಯಲ್ಲಿ ಮೂಡಿಬಂತು. ಹಾಗೇಯೇ ಸ್ಕ್ರೀನ್‌ನಲ್ಲಿ ವಿಜಯ್‌ ದೇವರಕೊಂಡ ಹಾಗೂ ರಣಬೀರ್‌ ಫೋಟೊ ಬಂದಾಗ, ರಣಬೀರ್‌ ಅವರು ಬಾಲಯ್ಯ ಅವರಿಗೆ ʻʻರಶ್ಮಿಕಾ ಅವರನ್ನು ಕೇಳಿ, ಅವರಿಬ್ಬರಲ್ಲಿ ಯಾರು ಬೆಟರ್‌ ಹೀರೊ?ʼʼ ಎಂದು ಮತ್ತೆ ನಟಿಯ ಕಾಲೆಳೆದಿದ್ದಾರೆ. ಪ್ರೇಕ್ಷಕರು ಕೂಡ ಪ್ರೋಮೊ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rashmika Mandanna | ರಶ್ಮಿಕಾ ಮಂದಣ್ಣ ನನ್ನ ಕ್ರಶ್‌: ನಟ ನಂದಮೂರಿ ಬಾಲಕೃಷ್ಣ

ರಣಬೀರ್ ಕಪೂರ್ ಕ್ಯಾಶುಯಲ್ ಬ್ರೌನ್ ಚೆಕ್ಡ್ ಶರ್ಟ್ ಮತ್ತು ಬಾಲಕೃಷ್ಣ ಅವರು ಫ್ಯಾಶನ್ ಬ್ಲೇಜರ್ ಧರಿಸಿದ್ದರು. ರಶ್ಮಿಕಾ ಮಂದಣ್ಣ ಕಪ್ಪು ಸೀರೆಯಲ್ಲಿ ಮಿಂಚಿದ್ದರು.

ಡಿಸೆಂಬರ್ 1ರಂದು ಅನಿಮಲ್‌ ರಿಲೀಸ್‌

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವು ಡಿಸೆಂಬರ್ 1ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹದ್ದೂರ್’ ಕೂಡ ಅದೇ ದಿನ ಬಿಡುಗಡೆಯಾಗುತ್ತಿದ್ದು, ಇವರೆಡೂ ಸಿನಿಮಾಗಳು ಕ್ಲ್ಯಾಶ್‌ ಆಗುತ್ತಿವೆ. ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಚಿತ್ರದ ಟ್ರೈಲರ್‌ ಐಕಾನಿಕ್ ಬುರ್ಜ್ ಖಲೀಫಾದಲ್ಲಿ ಪ್ರದರ್ಶಿಸಲು ನಿರ್ಮಾಪಕ ಭೂಷಣ್ ಕುಮಾರ್ ಜತೆಗೆ ಬಾಬಿ ಡಿಯೋಲ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಚಿತ್ರದ ತಾರಾಗಣವು ದುಬೈಗೆ ಹಾರಿತ್ತು. ಬಾಲಿವುಡ್‌ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ರಣಬೀರ್ ಕಪೂರ್‌ ನಟನೆಯ ಅನಿಮಲ್‌ ಕೂಡ ಒಂದು.

ಇತ್ತೀಚೆಗೆ ಈ ಸಿನಿಮಾದ ಟೀಸರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಜತೆಗೆ ನಟಿ ರಶ್ಮಿಕಾ ಮಂದಣ್ಣ ಕ್ಯಾರೆಕ್ಟರ್‌ ಪೋಸ್ಟರ್‌ ಕೂಡ ರಿಲೀಸ್‌ ಆಗಿತ್ತು. ಇದಕ್ಕೆ ನಟಿಯ ಫ್ಯಾನ್ಸ್‌ ಫಿದಾ ಆಗಿದ್ದರು. ಚಿತ್ರತಂಡ ʼಹುವಾ ಮೈನ್‌ʼ ಹಾಡನ್ನು (Animal song Hua Main) ಕೂಡ ರಿಲೀಸ್‌ ಮಾಡಿದೆ. ಈ ಹಾಡಿನಲ್ಲಿ ರಶ್ಮಿಕಾ-ರಣಬೀರ್ ಕಪೂರ್‌ ಲಿಪ್‌ ಲಾಕ್‌ ದೃಶ್ಯಗಳು ಹೆಚ್ಚಿವೆ. ಸಿನಿಮಾದಲ್ಲಿ ಪ್ರೈವೇಟ್ ಜೆಟ್, ಕುಟುಂಬಸ್ಥರ ಮುಂದೆ ಲಿಪ್‌ ಲಾಕ್‌ ಮಾಡಿರುವ ಸೀನ್‌ಗಳಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

South Cinema

Kannada New Movie: ಟೀಸರ್ ಮೂಲಕ ಕೌತುಕದ ಕಿಡಿ ಹೊತ್ತಿಸಿದ `ಕೆಂಡ’!

Kannada New Movie: ಕೆಂಡ ಚಿತ್ರದ ಟೀಸರ್ ಅದನ್ನು ಅಕ್ಷರಶಃ ಸಾಧ್ಯವಾಗಿಸಿದಂತಿದೆ. ಓರ್ವ ಸಾಮಾನ್ಯ ಹುಡುಗ ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕು ಅಸಾಮಾನ್ಯವಾಗಿ ಠೇಂಕರಿಸುವ ಕಥೆ ಕೆಂಡದ ಜೀವಾಳ. ಈ ಬಗ್ಗೆ ಚಿತ್ರತಂಡವೇ ಒಂದಷ್ಟು ಮಾಹಿತಿಗಳನ್ನು ಬಿಟ್ಟುಕೊಟ್ಟಿತ್ತು.

VISTARANEWS.COM


on

Kenda teaser kannada
Koo

ಬೆಂಗಳೂರು: ಒಂದೇ ಒಂದು ಮೋಷನ್ ಪೋಸ್ಟರ್ (Kannada New Movie) ಮೂಲಕ ಅಗಾಧ ಪ್ರಮಾಣದಲ್ಲಿ ಸಿನಿರಸಿಕರಿಗೆ ಕುತೂಹಲ ಮೂಡಿಸಿತ್ತು ಚಿತ್ರ ʻಕೆಂಡ’. ಇದೀಗ ಕೆಂಡದ ಟೀಸರ್ ಬಿಡುಗಡೆಗೊಂಡಿದೆ. ಮಾಸ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ, ಗಹನವಾದ ಕಥೆಯ ಸುಳಿವಿನೊಂದಿಗೆ ಕೆಂಡ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದೆ.

ಕೆಂಡ ಚಿತ್ರದ ಟೀಸರ್ ಅದನ್ನು ಅಕ್ಷರಶಃ ಸಾಧ್ಯವಾಗಿಸಿದಂತಿದೆ. ಓರ್ವ ಸಾಮಾನ್ಯ ಹುಡುಗ ವ್ಯವಸ್ಥೆಯ ಅಡಕತ್ತರಿಗೆ ಸಿಕ್ಕು ಅಸಾಮಾನ್ಯವಾಗಿ ಠೇಂಕರಿಸುವ ಕಥೆ ಕೆಂಡದ ಜೀವಾಳ. ಈ ಬಗ್ಗೆ ಚಿತ್ರತಂಡವೇ ಒಂದಷ್ಟು ಮಾಹಿತಿಗಳನ್ನು ಬಿಟ್ಟುಕೊಟ್ಟಿತ್ತು.

ಈ ಹಿಂದೆ ಕ್ಯಾರೆಕ್ಟರ್ ರಿವೀಲಿಂಗ್ ವಿಡಿಯೋ ಬಿಡುಗಡೆಯಾದಾಗಲೇ ಇದೊಂದು ವಿಶಿಷ್ಟವಾದ ಚಿತ್ರವೆಂಬ ಸ್ಪಷ್ಟ ಸುಳಿವು ಸಿಕ್ಕಿತ್ತು. ಈ ಟೀಸರ್ ಅದನ್ನು ಮತ್ತಷ್ಟು ನಿಚ್ಚಳವಾಗಿಸಿದೆ. ಅಷ್ಟಕ್ಕೂ ಕೆಂಡ ಸಿನಿಮಾ ಪ್ರೇಕ್ಷಕರ ಪಾಲಿಗೆ ಇಷ್ಟು ಮುಖ್ಯವಾಗಲು ಕಾರಣವಿದೆ. ಈ ಹಿಂದೆ ಗಂಟುಮೂಟೆ ಎಂಬ ಚಿತ್ರವನ್ನು ರೂಪಿಸಿದ್ದ ತಂಡವೇ ಕೆಂಡದ ಹಿಂದಿರುವುದನ್ನು ಪ್ರಧಾನ ಕಾರಣವಾಗಿ ಪರಿಗಣಿಸಬಹುದು. ಆ ಚಿತ್ರವನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ಕೆಂಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಗಂಟುಮೂಟೆ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದುಕೊಂಡು, ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದ ಸಹದೇವ್ ಕೆಲವಡಿ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅವರು ಮೊದಲ ಹೆಜ್ಜೆಯಲ್ಲಿಯೇ ಭಿನ್ನ ಕಥಾನಕವನ್ನು ಮುಟ್ಟಿರುವ ಸೂಚನೆ ಈ ಟೀಸರ್ ಮೂಲಕ ಸ್ಪಷ್ಟವಾಗಿಯೇ ಕಾಣಿಸಿದೆ.

ಇದನ್ನೂ ಓದಿ: Kannada New Movie: ’ಕ್ಲಾಂತ’ ಮೂಲಕ ಕನ್ನಡಕ್ಕೆ ಬಂದ ತುಳು ಹೀರೊ!

ರಂಗಭೂಮಿ ಪ್ರತಿಭೆಗಳೇ ಈ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಅಂತೂ ಈ ಟೀಸರ್ ಮೂಲಕ ಕೆಂಡದ ಬಗ್ಗೆ ಅತೀವ ಕುತೂಹಲದ ಪರ್ವವೊಂದಕ್ಕೆ ಚಾಲನೆ ಸಿಕ್ಕಂತಾಗಿದೆ.

Continue Reading

South Cinema

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

Rishab Shetty: ನೆಟ್ಟಿಗರು ರಿಷಬ್‌ ಅವರು ಪರೋಕ್ಷವಾಗಿ ರಶ್ಮಿಕಾ ಹಾಗೂ ಪ್ರಶಾಂತ್‌ ನೀಲ್‌ ಅವರಿಗೆ ತಿರುಗೇಟು ಕೊಟ್ಟರು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಶುರು ಮಾಡಿದ್ದರು. ಇದೀಗ ರಿಷಬ್‌ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

Rishab rashmika
Koo

ಬೆಂಗಳೂರು: ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ IFFI 2023 (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ)ನಲ್ಲಿ ನೀಡಿದ ಹೇಳಿಕೆಯ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗಿದ್ದವು. ರಿಷಬ್‌ ಶೆಟ್ಟಿ ಅವರು ʻʻನನಗೆ ಹಿಂದಿ ಮಾತ್ರವಲ್ಲದೆ ಇತರ ಚಲನಚಿತ್ರೋದ್ಯಮಗಳಿಂದಲೂ ಆಫರ್‌ಗಳು ಬಂದವು. ನಾನು ಕನ್ನಡ ಇಂಡಸ್ಟ್ರಿಯನ್ನು ಬಿಡಬಾರದು ಎಂಬ ನಂಬಿಕೆಯಿಂದಾಗಿ ಹಲವು ಆಪರ್‌ಗಳನ್ನು ಬಿಟ್ಟೆʼʼ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ನೆಟ್ಟಿಗರು ರಿಷಬ್‌ ಅವರು ಪರೋಕ್ಷವಾಗಿ ರಶ್ಮಿಕಾ ಹಾಗೂ ಪ್ರಶಾಂತ್‌ ನೀಲ್‌ ಅವರಿಗೆ ತಿರುಗೇಟು ಕೊಟ್ಟರು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲು ಶುರು ಮಾಡಿದ್ದರು. ಇದೀಗ ರಿಷಬ್‌ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ಪ್ರಶಾಂತ್ ನೀಲ್ ಅವರಂತಹ ನಟಿ ಹಾಗೂ ನಿರ್ದೇಶಕರುಗಳು ಕನ್ನಡ ಚಿತ್ರರಂಗದಲ್ಲಿ ಯಸಸ್ಸು ಸಾಧಿಸಿದ ಬಳಿಕ ಬೇರೆ ಭಾಷೆಯ ಚಿತ್ರೋದ್ಯಮದಲ್ಲಿ ಹೋಗಿದ್ದಾರೆ ಎಂಬುದು ಹಲವರ ವಾದ.
ಇತ್ತೀಚೆಗೆ ನಡೆದ IFFIನಲ್ಲಿ ರಿಷಬ್‌ಗೆ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಯೋಜಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದರು.

ರಿಷಬ್‌ ಮಾತನಾಡಿ ʻ ಕಾಂತಾರ ಯಶಸ್ಸಿನ ನಂತರ, ನನಗೆ ಹಿಂದಿ ಮಾತ್ರವಲ್ಲದೆ ಇತರ ಚಲನಚಿತ್ರೋದ್ಯಮಗಳಿಂದಲೂ ಆಫರ್‌ಗಳು ಬಂದವು. ಕಾಂತಾರ ಸಿನಿಮಾ ಈ ಮಟ್ಟದಲ್ಲಿ ಹಿಟ್‌ ಆಗಿದ್ದಕ್ಕೆ ನನ್ನ ಕನ್ನಡಿಗರ ಕೊಡುಗೆ ಅದರಲ್ಲಿ ಅಪಾರ ಇದೆ. ಹಾಗಾಗಿ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ನಾನು ಸದಾ ಚಿರಋಣಿ. ಒಂದು ಸಿನಿಮಾ ಹಿಟ್‌ ಆಗ್ತಿದ್ದಂತೆ, ಇಂಡಸ್ಟ್ರಿ ಬಿಟ್ಟು ಹೊರಟ ನೋಡು ಎಂಬ ಮಾತು ಬರಬಾರದುʼʼ ಎಂದಿದ್ದರು.

ಇದನ್ನೂ ಓದಿ: Rishab Shetty: ವಿಶೇಷ ಜ್ಯೂರಿ ಅವಾರ್ಡ್ ತಮ್ಮ ನೆಚ್ಚಿನ ನಟನಿಗೆ ಅರ್ಪಿಸಿದ ರಿಷಬ್‌ ಶೆಟ್ಟಿ, ಯಾರವರು?

ರಶ್ಮಿಕಾ ಮತ್ತು ಪ್ರಶಾಂತ್ ನೀಲ್‌ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರಿ ಯಶಸ್ಸನ್ನು ಗಳಿಸಿದವರು. 2016ರ ಚಲನಚಿತ್ರ ʼಕಿರಿಕ್ ಪಾರ್ಟಿʼಯೊಂದಿಗೆ ರಶ್ಮಿಕಾ ಖ್ಯಾತಿಯನ್ನು ಗಳಿಸಿದರು. 2018 ಚಲೋ ಸಿನಿಮಾ ಮೂಲಕ ತೆಲುಗಿಗೆ ಪದರ್ಪಾಣೆ ಮಾಡಿದರು ರಶ್ಮಿತಾ . ಅದೇ ವರ್ಷ ಬಿಡುಗಡೆಯಾದ ʼಗೀತ ಗೋವಿಂದಂʼ ಅವರ ಜೀವನವನ್ನು ಬದಲಾಯಿಸಿತು. ಬಳಿಕ ನಟಿ ತಮಿಳು ಮತ್ತು ಹಿಂದಿಯಲ್ಲೂ ನಟಿಸಿದರು. ಅವರು ಇತ್ತೀಚೆಗೆ ಸಂದೀಪ್ ರೆಡ್ಡಿ ವಂಗಾ ಅವರ ʼಅನಿಮಲ್ʼ ಚಿತ್ರದಲ್ಲಿ ರಣಬೀರ್ ಕಪೂರ್ ಜತೆ ಕಾಣಿಸಿಕೊಂಡರು. ಮತ್ತೊಂದೆಡೆ ಪ್ರಶಾಂತ್ ನೀಲ್‌ ಅವರು ಯಶ್ ಅಭಿನಯದ ಕೆಜಿಎಫ್ ಮತ್ತು ಕೆಜಿಎಫ್ 2 ಸಿನಿಮಾ ಮೂಲಕ ಸಕ್ಸೆಸ್‌ ಕಂಡ ಬಳಿಕ ಪ್ರಭಾಸ್ ಅವರೊಂದಿಗೆ ಸಲಾರ್: ಭಾಗ 1ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೇ ಮುಂದೆ ಟಾಲಿವುಡ್ ಮತ್ತು ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದಾರೆ. ಈ ಇಬ್ಬರು ತಮ್ಮ ಯಶಸ್ಸಿನ ನಂತರ ಕನ್ನಡ ಚಿತ್ರರಂಗವನ್ನು ತೊರೆಯುತ್ತಿರುವುದಕ್ಕೆ ರಿಷಬ್ ವ್ಯಂಗ್ಯವಾಡುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡಲು ಶುರು ಮಾಡಿದರು. ಹಾಗೇ ಈ ಬಗ್ಗೆ ಭಾರಿ ಚರ್ಚೆಗಳು ಆಯ್ತು.

ನಟನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಲು ರಿಷಬ್ ಪ್ರತಿಕ್ರಿಯೆಯನ್ನು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ʻʻರಿಷಬ್‌ ಅವರು ಹೇಳಿದ್ದು ಒಂದು ಹಿಟ್ ಸಿನಿಮಾ ನೀಡಿದ ನಂತರ ಉದ್ಯಮವನ್ನು ತೊರೆಯುವ ವ್ಯಕ್ತಿ ಎಂದು ಕರೆಸಿಕೊಳ್ಳಲು ನಾನು ಬಯಸುವುದಿಲ್ಲʼʼ ಎಂದು. ಅದರ ಬದಲಾಗಿ, ‘ನಾನು ಇತರರಂತೆ ಕನ್ನಡ ಇಂಡಸ್ಟ್ರಿ ತೊರೆಯುವುದಿಲ್ಲ’ ಎಂದು ಅವರು ಹೇಳಿಲ್ಲ ಎಂದು ರಿಷಬ್‌ ಪರ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Rishab Shetty: ಕನ್ನಡಿಗ ಕಲಾವಿದರೇ ಮೊದಲ ಆದ್ಯತೆ ಎಂದ ರಿಷಬ್‌; ಹೇಗಿರಲಿದೆ ಕಾಂತಾರ ಚಾಪ್ಟರ್‌ 1?

ಈ ಟ್ವೀಟ್‌ಗೆ ರಿಷಬ್ ಕೂಡ ಪ್ರತಿಕ್ರಿಯಿಸಿ, “ತೊಂದರೆಯಿಲ್ಲ, ಕೊನೆಗೂ ನಾನು ಹೇಳಲು ಬಯಸಿದ್ದನ್ನು ಒಬ್ಬರಾದರೂ ಅರ್ಥಮಾಡಿಕೊಂಡರಲ್ಲ” ಎಂದು ಬರೆದುಕೊಂಡಿದ್ದಾರೆ.

ಈಗಾಗಲೇ ಕಾಂತಾರ ಚಾಪ್ಟರ್‌ -1 ಲುಕ್ ಔಟ್ ಆಗಿದೆ. ಪ್ರತಿಕ್ಷಣವೂ ದೈವಿಕ ಸ್ಪರ್ಶ ನೀಡುವಂತಹ ಹಿನ್ನೆಲೆ ಧ್ವನಿಯಲ್ಲಿ ತಮ್ಮ ಅವತಾರವನ್ನು ಬಹಿರಂಗಗೊಳಿಸಿದ್ದಾರೆ ರಿಷಬ್‌. ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ವಿಶ್ವಾದ್ಯಂತ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್‌. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ..

Continue Reading

South Cinema

Actor Yash: ಸಿಹಿ ಸುದ್ದಿ ಕೊಟ್ಟೇ ಬಿಟ್ರು ರಾಕಿಂಗ್‌ ಸ್ಟಾರ್‌ ಯಶ್‌; ಟೈಟಲ್ ಅನೌನ್ಸ್‌ಗೆ ಮುಹೂರ್ತ ಫಿಕ್ಸ್!

Actor Yash: ಪೋಸ್ಟರ್‌ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ.

VISTARANEWS.COM


on

Rocking star Yash gave sweet news new cinema Title Announcement date Fix
Koo

ಬೆಂಗಳೂರು; ನಟ ಯಶ್ (Actor Yash), ‘ಕೆಜಿಎಫ್’ ಹೊರತಾಗಿ ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಮುಂದೆ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಫ್ಯಾನ್ಸ್‌ ಮಾತ್ರವಲ್ಲದೆ ಭಾರತದ ಸಿನಿಮಾ ಪ್ರೇಕ್ಷಕರಲ್ಲಿತ್ತು. (ಡಿಸೆಂಬರ್ 03) ತಮ್ಮ ಮುಂಬರುವ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದರು. ಇದೀಗ ಯಶ್ ಸಿನಿಮಾದ ಟೈಟಲ್ ಅನೌನ್ಸ್ ಮೆಂಟ್‌ಗೆ ಮುಹೂರ್ತ ಫಿಕ್ಸ್‌ ಆಗಿದೆ. ಈ ಬಗ್ಗೆ ಯಶ್‌ ಟ್ವೀಟ್‌ ಹಂಚಿಕೊಂಡಿದ್ದಾರೆ.

ಡಿಸೆಂಬರ್ 8ರಂದು ಬೆಳಗ್ಗೆ 9:55ಕ್ಕೆ ಯಶ್ ಹೊಸ ಪ್ರಾಜೆಕ್ಟ್‌ ಅನೌನ್ಸ್‌ ಮಾಡಲಿದ್ದಾರೆ. ನಿನ್ನೆಯಷ್ಟೇ ಯಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡಿದ್ದು, ‘ಲೋಡಿಂಗ್’ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಇದೀಗ ರಾಕಿಂಗ್ ಸ್ಟಾರ್ ಸಿನಿಮಾ‌ ಅನೌನ್ಸ್ ಮಾಡಲಿದ್ದಾರೆ. ಯಶ್​ ‘ಲೋಡಿಂಗ್’ ಪೋಸ್ಟರ್ ಹಂಚಿಕೊಂಡ ಕೇವಲ 40 ನಿಮಿಷದಲ್ಲಿ ಆ ಚಿತ್ರಕ್ಕೆ 30 ಸಾವಿರ ಲೈಕ್​ಗಳು ಫೇಸ್​ಬುಕ್​ನಲ್ಲಿ ಬಂದಿತ್ತು. ‘ಲೋಡಿಂಗ್’ ಪೋಸ್ಟರ್ʼ ಹಾಗೂ ಇಂದು ಹಂಚಿಕೊಂಡ ಪೋಸ್ಟರ್‌ ಕೆಂಪು ಬಣ್ಣವನ್ನು ಹೊಂದಿದ್ದು, ಮುಂದಿನ ಸಿನಿಮಾ ಕೂಡ ಇದೇ ಮಾದರಿಯ ಕಲರ್ ಕಾಂಬಿನೇಷನ್‌ನಲ್ಲಿ ಬರಲಿದೆ ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ ಎನ್ನಲಾಗಿದೆ.

ಈ ಸಿನಿಮಾಕ್ಕಾಗಿ ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕರನ್ನು ಕರೆತರಲಿದ್ದಾರೆ ಎನ್ನಲಾಗಿದೆ. ಶ್ರೀಲಂಕಾದಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆಸಲಿದ್ದು, ನಿರ್ದೇಶಕಿ ಒಬ್ಬರು ಯಶ್​ರ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ.

ಇದನ್ನೂ ಓದಿ: Actor Yash: ನಾನ್ ಯಾವತ್ತೂ ಅನೌನ್ಸ್‌ಮೆಂಟ್‌ ಮಾಡಿಲ್ಲ, ತಾಳ್ಮೆ ಇರಲಿ ಎಂದ ಯಶ್‌!

ಈ ಮಧ್ಯೆ ಅವರು ಬಾಲಿವುಡ್‌ ನಿರ್ದೇಶಕ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಯಶ್‌ ದಾಖಲೆಯ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಮೂಲಗಳ ಪ್ರಕಾರ ರಣಬೀರ್‌ ಕಪೂರ್‌ ರಾಮನಾಗಿ, ದಕ್ಷಿಣ ಭಾರತದ ನಾಯಕಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಲಿದ್ದಾರೆ. ಇನ್ನೊಂದು ಮುಖ್ಯ ಪಾತ್ರ ರಾವಣನಾಗಿ ಯಶ್‌ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

Continue Reading

South Cinema

Thug Life Movie: ಕಮಲ್ ಹಾಸನ್ ಸಿನಿಮಾದಲ್ಲಿ ಎಂಟ್ರಿ ಕೊಟ್ಟ ಗೌತಮ್ ಕಾರ್ತಿಕ್!

Thug Life Movie: ಇದಕ್ಕೂ ಮೊದಲು ಗೌತಮ್ ಕಾರ್ತಿಕ್ ಮಣಿರತ್ನಂ ಜತೆಗೆ 2010ರ ಚಲನಚಿತ್ರ ʻಕಡಲ್ʼನಲ್ಲಿ ಕೆಲಸ ಮಾಡಿದ್ದರು. ಇದರಲ್ಲಿ ಗೌತಮ್ ಮತ್ತು ತುಳಸಿ ನಾಯರ್ ನಟಿಸಿದ್ದಾರೆ. ಇದೀಗ ಕಮಲ್‌ ಅವರ ಥಗ್ ಲೈಫ್ ತಾರಾಗಣದಲ್ಲಿ ಗೌತಮ್ ಕೂಡ ಇರುವುದು ಖಚಿತವಾಗಿದೆ.

VISTARANEWS.COM


on

Mani Ratnam-Kamal Haasan film Thug Life
Koo

ಬೆಂಗಳೂರು: ಕಮಲ್ ಹಾಸನ್ (Thug Life Movie) ಮತ್ತು ಮಣಿರತ್ನಂ ಅವರು 1987ರ ʻನಾಯಗನ್ʼ ಚಿತ್ರದ ಬಳಿಕ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ತಮಿಳಿನ ಹಿರಿಯ ನಟ ಕಾರ್ತಿಕ್ ಅವರ ಪುತ್ರ ಗೌತಮ್ ಕಾರ್ತಿಕ್ ಕೂಡ ಕಮಲ್‌ ಸಿನಿಮಾ ಪಾತ್ರವರ್ಗಕ್ಕೆ ಸೇರುತ್ತಿದ್ದಾರೆ. ವರದಿಗಳ ಪ್ರಕಾರ, ಅವರು ನಿರ್ವಹಿಸುತ್ತಿರುವ ಪಾತ್ರ ಬಹು ಮುಖ್ಯವಾದದ್ದು ಎನ್ನಲಾಗಿದೆ.

ಇದಕ್ಕೂ ಮೊದಲು ಗೌತಮ್ ಕಾರ್ತಿಕ್ ಮಣಿರತ್ನಂ ಜತೆಗೆ 2010ರ ಚಲನಚಿತ್ರ ʻಕಡಲ್ʼನಲ್ಲಿ ಕೆಲಸ ಮಾಡಿದ್ದರು. ಇದರಲ್ಲಿ ಗೌತಮ್ ಮತ್ತು ತುಳಸಿ ನಾಯರ್ ನಟಿಸಿದ್ದಾರೆ. ಇದೀಗ ಕಮಲ್‌ ಅವರ ಥಗ್ ಲೈಫ್ ತಾರಾಗಣದಲ್ಲಿ ಗೌತಮ್ ಕೂಡ ಇರುವುದು ಖಚಿತವಾಗಿದೆ.

ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ʼಥಗ್ ಲೈಫ್ʼ ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಎಂದು ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆ್ಯಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ʼಉಳಗನಾಯಗನ್ʼ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಕ್ಕಾ ಆ್ಯಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮ್ಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Actor Vinayakan: ‘ಜೈಲರ್‌’ ವಿಲನ್‌ ವಿನಾಯಕನ್‌ ಬಂಧನ; ಕುಡಿದ ಮತ್ತಲ್ಲಿ ನಟನ ಹುಚ್ಚಾಟ?

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎ.ಆರ್.ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ. ಚಂದ್ರನ್ ಛಾಯಾಗ್ರಹಣ ʼಥಗ್ ಲೈಫ್ʼ ಸಿನಿಮಾದಲ್ಲಿದೆ. 1987ರಲ್ಲಿ ಕಮಲ್ ಹಾಸನ್ ನಟನೆಯ, ಮಣಿರತ್ನಂ ನಿರ್ದೇಶನದ ‘ನಾಯಕನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ ಬಳಿಕ ಸುಮಾರು 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕಮಲ್‌ ಹಾಸನ್‌ ಎಸ್‌.ಶಂಕರ್‌ ನಿರ್ದೇಶನದ ಇಂಡಿಯನ್‌ 2 ಚಿತ್ರದಲ್ಲಿ ನಿರತರಾಗಿದ್ದಾರೆ. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಈ ಚಿತ್ರ 2024ರ ಎಪ್ರಿಲ್‌ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್‌ ಅಗರ್ವಾಲ್‌ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್‌, ಎಸ್‌.ಜೆ.ಸೂರ್ಯ, ರಾಕುಲ್‌ ಪ್ರೀತ್‌ ಸಿಂಗ್‌, ಪ್ರಿಯಾ ಭವಾನಿ ಶಂಕರ್‌, ನಡುಮುಡಿ ವೇಣು, ವಿವೇಕ್‌ ಮತ್ತಿತರರು ನಟಿಸಿದ್ದಾರೆ. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ಚಿತ್ರ ತಯಾರಾಗಲಿದೆ.

Continue Reading
Advertisement
lokayukta raid in channakeshava
ಕರ್ನಾಟಕ21 seconds ago

Lokayukta Raid: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌, ಬೆಳ್ಳಂಬೆಳಗ್ಗೆ ರಾಜ್ಯದೆಲ್ಲೆಡೆ ದಾಳಿ

David Warner
ಕ್ರಿಕೆಟ್9 mins ago

David Warner: ಮೋಸಗಾರನಿಗೆ ವಿದಾಯ ಪಂದ್ಯದ ಅಗತ್ಯವಿಲ್ಲ; ಮಿಚೆಲ್​ ಜಾನ್ಸನ್

sadghuru with students
ಅಂಕಣ53 mins ago

Prerane Column : ವಿದ್ಯಾಭ್ಯಾಸ ಎಂದರೆ ದುಡ್ಡು ಮಾಡುವ ದಂಧೆಯ ಅಡಿಪಾಯವೇ?

ಕರ್ನಾಟಕ1 hour ago

ವಿಜಯಪುರ ಗೋದಾಮು ದುರಂತ: ಮೃತರ ಸಂಖ್ಯೆ 7ಕ್ಕೆ, ಇನ್ನೂ ನಾಲ್ಕು ಶವ ಸಿಕ್ಕಿಲ್ಲ

cm siddaramaih respect captain pranjal
ಕರ್ನಾಟಕ2 hours ago

CM Siddaramaiah: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 50 ಲಕ್ಷ ರೂ. ಪರಿಹಾರ

Canara Bank Ammembala Subbarao Pai
ಅಂಕಣ2 hours ago

Raja Marga Column: ಹಿಡಿಯಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಕಟ್ಟಿದ ಅಮ್ಮೆಂಬಳ ಸುಬ್ಬರಾವ್ ಪೈ

CBSE Board Exam 2024 and many more changes proposed implemented in this year
ದೇಶ2 hours ago

ಸಿಬಿಎಸ್‌ಇ ಬೋರ್ಡ್‌ ಎಕ್ಸಾಂಗೆ ಘೋಷಿಸಿದ ಪ್ರಮುಖ ಬದಲಾವಣೆಗಳೇನು?

Saurav Gangly
ಕ್ರಿಕೆಟ್2 hours ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ2 hours ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ2 hours ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ4 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌