ನವದೆಹಲಿ: ಭಾರತೀಯ ಕಾರ್ಪೊರೇಟ್ ವಲಯದ ಕಂಪನಿಗಳು ಕಳೆದ ಮೇನಲ್ಲಿ 1.48 ಲಕ್ಷ ಕೋಟಿ ರೂ.ಗಳ ೧೯೦ ಡೀಲ್‌ಗಳಿಗೆ ಸಹಿ ಹಾಕಿವೆ. ಈ ವ್ಯವಹಾರಗಳ ಒಟ್ಟು ಮೌಲ್ಯ ೧.೪೮ ಲಕ್ಷ ಕೋಟಿ ರೂ.ಗಳಾಗಿದೆ.
ಇದರೊಂದಿಗೆ ಮೇನಲ್ಲಿ ಕಂಪನಿಗಳ ವಿಲೀನ ಮತ್ತು ಸ್ವಾಧೀನ ( Mergers & acquisitions) ಗಣನೀಯ ಹೆಚ್ಚಳವಾಗಿದೆ. ಡೀಲ್‌ಗಳ ಮೌಲ್ಯದ ದೃಷ್ಟಿಯಿಂದ ಇದು ಕಳೆದ 4 ವರ್ಷಗಳಲ್ಲಿಯೇ ಎರಡನೇ ಗರಿಷ್ಠ ಮೊತ್ತವಾಗಿದೆ.
ಅದಾನಿ ಗ್ರೂಪ್ ಮುಂಚೂಣಿಯಲ್ಲಿ
ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಕಳೆದ ಮೇನಲ್ಲಿ ೧೦.೫ ಶತಕೋಟಿ ಡಾಲರ್ ಮೌಲ್ಯದ ( ಅಂದಾಜು ೮೧,೫೦೦ ಕೋಟಿ ರೂ.) ಡೀಲ್ ನಡೆಸಿತ್ತು. ಹೋಲ್ಸಿಮ್ಸ್ ಸಮೂಹದ ಭಾರತೀಯ ಸಿಮೆಂಟ್ ಬ್ರ್ಯಾಂಡ್‌ಗಳಾದ ಎಸಿಸಿ, ಅಂಬುಜಾ ಸಿಮೆಂಟ್ ಅನ್ನು ಖರೀದಿಸಿತ್ತು.