Fact check : ಬೆಂಗಳೂರಿನ ಏರ್ ಶೋದಲ್ಲಿ ಜೆಟ್ ಗಗನಕ್ಕೆ ಮುಖ ಮಾಡಿ ಹಾರಿದ್ದು ನಿಜವೇ? Vistara News

ಫ್ಯಾಕ್ಟ್ ಚೆಕ

Fact check : ಬೆಂಗಳೂರಿನ ಏರ್ ಶೋದಲ್ಲಿ ಜೆಟ್ ಗಗನಕ್ಕೆ ಮುಖ ಮಾಡಿ ಹಾರಿದ್ದು ನಿಜವೇ?

ಬೆಂಗಳೂರಿನ ಏರ್ ಶೋನಲ್ಲಿ ಜೆಟ್ ಒಂದು ನೇರವಾಗಿ ಆಗಸಕ್ಕೆ ಮುಖ ಮಾಡಿ ಹಾರಿದೆ ಎನ್ನುವ ವಿಡಿಯೊ ಒಂದು ಹರಿದಾಡಿತ್ತು. ಅದರ ಸತ್ಯಾಂಶ ಫ್ಯಾಕ್ಟ್ ಚೆಕ್ (Fact check ) ಇಂದ ಹೊರಬಿದ್ದಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಮ್ಮ ರಾಜಧಾನಿ ಬೆಂಗಳೂರಿನಲ್ಲಿ 14ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಅಲ್ಲಿ ಯುದ್ಧ ವಿಮಾನಗಳು ತಮ್ಮ ಸಾಹಸ ಪ್ರದರ್ಶನ ಮಾಡುತ್ತಿರುವ ಅನೇಕ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗುತ್ತಿವೆ. ಅದರಂತೆಯೇ ಜೆಟ್ ಒಂದು ನೇರವಾಗಿ ಆಗಸಕ್ಕೆ ಮುಖ ಮಾಡಿ ಹಾರಾಟ ಆರಂಭಿಸುವ ವಿಡಿಯೊ ಒಂದು ವೈರಲ್ ಆಗಿದೆ. ಆದರೆ ಆ ವಿಡಿಯೊ ನಿಜಕ್ಕೂ ಬೆಂಗಳೂರಿನದ್ದಾ ಎನ್ನುವ ಬಗ್ಗೆ ಸತ್ಯಾಂಶ (Fact check) ಇಲ್ಲಿದೆ ನೋಡಿ.


ಈ ವಿಡಿಯೊ ಕುರಿಯತಾಗಿ ಎಎಫ್ಡಬ್ಲ್ಯೂಎ ಫ್ಯಾಕ್ಟ್ ಚೆಕ್ ಮಾಡಿದೆ. ಆಗ ಈ ವಿಡಿಯೊ ಬೆಂಗಳೂರಿನದ್ದಲ್ಲ, ಬದಲಾಗಿ ದುಬೈನದ್ದು ಎಂದು ತಿಳಿದುಬಂದಿದೆ. ಮೊದಲಿನ ಹಂತದ ಫ್ಯಾಕ್ಟ್ ಚೆಕ್ ಅಲ್ಲಿ ಈ ಜೆಟ್ ರಷ್ಯಾದ್ದಾಗಿದ್ದು, ರಷ್ಯಾದ ಪೈಲೆಟ್ ಇದನ್ನು ಓಡಿಸುತ್ತಿದ್ದಾಗಿ ತಿಳಿದುಬಂದಿದೆ. ಮತ್ತೆ ಫ್ಯಾಕ್ಟ್ ಚೆಕ್ ಮಾಡಿದಾಗ ಇದು ಒಂದು ರಿಮೋಟ್ ಕಂಟ್ರೋಲಡ್ ಜೆಟ್ ಎನ್ನುವ ವಿಚಾರ ಗೊತ್ತಾಗಿದೆ. ದುಬೈನಲ್ಲಿ ಪ್ರತಿ ವರ್ಷ ರಿಮೋಟ್ ಕಂಟ್ರೋಲಡ್ ಜೆಟ್ ಪ್ರದರ್ಶನ ನಡೆಯುತ್ತಿದ್ದು, ಅದರಲ್ಲಿ ರಷ್ಯಾದ ಈ ಮಾದರಿ ಜೆಟ್ ಹಾರಾಟ ನಡೆಸಿದ್ದಾಗಿ ತಿಳಿದುಬಂದಿದೆ.


ಈ ಜೆಟ್ ಅನ್ನು ತೋರಿಸುವಂತಹ ವಿಡಿಯೊ ಸೂಪರ್ ಕಾರ್ ಬ್ಲಾಂಡಿ ಹೆಸರಿನ ಯೂಟ್ಯೂಬ್ ಚಾನೆಲ್ ಅಲ್ಲಿ 2021ರಲ್ಲಿಯೇ ಹಂಚಿಕೊಂಡಿರುವುದು ಕಂಡುಬಂದಿದೆ. ವೈರಲ್ ವಿಡಿಯೊದಲ್ಲಿರುವ ಜೆಟ್ ಹಾಗೂ ಯುಟ್ಯೂಬ್ ವಿಡಿಯೊದಲ್ಲಿರುವ ಜೆಟ್ ಎರಡೂ ಒಂದೇ ಎನ್ನುವುದನ್ನು ಕಾಣಬಹುದಾಗಿದೆ. ಜೆಟ್ ಇರುವ ಸ್ಥಳವನ್ನೂ ಸಹ ಫ್ಯಾಕ್ಟ್ ಚೆಕ್ ಒಳಪಡಿಸಿದಾಗ ಅದು ದುಬೈನಲ್ಲಿ ನಡೆದ ಪ್ರದರ್ಶನದ್ದು ಎನ್ನುವುದು ದೃಢವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fact check: ಹುತಾತ್ಮ ಮಗನ ಕುರಿತು ಭಾವಪೂರ್ಣ ಕವಿತೆ ಬರೆದರೆ ಪ್ರಾಂಜಲ್‌ ತಾಯಿ?

Fact Check: ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರುನಾಡಿನ ವೀರ ಯೋಧ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಅವರ ಕುರಿತಂತೆ ಭಾವುಕ ಕವನವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅದನ್ನು ಅವರ ತಾಯಿಯೇ ಬರೆದರಾ?

VISTARANEWS.COM


on

Captain pranjal mother poem fact check
Koo

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?
– ಇದು ಜಮ್ಮು-ಕಾಶ್ಮೀರದ ರಜೌರಿಯ ಕಾಡಿನಲ್ಲಿ (Rajouri Encounter) ಅಡಗಿಕೊಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು ಮುನ್ನುಗ್ಗುವ ವೇಳೆ ಹುತಾತ್ಮರಾದ ಕ್ಯಾಪ್ಟನ್‌ ಎಂ.ವಿ ಪ್ರಾಂಜಲ್‌ (Captain MV Pranjal) ಅವರ ಬಗ್ಗೆ ಬರೆಯಲಾದ ಭಾವುಕ ಕವನವೊಂದರ (Emotional Poem) ಕೆಲವು ಸಾಲು (Fact Check).

ಕಳೆದ ನವೆಂಬರ್‌ 22ರಂದು ರಜೌರಿ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಈ 29 ವರ್ಷದ ತರುಣನಿಗೆ ಇಡೀ ಕನ್ನಡ ನಾಡು ಅಶ್ರುತರ್ಪಣ ಸಲ್ಲಿಸಿದೆ. ಬೆಂಗಳೂರಂತೂ ವೀರ ಯೋಧನಿಗೆ ಸೆಲ್ಯೂಟ್‌ ಹೊಡೆದು, ಪುಷ್ಟಾಂಜಲಿ ಸಲ್ಲಿಸಿ ಕಳುಹಿಸಿಕೊಟ್ಟಿದೆ. ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಆಡಳಿತ ನಿರ್ದೇಶಕರಾಗಿದ್ದ ಎಂ.ವೆಂಕಟೇಶ್‌ (Pranjal Father M Venkatesh) ಮತ್ತು ಅನುರಾಧಾ ವೆಂಕಟೇಶ್‌ (Pranjal Mother Anuradha Venkatesh) ದಂಪತಿಯ ಏಕೈಕ ಪುತ್ರ ಪ್ರಾಂಜಲ್‌. ಸಣ್ಣ ವಯಸ್ಸಿನಲ್ಲೇ ಸೈನಿಕನಾಗುವ ಹಂಬಲ ಹೊತ್ತು ಅದನ್ನು ಸಾಕಾರಗೊಳಿಸಿಕೊಂಡಿದ್ದ ಎಲ್ಲರ ಮೆಚ್ಚಿನ ಅಕ್ಕರೆಯ ಹುಡುಗ. ಎರಡು ವರ್ಷದ ಹಿಂದೆ ಅದಿತಿ ಅವರನ್ನು ಕೈ ಹಿಡಿದು ಹೊಸ ಬಾಳಿನ ಹೊಸಿಲೂ ತುಳಿದಿದ್ದರು.

Family of Captain MV Pranjal
ಕ್ಯಾಪ್ಟನ್‌ ಫ್ಯಾಮಿಲಿ ಕ್ಯಾ ಪ್ರಾಂಜಲ್‌ ಅದಿತಿ ಪ್ರಾಂಜಲ್‌ ಅನುರಾಧಾ ವೆಂಕಟೇಶ್‌ ಎಂ ವೆಂಕಟೇಶ್‌

ಅವರು ಹುತಾತ್ಮರಾಗಿದ್ದಾರೆಂಬ ಸುದ್ದಿಯನ್ನು ಕೇಳುತ್ತಲೇ ಕುಟುಂಬ ವರ್ಗ, ಸ್ನೇಹಿತರು, ಶಿಕ್ಷಕರು ಕಣ್ಣೀರು ಹಾಕಿದ್ದರು. ಆದರೆ, ತಂದೆ ಎಂ.ವೆಂಕಟೇಶ್‌, ತಾಯಿ ಅನುರಾಧಾ ಮತ್ತು ಪತ್ನಿ ಅದಿತಿ ಮಾತ್ರ ಉಕ್ಕಿ ಬರುವ ಅಳುವನ್ನು ಗಂಟಲಲ್ಲೇ ಕಟ್ಟಿಕೊಂಡು ಸೈನಿಕನ ಮನೆಯವರು ತಾವು ಎಂಬುದನ್ನು ತೋರಿಸುವ ಸ್ಥಿತಪ್ರಜ್ಞತೆಯನ್ನು ಮೆರೆದಿದ್ದರು.

Family of Captain MV Pranjal
ಕ್ಯಾಪ್ಟನ್‌ ಗೆ ಅಂತಿಮ ನಮನ ಇದು ಕುಟುಂಬಕ್ಕೆ ಭಾವುಕ ಕ್ಷಣ

ಇದೀಗ ಎಲ್ಲ ಮುಗಿದು ಒಂದು ನೀರವ ಮೌನವಷ್ಟೇ ಉಳಿದೆ. ಬಹುಶಃ ಮನೆಯಲ್ಲಿ ಪ್ರಾಂಜಲ ನೆನಪುಗಳು ಹರಿದಾಡುತ್ತಿರಬಹುದು. ಒಬ್ಬನೇ ಮಗನನ್ನು ಕಳೆದುಕೊಂಡ ನೋವಿಗೆ ಪರಸ್ಪರ ಸಾಂತ್ವನ ಹೇಳುತ್ತಿರಬಹುದು. ಇದರ ನಡುವೆಯೇ ಆಕ್ರೋಶ, ಸಂಕಟಗಳು ನಾನಾ ರೂಪದಲ್ಲಿ ಪ್ರಕಟಗೊಳ್ಳುತ್ತಿರಬಹುದು.

ಇಂಥ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ಭಾವಪೂರ್ಣ ಕವನ ಎಲ್ಲರ ಮನಸ್ಸನ್ನು ಹಿಂಡುತ್ತಿದೆ, ಉಗ್ರರ ಮೇಲೆ ಆಕ್ರೋಶ ಹೆಚ್ಚಿಸುತ್ತಿದೆ.

Captain pranjal mother poem fact check

ಆ ಕವನ ಹೀಗಿದೆ..

ಓ ಪ್ರಕೃತಿಯೇ ಹಣ್ಣೆಲೆಗಳು ಸರದಿಯಲ್ಲಿರುವಾಗ
ನೀನೇಕೆ ಎಳೆ ಚಿಗುರ ಕಸಿದುಕೊಂಡೆ?
ಬೆಳೆದು ಹೆಮ್ಮರವಾಗಬೇಕಾದ ಚಿಕ್ಕ ಗಿಡವ
ಚಿವುಟಿ ನೀನೇನ ಪಡೆದುಕೊಂಡೆ?

ಓ ರಕ್ತ ಪಿಪಾಸು ಉಗ್ರಗಾಮಿಗಳೇ…..
ನಿಮಗೇಕೆ ಈ ಕೊನೆಯಿಲ್ಲದ ದಾಹ?
ಎಂದೆಂದಿಗೂ ಸಾಧಿಸಲಾಗದ, ನಿಮಗೆಂದಿಗೂ ದೊರಕದ
ನಮ್ಮೀ ಮಾತೃಭೂಮಿಯ ಮೇಲೆ ಏಕೀ ವ್ಯಾಮೋಹ?

ನಿಮ್ಮನು ಪ್ರಚೋದಿಸಿ ಕಳುಹಿಸಿದ ಸ್ವಾರ್ಥಿಗಳಿಗೆ
ಎಂದು ಆಗುವುದು ಜ್ಞಾನೋದಯ?
ಎಲ್ಲರಿಗೂ ಬದುಕುವ ಹಕ್ಕು ಪ್ರಕೃತಿಯು ನೀಡಿರುವಾಗ
ನಿಮಗೇಕೆ ಅತಿಕ್ರಮಿಸುವ ಈ ದುಷ್ಟ ಸಂಪ್ರದಾಯ?

ನಮ್ಮ ಕಣ್ಣೆದುರೇ ಬೆಳೆದ ಈ ಕಂದ ಪ್ರಾಂಜಲನ
ಜೀವ ಕಸಿಯುವ ಹಕ್ಕ ನಿಮಗೆ ನೀಡಿದವರಾರು?
ಕೇಳಿಸದೇ ನಿಮಗೆ ಹೊತ್ತು ಹೆತ್ತ ತಾಯಿಯ ಆಕ್ರಂದನ?
ಕಾಣಿಸದೇ, ದುಃಖವ ನುಂಗಿ ಕಣ್ಣೀರು ತಡೆದುಕೊಂಡ ತಂದೆಯ ದುಮ್ಮಾನ?
ಅನಿಸುವುದಿಲ್ಲವೇ, ಕೈಹಿಡಿದ ಬಾಳ ಸಂಗಾತಿಯ ಎಣೆಯಿಲ್ಲದ ಗೋಳು?

-ಇದು ತಾಯಿ ಹೃದಯವೊಂದರ ಸಂಕಟದಂತೆ ಕಾಣುತ್ತಿದೆ. ಉಗ್ರರನ್ನು ರಕ್ತಪಿಪಾಸುಗಳೆಂದು ಕರೆದ ಈ ಕವನ, ನಿಮಗೆಂದೂ ದೊರಕದ ನಮ್ಮೀ ಮಾತೃಭೂಮಿಯ ಮೇಲೆ ಯಾಕೆ ವ್ಯಾಮೋಹ ಎಂದು ಕೇಳುತ್ತದೆ. ಕೊನೆಗೆ ಮನೆಯವರ ಸಂಕಟ ನಿಮಗೆ ಅರ್ಥವಾಗುವುದಿಲ್ಲವೇ ಎಂದು ಕೇಳಲಾಗಿದೆ.

ಹಾಗಿದ್ದರೆ ಈ ಕವನ ಬರೆದವರು ಯಾರು?

ಸಾಮಾಜಿಕ ಜಾಲತಾಣದಲ್ಲಿ ಈ ಕವನವನ್ನು ಓದಿದಾಗ ಮೂಡುವ ಭಾವವೇನೆಂದರೆ, ಇದು ತಾಯಿ ಕರುಳಿನ ರೋದನ ಮತ್ತು ಆಕ್ರೋಶ. ಈ ಕವನವನ್ನು ಪ್ರಾಂಜಲ್‌ ಅವರ ತಾಯಿ ಅನುರಾಧಾ ವೆಂಕಟೇಶ್‌ ಅವರು ಷೇರ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಅವರೇ ಬರೆದಿದ್ದಾರೆ ಎಂದು ಹೆಚ್ಚಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಂಜಲ್‌ ಅವರ ತಾಯಿ ಇದು ತಾನು ಬರೆದಿದ್ದಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Raja Marga Column : ಕ್ಯಾ. ಪ್ರಾಂಜಲ್‌ ಮಾತ್ರವಲ್ಲ ಅವರ ಹೆತ್ತವರು, ಪತ್ನಿ ಕೂಡಾ ವೀರ ಯೋಧರೆ!

ಪ್ರಾಂಜಲ್‌ ತಾಯಿ ವಿಸ್ತಾರ ನ್ಯೂಸ್‌ಗೆ ಹೇಳಿದ್ದೇನು?

ನಮ್ಮ ಮಗ ಪ್ರಾಂಜಲ್‌ ಕುರಿತು ಯಾರೋ ಬರೆದ ಭಾವಪೂರ್ಣ ಕವಿತೆಯನ್ನು ಓದಿರುವೆ. ಅದು ಖಂಡಿತವಾಗಿಯೂ ನಾನು ಬರೆದಿದ್ದಲ್ಲ. ಆದರೆ ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕವನ ನಾನೇ ಬರೆದಿದ್ದು ಎಂಬಂತೆ ನನ್ನ ಹೆಸರಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಹೀಗೆ ಮಾಡುವುದು ಸರಿಯಲ್ಲ ಎಂದು ಪ್ರಾಂಜಲ್‌ ಅವರ ತಾಯಿ ಅನುರಾಧಾ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕವಿತೆಯ ಭಾವಾರ್ಥ ಚೆನ್ನಾಗಿದೆ. ಹಾಗಾಗಿ ನಾನು ಇದನ್ನು ನನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿದ್ದೆ ಅಷ್ಟೆ. ಇದನ್ನು ಬರೆದ ಕವಿಗೆ ಕೃತಜ್ಞತೆ ಸಲ್ಲಿಸುವೆ. ಆದರೆ ಈ ಕವನದ ಕುರಿತು ಸೋಷಿಯಲ್‌ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಕೊಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಇದು ಮಗನ ಕುರಿತು ಪ್ರಾಂಜಲ್‌ ತಾಯಿ ಬರೆದ ಭಾವಪೂರ್ಣ ಕವಿತೆ ಎಂದು ಪೇಸ್‌ಬುಕ್‌, ವಾಟ್ಸ್‌ಆಪ್‌ ಇತ್ಯಾದಿ ಕಡೆ ಪ್ರಸಾರ ಆಗುತ್ತಿರುವುದನ್ನು ಕಂಡು ನನಗೆ ಬೇಸರವಾಗಿದೆ. ನನ್ನ ಮಗನ ಕುರಿತು ಇರುವ ಜನರ ಅಭಿಮಾನಕ್ಕೆ ನಾವು ಚಿರಋಣಿ. ಆದರೆ ದಯವಿಟ್ಟು ಯಾರೂ ಯಾವುದೇ ರೀತಿಯ ತಪ್ಪು ಮಾಹಿತಿ ಹರಡಬೇಡಿ ಎಂದು ಅನುರಾಧಾ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.

Continue Reading

ದೇಶ

Fact Check: ಚಂದ್ರಯಾನ 3 ವಿಜ್ಞಾನಿಗಳಿಗೆ ಕೇಂದ್ರ ಸರ್ಕಾರ 3 ತಿಂಗಳಿಂದ ಸಂಬಳ ನೀಡಿಲ್ಲವೇ? ಇಲ್ಲಿದೆ ವಾಸ್ತವ

Fact Check: ಕೇಂದ್ರ ಸರ್ಕಾರವನ್ನು ಟೀಕಿಸಿದ ತೆಹ್ಸೀನ್‌ ಪೂನಾವಾಲಾ ಅವರು, ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದ್ದರು. ಆದರೆ, ಪಿಐಬಿ ಫ್ಯಾಕ್ಟ್‌ಚೆಕ್‌ ಈ ಆರೋಪವನ್ನು ಸುಳ್ಳು ಎಂದು ತಿಳಿಸಿದೆ.

VISTARANEWS.COM


on

Tehseen Poonawalla on ISRO
Koo

ಬೆಂಗಳೂರು: ಶತಕೋಟಿ ಭಾರತೀಯರ ಕನಸಾಗಿರುವ ಚಂದ್ರಯಾನ 3 (‌Chandrayaan- 3) ಮಿಷನ್‌ ಕೊನೆಯ ಹಂತಕ್ಕೆ ಬಂದಿದೆ. ಇಸ್ರೋ ವಿಜ್ಞಾನಿಗಳು (ISRO Scientists) ಸತತವಾಗಿ ಶ್ರಮವಹಿಸಿ ಮಿಷನ್‌ ಸಿದ್ಧಗೊಳಿಸಿದ್ದು, ಮಿಷನ್‌ ಯಶಸ್ವಿಯಾದರೆ ಅವರು ಇತಿಹಾಸ ಸೃಷ್ಟಿಸಲಿದ್ದಾರೆ. ಹಾಗಾಗಿ ಭಾರತೀಯರು ಮಾತ್ರವಲ್ಲ, ಜಗತ್ತಿನ ಗಮನವೇ ಈಗ ಇಸ್ರೋ ವಿಜ್ಞಾನಿಗಳ ಮೇಲಿದೆ. ಇದರ ಬೆನ್ನಲ್ಲೇ, ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂಬ ಆರೋಪಗಳು (Fact Check) ಕೇಳಿಬಂದಿವೆ.

ಏನಿದು ಆರೋಪ?

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದಿ ರಣವೀರ್‌ ಶೋ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಖ್ಯಾತ ಯುಟ್ಯೂಬರ್‌ ತೆಹ್ಸೀನ್‌ ಪೂನಾವಾಲಾ, ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಹೇಳಿದ್ದರು. “ಇಸ್ರೋ ವಿಜ್ಞಾನಿಗಳಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ಇದು ಸರಿಯೇ? ನನಗೆ ಈ (ಕೇಂದ್ರ) ಸರ್ಕಾರದ ಮೇಲೆ ಇದೇ ಕಾರಣಕ್ಕೆ ಸಿಟ್ಟು ಬರುತ್ತದೆ. ನಮಗೆ ಇಸ್ರೋ ಬಗ್ಗೆ ಹೆಮ್ಮೆ ಇದೆ. ಅದೊಂದು ಅದ್ಭುತ ಸಂಸ್ಥೆ. ಆದರೆ, ಅವರಿಗೆ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ನೀವು ಬೇಕಾದರೆ ಇದನ್ನು ಪರಿಶೀಲಿಸಬಹುದು” ಎಂದು ಹೇಳಿದ್ದರು.

ವಾಸ್ತವ ಏನು?

ನಕಲಿ ಸುದ್ದಿಗಳ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿ, ವಾಸ್ತವಾಂಶ ತಿಳಿಸುವ ಪಿಐಬಿ ಫ್ಯಾಕ್ಟ್‌ಚೆಕ್‌ ಈ ಕುರಿತು ಮಾಹಿತಿ ನೀಡಿದ್ದು, ತೆಹ್ಸೀನ್‌ ಪೂನಾವಾಲಾ ಹೇಳಿದ್ದು ಸುಳ್ಳು ಎಂದು ತಿಳಿಸಿದೆ. “ಈ ವದಂತಿ ಸುಳ್ಳು. ಇಸ್ರೋ ವಿಜ್ಞಾನಿಗಳು ಪ್ರತಿ ತಿಂಗಳ ಕೊನೆಯ ದಿನದಂದು ಸಂಬಳ ಪಡೆಯುತ್ತಾರೆ” ಎಂದು ಪೂನಾವಾಲಾ ಆರೋಪವನ್ನು ಅಲ್ಲಗಳೆದಿದೆ. ತೆಹ್ಸೀನ್‌ ಪೂನಾವಾಲಾ ಅವರು ಉದ್ಯಮಿ ಕೂಡ ಆಗಿದ್ದಾರೆ. ಅವರು ರಾಜಕೀಯ ವಿಶ್ಲೇಷಣೆಯನ್ನೂ ಮಾಡುತ್ತಾರೆ.

ಇದನ್ನೂ ಓದಿ: Chandrayaan 3: ನನಸಾಗುವತ್ತ ಶತಕೋಟಿ ಭಾರತೀಯರ ಚಂದ್ರಯಾನ ಕನಸು; ಇಂದು ಮಹತ್ವದ ಘಟ್ಟ

ಸವಾಲು ಹಾಕಿದ ಬಿಜೆಪಿ ವಕ್ತಾರ ಶೆಹಜಾದ್‌

ತೆಹ್ಸೀನ್‌ ಪೂನಾವಾಲಾ ಅವರು ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಅವರ ಸಹೋದರರೂ ಆಗಿದ್ದಾರೆ. ಇನ್ನು ಈ ಹೇಳಿಕೆ ನೀಡಿದ ತೆಹ್ಸೀನ್‌ ಪೂನಾವಾಲಾ ಅವರಿಗೆ ಶೆಹಜಾದ್‌ ಪೂನಾವಾಲಾ ಅವರು ಸವಾಲು ಹಾಕಿದ್ದಾರೆ. “ಇಸ್ರೋದಲ್ಲಿ ಸಂಬಳ ಪಡೆಯದ 10 ವಿಜ್ಞಾನಿಗಳ ಹೆಸರು ಹಾಗೂ ಅವರ ಹುದ್ದೆಯ ಕುರಿತು ಮಾಹಿತಿ ಕೊಡಿ ನೋಡೋಣ. ಸತ್ಯಾಂಶ ಇಲ್ಲದ, ಹುರುಳಿಲ್ಲದ ಆರೋಪ ಮಾಡುವುದು ನಿಮಗೆ ರೂಢಿಯಾಗಿದೆ. ಮಕ್ಕಳಂತೆ ವಿಶ್ಲೇಷಣೆ ಮಾಡುವ ಪ್ರವೃತ್ತಿ ಮೊದಲು ನಿಲ್ಲಲಿ” ಎಂದು ಶೆಹಜಾದ್‌ ತಿರುಗೇಟು ನೀಡಿದ್ದಾರೆ. ಆದಾಗ್ಯೂ, ತೆಹ್ಸೀನ್‌ ಪೂನಾವಾಲಾ ಅವರು ಸಹೋದರನ ಸವಾಲು ಸ್ವೀಕರಿಸಿಲ್ಲ ಎಂದು ತಿಳಿದುಬಂದಿದೆ.

Continue Reading

ದೇಶ

Fact Check: ನೀವು ಗೆಳತಿಗೆ ಮಾಡುವ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಕೇಂದ್ರ ಸರ್ಕಾರ ನೋಡುತ್ತದೆಯೇ?

Fact Check: ಜನ ಕಳುಹಿಸಿದ ವಾಟ್ಸ್‌ಆ್ಯಪ್ ಮೆಸೇಜ್‌ಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಡಲಿದೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಪಿಐಬಿ ಫ್ಯಾಕ್ಟ್‌ ಚೆಕ್‌ನಿಂದ ತಿಳಿದುಕೊಳ್ಳಬಹುದಾಗಿದೆ.

VISTARANEWS.COM


on

Fact Check On Watsapp Chats
Koo

ನವದೆಹಲಿ: ವಿಚಾರ ವಿನಿಯಮ, ಸುದ್ದಿ-ಮಾಹಿತಿ ತಿಳಿಯುವುದು, ಮನರಂಜನೆ, ಜಗತ್ತಿನ ಜತೆ ಸಂಪರ್ಕ ಸಾಧಿಸುವ ದಿಸೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಸಾಮಾಜಿಕ ಜಾಲತಾಣಗಳನ್ನು ಇತ್ತೀಚೆಗೆ ನಕಾರಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ಸುದ್ದಿಗಳು ಸಮಾಜದ ಸಾಮರಸ್ಯ ಕದಡಲು ಕಾರಣವಾಗುತ್ತಿವೆ. ಸುಳ್ಳು ಸುದ್ದಿಗಳು ಜನರಿಗೆ ಆತಂಕ ತಂದೊಡ್ಡುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, “ಕೇಂದ್ರ ಸರ್ಕಾರವು ಜನರ ವಾಟ್ಸ್‌ಆ್ಯಪ್ ಚಾಟ್‌ಗಳ ಮೇಲೆ ನಿಗಾ ಇಡಬಹುದು” ಎಂಬ ವದಂತಿ (Fact Check) ಹರಿದಾಡುತ್ತಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ.

ಏನಿದು ವದಂತಿ?

ನೀವು ಕಳುಹಿಸುವ ವಾಟ್ಸ್‌ಆ್ಯಪ್ ಮೆಸೇಜ್‌ಗಳನ್ನು ಕೇಂದ್ರ ಸರ್ಕಾರ ಗಮನಿಸುತ್ತದೆ. ನೀವು ಕಳುಹಿಸಿದ ಮೆಸೇಜ್‌ಗೆ ಒಂದು ಟಿಕ್‌ ಬಂದರೆ ಅದು ಸೆಂಡ್‌ ಆಗಿದೆ ಎಂದರ್ಥ. ಎರಡು ಬ್ಲ್ಯೂ ಟಿಕ್‌ ಬಂದರೆ ಮೆಸೇಜ್‌ಅನ್ನು ನೀವು ಯಾರಿಗೆ ಕಳುಹಿಸಿದ್ದೀರೋ ಅವರು ಓದಿದ್ದಾರೆ ಎಂಬ ಅರ್ಥ. ಆದರೆ, ಮೂರು ಬ್ಲ್ಯೂ ಟಿಕ್‌ ಕಾಣಿಸಿದರೆ ಆ ಮೆಸೇಜ್‌ಅನ್ನು ಕೇಂದ್ರ ಸರ್ಕಾರ ಗಮನಿಸಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂಬ ಮಾಹಿತಿ ಹರಿದಾಡಿದೆ.

ಅಷ್ಟೇ ಅಲ್ಲ, ಎರಡು ಬ್ಲ್ಯೂ ಟಿಕ್‌ ಹಾಗೂ ಒಂದು ರೆಡ್‌ ಟಿಕ್‌ ಬಂದರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಒಂದು ಬ್ಲ್ಯೂ ಟಿಕ್‌ ಹಾಗೂ ಎರಡು ರೆಡ್‌ ಟಿಕ್‌ ಬಂದರೆ ಸರ್ಕಾರ ನಿಮ್ಮ ಮಾಹಿತಿಯನ್ನು ಪರಿಶೀಲಿಸುತ್ತಿದೆ. ಹಾಗೆಯೇ, ಮೂರು ರೆಡ್‌ ಟಿಕ್‌ ಬಂದರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಂಡಿದೆ ಹಾಗೂ ನಿಮಗೆ ಕೋರ್ಟ್‌ನಿಂದ ಸಮನ್ಸ್‌ ಬರಲಿದೆ ಎಂಬ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ: Fact Check Unit: ಪೊಲೀಸರಿಂದಲೇ ಫ್ಯಾಕ್ಟ್ ಚೆಕ್ ಯುನಿಟ್, ಇನ್ನು ಫೇಕ್ ನ್ಯೂಸ್‌ ಹರಡಿದ್ರೆ ಹುಷಾರ್!

ವಾಸ್ತವ ಏನು?

ವಾಟ್ಸ್‌ಆ್ಯಪ್ ಮೆಸೇಜ್‌ಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಡುವ ವದಂತಿಯನ್ನು ಕೇಂದ್ರ ಸರ್ಕಾರದ ಫ್ಯಾಕ್ಟ್‌ ಚೆಕ್‌ ಘಟಕವಾದ ಪಿಐಬಿ ಫ್ಯಾಕ್ಟ್‌ ಚೆಕ್‌ ನಿರಾಕರಿಸಿದೆ. “ಇದು ನಕಲಿ ಮೆಸೇಜ್.‌ ಸರ್ಕಾರ ಅಂತಹ ಯಾವುದೇ ಮಾರ್ಗಸೂಚಿ ಹೊರಡಿಸಿಲ್ಲ” ಎಂದು ಸ್ಪಷ್ಟಪಡಿಸಿದೆ. “ಮೆಸೇಜ್‌ ಕಳುಹಿಸುವವರ ಗೌಪ್ಯತೆಯನ್ನು ಮೆಟಾ ಕಾಪಾಡುತ್ತದೆ. ನಿಮ್ಮ ಮೆಸೇಜ್‌ಗಳನ್ನು ಬೇರೆಯವರು ಯಾರೂ ಓದುವುದಿಲ್ಲ” ಎಂದು ಈಗಾಗಲೇ ಮೆಟಾ ಸ್ಪಷ್ಟಪಡಿಸಿದೆ. ಸದ್ಯ ಮೆಸೇಜ್‌ ಕಳುಹಿಸಿದರೆ ಎರಡೇ ಟಿಕ್‌ಗಳು ಇವೆ.

Continue Reading

ದೇಶ

Fact Check: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದವರು ಆರೆಸ್ಸೆಸ್‌ ಕಾರ್ಯಕರ್ತರೇ?

Fact Check: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಅವರ ಮೆರವಣಿಗೆ ಮಾಡಿದವರಲ್ಲಿ ಇಬ್ಬರು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂಬ ಫೋಟೊ ಹರಿದಾಡಿದೆ. ಅದು ನಿಜವೇ ಎಂಬುದರ ಫ್ಯಾಕ್ಟ್‌ ಚೆಕ್‌ ಇಲ್ಲಿದೆ.

VISTARANEWS.COM


on

Manipur Violence Fact Check
ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಟ್ವೀಟ್‌ ಮಾಡಿದ ಫೋಟೊ.
Koo

ಇಂಫಾಲ: ಮಣಿಪುರದಲ್ಲಿ ಹಿಂಸಾಚಾರದ ಜತೆಗೆ ಅಮಾನುಷ ಘಟನೆಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯ ಸಜೀವ ದಹನ, ಹೆಣ್ಣುಮಕ್ಕಳ ರುಂಡ ಕತ್ತರಿಸುವುದು ಸೇರಿ ಹಲವು ಘಟನೆಗಳು ನಡೆದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇನ್ನು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಮೆರವಣಿಗೆ ಮಾಡಿದವರು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂಬ ವದಂತಿ (Fact Check) ಹರಡಿದೆ.

ಮೊದಲಿಗೆ ಸಿಪಿಎಂ ಪಕ್ಷದ ನಾಯಕಿ ಸುಭಾಷಿಣಿ ಅಲಿ ಅವರು ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿರುವ ಇಬ್ಬರು ವ್ಯಕ್ತಿಗಳ ಫೋಟೊ ಟ್ವೀಟ್‌ ಮಾಡಿದ್ದರು. “ಇವರು ಮಣಿಪುರ ಘಟನೆಯ ಆರೋಪಿಗಳು. ಇವರ ಬಟ್ಟೆ ನೋಡಿ ಯಾರೆಂದು ಗುರುತಿಸಿ” ಎಂದು ಪರೋಕ್ಷವಾಗಿ ಇವರು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಹೇಳಿದ್ದಾರೆ. ಇದಾದ ಬಳಿಕ ಫೋಟೊ ವೈರಲ್‌ ಆಗುವ ಜತೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರೇ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಮಾಹಿತಿ ಹರಡಲಾಗಿತ್ತು.

ವದಂತಿ ಹರಡಿಸಿದ ಸುಭಾಷಿಣಿ ಅಲಿ

ಆರೋಪಿಗಳು ಆರ್‌ಎಸ್‌ಎಸ್‌ ಕಾರ್ಯಕರ್ತರೇ?

ಸುಭಾಷಿಣಿ ಅಲಿ ಅವರು ಫೋಟೊ ಅಪ್‌ಲೋಡ್‌ ಮಾಡುತ್ತಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಆರೋಪವನ್ನು ಅಲ್ಲಗಳೆದಿದೆ. ಫೋಟೊದಲ್ಲಿರುವವರಿಗೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲ, ತಪ್ಪು ಮಾಹಿತಿ ಹರಡಿದ ಸುಭಾಷಿಣಿ ಅಲಿ ವಿರುದ್ಧ ಸಂಘವು ಎಫ್‌ಐಆರ್‌ ದಾಖಲಿಸಿದೆ.

ಇದನ್ನೂ ಓದಿ: Manipur Violence: ಮಣಿಪುರ ಅಲ್ಲ ‘ಹೆಣಪುರ’; ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ಸುಟ್ಟ ದುರುಳರು

ಕ್ಷಮೆ ಕೇಳಿದ ಸುಭಾಷಿಣಿ ಅಲಿ

ಆರ್‌ಎಸ್‌ಎಸ್‌ ಪ್ರಕರಣ ದಾಖಲಿಸುತ್ತಲೇ ಟ್ವಿಟರ್‌ನಲ್ಲಿ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ಕ್ಷಮೆಯಾಚಿಸಿದ್ದಾರೆ. “ನಾನು ಇಬ್ಬರು ವ್ಯಕ್ತಿಗಳ ಫೋಟೊ ಅಪ್‌ಲೋಡ್‌ ಮಾಡಿರುವುದಕ್ಕೆ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

“ಮಣಿಪುರ ಘಟನೆ ವಿಚಾರದಲ್ಲಿ ನಾನು ಇಬ್ಬರ ವ್ಯಕ್ತಿಗಳ ಫೋಟೊ ಟ್ವೀಟ್‌ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿಸಿದ್ದೇನೆ. ನಾನು ಭೇಷರತ್‌ ಕ್ಷಮೆ ಕೇಳುತ್ತೇನೆ. ಉದ್ದೇಶಪೂರ್ವಕವಾಗಿ ನಾನು ಹೀಗೆ ಮಾಡಿಲ್ಲ” ಎಂದು ಟ್ವೀಟ್‌ ಮೂಲಕ ಸುಭಾಷಿಣಿ ಅಲಿ ಟ್ವೀಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲ ಫೋಟೊದಲ್ಲಿರುವವರು ಚಿದಾನಂದ ಎಂಬುದಾಗಿ ತಿಳಿದುಬಂದಿದ್ದು, ಖುದ್ದು ಅವರೇ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, “ನನ್ನ ಹಾಗೂ ನನ್ನ ಫೋಟೊವನ್ನು ಏಕೆ ವದಂತಿ ಹರಡಿಸಲು ಬಳಸಲಾಗುತ್ತಿದೆ? ನಾನು ಕ್ರಿಮಿನಲ್‌ ಕೇಸ್‌ ದಾಖಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಹಾಗೆಯೇ, “ನಾನು ಬಿಜೆಪಿ ಮಣಿಪುರ ಘಟಕದ ರಾಜ್ಯ ಉಪಾಧ್ಯಕ್ಷನಾಗಿದ್ದು, ನಾನಾಗಲಿ, ನನ್ನ ಕುಟುಂಬವಾಗಲಿ ಇಂತಹ ಯಾವುದೇ ಅಪರಾಧದಲ್ಲಿ ತೊಡಗಿಲ್ಲ” ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

Continue Reading
Advertisement
Foeticide arrest
ಕರ್ನಾಟಕ10 mins ago

Foeticide Case : ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ; ಹೆಡ್‌ ನರ್ಸ್‌ ಉಷಾರಾಣಿ ಬಂಧನ

Tukali imitate sangeetha sringeri
ಬಿಗ್ ಬಾಸ್16 mins ago

BBK SEASON 10: ನಾಯಿಯಾದ ಸಂಗೀತಾ; ಅನುಕರಣೆ ಮಾಡೋದ್ರಲ್ಲಿ ತುಕಾಲಿ ಎತ್ತಿದ ಕೈ!

Revenue Minister Krishna Byre Gowda making coffee
ಕರ್ನಾಟಕ32 mins ago

Belagavi Winter Session: ಕಾವೇರಿದ ಚರ್ಚೆ ನಡುವೆ ಬಿಸಿ ಬಿಸಿ ಕಾಫಿ ಮಾಡಿಕೊಂಡು ಕುಡಿದ ಕೃಷ್ಣ ಬೈರೇಗೌಡ

Car catches fire after hitting bus
ಕರ್ನಾಟಕ48 mins ago

Video Viral : ಬಸ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಪ್ರಾಣ ಉಳಿಸಿದ ಡ್ರೈವರ್‌; ವಿಡಿಯೊ ಇದೆ!

Michaung Cyclone
ಕರ್ನಾಟಕ1 hour ago

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Rishab rashmika
South Cinema1 hour ago

Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

18 bills likely to be introduced in Belagavi Winter Session
ಕರ್ನಾಟಕ1 hour ago

Belagavi Winter Session: ಬೆಳಗಾವಿ ಅಧಿವೇಶನದಲ್ಲಿ ಈ 18 ಬಿಲ್ ಮಂಡನೆ ಸಾಧ್ಯತೆ

Narendra Modi And Share Market
ದೇಶ2 hours ago

ಬಿಜೆಪಿ ಜಯಭೇರಿ ಬೆನ್ನಲ್ಲೇ ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

Shortage of MLAs for Belagavi Winter Session
ಕರ್ನಾಟಕ2 hours ago

Belagavi Winter Session: ಚಳಿಗಾಲದ ಅಧಿವೇಶನಕ್ಕೆ ಶಾಸಕರ ಕೊರತೆ; ತೆಲಂಗಾಣದಲ್ಲಿ ಡಿಕೆಶಿ, ಜಮೀರ್‌!

Drivers fight in Bangalore
ಕರ್ನಾಟಕ2 hours ago

Viral News : ಚಾಲಕರ ನಡುವೆ ಕಿರಿಕ್‌;‌ ಇನೋವಾ ಕಾರನ್ನೇ ಇನ್ನೊಬ್ಬನ ಮೇಲೆ ಹರಿಸಲು ಯತ್ನಿಸಿದ ಡ್ರೈವರ್‌

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ10 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ1 day ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌