Site icon Vistara News

PM Narendra Modi: ಅಜ್ಮೀರ್ ದರ್ಗಾದಲ್ಲಿ ಹೊದಿಸಲು ಚಾದರ ಅರ್ಪಿಸಿದ ಪ್ರಧಾನಿ ಮೋದಿ

PM Narendra modi presents chadar to Ajmer Sharif dargah

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು, ಅಜ್ಮೀರ್ ಶರೀಫ್ ದರ್ಗಾದಲ್ಲಿ (Ajmer Sharif Dargah) ಹೊದಿಸಲು ಪವಿತ್ರ ಚಾದರನ್ನು (Chadar) ನೀಡಿದ್ದಾರೆ. ಗುರುವಾರ ತಮ್ಮನ್ನು ಭೇಟಿಯಾಗಲು ಬಂದ ಮುಸ್ಲಿಮ್ ಸಮುದಾಯದ ಸದಸ್ಯರ ನಿಯೋಗದೊಂದಿಗೆ (Muslim Delegation) ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರು, ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್‌ ಚಿಸ್ತಿ (Khwaja Moinuddin Chishti) ಅವರ ಪುಣ್ಯತಿಥಿಯ ಅಂಗವಾಗಿ ಅಜ್ಮೀರ್‌ ಶರೀಫ್‌ ದರ್ಗಾದಲ್ಲಿ ಹೊದಿಸಲು ಚಾದರನ್ನು ಅರ್ಪಿಸಿದರು.

ಮುಸ್ಲಿಮ್ ಸಮುದಾಯದ ಸದಸ್ಯರ ನಿಯೋಗದ ಜತೆಗಿನ ಫೋಟೋಗಳನ್ನು ಎಕ್ಸ್‌ ವೇದಿಕೆಯಲ್ಲಿ ಷೇರ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಮುಸ್ಲಿಂ ಸಮುದಾಯದ ನಿಯೋಗವು ನನ್ನನ್ನು ಭೇಟಿಯಾಯಿತು. ನಮ್ಮ ಸಂವಾದದ ಸಮಯದಲ್ಲಿ, ನಾನು ಪವಿತ್ರವಾದ ಚಾದರ್ ಅನ್ನು ನೀಡಿದ್ದೇನೆ. ಇದನ್ನು ಗೌರವಾನ್ವಿತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರ್ಸ್ ಸಮಯದಲ್ಲಿ ಹೊದಿಸಲಾಗುವುದು” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಹಂಚಿಕೊಂಡ ಫೋಟೋಗಳಲ್ಲಿ ಒಂದರಲ್ಲಿ ಅವರು ಮತ್ತು ನಿಯೋಗದ ಸದಸ್ಯರು ಹಳದಿ ‘ಚಾದರ್’ ಅನ್ನು ಹಿಡಿದಿರುವುದನ್ನು ಕಾಣಬಹುದು. ಸಂವಾದದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜಮಾಲ್ ಸಿದ್ದಿಕಿ ಕೂಡ ಉಪಸ್ಥಿತರಿದ್ದರು.

ಯುಎಇ ಅಧ್ಯಕ್ಷನನ್ನು ‘ಬ್ರದರ್‌’ ಎಂದು ಕರೆದ ಮೋದಿ; ಕಾರಣ ಹೀಗಿದೆ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಯುಎಇ ಅಧ್ಯಕ್ಷ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ (Mohammed bin Zayed Al Nahyan) ಅವರ ಮಧ್ಯೆ ಉತ್ತಮ ಬಾಂಧವ್ಯವಿದೆ. ಇದೇ ಕಾರಣಕ್ಕೆ ಯುಎಇ ಅಧ್ಯಕ್ಷರನ್ನು ಮೋದಿ ಅವರು ಮಂಗಳವಾರ (ಜನವರಿ 9) ಗುಜರಾತ್‌ಗೆ (Gujarat Summit) ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ, ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರೊಂದಿಗೆ ರೋಡ್‌ ಶೋ ಕೂಡ ನಡೆಸಿದರು. ಈಗ ಮೋದಿ ಅವರು ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರನ್ನು ಬ್ರದರ್‌ (Brother) ಎಂದು ಕರೆದಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ಬುಧವಾರದಿಂದ (ಜನವರಿ 10) ಆರಂಭವಾದ ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌ಗೆ (Vibrant Gujarat Global Summit 2024) ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಇದೇ ವೇಳೆ ಮೋದಿ ಅವರು “ಭಾರತ ಹಾಗೂ ಯುಎಇ ಮಧ್ಯೆ ಉತ್ತಮ ಬಾಂಧವ್ಯ ಇದೆ. ಭಾರತದ ಬಂದರು, ಆಹಾರ ಸಂಸ್ಕರಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ ಇದೆ. ಎರಡೂ ದೇಶಗಳ ಮಧ್ಯೆ ಉತ್ತಮ ವ್ಯಾಪಾರ ಒಪ್ಪಂದಗಳಾಗಿವೆ. ಇದಕ್ಕೆ ಸಹೋದರ ಶೇಖ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್ ಅವರ ಯೋಗದಾನ ಹೆಚ್ಚಿದೆ. ಅವರಿಗೆ ನನ್ನ ಅಭಿನಂದನೆಗಳು” ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: PM Narendra Modi : ಉರೂಸ್‌ ಅಂಗವಾಗಿ ಚಾದರ್‌ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version