ಚಿಕ್ಕಬಳ್ಳಾಪುರ: ಇದು ಸೋಶಿಯಲ್ ಮೀಡಿಯಾ ಲವ್ ಕಮ್ ಟ್ರಾಜಿಡಿ ಕಹಾನಿ. ಸೋಶಿಯಲ್ ಮೀಡಿಯಾ ಮೂಲಕ ಯುವಕನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಕೊನೆಗೊಂಡಿದೆ. ಆದರೆ, ಆಕೆಯ ದುಡುಕಿನ ನಿರ್ಧಾರಕ್ಕೆ ಪ್ರಿಯಕರನ ಅತಿರೇಕದ ವರ್ತನೆಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಬನ್ನಿಕುಪ್ಪೆ ಗ್ರಾಮದ ವಿದ್ಯಾರ್ಥಿನಿ ಪವಿತ್ರಾ (21) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಕುರುಬೂರು ಸರ್ಕಾರಿ ಕೃಷಿ ಮಹಾವಿದ್ಯಾಲಯದಲ್ಲಿ ಓದುತ್ತಿದ್ದ ಪವಿತ್ರಾ ಇನ್ಸ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಹುಡಗನ ಜತೆ ಪ್ರೀತಿ ಬೆಳೆಸಿದ್ದಳು. ಗುರುವಾರ ರಾತ್ರಿ (ಜು.7) ಪ್ರಿಯಕರ ಕರೆ ಮಾಡಿ ಟಾರ್ಚರ್ ನೀಡಿದ್ದ ಎನ್ನಲಾಗಿದೆ. ಶುಕ್ರವಾರ (ಜು.೮) ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಕಾಲೇಜಿನ ವಸತಿನಿಲಯದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ | ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಪತಿ ವಿರುದ್ಧ ಕೊಲೆ ಆರೋಪ
ಪ್ರಿಯಕರ ಪದೇಪದೆ ಪೋನ್ ಮಾಡಿ ಟಾರ್ಚರ್ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾಳೆ ಎನ್ನಲಾಗಿದ್ದು, ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ. ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಮೂರೇ ತಿಂಗಳಿಗೆ ಲವ್ ಫೇಲ್ಯೂರ್ ಎಂದು ಪವಿತ್ರಾ ಬರೆದುಕೊಂಡಿದ್ದಾಳೆ ಎನ್ನಲಾಗಿದೆ.
ಇದೀಗ ಪವಿತ್ರ ಮೃತದೇಹ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಆಗಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಅಕ್ಕ ಎಷ್ಟೇ ಗೋಗರೆದರೂ ಕೇಳದೆ ನೇಣು ಬಿಗಿದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ