ಬೆಂಗಳೂರು: ಮೀಡಿಯಾ ವಿಷನ್, ಬೆಂಗಳೂರು, ಬಿ.ಎಂ. ವಿರುಪಾಕ್ಷಯ್ಯ ಕಲಾ ಟ್ರಸ್ಟ್ (ಬಿ.ಎಂ.ವಿ.), ಬಸವ ಪರಿಷತ್, ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಇದೇ ಜೂ.15ರಂದು ಶನಿವಾರ ಸಂಜೆ 5 ಗಂಟೆಗೆ, ಬೆಂಗಳೂರು ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಪ್ರಾಂಗಣದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ʼನಾರಿ ಸಮ್ಮಾನ್ 2024ʼ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Bengaluru News) ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾ. ಮಂಜುಳಾ ಚೆಲ್ಲೂರು, ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಖ್ಯಾತ ಚಲನಚಿತ್ರ ನಟ ಶ್ರೀನಾಥ್, ಬೆಂಗಳೂರಿನ ಬಸವ ಪರಿಷತ್ ಅಧ್ಯಕ್ಷೆ ಎಂ.ಪಿ. ಉಮಾದೇವಿ, ಮಾಜಿ ಸಚಿವೆ ರಾಣಿ ಸತೀಶ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಇಸ್ರೋ ಸಂಸ್ಥೆ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್, ಡಾ. ಎಚ್.ಆರ್. ಶಾಂತರಾಜಣ್ಣ, ಚಲನಚಿತ್ರ ನಟ ಸುಚೇಂದ್ರ ಪ್ರಸಾದ್, ಚಲನಚಿತ್ರ ನಟಿ ಭಾವನಾ, ಡಾ. ಮಂಜುಳಾ ಎ. ಪಾಟೀಲ್ ಪಾಲ್ಗೊಳ್ಳುವರು.
ಇದನ್ನೂ ಓದಿ: Gold Rate Today: ಆಭರಣ ಖರೀದಿಸಲು ಇದು ಸಕಾಲ; ಚಿನ್ನದ ಬೆಲೆ ಇಳಿಕೆ
ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಕಿರುತೆರೆ ನಿರೂಪಕಿ ಅನುಶ್ರೀ, ಚಲನಚಿತ್ರ ನಟಿ ಸೋನಾಲ್ ಮಂಥೇರೋ, ಉದ್ಯಮಿ ಪಲ್ಲವಿ ರವಿ, ಡಾ. ಮಮತಾ ಎಸ್.ಎಚ್., ಉಮಾಬಾಯಿ ಖರೆ, ಜ್ಯೋತಿ ಟೋಸೂರ, ಡಾ. ರತ್ನಮ್ಮ ಆರ್., ಹಿರಿಯ ನಿರೂಪಕಿ ನವಿತ ಜೈನ್, ಸುಜಾತ ಬಯ್ಯಾಪುರ, ಮಧುರ ಅಶೋಕ್ ಕುಮಾರ, ಡಾ. ಸುಮಾ ಬಿರಾದಾರ, ಸುಮಿತ್ರಾ ಎಂ.ಪಿ.ರೇಣುಖಾಚಾರ್ಯ, ಡಾ. ಸಂದರ್ಶಿನಿ ನರೇಂದ್ರಕುಮಾರ್, ಡಾ. ಪುಲಿಗೆರೆ ಸಂಪದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Euro Cup 2024: ಇಂದಿನಿಂದ ಯುರೋ ಕಪ್ ಟೂರ್ನಿ; ಜರ್ಮನಿ-ಸ್ಕಾಟ್ಲೆಂಡ್ ನಡುವೆ ಮೊದಲ ಪಂದ್ಯ
ನಾಟ್ಯ ಸಂಪದ ನೃತ್ಯ ಶಾಲೆ ಸಂಸ್ಥಾಪಕಿ ಡಾ. ಮಾನಸ ಕಂಠಿ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.