ಬೆಂಗಳೂರು: ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ ಕೊಡ ಮಾಡುವ “ಮಾಧ್ಯಮ ರತ್ನ” ಪ್ರಶಸ್ತಿಗೆ ವಿಸ್ತಾರ ನ್ಯೂಸ್ ಕಾರ್ಯನಿರ್ವಾಹಕ ಸಂಪಾದಕರಾದ ಶರತ್ ಎಂ.ಎಸ್ (Sharath MS). ಭಾಜನರಾಗಿದ್ದಾರೆ. ಬುಧವಾರ ಪ್ರಶಸ್ತಿ ಪ್ರದಾನ (Award Ceremony) ನಡೆಯಲಿದೆ.
ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯು ಕಳೆದ 24 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ರಾಷ್ಟ್ರ ಪ್ರಶಸ್ತಿ, ಮುಖ್ಯಮಂತ್ರಿ ಪದಕ ಪಡೆದ ಸಾಧಕರ ಸಹಿತ ಕರ್ತವ್ಯ ನಿಷ್ಠ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜ ಸೇವಕರು, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ನೀಡಿ ಅಭಿನಂದಿಸುತ್ತಾ ಬಂದಿದೆ.
ಈಗ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಶರತ್ ಎಂ.ಎಸ್. ಅವರಿಗೆ “ಮಾಧ್ಯಮ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆಯ ಗೌರವಾಧ್ಯಕ್ಷ ಎಚ್.ಸಿ. ಕೃಷ್ಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವಾ, ಟೆನ್ಶನ್ ಬೇಡ! ಯಾಕಂದ್ರೆ..?
ಬುಧವಾರ ಪ್ರಶಸ್ತಿ ಪ್ರದಾನ
ಬುಧವಾರ (ನ. 22) ಸಂಜೆ 5 ಗಂಟೆಗೆ ಮಲ್ಲೇಶ್ವರದ ವೈಯಾಲಿಕಾವಲ್ ರಸ್ತೆಯ ಗಾಯತ್ರಿದೇವಿ ಪಾರ್ಕ್ ಎಕ್ಸ್‌ಟೆನ್ಶನ್ (ಚೌಡಯ್ಯ ಮೆಮೋರಿಯಲ್ ಹಿಂಭಾಗ) ಸಮೀಪ ಇರುವ ಶ್ರೀ ಕೃಷ್ಣದೇವರಾಯ ಕಲಾ ಮಂದಿರ (ತೆಲುಗು ವಿಜ್ಞಾನ ಸಮಿತಿ) ದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಅಲ್ಲದೆ, ಪತ್ರಕರ್ತರಾದ ಟಿವಿ 5 ವಾಹಿನಿಯ ಅರ್ಚನ ಶರ್ಮ, ಸುವರ್ಣ ನ್ಯೂಸ್‌ನ ಸುಗುಣ ಶ್ರೀನಿವಾಸ್, ಕರ್ನಾಟಕ ಡಿಜಿಟಲ್ ಟಿವಿಯ ಶಿವು ಬೆಸಗರಹಳ್ಳಿ, ಟಿವಿ 9ರ ಮಾಲತೇಶ್ ಜಗ್ಗೀನ್, ಪವರ್ ಟಿವಿಯ ಲೋಕೇಶ್ ಗೌಡ, ನ್ಯೂಸ್ 18 ವಾಹಿನಿಯ ಭೈರಹನುಮಯ್ಯ, ಝೀ ಕನ್ನಡ ವಾಹಿನಿಯ ಪ್ರಕಾಶ್ ಎಚ್.ಟಿ. ಅವರು ಸಹ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.