ಬೆಂಗಳೂರು: ರಾಜಧಾನಿಯಲ್ಲಿ ರೌಡಿಶೀಟರ್ (Rowdy sheeter murder) ಸುಹೇಲ್ ಅಲಿಯಾಸ್ ಪಪ್ಪಾಯಿ ಎಂಬಾತನನ್ನು ಕೊಚ್ಚಿ ಹತ್ಯೆ (Murder Case) ಮಾಡಲಾಗಿದೆ.
ಡಿಜೆ ಹಳ್ಳಿ ಪೋಲಿಸ್ ಠಾಣೆ ರೌಡಿಶೀಟರ್ ಸುಹೇಲ್ @ ಪಪ್ಪಾಯಿ ಎಂಬಾತನ ಮೇಲೆ ಡಿಜೆ ಹಳ್ಳಿಯಲ್ಲಿ ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ಗುರುತು ಪತ್ತೆಯಾಗಬೇಕಿದೆ. ಗ್ಯಾಂಗ್ವಾರ್ ಅಥವಾ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.
ಸುಹೇಲ್ ತನ್ನ ಬರ್ತ್ ಡೇ ದಿನವೇ ಹತ್ಯೆಯಾಗಿದ್ದಾನೆ. ದುಷ್ಕರ್ಮಿಗಳು ಸುಮಾರು 20 ಬಾರಿ ಕೊಚ್ಚಿ ಕೊಂದಿದ್ದಾರೆ ಎನ್ನಲಾಗಿದೆ. ಮೋದಿ ರಸ್ತೆಯಲ್ಲಿ ಘಟನೆ ನಡೆದಿದೆ. ಪೊಲೀಸರು ಕೃತ್ಯ ನಡೆದ ಸ್ಥಳದ ಸಿಸಿ ಟಿವಿ ಫೂಟೇಜ್ಗಳನ್ನು ಪಡೆದುಕೊಂಡಿದ್ದು, ಹಂತಕರನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ
ಕ್ಷುಲ್ಲಕ ಕಾರಣಕ್ಕೆ ಗೆಳೆಯನಿಗೆ ಚಾಕು ಇರಿಸು ಸಾಯಿಸಿದ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲಿಕಾರ್ಜುನ ಮೃತ ದುರ್ದೈವಿ. ಸ್ನೇಹಿತ ರಾಜರತ್ನಂ ಎಂಬಾತನಿಂದ ಕೃತ್ಯ ನಡೆದಿದೆ.
ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಹಣಕಾಸಿನ ವಿಚಾರಕ್ಕೆ ತಗಾದೆ ಬೆಳೆದಿದೆ. ಮಾತಿಗೆ ಮಾತು ಬೆಳೆದು ಮಲ್ಲಿಕಾರ್ಜುನನ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಯಲಹಂಕ ಪೊಲೀಸರು ಆರೋಪಿ ರಾಜರತ್ನಂನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Sullia Murder : ಕೆವಿಜಿ ಪ್ರಿನ್ಸಿಪಾಲ್ ರಾಮಕೃಷ್ಣ ಕೊಲೆ ಕೇಸ್; ರೇಣುಕಾಪ್ರಸಾದ್ ಸೇರಿ 6 ಮಂದಿಗೆ ಮತ್ತೆ ಸಂಕಷ್ಟ