ದೇವನಹಳ್ಳಿ: ಹಾರುತ್ತಿದ್ದ ಏರ್ ಫ್ರಾನ್ಸ್ (Air France) ವಿಮಾನದಲ್ಲಿ ತುರ್ತು ದ್ವಾರ (Emergency door) ತೆರೆಯಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ವ್ಯಕ್ತಿಯನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿಕೊಂಡಿದ್ದಾರೆ.
ಎಎಫ್ 194 ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ, ಆಂಧ್ರಪ್ರದೇಶ ಮೂಲದ ವೆಂಕಟ್ ಮೋಹಿತ್ ಪತಿಪಾಟಿ ಎಂಬಾತ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ್ದ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುವುದಕ್ಕೆ 4 ಗಂಟೆ ಮುನ್ನ ತುರ್ತು ದ್ವಾರ ಎಳೆಯುವ ಯತ್ನ ಮಾಡಿದ್ದ. ಪ್ರಯಾಣಿಕನ ಹುಚ್ಚಾಟದಿಂದ ಸಹ ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾಗಿದ್ದರು. ಕೂಡಲೇ ವ್ಯಕ್ತಿಯನ್ನು ತಡೆದು ನಿಲ್ಲಿಸಿ ವಿಮಾನ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಏರ್‌ಪೋರ್ಟ್ (kempegowda airport) ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆರ್ಮಿ ಹೆಸರಿನಲ್ಲಿ ಸೈಬರ್ ವಂಚನೆ
ಬೆಂಗಳೂರು: ಇಂಡಿಯನ್ ಆರ್ಮಿ ಹೆಸರಿನಲ್ಲಿ ಗ್ಯಾಸ್ ವಿಚಾರವಾಗಿ ಸೈಬರ್ ಕ್ರೈಂ ವಂಚಕರು ಗೃಹಿಣಿಯೊಬ್ಬಳಿಗೆ ವಂಚಿಸಿದ ಘಟನೆ ನಡೆದಿದೆ. ಸದ್ಯ ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೃಹಿಣಿಯೊಬ್ಬರು ಒಎಲ್ ಎಕ್ಸ್‌ನಲ್ಲಿ ಗ್ಯಾಸ್ ಸ್ಟೌವ್ ಮಾರಾಟಕ್ಕಿದೆ ಎಂದು ಪೋಸ್ಟ್ ಹಾಕಿದ್ದರು. ಇದನ್ನ ಖರೀದಿ ಮಾಡಲು ಇಂಡಿಯನ್ ಆರ್ಮಿಯ ಕ್ಯಾಪ್ಟನ್ ಎಂದು ಹೇಳಿಕೊಂಡು ಒಬ್ಬಾತ ಕರೆ ಮಾಡಿದ್ದ. ಈ ವೇಳೆ ಮಹಿಳೆ ಐದು ಸಾವಿರಕ್ಕೆ ಕಡಿಮೆ ಕೊಡುವುದಿಲ್ಲ ಎಂದು ಚೌಕಾಸಿ ಮಾಡಿದ್ದರು. ಅದನ್ನು ಒಪ್ಪಿಕೊಂಡಂತೆ ನಟಿಸಿ, ಮೊದಲು ಐವತ್ತು ರೂಪಾಯಿಯನ್ನು ಗೃಹಿಣಿಯ ನಂಬರ್‌ಗೆ ಖದೀಮ ಸೆಂಡ್ ಮಾಡಿದ್ದ. ಇದನ್ನು ನಂಬಿ ಆ ವಂಚಕ ಹೇಳಿದಂತೆ ಗೃಹಿಣಿ 50 ರೂಪಾಯಿಯನ್ನು ಮತ್ತೆ ವಂಚಕನಿಗೆ ಸೆಂಡ್ ಮಾಡಿದ್ದಾರೆ. ನಂತರ ಹಂತ ಹಂತವಾಗಿ 1 ಲಕ್ಷದ 18 ಸಾವಿರ ರೂಪಾಯಿ ಮಹಿಳೆಯ ಅಕೌಂಟ್‌ನಿಂದ ಕಡಿತಗೊಂಡಿದೆ.
ಇದನ್ನೂ ಓದಿ: IndiGo Passenger: ಹಾರುತ್ತಿದ್ದ ವಿಮಾನದ ಎಮರ್ಜನ್ಸಿ ಎಕ್ಸಿಟ್ ಡೋರ್ ಕವರ್ ತೆಗೆದ ವ್ಯಕ್ತಿ; ಬೆಚ್ಚಿಬಿದ್ದ ಜನ