Site icon Vistara News

Yakshagana Performance: ರವೀಂದ್ರ ಕಲಾಕ್ಷೇತ್ರದಲ್ಲಿ ʼರಾಘವ ರಾಘವ ರಾಜಾ ರಾಘವʼ ಯಕ್ಷಗಾನ ಪ್ರದರ್ಶನ ಸಂಪನ್ನ

Raghava Raghava Raja Raghava Yakshagana

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಧಾರ್ಮಿಕ್‌ ಸಂಸ್ಥೆಯ ಆಶ್ರಯದಲ್ಲಿ ಶ್ರೀ ಪೆರ್ಡೂರು ಮೇಳ ಮತ್ತು ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ʼರಾಘವ ರಾಘವ ರಾಜಾ ರಾಘವʼ ಯಕ್ಷಗಾನ ಪ್ರದರ್ಶನ ಶನಿವಾರ ಸಂಪನ್ನಗೊಂಡಿತು. ಗಾನ ಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಯಕ್ಷ ಪಯಣದ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರಸಂಗದಲ್ಲಿ ನೂರಾರು ಕಲಾಭಿಮಾನಿಗಳು ಭಾಗವಹಿಸಿದ್ದರು.

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್‌ನ ಸ್ಪೆಷಲ್‌ ಆಪರೇಷನ್‌ ಎಡಿಟರ್‌ ಕಿರಣ್ ಕುಮಾರ್‌ ಡಿ.ಕೆ., ಧಾರ್ಮಿಕ್ ಸಂಸ್ಥೆ ಅಧ್ಯಕ್ಷ ಶ್ರೀರಾಮ್ ಭಟ್, ಪ್ರಖ್ಯಾತ ಭಾಗವತರಾದ ವಿದ್ವಾನ್ ಗಣಪತಿ ಭಟ್, ಶ್ರೀಕೃಷ್ಣ ಭಟ್ ಮತ್ತಿತರರು ಭಾಗಿಯಾಗಿದ್ದರು.

ರಾಘವ ಯಕ್ಷಗಾನ ಪ್ರದರ್ಶನದಲ್ಲಿ ದಶರಥನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಬಳ್ಳೂರು ಕೃಷ್ಣಯಾಜಿ, ರಾಘವನಾಗಿ ಗಣಪತಿ ಹೆಗಡೆ ತೋಟಿಮನೆ, ಕೈಕೆಯಾಗಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಲಕ್ಷ್ಮಣನಾಗಿ ಕಾರ್ತಿಕ್ ಚಿಟ್ಟಾಣಿ, ಮಂಥರೆಯಾಗಿ ರವೀಂದ್ರ ದೇವಾಡಿಗ, ಸೀತೆಯಾಗಿ ಸುಕುಮಾರ್‌ ನೀರ್ಜೆಡ್ಡು,‌ ಕೌಸಲ್ಯೆಯಾಗಿ ಶ್ರೀಧರ್‌ ಕುಡ್ಲ ಅವರು ಅಭಿನಯಿಸಿದರು.

ರಾಘವ ಯಕ್ಷಗಾನ ಪ್ರಸಂಗದಲ್ಲಿ ರಾವಣನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ರಾಘವನಾಗಿ ವಿನಯ್ ಭಟ್ ಬೆರೊಳ್ಳಿ, ಮಂಡೋದರಿಯಾಗಿ ಸುಧೀರ್‌ ಸೇರ್ವೆಗಾರ್‌ ಉಪ್ಪೂರು, ಮಾತಲಿಯಾಗಿ ದರ್ಶನ್‌ ಭಟ್‌ ಭಾಗವಹಿಸಿದ್ದರು.

ಇದನ್ನೂ ಓದಿ | Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು

Raghava Raghava Raja Raghava Yakshagana

ರಾಜಾ ರಾಘವ ಯಕ್ಷಗಾನ ಪ್ರಸಂಗದಲ್ಲಿ ರಾಜಾ ರಾಘವನಾಗಿ ಥಂಡಿಮನೆ ಶ್ರೀಪಾದ್ ಭಟ್, ಲವನಾಗಿ ಉದಯ ಹೆಗಡೆ ಕಡಬಾಳ, ಕುಶನಾಗಿ ವಿಶ್ವನಾಥ ಆಚಾರ್ಯ ತೊಂಬಟ್ಟು, ಶತ್ರುಘ್ನನಾಗಿ ಅಣ್ಣಪ್ಪ ಗೌಡ ಮಾಗೋಡು, ವಾಲ್ಮೀಕಿಯಾಗಿ ದರ್ಶನ್ ಭಟ್, ಮಾಣಿಯಾಗಿ ಪುರಂದರ ಮೂಡ್ಕಣಿ ಬಣ್ಣ ಹಚ್ಚಿದ್ದರು.

Exit mobile version