Site icon Vistara News

Fact Check Unit: ಪೊಲೀಸರಿಂದಲೇ ಫ್ಯಾಕ್ಟ್ ಚೆಕ್ ಯುನಿಟ್, ಇನ್ನು ಫೇಕ್ ನ್ಯೂಸ್‌ ಹರಡಿದ್ರೆ ಹುಷಾರ್!

Fact check logo and Priyank Kharge

#image_title

ಬೆಂಗಳೂರು: ಸರ್ಕಾರದ ಮಟ್ಟದಲ್ಲಿ ಈಗಾಗಲೇ ಫ್ಯಾಕ್ಟ್ ಚೆಕ್ ಯುನಿಟ್ (Fact Check Unit) ಇತ್ತು. ಆದರೆ, ಪೊಲೀಸ್ ಇಲಾಖೆಯ (Karnataka Police department) ಈ ಘಟಕವನ್ನು ಬಂದ್ ಮಾಡಿತ್ತು. ಆದರೆ, ನಮ್ಮ ಸರ್ಕಾರ ಈ ಫ್ಯಾಕ್ಟ್ ಚೆಕ್ ಘಟಕವನ್ನು ಮತ್ತೆ ಆರಂಭಿಸಲಿದ್ದು, ಅದಕ್ಕೆ ಹೆಚ್ಚಿನ ಶಕ್ತಿ ತುಂಬುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಹೇಳಿದ್ದಾರೆ.

ಈ ಹಿಂದೆಯೇ ಫ್ಯಾಕ್ಟ್ ಚೆಕ್ ಘಟಕವು ಇತ್ತು. ಆದರೆ, ಬಿಜೆಪಿಯವುರ ಈ ಘಟಕವನ್ನು ಬಂದ್ ಮಾಡಿಸಿದ್ರು. ಯಾಕೆಂದರೆ, ಸ್ವತಃ ಬಿಜೆಪಿಯವರೇ ಫೇಕ್ ನ್ಯೂಸ್‌ಗಳನ್ನು ಸೃಷ್ಟಿ ಮಾಡ್ತಾ ಇದ್ದರು. ಆದರೆ, ನಮ್ಮ ಕಾಂಗ್ರೆಸ್ ಸರ್ಕಾರವು ಇನ್ನು ಅದಕ್ಕೆ ಅವಕಾಶವನ್ನು ನೀಡವುದಿಲ್ಲ. ಫ್ಯಾಕ್ಟ್ ಚೆಕ್ ಯುನಿಟ್ ಮತ್ತೆ ಶುರು ಮಾಡುತ್ತೇವೆ ಮತ್ತು ಅದಕ್ಕೆ ಹೆಚ್ಚಿನ ಬಲ ನೀಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಈ ಕುರಿತು ಈಗಾಗಲೇ ನಾನು ಸಿಎಂ ಸಿದ್ದರಾಮಯ್ಯ ಅವರು ಹತ್ತಿರ ಮಾತನಾಡಿದ್ದೇನೆ. ಕೋಮುಗಲಭೆ, ಶಾಂತಿ ಕದಡುವ ಪೋಸ್ಟ್ ಗಳನ್ನು ಮಾಡಿದರೆ ಅಂಥವರ ವಿರುದ್ದ ಸೂಕ್ತ ಕ್ರಮ ಜರುಗಿಸುತ್ತೇವೆ. ಗೃಹ ಇಲಾಖೆ ಜೊತೆಗೆ ಮಾತನಾಡಿ ಪ್ರತ್ಯೇಕ ತಂಡ ರಚನೆ ಮಾಡ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ದೂರು

ಕಾಂಗ್ರೆಸ್ (Congress Leaders) ನಾಯಕರ ವಿರುದ್ಧ ಅವಮಾನಕಾರಿ ವಿಡಿಯೋ (Video) ಪೋಸ್ಟ್ ಮಾಡಿದ ಬಿಜೆಪಿ ನಾಯಕರ (BJP Leaders) ವಿರುದ್ಧ ಕಾಂಗ್ರೆಸ್ ಪಕ್ಷವು ದೂರು (Complaint) ದಾಖಲಿಸಿದೆ. ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ (amit malviya) ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ (JP Nadda) ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲು ಮಾಡಲಾಗಿದೆ. ಕಾಂಗ್ರೆಸ್‌ ನಾಯಕರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹಾಗೂ ಪಕ್ಷದ ವಕ್ತಾರ ರಮೇಶ್ ಬಾಬು (Ramesh Babu) ಅವರು ದೂರು ನೀಡಿದ್ದಾರೆ.

ಬಿಜೆಪಿ ಷೇರ್ ಮಾಡಿರುವ ಆ್ಯನಿಮೇಟೆಡ್ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರಾಹುಲ್ ಗಾಂಧಿ ವಿರುದ್ದ ವೀಡಿಯೋ ಹರಿಬಿಟ್ಟ ಹಿನ್ನೆಲೆಯಲ್ಲಿ ಹೈ ಗ್ರೌಂಡ್ ಸ್ಟೇಷನ್ ನಲ್ಲಿ ದೂರು ಸಲ್ಲಿಸಲಾಗಿದೆ.

ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಅವಮಾನಕಾರಿ ವಿಡಿಯೋ ಪೋಸ್ಟ್ ಮಾಡಿದ ಬಿಜೆಪಿ ಮುಖಂಡರಾದ ಜೆ ಪಿ ನಡ್ಡಾ, ಅಮಿತ್ ಮಾಳವೀಯ ಹಾಗೂ ಅರುಣ್ ಸೂದ್ ಅವರ ವಿರುದ್ಧ ದೂರು ನೀಡಿದ್ದೇವೆ. ಅವರು ಜೂನ್ 17ರಂದು ತಮ್ಮ ಅಧಿಕೃತ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಈ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ, ನಾಯಕರು ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಬೇರೆ ದೇಶಕ್ಕೆ ಹೋದಾಗೆಲ್ಲಾ ದೇಶ ಒಡೆಯೋ ಚಟುವಟಿಕೆಗಳಲ್ಲಿ ಭಾಗಿಯಾಗ್ತಾರೆ ಅಂತಾ ತೋರಿಸಲಾಗಿದೆ. ಈ ರೀತಿ ಸುಳ್ಳು ಮಾಹಿತಿ, ಕೋಮುವಾದ ಸೃಷ್ಟಿಸೋ ಪೋಸ್ಟ್‌ಗಳನ್ನು ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಬಿಜೆಪಿ ಐಟಿ ಕಾರ್ಖಾನೆಯನ್ನು ಕರ್ನಾಟಕದಲ್ಲಿ ಬಂದ್ ಮಾಡಬೇಕು. ಅವ್ರ ಸರ್ಕಾರ ಇದ್ದಾಗ ಅದು ಆಗೋಯ್ತು. ಈಗ ನಮ್ಮ ಸರ್ಕಾರ ಬಂದಿದೆ. ನಮ್ಮ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿರಗಬೇಕು. ಬಿಜೆಪಿಯವರು ವಿಡಿಯೋದಲ್ಲಿ ನಾವು ಆತಂಕವಾದಿಗಳಿಗಿಂತಲೂ ಡೇಂಜರ್ ಅಂತಾರೆ. ರಾಹುಲ್ ಗಾಂಧಿ ಮುಂಚೂಣಿಯಲ್ಲಿ ನಿಂತು ಆ್ಯಂಟಿ ಇಂಡಿಯಾ ಆಕ್ಟಿವಿಟಿ ಮಾಡ್ತಾರೆ ಅಂತಾ ಹೇಳ್ತಾರೆ. ಅಧಿಕೃತ ಅಕೌಂಟ್‌ಗಳಲ್ಲಿ ಇವ್ರು ಈ ರೀತಿ ಆರೋಪ ಹೊರಿಸ್ತಿದ್ದಾರೆ. ಅದಕ್ಕೆ ಅವ್ರ ವಿರುದ್ಧ ದೂರು ಕೊಟ್ಟು, ಎಫ್ಐಆರ್ ಮಾಡಿಸ್ತಿದ್ದೇವೆ. ಅವ್ರು ಕಾನೂನಿಗೆ ಉತ್ತರ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Karnataka BJP: ಮುಸಲ್ಮಾನರಂತೆ, ಸುನ್ನತ್‌ ಆದವರಂತೆ ಮಾತಾಡುತ್ತಿದ್ದಾರೆ: ಆಯನೂರು ಮಂಜುನಾಥ್‌ ವಿರುದ್ಧ ಶಿವಮೊಗ್ಗ ಬಿಜೆಪಿ ದೂರು

ಯಾವ್ಯಾವ ಸೆಕ್ಷನ್ ಗಳ ಅಡಿ ಕೇಸ್ ದಾಖಲಿಸಬೇಕು ಹಾಕ್ತಾರೆ. ಬಡವರ ಏಳಿಗೆಗಾಗಿ ಕೆಲಸ ಮಾಡ್ತಿರೋದು ಬಿಜೆಪಿಗರಿಗೆ ಇಷ್ಟ ಆಗ್ತಿಲ್ಲ. ಅದಕ್ಕೆ ಈ ರೀತಿ ಸುಳ್ಳು ಆರೋಪಿಸಿ ಪೋಸ್ಟ್ ಮಾಡ್ತಿದ್ದಾರೆ. ಹೀಗಾಗಿ ಅವ್ರ ವಿರುದ್ಧ ದೂರು ಕೊಟ್ಟಿದ್ದೇವೆ. ಅವ್ರು ಕರ್ನಾಟಕಕ್ಕೆ ಬಂದು ಹೇಳಲಿ. ನಾವು ಹೇಗೆ ಆ್ಯಂಟಿ ಇಂಡಿಯಾ ಆಕ್ಟಿವಿಟಿ ಮಾಡ್ತಿದ್ದೀವಿ ಅಂತಾ ಹೇಳಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version