ಹುಬ್ಬಳ್ಳಿ: ಹಸಿರು ಧ್ವಜ (green flag) ಹಾಗೂ ಕೇಸರಿ ಬಣ್ಣದ ಭಗವಾಧ್ವಜಗಳನ್ನು (bhagavadhwaj) ಅಕ್ಕಪಕ್ಕದಲ್ಲಿ ಹಾರಿಸುವ ಮೂಲಕ (flag controversy) ಸಮಾಜದಲ್ಲಿ ಶಾಂತಿಭಂಗ ಉಂಟುಮಾಡಲು ಪ್ರಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೊಬೈಲ್ ಟವರ್ ಮೇಲೆ ಇಸ್ಲಾಂ ಧರ್ಮದ ಬಾವುಟ ಮತ್ತು ಭಗವಾದ್ವಜಗಳನ್ನು ಅಕ್ಕಪಕ್ಕ ಹಾರಾಡಿಸಿದ್ದು, ಹುಬ್ಬಳ್ಳಿಯ ಆನಂದ ನಗರದ ಘೋಡ್ಕೆ ಪ್ಲಾಟ್‌ನಲ್ಲಿ ಘಟನೆ ನಡೆದಿದೆ. ಹಸಿರು ಬಾವುಟದ ಕೆಳಗೆ ಭಗವಾದ್ವಜ ಕಟ್ಟಲಾಗಿದೆ, ಅಪಮಾನಗೊಳಿಸಲಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯಿಂದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಮಾಜಿಕ ಸಾಮರಸ್ಯ ಕೆಡಿಸಿ, ಗಲಭೆ ಸೃಷ್ಟಿಸುವ ಕೆಲಸ ಎಂದು ಆರೋಪಿಸಲಾಗಿದ್ದು, ಇದು ಜಿಹಾದಿ ಕೃತ್ಯ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೂಡಲೇ ಕಿಡಿಗೇಡಿಗಳನ್ನು ಬಂಧಿಸಲು ಹಳೇಹುಬ್ಬಳ್ಳಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳ ನಗರದಲ್ಲಿ ನಿಲ್ಲದ ಕಳ್ಳರ ಹಾವಳಿ
ಕೊಪ್ಪಳ: ನಗರದಲ್ಲಿ ನಿರಂತರ ಕಳ್ಳತನ ಮುಂದುವರಿದಿದೆ. ಕೊಪ್ಪಳ ನಗರದ ಬಸ್ಟ್ಯಾಂಡ್ ಹತ್ತಿರ ಎರಡು ಮನೆಗಳನ್ನು ಕಳ್ಳರು ಲೂಟಿ ಮಾಡಿದ್ದಾರೆ. ರೇಷ್ಮಾ ಎಂಬುವವರ ಮನೆಯಲ್ಲಿ 5 ಗ್ರಾಂ ಬಂಗಾರ ಹಾಗೂ ರಂಜಾನಬಿ ಎಂಬವರು ಮನೆಯಲ್ಲಿ 4.5 ತೊಲೆ ಬಂಗಾರ ಕಳ್ಳತನ ಮಾಡಿದ್ದಾರೆ.
ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರವಿವಾರ ರಾತ್ರಿ ಒಂದು ಗಂಟೆಗೆ ಈ ಘಟನೆ ನಡೆದಿದ್ದು, ಅಕ್ಕಪಕ್ಕದ ಮನೆಯ ನಿವಾಸಿಗಳು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಕಳೆದ ಎರಡು ತಿಂಗಳಿನಲ್ಲಿ ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಹೆಚ್ಚು ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಪೊಲೀಸರು ಸಾಕಷ್ಟು ಜಾಗರೂಕತೆ ವಹಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: Bike Accident: ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಮಹಿಳೆ ಸಾವು, ಪತಿಗೆ ಗಾಯ