ಅಫಜಲಪುರ: ಭೀಮಾನದಿ ದಡದಲ್ಲಿರುವ ದೇಸಾಯಿ ಕಲ್ಲೂರ, ಗುಡ್ಡೇವಾಡಿ ಹಾಗೂ ಘತ್ತರಗಾ ಗ್ರಾಮಗಳ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳು (Sand) ದಾಸ್ತಾನುಗಳ ಮೇಲೆ ಅಫಜಲಪುರ ಠಾಣೆಯ ಪೋಲಿಸರು ದಾಳಿ ನಡೆಸಿ, ಮರಳನ್ನು ಜಪ್ತಿ ಮಾಡಿಕೊಂಡು ಪ್ರಕರಣವನ್ನು (Kalaburagi News) ದಾಖಲಿಸಿಕೊಂಡಿದ್ದಾರೆ.
ಮಾರ್ಚ್ 23ರಂದು ರಾತ್ರಿ ಸಮಯದಲ್ಲಿ ಅಕ್ರಮ ಮರಳು ಸಂಗ್ರಹ ಬಗ್ಗೆ ಅಫಜಲಪುರ ಪೊಲೀಸ್ ಅಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ, ಡಿವೈಎಸ್ಪಿ ಮಹಮ್ಮದ್ ಶರೀಫ್ ರಾವುತರ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಮಹೆಬೂಬ ಅಲಿ, ಸಿಬ್ಬಂದಿ ಇಮಾಮ್, ಮಹೇಶ್ ಪಾಟೀಲ್, ವಿಶ್ವನಾಥ, ರಾಜಶೇಖರ ರಾಠೋಡ, ಮಹೇಶ್ ತಂಡದೊಂದಿಗೆ ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮಾನದಿ ದಡದಲ್ಲಿರುವ ದೇಸಾಯಿ ಕಲ್ಲೂರ, ಗುಡ್ಡೇವಾಡಿ ಹಾಗೂ ಘತ್ತರಗಾ ಗ್ರಾಮಗಳ ವಿವಿಧ ಜಮೀನುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮರಳು ದಾಸ್ತಾನುಗಳ ಮೇಲೆ ದಾಳಿ ನಡೆಸಿ ಅಂದಾಜು 7 ಲಕ್ಷ 50 ಸಾವಿರ ರೂ ಮೌಲ್ಯದ ಒಟ್ಟು 380 ಟ್ರಾಕ್ಟರ್ ಗಳಷ್ಟು ಮರಳನ್ನು ಜಪ್ತಿ ಮಾಡಿಕೊಂಡು ಜಮೀನುಗಳ ಮಾಲೀಕರಾದ 7 ಜನ ಆರೋಪಿತರ ವಿರುದ್ಧ 5 ಪ್ರಕರಣಗಳನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: IPL 2024: ಪಾಂಡ್ಯ, ರೋಹಿತ್ ಬೆಂಬಲಿಗರ ಜಟಾಪಟಿ; ಕೈ ಮಿಲಾಯಿಸಿ ಘರ್ಷಣೆ
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.