2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ (Karnataka Budget 2023 Live Updates) ಇಂದು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಈ ಸಲದ ಕೊನೇ ಬಜೆಟ್ ಇದು. 2023ರ ಮೇ ತಿಂಗಳ ಒಳಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೊಮ್ಮಾಯಿ ಅವರು ಮಂಡಿಸಲಿರುವ ‘ಚುನಾವಣಾ ವರ್ಷದ ಬಜೆಟ್’ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲಿದ್ದು, ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನೂ ನಡೆಸಲಿದ್ದಾರೆ.
ಬೀದರ್ ಮತ್ತು ರಾಯಚೂರು ನಗರಸಭೆಗಳನ್ನು, ಪುರಸಭೆಗಳನ್ನಾಗಿ ಮೇಲ್ದರ್ಜೆಗೆ ಏರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
‘ನಮ್ಮ ನೆಲೆ’ ಯೋಜನೆಯಡಿ ಕೆಎಚ್ಬಿಯಿಂದ 10 ಸಾವಿರ ನಿವೇಶನಗಳ ನಿರ್ಮಾಣ. 19 ಕಾರ್ಮಿಕ ರಾಜ್ಯ ಚಿಕಿತ್ಸಾಲಯಗಳ ಸ್ಥಾಪನೆ
ವಿದ್ಯಾನಿಧಿ ಯೋಜನೆಯಡಿ 3.8 ಲಕ್ಷ ಮಕ್ಕಳಿಗೆ ಸಹಾಯ ಧನ. ಇದಕ್ಕಾಗಿ 543 ಕೋಟಿ ರೂಪಾಯಿ ಮೀಸಲು. 60 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ 70 ಕೋಟಿ ರೂಪಾಯಿ ಸಾಲ
ಹುಬ್ಬಳ್ಳಿ-ದಾವಣಗೆರೆ ಇಎಸ್ಐ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯವನ್ನು 50ರಿಂದ 100ಕ್ಕೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ
ಗೃಹಿಣಿ ಶಕ್ತಿ ಯೋಜನೆ
ಗೃಹಿಣಿಯರಿಗೆ ಮನೆಯಲ್ಲೇ ಲಾಭದಾಯಕ ಉದ್ದಿಮೆ ನಡೆಸಲು ಅನುಕೂಲವಾಗುವಂತೆ ಅವರಿಗೆ ನೆರವಾಗಲು 1 ಲಕ್ಷ ಮಹಿಳೆಯರಿಗೆ ಉಚಿತ ಕೌಶಲಾಭಿವೃದ್ಧಿ ತರಬೇತಿ. ಶ್ರಮಶಕ್ತಿ ಯೋಜನೆಯಡಿ ಸರ್ಕಾರ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿತಿಂಗಳು ತಲಾ 500 ರೂಪಾಯಿ ಸಹಾಯ ಧನ ನೀಡಲಿದೆ.