Site icon Vistara News

Karnataka Budget 2023 Live: ನುಡಿದಂತೆ ನಡೆದಿದ್ದೇವೆ, ಎಲ್ಲ ಗ್ಯಾರಂಟಿಗಳೂ ಹಣ ಇಟ್ಟಿದ್ದೇವೆ; ಬಜೆಟ್‌ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ

Karnataka Budget 2023 Live Updates

Karnataka Budget 2023 Live Updates In Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷೆಯ ಬಜೆಟ್‌ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್‌ ಮಂಡನೆ ಮಾಡಿದ್ದು, ಮೂಲಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಜೆಟ್‌ ಮಂಡಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ರಾಜ್ಯದ ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಮಂಡಿಸಿದ ಬಜೆಟ್‌ನ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Karnataka Budget 2023: ಇಂದು ರಾಜ್ಯ ಬಜೆಟ್‌; ಸಿದ್ದರಾಮಯ್ಯ ದಾಖಲೆ, ಗ್ಯಾರಂಟಿ ಹೊರೆ; ಏನೇನು ಹೈಲೈಟ್‌?

B Somashekhar

ಹಿಡಿದ ಹಠ ಸಾಧಿಸಿದ ಡಿಸಿಎಂ ಡಿಕೆಶಿ

– ಕ‌ನಕಪುರಕ್ಕೆ ಮೆಡಿಕಲ್ ಕಾಲೇಜು ಪಡೆದ ಡಿಸಿಎಂ

– ಬಿಜೆಪಿ ಸರ್ಕಾರದಲ್ಲಿ ತಿಕ್ಕಾಟ ನಡೆದಿತ್ತು

– ಕನಕಪುರದ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್

– ಸುಧಾಕರ್ ಶಿಫ್ಟ್ ಮಾಡಿಸಿಕೊಂಡಿದ್ದರು

– ಇದೀಗ ಮೆಡಿಕಲ್ ಕಾಲೇಜು ಪಡೆಯುವಲ್ಲಿ ಯಶಸ್ವಿ

– ಬಜೆಟ್‌ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು

B Somashekhar

ಧಾರ್ಮಿಕ ಕ್ಷೇತ್ರಗಳಿಗೆ ಸಿದ್ದರಾಮಯ್ಯ ಅನುದಾನ

– ಜೈನರ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೆ 25 ಕೋಟಿ ರೂ.

– ಕ್ರೈಸ್ತರ ಅಭಿವೃದ್ಧಿಗಾಗಿ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ, 100 ಕೋಟಿ ರೂ. ಅನುದಾನ

– ಹಲಸೂರು ಸಿಖ್ ಸಮುದಾಯದ ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ರೂ.

– ಮೈಸೂರು, ಕಲಬುರಗಿ, ಹುಬ್ಬಳ್ಳಿ ಗುರುದ್ವಾರ ಅಭಿವೃದ್ಧಿಗೆ ತಲಾ 5 ಕೋಟಿ ರೂ.

B Somashekhar

ಇಲಾಖಾವಾರು ಅನುದಾನ

Ramesha Doddapura

Karnataka Budget 2023: ʼಅಪ್ಪುʼಗೆ ಸಿದ್ದರಾಮಯ್ಯ ಗೌರವ: ಹೃದಯಾಘಾತ ತಡೆಯಲು ಹೊಸ ಯೋಜನೆ

ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ (Karnataka Budget 2023) ಘೋಷಿಸಿದ್ದಾರೆ.

Karnataka Budget 2023: ʼಅಪ್ಪುʼಗೆ ಸಿದ್ದರಾಮಯ್ಯ ಗೌರವ: ಹೃದಯಾಘಾತ ತಡೆಯಲು ಹೊಸ ಯೋಜನೆ

B Somashekhar

ನೀರಾವರಿಗೆ ರಾಜ್ಯ ಸರ್ಕಾರದ ಅನುದಾನ

Exit mobile version