ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿಗರ ಮನ ಗೆಲ್ಲಲು ಬಿಜೆಪಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ (ಮೇ 7) ಮೆಗಾ ರೋಡ್ ಶೋ ಮುಕ್ತಾಯಗೊಂಡಿದೆ. ಬೆಳಗ್ಗೆ ಒಂದಿಷ್ಟು ಮಳೆ ಮೋಡವಿದ್ದರೂ ರೋಡ್ ಶೋ ಆರಂಭವಾಗುವ ಹೊತ್ತಿಗೆ ಬಿಸಿಲು ಬಂತು. ನ್ಯೂ ತಿಪ್ಪೇಸಂದ್ರದಿಂದ ಟ್ರಿನಿಟಿ ಸರ್ಕಲ್‌ವರೆಗೆ 6.5 ಕಿ.ಮೀ. ಕ್ರಮಿಸಿದ ರೋಡ್ ಶೋ ಭಾರಿ ಜನಾಕರ್ಷಣೆ ಪಡೆಯಿತು. ಮೋದಿ ಅವರು ರೋಡ್ ಶೋ ಮುಗಿಸಿ ಶಿವಮೊಗ್ಗದತ್ತ ಪಯಣ ಬೆಳೆಸಿದರು.
ಹುಬ್ಬಳ್ಳಿಗೆ ಆಗಮಿಸಿದ ಸೋನಿಯಾ ಗಾಂಧಿ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ನೀಡಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪರ ಅವರು ಪ್ರಚಾರ ನಡೆಸಲಿದ್ದಾರೆ.
ಹುಬ್ಬಳ್ಳಿಯ ಗಂಗಾಧರ ನಗರದ ಮೈದಾನದಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶ ಆಯೋಜನೆ ಮಾಡಲಾಗಿದೆ.
ಹಾವೇರಿಯಲ್ಲಿ ಮೋದಿ ಪ್ರಚಾರ
ಹಾವೇರಿಯ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಸಮಾವೇಶದಲ್ಲಿ ಉಪಸ್ಥಿತರಿದ್ದಾರೆ.
ದೇಗುಲ ಭೇಟಿ ರದ್ದು
ಪ್ರಧಾನಿ ಮೋದಿ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇಗುಲಕ್ಕೆ ಭೇಟಿ ನೀಡುವ ಕಾರ್ಯಕ್ರಮ ರದ್ದಾಗಿದೆ.
ಮೋದಿ ಮೆಗಾ ರೋಡ್ ಶೋ ಅಂತ್ಯ
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ನಡೆಸುತ್ತಿದ್ದ ರೋಡ್ ಶೋ ಅಂತ್ಯಗೊಂಡಿದೆ. ಒಟ್ಟು 26 ಕಿ.ಮೀ. ಅವರು ರೋಡ್ ಶೋ ನಡೆಸಿದರು. ನಿಗದಿಗಿಂತ ಅರ್ಧಗಂಟೆ ತಡವಾಗಿ ರೋಡ್ ಶೋ ಅಂತ್ಯಗೊಂಡಿದೆ.
ದೇಗುಲಕ್ಕೆ ಬಿಜೆಪಿ ನಾಯಕರು
ಪ್ರಧಾನಿ ಮೋದಿ ಭೇಟಿ ನೀಡಲಿರುವ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್. ಸಂತೋಷ್, ರಾಜ್ಯ ಸಹ ಉಸ್ತುವಾರಿ ಅಣ್ಣಾಮಲೈ ಆಗಮಿಸಿದ್ದಾರೆ. ಸ್ಥಳೀಯ ಶಾಸಕ ಡಾ. ಅಶ್ವಥ್ ನಾರಾಯಣ ಸಹ ಇದ್ದಾರೆ.